Author: admin

ಉಡುಪಿ: ಜಂಟಿ ರಿಯಲ್ ಎಸ್ಟೇಟ್ ಹೂಡಿಕೆಯ ಹೆಸರಿನಲ್ಲಿ ₹70 ಲಕ್ಷ ಪಡೆದು ವಂಚನೆ ಎಸಗಿರುವುದಲ್ಲದೆ, ಅಶ್ಲೀಲ ವಿಡಿಯೋಗಳನ್ನು ಬಳಸಿಕೊಂಡು ಬ್ಲ್ಯಾಕ್‌ಮೇಲ್ ಹಾಗೂ ಜೀವ ಬೆದರಿಕೆ ಹಾಕಿದ ಆರೋಪದ ಮೇಲೆ ಉಡುಪಿ ನಗರ ಪೊಲೀಸರು ಮಹಿಳೆಯೊಬ್ಬರನ್ನು ಬಂಧಿಸಿದ್ದಾರೆ. ಬಂಧಿತೆಯನ್ನು ಜೀನತ್ ಇಬ್ರಾಹಿಂ ಎಂದು ಗುರುತಿಸಲಾಗಿದ್ದು, ಪಡುಬಿದ್ರೆ ಸಮೀಪದ ಕಂಚಿನಡ್ಕದಲ್ಲಿ ವಿಶೇಷ ಕಾರ್ಯಾಚರಣೆ ನಡೆಸಿದ ಪೊಲೀಸರು ಆಕೆಯನ್ನು ವಶಕ್ಕೆ ಪಡೆದಿದ್ದಾರೆ. ಬಳಿಕ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಹೆಚ್ಚಿನ ವಿಚಾರಣೆಗಾಗಿ ಐದು ದಿನಗಳ ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿದೆ. ರಿಯಲ್ ಎಸ್ಟೇಟ್ ಪಾಲುದಾರಿಕೆ ಹೆಸರಿನಲ್ಲಿ ಕೋಟ್ಯಂತರ ವ್ಯವಹಾರ ದೂರುದಾರರೊಂದಿಗೆ ರಿಯಲ್ ಎಸ್ಟೇಟ್ ವ್ಯವಹಾರದ ಮೂಲಕ ಪರಿಚಯ ಬೆಳೆಸಿಕೊಂಡಿದ್ದ ಆರೋಪಿತೆ, ಬಳಿಕ ಉಡುಪಿಯಲ್ಲಿ ಜಂಟಿಯಾಗಿ ಕಚೇರಿ ಆರಂಭಿಸಿದ್ದಳು ಎನ್ನಲಾಗಿದೆ. ಈ ಸಂದರ್ಭದಲ್ಲಿ ಜಮೀನು ಖರೀದಿಗೆ ಹೂಡಿಕೆ ಮಾಡುವುದಾಗಿ ಹೇಳಿ ದೂರುದಾರರಿಂದ ₹70 ಲಕ್ಷ ಪಡೆದುಕೊಂಡಿದ್ದಾಳೆ. ಆದರೆ, ಆ ಹಣವನ್ನು ವ್ಯವಹಾರಕ್ಕೆ ಬಳಸದೇ ತನ್ನ ವೈಯಕ್ತಿಕ ಉದ್ದೇಶಗಳಿಗೆ ಬಳಸಿಕೊಂಡು ವಂಚಿಸಿರುವುದಾಗಿ ದೂರಿನಲ್ಲಿ ಆರೋಪಿಸಲಾಗಿದೆ. ಈ ಸಂಬಂಧ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ…

