ಬೆಂಗಳೂರು: ಸಿಸಿಬಿ ಪೊಲೀಸರು ಕಾರ್ಯಾಚರಣೆ ನಡೆಸಿ ಬೆಂಗಳೂರು ನಗರದಲ್ಲಿ ಬರೋಬ್ಬರಿ 30 ಲಕ್ಷ ಮೌಲ್ಯದ ನಕಲಿ ಸಿಗರೇಟ್ಗಳನ್ನು ಸೀಜ್ ಮಾಡಿದ್ದಾರೆ.
ಆರೋಪಿಗಳು ಬೆಂಗಳೂರಿನಿಂದ 2 ಟ್ರಾಲಿ ಬ್ಯಾಗ್ಗಳಲ್ಲಿ ನಕಲಿ ಸಿಗರೇಟ್ಗಳನ್ನು ಕೇರಳಕ್ಕೆ ಸಾಗಿಸುತ್ತಿದ್ದರು. ಕೇರಳಕ್ಕೆ ಸಾಗಾಟದ ವೇಳೆ ಸಿಸಿಬಿ ಪೊಲೀಸರು ನೇರವಾಗಿ ಆರೋಪಿಗಳ ಮೇಲೆ ದಾಳಿ ಮಾಡಿ ಮಹಮದ್ ರಿಯಾಝ್ ಹಾಗೂ ಕುಮಾರನ್ ಎಂಬವರನ್ನ ವಶಕ್ಕೆ ಪಡೆದು 20 ಲಕ್ಷ ಮೌಲ್ಯದ ಸಿಗರೇಟ್ಗಳನ್ನು ವಶಕ್ಕೆ ಪಡೆದಿದ್ದಾರೆ








