Close Menu
    What's Hot

    ಬೀಡಿ ಹಚ್ಚಲು ಕಡ್ಡಿ ಗೀರಿದಾಗ ಸಿಲಿಂಡರ್ ಸ್ಫೋಟ; 6 ಜನ ಆಸ್ಪತ್ರೆಯಲ್ಲಿ ಜೀವನ್ಮರಣ ಹೋರಾಟ

    October 19, 2026

    ಟ್ರಾಲಿ ಬ್ಯಾಗ್‌ಗಳಲ್ಲಿ ನಕಲಿ ಸಿಗರೇಟ್ ಸಾಗಾಟ : ಸಿಸಿಬಿ ಪೊಲೀಸರಿಂದ ಇಬ್ಬರ ಬಂಧನ

    October 19, 2026

    ದಸರಾ ಆಚರಣೆಗೆ ಮಾನವೀಯತೆಯ ಸ್ಪರ್ಶ : ಬಡ ರೋಗಿಯ ನೆರವಿಗೆ ನಿಂತ ಏಳು ಮಕ್ಕಳು

    October 19, 2026
    Facebook X (Twitter) Instagram
    Facebook X (Twitter) Instagram
    Nirantara News | Kannada News | Karnataka Latest UpdatesNirantara News | Kannada News | Karnataka Latest Updates
    Subscribe
    • Homepage
    • ಕರಾವಳಿ ಸುದ್ದಿ
    • ಅಪರಾಧ
    • ಕರ್ನಾಟಕ
    • ರಾಷ್ಟ್ರೀಯ
    • ಅಂತರಾಷ್ಟ್ರೀಯ
    • ಸ್ಥಿರಾಸ್ತಿ ಮತ್ತು ಮೂಲಸೌಕರ್ಯ
    • ಆರೋಗ್ಯ


    Nirantara News | Kannada News | Karnataka Latest UpdatesNirantara News | Kannada News | Karnataka Latest Updates
    Home»ಅಪರಾಧ»ಕಾಣೆಯಾಗಿದ್ದ ಯುವಕನ ಸಾವಿನ ರಹಸ್ಯ ಬಯಲು; ಸಾಕ್ಷ್ಯ ನಾಶಕ್ಕೆ ಯತ್ನಿಸಿದ ತೋಟದ ಮಾಲೀಕನ ವಿರುದ್ಧ ಕೇಸ್
    ಅಪರಾಧ

    ಕಾಣೆಯಾಗಿದ್ದ ಯುವಕನ ಸಾವಿನ ರಹಸ್ಯ ಬಯಲು; ಸಾಕ್ಷ್ಯ ನಾಶಕ್ಕೆ ಯತ್ನಿಸಿದ ತೋಟದ ಮಾಲೀಕನ ವಿರುದ್ಧ ಕೇಸ್

    adminBy adminOctober 8, 2026No Comments2 Mins Read

    ಕುಂದಾಪುರ: ಕಾಣೆಯಾಗಿದ್ದ ಯುವಕನೊಬ್ಬ ತೋಟದ ತಂತಿ ಬೇಲಿಗೆ ನೀಡಲಾಗಿದ್ದ ಅಕ್ರಮ ವಿದ್ಯುತ್ ಸಂಪರ್ಕ ತಾಗಿ ಸಾವನಪ್ಪಿದ ಪ್ರಕರಣ ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಹೊಸಂಗಡಿ ಗ್ರಾಮದ ಮಾತಿನಮಠ ಎಂಬಲ್ಲಿ ನಡೆದಿದೆ. ಸಾವಿನ ಸತ್ಯವನ್ನು ಮರೆಮಾಚಿ ಅಪಘಾತ ಅಥವಾ ಸ್ವಾಭಾವಿಕ ಸಾವು ಎಂಬಂತೆ ಬಿಂಬಿಸಲು ಯತ್ನಿಸಿದ ತೋಟದ ಮಾಲೀಕನ ವಿರುದ್ಧ ಅಮಾಸೆಬೈಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹೊಸಂಗಡಿ ಗ್ರಾಮದ ತಾರ್ಕಿಮಕ್ಕಿ ನಿವಾಸಿ ಕವೀನಾ (26) ಮೃತಪಟ್ಟ ಯುವಕ.

