Author: admin

ವಾಷಿಂಗ್ಟನ್: ಇರಾನ್‌ನ ದಿವಂಗತ ಸರ್ವೋಚ್ಚ ನಾಯಕ ಆಯತೊಲ್ಲಾ ಅಲಿ ಖಮೇನಿ ಅವರ ಅಂತಿಮ ಸಂಸ್ಕಾರದ ವೇಳೆ ಅಲ್ಲಿ ನೆರೆದಿದ್ದ ಇಡೀ ಇರಾನ್ ರಾಜಕೀಯ ಹಾಗೂ ಮಿಲಿಟರಿ ನಾಯಕತ್ವವನ್ನು ಒಂದೇ ದಾಳಿಯಲ್ಲಿ (“ಒನ್ ಶಾಟ್”) ನಿರ್ನಾಮ ಮಾಡುವ ಸುವರ್ಣಾವಕಾಶ ಅಮೆರಿಕಕ್ಕಿತ್ತು ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ಜಾಗತಿಕ ರಾಜತಾಂತ್ರಿಕ ಶಿಷ್ಟಾಚಾರಗಳನ್ನು ಬದಿಗಿಟ್ಟು ಟ್ರಂಪ್ ನೀಡಿರುವ ಈ ಉದ್ಧಟತನದ ಹೇಳಿಕೆ ಅಂತರರಾಷ್ಟ್ರೀಯ ವಲಯದಲ್ಲಿ ತೀವ್ರ ಚರ್ಚೆ ಹಾಗೂ ಉದ್ವಿಗ್ನತೆಗೆ ಕಾರಣವಾಗಿದೆ. ಅಮೆರಿಕದ ಪ್ರಸಿದ್ಧ ‘Axios’ ಮಾಧ್ಯಮ ಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಈ ಆಘಾತಕಾರಿ ರಹಸ್ಯ ಬಿಚ್ಚಿಟ್ಟಿರುವ ಟ್ರಂಪ್, ಇರಾನ್‌ನೊಂದಿಗೆ ಪ್ರಸ್ತುತ ನಡೆಯುತ್ತಿರುವ ಸಂಧಾನ ಮಾತುಕತೆಗಳ ಹಿನ್ನೆಲೆಯಲ್ಲಿ ತಾವು ಅಂತಹ ಯಾವುದೇ ಕಠಿಣ ಕ್ರಮಕ್ಕೆ ಮುಂದಾಗಲಿಲ್ಲ ಎಂದು ಸಮರ್ಥಿಸಿಕೊಂಡಿದ್ದಾರೆ. “ಖಮೇನಿ ಅಂತ್ಯಕ್ರಿಯೆಯ ಮೆರವಣಿಗೆಯಲ್ಲಿ ಇರಾನ್‌ನ ಬಹುತೇಕ ಎಲ್ಲಾ ಉನ್ನತ ನಾಯಕರು ಒಂದೇ ಸ್ಥಳದಲ್ಲಿ ಜಮಾಯಿಸಿದ್ದರು. ಅಮೆರಿಕ ಬಯಸಿದ್ದರೆ ಕೇವಲ ಒಂದೇ ಹೊಡೆತದಲ್ಲಿ ಎಲ್ಲರನ್ನೂ ಮುಗಿಸಿಬಿಡಬಹುದಿತ್ತು. ಆದರೆ ನಾವು ಹಾಗೆ ಮಾಡಲಿಲ್ಲ. ಏಕೆಂದರೆ, ಇರಾನ್‌ನ…

