Close Menu
    What's Hot

    ಸುರತ್ಕಲ್ ಎಂಆರ್‌ಪಿಎಲ್ ಸ್ಫೋಟ ಪ್ರಕರಣ: ಚಿಕಿತ್ಸೆ ಫಲಿಸದೆ ಮತ್ತೊಬ್ಬ ಕಾರ್ಮಿಕ ಸಾವು

    October 17, 2026

    ಖಾಸಗಿ ಆಸ್ಪತ್ರೆಗಳ ಚಿಕಿತ್ಸಾ ವೆಚ್ಚಕ್ಕೆ ಕಡಿವಾಣ; ಏಕರೂಪದ ದರ ನಿಗದಿಗೆ ಆರೋಗ್ಯ ಇಲಾಖೆ ಸಿದ್ಧತೆ

    October 17, 2026

    ‘ಲೆಹ್ರಾ ದೋ ತಿರಂಗಾ’ ರ‍್ಯಾಲಿಗೂ ಮುನ್ನ ಪೊಲೀಸ್ ಕ್ರಮ; ಸಿಜೆಪಿ ಸಂಸ್ಥಾಪಕನ ಬಂಧನ, ನೇಹಾ ಬೋರಾ ಬಿಡುಗಡೆ

    October 17, 2026
    Facebook X (Twitter) Instagram
    Facebook X (Twitter) Instagram
    Nirantara News | Kannada News | Karnataka Latest UpdatesNirantara News | Kannada News | Karnataka Latest Updates
    Subscribe
    • Homepage
    • ಕರಾವಳಿ ಸುದ್ದಿ
    • ಅಪರಾಧ
    • ಕರ್ನಾಟಕ
    • ರಾಷ್ಟ್ರೀಯ
    • ಅಂತರಾಷ್ಟ್ರೀಯ
    • ಸ್ಥಿರಾಸ್ತಿ ಮತ್ತು ಮೂಲಸೌಕರ್ಯ
    • ಆರೋಗ್ಯ


    Nirantara News | Kannada News | Karnataka Latest UpdatesNirantara News | Kannada News | Karnataka Latest Updates
    Home»ಅಪರಾಧ»ಬೆಳ್ತಂಗಡಿ:ಡೀಸೆಲ್ ಸುರಿದು ಕ್ಲಿನಿಕ್‌ಗೆ ಬೆಂಕಿ ಹಚ್ಚಿದ ಆರೋಪ; ಓರ್ವನ ಬಂಧನ, ಇಬ್ಬರು ವಶಕ್ಕೆ
    ಅಪರಾಧ

    ಬೆಳ್ತಂಗಡಿ:ಡೀಸೆಲ್ ಸುರಿದು ಕ್ಲಿನಿಕ್‌ಗೆ ಬೆಂಕಿ ಹಚ್ಚಿದ ಆರೋಪ; ಓರ್ವನ ಬಂಧನ, ಇಬ್ಬರು ವಶಕ್ಕೆ

    adminBy adminOctober 15, 2026No Comments2 Mins Read

    ಬೆಳ್ತಂಗಡಿ: ನಾವೂರಿನಲ್ಲಿ ಡಾ. ಪ್ರದೀಪ್ ಅವರು ನಡೆಸುತ್ತಿದ್ದ ಸ್ವಾತಿ ಕಟ್ಟಡದ ಆರೋಗ್ಯ ಕ್ಲಿನಿಕ್‌ಗೆ ಡೀಸೆಲ್ ಸುರಿದು ಬೆಂಕಿ ಹಚ್ಚಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಳ್ತಂಗಡಿ ಪೊಲೀಸರು ನಾವೂರು ನಿವಾಸಿ ರವಿ ಪೂಜಾರಿ ಎಂಬಾತನನ್ನು ಬಂಧಿಸಿದ್ದಾರೆ.