    ಕವೀನಾ ಅವರು ಅಕ್ಟೋಬರ್ 2 ರಂದು ಹೊಸಂಗಡಿಯ ತಾರ್ಕಿಮಕ್ಕಿ ಕೆ.ಪಿ.ಸಿ. ಚೆಕ್ ಪೋಸ್ಟ್ ಬಳಿಯಿಂದ ಕಾಣೆಯಾಗಿದ್ದರು. ಈ ಕುರಿತು ಅವರ ಅಣ್ಣ ಪ್ರವೀಣ ನಾಯ್ಕ್  ಪೊಲೀಸರಿಗೆ ದೂರು ನೀಡಿದ್ದು, ಕಾಣೆಯಾದ ಬಗ್ಗೆ ಪ್ರಕರಣ ದಾಖಲಾಗಿತ್ತು. ಅಕ್ಟೋಬರ್ 5 ರಂದು ಕವೀನಾ ಅವರ ಹುಡುಕಾಟ ನಡೆಸುತ್ತಿದ್ದಾಗ, ಹೊಸಂಗಡಿ ಮಾತಿನಮಠದ ಶೇಖರ ನಾಯ್ಕ್ ಎಂಬುವರ ತೋಟದ ಬಳಿ ಶವವೊಂದು ಬಿದ್ದಿರುವ ಬಗ್ಗೆ ಪ್ರವೀಣ್ ಅವರಿಗೆ ಮಾಹಿತಿ ಲಭಿಸಿತ್ತು. ಸ್ಥಳಕ್ಕೆ ತೆರಳಿ ಪರಿಶೀಲಿಸಿದಾಗ ಅದು ಕವೀನಾ ಅವರ ಮೃತದೇಹ ಎಂಬುದು ದೃಢಪಟ್ಟಿತ್ತು.

    ಶವವು ಅಂಗಾತವಾಗಿ ಬಿದ್ದಿದ್ದು, ಕೀಟಗಳು ಆವರಿಸಿದ್ದವು. ಅಲ್ಲದೆ, ಕವೀನಾ ಅವರ ಕಾಲಿನಲ್ಲಿ ಚಪ್ಪಲಿ ಇರಲಿಲ್ಲ ಮತ್ತು ಶವ ಸಿಕ್ಕ ಸ್ಥಳವು ಅವರ ಮನೆಗೆ ಹೋಗುವ ದಾರಿಯೂ ಆಗಿರಲಿಲ್ಲ. ಇದರಿಂದ ಅನುಮಾನಗೊಂಡ ಪ್ರವೀಣ್ ನಾಯ್ಕ್ ಅವರು ನೀಡಿದ ದೂರಿನನ್ವಯ ಪೊಲೀಸರು ಶಂಕಿತ ಸಾವು (UDR) ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದರು. ಪೋಲಿಸರು ನಡೆಸಿದ ತೀವ್ರ ತನಿಖೆಯ ವೇಳೆ ನೈಜ ಸತ್ಯ ಬಯಲಾಗಿದೆ. ತೋಟದ ಮಾಲೀಕ ಶೇಖರ ನಾಯ್ಕ್ ಕಾಡುಪ್ರಾಣಿಗಳಿಂದ ಕೃಷಿ ರಕ್ಷಣೆಗಾಗಿ ತಮ್ಮ ವಾಸದ ಮನೆಯಿಂದಲೇ ಅಕ್ರಮವಾಗಿ ಕರೆಂಟ್ ಕನೆಕ್ಷನ್ ತೆಗೆದುಕೊಂಡು ತೋಟದ ತಂತಿ ಬೇಲಿಗೆ ಸಂಪರ್ಕ ನೀಡಿದ್ದರು.