Read More

ಕಾಸರಗೋಡು : ಅಪ್ರಾಪ್ತ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ, ವಿದೇಶಕ್ಕೆ ಹೊಸ ಉದ್ಯೋಗ ಅರಸಿ ದೇಶ ಬಿಟ್ಟು ಪರಾರಿಯಾಗಲು ಕೇವಲ ಎರಡು ದಿನಗಳು ಬಾಕಿ ಇರುವಾಗ ಕಾಮುಕ ಆಟೋರಿಕ್ಷಾ ಚಾಲಕನನ್ನು ವಿದ್ಯಾನಗರ ಪೊಲೀಸರು ಅತ್ಯಂತ ಚಾಣಾಕ್ಷತನದಿಂದ ಬಂಧಿಸಿದ್ದಾರೆ. ಕುಂಬಳ ಮೂಲದ ಅಬು ತಾಹಿರ್ (32) ಬಂಧಿತ ಆರೋಪಿ. ಬಂಧಿತ ಆರೋಪಿಗೆ ಈಗಾಗಲೇ ಮದುವೆಯಾಗಿದ್ದು, ಇಬ್ಬರು ಮಕ್ಕಳಿದ್ದಾರೆ. ಪ್ರಸ್ತುತ ಆತನ ಪತ್ನಿ ಗರ್ಭಿಣಿಯಾಗಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿ ವಿರುದ್ಧ ಪೋಕ್ಸೋ (POCSO) ಕಾಯ್ದೆಯಡಿ ಗಂಭೀರ ಪ್ರಕರಣ ದಾಖಲಿಸಲಾಗಿದೆ. ಪೊಲೀಸರ ತನಿಖೆಯ ಪ್ರಕಾರ, ಅಬು ತಾಹಿರ್ ಹಾಗೂ ಆತನ ಕುಟುಂಬ ಈ ಹಿಂದೆ ವಿದ್ಯಾನಗರದಲ್ಲಿದ್ದ ಸಂತ್ರಸ್ತೆಯ ಮನೆಯ ಬಳಿಯೇ ಬಾಡಿಗೆಗೆ ವಾಸವಿದ್ದರು. ಈ ಅವಧಿಯಲ್ಲಿ (2022 ರಿಂದ 2023 ರ ನಡುವೆ) ಸಂತ್ರಸ್ತೆಗೆ ಕೇವಲ 16 ವರ್ಷ ವಯಸ್ಸಾಗಿದ್ದಾಗ ಆರೋಪಿ ಆಕೆಯ ಮೇಲೆ ನಿರಂತರವಾಗಿ ಲೈಂಗಿಕ ದೌರ್ಜನ್ಯ ಎಸಗಿದ್ದ. 2023 ರಲ್ಲಿ ಈತ ತನ್ನ ಕುಟುಂಬದೊಂದಿಗೆ ಕುಂಬಳಕ್ಕೆ ಶಿಫ್ಟ್ ಆಗಿದ್ದರೂ, ಬಾಲಕಿಯೊಂದಿಗೆ…

