ಪುತ್ತೂರು : ಜೆರಾಕ್ಸ್ ಅಂಗಡಿಯಲ್ಲಿ ಮಹಿಳೆಯ ಮೇಲೆ ಹಲ್ಲೆ ಮತ್ತು ಪ್ರಕರಣದಲ್ಲಿ ಪೋಲೀಸರ ನಿರ್ಲಕ್ಷ್ಯ ಖಂಡಿಸಿ ಹಿಂದೂಪರ ಸಂಘಟನೆಳು ನಾಳೆ ಪುತ್ತೂರು ಚಲೋ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ.
ದರ್ಬೆ ವೃತ್ತದಿಂದ ನಾಳೆ ಬೆಳಗ್ಗೆ 10 ಗಂಟೆಗೆ ಮೆರವಣಿಗೆಯ ಮೂಲಕ ಆಗಮಿಸಲಿರುವ ಹಿಂದೂಪರ ಸಂಘಟನೆಯ ಕಾರ್ಯಕರ್ತರು ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದವರೆಗೆ ಮೆರವಣಿಗೆಯಲ್ಲಿ ಸಾಗಿ ಕ್ಷೇತ್ರದಲ್ಲಿ ಪ್ರಾರ್ಥನೆ ಸಲ್ಲಿಸಲಿದ್ದಾರೆ. ಕಾರ್ಯಕ್ರಮದ ಹಿನ್ನಲೆಯಲ್ಲಿ ಪುತ್ತೂರಿನಲ್ಲಿ ಬಿಗಿ ಪೋಲೀಸ್ ಬಂದೋಬಸ್ತ್ ಏರ್ಪಡಿಸಿದ್ದು, ಹೆಚ್ಚುವರಿ ಪೋಲೀಸರನ್ನು ನಿಯೋಜಿಸಲಾಗಿದೆ. ಕಾರ್ಯಕ್ರಮಕ್ಕೆ ಪೋಲೀಸರು ಷರತ್ತುಬದ್ಧ ಅನುಮತಿಯನ್ನು ನೀಡಿದ್ದಾರೆ.
ಕಾರ್ಯಕ್ರಮಕ್ಕೆ ನಿಯೋಜಿಸಲಾಗಿರುವ ಬಂದೋಬಸ್ತ್ ವಿವರ:
* ಎಡಿಶನಲ್ ಎಸ್ಪಿ -01
* ಡಿ.ವೈ.ಎಸ್.ಪಿ – 01
* ಪಿ.ಐ – 03
* ಪಿ.ಎಸ್.ಐ – 10
* ಎ.ಎಸ್.ಐ – 14
* ಸಿಬ್ಬಂದಿಗಳು – 139
* ಕೆ.ಎಸ್.ಆರ್.ಪಿ ತುಕಡಿ -05
* ಎಸ್.ಎ.ಎಫ್ ತಂಡ – 02
* ಡಿ.ಎ.ಆರ್ ತುಕಡಿ -07








