Close Menu
    What's Hot

    ಖಾಸಗಿ ಶಾಲಾ ಶಿಕ್ಷಕರಿಗೂ ರಾಜ್ಯಮಟ್ಟದ ಶಿಕ್ಷಕ ಪ್ರಶಸ್ತಿ: ಸರ್ಕಾರದ ಮಟ್ಟದಲ್ಲಿ ಚಿಂತನೆ

    September 12, 2026

    ಹೋಟೆಲ್ ಕೊಠಡಿಯಲ್ಲಿ ಬ್ಯೂಟಿಷಿಯನ್ ಶವ ಪತ್ತೆ: ಜೊತೆಗಿದ್ದ ಉದ್ಯಮಿ ನಾಪತ್ತೆ, ಸಾವಿನ ಸುತ್ತ ಅನುಮಾನ

    September 12, 2026

    ಶಾಲೆಗೆ ಹೋಗಬೇಕಿದ್ದ ಮಕ್ಕಳನ್ನು ಕೆಲಸಕ್ಕೆ ಬಳಸಿಕೊಂಡ ಆರೋಪ: 71 ಬಾಲಕಾರ್ಮಿಕರ ರಕ್ಷಣೆ, 5 ಪ್ರಕರಣ ದಾಖಲು

    September 12, 2026
    Facebook X (Twitter) Instagram
    Facebook X (Twitter) Instagram
    Nirantara News | Kannada News | Karnataka Latest UpdatesNirantara News | Kannada News | Karnataka Latest Updates
    Subscribe
    • Homepage
    • ಕರಾವಳಿ ಸುದ್ದಿ
    • ಅಪರಾಧ
    • ಕರ್ನಾಟಕ
    • ರಾಷ್ಟ್ರೀಯ
    • ಅಂತರಾಷ್ಟ್ರೀಯ
    • ಸ್ಥಿರಾಸ್ತಿ ಮತ್ತು ಮೂಲಸೌಕರ್ಯ
    • ಆರೋಗ್ಯ


    Nirantara News | Kannada News | Karnataka Latest UpdatesNirantara News | Kannada News | Karnataka Latest Updates
    Home»ಅಪರಾಧ»ಶುಂಠಿ ತೋಟದಲ್ಲಿ ಮೋಹನ್ ಕೊಲೆ ಪ್ರಕರಣ ಭೇದಿಸಿದ ಪೊಲೀಸರು: ಪತ್ನಿ ಸೇರಿ ನಾಲ್ವರು ವಶಕ್ಕೆ
    ಅಪರಾಧ

    ಶುಂಠಿ ತೋಟದಲ್ಲಿ ಮೋಹನ್ ಕೊಲೆ ಪ್ರಕರಣ ಭೇದಿಸಿದ ಪೊಲೀಸರು: ಪತ್ನಿ ಸೇರಿ ನಾಲ್ವರು ವಶಕ್ಕೆ

    adminBy adminSeptember 10, 2026Updated:September 10, 2026No Comments2 Mins Read

    ಅರಸೀಕೆರೆ: ಅಕ್ರಮ ಸಂಬಂಧದ ಶಂಕೆ ಹಿನ್ನೆಲೆಯಲ್ಲಿ ವ್ಯಕ್ತಿಯೊಬ್ಬನನ್ನು ಕಬ್ಬಿಣದ ರಾಡ್‌ನಿಂದ ಹೊಡೆದು ಕೊ ಲೆ ಮಾಡಿದ್ದ ಪ್ರಕರಣವನ್ನು ಗಂಡಸಿ ಪೊಲೀಸರು ಭೇದಿಸಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ.