    ಇನ್ನಿಬ್ಬರು ಶಂಕಿತರಾದ ನಾವೂರು ನಿವಾಸಿ ಸುರೇಶ್ ಇಂಚರ ಮತ್ತು ಪುತ್ತೂರಿನ ಕೌಡಿಚಾರು ಎಂಬಲ್ಲಿನ ನಾವೂರು ನಿವಾಸಿ ದಿನೇಶ್ ಪ್ರಭು ಎಂಬವರನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ. ಅ.6ರಂದು ತಡರಾತ್ರಿ ದುಷ್ಕರ್ಮಿಗಳು ಕ್ಲಿನಿಕ್‌ಗೆ ಡೀಸೆಲ್ ಸುರಿದು ಬೆಂಕಿ ಹಚ್ಚಿ ಸುಟ್ಟು ಹಾಕುವ ಪ್ರಯತ್ನ ಮಾಡಿದ್ದರು. ಈ ಕೃತ್ಯದಿಂದ ಔಷಧಿಗಳು, ವೈದ್ಯಕೀಯ ಸಲಕರಣೆಗಳು ಸಂಪೂರ್ಣ ಸುಟ್ಟು ಸುಮಾರು 2 ರಿಂದ 3 ಲಕ್ಷ ರೂ. ನಷ್ಟ ಉಂಟಾಗಿತ್ತು.

    ಈ ಬಗ್ಗೆ ಬೆಳ್ತಂಗಡಿ ಠಾಣೆಯಲ್ಲಿ BNS ಕಲಂ 326, 324ರಡಿ ಪ್ರಕರಣ ದಾಖಲಾಗಿತ್ತು. ಈ ಕೃತ್ಯದ ಹಿಂದೆ ಇರುವವರ ಬಗ್ಗೆ ಸಮಗ್ರ ತನಿಖೆ ನಡೆಸಬೇಕು ಎಂದು ಎಸ್ಪಿ ಅವರಿಗೆ ದೂರು ನೀಡಲಾಗಿತ್ತು. “ಈ ಕೃತ್ಯ ಯಾಕೆ ನಡೆದಿದೆ ಎಂದು ತನಿಖೆಯಾಗಬೇಕು. ನಾವೂರು ಗ್ರಾಮದಲ್ಲಿ ಈ ರೀತಿ ಘಟನೆಗಳು ಪದೇ ಪದೇ ನಡೆಯುತ್ತಿದೆ. ನಾವೂರು ಗ್ರಾಮವನ್ನು ಶಾಂತಿ ಗ್ರಾಮವನ್ನಾಗಿ ಮಾಡುವಲ್ಲಿ ಡಾ. ಪ್ರದೀಪ್ ಅವರ ಪಾತ್ರ ದೊಡ್ಡದು ” ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದರು.

    ಡಾ. ಪ್ರದೀಪ್ ಅವರ ಕ್ಲಿನಿಕ್‌ಗೆ ಬೆಂಕಿ ಹಚ್ಚಿದ ಕೃತ್ಯವನ್ನು ಶಾಸಕ ಹರೀಶ್ ಪೂಂಜ, ಜನಪ್ರತಿನಿಧಿಗಳು, ವೈದ್ಯರು, ಉದ್ಯಮಿಗಳು ಸೇರಿದಂತೆ ನಾಗರಿಕರು ಖಂಡಿಸಿದ್ದರು. ನಾವೂರು ಗ್ರಾಮಸ್ಥರು ಖಂಡನಾ ಸಭೆ ನಡೆಸಿದ್ದರು.