    ಅಕ್ಟೋಬರ್ 2 ರಂದು ರಾತ್ರಿ ಹಾಲ್ಕಲ್‌ನಿಂದ ಮನೆಗೆ ಮರಳುತ್ತಿದ್ದ ಕವೀನಾ, ಸಂಬಂಧಿಕರೊಬ್ಬರಿಗೆ ಹಣದ ತುರ್ತು ಅಗತ್ಯವಿದೆ ಎಂದು ತಿಳಿದು, ಶೇಖರ ನಾಯ್ಕ್ ಅವರ ಮನೆಗೆ ಹೋಗಲು ತೋಟದ ಮೂಲಕ ಹೆಜ್ಜೆ ಹಾಕಿದ್ದರು. ಈ ವೇಳೆ ತಂತಿ ಬೇಲಿಗೆ ಹರಿಯುತ್ತಿದ್ದ ಭಾರಿ ಪ್ರಮಾಣದ ವಿದ್ಯುತ್ ಸ್ಪರ್ಶಿಸಿ ಕವೀನಾ ಸ್ಥಳದಲ್ಲೇ ಮೃತಪಟ್ಟಿದ್ದರು.

    ವಿದ್ಯುತ್ ಆಘಾತದಿಂದ ಯುವಕ ಮೃತಪಟ್ಟಿರುವುದು ತಿಳಿಯುತ್ತಿದ್ದಂತೆಯೇ ಆತಂಕಗೊಂಡ ಶೇಖರ ನಾಯ್ಕ್, ತೊಂದರೆಯಾಗುವ ಭಯದಿಂದ ಮೃತದೇಹದ ಅಡಿಯಲ್ಲಿದ್ದ ಎರಡು ತಂತಿಗಳನ್ನು ತುಂಡರಿಸಿ ಪಕ್ಕದ ಕಂಬಕ್ಕೆ ಸುತ್ತಿಟ್ಟಿದ್ದರು. ಬಳಿಕ ಕರೆಂಟ್ ಶಾಕ್‌ನಿಂದ ಸಾವನ್ನಪ್ಪಿದ ವಿಷಯವನ್ನು ಮರೆಮಾಚಿ, ಪರೋಕ್ಷವಾಗಿ ಸಂಬಂಧಿಕರ ಮೂಲಕ ಪ್ರವೀಣ್‌ಗೆ ಮೃತದೇಹ ಇರುವ ವಿಷಯ ಮುಟ್ಟಿಸಿದ್ದರು.
    ತೋಟದ ತಂತಿ ಬೇಲಿಗೆ ನೇರವಾಗಿ ವಿದ್ಯುತ್ ಸಂಪರ್ಕ ನೀಡಿ ಉಂಟುಮಾಡಿದ ನಿರ್ಲಕ್ಷ್ಯ ಹಾಗೂ ಸಾಕ್ಷ್ಯ ನಾಶಕ್ಕೆ ಯತ್ನಿಸಿದ ಆರೋಪದಡಿ ಶೇಖರ ನಾಯ್ಕ್ ವಿರುದ್ಧ ಅಮಾಸೆಬೈಲು ಪೊಲೀಸ್ ಠಾಣೆಯಲ್ಲಿ (ಅಪರಾಧ ಕ್ರಮಾಂಕ 28/2026) ಬಿಎನ್‌ಎಸ್ ಹಾಗೂ ಭಾರತೀಯ ವಿದ್ಯುತ್ ಕಾಯ್ದೆಯಡಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.

     




    #crime #karnataka
    Previous Article‘ಡಿಜಿಟಲ್ ಅರೆಸ್ಟ್’ ಹೆಸರಿನಲ್ಲಿ 75 ವರ್ಷದ ವೃದ್ಧೆಗೆ ವಂಚನೆ; ₹2 ಕೋಟಿ ದೋಚಿದ ಸೈಬರ್ ಕಳ್ಳರು
    Next Article ಮೂಡುಬಿದಿರೆಯಲ್ಲಿ ಭೀಕರ ಸ್ಕೂಟರ್ ಅಪಘಾತ; ದ್ವಿತೀಯ ಪಿಯುಸಿ ವಿದ್ಯಾರ್ಥಿ ಸಾವು