    ಶುಂಠಿ ಬೆಳೆಗೆ ನೀರು ಹಾಯಿಸಲು ಹೋಗಿದ್ದ ಮೋಹನ್

    ಅರಸೀಕೆರೆ ಗ್ರಾಮಾಂತರ ವ್ಯಾಪ್ತಿಯ ಬಸವನಟ್ಟಿ ಗ್ರಾಮದ ನಿವಾಸಿ ಚೋತ ಬೋವಿ ಅವರ ಪುತ್ರ ಮೋಹನ್ ಕೊಲೆಯಾದ ವ್ಯಕ್ತಿ. ಮೋಹನ್ ಅವರು ಬಸವೇಶ್ವರ ನಗರದ ರಂಗಪ್ಪ ಎಂಬುವರ ಜಮೀನಿನಲ್ಲಿ ಶುಂಠಿ ಬೆಳೆ ಬೆಳೆದಿದ್ದರು. ಪ್ರತಿದಿನ ರಾತ್ರಿ ಜಮೀನಿಗೆ ತೆರಳಿ ನೀರು ಹಾಯಿಸುತ್ತಿದ್ದರು. ಅದೇ ರೀತಿ ಸೆಪ್ಟೆಂಬರ್ 4ರಂದು ರಾತ್ರಿ ಸುಮಾರು 9 ಗಂಟೆಗೆ ಮನೆಯಿಂದ ಜಮೀನಿನತ್ತ ತೆರಳಿದ್ದ ಮೋಹನ್, ರಾತ್ರಿ 9.45ರ ವೇಳೆಗೆ ಜಮೀನಿನ ಸಮೀಪ ತಲೆಗೆ ತೀವ್ರವಾಗಿ ಹೊಡೆದ ಗಾಯಗಳೊಂದಿಗೆ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಈ ಕುರಿತು ಮೋಹನ್ ಅವರ ಪತ್ನಿ ಜಯಲಕ್ಷ್ಮಿ ಗಂಡಸಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ದೂರಿನ ಆಧಾರದ ಮೇಲೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದರು. ಪೊಲೀಸರು ಮೃತದೇಹವನ್ನು ಹಾಸನದ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆಗೆ ಒಳಪಡಿಸಿ, ವಿಧಿವಿಜ್ಞಾನ ತಜ್ಞರ ತಂಡದೊಂದಿಗೆ ಸ್ಥಳ ಮಹಜರು ನಡೆಸಿ, ವಿವಿಧ ಸಾಕ್ಷ್ಯ ಹಾಗೂ ಮಾದರಿಗಳನ್ನು ಸಂಗ್ರಹಿಸಿದ್ದರು.

    ಪತ್ನಿ ಮೇಲೆ ಅನುಮಾನ ಮೋಹನ್ ಸಹೋದರನಿಗೆ

    ಈ ನಡುವೆ ಸೆಪ್ಟೆಂಬರ್ 7ರಂದು ಮೋಹನ್ ಅವರ ಸಹೋದರ ಗಂಡಸಿ ಪೊಲೀಸ್ ಠಾಣೆಗೆ ಮತ್ತೊಂದು ದೂರು ಸಲ್ಲಿಸಿದ್ದರು. ಮೋಹನ್ ಅವರ ಪತ್ನಿ ಜಯಲಕ್ಷ್ಮಿಗೆ ಧನಂಜಯಮೂರ್ತಿ ಎಂಬುವರೊಂದಿಗೆ ಅಕ್ರಮ ಸಂಬಂಧವಿತ್ತು ಎಂಬ ಅನುಮಾನ ಹಾಗೂ ಈ ವಿಚಾರವಾಗಿ ಧನಂಜಯಮೂರ್ತಿ ಮತ್ತು ಆತನ ಸ್ನೇಹಿತ ಜಗದೀಶ್ ಸೇರಿ ಮೋಹನ್ ಅವರನ್ನು ಕೊಲೆ ಮಾಡಿರಬಹುದು ಎಂಬ ಶಂಕೆಯನ್ನು ದೂರಿನಲ್ಲಿ ವ್ಯಕ್ತಪಡಿಸಿದ್ದರು. ದೂರಿನ ಆಧಾರದ ಮೇಲೆ ಪೊಲೀಸರು ಧನಂಜಯಮೂರ್ತಿ ಮತ್ತು ಜಗದೀಶ್ ಅವರನ್ನು ವಿಚಾರಣೆಗೆ ಒಳಪಡಿಸಿದಾಗ, ಪ್ರಕರಣದ ಕುರಿತು ಮಹತ್ವದ ಮಾಹಿತಿ ಹೊರಬಂದಿದೆ ಎನ್ನಲಾಗಿದೆ.

