Close Menu
    What's Hot

    ಖಾಸಗಿ ಶಾಲಾ ಶಿಕ್ಷಕರಿಗೂ ರಾಜ್ಯಮಟ್ಟದ ಶಿಕ್ಷಕ ಪ್ರಶಸ್ತಿ: ಸರ್ಕಾರದ ಮಟ್ಟದಲ್ಲಿ ಚಿಂತನೆ

    September 12, 2026

    ಹೋಟೆಲ್ ಕೊಠಡಿಯಲ್ಲಿ ಬ್ಯೂಟಿಷಿಯನ್ ಶವ ಪತ್ತೆ: ಜೊತೆಗಿದ್ದ ಉದ್ಯಮಿ ನಾಪತ್ತೆ, ಸಾವಿನ ಸುತ್ತ ಅನುಮಾನ

    September 12, 2026

    ಶಾಲೆಗೆ ಹೋಗಬೇಕಿದ್ದ ಮಕ್ಕಳನ್ನು ಕೆಲಸಕ್ಕೆ ಬಳಸಿಕೊಂಡ ಆರೋಪ: 71 ಬಾಲಕಾರ್ಮಿಕರ ರಕ್ಷಣೆ, 5 ಪ್ರಕರಣ ದಾಖಲು

    September 12, 2026
    Facebook X (Twitter) Instagram
    Facebook X (Twitter) Instagram
    Nirantara News | Kannada News | Karnataka Latest UpdatesNirantara News | Kannada News | Karnataka Latest Updates
    Subscribe
    • Homepage
    • ಕರಾವಳಿ ಸುದ್ದಿ
    • ಅಪರಾಧ
    • ಕರ್ನಾಟಕ
    • ರಾಷ್ಟ್ರೀಯ
    • ಅಂತರಾಷ್ಟ್ರೀಯ
    • ಸ್ಥಿರಾಸ್ತಿ ಮತ್ತು ಮೂಲಸೌಕರ್ಯ
    • ಆರೋಗ್ಯ


    Nirantara News | Kannada News | Karnataka Latest UpdatesNirantara News | Kannada News | Karnataka Latest Updates
    Home»ಕರಾವಳಿ ಸುದ್ದಿ»ಬೆಂಗಳೂರು-ಮಂಗಳೂರು ವಂದೇ ಭಾರತ್‌ಗೆ ಮತ್ತೊಂದು ಟ್ರಯಲ್ ರನ್: ಸುಬ್ರಹ್ಮಣ್ಯ, ಪುತ್ತೂರು ಮಾರ್ಗವಾಗಿ ಸಂಚಾರ
    ಕರಾವಳಿ ಸುದ್ದಿ

    ಬೆಂಗಳೂರು-ಮಂಗಳೂರು ವಂದೇ ಭಾರತ್‌ಗೆ ಮತ್ತೊಂದು ಟ್ರಯಲ್ ರನ್: ಸುಬ್ರಹ್ಮಣ್ಯ, ಪುತ್ತೂರು ಮಾರ್ಗವಾಗಿ ಸಂಚಾರ

    adminBy adminSeptember 10, 2026No Comments1 Min Read

    ಸುಬ್ರಹ್ಮಣ್ಯ : ಸಿಲಿಕಾನ್ ಸಿಟಿ ಬೆಂಗಳೂರು ಹಾಗೂ ಕರಾವಳಿ ನಗರಿ ಮಂಗಳೂರು ನಡುವಿನ ಬಹುನಿರೀಕ್ಷಿತ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿನ ಮತ್ತೊಂದು ಹಂತದ ಪ್ರಾಯೋಗಿಕ ಸಂಚಾರ  ಗುರುವಾರ (ಸೆ.10) ಯಶವಂತಪುರ-ಮಂಗಳೂರು ಜಂಕ್ಷನ್ ಮಾರ್ಗದಲ್ಲಿ ಯಶಸ್ವಿಯಾಗಿ ನಡೆಯಲಿದೆ. ರೈಲ್ವೆ ಮಂಡಳಿಯ ಸೂಚನೆಯಂತೆ ನೈಋತ್ಯ ರೈಲ್ವೆ ಈ ಕುರಿತು ಅಧಿಕೃತ ಆದೇಶ ಹೊರಡಿಸಿದ್ದು, 16 ಬೋಗಿಗಳ ಖಾಲಿ ವಂದೇ ಭಾರತ್ ರೇಕ್ (IC2015) ಬಳಸಿ ಈ ಪರೀಕ್ಷಾರ್ಥ ಸಂಚಾರ ನಡೆಸಲಾಗುತ್ತಿದೆ.