Read More

ಬೆಂಗಳೂರು: ಶಾರ್ಟ್ ಮೂವಿಯಲ್ಲಿ ಆ್ಯಕ್ಟಿಂಗ್ ಮಾಡುತ್ತೇನೆ ಅಂತ ಬಂದವನು, ಸಿನಿಮಾ ನಟನ ಮನೆಯಲ್ಲಿ ಚಿನ್ನ ಕಳ್ಳತನ ಮಾಡಿರುವ ಘಟನೆ ನಡೆದಿದೆ. ಶೂಟಿಂಗ್ ವೇಳೆ ಸಿನಿಮಾ ನಟನ ಮನೆಯಲ್ಲಿ ಕಳ್ಳತನವಾಗಿದೆ. ‘ಫ್ಲಾಟ್ F01’ ಹೆಸರಿನ ಶಾರ್ಟ್ ಮೂವಿಯನ್ನು ನಟ ಲಿಖಿತ್ ರಾಜ್ ನಿರ್ದೇಶನ ಮಾಡುತ್ತಿದ್ದರು. ಗರುಡಪುರಾಣ, ಮ್ಯಾನ್ ಆಫ್ ದಿ ಮ್ಯಾಚ್ ಸಿನಿಮಾ ಸೇರಿ ಹಲವು ಶಾರ್ಟ್ ಮೂವಿಗಳಲ್ಲಿ ನಟ ಲಿಖಿತ್ ರಾಜ್ ಅಭಿನಯಿಸಿದ್ದಾರೆ. ಲಿಖಿತ್ ರಾಜ್ ಬಳಿ ಅವಕಾಶ ಕೇಳಿಕೊಂಡು ಅಭಿಷೇಕ್ ಎಂಬಾತ ಬಂದಿದ್ದ. ಫ್ಲಾಟ್ F01 ಶಾರ್ಟ್ ಮೂವಿಯಲ್ಲಿ ಅಭಿಷೇಕ್ ನಟನೆಗೆ ಅವಕಾಶ ಪಡೆದಿದ್ದ. ಕಳೆದ ಜೂನ್ 28 ರಿಂದ ಸಹಕಾರನಗರದ ನಟ ಲಿಖಿತ್ ಫ್ಲಾಟ್‌ನಲ್ಲಿ ಶೂಟಿಂಗ್ ನಡೆದಿತ್ತು. ಈ ವೇಳೆ ದೇವರ ಮನೆಯಲ್ಲಿದ್ದ ಚಿನ್ನದ ಸರ ಕಳುವಾಗಿತ್ತು. ನಂತರ ಪೊಲೀಸ್ ಠಾಣೆಗೆ ನಟನ ತಾಯಿ ದೂರು ನೀಡಿದ್ದರು. ಸದ್ಯ ದೂರಿನನ್ವಯ ಶೂಟಿಂಗ್‌ಗೆಂದು ಬಂದು ಚಿನ್ನದ ಸರ ಕದ್ದಿದ್ದ ಅಭಿಷೇಕ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಕೊಡಿಗೇಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.…

Read More

ಉಡುಪಿ: ಸಮುದ್ರದಲ್ಲಿ ನೀರು ತುಂಬಿಕೊಂಡು ಅಪಘಾತಕ್ಕೀಡಾಗಿದ್ದ ಮಲ್ಪೆ ನೋಂದಣಿಯ ‘ಮಂಜು ಮಾತಾ’ ಎಂಬ ಗಿಲ್‌ನೆಟ್ ಮೀನುಗಾರಿಕಾ ದೋಣಿ, ಶುಕ್ರವಾರ ಸಂಜೆ ಉಚ್ಚಿಲ ಕಡಲತೀರಕ್ಕೆ ಕೊಚ್ಚಿಕೊಂಡು ಬಂದಿದೆ. ಈ ದೋಣಿಯು ಜೂನ್ 29 ರಂದು ಬೆಳಿಗ್ಗೆ ಮಲ್ಪೆ ಮೀನುಗಾರಿಕಾ ಬಂದರಿನಿಂದ ಮೀನುಗಾರಿಕೆಗಾಗಿ ಸಮುದ್ರಕ್ಕೆ ತೆರಳಿತ್ತು. ಅದೇ ದಿನ ಮಧ್ಯಾಹ್ನ ದೋಣಿಯ ತಳಭಾಗದಲ್ಲಿ ಸೋರಿಕೆ ಕಂಡುಬಂದು ನೀರು ಒಳಗೆ ನುಗ್ಗತೊಡಗಿತು. ಪರಿಸ್ಥಿತಿ ಕೈಮೀರುತ್ತಿದ್ದಂತೆ, ಮೀನುಗಾರರು ಭಾರತೀಯ ಕರಾವಳಿ ಕಾವಲು ಪಡೆಗೆ ಮಾಹಿತಿ ನೀಡಿದ್ದರು. ಕೂಡಲೇ ಸ್ಥಳಕ್ಕೆ ಧಾವಿಸಿದ ಕರಾವಳಿ ಕಾವಲು ಪಡೆಯ ಸಿಬ್ಬಂದಿ, ದೋಣಿಯಲ್ಲಿದ್ದ ಆರೂ ಜನ ಮೀನುಗಾರರನ್ನು ಸುರಕ್ಷಿತವಾಗಿ ರಕ್ಷಿಸಿದ್ದರು. ಆದರೆ, ದೋಣಿಯನ್ನು ಮೇಲೆತ್ತಲು ಸಾಧ್ಯವಾಗದ ಕಾರಣ, ರಕ್ಷಣಾ ಕಾರ್ಯಾಚರಣೆಯ ನಂತರ ಅದನ್ನು ಸಮುದ್ರದಲ್ಲಿಯೇ ಬಿಡಲಾಗಿತ್ತು. ನಂತರ, ನವ ಮಂಗಳೂರು ಬಂದರು ಪ್ರಾಧಿಕಾರದಲ್ಲಿ ಕರಾವಳಿ ಭದ್ರತಾ ಪೊಲೀಸ್ ಠಾಣೆ, ಮೀನುಗಾರಿಕಾ ಇಲಾಖೆ, ವಲಸೆ ಇಲಾಖೆ ಮತ್ತು ಸ್ಥಳೀಯ ಪೊಲೀಸರು ಮೀನುಗಾರರನ್ನು ವಶಕ್ಕೆ ಪಡೆದು ದಾಖಲೆಗಳನ್ನು ಪರಿಶೀಲಿಸಿದರು. ಈ ಪೈಕಿ ನಾಲ್ವರು ತಮಿಳುನಾಡು ಮೂಲದವರು…

