Close Menu
    What's Hot

    ಸುರತ್ಕಲ್ ಎಂಆರ್‌ಪಿಎಲ್ ಸ್ಫೋಟ ಪ್ರಕರಣ: ಚಿಕಿತ್ಸೆ ಫಲಿಸದೆ ಮತ್ತೊಬ್ಬ ಕಾರ್ಮಿಕ ಸಾವು

    October 17, 2026

    ಖಾಸಗಿ ಆಸ್ಪತ್ರೆಗಳ ಚಿಕಿತ್ಸಾ ವೆಚ್ಚಕ್ಕೆ ಕಡಿವಾಣ; ಏಕರೂಪದ ದರ ನಿಗದಿಗೆ ಆರೋಗ್ಯ ಇಲಾಖೆ ಸಿದ್ಧತೆ

    October 17, 2026

    ‘ಲೆಹ್ರಾ ದೋ ತಿರಂಗಾ’ ರ‍್ಯಾಲಿಗೂ ಮುನ್ನ ಪೊಲೀಸ್ ಕ್ರಮ; ಸಿಜೆಪಿ ಸಂಸ್ಥಾಪಕನ ಬಂಧನ, ನೇಹಾ ಬೋರಾ ಬಿಡುಗಡೆ

    October 17, 2026
    Facebook X (Twitter) Instagram
    Facebook X (Twitter) Instagram
    Nirantara News | Kannada News | Karnataka Latest UpdatesNirantara News | Kannada News | Karnataka Latest Updates
    Subscribe
    • Homepage
    • ಕರಾವಳಿ ಸುದ್ದಿ
    • ಅಪರಾಧ
    • ಕರ್ನಾಟಕ
    • ರಾಷ್ಟ್ರೀಯ
    • ಅಂತರಾಷ್ಟ್ರೀಯ
    • ಸ್ಥಿರಾಸ್ತಿ ಮತ್ತು ಮೂಲಸೌಕರ್ಯ
    • ಆರೋಗ್ಯ


    Nirantara News | Kannada News | Karnataka Latest UpdatesNirantara News | Kannada News | Karnataka Latest Updates
    Home»ಕರಾವಳಿ ಸುದ್ದಿ»ಬಡಗುತಿಟ್ಟು ಯಕ್ಷಗಾನದ ಹಿರಿಯ ಕಲಾವಿದ ಥಂಡಿಮನೆ ಶ್ರೀಪಾದ ಭಟ್ ನಿಧನ
    ಕರಾವಳಿ ಸುದ್ದಿ

    ಬಡಗುತಿಟ್ಟು ಯಕ್ಷಗಾನದ ಹಿರಿಯ ಕಲಾವಿದ ಥಂಡಿಮನೆ ಶ್ರೀಪಾದ ಭಟ್ ನಿಧನ

    adminBy adminOctober 15, 2026No Comments1 Min Read

    ಮಂಗಳೂರು : : ಬಡಗುತಿಟ್ಟು ಯಕ್ಷಗಾನ ರಂಗದ ಪ್ರಖ್ಯಾತ ಹಾಗೂ ಗತ್ತು-ಗಾಂಭೀರ್ಯದ ವೇಷಧಾರಿಯಾಗಿ ಕರಾವಳಿಯ ಮನೆಮಾತಾಗಿದ್ದ ಥಂಡಿಮನೆ ಶ್ರೀಪಾದ ಭಟ್ (62) ಅವರು ಗುರುವಾರ (ಅಕ್ಟೋಬರ್ 15) ಬೆಳಗಿನ ಜಾವ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.

    ಕಳೆದ ಕೆಲವು ಕಾಲದಿಂದ ತೀವ್ರವಾದ ಕಾಲುನೋವು ಹಾಗೂ ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಅನಾರೋಗ್ಯದಿಂದ ಚೇತರಿಸಿಕೊಂಡು ಮರಳಿ ರಂಗಸ್ಥಳಕ್ಕೆ ಬರುವ ಮಹದಾಸೆ ಹೊಂದಿದ್ದ ಶ್ರೀಪಾದ ಭಟ್ ಅವರು ಚಿಕಿತ್ಸೆ ಪಡೆಯುತ್ತಿದ್ದಂತೆಯೇ ಸಂಭವಿಸಿದ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ. ಇವರ ಅಗಲಿಕೆ ಯಕ್ಷಗಾನ ರಂಗಕ್ಕೆ ಎಂದೂ ತುಂಬಲಾರದ ನಷ್ಟವನ್ನುಂಟುಮಾಡಿದೆ.

