Close Menu
    What's Hot

    ಪಟಾಕಿ ಸಂಗ್ರಹಿಸಿದ್ದ ಸೇನಾ ನೆಲೆಯಲ್ಲಿ ಸ್ಫೋಟ: ಸಾವಿನ ಸಂಖ್ಯೆ 15ಕ್ಕೆ ಏರಿಕೆ

    September 5, 2026

    ನಗರಕ್ಕೆ ಗಡಿಪಾರು ಮಾಡಿದ್ದರೂ ವಾಪಸ್ ಎಂಟ್ರಿ: ಬೆದರಿಸಿ ಸುಲಿಗೆ ಮಾಡುತ್ತಿದ್ದ ರೌಡಿಶೀಟರ್ ಗ್ಯಾಂಗ್ ನ ಬಂಧನ

    September 5, 2026

    ಸರ್ಕಾರಿ ಆಸ್ಪತ್ರೆಯಲ್ಲಿ ಕರ್ತವ್ಯ, ಮನೆಯಲ್ಲಿ ಅಕ್ರಮ ಕ್ಲಿನಿಕ್: ಸ್ಟಾಫ್ ನರ್ಸ್ ಅಮಾನತು

    September 5, 2026
    Facebook X (Twitter) Instagram
    Facebook X (Twitter) Instagram
    Nirantara News | Kannada News | Karnataka Latest UpdatesNirantara News | Kannada News | Karnataka Latest Updates
    Subscribe
    • Homepage
    • ಕರಾವಳಿ ಸುದ್ದಿ
    • ಅಪರಾಧ
    • ಕರ್ನಾಟಕ
    • ರಾಷ್ಟ್ರೀಯ
    • ಅಂತರಾಷ್ಟ್ರೀಯ
    • ಸ್ಥಿರಾಸ್ತಿ ಮತ್ತು ಮೂಲಸೌಕರ್ಯ
    • ಆರೋಗ್ಯ

    Nirantara News | Kannada News | Karnataka Latest UpdatesNirantara News | Kannada News | Karnataka Latest Updates
    Home»ಅಪರಾಧ»82 ವರ್ಷದ ಅಜ್ಜಿಯ ಕೈಯಿಂದ ಚಿನ್ನದ ಬಳೆ ಎಗರಿಸಿದ ಮೊಮ್ಮಗ; ಪುಂಜಾಲಕಟ್ಟೆ ಪೊಲೀಸರಿಂದ ಬಂಧನ
    ಅಪರಾಧ

    82 ವರ್ಷದ ಅಜ್ಜಿಯ ಕೈಯಿಂದ ಚಿನ್ನದ ಬಳೆ ಎಗರಿಸಿದ ಮೊಮ್ಮಗ; ಪುಂಜಾಲಕಟ್ಟೆ ಪೊಲೀಸರಿಂದ ಬಂಧನ

    adminBy adminAugust 17, 2026No Comments1 Min Read

    ಪುಂಜಾಲಕಟ್ಟೆ: ಮನೆಯಲ್ಲಿ ಒಬ್ಬಂಟಿಯಾಗಿದ್ದ 82 ವರ್ಷದ ಅಜ್ಜಿಯ ಕೈಯಲ್ಲಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನದ ಬಳೆಗಳನ್ನು ಬಲವಂತವಾಗಿ ಎಳೆದೊಯ್ದಿದ್ದ ಪ್ರಕರಣವನ್ನು ಪುಂಜಾಲಕಟ್ಟೆ ಪೊಲೀಸರು ಭೇದಿಸಿದ್ದು, ಅಜ್ಜಿಯ ಸ್ವಂತ ಮೊಮ್ಮಗನನ್ನೇ ಬಂಧಿಸಿದ್ದಾರೆ. ಬಂಟ್ವಾಳ ತೆಂಕಕಜೆಕಾರು ನಿವಾಸಿ ಶಬೀರ್ (33) ಬಂಧಿತ ಆರೋಪಿ. ಈತನಿಂದ ₹5 ಲಕ್ಷ ಮೌಲ್ಯದ 40 ಗ್ರಾಂ ತೂಕದ ಎರಡು ಚಿನ್ನದ ಬಳೆಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