Read More

ಮಂಗಳೂರು: ಸೂಟರ್ ಪೇಟೆ ಗ್ರಾಮ ಲೆಕ್ಕಾಧಿಕಾರಿ ಕಚೇರಿಯ ಬಳಿ ಹಿರಿಯ ಮಹಿಳೆಯೊಬ್ಬರ ಕುತ್ತಿಗೆಯಿಂದ ಚಿನ್ನದ ಸರವನ್ನು ಎಳೆದು ಪರಾರಿಯಾಗಿರುವ ಪ್ರಕರಣದಲ್ಲಿ ಬಂಧಿತ ಆರೋಪಿಗಳಿಗೆ ನ್ಯಾಯಾಲಯ ನ್ಯಾಯಾಂಗ ಬಂಧನ ವಿಧಿಸಿದೆ. ಪ್ರಕರಣದಲ್ಲಿ ಉತ್ತರ ಪ್ರದೇಶದ ಮುಝಾಫರ್ ನಗರದ ರವಿ ಬೌರಾ (39) ಮತ್ತು ಗೊಂಡಾ ಜಿಲ್ಲೆ ಕನೀಲ್ ಗಂಝ್, ಶಿಶಾಮೌ ಗ್ರಾಮದ ಮೊಹಮ್ಮದ್ ಸಾಹೀಲ್ ಅಲಿಯಾಸ್ ಸಿದ್ದಿಕಿ (26) ಎಂಬಿಬ್ಬರನ್ನು ಬಂಧಿಸಿ, ಪೊಲೀಸ್ ಕಸ್ಟಡಿಗೆ ಪಡೆಯಲಾಗಿತ್ತು. ಪ್ರಕರಣ ನಡೆದ ಒಂದು ವಾರದ ಬಳಿಕ ಆರೋಪಿಗಳು ಸ್ಟೇಟ್ ಬ್ಯಾಂಕ್ ನ ರೊಸಾರಿಯೋ ಬಳಿ ಪೊಲೀಸರ ಬಲೆಗೆ ಬಿದ್ದಿದ್ದರು. ಪಾಂಡೇಶ್ವರ ಠಾಣೆ ಪೊಲೀಸರಿಂದ ಆರೋಪಿಗಳ ವಿಚಾರಣೆ ಪೂರ್ಣಗೊಂಡ ಹಿನ್ನೆಲೆಯಲ್ಲಿ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದ್ದು, ನ್ಯಾಯಾಲಯ ನ್ಯಾಯಾಂಗ ಬಂಧನ ವಿಧಿಸಿದೆ. ಇನ್ನು ಪೊಲೀಸರ ಕೈಯಿಂದ ತಪ್ಪಿಸಿಕೊಂಡಿರುವ ಆರೋಪಿ ಬಾಗಲಕೋಟೆಯ ಅಲ್ತಾಫ್ ಹುಸೈನ್ (40)ನ ಪತ್ತೆಗೆ ತಂಡ ರಚಿಸಿ, ಕಾರ್ಯಾಚರಣೆ ನಡೆಸಲಾಗುತ್ತಿದೆ. ಆದರೆ ಆತನ ಸುಳಿವು ಇನ್ನೂ ಸಿಕ್ಕಿಲ್ಲ. ಆತನ ಊರಾದ ಬಾಗಲಕೋಟೆಗೆ ಪೊಲೀಸರ ಒಂದು ತಂಡ ಭೇಟಿ…

Read More

ಪಡುಬಿದ್ರಿ: ನಡಿಪಟ್ಟಣ ಕರಾವಳಿ ಭಾಗದಲ್ಲಿ ಮರುಕಳಿಸುತ್ತಿರುವ ಸಮುದ್ರ ಕೊರೆತದಿಂದ ಸ್ಥಳೀಯ ನಿವಾಸಿಗಳು ಸಂಕಷ್ಟ ಎದುರಿಸುತ್ತಿರುವ ಹಿನ್ನೆಲೆಯಲ್ಲಿ, ಆ ಪ್ರದೇಶಕ್ಕೆ ಶಾಶ್ವತ ರಕ್ಷಣಾ ವ್ಯವಸ್ಥೆ ಕಲ್ಪಿಸುವಂತೆ ಉಡುಪಿ ಜಿಲ್ಲಾ ಮೀನುಗಾರರ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ವಿಶ್ವಾಸ್ ವಿ. ಅಮೀನ್ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ಈ ಕುರಿತು ಆರೋಗ್ಯ ಸಚಿವ ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್ ಅವರಿಗೆ ಮನವಿ ಪತ್ರ ಸಲ್ಲಿಸಿ ತುರ್ತು ಕ್ರಮಕ್ಕೆ ಆಗ್ರಹಿಸಿದ್ದಾರೆ. ಮನವಿಯಲ್ಲಿ, ಶ್ರೀ ಪಾಂಡುರಂಗ ಕೋಟ್ಯಾನ್ ಅವರ ಮನೆಯ ಸಮೀಪದಿಂದ ಸಾಗರ ವಿದ್ಯಾ ಮಂದಿರದವರೆಗೆ ಹರಡಿರುವ ಸುಮಾರು 700 ಮೀಟರ್ ಉದ್ದದ ಕರಾವಳಿ ಪ್ರದೇಶವು ಸಮುದ್ರದ ಅಬ್ಬರಕ್ಕೆ ತುತ್ತಾಗುತ್ತಿದ್ದು, ಅಲ್ಲಿ ಶಾಶ್ವತ ಕಡಲ ತಡೆಗೋಡೆ ನಿರ್ಮಾಣ ಮಾಡುವುದು ಅತ್ಯಗತ್ಯವಾಗಿದೆ ಎಂದು ತಿಳಿಸಲಾಗಿದೆ. ಸಮುದ್ರದ ಅಲೆಗಳ ಪ್ರಭಾವದಿಂದ ಭೂ ಕುಸಿತ ಹೆಚ್ಚಾಗುತ್ತಿದ್ದು, ಹಲವು ಮನೆಗಳು ಹಾಗೂ ಸಾರ್ವಜನಿಕ ಸೌಲಭ್ಯಗಳು ಅಪಾಯದ ವಲಯಕ್ಕೆ ಸಿಲುಕಿವೆ. ಇದರ ಪರಿಣಾಮ ಮೀನುಗಾರ ಕುಟುಂಬಗಳು ಆತಂಕದಲ್ಲಿದ್ದು, ಪ್ರತಿ ಮಳೆಗಾಲದಲ್ಲೂ ಪರಿಸ್ಥಿತಿ ಮತ್ತಷ್ಟು…