Read More

ಉತ್ತರಾಖಂಡ: ಇತ್ತೀಚಿನ ದಿನಗಳಲ್ಲಿ ಖ್ಯಾತಿ ಪಡೆಯಲು ಜನರು ಸಾಮಾಜಿಕ ಮಾಧ್ಯಮದಲ್ಲಿ ವಿಚಿತ್ರವಾದ ರೀಲ್‌ಗಳನ್ನು ಮಾಡುವ ವಿಚಿತ್ರ ಕ್ರೇಜ್ ಇದೆ. ಡೆಹ್ರಾಡೂನ್‌ನ ಮಹಿಳೆಯೊಬ್ಬರು ಸಾಮಾಜಿಕ ಮಾಧ್ಯಮದಲ್ಲಿ ರೀಲ್ ಅನ್ನು ಪೋಸ್ಟ್ ಮಾಡಿ ಆ ರೀಲ್ ಮೂಲಕ ಕಳ್ಳಿಯೊಬ್ಬಳು ಸಿಕ್ಕಿಬಿದ್ದಿದ್ದಾಳೆ. ಉತ್ತರಾಖಂಡದ ರಾಜಧಾನಿ ಡೆಹ್ರಾಡೂನ್‌ನಲ್ಲಿ ಈ ಘಟನೆ ನಡೆದಿದೆ. ಇನ್‌ಸ್ಟಾಗ್ರಾಮ್ ರೀಲ್‌ನಲ್ಲಿ 10 ಲಕ್ಷ ಮೌಲ್ಯದ ವಜ್ರದ ಹಾರವನ್ನು ಧರಿಸಿ ಮಹಿಳೆ ರೀಲ್ಸ್ ಮಾಡಿದ್ದಳು. ರೀಲ್ ಮೂಲಕ ಒಂದು ವರ್ಷದ ಹಿಂದಿನ ಆಭರಣ ಕಳ್ಳತನ ಪ್ರಕರಣ ಬಹಿರಂಗಗೊಂಡಿದೆ. ಡೆಹ್ರಾಡೂನ್‌ನ ಐಟಿ ಪಾರ್ಕ್‌ನಲ್ಲಿರುವ ಸಿಕ್ಕಾ ಕಿಮಯಾ ಗ್ರೀನ್ಸ್ ನಿವಾಸಿ ನಿತಿಶಾ ವ್ಯಾಟ್ಸ್ ತಮ್ಮ ದೂರಿನಲ್ಲಿ ಪೊಲೀಸರಿಗೆ ದೂರು ನೀಡಿದ್ದರು. ಆ ಸಮಯದಲ್ಲಿ, ತನ್ನ ಮನೆಯಿಂದ ಎರಡು ವಜ್ರದ ಉಂಗುರಗಳು, ಚಿನ್ನದ ಸರ ಮತ್ತು ವಜ್ರದ ಪೆಂಡೆಂಟ್ ಅನ್ನು ಕಳುವಾಗಿತ್ತು. ಆ ಸಮಯದಲ್ಲಿ, ಅವಳು ತನ್ನ ಮನೆ ಕೆಲಸದಾಕೆ ವಿಮಲಾ ದೇವಿಯನ್ನು ಅನುಮಾನಿಸಿದಳು. ಮನೆಕೆಲಸ ಮಾಡುತ್ತಿದ್ದ ವಿಮಲಾ ದೇವಿ ಆಭರಣಗಳನ್ನು ಧರಿಸಿ ರೀಲ್ ಮಾಡಿ ತನ್ನ ಇನ್‌ಸ್ಟಾಗ್ರಾಮ್…