    ತೆಂಕಕಜೆಕಾರು ಉದ್ದದ ಗುಡ್ಡೆ ನಿವಾಸಿ ಸಾದಿಕ್ ಎಂಬುವವರ ತಾಯಿ ಅವ್ವಮ್ಮ (82) ಅವರು ಆಗಸ್ಟ್ 14 ರಂದು ಮನೆಯಲ್ಲಿ ಒಬ್ಬಂಟಿಯಾಗಿದ್ದರು. ಈ ವೇಳೆ ಮುಖಕ್ಕೆ ಬಟ್ಟೆ ಧರಿಸಿ ಬಂದ ಅಪರಿಚಿತ ವ್ಯಕ್ತಿಯೊಬ್ಬ ಅಜ್ಜಿಯ ಎರಡೂ ಕೈಗಳಲ್ಲಿದ್ದ ಚಿನ್ನದ ಬಳೆಗಳನ್ನು ಬಲವಂತವಾಗಿ ಎಳೆದುಕೊಂಡು ಪರಾರಿಯಾಗಿದ್ದ. ಈ ವೇಳೆ ಅಜ್ಜಿಯ ಕೈಗೆ ರಕ್ತಗಾಯವಾಗಿತ್ತು. ಈ ಕುರಿತು ಸಾದಿಕ್ ನೀಡಿದ ದೂರಿನಂತೆ ಪುಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ BNS ಕಾಯ್ದೆಯಡಿ ಪ್ರಕರಣ (ಅ.ಕ್ರ: 70/2026) ದಾಖಲಾಗಿತ್ತು.

    ಪ್ರಕರಣದ ತನಿಖೆಗೆ ಇಳಿದ ಪೊಲೀಸರಿಗೆ ಶಾಕಿಂಗ್ ಸುದ್ದಿ ಸಿಕ್ಕಿತ್ತು ಅಜ್ಜಿಯ ಸ್ವಂತ ಮೊಮ್ಮಗ ಶಬೀರ್ ಈ ಕೃತ್ಯ ಎಸಗಿರುವುದು ಕಂಡುಬಂದಿದೆ. ಆಗಸ್ಟ್ 16 ರಂದು ಆರೋಪಿಯನ್ನು ಬಂಧಿಸಿದ ಪೊಲೀಸರು, ಆತನಿಂದ ಚಿನ್ನದ ಬಳೆಗಳನ್ನು ಜಪ್ತಿ ಮಾಡಿದ್ದಾರೆ. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

    #crime #dakshinakannada
    Previous Articleಆಹಾರ ಸುರಕ್ಷತೆಗೆ ಖಾದರ್ ಹೊಸ ಪ್ಲ್ಯಾನ್: ಹೋಟೆಲ್‌ಗಳಲ್ಲಿ QR ಕೋಡ್‌ ಮೂಲಕ ದೂರು
    Next Article ಶಾಗ್ಯ ಶೂಟೌಟ್‌ಗೆ ತಮಿಳುನಾಡು ಸಿಎಂ ವಿಜಯ್ ಕಿಡಿ; ‘ಹತ್ಯಾಕಾಂಡ’ ಆರೋಪ, ಉನ್ನತ ಮಟ್ಟದ ತನಿಖೆಗೆ ಆಗ್ರಹ

    Related Posts

    ನಗರಕ್ಕೆ ಗಡಿಪಾರು ಮಾಡಿದ್ದರೂ ವಾಪಸ್ ಎಂಟ್ರಿ: ಬೆದರಿಸಿ ಸುಲಿಗೆ ಮಾಡುತ್ತಿದ್ದ ರೌಡಿಶೀಟರ್ ಗ್ಯಾಂಗ್ ನ ಬಂಧನ

