Close Menu
    What's Hot

    ಟಾಟಾ ಕುಟುಂಬದಲ್ಲಿ ಆಸ್ತಿ ಮತ್ತು ಅಧಿಕಾರದ ಸಂಘರ್ಷ; ನೋಯೆಲ್ ಟಾಟಾ ವಿರುದ್ಧ ಜಿಮ್ಮಿ ಟಾಟಾ ಅಸಮಾಧಾನ

    November 17, 2026

    ಕೋಟದಲ್ಲಿ ಮತ್ತೆ ಭೀಕರ ಅಪಘಾತ; ಮೀನು ಸಾಗಾಟದ ವಾಹನಕ್ಕೆ ಸರಕು ತುಂಬಿದ ಲಾರಿ ಡಿಕ್ಕಿ,ಎರಡು ವಾಹನಗಳು ನಜ್ಜುಗುಜ್ಜು

    November 17, 2026

    ಟಿವಿಎಸ್ ಕುಟುಂಬದಲ್ಲಿ ಆಸ್ತಿ ಹಂಚಿಕೆ ಕಿತ್ತಾಟ; ಸಮಾನ ಪಾಲಿಗಾಗಿ ತಂದೆಗೆ ಕಾನೂನು ನೋಟಿಸ್ ನೀಡಿದ ಲಕ್ಷ್ಮಿ ವೇಣು

    November 17, 2026
    Facebook X (Twitter) Instagram
    Facebook X (Twitter) Instagram
    Nirantara News | Kannada News | Karnataka Latest UpdatesNirantara News | Kannada News | Karnataka Latest Updates
    Subscribe
    • Homepage
    • ಕರಾವಳಿ ಸುದ್ದಿ
    • ಅಪರಾಧ
    • ಕರ್ನಾಟಕ
    • ರಾಷ್ಟ್ರೀಯ
    • ಅಂತರಾಷ್ಟ್ರೀಯ
    • ಸ್ಥಿರಾಸ್ತಿ ಮತ್ತು ಮೂಲಸೌಕರ್ಯ
    • ಆರೋಗ್ಯ


    Nirantara News | Kannada News | Karnataka Latest UpdatesNirantara News | Kannada News | Karnataka Latest Updates
    Home»ಅಪರಾಧ»ಪುತ್ತೂರಿನಲ್ಲಿ ಪೊಲೀಸರ ಸೂಚನೆಗೂ ನಿಲ್ಲದ ವಾಹನ; ಬೈಕ್‌ನಲ್ಲೇ ಬೆನ್ನಟ್ಟಿ ಅಕ್ರಮ ಜಾನುವಾರು ಸಾಗಾಟದ ಗೂಡ್ಸ್ ವಾಹನ ವಶಕ್ಕೆ
    ಅಪರಾಧ

    ಪುತ್ತೂರಿನಲ್ಲಿ ಪೊಲೀಸರ ಸೂಚನೆಗೂ ನಿಲ್ಲದ ವಾಹನ; ಬೈಕ್‌ನಲ್ಲೇ ಬೆನ್ನಟ್ಟಿ ಅಕ್ರಮ ಜಾನುವಾರು ಸಾಗಾಟದ ಗೂಡ್ಸ್ ವಾಹನ ವಶಕ್ಕೆ

    adminBy adminNovember 17, 2026No Comments2 Mins Read

    ಪುತ್ತೂರು: ಯಾವುದೇ ಪರವಾನಗಿ ಇಲ್ಲದೆ ಹಿಂಸಾತ್ಮಕ ರೀತಿಯಲ್ಲಿ ಜಾನುವಾರುಗಳನ್ನು ಸಾಗಾಟ ಮಾಡುತ್ತಿದ್ದ ಗೂಡ್ಸ್ ವಾಹನವನ್ನು ಪೊಲೀಸರು ಬೈಕ್‌ನಲ್ಲಿ ಬೆನ್ನಟ್ಟಿ ತಡೆದಿರುವ ಘಟನೆ ಪುತ್ತೂರು ತಾಲೂಕಿನ ನೆಟ್ಟಣಿಗೆ ಮುಡ್ನೂರು ಗ್ರಾಮದ ನೂಜಿಬೈಲು ಎಂಬಲ್ಲಿ ಭಾನುವಾರ (ನ.15) ರಾತ್ರಿ ನಡೆದಿದೆ. ಘಟನೆಗೆ ಸಂಬಂಧಿಸಿದಂತೆ ತಮಿಳುನಾಡಿನ ಸೇಲಂ ಜಿಲ್ಲೆಯ ಒಮಲೂರು ತಾಲೂಕಿನ ಸಿಕ್ಕಂಪಟ್ಟಿ ಗ್ರಾಮದ ನಿವಾಸಿ ದೂರಿಯಾರಸನ್ (21) ಎಂಬಾತನನ್ನು ಪುತ್ತೂರು ಗ್ರಾಮಾಂತರ ಪೊಲೀಸರು ವಶಕ್ಕೆ ಪಡೆದಿದ್ದಾರೆ.

    ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯ ಹೆಡ್ ಕಾನ್‌ಸ್ಟೆಬಲ್ ನಾಗರಾಜ್ ಕೆ. ಅವರು ಭಾನುವಾರ ರಾತ್ರಿ ಈಶ್ವರಮಂಗಲ ಹೊರಠಾಣೆಯಲ್ಲಿ ಕರ್ತವ್ಯದಲ್ಲಿದ್ದರು. ಈ ವೇಳೆ ರಾತ್ರಿ 8.30ರ ಸುಮಾರಿಗೆ ಕಾವು ಕಡೆಯಿಂದ ಈಶ್ವರಮಂಗಲ ಕಡೆಗೆ ತಮಿಳುನಾಡು ನೋಂದಣಿಯ ವಾಹನದಲ್ಲಿ ಜಾನುವಾರುಗಳನ್ನು ಅಕ್ರಮವಾಗಿ ಸಾಗಾಟ ಮಾಡಲಾಗುತ್ತಿದೆ ಎಂಬ ಖಚಿತ ಮಾಹಿತಿ ಲಭ್ಯವಾಗಿದೆ. ಅದರಂತೆ ರಾತ್ರಿ 9.15ರ ಸುಮಾರಿಗೆ ನೂಜಿಬೈಲು ಬಳಿ ಎದುರಿನಿಂದ ಬರುತ್ತಿದ್ದ ಗೂಡ್ಸ್ ವಾಹನವನ್ನು (ಅಶೋಕ್ ಲೇಲ್ಯಾಂಡ್ ದೋಸ್ತ್) ನಿಲ್ಲಿಸುವಂತೆ ಪೊಲೀಸರು ಸೂಚನೆ ನೀಡಿದ್ದಾರೆ. ಆದರೆ ಚಾಲಕ ವಾಹನ ನಿಲ್ಲಿಸದೆ ಅತಿ ವೇಗವಾಗಿ ಚಲಾಯಿಸಿಕೊಂಡು ಪರಾರಿಯಾಗಲು ಯತ್ನಿಸಿದ್ದಾನೆ. ತಕ್ಷಣವೇ ಕಾರ್ಯಪ್ರವೃತ್ತರಾದ ಹೆಡ್ ಕಾನ್‌ಸ್ಟೆಬಲ್ ನಾಗರಾಜ್, ತಮ್ಮ ದ್ವಿಚಕ್ರ ವಾಹನದಲ್ಲಿ ಗೂಡ್ಸ್ ವಾಹನವನ್ನು ಬೆನ್ನಟ್ಟಿ ತಡೆದು ನಿಲ್ಲಿಸಿದ್ದಾರೆ.

    ವಾಹನವನ್ನು ಪರಿಶೀಲಿಸಿದಾಗ ಹಿಂಬದಿಯ ಬಾಡಿಯಲ್ಲಿ ಕಪ್ಪು–ಬಿಳಿ ಬಣ್ಣದ ಮೂರು ದೊಡ್ಡ ದನಗಳನ್ನು ಕುತ್ತಿಗೆಗೆ ಹಗ್ಗದಿಂದ ಬಿಗಿಯಾಗಿ ಕಟ್ಟಿ, ಹಗ್ಗದ ಇನ್ನೊಂದು ತುದಿಯನ್ನು ವಾಹನದ ಕಬ್ಬಿಣದ ರಾಡಿಗೆ ಕಟ್ಟಿ ಅತ್ಯಂತ ಹಿಂಸಾತ್ಮಕವಾಗಿ ಸಾಗಿಸುತ್ತಿರುವುದು ಕಂಡುಬಂದಿದೆ. ಜಾನುವಾರು ಸಾಗಾಟಕ್ಕೆ ