Close Menu
    What's Hot

    ಮಂಗಳೂರು: ಕೋರ್ಟ್‌ಗೆ ತೆರಳುತ್ತಿದ್ದ ನ್ಯಾಯಾಧೀಶರ ಕಾರಿಗೆ ಆಟೋ ಡಿಕ್ಕಿ; ಹಲವರಿಗೆ ಗಾಯ

    September 29, 2026

    ಮಲ್ಪೆಯಲ್ಲಿ ನಿಗೂಢ ಕೊಲೆ; ಪ್ರತಿದಿನ ಮಲಗುತ್ತಿದ್ದ ಜಾಗದಲ್ಲೇ ವ್ಯಕ್ತಿ ಶವವಾಗಿ ಪತ್ತೆ

    September 29, 2026

    ಸ್ನೇಹಿತನ ಮಾತು ನಂಬಿ ಸೌದಿ ಅರೇಬಿಯಾದಲ್ಲಿ ‘ಡೆತ್ ಟ್ರ್ಯಾಪ್’ಗೆ ಸಿಲುಕಿದ ಕೇರಳ ಮೂಲದ ವ್ಯಕ್ತಿ

    September 29, 2026
    Facebook X (Twitter) Instagram
    Facebook X (Twitter) Instagram
    Nirantara News | Kannada News | Karnataka Latest UpdatesNirantara News | Kannada News | Karnataka Latest Updates
    Subscribe
    • Homepage
    • ಕರಾವಳಿ ಸುದ್ದಿ
    • ಅಪರಾಧ
    • ಕರ್ನಾಟಕ
    • ರಾಷ್ಟ್ರೀಯ
    • ಅಂತರಾಷ್ಟ್ರೀಯ
    • ಸ್ಥಿರಾಸ್ತಿ ಮತ್ತು ಮೂಲಸೌಕರ್ಯ
    • ಆರೋಗ್ಯ


    Nirantara News | Kannada News | Karnataka Latest UpdatesNirantara News | Kannada News | Karnataka Latest Updates
    Home»ಅಪರಾಧ»KPSC ಹಗರಣಕ್ಕೆ ಬ್ರೇಕ್ ಹಾಕಲು ಹೊಸ ಚಿಂತನೆ; ತಜ್ಞರ ಜೊತೆ ಚರ್ಚೆ: ಡಿಕೆಶಿ
    ಅಪರಾಧ

    KPSC ಹಗರಣಕ್ಕೆ ಬ್ರೇಕ್ ಹಾಕಲು ಹೊಸ ಚಿಂತನೆ; ತಜ್ಞರ ಜೊತೆ ಚರ್ಚೆ: ಡಿಕೆಶಿ

    adminBy adminSeptember 22, 2026No Comments3 Mins Read

    ಬೆಂಗಳೂರು: ಕೆಪಿಎಸ್‌ಸಿಯಲ್ಲಿ ಹಗರಣಗಳು ಹೆಚ್ಚಿವೆ. ಇದನ್ನು ಕಾನೂನು ಚೌಕಟ್ಟಿನಲ್ಲಿ ಮುಚ್ಚುವ ಬಗ್ಗೆ ತಜ್ಞರ ಜೊತೆ ಚರ್ಚೆ ಮಾಡುತ್ತಿದ್ದೇನೆ ಎಂದು ಸಿಎಂ ಡಿ ಕೆ ಶಿವಕುಮಾರ್  ಹೇಳಿದರು.

    ಮಂಗಳವಾರ ನಡೆದ ಕಿಯೋನಿಕ್ಸ್‌ನ 50ನೇ ಸಂಸ್ಥಾಪನಾ ದಿನಾಚರಣೆ ನಂತರ ಮಾಧ್ಯಮಗಳಿಗೆ ಪ್ರತಿಕ್ರಿಯೆ ‌ನೀಡಿದರು. ಕೆಪಿಎಸ್‌ಸಿಯಲ್ಲಿ ಖದೀಮರು ಸೇರಿಕೊಂಡಿದ್ದಾರೆ. ನಾವು ನಂಬಿಕೆ ಇಟ್ಟು ಆಯ್ಕೆ ಮಾಡಿದ ಅಧಿಕಾರಗಳು ಹೀಗೆಲ್ಲಾ ಮಾಡುತ್ತಿದ್ದಾರೆ. ಅಲ್ಲಿರುವ ಸದಸ್ಯರು ಅಂಗಡಿಯನ್ನೇ ತೆರೆದಿದ್ದಾರೆ. ನಮ್ಮ ಪೊಲೀಸ್ ಅಧಿಕಾರಿಗಳು ದಾಖಲೆಗಳನ್ನು ಸಂಗ್ರಹಿಸಿದ್ದಾರೆ. ಒಂದು ದಿನ ಎಲ್ಲವೂ ಹೊರಗೆ ಬರುತ್ತದೆ ಎಂದರು.

    ತನಿಖಾಧಿಕಾರಿಗಳ ನೇಮಕದ‌‌ ಸ್ವಾತಂತ್ರ್ಯ ನಮಗೆ ಕೊಡಬೇಕಿತ್ತು:
    ಹೈಕೋರ್ಟ್ ಎಸ್‌ಐಟಿ ರಚನೆಗೆ ನಿರ್ದೇಶನ ನೀಡಿರುವುದನ್ನು ಸ್ವಾಗತಿಸುತ್ತೇನೆ. ಇಡಿ ಕೂಡ ತನಿಖೆ ಮಾಡುತ್ತಿದೆ. ಆದರೆ, ನಮ್ಮ ಪೊಲೀಸ್ ಇಲಾಖೆಯೂ ತನಿಖೆಯನ್ನು ಬಹಳ ಚೆನ್ನಾಗಿ ನಡೆಸುತ್ತಿದೆ. ನ್ಯಾಯಾಲಯ ಅಗತ್ಯವಿದ್ದರೆ ನಮ್ಮ ಪೊಲೀಸ್ ಇಲಾಖೆಯ ತನಿಖೆಯ ವೈಖರಿಯ ಉಸ್ತುವಾರಿ ನೋಡಬಹುದಿತ್ತು. ನ್ಯಾಯಾಲಯ ಎಸ್‌ಐಟಿ ತನಿಖೆಗೆ ನಿರ್ದೇಶಿಸಿರುವುದು ಸರಿ. ಆದರೆ, ತನಿಖಾಧಿಕಾರಿಗಳ ನೇಮಕದ ಸ್ವಾತಂತ್ರ್ಯವನ್ನು ರಾಜ್ಯ ಸರ್ಕಾರಕ್ಕೆ ಕೊಡಬೇಕಿತ್ತು. ಈ ಬಗ್ಗೆ ದೆಹಲಿ, ಬೇರೆ ಬೇರೆ ರಾಜ್ಯಗಳಿಂದ ನಮಗೆ ಕರೆ ಬಂದಿತ್ತು. ಈ ಬಗ್ಗೆ ಕಾನೂನು ತಜ್ಞರ ಅಭಿಪ್ರಾಯ ಪಡೆಯುತ್ತೇನೆ ಎಂದು ತಿಳಿಸಿದರು.

    ನಮಗೆ ಮಕ್ಕಳ ಭವಿಷ್ಯ ಮುಖ್ಯ. ಇದೇ ಕಾರಣಕ್ಕೆ ಸಿದ್ದರಾಮಯ್ಯನವರು ತಮ್ಮ ಅವಧಿಯಲ್ಲಿ ಕೆಪಿಎಸ್‌ಸಿಯಲ್ಲಿದ್ದ ಸದಸ್ಯರ ಸಂಖ್ಯೆಯನ್ನು ಕಡಿತಗೊಳಿಸಿದ್ದರು. ನಾವು ನಂಬಿಕೆ ಇಟ್ಟು, ಪಾರದರ್ಶಕವಾಗಿ ಆಯ್ಕೆ ಮಾಡಿ ಅಧಿಕಾರಿಗಳನ್ನು ಕಳುಹಿಸಿದರೆ ಅವರೂ ಹೀಗೆ ಮಾಡುತ್ತಾರೆ. ನಾನು ಇಂಧನ ಸಚಿವನಾಗಿದ್ದಾಗ 22 ಸಾವಿರ ಮಂದಿ ಲೈನ್ ಮ್ಯಾನ್, ಎಂಜಿನಿಯರ್‌ಗಳ ಹುದ್ದೆ ತುಂಬಿದ್ದೇನೆ. ಬಹಳ ಜಾಗೃತನಾಗಿ ಈ ಕೆಲಸ ಮಾಡಿದ್ದೇನೆ. ಅದಕ್ಕೂ ಮೊದಲು ಖಾಲಿ ಪೇಪರ್‌ನಲ್ಲಿ ಬರೆಸುವ ಭ್ರಷ್ಟ ಸಂಪ್ರದಾಯ ಇತ್ತು. ಆದರೆ ನಾನು ಅದಕ್ಕೆಲ್ಲಾ ಅವಕಾಶ ಕೊಡಲಿಲ್ಲ ಎಂದರು.

