Close Menu
    What's Hot

    ಟಾಟಾ ಕುಟುಂಬದಲ್ಲಿ ಆಸ್ತಿ ಮತ್ತು ಅಧಿಕಾರದ ಸಂಘರ್ಷ; ನೋಯೆಲ್ ಟಾಟಾ ವಿರುದ್ಧ ಜಿಮ್ಮಿ ಟಾಟಾ ಅಸಮಾಧಾನ

    November 17, 2026

    ಕೋಟದಲ್ಲಿ ಮತ್ತೆ ಭೀಕರ ಅಪಘಾತ; ಮೀನು ಸಾಗಾಟದ ವಾಹನಕ್ಕೆ ಸರಕು ತುಂಬಿದ ಲಾರಿ ಡಿಕ್ಕಿ,ಎರಡು ವಾಹನಗಳು ನಜ್ಜುಗುಜ್ಜು

    November 17, 2026

    ಟಿವಿಎಸ್ ಕುಟುಂಬದಲ್ಲಿ ಆಸ್ತಿ ಹಂಚಿಕೆ ಕಿತ್ತಾಟ; ಸಮಾನ ಪಾಲಿಗಾಗಿ ತಂದೆಗೆ ಕಾನೂನು ನೋಟಿಸ್ ನೀಡಿದ ಲಕ್ಷ್ಮಿ ವೇಣು

    November 17, 2026
    Facebook X (Twitter) Instagram
    Facebook X (Twitter) Instagram
    Nirantara News | Kannada News | Karnataka Latest UpdatesNirantara News | Kannada News | Karnataka Latest Updates
    Subscribe
    • Homepage
    • ಕರಾವಳಿ ಸುದ್ದಿ
    • ಅಪರಾಧ
    • ಕರ್ನಾಟಕ
    • ರಾಷ್ಟ್ರೀಯ
    • ಅಂತರಾಷ್ಟ್ರೀಯ
    • ಸ್ಥಿರಾಸ್ತಿ ಮತ್ತು ಮೂಲಸೌಕರ್ಯ
    • ಆರೋಗ್ಯ


    Nirantara News | Kannada News | Karnataka Latest UpdatesNirantara News | Kannada News | Karnataka Latest Updates
    Home»ಅಪರಾಧ»ಸ್ಟಿಂಗ್ ಆಪರೇಷನ್ ಪ್ರಕರಣಕ್ಕೆ ಸಾಕ್ಷ್ಯ ಸಂಗ್ರಹವೇ ಸವಾಲು; ಮೊಬೈಲ್ ನೀಡದೆ ಕೃಪಾ ಆಳ್ವ ಕಾಲಹರಣ
    ಅಪರಾಧ

    ಸ್ಟಿಂಗ್ ಆಪರೇಷನ್ ಪ್ರಕರಣಕ್ಕೆ ಸಾಕ್ಷ್ಯ ಸಂಗ್ರಹವೇ ಸವಾಲು; ಮೊಬೈಲ್ ನೀಡದೆ ಕೃಪಾ ಆಳ್ವ ಕಾಲಹರಣ

    adminBy adminNovember 17, 2026No Comments1 Min Read

    ಬೆಂಗಳೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ  ಅವರ ವಿರುದ್ಧದ ಸ್ಟಿಂಗ್ ಆಪರೇಷನ್ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಚುರುಕುಗೊಳಿಸಿರುವ ಪೊಲೀಸರಿಗೆ ಇದೀಗ ಪ್ರಮುಖ ಸಾಕ್ಷ್ಯ ಸಂಗ್ರಹವೇ ದೊಡ್ಡ ಸವಾಲಾಗಿ ಪರಿಣಮಿಸಿದೆ. ಪ್ರಕರಣದ ಪ್ರಮುಖ ಆರೋಪಿ ಕೃಪಾ ಆಳ್ವ ಅವರು ವಿಚಾರಣೆಗೆ ಸಹಕರಿಸದೆ, ಸ್ಟಿಂಗ್‌ಗೆ ಬಳಸಲಾದ ಮೊಬೈಲ್ ಫೋನ್ ನೀಡಲು ಹಿಂದೇಟು ಹಾಕುತ್ತಿದ್ದಾರೆ ಎಂದು ತಿಳಿದುಬಂದಿದೆ.

    ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಈಗಾಗಲೇ ಕೃಪಾ ಆಳ್ವ ಅವರನ್ನು ಮೂರು ಬಾರಿ ವಿಚಾರಣೆಗೆ ಒಳಪಡಿಸಿದ್ದಾರೆ. ಆದರೆ, ವಿಚಾರಣೆಯ ವೇಳೆ ಯಾವುದೇ ಸ್ಪಷ್ಟ ಮಾಹಿತಿ ಸಿಗದ ಕಾರಣ ತನಿಖೆಗೆ ಹಿನ್ನಡೆಯಾಗಿದೆ. ವಿಡಿಯೋ ಚಿತ್ರೀಕರಣಕ್ಕೆ ಬಳಸಲಾದ ಮೂಲ ಮೊಬೈಲ್ ಫೋನ್ ಹಾಗೂ ಪ್ರಸ್ತುತ ಕೃಪಾ ಆಳ್ವ ಅವರು ಬಳಸುತ್ತಿರುವ ಮೊಬೈಲ್ ಅನ್ನು ತನಿಖೆಗಾಗಿ ಹಸ್ತಾಂತರಿಸುವಂತೆ ಪೊಲೀಸರು ಕಟ್ಟುನಿಟ್ಟಿನ ತಾಕೀತು ಮಾಡಿದ್ದಾರೆ.

    ವಶಪಡಿಸಿಕೊಳ್ಳಲಿರುವ ಮೊಬೈಲ್‌ಗಳನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ (FSL) ಕಳುಹಿಸಿ, ವಿಡಿಯೋದ ಅಸಲಿಯತ್ತು ಮತ್ತು ಡಿಲೀಟ್ ಆಗಿರಬಹುದಾದ ದತ್ತಾಂಶಗಳನ್ನು ಪತ್ತೆಹಚ್ಚಲು ಪೊಲೀಸರು ಸಿದ್ಧತೆ ನಡೆಸಿದ್ದಾರೆ. ಆದರೆ, ಮೊಬೈಲ್ ನೀಡಲು ನಿರಾಕರಿಸುತ್ತಿರುವ ಕೃಪಾ ಆಳ್ವ, ಬುಧವಾರದಂದು ಫೋನ್ ತಂದು ಕೊಡುವುದಾಗಿ ಪೊಲೀಸರ ಮುಂದೆ ಸಬೂಬು ಹೇಳಿ ಕಾಲಹರಣ ಮಾಡುತ್ತಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

    ಕೃಪಾ ಆಳ್ವ ವಾದವೇನು?
    ಪೊಲೀಸರ ಪ್ರಶ್ನೆಗಳಿಗೆ ಉತ್ತರಿಸಿರುವ ಕೃಪಾ ಆಳ್ವ, ತಾವು ಯಾವುದೇ ರೀತಿಯ ಸ್ಟಿಂಗ್ ಆಪರೇಷನ್ ಮಾಡಿಸಿಲ್ಲ ಎಂದು ತಮ್ಮ ಕೃತ್ಯವನ್ನು ಸಮರ್ಥಿಸಿಕೊಂಡಿದ್ದಾರೆ. “ಘಟನೆ ನಡೆದ ದಿನ ನಾನು ಆ ಸ್ಥಳದಲ್ಲಿದ್ದಿದ್ದು ನಿಜ. ಆದರೆ, ಅಲ್ಲಿ ಯಾರೋ ವಿಡಿಯೋ ಮಾಡಿರುವುದು ನನಗೆ ಗೊತ್ತೇ ಇರಲಿಲ್ಲ” ಎಂದು ವಿಚಾರಣೆಯ ವೇಳೆ ವಾದ ಮಂಡಿಸಿದ್ದಾರೆ. ಅಲ್ಲದೆ “ಆ ಸಂದರ್ಭದಲ್ಲಿ ಬಳಸುತ್ತಿದ್ದ ಮೊಬೈಲ್ ಫೋನ್ ಅನ್ನು ಈಗಾಗಲೇ ಬದಲಾಯಿಸಲಾಗಿದ್ದು, ಪ್ರಸ್ತುತ ನಾನು ಆ ಫೋನ್ ಬಳಸುತ್ತಿಲ್ಲ” ಎಂದು ಹೇಳಿಕೆ ನೀಡಿದ್ದಾರೆ.