Read More

ಕಲಬುರಗಿ: ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ (ಕೆಕೆಆರ್‌ಟಿಸಿ)ಗೆ ಸೇರಿದ ಬಸ್‌ವೊಂದು ಮೊಬೈಲ್ ಟಾರ್ಚ್ ಬೆಳಕಿನಲ್ಲೇ ಸಂಚರಿಸಿರುವ ಘಟನೆ ಕಲಬುರಗಿಯಲ್ಲಿ ಬೆಳಕಿಗೆ ಬಂದಿದೆ. ಬಸ್‌ನ ಹೆಡ್‌ಲೈಟ್‌ಗಳು ಕಾರ್ಯನಿರ್ವಹಿಸದ ಹಿನ್ನೆಲೆಯಲ್ಲಿ ಕಂಡಕ್ಟರ್ ಮೊಬೈಲ್‌ನ ಟಾರ್ಚ್ ಬೆಳಗಿದರೆ, ಅದರ ಸಹಾಯದಿಂದ ಚಾಲಕ ಬಸ್ ಚಲಾಯಿಸಿರುವುದು ಪ್ರಯಾಣಿಕರಲ್ಲಿ ಆತಂಕ ಮೂಡಿಸಿದೆ. ಮಾಹಿತಿಯ ಪ್ರಕಾರ, ಕಲಬುರಗಿಯಿಂದ ಚಿಂಚೋಳಿಗೆ ಸಂಚರಿಸುವ ಈ ಬಸ್‌ನ ಹೆಡ್‌ಲೈಟ್‌ಗಳು ಕಳೆದ 15 ದಿನಗಳಿಂದ ಕೆಟ್ಟು ಹೋಗಿದ್ದರೂ, ಅವುಗಳನ್ನು ದುರಸ್ತಿ ಮಾಡಿಲ್ಲ ಎನ್ನಲಾಗಿದೆ. ಇದರಿಂದ ರಾತ್ರಿ ವೇಳೆ ಮೊಬೈಲ್ ಟಾರ್ಚ್ ಬೆಳಕಿನಲ್ಲೇ ಬಸ್ ಓಡಿಸಿರುವ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಕಲಬುರಗಿ–ಚಿಂಚೋಳಿ ನಡುವಿನ ಅಂತರ ಸುಮಾರು 90 ಕಿಲೋಮೀಟರ್ ಆಗಿದ್ದು, ಇಂತಹ ಪರಿಸ್ಥಿತಿಯಲ್ಲಿ ಬಸ್ ಸಂಚರಿಸಿರುವುದು ಪ್ರಯಾಣಿಕರ ಜೀವಕ್ಕೆ ಅಪಾಯ ತಂದೊಡ್ಡಿದೆ ಎಂಬ ಆರೋಪ ಕೇಳಿಬಂದಿದೆ. ಹೆಡ್‌ಲೈಟ್ ಇಲ್ಲದೆ ರಾತ್ರಿ ವೇಳೆ ಬಸ್ ಓಡಿಸುವುದು ರಸ್ತೆ ಸುರಕ್ಷತಾ ನಿಯಮಗಳ ಉಲ್ಲಂಘನೆಯಾಗಿದ್ದು, ಯಾವುದೇ ಕ್ಷಣದಲ್ಲಿ ಅಪಘಾತ ಸಂಭವಿಸುವ ಸಾಧ್ಯತೆ ಇದೆ ಎಂದು ಸಾರ್ವಜನಿಕರು ಆತಂಕ…

