Close Menu
    What's Hot

    ದಿಶಾ ಸಾಲಿಯಾನ್‌ ಸಾವು ಪ್ರಕರಣಕ್ಕೆ ಟ್ವಿಸ್ಟ್: ಸಿಬಿಐ ತನಿಖೆಗೆ ಹೈಕೋರ್ಟ್‌ ಆದೇಶ

    September 2, 2026

    ಕರಂಬಾರು ಬಳಿ ಸೇತುವೆ ಕುಸಿತ: ವಾಹನ ಸವಾರರಿಗೆ ಪರ್ಯಾಯ ಮಾರ್ಗ ಬಳಸುವಂತೆ ಸೂಚನೆ

    September 2, 2026

    ರಾಮಮಂದಿರ ಟ್ರಸ್ಟ್‌ನ ಸಿಇಒ ಆಗಿ ನಿವೃತ್ತ ಏರ್ ಮಾರ್ಷಲ್ ಜೀತೇಂದ್ರ ಮಿಶ್ರಾ ನೇಮಕ

    September 2, 2026
    Facebook X (Twitter) Instagram
    Facebook X (Twitter) Instagram
    Nirantara News | Kannada News | Karnataka Latest UpdatesNirantara News | Kannada News | Karnataka Latest Updates
    Subscribe
    • Homepage
    • ಕರಾವಳಿ ಸುದ್ದಿ
    • ಅಪರಾಧ
    • ಕರ್ನಾಟಕ
    • ರಾಷ್ಟ್ರೀಯ
    • ಅಂತರಾಷ್ಟ್ರೀಯ
    • ಸ್ಥಿರಾಸ್ತಿ ಮತ್ತು ಮೂಲಸೌಕರ್ಯ
    • ಆರೋಗ್ಯ


    Nirantara News | Kannada News | Karnataka Latest UpdatesNirantara News | Kannada News | Karnataka Latest Updates
    Home»ಕರಾವಳಿ ಸುದ್ದಿ»ಪುತ್ತೂರು ಜನಸೇವಾ ಕೇಂದ್ರ ಹಲ್ಲೆ ಪ್ರಕರಣ: ಸುದರ್ಶನ್ ಪೈಗೆ ಜಾಮೀನು, ಅಂಜನಾ ಪೈಗೆ ನಿರೀಕ್ಷಣಾ ಜಾಮೀನು
    ಕರಾವಳಿ ಸುದ್ದಿ

    ಪುತ್ತೂರು ಜನಸೇವಾ ಕೇಂದ್ರ ಹಲ್ಲೆ ಪ್ರಕರಣ: ಸುದರ್ಶನ್ ಪೈಗೆ ಜಾಮೀನು, ಅಂಜನಾ ಪೈಗೆ ನಿರೀಕ್ಷಣಾ ಜಾಮೀನು

    adminBy adminSeptember 1, 2026Updated:September 1, 2026No Comments1 Min Read

    ಪುತ್ತೂರು : ದರ್ಬೆಯ ಜನಸೇವಾ ಕೇಂದ್ರವೊಂದರಲ್ಲಿ ತಾಂತ್ರಿಕ ದೋಷದಿಂದ ಗ್ರಾಹಕರ ದಾಖಲಾತಿ ಹಾನಿಗೊಂಡ ವಿಚಾರಕ್ಕೆ ಸಂಬಂಧಿಸಿದಂತೆ ನಡೆದ ಹಲ್ಲೆ ಪ್ರಕರಣದಲ್ಲಿ ಬಂಧಿತರಾಗಿ ನ್ಯಾಯಾಂಗ ಬಂಧನದಲ್ಲಿದ್ದ ಆರೋಪಿ ಸುದರ್ಶನ್ ಪೈಗೆ ಜಿಲ್ಲಾ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ. ಇದೇ ಪ್ರಕರಣದ ಇನ್ನೋರ್ವ ಆರೋಪಿಯಾಗಿರುವ ಜನಸೇವಾ ಕೇಂದ್ರದ ಮಾಲಕಿ ಅಂಜನಾ ಎಸ್. ಪೈ ಅವರಿಗೆ ನಿರೀಕ್ಷಣಾ ಜಾಮೀನು ಲಭಿಸಿದೆ.

