Close Menu
    What's Hot

    ಸೌಜನ್ಯ ಪ್ರಕರಣ ಮರುತನಿಖೆ ಚುರುಕು : ಅಪರಾಧ ಸ್ಥಳಕ್ಕೆ ಭೇಟಿ ನೀಡಲಿರುವ ಎಸ್‌ಐಟಿ ತಂಡ

    October 21, 2026

    ಸೌದಿಯಲ್ಲಿ ವಿಮಾನ ಸಂಚಾರ ಅಸ್ತವ್ಯಸ್ತ : ಮಂಗಳೂರು ಕರಾವಳಿಯ ಪ್ರಯಾಣಿಕರಿಗೆ ಸಂಕಷ್ಟ

    October 21, 2026

    ಎಸ್‌ಬಿಐ ಗ್ರಾಹಕರಿಗೆ ಶಾಕ್ : ಡಾರ್ಕ್ ವೆಬ್‌ನಲ್ಲಿ ಸಾವಿರಾರು ಗ್ರಾಹಕರ ವೈಯಕ್ತಿಕ ಮಾಹಿತಿ ಸೋರಿಕೆ

    October 21, 2026
    Facebook X (Twitter) Instagram
    Facebook X (Twitter) Instagram
    Nirantara News | Kannada News | Karnataka Latest UpdatesNirantara News | Kannada News | Karnataka Latest Updates
    Subscribe
    • Homepage
    • ಕರಾವಳಿ ಸುದ್ದಿ
    • ಅಪರಾಧ
    • ಕರ್ನಾಟಕ
    • ರಾಷ್ಟ್ರೀಯ
    • ಅಂತರಾಷ್ಟ್ರೀಯ
    • ಸ್ಥಿರಾಸ್ತಿ ಮತ್ತು ಮೂಲಸೌಕರ್ಯ
    • ಆರೋಗ್ಯ


    Nirantara News | Kannada News | Karnataka Latest UpdatesNirantara News | Kannada News | Karnataka Latest Updates
    Home»ರಾಷ್ಟ್ರೀಯ»ಚಲಿಸುತ್ತಿದ್ದ ಬಸ್ ಹತ್ತುವಾಗ ಆಯತಪ್ಪಿದ ವೃದ್ಧ; ಸಮಯಪ್ರಜ್ಞೆಯಿಂದ ರಕ್ಷಿಸಿದ ಕ್ಲೀನರ್
    ರಾಷ್ಟ್ರೀಯ

    ಚಲಿಸುತ್ತಿದ್ದ ಬಸ್ ಹತ್ತುವಾಗ ಆಯತಪ್ಪಿದ ವೃದ್ಧ; ಸಮಯಪ್ರಜ್ಞೆಯಿಂದ ರಕ್ಷಿಸಿದ ಕ್ಲೀನರ್

    adminBy adminAugust 29, 2026No Comments1 Min Read

    ಕಣ್ಣೂರು: ಚಲಿಸುತ್ತಿದ್ದ ಖಾಸಗಿ ಬಸ್ ಹತ್ತಲು ಪ್ರಯತ್ನಿಸುವಾಗ ಸಮತೋಲನ ಕಳೆದುಕೊಂಡು ಕೆಳಗೆ ಬೀಳುವ ಹಂತದಲ್ಲಿದ್ದ ವೃದ್ಧ ಪ್ರಯಾಣಿಕನೊಬ್ಬನನ್ನು ಬಸ್ ಸಿಬ್ಬಂದಿ (ಕ್ಲೀನರ್) ಸಮಯಪ್ರಜ್ಞೆಯಿಂದ ರಕ್ಷಿಸಿರುವ ಘಟನೆ ಕಣ್ಣೂರಿನಲ್ಲಿ ನಡೆದಿದೆ. ಕಣ್ಣೂರಿನಿಂದ ಕುಟ್ಟಿಯತ್ತೂರಿಗೆ ಪ್ರಯಾಣಿಸುತ್ತಿದ್ದ ‘ಪಾರ್ವತಿ’ ಹೆಸರಿನ ಖಾಸಗಿ ಬಸ್‌ನಲ್ಲಿ ಈ ಘಟನೆ ಸಂಭವಿಸಿದೆ.