    Related Posts

    ಬೀಡಿ ಹಚ್ಚಲು ಕಡ್ಡಿ ಗೀರಿದಾಗ ಸಿಲಿಂಡರ್ ಸ್ಫೋಟ; 6 ಜನ ಆಸ್ಪತ್ರೆಯಲ್ಲಿ ಜೀವನ್ಮರಣ ಹೋರಾಟ

    October 19, 2026

    ಟ್ರಾಲಿ ಬ್ಯಾಗ್‌ಗಳಲ್ಲಿ ನಕಲಿ ಸಿಗರೇಟ್ ಸಾಗಾಟ : ಸಿಸಿಬಿ ಪೊಲೀಸರಿಂದ ಇಬ್ಬರ ಬಂಧನ

    October 19, 2026

    ಸಿದ್ದಕಟ್ಟೆಯಲ್ಲಿ ಯುವಕನ ಮೇಲೆ ಚೂರಿಯಿಂದ ದಾಳಿ : ಆರು ಮಂದಿ ವಿರುದ್ಧ ಪ್ರಕರಣ ದಾಖಲು

    October 19, 2026
    Add A Comment
    Leave A Reply Cancel Reply

    ಪ್ರಮುಖ ಸುದ್ದಿ

    ಬೀಡಿ ಹಚ್ಚಲು ಕಡ್ಡಿ ಗೀರಿದಾಗ ಸಿಲಿಂಡರ್ ಸ್ಫೋಟ; 6 ಜನ ಆಸ್ಪತ್ರೆಯಲ್ಲಿ ಜೀವನ್ಮರಣ ಹೋರಾಟ

    October 19, 2026

    ಟ್ರಾಲಿ ಬ್ಯಾಗ್‌ಗಳಲ್ಲಿ ನಕಲಿ ಸಿಗರೇಟ್ ಸಾಗಾಟ : ಸಿಸಿಬಿ ಪೊಲೀಸರಿಂದ ಇಬ್ಬರ ಬಂಧನ

    October 19, 2026

    ದಸರಾ ಆಚರಣೆಗೆ ಮಾನವೀಯತೆಯ ಸ್ಪರ್ಶ : ಬಡ ರೋಗಿಯ ನೆರವಿಗೆ ನಿಂತ ಏಳು ಮಕ್ಕಳು

    October 19, 2026

    ಸಿದ್ದಕಟ್ಟೆಯಲ್ಲಿ ಯುವಕನ ಮೇಲೆ ಚೂರಿಯಿಂದ ದಾಳಿ : ಆರು ಮಂದಿ ವಿರುದ್ಧ ಪ್ರಕರಣ ದಾಖಲು

    October 19, 2026
    Advertisement






    Nirantara News is powered by a team of experienced media professionals with decades of expertise in television journalism. Our mission is to be the voice of the people by delivering truthful, unbiased, and responsible news. We cover local, state, national, and international news, along with the latest updates on health, entertainment, real estate, business, technology, and more.

    Backed by experienced reporters and a strong legal team, we are committed to providing accurate news and honest reviews.

    Subscribe to Nirantara News and support trusted journalism.

    Top Insights

    ಬೀಡಿ ಹಚ್ಚಲು ಕಡ್ಡಿ ಗೀರಿದಾಗ ಸಿಲಿಂಡರ್ ಸ್ಫೋಟ; 6 ಜನ ಆಸ್ಪತ್ರೆಯಲ್ಲಿ ಜೀವನ್ಮರಣ ಹೋರಾಟ

    October 19, 2026

    ಟ್ರಾಲಿ ಬ್ಯಾಗ್‌ಗಳಲ್ಲಿ ನಕಲಿ ಸಿಗರೇಟ್ ಸಾಗಾಟ : ಸಿಸಿಬಿ ಪೊಲೀಸರಿಂದ ಇಬ್ಬರ ಬಂಧನ

    October 19, 2026
    Social Follow
    • Facebook
    • Instagram
    © 2026 Nirantara News. Designed by Blueline Computers.
    • Home
    • ಕರಾವಳಿ ಸುದ್ದಿ
    • ಅಪರಾಧ
    • ಕರ್ನಾಟಕ
    • ರಾಷ್ಟ್ರೀಯ
    • ಅಂತರಾಷ್ಟ್ರೀಯ
    • ಸ್ಥಿರಾಸ್ತಿ ಮತ್ತು ಮೂಲಸೌಕರ್ಯ
    • ಆರೋಗ್ಯ

    Type above and press Enter to search. Press Esc to cancel.