    ಕೈಹಿಡಿದವಳೇ ಹಂತಕಿ!

    ವಿಚಾರಣೆಯಲ್ಲಿ ಧನಂಜಯಮೂರ್ತಿ, ಜಗದೀಶ್, ಪುಟ್ಟರಾಜು ಹಾಗೂ ಮೃತ ಮೋಹನ್ ಅವರ ಪತ್ನಿ ಜಯಲಕ್ಷ್ಮಿ ಸೇರಿ ನಾಲ್ವರು ಕೊಲೆಗೆ ಸಂಚು ರೂಪಿಸಿದ್ದರು ಎಂಬುದು ತನಿಖೆಯಿಂದ ಬೆಳಕಿಗೆ ಬಂದಿದೆ. ಆರೋಪಿಗಳು ಜಮೀನಿನಲ್ಲಿದ್ದ ಶೆಡ್‌ನಲ್ಲಿ ಕುಳಿತು ಮೋಹನ್ ಅವರನ್ನು ಕೊಲೆ ಮಾಡುವ ಬಗ್ಗೆ ಚರ್ಚಿಸಿದ್ದರು. ಸೆಪ್ಟೆಂಬರ್ 3ರಂದು ಕೊಲೆ ಮಾಡಲು ಯೋಜನೆ ರೂಪಿಸಿದ್ದರೂ, ಅಂದು ಜಮೀನಿನಲ್ಲಿ ಮತ್ತೊಬ್ಬ ವ್ಯಕ್ತಿ ಇದ್ದ ಕಾರಣ ಯೋಜನೆಯನ್ನು ಮುಂದೂಡಿದ್ದರು ಎನ್ನಲಾಗಿದೆ.

    ಆರೋಪಿಗಳನ್ನ ಪತ್ತೆ ಹಚ್ಚಿದ್ದು ಹೇಗೆ ಪೊಲೀಸರು

    ನಂತರ ಸೆಪ್ಟೆಂಬರ್ 4ರಂದು ಪೂರ್ವನಿಯೋಜಿತ ಯೋಜನೆಯಂತೆ ಜಗದೀಶ್, ಮೋಹನ್ ಶುಂಠಿ ತೋಟಕ್ಕೆ ಬರುವುದನ್ನು ಕಾಯ್ದು, ಅವರೊಂದಿಗೆ ಮಾತನಾಡುತ್ತಾ ಗಮನ ಬೇರೆಡೆ ಸೆಳೆದಿದ್ದಾನೆ. ಇದೇ ಸಂದರ್ಭದಲ್ಲಿ ಪುಟ್ಟರಾಜು ಮತ್ತು ಧನಂಜಯಮೂರ್ತಿ ಕಬ್ಬಿಣದ ರಾಡ್‌ನಿಂದ ಮೋಹನ್ ಅವರ ತಲೆಗೆ ಹೊಡೆದಿದ್ದಾರೆ. ಬಳಿಕ ಜಗದೀಶ್ ಕೂಡ ಅದೇ ಕಬ್ಬಿಣದ ರಾಡ್‌ನಿಂದ ಹಲ್ಲೆ ನಡೆಸಿದ್ದು, ಗಂಭೀರವಾಗಿ ಗಾಯಗೊಂಡ ಮೋಹನ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಕೊಲೆ ಬಳಿಕ ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದರು. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ಕ್ಷಿಪ್ರ ಕಾರ್ಯಾಚರಣೆ ನಡೆಸಿ, ಇದೀಗ ನಾಲ್ವರು ಆರೋಪಿಗಳನ್ನು ಪತ್ತೆಹಚ್ಚಿ ವಶಕ್ಕೆ ಪಡೆದಿದ್ದಾರೆ.