    ಬಡಗುತಿಟ್ಟಿನ ಪ್ರಸಿದ್ಧ ಡೇರೆಮೇಳಗಳಾದ ಸಾಲಿಗ್ರಾಮ ಮೇಳ, ಪೆರ್ಡೂರು ಮೇಳ ಸೇರಿದಂತೆ ವಿವಿಧ ಪ್ರಸಿದ್ಧ ಬಯಲಾಟ ಮೇಳಗಳಲ್ಲಿ ವೇಷಧಾರಿಯಾಗಿ ಹಂತ ಹಂತವಾಗಿ ಬೆಳೆದು ಬಂದ ಶ್ರೀಪಾದ ಭಟ್ ಅವರು, ತಮ್ಮ ವಿಶಿಷ್ಟ ಗತ್ತು ಹಾಗೂ ಗಾಂಭೀರ್ಯದ ಹಾವಭಾವಗಳ ಮೂಲಕ ನಾಯಕ ಹಾಗೂ ಖಳನಾಯಕ (ಪ್ರತಿಪಾದ) ಎರಡೂ ರೀತಿಯ ಪಾತ್ರಗಳಲ್ಲೂ ಸೈ ಎನಿಸಿಕೊಂಡಿದ್ದರು. ಬಡಗುತಿಟ್ಟು ಯಕ್ಷಗಾನ ರಂಗದಲ್ಲಿ ತಮ್ಮದೇ ಆದ ಪ್ರತ್ಯೇಕ ಛಾಪು ಮೂಡಿಸಿದ್ದ ಇವರು, ಯಕ್ಷಗಾನ ಲೋಕದ ಸಮರ್ಥ ಎರಡನೇ ವೇಷಧಾರಿಯಾಗಿ ಗುರುತಿಸಿಕೊಂಡಿದ್ದರು.

    ಭೀಷ್ಮ, ಸಾಲ್ವ, ಹನುಮಂತ, ರಾವಣ, ರಾಮ, ದಕ್ಷ, ಈಶ್ವರ, ವೀರಮಣಿ, ದುಷ್ಟಬುದ್ಧಿ, ಮಾಗಧ ಸೇರಿದಂತೆ ಹಲವಾರು ಪೌರಾಣಿಕ ಹಾಗೂ ನೂತನ ಪ್ರಸಂಗಗಳ ವಿಭಿನ್ನ ಪಾತ್ರಗಳಿಗೆ ಜೀವ ತುಂಬಿ ರಂಗದ ಮೇರೆ ಮೆರೆದಿದ್ದರು. ಮೃತರು ತಂದೆ, ತಾಯಿ ಹಾಗೂ ಪತ್ನಿಯನ್ನು ಅಗಲಿದ್ದು, ಅವರ ನಿಧನಕ್ಕೆ ಯಕ್ಷಗಾನ ಕಲಾವಿದರು ಹಾಗೂ ಕಲಾಪ್ರೇಮಿಗಳು ತೀವ್ರ ಸಂತಾಪ ಸೂಚಿಸಿದ್ದಾರೆ.




    #dakshinakannada
    Previous Articleಮಂಗಳೂರಿನ ಧರ್ಮಗುರು ವಿರುದ್ಧ 50ಕ್ಕೂ ಹೆಚ್ಚು ಬಾಲಕರಿಗೆ ಲೈಂಗಿಕ ಕಿರುಕುಳ ಆರೋಪ; ನಿಷ್ಪಕ್ಷಪಾತ ತನಿಖೆಗೆ ಆಗ್ರಹ
    Next Article ಬೆಳ್ತಂಗಡಿ:ಡೀಸೆಲ್ ಸುರಿದು ಕ್ಲಿನಿಕ್‌ಗೆ ಬೆಂಕಿ ಹಚ್ಚಿದ ಆರೋಪ; ಓರ್ವನ ಬಂಧನ, ಇಬ್ಬರು ವಶಕ್ಕೆ

    Related Posts

    ಸುರತ್ಕಲ್ ಎಂಆರ್‌ಪಿಎಲ್ ಸ್ಫೋಟ ಪ್ರಕರಣ: ಚಿಕಿತ್ಸೆ ಫಲಿಸದೆ ಮತ್ತೊಬ್ಬ ಕಾರ್ಮಿಕ ಸಾವು

    October 17, 2026

    ಪುತ್ತೂರಿನಲ್ಲಿ ಮಹಿಳೆಯ ಮೇಲಿನ ಹಲ್ಲೆ ಪ್ರಕರಣ: ಮೊದಲ ಆರೋಪಿಗೆ 2 ವರ್ಷ ಜೈಲು, ತಲಾ ₹5,000 ದಂಡ