Read More

ಆಂಧ್ರಪ್ರದೇಶ: ತೀವ್ರವಾಗಿ ಅಸ್ವಸ್ಥಗೊಂಡಿದ್ದ ಏಳನೇ ತರಗತಿಯ ಬುಡಕಟ್ಟು ಬಾಲಕಿಯೊಬ್ಬಳನ್ನು ತನ್ನ ಬೆನ್ನ ಮೇಲೆ ಹೊತ್ತುಕೊಂಡು, ಕಲ್ಲು-ಮುಳ್ಳುಗಳಿಂದ ಕೂಡಿದ ದುರ್ಗಮ ಹಾದಿಯಲ್ಲಿ ಬರೋಬ್ಬರಿ 6 ಕಿಲೋಮೀಟರ್ ನಡೆದು ಆಸ್ಪತ್ರೆಗೆ ದಾಖಲಿಸುವ ಮೂಲಕ ಶಿಕ್ಷಕಿಯೊಬ್ಬರು ಬಾಲಕಿಗೆ ಜೀವದಾನ ಮಾಡಿದ್ದಾರೆ. . ಆಂಧ್ರಪ್ರದೇಶದ ಪಾರ್ವತಿಪುರ ಮಣ್ಯಂ ಜಿಲ್ಲೆಯ ಗುಮ್ಮಲಕ್ಷ್ಮಿಪುರದಲ್ಲಿ ನಡೆದ ಈ ಹೃದಯಸ್ಪರ್ಶಿ ಘಟನೆ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಶಿಕ್ಷಕಿಯ ಮಾನವೀಯತೆಗೆ ವ್ಯಾಪಕ ಪ್ರಶಂಸೆ ವ್ಯಕ್ತವಾಗುತ್ತಿದೆ. ಇಲ್ಲಿನ ಆದಿವಾಸಿ ಬಾಲಕಿಯರ ಕಲ್ಯಾಣ ಶಾಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಹೇಮನಿ ಅವರೇ ಇಡೀ ದೇಶ ಮೆಚ್ಚುವಂತಹ ಸಾಹಸ ಮತ್ತು ಮಾನವೀಯ ಕಾರ್ಯ ಮಾಡಿದ ನಿಸ್ವಾರ್ಥ ಶಿಕ್ಷಕಿ. ಅದೇ ಶಾಲೆಯಲ್ಲಿ 7ನೇ ತರಗತಿ ವ್ಯಾಸಂಗ ಮಾಡುತ್ತಿರುವ ಭುವನೇಶ್ವರಿ ಎಂಬ ವಿದ್ಯಾರ್ಥಿನಿ ಹಠಾತ್ತನೆ ತೀವ್ರವಾಗಿ ಅಸ್ವಸ್ಥಗೊಂಡಿದ್ದಾಳೆ. ದೂರದ ಬೆಟ್ಟದ ಮೇಲಿರುವ ಬುಡಕಟ್ಟು ಪ್ರದೇಶದ ಆ ಶಾಲೆಯಿಂದ ಆಸ್ಪತ್ರೆಗೆ ಸಾಗಿಸಲು ಯಾವುದೇ ಸೂಕ್ತ ಸಾರಿಗೆ ಅಥವಾ ಆಂಬ್ಯುಲೆನ್ಸ್ ವ್ಯವಸ್ಥೆ ಇರಲಿಲ್ಲ. ರಸ್ತೆಯೂ ಸಂಪೂರ್ಣ ಹದಗೆಟ್ಟಿತ್ತು. ಬಾಲಕಿಯ ಪರಿಸ್ಥಿತಿ ಕ್ಷಣಕ್ಷಣಕ್ಕೂ ಕ್ಷೀಣಿಸುತ್ತಿರುವುದನ್ನು ಕಂಡು…

