ಕಾಸರಗೋಡು: ಆಸ್ಪತ್ರೆಗೆ ನುಗ್ಗಿ ಟಿಪ್ಪರ್ ಲಾರಿ ಹತ್ತಿಸಿ ಕೊಲೆಗೈಯ್ಯುವುದಾಗಿ ವೈದ್ಯೆಗೆ ಬೆದರಿಕೆಯೊಡ್ಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಹೊಸದುರ್ಗದ ಖಾಸಗಿ ಆಸ್ಪತ್ರೆಯೊಂದರ ವೈದ್ಯೆ ಪಿ. ಜಸೀಲ ಅವರು ದೂರುದಾರರು.
ಸಾಮಾಜಿಕ ಜಾಲತಾಣದಲ್ಲಿ ವೀಡಿಯೊ ದೃಶ್ಯಗಳನ್ನು ಆರೋಪಿಗಳು ಪ್ರಚಾರ ಮಾಡಿದ್ದಾರೆಂದೂ ದೂರಿನಲ್ಲಿ ತಿಳಿಸಲಾಗಿದೆ. ತುರ್ತು ಚಿಕಿತ್ಸೆಗಾಗಿ 85 ಸಾವಿರ ರೂ. ವನ್ನು ಮುಂಚಿತವಾಗಿ ಪಾವತಿಸಬೇಕೆಂದು ನಾನು ಹೇಳಿದ್ದೆನೆಂದೂ ಅದುವೇ ಆರೋಪಿಗಳು ಕೊಲೆ ಬೆದರಿಕೆಯೊಡ್ಡಲು ಕಾರಣವೆಂದು ದೂರಿನಲ್ಲಿ ವೈದ್ಯೆ ತಿಳಿಸಿದ್ದಾರೆ.