    ಬೆಳಿಗ್ಗೆ ಸುಮಾರು 8.45ರ ವೇಳೆಗೆ ‘ಪಾಠಮ್ ಮೈಲಿ’ ಎಂಬಲ್ಲಿ ಬಸ್ ಚಲಿಸುತ್ತಿದ್ದಾಗ ವೃದ್ಧ ಪ್ರಯಾಣಿಕರೊಬ್ಬರು ಬಸ್ ಹತ್ತಲು ಯತ್ನಿಸಿದ್ದಾರೆ. ಈ ವೇಳೆ ದಿಢೀರನೆ ಸಮತೋಲನ ಕಳೆದುಕೊಂಡ ಅವರು ಬಸ್‌ನಿಂದ ಕೆಳಗೆ ಬಿದ್ದು ಗಂಭೀರವಾಗಿ ಗಾಯಗೊಳ್ಳುವ ಅಪಾಯದಲ್ಲಿ ದ್ದರು. ಇದನ್ನು ತಕ್ಷಣವೇ ಗಮನಿಸಿದ ಬಸ್ ಸಿಬ್ಬಂದಿ ಅತುಲ್, ಅಪಾಯದಲ್ಲಿದ್ದ ವೃದ್ಧನನ್ನು ಚುರುಕಿನಿಂದ ಹಿಡಿದು ಒಳಗಡೆ ಎಳೆದುಕೊಂಡಿದ್ದಾರೆ. ಈ ಮೂಲಕ ದೊಡ್ಡ ಅಪಘಾತವೊಂದು ತಪ್ಪಿದಂತಾಗಿದೆ.

    ಬಸ್‌ನಲ್ಲಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಈ ಇಡೀ ರೋಚಕ ದೃಶ್ಯಾವಳಿಗಳು ಸೆರೆಯಾಗಿವೆ. ಅತುಲ್ ಸಮಯಪ್ರಜ್ಞೆಯಿಂದ ವೃದ್ಧನನ್ನು ರಕ್ಷಿಸುವ ವೇಳೆ ಮತ್ತೊಬ್ಬ ಪ್ರಯಾಣಿಕನೂ ನೆರವಿಗೆ ಧಾವಿಸುವುದು ಸಿಸಿಟಿವಿ ವಿಡಿಯೋದಲ್ಲಿ ಕಂಡುಬಂದಿದೆ. ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೋ ಪ್ರಸಾರವಾಗುತ್ತಿದ್ದಂತೆ ವ್ಯಾಪಕವಾಗಿ ವೈರಲ್ ಆಗಿದೆ. ಅತುಲ್ ಅವರ ತ್ವರಿತ ಕಾರ್ಯವೈಖರಿ ಹಾಗೂ ಜಾಗರೂಕತೆಗೆ ನೆಟ್ಟಿಗರು ಭಾರೀ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.




    #nation #national
    Previous Article34 ಮೆಡಿಕಲ್ ಕಾಲೇಜು ಕ್ಯಾಂಟೀನ್‌ಗಳ ಮೇಲೆ ದಾಳಿ; ಅವಧಿ ಮೀರಿದ ಆಹಾರ, ಜಿರಳೆಗಳ ಉಪದ್ರವ ಪತ್ತೆ
    Next Article ಕುನಾಲ್ ಕಾಮ್ರಾ ಶೋ ವಿವಾದ: ವೈಟ್‌ಫೀಲ್ಡ್ ಪೊಲೀಸರಿಗೆ ಹೈಕೋರ್ಟ್ ಮತ್ತೆ ತರಾಟೆ; ಎಸಿಪಿ, ಡಿಸಿಪಿಗೆ ಖಡಕ್ ಸೂಚನೆ

    Related Posts

    ಸೌದಿಯಲ್ಲಿ ವಿಮಾನ ಸಂಚಾರ ಅಸ್ತವ್ಯಸ್ತ : ಮಂಗಳೂರು ಕರಾವಳಿಯ ಪ್ರಯಾಣಿಕರಿಗೆ ಸಂಕಷ್ಟ

    October 21, 2026

    ಎಸ್‌ಬಿಐ ಗ್ರಾಹಕರಿಗೆ ಶಾಕ್ : ಡಾರ್ಕ್ ವೆಬ್‌ನಲ್ಲಿ ಸಾವಿರಾರು ಗ್ರಾಹಕರ ವೈಯಕ್ತಿಕ ಮಾಹಿತಿ ಸೋರಿಕೆ