    September 5, 2026

    ಸರ್ಕಾರಿ ಆಸ್ಪತ್ರೆಯಲ್ಲಿ ಕರ್ತವ್ಯ, ಮನೆಯಲ್ಲಿ ಅಕ್ರಮ ಕ್ಲಿನಿಕ್: ಸ್ಟಾಫ್ ನರ್ಸ್ ಅಮಾನತು

    September 5, 2026

    ರಕ್ತದ ಮಡುವಿನಲ್ಲಿ ಕಾರ್ಮಿಕನ ಮೃತದೇಹ ಪತ್ತೆ: ಕೊಲೆ ಶಂಕಿಸಿ ತನಿಖೆ, ಇಬ್ಬರು ಪರಾರಿ

    September 5, 2026
    Add A Comment
    Leave A Reply Cancel Reply

    ಪ್ರಮುಖ ಸುದ್ದಿ

    ಪಟಾಕಿ ಸಂಗ್ರಹಿಸಿದ್ದ ಸೇನಾ ನೆಲೆಯಲ್ಲಿ ಸ್ಫೋಟ: ಸಾವಿನ ಸಂಖ್ಯೆ 15ಕ್ಕೆ ಏರಿಕೆ

    September 5, 2026

    ನಗರಕ್ಕೆ ಗಡಿಪಾರು ಮಾಡಿದ್ದರೂ ವಾಪಸ್ ಎಂಟ್ರಿ: ಬೆದರಿಸಿ ಸುಲಿಗೆ ಮಾಡುತ್ತಿದ್ದ ರೌಡಿಶೀಟರ್ ಗ್ಯಾಂಗ್ ನ ಬಂಧನ

    September 5, 2026

    ಸರ್ಕಾರಿ ಆಸ್ಪತ್ರೆಯಲ್ಲಿ ಕರ್ತವ್ಯ, ಮನೆಯಲ್ಲಿ ಅಕ್ರಮ ಕ್ಲಿನಿಕ್: ಸ್ಟಾಫ್ ನರ್ಸ್ ಅಮಾನತು

    September 5, 2026

    ಜಮೀನು ಅಭಿವೃದ್ಧಿ ಕಾಮಗಾರಿ ವೇಳೆ ಕಾರ್ಮಿಕರಿಗೆ ಗಂಗರ ಕಾಲದ ಚಿನ್ನದ ನಾಣ್ಯಗಳ ನಿಧಿ ಪತ್ತೆ

    September 5, 2026
    Advertisement

    Nirantara News is powered by a team of experienced media professionals with decades of expertise in television journalism. Our mission is to be the voice of the people by delivering truthful, unbiased, and responsible news. We cover local, state, national, and international news, along with the latest updates on health, entertainment, real estate, business, technology, and more.

    Backed by experienced reporters and a strong legal team, we are committed to providing accurate news and honest reviews.

    Subscribe to Nirantara News and support trusted journalism.

    Top Insights

    ನಗರಕ್ಕೆ ಗಡಿಪಾರು ಮಾಡಿದ್ದರೂ ವಾಪಸ್ ಎಂಟ್ರಿ: ಬೆದರಿಸಿ ಸುಲಿಗೆ ಮಾಡುತ್ತಿದ್ದ ರೌಡಿಶೀಟರ್ ಗ್ಯಾಂಗ್ ನ ಬಂಧನ

    September 5, 2026

    ಸರ್ಕಾರಿ ಆಸ್ಪತ್ರೆಯಲ್ಲಿ ಕರ್ತವ್ಯ, ಮನೆಯಲ್ಲಿ ಅಕ್ರಮ ಕ್ಲಿನಿಕ್: ಸ್ಟಾಫ್ ನರ್ಸ್ ಅಮಾನತು

    September 5, 2026
    Social Follow
    • Facebook
    • Instagram
    © 2026 Nirantara News. Designed by Blueline Computers.
    • Home
    • ಕರಾವಳಿ ಸುದ್ದಿ
    • ಅಪರಾಧ
    • ಕರ್ನಾಟಕ
    • ರಾಷ್ಟ್ರೀಯ
    • ಅಂತರಾಷ್ಟ್ರೀಯ
    • ಸ್ಥಿರಾಸ್ತಿ ಮತ್ತು ಮೂಲಸೌಕರ್ಯ
    • ಆರೋಗ್ಯ

    Type above and press Enter to search. Press Esc to cancel.