Read More

ನವದೆಹಲಿ: ಬಿಹಾರ ಮೂಲದ ಯೂಟ್ಯೂಬರ್ ಹಾಗೂ ಪತ್ರಕರ್ತ ಮನೀಷ್ ಕಶ್ಯಪ್ ಅವರು ತಮ್ಮ ಹೊಸ ಟೊಯೋಟಾ ಇನ್ನೋವಾ ಹೈಕ್ರಾಸ್ ಕಾರು E20 ಪೆಟ್ರೋಲ್ ಬಳಕೆಯಿಂದ ಹಾನಿಗೊಳಗಾಗಿದೆ ಎಂದು ಮಾಡಿದ್ದ ಆರೋಪವನ್ನು ಟೊಯೋಟಾ ಕಿರ್ಲೋಸ್ಕರ್ ಮೋಟಾರ್ ಅಧಿಕೃತವಾಗಿ ತಳ್ಳಿಹಾಕಿದೆ. ಕಂಪನಿಯು ಬಿಡುಗಡೆ ಮಾಡಿದ ಸ್ಪಷ್ಟೀಕರಣದಲ್ಲಿ, ಇನ್ನೋವಾ ಹೈಕ್ರಾಸ್ ಕಾರು 20 ಶೇಕಡಾ ಎಥೆನಾಲ್ ಮಿಶ್ರಿತ E20 ಪೆಟ್ರೋಲ್‌ಗೆ ಸಂಪೂರ್ಣ ಹೊಂದಾಣಿಕೆಯಾಗಿದ್ದು, ಅದರ ಬಳಕೆಯಿಂದ ಯಾವುದೇ ಗಂಭೀರ ಎಂಜಿನ್ ಹಾನಿಯಾಗಿಲ್ಲ ಎಂದು ತಿಳಿಸಿದೆ. ಕಾರಿನ ಸಮಸ್ಯೆಗೆ E20 ಪೆಟ್ರೋಲ್ ಕಾರಣವಲ್ಲ, ಬದಲಾಗಿ ಕಲುಷಿತ ಇಂಧನ ಬಳಕೆಯೇ ಕಾರಣ ಎಂದು ಕಂಪನಿ ಸ್ಪಷ್ಟಪಡಿಸಿದೆ. ಮನೀಷ್ ಕಶ್ಯಪ್ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದ ವಿಡಿಯೊ ವೈರಲ್ ಆದ ನಂತರ ದೇಶಾದ್ಯಂತ E20 ಎಥೆನಾಲ್ ಮಿಶ್ರಿತ ಪೆಟ್ರೋಲ್ ಕುರಿತು ಹೊಸ ಚರ್ಚೆ ಆರಂಭವಾಗಿತ್ತು. ವಿಡಿಯೊದಲ್ಲಿ, ತಮ್ಮ ಹೊಸ ಟೊಯೋಟಾ ಇನ್ನೋವಾ ಹೈಕ್ರಾಸ್ ಕಾರು ಕೇವಲ 12 ಸಾವಿರ ಕಿಲೋಮೀಟರ್ ಸಂಚರಿಸಿದ ಬಳಿಕ ಎಂಜಿನ್‌ನಲ್ಲಿ ತೀವ್ರ ಕಂಪನ, ನಾಕಿಂಗ್ ಹಾಗೂ ವಾಹನ…