    ಹೆಚ್ ಕೆ ಪಾಟೀಲ್‌ ಅವರು ಗದಗವನ್ನು ಬರದ ಜಿಲ್ಲೆ ಎಂದು ಘೋಷಣೆ ಮಾಡದೇ ಇದ್ದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಡುತ್ತೇನೆ ಎಂಬ ಹೇಳಿಕೆ ಬಗ್ಗೆ ಕೇಳಿದಾಗ, ಗದಗ ಜಿಲ್ಲೆಯ ಪ್ರವಾಸ ಮಾಡಿದ್ದೇನೆ. ನನ್ನ ಜೊತೆ ಪಾಟೀಲ್‌ ಅವರು ಇದ್ದರು. ಅವರು ಹೇಳಿದ್ದು ಸತ್ಯ. ಮಲೆನಾಡಿನಲ್ಲೇ ಬರ ಬಂದಿದೆ ಎಂದರೆ, ಗದಗದಲ್ಲಿ ಬರ ಇರುವುದಿಲ್ಲವೇ, ಜಿಲ್ಲೆಯ ಸಮಸ್ಯೆಯ ಅರಿವು ನನಗಿದೆ. ಈಗಾಗಲೇ 124 ತಾಲೂಕುಗಳು ಬರ ಘೋಷಣೆಯಾಗಿದೆ. 200 ತಾಲೂಕು ಘೋಷಣೆಯಾಗುವ ಸಾಧ್ಯ ಇದೆ. ಈ ಬಗ್ಗೆ ಅಗತ್ಯ ವರದಿಗಳು ಬರುತ್ತಿವೆ ಎಂದು ತಿಳಿಸಿದರು.

    ವಿರೋಧ ಪಕ್ಷಗಳು 10 ದಿನ ಅಧಿವೇಶನದ ಸಮಯ ವ್ಯರ್ಥ ಮಾಡಿದರು. ಅವರಿಗೆ ಸಮಯದ ಬೆಲೆ ತಿಳಿದಿಲ್ಲ. ರಾಜಕಾರಣ ಮಾಡುವುದು ಮಾತ್ರ ಅವರಿಗೆ ಗೊತ್ತು. ನಾನು ಕ್ಯಾಬಿನೆಟ್ ಸಭೆ ಕರೆದು ತೀರ್ಮಾನ ಮಾಡಬಹುದಿತ್ತು. ಆದರೆ ಹಾಗೆ ಮಾಡಲಿಲ್ಲ. ನಾಡಿನ ಜನರ ಸಮಸ್ಯೆ ಏನು ಅಂತ ತಿಳಿಯಬೇಕಿತ್ತು. ಸರ್ಕಾರ ಜನರ ದನಿಯಾಗಬೇಕು. ಜನರ ಮಾತಿಗೆ, ಅವರ ಭಾವನೆ ಬೆಲೆ ಕೊಡಬೇಕು ಅಂತ ವಿಶೇಷ ಅಧಿವೇಶನ ಆಯೋಜಿಸಿ ಚರ್ಚೆಗೆ ಕರೆದಿದ್ದೇನೆ ಎಂದರು

    ನಾನು ರೈತರು, ಜನರ ಜೊತೆ ಮಾತನಾಡಿದ್ದೇನೆ. ಪ್ರವಾಸ ಮಾಡಿದ್ದೇನೆ. ಪರಿಸ್ಥಿತಿಯನ್ನು ಅರ್ಥ ಮಾಡಿಕೊಂಡಿದ್ದೇನೆ. ಆಗ ಸಮಯ ವ್ಯರ್ಥ ಮಾಡಿ ಈಗ ಹೆಚ್ಚಿಗೆ ಸಮಯ ಬೇಕು ಅಂದರೆ ಹೇಗೆ, ವಿರೋಧ ಪಕ್ಷಗಳಿಗೆ ರಾಜಕೀಯ ಮುಖ್ಯ. ನಮಗೆ ಅಭಿವೃದ್ಧಿ ಮುಖ್ಯ, ರೈತರ ಸಮಸ್ಯೆ ಮುಖ್ಯ. ಜನರ ಹಸಿವು ನೀಗಿಸುವುದು ಮುಖ್ಯ ಎಂದು ಹೇಳಿದರು.

