Close Menu
    What's Hot

    ಬೀಡಿ ಹಚ್ಚಲು ಕಡ್ಡಿ ಗೀರಿದಾಗ ಸಿಲಿಂಡರ್ ಸ್ಫೋಟ; 6 ಜನ ಆಸ್ಪತ್ರೆಯಲ್ಲಿ ಜೀವನ್ಮರಣ ಹೋರಾಟ

    October 19, 2026

    ಟ್ರಾಲಿ ಬ್ಯಾಗ್‌ಗಳಲ್ಲಿ ನಕಲಿ ಸಿಗರೇಟ್ ಸಾಗಾಟ : ಸಿಸಿಬಿ ಪೊಲೀಸರಿಂದ ಇಬ್ಬರ ಬಂಧನ

    October 19, 2026

    ದಸರಾ ಆಚರಣೆಗೆ ಮಾನವೀಯತೆಯ ಸ್ಪರ್ಶ : ಬಡ ರೋಗಿಯ ನೆರವಿಗೆ ನಿಂತ ಏಳು ಮಕ್ಕಳು

    October 19, 2026
    Facebook X (Twitter) Instagram
    Facebook X (Twitter) Instagram
    Nirantara News | Kannada News | Karnataka Latest UpdatesNirantara News | Kannada News | Karnataka Latest Updates
    Subscribe
    • Homepage
    • ಕರಾವಳಿ ಸುದ್ದಿ
    • ಅಪರಾಧ
    • ಕರ್ನಾಟಕ
    • ರಾಷ್ಟ್ರೀಯ
    • ಅಂತರಾಷ್ಟ್ರೀಯ
    • ಸ್ಥಿರಾಸ್ತಿ ಮತ್ತು ಮೂಲಸೌಕರ್ಯ
    • ಆರೋಗ್ಯ


    Nirantara News | Kannada News | Karnataka Latest UpdatesNirantara News | Kannada News | Karnataka Latest Updates
    Home»ಕರಾವಳಿ ಸುದ್ದಿ»ದಸರಾ ಆಚರಣೆಗೆ ಮಾನವೀಯತೆಯ ಸ್ಪರ್ಶ : ಬಡ ರೋಗಿಯ ನೆರವಿಗೆ ನಿಂತ ಏಳು ಮಕ್ಕಳು
    ಕರಾವಳಿ ಸುದ್ದಿ

    ದಸರಾ ಆಚರಣೆಗೆ ಮಾನವೀಯತೆಯ ಸ್ಪರ್ಶ : ಬಡ ರೋಗಿಯ ನೆರವಿಗೆ ನಿಂತ ಏಳು ಮಕ್ಕಳು

    adminBy adminOctober 19, 2026No Comments2 Mins Read

    ಬಂಟ್ವಾಳ: ದಸರಾ ಅಂದ್ರೆ ಬರೀ ಕುಣಿತ, ಸಂಭ್ರಮವಷ್ಟೇ ಅಲ್ಲ, ಅದರ ಜೊತೆಗೆ ದೊಡ್ಡ ಮನಸ್ಸಿನ ಸಮಾಜಮುಖಿ ಕೆಲಸವೂ ಆಗಬಹುದು ಎಂಬುದನ್ನು ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಸಜಿಪ ಪಡು ಗ್ರಾಮದ ಏಳು ಜನ ಪುಟಾಣಿ ಮಕ್ಕಳು ಸಾಬೀತುಪಡಿಸಿದ್ದಾರೆ. ಬಾಡಿಗೆ ವೇಷ ಧರಿಸುವ ಬದಲು ಗೋಣಿ ಚೀಲ ಹಾಗೂ ಡಬ್ಬಿಗಳಿಂದ ತಾವೇ ಸ್ವತಃ ಹುಲಿವೇಷ ತಯಾರಿಸಿ ಕುಣಿದು, ಆ ಮೂಲಕ ಬಂದ ಹಣವನ್ನು ಐದು ವರ್ಷಗಳಿಂದ ಹಾಸಿಗೆ ಹಿಡಿದಿರುವ ಬಡ ರೋಗಿಗೆ ನೀಡಿ ಇಡೀ ಸಮಾಜಕ್ಕೆ ಮಾದರಿಯಾಗಿದ್ದಾರೆ.

