ಬೆಂಗಳೂರು : ಕೆಪಿಎಸ್ಸಿ ಪಶು ವೈದ್ಯಾಧಿಕಾರಿ ನೇಮಕಾತಿ ಹಗರಣಕ್ಕೆ ಸಂಬಂಧಪಟ್ಟಂತೆ ಇದೀಗ ಸಿಐಡಿ ತನಿಖೆಯ ವೇಳೆ ಕೆಲವು ಸ್ಪೋಟಕ ಅಂಶಗಳು ಪತ್ತೆಯಾಗಿದ್ದು ಎಲ್ಲಾ ಪರೀಕ್ಷೆಗಳ ಉಸ್ತುವಾರಿಯನ್ನು ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ಹೊಂದಿದ್ದರು ಪ್ರಶ್ನೆ ಪತ್ರಿಕೆ ಅಸಲಿಕೆ ಸೋರಿಕೆ ಮಾಡಿದ್ದೆ ಜ್ಞಾನೇಂದ್ರ ಕುಮಾರ್ ಎಂದು ಸಿಐಡಿ ಅಧಿಕಾರಿಗಳು ನಡೆಸಿದ ತನಿಖೆಯಲ್ಲಿ ಬಹಿರಂಗವಾಗಿದೆ.
ಮಧ್ಯವರ್ತಿ ಬಸವರಾಜ್ ಕನ್ನಾಳೆ ಹಾಗೂ ಇತರರ ಮೂಲಕ ಮಾರಾಟ ಮಾಡಲಾಗಿದ್ದು, 40 ಲಕ್ಷಕ್ಕೆ ಒಂದು ಪ್ರಶ್ನೆ ಪತ್ರಿಕೆ ಪಡೆದಿರುವುದು ತನಿಖೆಯ ವೇಳೆ ಪತ್ತೆಯಾಗಿದೆ. ಅಭ್ಯರ್ಥಿಗಳಿಂದ ವಿವಿಧ ಮಾರ್ಗದಲ್ಲಿ ಹಣವನ್ನು ವಸೂಲಿ ಮಾಡಿದ್ದಾರೆ. ಈ ಹಿನ್ನೆಲೆ ಜಾನೇಂದ್ರ ಕುಮಾರ ಬಂಧನವಾಗಿದೆ ಅಲ್ಲದೆ ಮತ್ತೊಂದು ಕಡೆ ಜ್ಞಾನೇಂದ್ರ ಕುಮಾರ್ ಸಾಕ್ಷಿ ನಾಶ ಕೂಡ ಯತ್ನಿಸಿದ್ದರು ಎನ್ನಲಾಗಿದೆ. ಒಎಂಆರ್ ತಿದ್ದುಪಡಿ, ಸ್ಟ್ರಾಂಗ್ ರೂಮ್ ಸಿಸಿಟಿವಿ ದೃಶ್ಯವನ್ನು ನಾಶಪಡಿಸುವ ಯತ್ನವನ್ನು ಜ್ಞಾನೇಂದ್ರ ಕುಮಾರ್ ಮಾಡಿದ್ದರು. ಇನ್ನು ಬೀದರ್ ಮೂಲದ ಬಸವರಾಜ್ ಕನ್ನಾಳೆ ಮಧ್ಯವರ್ತಿಯಾಗಿದ್ದು ಮುಖ್ಯ ಮಧ್ಯವರ್ತಿಯಾಗಿ ಬಸವರಾಜ್ ಈ ಒಂದು ಕೆಲಸ ಮಾಡಿದ್ದಾನೆ.
ಬಸವರಾಜ್ ನಂತರದ ಹಂತದಲ್ಲಿ ಇನ್ನಷ್ಟು ಮಧ್ಯವರ್ತಿಗಳು ಇದ್ದಾರೆ ಎನ್ನಲಾಗಿದೆ. ಹಣ ಪಡೆದು ಪ್ರಶ್ನೆ ಪತ್ರಿಕೆಯನ್ನು ಬಸವರಾಜ್ ನೀಡುತ್ತಿದ್ದ ಅಭ್ಯರ್ಥಿಗಳು ಹಾಗೂ ಅಧಿಕಾರಿಗಳ ನಡುವೆ ಈತನೇ ಸೇತುವೆಯಾಗಿದ್ದ ಹಣದ ವರ್ಗಾವಣೆ ಸಂಬಂಧ ಬಸವರಾಜ ಕನ್ನಾಳಿಯನ್ನು ನಿನ್ನೆ ದೆಹಲಿಯಲ್ಲಿ ಬಂಧಿಸಲಾಗಿದೆ. ಹಲವು ಕಡೆ ವ್ಯವಹಾರ ನಡೆದಿರುವುದು ಪತ್ತೆಯಾಗಿದೆ. ಬೇರೆ ಬೇರೆ ಮಾರ್ಗಗಳ ಮೂಲಕ ಇವರು ಹಣವನ್ನು ಅಭ್ಯರ್ಥಿಗಳಿಂದ ಕಲೆಕ್ಟ್ ಮಾಡಿದ್ದಾರೆ ಯಾರು ಯಾರಿಂದ ಎಷ್ಟು ಎಷ್ಟು ಹಣ ಕಲೆಕ್ಟ್ ಮಾಡಿದ್ದಾರೆ? ಯಾರ್ಯಾರಿಗೆ ಪ್ರಶ್ನೆ ಪತ್ರಿಕೆ ಹೋಗಿದೆ? ಇದೆಲ್ಲವನ್ನು ಪತ್ತೆ ಹಚ್ಚುವಂತಹ ಕೆಲಸ ಸಿಐಡಿ ಪೊಲೀಸರು ಮಾಡುತ್ತಿದ್ದಾರೆ.