    ವಂದೇ ಭಾರತ್ ಪ್ರಾಯೋಗಿಕ ಸಂಚಾರದ ತಾತ್ಕಾಲಿಕ ವೇಳಾಪಟ್ಟಿ:

    ಯಶವಂತಪುರದಿಂದ ಹೊರಡುವ ಸಮಯ: ಬೆಳಿಗ್ಗೆ 6:50
    ಹಾಸನ ಆಗಮನ/ನಿರ್ಗಮನ: ಬೆಳಿಗ್ಗೆ 9:33 / 9:35
    ಸಕಲೇಶಪುರ ಆಗಮನ/ನಿರ್ಗಮನ: ಬೆಳಿಗ್ಗೆ 10:25 / 10:30
    ಸುಬ್ರಹ್ಮಣ್ಯ ರೋಡ್ ಆಗಮನ/ನಿರ್ಗಮನ: ಮಧ್ಯಾಹ್ನ 12:50 / 12:55
    ಕಬಕ ಪುತ್ತೂರು ಆಗಮನ/ನಿರ್ಗಮನ: ಮಧ್ಯಾಹ್ನ 2:34 / 2:36
    ಮಂಗಳೂರು ಜಂಕ್ಷನ್ ತಲುಪುವ ಸಮಯ: ಮಧ್ಯಾಹ್ನ 2:40

    ಮಂಗಳೂರಿನಿಂದ ವಾಪಸ್ ಸಂಚಾರ:

    ಮಂಗಳೂರು ಜಂಕ್ಷನ್‌ನಿಂದ ಮಧ್ಯಾಹ್ನ 3:10ಕ್ಕೆ ವಾಪಸ್ ಹೊರಡುವ ರೈಲು, ಕಬಕ ಪುತ್ತೂರಿಗೆ ಮಧ್ಯಾಹ್ನ 3:20ಕ್ಕೆ, ಸಕಲೇಶಪುರಕ್ಕೆ ಸಂಜೆ 6:50ಕ್ಕೆ, ಹಾಸನಕ್ಕೆ ಸಂಜೆ 7:45ಕ್ಕೆ ತಲುಪಿ, ರಾತ್ರಿ 10:30ಕ್ಕೆ ಯಶವಂತಪುರ ನಿಲ್ದಾಣ ತಲುಪಲಿದೆ. (ಇದು ಪ್ರಾಯೋಗಿಕ ಸಂಚಾರಕ್ಕಾಗಿ ಸಿದ್ಧಪಡಿಸಿದ ತಾತ್ಕಾಲಿಕ ಸಮಯವಷ್ಟೇ ಆಗಿದೆ).

    ಶಿರಾಡಿ/ಸಕಲೇಶಪುರ ಘಾಟ್ ಮಾರ್ಗದ ಮೇಲೆ ವಿಶೇಷ ನಿಗಾ:

    ಸಕಲೇಶಪುರ-ಸುಬ್ರಹ್ಮಣ್ಯ ರೋಡ್ ನಡುವಿನ ಅತ್ಯಂತ ಕಡಿದಾದ ಘಾಟ್ ಪ್ರದೇಶದಲ್ಲಿ ವಂದೇ ಭಾರತ್ ರೈಲಿನ ವೇಗ, ಬ್ರೇಕಿಂಗ್ ಕ್ಷಮತೆ, ಹಸಿರು ಹೊದಿಕೆಯ ತಿರುವುಗಳಲ್ಲಿ ಕಾರ್ಯಾಚರಣೆಯ ಸುರಕ್ಷತೆ ಹಾಗೂ ವಿದ್ಯುದ್ದೀಕರಣ ವ್ಯವಸ್ಥೆಯನ್ನು ರೈಲ್ವೆ ಎಂಜಿನಿಯರ್‌ಗಳು ಹಾಗೂ ತಾಂತ್ರಿಕ ತಂಡ ಪ್ರತ್ಯಕ್ಷವಾಗಿ ವೀಕ್ಷಿಸಿ ಸಮಗ್ರ ವರದಿ ಸಿದ್ಧಪಡಿಸಲಿದೆ.
    ಬೆಂಗಳೂರು ಹಾಗೂ ಮೈಸೂರು ವಿಭಾಗಗಳ ಹಿರಿಯ ಅಧಿಕಾರಿಗಳು, ಟ್ರ್ಯಾಕ್, ಮೆಕ್ಯಾನಿಕಲ್, ಸಿಗ್ನಲಿಂಗ್ ಮತ್ತು ಎಲೆಕ್ಟ್ರಿಕಲ್ ವಿಭಾಗದ ತಂಡಗಳು ಈ ಸಂಚಾರದಲ್ಲಿದ್ದು, ಪರಿಶೀಲನೆ ನಡೆಸಲಿವೆ. ಈ ಸುದೀರ್ಘ ಪರಿಶೀಲನಾ ವರದಿ ಸಲ್ಲಿಕೆಯಾದ ಬಳಿಕ ಬೆಂಗಳೂರು-ಮಂಗಳೂರು ವಂದೇ ಭಾರತ್ ವಾಣಿಜ್ಯ ಸಂಚಾರದ ಅಂತಿಮ ವೇಳಾಪಟ್ಟಿ ಹಾಗೂ ವೇಳಾಪಟ್ಟಿ ಅಧಿಕೃತವಾಗಿ ಹೊರಬೀಳಲಿದೆ.




    #dakshinakannada #karnataka
    Previous Articleಅಪಘಾತಕ್ಕೀಡಾದ ವಾಹನ ತೆರವು ವೇಳೆ ಮತ್ತೊಂದು ಅವಘಡ: ಲಾರಿ ಡಿಕ್ಕಿಗೆ ಬೈಕ್ ಸವಾರ ಸಾವು
    Next Article ಹಣದ ವಿಚಾರಕ್ಕೆ ಅಳಿಯಂದಿರ ನಡುವೆ ಜಗಳ: ಕತ್ತರಿಯಿಂದ ಇರಿದು ವ್ಯಕ್ತಿಯ ಕೊಲೆ

    Related Posts

    ಖಾಸಗಿ ಶಾಲಾ ಶಿಕ್ಷಕರಿಗೂ ರಾಜ್ಯಮಟ್ಟದ ಶಿಕ್ಷಕ ಪ್ರಶಸ್ತಿ: ಸರ್ಕಾರದ ಮಟ್ಟದಲ್ಲಿ ಚಿಂತನೆ

    September 12, 2026

    ಶಾಲೆಗೆ ಹೋಗಬೇಕಿದ್ದ ಮಕ್ಕಳನ್ನು ಕೆಲಸಕ್ಕೆ ಬಳಸಿಕೊಂಡ ಆರೋಪ: 71 ಬಾಲಕಾರ್ಮಿಕರ ರಕ್ಷಣೆ, 5 ಪ್ರಕರಣ ದಾಖಲು

    September 12, 2026

    ಊಟ ಮಾಡುತ್ತಿದ್ದ ಯುವಕನನ್ನು ಮಚ್ಚಿನಿಂದ ಕೊಚ್ಚಿ ಕೊಲೆ: ಬಳಿಕ ಪೊಲೀಸ್ ಠಾಣೆಗೆ ತೆರಳಿ ಶರಣಾದ ಆರೋಪಿ