Read More

ವಿಟ್ಲ: ಬಂಟ್ವಾಳ ತಾಲೂಕಿನ ಕರೋಪಾಡಿ ಗ್ರಾಮದ ಮುಗುಳಿ ಪ್ರದೇಶದಲ್ಲಿ ಅಕ್ರಮ ಕೆಂಪುಕಲ್ಲು ಹಾಗೂ ಮಣ್ಣು ಗಣಿಗಾರಿಕೆ ನಡೆಸುತ್ತಿದ್ದ ಸ್ಥಳದ ಮೇಲೆ ವಿಟ್ಲ ಪೊಲೀಸರು ದಾಳಿ ನಡೆಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ. ಜುಲೈ 2, 2026ರಂದು ಸಂಜೆ ವೇಳೆ ಅಕ್ರಮ ಗಣಿಗಾರಿಕೆ ನಡೆಯುತ್ತಿರುವ ಬಗ್ಗೆ ದೊರೆತ ಖಚಿತ ಮಾಹಿತಿಯ ಮೇರೆಗೆ ವಿಟ್ಲ ಪೊಲೀಸ್ ಠಾಣೆಯ ಉಪನಿರೀಕ್ಷಕ ರಾಮಕೃಷ್ಣ ಅವರು ಸಿಬ್ಬಂದಿಗಳೊಂದಿಗೆ ಸ್ಥಳಕ್ಕೆ ತೆರಳಿದರು. ಈ ವೇಳೆ ಪೊಲೀಸ್ ವಾಹನವನ್ನು ಕಂಡ ಗಣಿಗಾರಿಕೆಯಲ್ಲಿ ತೊಡಗಿದ್ದವರು ಸ್ಥಳದಿಂದ ಪರಾರಿಯಾಗಿದ್ದಾರೆ. ಸ್ಥಳ ಪರಿಶೀಲನೆ ವೇಳೆ ಯಾವುದೇ ಪರವಾನಗಿ ಇಲ್ಲದೆ ಅಕ್ರಮವಾಗಿ ಕೆಂಪುಕಲ್ಲು ಗಣಿಗಾರಿಕೆ ನಡೆಸುತ್ತಿರುವುದು ಬೆಳಕಿಗೆ ಬಂದಿದೆ. ಅಲ್ಲದೆ ಗಣಿಗಾರಿಕೆಗೆ ಬಳಸುತ್ತಿದ್ದ ಯಂತ್ರೋಪಕರಣಗಳು, ಅಕ್ರಮ ಮಣ್ಣು ಗಣಿಗಾರಿಕೆ ನಡೆಸುತ್ತಿದ್ದ ಸ್ಥಳ, ಮಣ್ಣು ಸಾಗಣೆ ಲಾರಿಗಳ ತೂಕ ಪರಿಶೀಲನೆಗಾಗಿ ನಿರ್ಮಿಸಿದ್ದ ವೇ ಬ್ರಿಡ್ಜ್ ಹಾಗೂ ಕಟ್ಟಡವೂ ಪತ್ತೆಯಾಗಿದೆ. ಪೊಲೀಸರು ಸ್ಥಳದಲ್ಲಿದ್ದ ಯಂತ್ರೋಪಕರಣಗಳು ಸೇರಿದಂತೆ ಸಂಬಂಧಿತ ಸೊತ್ತುಗಳನ್ನು ವಶಪಡಿಸಿಕೊಂಡು ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ. ಈ ಸಂಬಂಧ ಮುಳಿಗದ್ದೆ ಝಕಾರಿಯಾ ಹಾಗೂ…