    ಸದ್ಯ ಬುಧವಾರ ಕೃಪಾ ಆಳ್ವ ಅವರು ಮೊಬೈಲ್ ಹಸ್ತಾಂತರಿಸುತ್ತಾರೆಯೇ ಅಥವಾ ಪೊಲೀಸರು ಕಾನೂನು ಕ್ರಮದ ಮೂಲಕ ಮೊಬೈಲ್ ವಶಪಡಿಸಿಕೊಳ್ಳುತ್ತಾರೆಯೇ ಎಂಬುದನ್ನು ಕಾದುನೋಡಬೇಕಿದೆ.




    #crime #dakshinakannada #karnataka
    Previous Articleಸುರತ್ಕಲ್‌: ಐದು ತಂಡಗಳಿಂದ ಏಕಕಾಲಕ್ಕೆ ದಿಢೀರ್ ದಾಳಿ; ಮೆಕ್‌ಡೊನಾಲ್ಡ್ಸ್, ಬ್ಲಿಂಕಿಟ್ ಸೇರಿ ವಿವಿಧ ಘಟಕಗಳ ಮಳಿಗೆಗಳಲ್ಲಿ ಆಹಾರ ಸುರಕ್ಷತಾ ಇಲಾಖೆ ತಪಾಸಣೆ
    Next Article ಪುತ್ತೂರಿನಲ್ಲಿ ಪೊಲೀಸರ ಸೂಚನೆಗೂ ನಿಲ್ಲದ ವಾಹನ; ಬೈಕ್‌ನಲ್ಲೇ ಬೆನ್ನಟ್ಟಿ ಅಕ್ರಮ ಜಾನುವಾರು ಸಾಗಾಟದ ಗೂಡ್ಸ್ ವಾಹನ ವಶಕ್ಕೆ

    Related Posts

    ಕೋಟದಲ್ಲಿ ಮತ್ತೆ ಭೀಕರ ಅಪಘಾತ; ಮೀನು ಸಾಗಾಟದ ವಾಹನಕ್ಕೆ ಸರಕು ತುಂಬಿದ ಲಾರಿ ಡಿಕ್ಕಿ,ಎರಡು ವಾಹನಗಳು ನಜ್ಜುಗುಜ್ಜು

    November 17, 2026

    ಪ್ರಾಜೆಕ್ಟ್ ಕೆಲಸಕ್ಕೆ ತೆರಳುತ್ತಿದ್ದ ವಿದ್ಯಾರ್ಥಿಗಳ ಕಾರು ಮರಕ್ಕೆ ಡಿಕ್ಕಿ; ಇಬ್ಬರು ಕಾಲೇಜು ವಿದ್ಯಾರ್ಥಿನಿಯರ ದುರ್ಮರಣ, ನಾಲ್ವರಿಗೆ ಗಾಯ

    November 17, 2026

    ಮೊಟ್ಟೆ ಸಾಗಾಟದ ವಾಹನದಲ್ಲಿ ದನಗಳ ಅಕ್ರಮ ಸಾಗಾಟ; ಮಂಗಳೂರಿನಲ್ಲಿ ಇಬ್ಬರು ಆರೋಪಿಗಳ ಬಂಧನ

    November 17, 2026
    Add A Comment
    Leave A Reply Cancel Reply

    ಪ್ರಮುಖ ಸುದ್ದಿ

    ಟಾಟಾ ಕುಟುಂಬದಲ್ಲಿ ಆಸ್ತಿ ಮತ್ತು ಅಧಿಕಾರದ ಸಂಘರ್ಷ; ನೋಯೆಲ್ ಟಾಟಾ ವಿರುದ್ಧ ಜಿಮ್ಮಿ ಟಾಟಾ ಅಸಮಾಧಾನ