    October 17, 2026

    16 ಅಡಿ ಆಳದ ಬಾವಿಯಲ್ಲಿ 50 ನಿಮಿಷಗಳ ಹೋರಾಟ; 62 ವರ್ಷದ ಮಹಿಳೆಗೆ ಮರುಜೀವ ನೀಡಿದ ಚಾಲಕ

    October 16, 2026
    Add A Comment
    Leave A Reply Cancel Reply

    ಪ್ರಮುಖ ಸುದ್ದಿ

    ಸುರತ್ಕಲ್ ಎಂಆರ್‌ಪಿಎಲ್ ಸ್ಫೋಟ ಪ್ರಕರಣ: ಚಿಕಿತ್ಸೆ ಫಲಿಸದೆ ಮತ್ತೊಬ್ಬ ಕಾರ್ಮಿಕ ಸಾವು

    October 17, 2026

    ಖಾಸಗಿ ಆಸ್ಪತ್ರೆಗಳ ಚಿಕಿತ್ಸಾ ವೆಚ್ಚಕ್ಕೆ ಕಡಿವಾಣ; ಏಕರೂಪದ ದರ ನಿಗದಿಗೆ ಆರೋಗ್ಯ ಇಲಾಖೆ ಸಿದ್ಧತೆ

    October 17, 2026

    ‘ಲೆಹ್ರಾ ದೋ ತಿರಂಗಾ’ ರ‍್ಯಾಲಿಗೂ ಮುನ್ನ ಪೊಲೀಸ್ ಕ್ರಮ; ಸಿಜೆಪಿ ಸಂಸ್ಥಾಪಕನ ಬಂಧನ, ನೇಹಾ ಬೋರಾ ಬಿಡುಗಡೆ

    October 17, 2026

    ಬಿಜೆಪಿ ಹಿರಿಯ ನಾಯಕ ಎಲ್‌ಕೆ ಅಡ್ವಾಣಿ ಆರೋಗ್ಯದಲ್ಲಿ ಏರುಪೇರು; ಆಸ್ಪತ್ರೆಗೆ ದಾಖಲು

    October 17, 2026
    Advertisement






    Nirantara News is powered by a team of experienced media professionals with decades of expertise in television journalism. Our mission is to be the voice of the people by delivering truthful, unbiased, and responsible news. We cover local, state, national, and international news, along with the latest updates on health, entertainment, real estate, business, technology, and more.

    Backed by experienced reporters and a strong legal team, we are committed to providing accurate news and honest reviews.

    Subscribe to Nirantara News and support trusted journalism.

    Top Insights

    ಖಾಸಗಿ ಆಸ್ಪತ್ರೆಗಳ ಚಿಕಿತ್ಸಾ ವೆಚ್ಚಕ್ಕೆ ಕಡಿವಾಣ; ಏಕರೂಪದ ದರ ನಿಗದಿಗೆ ಆರೋಗ್ಯ ಇಲಾಖೆ ಸಿದ್ಧತೆ

    October 17, 2026

    ಗೂಗಲ್ ಮ್ಯಾಪ್ ಎಡವಟ್ಟು: ದಟ್ಟ ಕಾಡಿನಲ್ಲಿ ಸಿಲುಕಿದ 9 ಟೆಕ್ಕಿಗಳು; ಬೆಳಗ್ಗೆ ಪೊಲೀಸರಿಂದ ರಕ್ಷಣೆ

    October 17, 2026
    Social Follow
    • Facebook
    • Instagram
    © 2026 Nirantara News. Designed by Blueline Computers.
    • Home
    • ಕರಾವಳಿ ಸುದ್ದಿ
    • ಅಪರಾಧ
    • ಕರ್ನಾಟಕ
    • ರಾಷ್ಟ್ರೀಯ
    • ಅಂತರಾಷ್ಟ್ರೀಯ
    • ಸ್ಥಿರಾಸ್ತಿ ಮತ್ತು ಮೂಲಸೌಕರ್ಯ
    • ಆರೋಗ್ಯ

    Type above and press Enter to search. Press Esc to cancel.