Read More

ಮಂಗಳೂರು,: ದಕ್ಷಿಣ ಕನ್ನಡ ಜಿಲ್ಲಾ ಸೈಬರ್ ಅಪರಾಧ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಡಿಜಿಟಲ್ ಅರೆಸ್ಟ್ ಪ್ರಕರಣಕ್ಕೆ ಸಂಬಂಧಿಸಿದಂತೆ, ಸೈಬರ್ ವಂಚನೆಗೆ ಬ್ಯಾಂಕ್ ಖಾತೆಗಳನ್ನು ಒದಗಿಸಿ ಹಣದ ಅಕ್ರಮ ವಹಿವಾಟಿಗೆ ಸಹಕರಿಸುತ್ತಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ದಕ್ಷಿಣ ಕನ್ನಡ ಜಿಲ್ಲಾ ಸೈಬರ್ ಅಪರಾಧ ಪೊಲೀಸ್ ಠಾಣೆಯ ಅಪರಾಧ ಸಂಖ್ಯೆ 104/2025ರಲ್ಲಿ ಮಾಹಿತಿ ತಂತ್ರಜ್ಞಾನ ಕಾಯ್ದೆ-2008ರ 66(C), 66(D)ಹಾಗೂ **ಭಾರತೀಯ ನ್ಯಾಯ ಸಂಹಿತೆ (BNS)**ಯ 126(2), 308(6), 318(4), 319(2) ಮತ್ತು 3(5) ಕಲಂಗಳಡಿ ಪ್ರಕರಣ ದಾಖಲಾಗಿತ್ತು. ಈ ಪ್ರಕರಣದಲ್ಲಿ ಕೊಳ್ನಾಡು ಕುಡ್ತಮುಗೇರು ನಿವಾಸಿ ಜುಬೈರ್ (32) ಎಂಬಾತನನ್ನು 2026ರ ಜುಲೈ 3ರಂದು ಜಿಲ್ಲಾ ಸೈಬರ್ ಅಪರಾಧ ಠಾಣೆಯ ಪೊಲೀಸರು ಬಂಧಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ನ್ಯಾಯಾಲಯ ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿದೆ. ಹಲವು ಪ್ರಕರಣಗಳಲ್ಲಿ ಭಾಗಿಯಾಗಿರುವ ಮಾಹಿತಿ ಪೊಲೀಸರ ವಿಚಾರಣೆಯಲ್ಲಿ, ಜುಬೈರ್ ವಿರುದ್ಧ ವಿಟ್ಲ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ 180/2022 ಸೇರಿದಂತೆ ರಾಜ್ಯದ ವಿವಿಧ ಪೊಲೀಸ್ ಠಾಣೆಗಳಲ್ಲಿ ಒಟ್ಟು ನಾಲ್ಕು ಪ್ರಕರಣಗಳು ದಾಖಲಾಗಿರುವುದು…