    ನಾವು ಅಧಿಕಾರದಲ್ಲಿ ಇದ್ದೇವೆ. ಹೀಗಾಗಿ ಏನು ಮಾಡಬೇಕು ಎನ್ನುವ ಅರಿವು ನಮಗಿದೆ. ಕೇಂದ್ರ ಸರ್ಕಾರ ತನ್ನದೇ ಆದ ಯೋಚನೆಗಳನ್ನು ಮಾಡುತ್ತಿದೆ. ಕೇವಲ ಮಾತನಾಡುವುದಲ್ಲ. ಕೇಂದ್ರ ಸರ್ಕಾರ ರಾಜ್ಯ ಸರ್ಕಾರಕ್ಕೆ ಕೊಡಬೇಕಾದ ಅನುದಾನವನ್ನು ಮೊದಲಿ ನೀಡಲಿ. ಈ ಹಿಂದೆ ಪ್ರಧಾನಿ ನರೇಂದ್ರ ಮೋದಿ, ನಿರ್ಮಲಾ ಸೀತಾರಾಮನ್ ಹಾಗೂ ಬಸವರಾಜ ಬೊಮ್ಮಾಯಿ ಅವರು ಭದ್ರಾ ಮೇಲ್ದಂಡೆ ಯೋಜನೆಗೆ 5,300 ಕೋಟಿ ರೂ. ಘೋಷಣೆ ಮಾಡಿದರು. ಮೊದಲು ಅದನ್ನು ಕೊಡಿ ಎಂದರು.

    ನಾನು ಮುಖ್ಯಮಂತ್ರಿಯಾಗಿದ್ದಾಗ ಪ್ರಧಾನಿಗಳಿಗೆ ಸಾಲ ಮನ್ನಾ ಮಾಡಿ ಎಂದು ಕೇಳಿಲ್ಲ ಅಂತ ಕುಮಾರಸ್ವಾಮಿ ಅವರ ಹೇಳಿಕೆ ಬಗ್ಗೆ ಕೇಳಿದಾಗ, ಸಾಲ ಮನ್ನಾ ಮಾಡಿದ್ದು ನಮ್ಮ, ರಾಹುಲ್ ಗಾಂಧಿ ಅವರ ಬದ್ಧತೆ. ಕುಮಾರಸ್ವಾಮಿ ಅವರ ಬದ್ಧತೆಯಲ್ಲ. ಅದು ನಮ್ಮ ಚಿಂತನೆ, ಕುಮಾರಸ್ವಾಮಿ ಅವರದ್ದಲ್ಲ. ನಾವು ಬೆಂಬಲ ಕೊಟ್ಟಿದ್ದಕ್ಕೆ ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿದ್ದು. ಬಿಜೆಪಿ ಅವರನ್ನು ದೂರ ಇಡಲು ನಾವು ಬೆಂಬಲ ಕೊಟ್ಟಿದ್ದು. ಆ ಸರ್ಕಾರಕ್ಕೆ ಅಡಿಪಾಯ ಹಾಕಿದ್ದು ನಾವು ಎಂದು ಹೇಳಿದರು.

    ಸೌಜನ್ಯ ಪ್ರಕರಣ ಮರುತನಿಖೆ ಬಗ್ಗೆ ಕೇಳಿದಾಗ, ʻಸೌಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಹಿತಿ ಪಡೆಯುತ್ತೇನೆ. ತನಿಖೆಗೆ ಯಾರೂ ಹಸ್ತಕ್ಷೇಪ ಮಾಡುವುದಿಲ್ಲ. ಕಾನೂನು ಪ್ರಕಾರ ಎಲ್ಲವೂ ನಡೆಯುತ್ತದೆ ಎಂದರು.




    #crime #karnataka
    Previous Articleಮೂಡುಬಿದಿರೆ ಬಿಜೆಪಿ ಯುವ ಮುಖಂಡ ಪ್ರತೀಕ್ ಶೆಟ್ಟಿ ನಿಧನ; ಸ್ಥಳೀಯ ಮುಖಂಡರಿಂದ ಸಂತಾಪ
    Next Article ಪುತ್ತೂರು ಕಾರ್ತಿಕ್ ಸುವರ್ಣ ಕೊಲೆ ಪ್ರಕರಣ; ಇಬ್ಬರಿಗೆ ಜೀವಾವಧಿ ಶಿಕ್ಷೆ