    ಡಾ. ಪ್ರದೀಪ್ ಅವರ ಕ್ಲಿನಿಕ್‌ಗೆ ಬೆಂಕಿ ಹಚ್ಚಿದ ಘಟನೆ ನಡೆದು 7 ದಿನಗಳು ಕಳೆದಿದ್ದರೂ ಆರೋಪಿಗಳ ಬಂಧನವಾಗಿಲ್ಲ ಎಂದು ವಿಶ್ವ ಹಿಂದೂ ಪರಿಷತ್ -ಬಜರಂಗದಳ, ಬೆಳ್ತಂಗಡಿ ಪ್ರಖಂಡದವರು ಅ.13ರಂದು ಪತ್ರಿಕಾ ಪ್ರಕಟಣೆಯಲ್ಲಿ ಆಕ್ರೋಶ ವ್ಯಕ್ತಪಡಿಸಿ, ಆರೋಪಿಗಳನ್ನು ಶೀಘ್ರ ಬಂಧಿಸುವಂತೆ ಆಗ್ರಹಿಸಿದ್ದರು. ತನಿಖೆಯಲ್ಲಿ ಪ್ರಗತಿ ಕಾಣದಿದ್ದರೆ ದುರ್ಗಾ ವಾಹಿನಿ ಮತ್ತು ಮಾತೃ ಮಂಡಳಿ ಸಹಯೋಗದಲ್ಲಿ ಶಾಂತಿಯುತ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದ್ದರು.

    ಈ ಹಿನ್ನೆಲೆಯಲ್ಲಿ ತನಿಖೆ ಚುರುಕುಗೊಳಿಸಿದ ಪೊಲೀಸರು ಒಂದು ವಾರದೊಳಗೆ ಆರೋಪಿಯನ್ನು ಪತ್ತೆ ಹಚ್ಚಿ ಸಾರ್ವಜನಿಕರ ಪ್ರಶಂಸೆಗೆ ಪಾತ್ರರಾಗಿದ್ದಾರೆ. ಹೆಚ್ಚುವರಿ ಎಸ್ಪಿ ಅನಿಲ್ ಕುಮಾರ್ ಬೂಮರೆಡ್ಡಿ, ಡಿವೈಎಸ್‌ಪಿ ರೋಹಿಣಿ ಸಿ.ಕೆ. ಮಾರ್ಗದರ್ಶನದಲ್ಲಿ, ವೃತ್ತ ನಿರೀಕ್ಷಕ ರವಿ ಬಿ.ಎಸ್ ನೇತೃತ್ವದಲ್ಲಿ, ಪಿಎಸ್‌ಐಗಳಾದ ಆನಂದ್ ಹಾಗೂ ಸಿಕಂದ‌ರ್ ಪಾಷಾ ಅವರ ತಂಡ ಕಾರ್ಯಾಚರಣೆ ನಡೆಸಿತ್ತು. ಸೋಕೋ ತಂಡವೂ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದೆ ಎಂಬುದಾಗಿ ವರದಿ ಮೂಲಕ ತಿಳಿದುಬಂದಿದೆ.




    #crime #dakshinakannada
    Previous Articleಬಡಗುತಿಟ್ಟು ಯಕ್ಷಗಾನದ ಹಿರಿಯ ಕಲಾವಿದ ಥಂಡಿಮನೆ ಶ್ರೀಪಾದ ಭಟ್ ನಿಧನ
    Next Article ಕುದ್ರೋಳಿ ದಸರಾಕ್ಕೆ ಸಿಎಂ ಡಿಕೆ ಶಿವಕುಮಾರ್ ಭೇಟಿ; ಮಂಗಳೂರಿನಲ್ಲಿ ವಾಹನ ಸವಾರರಿಗೆ ಪರ್ಯಾಯ ಮಾರ್ಗ ಸೂಚನೆ

    Related Posts

    ಸುರತ್ಕಲ್ ಎಂಆರ್‌ಪಿಎಲ್ ಸ್ಫೋಟ ಪ್ರಕರಣ: ಚಿಕಿತ್ಸೆ ಫಲಿಸದೆ ಮತ್ತೊಬ್ಬ ಕಾರ್ಮಿಕ ಸಾವು

    October 17, 2026

    ಪುತ್ತೂರಿನಲ್ಲಿ ಮಹಿಳೆಯ ಮೇಲಿನ ಹಲ್ಲೆ ಪ್ರಕರಣ: ಮೊದಲ ಆರೋಪಿಗೆ 2 ವರ್ಷ ಜೈಲು, ತಲಾ ₹5,000 ದಂಡ