Read More

ಉಡುಪಿ: ಮಲ್ಪೆಯ ಉದ್ಯಮಿ ಸಂದೀಪ್ ಸಾಲ್ಯಾನ್ ಸಾವಿನ ಪ್ರಕರಣದ ಪ್ರಮುಖ ಆರೋಪಿ ಮಹಿಳೆಯನ್ನು ಕ್ಯಾಲಂಗಟ್ ಪೊಲೀಸರು ಇಂದು ಬಂಧಿಸಿದ್ದಾರೆ. ಬಂಧಿತ ಆರೋಪಿ ಮಹಿಳೆ ಮೂಲತಃ ಮಂಗಳೂರು ನಿವಾಸಿ ಅಕ್ಷತಾ ಎಂದು ಗುರುತಿಸಲಾಗಿದೆ. ಆಕೆ ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದಳು ಎನ್ನಲಾಗಿದೆ. ಸಂದೀಪ್ ಸಾವಿನ ಪ್ರಕರಣ ಈಗ ಕೊಲೆ ಎಂದು ಪೊಲೀಸರು ಸಾಬೀತು ಪಡಿಸಿದ್ದಾರೆ. ಮಹಿಳೆ ರೆಸಾರ್ಟ್ ನಲ್ಲಿ ಕಟ್ಟರ್ ಕೇಳಿ ಸಂದೀಪ್ ಬಳಿ ಇದ್ದ ಚಿನ್ನ ಹಾಗೂ ಹಣವನ್ನು ದೋಚಿಕೊಂಡು ಹೋಗಿದ್ದಳು. ಇದರಿಂದ ಅನುಮಾನಗೊಂಡ ಪೊಲೀಸರು ಈ ಆರೋಪಿ ಮಹಿಳೆಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಪೊಲೀಸರು ಆರೋಪಿ ಮಹಿಳೆಯನ್ನು ಬಂದಿಸಿ ಈಗ ವಿಚಾರಣೆ ನಡೆಸುತ್ತಿದ್ದಾರೆ. ಪೊಲೀಸ್ ವಿಚಾರಣೆಯಲ್ಲಿ ಸಂದೀಪ್ ಕೊಲೆಯ ಸತ್ಯಾಂಶ ತಿಳಿದುಬರಬೇಕಿದೆ.

Read More

ಮಂಗಳೂರು: ಕಂಟೈನರ್ ಲಾರಿಯೊಂದು ಡಿಕ್ಕಿಯಾಗಿ ಸ್ಕೂಟರ್ ಸವಾರನೋರ್ವ ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟ ಘಟನೆ ಮಂಗಳೂರು ಉಡುಪಿ ರಸ್ತೆಯ ಕೂಳೂರು ವಿ.ಅರ್.ಎಲ್ ಕಚೇರಿ ಎದುರು ಶುಕ್ರವಾರ ಸಂಜೆ ನಡೆದಿದೆ. ಸದಾನಂದ ಶೆಟ್ಟಿಗಾರ್(46) ಮೃತ ಸ್ಕೂಟರ್ ಸವಾರ. ಮೃತರು ಕೊಟ್ಟಾರ ಕಡೆಯಿಂದ ಉಡುಪಿ ಕಡೆಗೆ ಹೋಗುತ್ತಿರುವಾಗ ಅದೇ ರಸ್ತೆಯಲ್ಲಿ ಬರುತ್ತಿದ್ದ ಚಾಲಕ ಮಹಮ್ಮದ್ ಅಜರುದ್ದೀನ್ ಚಲಾಯಿಸುತ್ತಿದ್ದ ಕಂಟೈನರ್ ಲಾರಿ ಡಿಕ್ಕಿಯಾಗಿದೆ. ಇನ್ನು ಚಾಲಕ ಮಹಮ್ಮದ್ ಅಜರುದ್ದೀನ್ ನಿರ್ಲಕ್ಷ್ಯ ಹಾಗೂ ದುಡುಕುತನದಿಂದ ಲಾರಿ ಚಲಾಯಿಸಿ ಸ್ಕೂಟರ್ ಗೆ ಡಿಕ್ಕಿ ಪಡಿಸಿದ್ದಾರೆ. ಘಟನೆ ವೇಳೆ ಲಾರಿ ಸವಾರನ ಮೇಲೆ ಚಲಿಸಿ ಸ್ಕೂಟರ್ ಚಾಲಕ ಗಂಭೀರ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಸ್ಥಳಕ್ಕೆ ಸ್ಥಳೀಯ ಪೊಲೀಸರು ಭೇಟಿ ನೀಡಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.

Read More