    November 17, 2026

    ಕೋಟದಲ್ಲಿ ಮತ್ತೆ ಭೀಕರ ಅಪಘಾತ; ಮೀನು ಸಾಗಾಟದ ವಾಹನಕ್ಕೆ ಸರಕು ತುಂಬಿದ ಲಾರಿ ಡಿಕ್ಕಿ,ಎರಡು ವಾಹನಗಳು ನಜ್ಜುಗುಜ್ಜು

    November 17, 2026

    ಟಿವಿಎಸ್ ಕುಟುಂಬದಲ್ಲಿ ಆಸ್ತಿ ಹಂಚಿಕೆ ಕಿತ್ತಾಟ; ಸಮಾನ ಪಾಲಿಗಾಗಿ ತಂದೆಗೆ ಕಾನೂನು ನೋಟಿಸ್ ನೀಡಿದ ಲಕ್ಷ್ಮಿ ವೇಣು

    November 17, 2026

    ಪ್ರಾಜೆಕ್ಟ್ ಕೆಲಸಕ್ಕೆ ತೆರಳುತ್ತಿದ್ದ ವಿದ್ಯಾರ್ಥಿಗಳ ಕಾರು ಮರಕ್ಕೆ ಡಿಕ್ಕಿ; ಇಬ್ಬರು ಕಾಲೇಜು ವಿದ್ಯಾರ್ಥಿನಿಯರ ದುರ್ಮರಣ, ನಾಲ್ವರಿಗೆ ಗಾಯ

    November 17, 2026
    Advertisement






    Nirantara News is powered by a team of experienced media professionals with decades of expertise in television journalism. Our mission is to be the voice of the people by delivering truthful, unbiased, and responsible news. We cover local, state, national, and international news, along with the latest updates on health, entertainment, real estate, business, technology, and more.

    Backed by experienced reporters and a strong legal team, we are committed to providing accurate news and honest reviews.

    Subscribe to Nirantara News and support trusted journalism.

    Top Insights

    ಪ್ರಾಜೆಕ್ಟ್ ಕೆಲಸಕ್ಕೆ ತೆರಳುತ್ತಿದ್ದ ವಿದ್ಯಾರ್ಥಿಗಳ ಕಾರು ಮರಕ್ಕೆ ಡಿಕ್ಕಿ; ಇಬ್ಬರು ಕಾಲೇಜು ವಿದ್ಯಾರ್ಥಿನಿಯರ ದುರ್ಮರಣ, ನಾಲ್ವರಿಗೆ ಗಾಯ

    November 17, 2026

    ಸ್ಟಿಂಗ್ ಆಪರೇಷನ್ ಪ್ರಕರಣಕ್ಕೆ ಸಾಕ್ಷ್ಯ ಸಂಗ್ರಹವೇ ಸವಾಲು; ಮೊಬೈಲ್ ನೀಡದೆ ಕೃಪಾ ಆಳ್ವ ಕಾಲಹರಣ

    November 17, 2026
    Social Follow
    • Facebook
    • Instagram
    © 2026 Nirantara News. Designed by Blueline Computers.
    • Home
    • ಕರಾವಳಿ ಸುದ್ದಿ
    • ಅಪರಾಧ
    • ಕರ್ನಾಟಕ
    • ರಾಷ್ಟ್ರೀಯ
    • ಅಂತರಾಷ್ಟ್ರೀಯ
    • ಸ್ಥಿರಾಸ್ತಿ ಮತ್ತು ಮೂಲಸೌಕರ್ಯ
    • ಆರೋಗ್ಯ

    Type above and press Enter to search. Press Esc to cancel.