    September 12, 2026
    Add A Comment
    Leave A Reply Cancel Reply

    ಪ್ರಮುಖ ಸುದ್ದಿ

    ಖಾಸಗಿ ಶಾಲಾ ಶಿಕ್ಷಕರಿಗೂ ರಾಜ್ಯಮಟ್ಟದ ಶಿಕ್ಷಕ ಪ್ರಶಸ್ತಿ: ಸರ್ಕಾರದ ಮಟ್ಟದಲ್ಲಿ ಚಿಂತನೆ

    September 12, 2026

    ಹೋಟೆಲ್ ಕೊಠಡಿಯಲ್ಲಿ ಬ್ಯೂಟಿಷಿಯನ್ ಶವ ಪತ್ತೆ: ಜೊತೆಗಿದ್ದ ಉದ್ಯಮಿ ನಾಪತ್ತೆ, ಸಾವಿನ ಸುತ್ತ ಅನುಮಾನ

    September 12, 2026

    ಶಾಲೆಗೆ ಹೋಗಬೇಕಿದ್ದ ಮಕ್ಕಳನ್ನು ಕೆಲಸಕ್ಕೆ ಬಳಸಿಕೊಂಡ ಆರೋಪ: 71 ಬಾಲಕಾರ್ಮಿಕರ ರಕ್ಷಣೆ, 5 ಪ್ರಕರಣ ದಾಖಲು

    September 12, 2026

    ಸ್ನೇಹಿತನ ಪತ್ನಿಯೊಂದಿಗೆ ಅಕ್ರಮ ಸಂಬಂಧದ ಶಂಕೆ: ಬಾಲ್ಯದ ಗೆಳೆಯನನ್ನೇ ಕಬ್ಬಿಣದ ರಾಡ್‌ನಿಂದ ಕೊಂದು ಹಾಕಿದ ಸ್ನೇಹಿತ

    September 12, 2026
    Advertisement






    Nirantara News is powered by a team of experienced media professionals with decades of expertise in television journalism. Our mission is to be the voice of the people by delivering truthful, unbiased, and responsible news. We cover local, state, national, and international news, along with the latest updates on health, entertainment, real estate, business, technology, and more.

    Backed by experienced reporters and a strong legal team, we are committed to providing accurate news and honest reviews.

    Subscribe to Nirantara News and support trusted journalism.

    Top Insights

    ಖಾಸಗಿ ಶಾಲಾ ಶಿಕ್ಷಕರಿಗೂ ರಾಜ್ಯಮಟ್ಟದ ಶಿಕ್ಷಕ ಪ್ರಶಸ್ತಿ: ಸರ್ಕಾರದ ಮಟ್ಟದಲ್ಲಿ ಚಿಂತನೆ

    September 12, 2026

    ಶಾಲೆಗೆ ಹೋಗಬೇಕಿದ್ದ ಮಕ್ಕಳನ್ನು ಕೆಲಸಕ್ಕೆ ಬಳಸಿಕೊಂಡ ಆರೋಪ: 71 ಬಾಲಕಾರ್ಮಿಕರ ರಕ್ಷಣೆ, 5 ಪ್ರಕರಣ ದಾಖಲು

    September 12, 2026
    Social Follow
    • Facebook
    • Instagram
    © 2026 Nirantara News. Designed by Blueline Computers.
    • Home
    • ಕರಾವಳಿ ಸುದ್ದಿ
    • ಅಪರಾಧ
    • ಕರ್ನಾಟಕ
    • ರಾಷ್ಟ್ರೀಯ
    • ಅಂತರಾಷ್ಟ್ರೀಯ
    • ಸ್ಥಿರಾಸ್ತಿ ಮತ್ತು ಮೂಲಸೌಕರ್ಯ
    • ಆರೋಗ್ಯ

    Type above and press Enter to search. Press Esc to cancel.