    ಪುತ್ತೂರಿನ ಐದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಉಭಯ ಆರೋಪಿಗಳಿಗೆ ಜಾಮೀನು ಮಂಜೂರು ಮಾಡಿ ಆದೇಶಿಸಿದೆ. ಸುಳ್ಯ ತಾಲೂಕಿನ ಜಾಲ್ಲೂರು ನಿವಾಸಿ ಫಾತಿಮತ್ ಮಿಸ್ವಾನ್ ಎಂಬವರು ನೀಡಿರುವ ದೂರಿನ ಆಧಾರದಲ್ಲಿ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಈ ಪ್ರಕರಣ ದಾಖಲಾಗಿತ್ತು.

    ಆಗಸ್ಟ್ 21ರಂದು ಫಾತಿಮತ್ ಮಿಸ್ವಾನ್ ಅವರು ತಮ್ಮ ಸಹೋದರ ಹಾಗೂ ತಂಗಿಯೊಂದಿಗೆ ಪುತ್ತೂರಿಗೆ ಆಗಮಿಸಿ, ಕೆಲವು ಮುಖ್ಯ ದಾಖಲಾತಿಗಳ ಪ್ರಿಂಟ್ ಹಾಗೂ ಲ್ಯಾಮಿನೇಷನ್‌ಗಾಗಿ ದರ್ಬೆಯ ಡಿಜಿಟಲ್ ಜನಸೇವಾ ಕೇಂದ್ರಕ್ಕೆ ನೀಡಿದ್ದರು. ಬಳಿಕ ದಾಖಲಾತಿಗಳನ್ನು ಪಡೆಯಲು ಹೋದಾಗ ಒಂದು ದಾಖಲೆ ಹಾನಿಗೊಳಗಾಗಿರುವುದು ಕಂಡುಬಂದಿತ್ತು.

    ಅದನ್ನು ಸರಿಪಡಿಸಿಕೊಡುವಂತೆ ಅಥವಾ ಹೊಸ ದಾಖಲೆ ಪಡೆಯಲು ತಗಲುವ ಹಣವನ್ನು ನೀಡುವಂತೆ ಕೇಳಿದಾಗ, ಅಂಗಡಿಯಲ್ಲಿದ್ದ ಅಂಜನಾ ಪೈ ಹಾಗೂ ಸುದರ್ಶನ್ ಪೈ ಅವರು ಅವಾಚ್ಯ ಶಬ್ದಗಳಿಂದ ನಿಂದಿಸಿ, ತಮ್ಮಿಬ್ಬರ ಮೇಲೆ ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಿದ್ದಾರೆ ಎಂದು ಫಾತಿಮತ್ ದೂರಿನಲ್ಲಿ ಆರೋಪಿಸಿದ್ದರು. ಸಂತ್ರಸ್ತೆ ನೀಡಿದ ದೂರಿನನ್ವಯ ಪುತ್ತೂರು ನಗರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. ಬಳಿಕ ಪೊಲೀಸರು ಸುದರ್ಶನ್ ಪೈ ಅವರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೊಳಪಡಿಸಿದ್ದರು. ಇದೀಗ ನ್ಯಾಯಾಂಗ ಬಂಧನದಲ್ಲಿದ್ದ ಸುದರ್ಶನ್ ಪೈ ಅವರಿಗೆ ಜಾಮೀನು ಹಾಗೂ ಅಂಜನಾ ಪೈ ಅವರಿಗೆ ನಿರೀಕ್ಷಣಾ ಜಾಮೀನು ಮಂಜೂರಾಗಿದೆ.




    #dakshinakannada
    Previous Articleಓಣಂ ಆಚರಿಸಲು ತಾಯಿಯ ಬಳಿಗೆ ಹೋಗಿದ್ದ ಬಾಲಕನ ದಾರುಣ ಅಂತ್ಯ
    Next Article ಟೇಕಾಫ್‌ ಆದ ಕೆಲವೇ ಕ್ಷಣದಲ್ಲಿ ‌ಕೈಕೊಟ್ಟ ಎಂಜಿನ್ : ಗೋವಾದಲ್ಲಿ ಇಂಡಿಗೋ ವಿಮಾನದ ತುರ್ತು ಲ್ಯಾಂಡಿಂಗ್