Read More

ಅಂಕೋಲಾ : ಆರೋಗ್ಯ ಸಚಿವ ಯು.ಟಿ. ಖಾದರ್ ಅವರ ಎಸ್ಕಾರ್ಟ್ (ಬೆಂಗಾವಲು) ವಾಹನಕ್ಕೆ ಸ್ಕೂಟಿಯೊಂದು ಮುಖಾಮುಖಿ ಢಿಕ್ಕಿಯಾದ ಪರಿಣಾಮ ಬೈಕ್ ಸವಾರ ತೀವ್ರವಾಗಿ ಗಾಯಗೊಂಡಿರುವ ಘಟನೆ ತಾಲ್ಲೂಕಿನ ರಾಷ್ಟ್ರೀಯ ಹೆದ್ದಾರಿಯ ವರದರಾಜ್ ಹೋಟೆಲ್ ಸಮೀಪ ನಡೆದಿದೆ. ಅಪಘಾತ ಸಂಭವಿಸಿದ ತಕ್ಷಣವೇ ಸಚಿವರು ವಿವಿಐಪಿ ಪ್ರೋಟೋಕಾಲ್ ಬದಿಗಿಟ್ಟು, ಸ್ವತಃ ಗಾಯಾಳುವನ್ನು ತಮ್ಮದೇ ವಾಹನದಲ್ಲಿ ಕರೆದೊಯ್ದು ಆಸ್ಪತ್ರೆಗೆ ದಾಖಲಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ. ತಾಲ್ಲೂಕಿನ ಅಲಗೇರಿ ಮೂಲದ ನಿವಾಸಿ ಸಂದೀಪ್ ನಾಯಕ್ ಗಂಭೀರವಾಗಿ ಗಾಯಗೊಂಡ ಸ್ಕೂಟಿ ಸವಾರ. ಸಚಿವ ಯು.ಟಿ. ಖಾದರ್ ಅವರು ಕಾರವಾರದಿಂದ ಉಡುಪಿ ಕಡೆಗೆ ಅಧಿಕೃತ ಪ್ರವಾಸ ನಿಮಿತ್ತ ಬೆಂಗಾವಲು ವಾಹನಗಳ ಸರಣಿಯೊಂದಿಗೆ ತೆರಳುತ್ತಿದ್ದರು. ಈ ವೇಳೆ ಅಂಕೋಲಾ ಪಟ್ಟಣದ ವರದರಾಜ್ ಹೋಟೆಲ್ ಆಸುಪಾಸಿನಲ್ಲಿ ಸಚಿವರ ಬೆಂಗಾವಲು ವಾಹನಕ್ಕೆ ಸಂದೀಪ್ ನಾಯಕ್ ಚಲಾಯಿಸುತ್ತಿದ್ದ ಸ್ಕೂಟಿ ಅನಿರೀಕ್ಷಿತವಾಗಿ ಢಿಕ್ಕಿಯಾಗಿದೆ. ಢಿಕ್ಕಿಯ ತೀವ್ರತೆಗೆ ಸವಾರ ಸಂದೀಪ್ ಹೆದ್ದಾರಿಗೆ ಬಿದ್ದು ತಲೆ ಹಾಗೂ ಕೈಕಾಲುಗಳಿಗೆ ಗಂಭೀರ ಸ್ವರೂಪದ ಗಾಯಗಳಾಗಿದ್ದವು. ತಮ್ಮ ಬೆಂಗಾವಲು ಪಡೆಗೆ ಅಪಘಾತವಾಗಿರುವುದನ್ನು ಗಮನಿಸಿದ…