    October 21, 2026

    ದೆಹಲಿಯ ದಸರಾ ಆಚರಣೆಯಲ್ಲಿ ಹೊಸ ವಿವಾದ : ರಾವಣನ ಜೊತೆ ಜಿರಳೆ ಪ್ರತಿಕೃತಿ ದಹನಕ್ಕೆ ಆಕ್ಷೇಪ

    October 21, 2026
    Add A Comment
    Leave A Reply Cancel Reply

    ಪ್ರಮುಖ ಸುದ್ದಿ

    ಸೌಜನ್ಯ ಪ್ರಕರಣ ಮರುತನಿಖೆ ಚುರುಕು : ಅಪರಾಧ ಸ್ಥಳಕ್ಕೆ ಭೇಟಿ ನೀಡಲಿರುವ ಎಸ್‌ಐಟಿ ತಂಡ

    October 21, 2026

    ಸೌದಿಯಲ್ಲಿ ವಿಮಾನ ಸಂಚಾರ ಅಸ್ತವ್ಯಸ್ತ : ಮಂಗಳೂರು ಕರಾವಳಿಯ ಪ್ರಯಾಣಿಕರಿಗೆ ಸಂಕಷ್ಟ

    October 21, 2026

    ಎಸ್‌ಬಿಐ ಗ್ರಾಹಕರಿಗೆ ಶಾಕ್ : ಡಾರ್ಕ್ ವೆಬ್‌ನಲ್ಲಿ ಸಾವಿರಾರು ಗ್ರಾಹಕರ ವೈಯಕ್ತಿಕ ಮಾಹಿತಿ ಸೋರಿಕೆ

    October 21, 2026

    “ಅವರೇ ಪಾಕಿಸ್ತಾನದ ಜೊತೆ ನಂಟು ಬೆಳೆಸುತ್ತಿದ್ದಾರೆ” : ಆರ್‌ಎಸ್‌ಎಸ್‌ ವಿರುದ್ಧ ಪ್ರಿಯಾಂಕ್ ಖರ್ಗೆ ವಿವಾದಾತ್ಮಕ ಹೇಳಿಕೆ

    October 21, 2026
    Advertisement






    Nirantara News is powered by a team of experienced media professionals with decades of expertise in television journalism. Our mission is to be the voice of the people by delivering truthful, unbiased, and responsible news. We cover local, state, national, and international news, along with the latest updates on health, entertainment, real estate, business, technology, and more.

    Backed by experienced reporters and a strong legal team, we are committed to providing accurate news and honest reviews.

    Subscribe to Nirantara News and support trusted journalism.

    Top Insights

    “ಅವರೇ ಪಾಕಿಸ್ತಾನದ ಜೊತೆ ನಂಟು ಬೆಳೆಸುತ್ತಿದ್ದಾರೆ” : ಆರ್‌ಎಸ್‌ಎಸ್‌ ವಿರುದ್ಧ ಪ್ರಿಯಾಂಕ್ ಖರ್ಗೆ ವಿವಾದಾತ್ಮಕ ಹೇಳಿಕೆ

    October 21, 2026

    ಬೀಡಿ ಹಚ್ಚಲು ಕಡ್ಡಿ ಗೀರಿದಾಗ ಸಿಲಿಂಡರ್ ಸ್ಫೋಟ; 6 ಜನ ಆಸ್ಪತ್ರೆಯಲ್ಲಿ ಜೀವನ್ಮರಣ ಹೋರಾಟ

    October 19, 2026
    Social Follow
    • Facebook
    • Instagram
    © 2026 Nirantara News. Designed by Blueline Computers.
    • Home
    • ಕರಾವಳಿ ಸುದ್ದಿ
    • ಅಪರಾಧ
    • ಕರ್ನಾಟಕ
    • ರಾಷ್ಟ್ರೀಯ
    • ಅಂತರಾಷ್ಟ್ರೀಯ
    • ಸ್ಥಿರಾಸ್ತಿ ಮತ್ತು ಮೂಲಸೌಕರ್ಯ
    • ಆರೋಗ್ಯ

    Type above and press Enter to search. Press Esc to cancel.