    Related Posts

    ಮಂಗಳೂರು: ಕೋರ್ಟ್‌ಗೆ ತೆರಳುತ್ತಿದ್ದ ನ್ಯಾಯಾಧೀಶರ ಕಾರಿಗೆ ಆಟೋ ಡಿಕ್ಕಿ; ಹಲವರಿಗೆ ಗಾಯ

    September 29, 2026

    ಮಲ್ಪೆಯಲ್ಲಿ ನಿಗೂಢ ಕೊಲೆ; ಪ್ರತಿದಿನ ಮಲಗುತ್ತಿದ್ದ ಜಾಗದಲ್ಲೇ ವ್ಯಕ್ತಿ ಶವವಾಗಿ ಪತ್ತೆ

    September 29, 2026

    ಸ್ನೇಹಿತನ ಮಾತು ನಂಬಿ ಸೌದಿ ಅರೇಬಿಯಾದಲ್ಲಿ ‘ಡೆತ್ ಟ್ರ್ಯಾಪ್’ಗೆ ಸಿಲುಕಿದ ಕೇರಳ ಮೂಲದ ವ್ಯಕ್ತಿ

    September 29, 2026
    Add A Comment
    Leave A Reply Cancel Reply

    ಪ್ರಮುಖ ಸುದ್ದಿ

    ಮಂಗಳೂರು: ಕೋರ್ಟ್‌ಗೆ ತೆರಳುತ್ತಿದ್ದ ನ್ಯಾಯಾಧೀಶರ ಕಾರಿಗೆ ಆಟೋ ಡಿಕ್ಕಿ; ಹಲವರಿಗೆ ಗಾಯ

    September 29, 2026

    ಮಲ್ಪೆಯಲ್ಲಿ ನಿಗೂಢ ಕೊಲೆ; ಪ್ರತಿದಿನ ಮಲಗುತ್ತಿದ್ದ ಜಾಗದಲ್ಲೇ ವ್ಯಕ್ತಿ ಶವವಾಗಿ ಪತ್ತೆ

    September 29, 2026

    ಸ್ನೇಹಿತನ ಮಾತು ನಂಬಿ ಸೌದಿ ಅರೇಬಿಯಾದಲ್ಲಿ ‘ಡೆತ್ ಟ್ರ್ಯಾಪ್’ಗೆ ಸಿಲುಕಿದ ಕೇರಳ ಮೂಲದ ವ್ಯಕ್ತಿ

    September 29, 2026

    ಕುಂದಾಪುರ: “ಸ್ವಲ್ಪ ನಿಧಾನವಾಗಿ ಮಾತನಾಡಿ” ಎಂದಿದ್ದಕ್ಕೆ ಸೋಡಾ ಬಾಟಲಿಯಿಂದ ಹಲ್ಲೆ; ನಾಲ್ವರ ವಿರುದ್ಧ ಕೇಸ್

    September 29, 2026
    Advertisement






    Nirantara News is powered by a team of experienced media professionals with decades of expertise in television journalism. Our mission is to be the voice of the people by delivering truthful, unbiased, and responsible news. We cover local, state, national, and international news, along with the latest updates on health, entertainment, real estate, business, technology, and more.

    Backed by experienced reporters and a strong legal team, we are committed to providing accurate news and honest reviews.

    Subscribe to Nirantara News and support trusted journalism.

    Top Insights

    ಕುಂದಾಪುರ: “ಸ್ವಲ್ಪ ನಿಧಾನವಾಗಿ ಮಾತನಾಡಿ” ಎಂದಿದ್ದಕ್ಕೆ ಸೋಡಾ ಬಾಟಲಿಯಿಂದ ಹಲ್ಲೆ; ನಾಲ್ವರ ವಿರುದ್ಧ ಕೇಸ್

    September 29, 2026

    ಕೆಪಿಎಸ್‌ಸಿ ನೇಮಕಾತಿ ಅಕ್ರಮ; ಇಡಿ ದಾಳಿಯಲ್ಲಿ ಸಿಕ್ಕ ಡೈರಿಯಲ್ಲಿ ಲಕ್ಷಾಂತರ ಹಣದ ಲೆಕ್ಕ ಪತ್ತೆ

    September 28, 2026
    Social Follow
    • Facebook
    • Instagram
    © 2026 Nirantara News. Designed by Blueline Computers.
    • Home
    • ಕರಾವಳಿ ಸುದ್ದಿ
    • ಅಪರಾಧ
    • ಕರ್ನಾಟಕ
    • ರಾಷ್ಟ್ರೀಯ
    • ಅಂತರಾಷ್ಟ್ರೀಯ
    • ಸ್ಥಿರಾಸ್ತಿ ಮತ್ತು ಮೂಲಸೌಕರ್ಯ
    • ಆರೋಗ್ಯ

    Type above and press Enter to search. Press Esc to cancel.