    ಪ್ರಕರಣದ ತನಿಖೆಯಲ್ಲಿ ಅರಸೀಕೆರೆ ಗ್ರಾಮಾಂತರ ವೃತ್ತ ನಿರೀಕ್ಷಕ ಅರುಣ್ ಕುಮಾರ್ ಎಚ್.ವಿ.,ಗಂಡಸಿ ಪೊಲೀಸ್ ಠಾಣೆಯ ಪಿಎಸ್‌ಐ ಅರುಣ್,ಹಾಗೂ ಸಿಬ್ಬಂದಿಗಳಾದ ರಘು, ಗುರುಪ್ರಸಾದ್, ಪಾಂಡು, ಜಗದೀಶ್ ಮೂರ್ತಿ, ಬಸವರಾಜ್, ನಾಗೇಂದ್ರ ಸೇರಿದಂತೆ ಪೊಲೀಸ್ ಸಿಬ್ಬಂದಿ ಪ್ರಮುಖ ಪಾತ್ರ ವಹಿಸಿದ್ದಾರೆ. ಆರೋಪಿಗಳನ್ನು ತ್ವರಿತವಾಗಿ ಪತ್ತೆಹಚ್ಚಿ ಪ್ರಕರಣ ಭೇದಿಸುವಲ್ಲಿ ತಂಡದ ಕಾರ್ಯಾಚರಣೆ ಯಶಸ್ವಿಯಾಗಿದೆ.

     




    #crime #karnataka
    Previous Articleಅನಸ್ತೇಶಿಯಾ ನೀಡದೇ ಪ್ರಾಣಿಗಳ ಮೇಲೆ ಪ್ರಯೋಗ ಆರೋಪ: ಖಾಸಗಿ ಪಶು ಆಸ್ಪತ್ರೆ ಬಂದ್
    Next Article ರೆಡ್ ಫೋರ್ಟ್ ಸ್ಫೋಟ: ನಿಷ್ಕ್ರಿಯ ಉಗ್ರ ಘಟಕ ಪುನಶ್ಚೇತನಗೊಳಿಸಿ ದಾಳಿ ಸಂಚು, ಉಮರ್ ಉನ್ ನಬಿ ವಿರುದ್ಧ NIA ಗಂಭೀರ ಆರೋಪ

    Related Posts

    ಖಾಸಗಿ ಶಾಲಾ ಶಿಕ್ಷಕರಿಗೂ ರಾಜ್ಯಮಟ್ಟದ ಶಿಕ್ಷಕ ಪ್ರಶಸ್ತಿ: ಸರ್ಕಾರದ ಮಟ್ಟದಲ್ಲಿ ಚಿಂತನೆ

    September 12, 2026

    ಹೋಟೆಲ್ ಕೊಠಡಿಯಲ್ಲಿ ಬ್ಯೂಟಿಷಿಯನ್ ಶವ ಪತ್ತೆ: ಜೊತೆಗಿದ್ದ ಉದ್ಯಮಿ ನಾಪತ್ತೆ, ಸಾವಿನ ಸುತ್ತ ಅನುಮಾನ

    September 12, 2026

    ಶಾಲೆಗೆ ಹೋಗಬೇಕಿದ್ದ ಮಕ್ಕಳನ್ನು ಕೆಲಸಕ್ಕೆ ಬಳಸಿಕೊಂಡ ಆರೋಪ: 71 ಬಾಲಕಾರ್ಮಿಕರ ರಕ್ಷಣೆ, 5 ಪ್ರಕರಣ ದಾಖಲು