    ಸಜಿಪ ಗುತ್ತು ಪಡು ಪ್ರಾಥಮಿಕ ಶಾಲೆಯ ವೈಭವ್, ಹಾರ್ದಿಕ್, ಅದೀಪ್, ಶ್ರೇಯಸ್, ಸಾತ್ವಿಕ್, ಅಮೋಗ್ ಹಾಗೂ ರಿತೇಶ್ ಈ ಕರುಣಾಮಯಿ ಕಾರ್ಯ ಮಾಡಿದ ಅಪರೂಪದ ಬಾಲ್ಯದ ರಾಯಭಾರಿಗಳು.

    ಸ್ವಯಂಪ್ರೇರಿತ ಹುಲಿವೇಷ ಹಾಗೂ ವಿನೂತನ ಆಲೋಚನೆ:

    ದಸರಾ ಸಂದರ್ಭದಲ್ಲಿ ಮಂಗಳೂರಿನಲ್ಲಿ ಶಾರ್ದೂಲವೇಷ (ಹುಲಿವೇಷ) ಧರಿಸಿ ಕುಣಿಯುವುದು ಈ ಮಕ್ಕಳ ಆಸೆಯಾಗಿತ್ತು. ಆದರೆ, ಅದಕ್ಕಾಗಿ ಹಣ ಖರ್ಚು ಮಾಡಿ ಬಾಡಿಗೆ ವೇಷ ತರಲು ಇಷ್ಟಪಡದ ಈ ಕ್ರಿಯಾಶೀಲ ಮಕ್ಕಳು, ತಮ್ಮ ಮನೆಯಲ್ಲಿದ್ದ ಗೋಣಿ ಚೀಲ, ಖಾಲಿ ಡಬ್ಬಿ ಹಾಗೂ ಆಟದ ಸಾಮಗ್ರಿಗಳನ್ನೇ ಬಳಸಿ ತಾವೇ ಸ್ವತಃ ಅತ್ಯಂತ ಆಕರ್ಷಕವಾಗಿ ಹುಲಿವೇಷದ ಉಡುಪು ಸಿದ್ಧಪಡಿಸಿಕೊಂಡಿದ್ದರು.

    ಊರಿನಲ್ಲಿ ಹುಲಿವೇಷ ಕುಣಿದು ಬಂದ ಬಳಿಕ ಮಕ್ಕಳಿಗೆ ನಿರೀಕ್ಷೆಗೂ ಮೀರಿ ಹಣ ಸಂಗ್ರಹವಾಗಿತ್ತು. ಹಿಂದಿನ ವರ್ಷಗಳಲ್ಲಿ ಈ ಹಣವನ್ನು ತಮ್ಮ ಸ್ವಂತ ಖರ್ಚಿಗೆ ಬಳಸಿಕೊಳ್ಳುತ್ತಿದ್ದ ಮಕ್ಕಳು, ಈ ಬಾರಿ ವಿಭಿನ್ನವಾಗಿ ಯೋಚಿಸಿದರು. ಊರಿನಲ್ಲೇ ಕಳೆದ ಐದು ವರ್ಷಗಳಿಂದ ರಸ್ತೆ ಅಪಘಾತಕ್ಕೊಳಗಾಗಿ ಹಾಸಿಗೆ ಹಿಡಿದಿರುವ ಬಡ ವ್ಯಕ್ತಿಯೊಬ್ಬರ ಕಷ್ಟವನ್ನು ಅರಿತಿದ್ದ ಈ ಪುಟಾಣಿಗಳು, ಸಂಗ್ರಹವಾದ ಸಂಪೂರ್ಣ ಹಣವನ್ನು ಅವರ ಚಿಕಿತ್ಸಾ ನೆರವಿಗೆ ನೀಡಲು ನಿರ್ಧರಿಸಿದರು.

    ವೈರಲ್ ಆದ ಫೋಟೋ, ಹೆತ್ತವರಿಂದ ಮೆಚ್ಚುಗೆ:

    ಯಾರಿಗೂ ತಿಳಿಸದೆ ನೇರವಾಗಿ ಆ ರೋಗಿಯ ಬಳಿಗೆ ತೆರಳಿದ ಮಕ್ಕಳು, ತಾವು ಸಂಗ್ರಹಿಸಿದ ಹಣವನ್ನು ಹಸ್ತಾಂತರಿಸಿ ಅವರ ಮುಖದಲ್ಲಿ ಮಂದಹಾಸ ಮೂಡಿಸಿದ್ದಾರೆ. ಮಕ್ಕಳ ಈ ಸಮಾಜಮುಖಿ ಕಾರ್ಯ ಯಾರಿಗೂ ಮೊದಲೇ ತಿಳಿದಿರಲಿಲ್ಲ. ಆದರೆ, ಮಕ್ಕಳು ಹಣ ಹಸ್ತಾಂತರಿಸಿದ ಸುಂದರ ಕ್ಷಣದ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ಊರಿನ ಜನ ಹಾಗೂ ಸ್ವತಃ ಇವರ ಹೆತ್ತವರು ಆಶ್ಚರ್ಯಚಕಿತರಾದರು.

    ಚಿಕ್ಕ ವಯಸ್ಸಿನಲ್ಲೇ ಈ ಮಕ್ಕಳು ತೋರಿದ ಮಾನವೀಯ ಮೌಲ್ಯ ಹಾಗೂ ಸಾಮಾಜಿಕ ಕಳಕಳಿಯನ್ನು ಕಂಡು ಪೋಷಕರು ಮತ್ತು ಗ್ರಾಮಸ್ಥರು ಅತ್ಯಂತ ಹರ್ಷ ವ್ಯಕ್ತಪಡಿಸಿದ್ದು, ಪುಟಾಣಿಗಳ ಈ ಸಾಹಸಕ್ಕೆ ಕರಾವಳಿ ಭಾಗದಲ್ಲಿ ಭಾರೀ ಪ್ರಶಂಸೆ ವ್ಯಕ್ತವಾಗುತ್ತಿದೆ.




    #dakshinakannada
    Previous Articleಸಿದ್ದಕಟ್ಟೆಯಲ್ಲಿ ಯುವಕನ ಮೇಲೆ ಚೂರಿಯಿಂದ ದಾಳಿ : ಆರು ಮಂದಿ ವಿರುದ್ಧ ಪ್ರಕರಣ ದಾಖಲು
    Next Article ಟ್ರಾಲಿ ಬ್ಯಾಗ್‌ಗಳಲ್ಲಿ ನಕಲಿ ಸಿಗರೇಟ್ ಸಾಗಾಟ : ಸಿಸಿಬಿ ಪೊಲೀಸರಿಂದ ಇಬ್ಬರ ಬಂಧನ

    Related Posts

    ಸಿದ್ದಕಟ್ಟೆಯಲ್ಲಿ ಯುವಕನ ಮೇಲೆ ಚೂರಿಯಿಂದ ದಾಳಿ : ಆರು ಮಂದಿ ವಿರುದ್ಧ ಪ್ರಕರಣ ದಾಖಲು

    October 19, 2026

    ಕೊಕ್ಕಡದ ಅಂಗಡಿ ವಿಚಾರವಾಗಿ ಹಲ್ಲೆ, ಜೀವ ಬೆದರಿಕೆ ಆರೋಪ : ಎರಡೂ ಗುಂಪುಗಳ ವಿರುದ್ಧ ಪ್ರಕರಣ ದಾಖಲು