    Related Posts

    ಕರಂಬಾರು ಬಳಿ ಸೇತುವೆ ಕುಸಿತ: ವಾಹನ ಸವಾರರಿಗೆ ಪರ್ಯಾಯ ಮಾರ್ಗ ಬಳಸುವಂತೆ ಸೂಚನೆ

    September 2, 2026

    ಯತೀಶ್ ಪೆರುವಾಯಿ ಗಡಿಪಾರು ಪ್ರಕ್ರಿಯೆ ಕೈಬಿಡಲು ಅಧಿಕಾರಿಗಳ ಆದೇಶ

    September 2, 2026

    ಕುತ್ತಾರು ‘ಸೌಹಾರ್ದ ವೃತ್ತ’  ವಿವಾದಕ್ಕೆ ತೆರೆ: ಕೊರಗಜ್ಜನ ಮುಟ್ಟಾಲೆ–ದಂಟೆ ವಿಶೇಷ ಆಕರ್ಷಣೆಯೊಂದಿಗೆ ಲೋಕಾರ್ಪಣೆ

    September 2, 2026
    Add A Comment
    Leave A Reply Cancel Reply

    ಪ್ರಮುಖ ಸುದ್ದಿ

    ದಿಶಾ ಸಾಲಿಯಾನ್‌ ಸಾವು ಪ್ರಕರಣಕ್ಕೆ ಟ್ವಿಸ್ಟ್: ಸಿಬಿಐ ತನಿಖೆಗೆ ಹೈಕೋರ್ಟ್‌ ಆದೇಶ

    September 2, 2026

    ಕರಂಬಾರು ಬಳಿ ಸೇತುವೆ ಕುಸಿತ: ವಾಹನ ಸವಾರರಿಗೆ ಪರ್ಯಾಯ ಮಾರ್ಗ ಬಳಸುವಂತೆ ಸೂಚನೆ

    September 2, 2026

    ರಾಮಮಂದಿರ ಟ್ರಸ್ಟ್‌ನ ಸಿಇಒ ಆಗಿ ನಿವೃತ್ತ ಏರ್ ಮಾರ್ಷಲ್ ಜೀತೇಂದ್ರ ಮಿಶ್ರಾ ನೇಮಕ

    September 2, 2026

    ಸಾಲ ತೀರಿಸಲು ಹಣ ನೀಡಲಿಲ್ಲವೆಂದು ತಂದೆಯನ್ನೇ ರಾಡ್‌ನಿಂದ ಹೊಡೆದು ಕೊಂದ ಮಗ

    September 2, 2026
    Advertisement






    Nirantara News is powered by a team of experienced media professionals with decades of expertise in television journalism. Our mission is to be the voice of the people by delivering truthful, unbiased, and responsible news. We cover local, state, national, and international news, along with the latest updates on health, entertainment, real estate, business, technology, and more.

    Backed by experienced reporters and a strong legal team, we are committed to providing accurate news and honest reviews.

    Subscribe to Nirantara News and support trusted journalism.

    Top Insights

    ಸಾಲ ತೀರಿಸಲು ಹಣ ನೀಡಲಿಲ್ಲವೆಂದು ತಂದೆಯನ್ನೇ ರಾಡ್‌ನಿಂದ ಹೊಡೆದು ಕೊಂದ ಮಗ

    September 2, 2026

    ಅವಳಿ ಮಕ್ಕಳನ್ನು ಉಸಿರುಗಟ್ಟಿಸಿ ಹತ್ಯೆಗೈದು ಆತ್ಮಹತ್ಯೆಗೆ ಯತ್ನಿಸಿದ ತಾಯಿ

    September 2, 2026
    Social Follow
    • Facebook
    • Instagram
    © 2026 Nirantara News. Designed by Blueline Computers.
    • Home
    • ಕರಾವಳಿ ಸುದ್ದಿ
    • ಅಪರಾಧ
    • ಕರ್ನಾಟಕ
    • ರಾಷ್ಟ್ರೀಯ
    • ಅಂತರಾಷ್ಟ್ರೀಯ
    • ಸ್ಥಿರಾಸ್ತಿ ಮತ್ತು ಮೂಲಸೌಕರ್ಯ
    • ಆರೋಗ್ಯ

    Type above and press Enter to search. Press Esc to cancel.