    October 17, 2026

    16 ಅಡಿ ಆಳದ ಬಾವಿಯಲ್ಲಿ 50 ನಿಮಿಷಗಳ ಹೋರಾಟ; 62 ವರ್ಷದ ಮಹಿಳೆಗೆ ಮರುಜೀವ ನೀಡಿದ ಚಾಲಕ

    October 16, 2026
    Add A Comment
    Leave A Reply Cancel Reply

    ಪ್ರಮುಖ ಸುದ್ದಿ

    ಸುರತ್ಕಲ್ ಎಂಆರ್‌ಪಿಎಲ್ ಸ್ಫೋಟ ಪ್ರಕರಣ: ಚಿಕಿತ್ಸೆ ಫಲಿಸದೆ ಮತ್ತೊಬ್ಬ ಕಾರ್ಮಿಕ ಸಾವು

    October 17, 2026

    ಖಾಸಗಿ ಆಸ್ಪತ್ರೆಗಳ ಚಿಕಿತ್ಸಾ ವೆಚ್ಚಕ್ಕೆ ಕಡಿವಾಣ; ಏಕರೂಪದ ದರ ನಿಗದಿಗೆ ಆರೋಗ್ಯ ಇಲಾಖೆ ಸಿದ್ಧತೆ

    October 17, 2026

    ‘ಲೆಹ್ರಾ ದೋ ತಿರಂಗಾ’ ರ‍್ಯಾಲಿಗೂ ಮುನ್ನ ಪೊಲೀಸ್ ಕ್ರಮ; ಸಿಜೆಪಿ ಸಂಸ್ಥಾಪಕನ ಬಂಧನ, ನೇಹಾ ಬೋರಾ ಬಿಡುಗಡೆ

    October 17, 2026

    ಬಿಜೆಪಿ ಹಿರಿಯ ನಾಯಕ ಎಲ್‌ಕೆ ಅಡ್ವಾಣಿ ಆರೋಗ್ಯದಲ್ಲಿ ಏರುಪೇರು; ಆಸ್ಪತ್ರೆಗೆ ದಾಖಲು

    October 17, 2026
    Advertisement






    Nirantara News is powered by a team of experienced media professionals with decades of expertise in television journalism. Our mission is to be the voice of the people by delivering truthful, unbiased, and responsible news. We cover local, state, national, and international news, along with the latest updates on health, entertainment, real estate, business, technology, and more.

    Backed by experienced reporters and a strong legal team, we are committed to providing accurate news and honest reviews.

    Subscribe to Nirantara News and support trusted journalism.

    Top Insights

    ಖಾಸಗಿ ಆಸ್ಪತ್ರೆಗಳ ಚಿಕಿತ್ಸಾ ವೆಚ್ಚಕ್ಕೆ ಕಡಿವಾಣ; ಏಕರೂಪದ ದರ ನಿಗದಿಗೆ ಆರೋಗ್ಯ ಇಲಾಖೆ ಸಿದ್ಧತೆ

    October 17, 2026

    ಗೂಗಲ್ ಮ್ಯಾಪ್ ಎಡವಟ್ಟು: ದಟ್ಟ ಕಾಡಿನಲ್ಲಿ ಸಿಲುಕಿದ 9 ಟೆಕ್ಕಿಗಳು; ಬೆಳಗ್ಗೆ ಪೊಲೀಸರಿಂದ ರಕ್ಷಣೆ

    October 17, 2026
    Social Follow
    • Facebook
    • Instagram
    © 2026 Nirantara News. Designed by Blueline Computers.
    • Home
    • ಕರಾವಳಿ ಸುದ್ದಿ
    • ಅಪರಾಧ
    • ಕರ್ನಾಟಕ
    • ರಾಷ್ಟ್ರೀಯ
    • ಅಂತರಾಷ್ಟ್ರೀಯ
    • ಸ್ಥಿರಾಸ್ತಿ ಮತ್ತು ಮೂಲಸೌಕರ್ಯ
    • ಆರೋಗ್ಯ

    Type above and press Enter to search. Press Esc to cancel.