    September 12, 2026
    Add A Comment
    Leave A Reply Cancel Reply

    ಪ್ರಮುಖ ಸುದ್ದಿ

    ಖಾಸಗಿ ಶಾಲಾ ಶಿಕ್ಷಕರಿಗೂ ರಾಜ್ಯಮಟ್ಟದ ಶಿಕ್ಷಕ ಪ್ರಶಸ್ತಿ: ಸರ್ಕಾರದ ಮಟ್ಟದಲ್ಲಿ ಚಿಂತನೆ

    September 12, 2026

    ಹೋಟೆಲ್ ಕೊಠಡಿಯಲ್ಲಿ ಬ್ಯೂಟಿಷಿಯನ್ ಶವ ಪತ್ತೆ: ಜೊತೆಗಿದ್ದ ಉದ್ಯಮಿ ನಾಪತ್ತೆ, ಸಾವಿನ ಸುತ್ತ ಅನುಮಾನ

    September 12, 2026

    ಶಾಲೆಗೆ ಹೋಗಬೇಕಿದ್ದ ಮಕ್ಕಳನ್ನು ಕೆಲಸಕ್ಕೆ ಬಳಸಿಕೊಂಡ ಆರೋಪ: 71 ಬಾಲಕಾರ್ಮಿಕರ ರಕ್ಷಣೆ, 5 ಪ್ರಕರಣ ದಾಖಲು

    September 12, 2026

    ಸ್ನೇಹಿತನ ಪತ್ನಿಯೊಂದಿಗೆ ಅಕ್ರಮ ಸಂಬಂಧದ ಶಂಕೆ: ಬಾಲ್ಯದ ಗೆಳೆಯನನ್ನೇ ಕಬ್ಬಿಣದ ರಾಡ್‌ನಿಂದ ಕೊಂದು ಹಾಕಿದ ಸ್ನೇಹಿತ

    September 12, 2026
    Advertisement






    Nirantara News is powered by a team of experienced media professionals with decades of expertise in television journalism. Our mission is to be the voice of the people by delivering truthful, unbiased, and responsible news. We cover local, state, national, and international news, along with the latest updates on health, entertainment, real estate, business, technology, and more.

    Backed by experienced reporters and a strong legal team, we are committed to providing accurate news and honest reviews.

    Subscribe to Nirantara News and support trusted journalism.

    Top Insights

    ಖಾಸಗಿ ಶಾಲಾ ಶಿಕ್ಷಕರಿಗೂ ರಾಜ್ಯಮಟ್ಟದ ಶಿಕ್ಷಕ ಪ್ರಶಸ್ತಿ: ಸರ್ಕಾರದ ಮಟ್ಟದಲ್ಲಿ ಚಿಂತನೆ

    September 12, 2026

    ಶಾಲೆಗೆ ಹೋಗಬೇಕಿದ್ದ ಮಕ್ಕಳನ್ನು ಕೆಲಸಕ್ಕೆ ಬಳಸಿಕೊಂಡ ಆರೋಪ: 71 ಬಾಲಕಾರ್ಮಿಕರ ರಕ್ಷಣೆ, 5 ಪ್ರಕರಣ ದಾಖಲು

    September 12, 2026
    Social Follow
    • Facebook
    • Instagram
    © 2026 Nirantara News. Designed by Blueline Computers.
    • Home
    • ಕರಾವಳಿ ಸುದ್ದಿ
    • ಅಪರಾಧ
    • ಕರ್ನಾಟಕ
    • ರಾಷ್ಟ್ರೀಯ
    • ಅಂತರಾಷ್ಟ್ರೀಯ
    • ಸ್ಥಿರಾಸ್ತಿ ಮತ್ತು ಮೂಲಸೌಕರ್ಯ
    • ಆರೋಗ್ಯ

    Type above and press Enter to search. Press Esc to cancel.