ಮಂಗಳೂರು: ಬ್ರಹ್ಮಶ್ರೀ ನಾರಾಯಣ ಗುರುಗಳ 172ನೇ ಜನ್ಮದಿನಾಚರಣೆಯನ್ನು ಕೊಡಿಯಾಲ್‌ಬೈಲ್ ಶ್ರೀ ಭಗವತಿ ಕ್ಷೇತ್ರದ ವತಿಯಿಂದ ಆಗಸ್ಟ್ 28ರಂದು ಶುಕ್ರವಾರ ಭಕ್ತಿಭಾವ ಹಾಗೂ ಸಂಭ್ರಮದಿಂದ ಆಚರಿಸಲಾಯಿತು.
ಜನ್ಮದಿನಾಚರಣೆಯ ಅಂಗವಾಗಿ ಕ್ಷೇತ್ರದಲ್ಲಿ ಪೂಜಾ ಕಾರ್ಯಕ್ರಮಗಳು ನಡೆದಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಂಡು ಬ್ರಹ್ಮಶ್ರೀ ನಾರಾಯಣ ಗುರುಗಳಿಗೆ ವಿಶೇಷ ಪೂಜೆ ಸಲ್ಲಿಸಿದರು.

ಕಾರ್ಯಕ್ರಮದ ಅಂಗವಾಗಿ ಪಾಂಡೇಶ್ವರದ ಶ್ರೀ ಅಶೋಕ್ ಮತ್ತು ಶ್ರೀಮತಿ ಸಂಧ್ಯಾ ಅಶೋಕ್ ಅವರ ನೇತೃತ್ವದ ‘ದೇವಿ ಭಕ್ತವೃಂದ’ ಬೊಂದೆಲ್ತಂಡದಿಂದ ಭಜನಾ ಸಂಕೀರ್ತನೆ ನಡೆಯಿತು. ಭಕ್ತರು ಭಜನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಭಕ್ತಿಭಾವ ಮೆರೆದರು.
ಇದೇ ಸಂದರ್ಭದಲ್ಲಿ ದಿ. ಜೆ. ಜಗನ್ನಾಥ್ ಹಾಗೂ ದಿ. ಅಂಬಾಕ್ಷಿ ಜಗನ್ನಾಥ್ ಅವರ ಸ್ಮರಣಾರ್ಥವಾಗಿ ಜಪ್ಪು ಮಹಾಕಾಳಿ ಪಡ್ಪುವಿನ ಶ್ರೀ ರಾಜಗೋಪಾಲ್ ಮತ್ತು ಕುಟುಂಬದವರಿಂದ ಅನ್ನದಾನ ನೆರವೇರಿಸಲಾಯಿತು. ಭಕ್ತರು ಅನ್ನದಾನದಲ್ಲಿ ಪಾಲ್ಗೊಂಡರು
ಅಲ್ಲದೆ, ದಿ. ಕೃಷ್ಣಪ್ಪ ಅವರ ಸ್ಮರಣಾರ್ಥವಾಗಿ ಪಾಂಡೇಶ್ವರದ ಶ್ರೀ ಅಶೋಕ್ ಹಾಗೂ ಕುಟುಂಬದವರಿಂದ ಸಿಹಿತಿಂಡಿ ವಿತರಣೆ ನಡೆಯಿತು.
ನಾರಾಯಣ ಗುರುಗಳ ಆದರ್ಶಗಳು ಹಾಗೂ ಸಂದೇಶಗಳನ್ನು ಸ್ಮರಿಸುತ್ತಾ ನಡೆದ ಕಾರ್ಯಕ್ರಮದಲ್ಲಿ ಭಕ್ತರು ಶ್ರದ್ಧೆಯಿಂದ ಪಾಲ್ಗೊಂಡರು. ಪೂಜೆ, ಭಜನೆ, ಅನ್ನದಾನ ಹಾಗೂ ಸಿಹಿತಿಂಡಿ ವಿತರಣೆಯೊಂದಿಗೆ ಜನ್ಮದಿನಾಚರಣೆ ಅರ್ಥಪೂರ್ಣವಾಗಿ ನೆರವೇರಿತು.