Read More

ಪಣಜಿ/ಉಡುಪಿ: ಉಡುಪಿಯ ಜಲಕ್ರೀಡಾ ದೋಣಿ ಉದ್ಯಮಿ ಸಂದೀಪ್ ಸಾಲಿಯಾನ್ ಅವರ ಅನುಮಾನಾಸ್ಪದ ಸಾವಿನ ಪ್ರಕರಣಕ್ಕೆ ಸಂಬಂಧಿಸಿದ ತನಿಖೆಯಲ್ಲಿ ಗೋವಾ ಪೊಲೀಸರು ಮಹತ್ವದ ಯಶಸ್ಸು ಸಾಧಿಸಿದ್ದಾರೆ. ಗೋವಾದ ಕ್ಯಾಸಿನೋಗಳಿಗೆ ಭೇಟಿ ನೀಡುತ್ತಿದ್ದ ಉದ್ಯಮಿಗಳನ್ನು ಗುರಿಯಾಗಿಸಿಕೊಂಡು ಹನಿ ಟ್ರ್ಯಾಪ್, ದರೋಡೆ ಹಾಗೂ ಬ್ಲಾಕ್‌ಮೇಲ್ ನಡೆಸುತ್ತಿದ್ದರೆಂಬ ಆರೋಪ ಎದುರಿಸುತ್ತಿರುವ ಮಂಗಳೂರು ಮೂಲದ ಅಕ್ಷತಾ ಎಂ.ಕೆ. ಅಲಿಯಾಸ್ ರೂಪಶ್ರೀ ಸಿ. ಅವರನ್ನು ಕರ್ನಾಟಕ ಪೊಲೀಸರ ನೆರವಿನೊಂದಿಗೆ ಬೆಂಗಳೂರಿನಲ್ಲಿ ಬಂಧಿಸಲಾಗಿದೆ. ಈ ಬಂಧನದೊಂದಿಗೆ ಪ್ರಕರಣದ ಹಿಂದಿರುವ ಅಂತಾರಾಜ್ಯ ಜಾಲದ ಕುರಿತು ತನಿಖೆ ಮತ್ತಷ್ಟು ವೇಗ ಪಡೆದುಕೊಂಡಿದೆ. ಬಂಧಿತ ರೂಪಶ್ರೀ ವಿರುದ್ಧ ಹಲವು ಗಂಭೀರ ಆರೋಪಗಳು ಕೇಳಿಬಂದಿದ್ದು, ಗೋವಾ ಹಾಗೂ ಕರ್ನಾಟಕ ಪೊಲೀಸರ ಜಂಟಿ ಕಾರ್ಯಾಚರಣೆಯ ಬಳಿಕ ಆಕೆಯನ್ನು ವಶಕ್ಕೆ ಪಡೆಯಲಾಗಿದೆ. ಹಲವು ದಿನಗಳಿಂದ ಆರೋಪಿಯ ಚಲನವಲನಗಳ ಮೇಲೆ ನಿಗಾ ಇಟ್ಟಿದ್ದ ತನಿಖಾ ತಂಡ, ಖಚಿತ ಮಾಹಿತಿ ದೊರೆತ ಬಳಿಕ ಬೆಂಗಳೂರಿನಲ್ಲಿ ಕಾರ್ಯಾಚರಣೆ ನಡೆಸಿ ಬಂಧಿಸುವಲ್ಲಿ ಯಶಸ್ವಿಯಾಗಿದೆ. ನ್ಯಾಯಾಂಗ ಪ್ರಕ್ರಿಯೆ ಪೂರ್ಣಗೊಳಿಸಿದ ಬಳಿಕ ಹೆಚ್ಚಿನ ವಿಚಾರಣೆಗಾಗಿ ಆರೋಪಿಯನ್ನು ಗೋವಾಕ್ಕೆ ಕರೆದೊಯ್ಯಲಾಗಿದೆ.…

