ಮರಳು ಸಾಗಣೆ ಲಾರಿ ಚಾಲಕನಿಂದ ಲಂಚ ಪಡೆದ ಆರೋಪದ ಹಿನ್ನೆಲೆಯಲ್ಲಿ ಮೂವರು ಹೆಡ್ ಕಾನ್ಸ್ಟೇಬಲ್ ಹಾಗೂ ಓರ್ವ ಹೋಂಗಾರ್ಡನ್ನು ಲೋಕಾಯುಕ್ತ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಧಾರವಾಡ ಲೋಕಾಯುಕ್ತ ಎಸ್ಪಿ ಸಿದ್ದಲಿಂಗಪ್ಪ ನೇತ್ರತ್ವದಲ್ಲಿ ದಾಳಿ ನಡೆದಿದ್ದು ಕೊಪ್ಪಳದ ಲಾರಿ ಚಾಲಕನ ಹನುಮಂತನಿಂದ ಲಂಚ ಪಡೆದಿರುವ ಆರೋಪ ಕೇಳಿ ಬಂದಿದೆ. 30 ಸಾವಿರ ಲಂಚ ಪಡೆದಿರುವ ಆರೋಪ ಕೇಳಿ ಬಂದಿದ್ದು ಹನುಮಂತ ಲೋಕಾಯುಕ್ತ ಪೊಲೀಸ್ ರಿಗೆ ಈ ಕುರಿತು ದೂರು ನೀಡಿದ್ದ.
ಹುಬ್ಬಳ್ಳಿ-ಧಾರವಾಡ ಅವಳಿ ನಗರದಲ್ಲಿ ಲಾರಿ ಬಿಡಲು ಲಂಚ ಸ್ವೀಕರಿಸಿದ ಹಿನ್ನೆಲೆ, ಧಾರವಾಡ ನಗರ ಠಾಣೆಯ ಹೆಡ್ ಕಾನ್ಸ್ಟೇಬಲ್ ಹಸನ್ ಸಾಬ್ ನದಾಫ್, ಧಾರವಾಡ ಸಂಚಾರಿ ಠಾಣೆಯ ಹೆಡ್ ಕಾನ್ಸ್ಟೇಬಲ್ ಇಮಾಮ್ ಅತ್ತಾರ್, ಹುಬ್ಬಳ್ಳಿ ಗ್ರಾಮಾಂತರ ಠಾಣೆ ಕಾನ್ಸ್ಟೇಬಲ್ ಗಿರೀಶ್ ಮನ್ಸುರ್ ಗೃಹರಕ್ಷಕ ಇಕ್ಬಾಲ್ ನನ್ನು ಲೋಕಾಯುಕ್ತ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಮೂವರು ಹೆಡ್ ಕಾನ್ಸ್ಟೇಬಲ್ ಹಾಗೂ ಹೋಂ ಗಾರ್ಡ್ ಮೊಬೈಲ್ ವಶಕ್ಕೆ ಪಡೆದಿದ್ದಾರೆ.