    October 19, 2026

    ಪುತ್ತೂರು: ಎರಡು ಗುಂಪುಗಳ ನಡುವೆ ಮಾರಾಮಾರಿ : ತಲ್ವಾರ್ ವಶಪಡಿಸಿಕೊಂಡ ಪೊಲೀಸರು

    October 19, 2026
    Add A Comment
    Leave A Reply Cancel Reply

    ಪ್ರಮುಖ ಸುದ್ದಿ

    ಬೀಡಿ ಹಚ್ಚಲು ಕಡ್ಡಿ ಗೀರಿದಾಗ ಸಿಲಿಂಡರ್ ಸ್ಫೋಟ; 6 ಜನ ಆಸ್ಪತ್ರೆಯಲ್ಲಿ ಜೀವನ್ಮರಣ ಹೋರಾಟ

    October 19, 2026

    ಟ್ರಾಲಿ ಬ್ಯಾಗ್‌ಗಳಲ್ಲಿ ನಕಲಿ ಸಿಗರೇಟ್ ಸಾಗಾಟ : ಸಿಸಿಬಿ ಪೊಲೀಸರಿಂದ ಇಬ್ಬರ ಬಂಧನ

    October 19, 2026

    ದಸರಾ ಆಚರಣೆಗೆ ಮಾನವೀಯತೆಯ ಸ್ಪರ್ಶ : ಬಡ ರೋಗಿಯ ನೆರವಿಗೆ ನಿಂತ ಏಳು ಮಕ್ಕಳು

    October 19, 2026

    ಸಿದ್ದಕಟ್ಟೆಯಲ್ಲಿ ಯುವಕನ ಮೇಲೆ ಚೂರಿಯಿಂದ ದಾಳಿ : ಆರು ಮಂದಿ ವಿರುದ್ಧ ಪ್ರಕರಣ ದಾಖಲು

    October 19, 2026
    Advertisement






    Nirantara News is powered by a team of experienced media professionals with decades of expertise in television journalism. Our mission is to be the voice of the people by delivering truthful, unbiased, and responsible news. We cover local, state, national, and international news, along with the latest updates on health, entertainment, real estate, business, technology, and more.

    Backed by experienced reporters and a strong legal team, we are committed to providing accurate news and honest reviews.

    Subscribe to Nirantara News and support trusted journalism.

    Top Insights

    ಬೀಡಿ ಹಚ್ಚಲು ಕಡ್ಡಿ ಗೀರಿದಾಗ ಸಿಲಿಂಡರ್ ಸ್ಫೋಟ; 6 ಜನ ಆಸ್ಪತ್ರೆಯಲ್ಲಿ ಜೀವನ್ಮರಣ ಹೋರಾಟ

    October 19, 2026

    ಟ್ರಾಲಿ ಬ್ಯಾಗ್‌ಗಳಲ್ಲಿ ನಕಲಿ ಸಿಗರೇಟ್ ಸಾಗಾಟ : ಸಿಸಿಬಿ ಪೊಲೀಸರಿಂದ ಇಬ್ಬರ ಬಂಧನ

    October 19, 2026
    Social Follow
    • Facebook
    • Instagram
    © 2026 Nirantara News. Designed by Blueline Computers.
    • Home
    • ಕರಾವಳಿ ಸುದ್ದಿ
    • ಅಪರಾಧ
    • ಕರ್ನಾಟಕ
    • ರಾಷ್ಟ್ರೀಯ
    • ಅಂತರಾಷ್ಟ್ರೀಯ
    • ಸ್ಥಿರಾಸ್ತಿ ಮತ್ತು ಮೂಲಸೌಕರ್ಯ
    • ಆರೋಗ್ಯ

    Type above and press Enter to search. Press Esc to cancel.