Read More

ಉಡುಪಿ: ಉಡುಪಿ ಮತ್ತು ಶಿವಮೊಗ್ಗವನ್ನು ಸಂಪರ್ಕಿಸುವ ಪ್ರಮುಖ ಮಾರ್ಗವಾದ ಆಗುಂಬೆ ಘಾಟಿಯಲ್ಲಿ ಭಾರೀ ಮಳೆಯಿಂದಾಗಿ ಭೂಕುಸಿತದ ಆತಂಕ ಹೆಚ್ಚಾಗಿದೆ. ಹೀಗಾಗಿ ಮುಂಜಾಗ್ರತಾ ಕ್ರಮವಾಗಿ ಘನ ವಾಹನಗಳ ಸಂಚಾರವನ್ನು ತಾತ್ಕಾಲಿಕವಾಗಿ ನಿಷೇಧಿಸಿ ಉಡುಪಿ ಜಿಲ್ಲಾಧಿಕಾರಿ ಸ್ವರೂಪಾ ಟಿಕೆ ಕಟ್ಟುನಿಟ್ಟಿನ ಆದೇಶ ಹೊರಡಿಸಿದ್ದಾರೆ. ರಾಷ್ಟ್ರೀಯ ಹೆದ್ದಾರಿ 169ಎ, ಅಂದರೆ ತೀರ್ಥಹಳ್ಳಿ – ಮಲ್ಪೆ ರಸ್ತೆಯ ಆಗುಂಬೆ ಘಾಟಿಯಲ್ಲಿ ಮಣ್ಣು ತೇವಗೊಂಡು ಭೂಕುಸಿತ ಸಂಭವಿಸುವ ಸಾಧ್ಯತೆ ಹಿನ್ನೆಲೆ ಕ್ರಮ ಕೈಗೊಳ್ಳಲಾಗಿದೆ. ಸೆಪ್ಟೆಂಬರ್ 30ರವರೆಗೆ ಲಘು ವಾಹನಗಳ ಸಂಚಾರಕ್ಕೆ ಮಾತ್ರ ಅವಕಾಶ ನೀಡಲಾಗಿದೆ. ಚೆಕ್‌ಪೋಸ್ಟ್‌ಗಳಲ್ಲಿ ಸಿಬ್ಬಂದಿಗಳು ವಾಹನಗಳನ್ನು ಪರಿಶೀಲಿಸಿ, ನಿಗದಿತ ಮಾನದಂಡಗಳನ್ನು ಪೂರೈಸಿದ ವಾಹನಗಳಿಗೆ ಮಾತ್ರ ಮುಂದೆ ಸಾಗಲು ಅನುಮತಿ ನೀಡುತ್ತಿದ್ದಾರೆ.

Read More

ಆಗ್ರಾ: ಚಿತ್ರಕಥೆಯನ್ನೂ ಮೀರಿಸುವಂತಹ ಭೀಕರ ಹಾಗೂ ರೋಚಕ ಕೊಲೆ ಪ್ರಕರಣವೊಂದು ಆಗ್ರಾದ ಸಿಕಂದ್ರಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬೆಳಕಿಗೆ ಬಂದಿದೆ. ಕುಡುಕ ಪತಿಯ ಕಾಟಕ್ಕೆ ಬೇಸತ್ತ ಮಹಿಳೆಯೊಬ್ಬಳು, ಆತನಿಗೆ ಖೀರ್‌ನಲ್ಲಿ ನಿದ್ದೆ ಮಾತ್ರೆ ಬೆರೆಸಿ ಕೊಲೆ ಮಾಡಿದ್ದಾಳೆ. ಅಷ್ಟೇ ಅಲ್ಲದೆ, ಶವವನ್ನು ಮನೆಯ ಬಾತ್‌ರೂಮ್‌ನಲ್ಲೇ ಹೂತುಹಾಕಿ, ಯಾರೂ ಅನುಮಾನಿಸದಂತೆ ದಿನನಿತ್ಯ ಅದೇ ಬಾತ್‌ರೂಮ್‌ನಲ್ಲಿ ಸ್ನಾನ ಮಾಡುತ್ತಾ 45 ದಿನಗಳ ಕಾಲ ಹೈಡ್ರಾಮಾ ನಡೆಸಿದ್ದಾಳೆ ದಹತೋರಾ ರೇಣುಕಾಧಾಮ್ ಕಾಲೋನಿಯಲ್ಲಿ ನಡೆದ ಈ ಘಟನೆ ಈಗ ಇಡೀ ದೇಶವನ್ನೇ ಬೆಚ್ಚಿಬೀಳಿಸಿದೆ. ಸುರೇಂದ್ರ ಕುಮಾರ್ ಶರ್ಮಾ (46) ಕೊಲೆಯಾದ ದುರ್ದೈವಿ. ಈತನ ಪತ್ನಿ ರೂಬಿಯೇ ಕೊಲೆಗಡುಕಿ. ಪೊಲೀಸ್ ವಿಚಾರಣೆ ವೇಳೆ ರೂಬಿ ತನ್ನ ಕೃತ್ಯವನ್ನು ಒಪ್ಪಿಕೊಂಡಿದ್ದಾಳೆ. ಪತಿ ಸುರೇಂದ್ರ ತೀವ್ರ ಮದ್ಯದ ಚಟಕ್ಕೆ ಬಿದ್ದಿದ್ದ, ಜೊತೆಗೆ ನಶೆಗಾಗಿ ನಿದ್ದೆ ಮಾತ್ರೆಗಳನ್ನು ಬಳಸುತ್ತಿದ್ದ. ಇದರಿಂದ ಸಂಸಾರ ನರಕವಾಗಿತ್ತು. ಇದ್ರಿಂದ ಮುಕ್ತಿ ಪಡೆಯಲು ರೂಬಿ ‘ಕ್ರೈಮ್ ಪೆಟ್ರೋಲ್’ ಹಾಗೂ ‘ದೃಶ್ಯಂ’ ಸಿನಿಮಾ ನೋಡಿ ಸ್ಕೆಚ್ ಹಾಕಿದ್ದಳು. ಮೇ 18…

Read More

ಟೆಹ್ರಾನ್: ಇರಾನ್‌ನ ಸರ್ವೋಚ್ಚ ನಾಯಕ ಅಲಿ ಖಮೇನಿ ಅಂತ್ಯಕ್ರಿಯೆ ಸಮಾರಂಭಗಳು ಶನಿವಾರ ಟೆಹ್ರಾನ್‌ನಲ್ಲಿ ಅಧಿಕೃತವಾಗಿ ಪ್ರಾರಂಭವಾಗಿವೆ. ಖಮೇನಿ ಶವಪೆಟ್ಟಿಗೆ ಪಕ್ಕದಲ್ಲೇ ಮತ್ತೊಂದು ಪುಟ್ಟ ಶವಪೆಟ್ಟಿಗೆ ಇದ್ದು, ಅದು ಸರ್ವೋಚ್ಚ ನಾಯಕನ 14 ತಿಂಗಳ ಮೊಮ್ಮಗಳದ್ದು ಎಂಬುದು ತಿಳಿದು ಬಂದಿದೆ. ಫೆಬ್ರವರಿ 28 ರಂದು ಇರಾನ್ ಮೇಲೆ ಅಮೆರಿಕ ಮತ್ತು ಇಸ್ರೇಲ್‌ ನಡೆಸಿದ ದಾಳಿಯಲ್ಲಿ ಖಮೇನಿ ಹತ್ಯೆಗೀಡಾಗಿದ್ದರು. 86 ವರ್ಷದ ನಾಯಕನಿಗೆ ಗೌರವ ಸಲ್ಲಿಸಲು ಸಾವಿರಾರು ಇರಾನಿಯನ್ನರು ಸೇರಿದ್ದರು. ಖಮೇನಿ ಶವಪೆಟ್ಟಿಗೆಯನ್ನು ಸಂಕೀರ್ಣಕ್ಕೆ ಕೊಂಡೊಯ್ಯಲಾಯಿತು. ಇಸ್ಲಾಮಿಕ್ ಗಣರಾಜ್ಯದ ಧ್ವಜವನ್ನು ಹೊದಿಸಿ, ಅದರ ಮೇಲೆ ಕಪ್ಪು ಪೇಟವನ್ನು ಇರಿಸಲಾಯಿತು. ಮೃತ ಸಂಬಂಧಿಕರ ಶವಗಳನ್ನು ಖಮೇನಿ ಪಕ್ಕದಲ್ಲೇ ಇರಿಸಲಾಯಿತು. ಅವುಗಳ ಪೈಕಿ 14 ತಿಂಗಳ ಮೊಮ್ಮಗಳ ಸಣ್ಣ ಶವಪೆಟ್ಟಿಗೆಯೂ ಇದೆ. ಇರಾನ್ ಮತ್ತು ಇರಾಕ್‌ನಾದ್ಯಂತ ಆರು ದಿನಗಳ ಸಾರ್ವಜನಿಕ ಅಂತ್ಯಕ್ರಿಯೆ ಸಮಾರಂಭಗಳಿಗಾಗಿ ಖಮೇನಿಯವರ ಪಾರ್ಥಿವ ಶರೀರವನ್ನು ಶುಕ್ರವಾರ ಟೆಹ್ರಾನ್‌ಗೆ ತರಲಾಯಿತು. ಅವರ ಪಾರ್ಥಿವ ಶರೀರವನ್ನು ಇರಾನ್ ಮತ್ತು ನೆರೆಯ ಇರಾಕ್‌ನ ನಗರಗಳಲ್ಲಿ ಸಾಗಿಸಲಾಗುವುದು. ಇಸ್ಲಾಮಿಕ್ ಗಣರಾಜ್ಯದ…

Read More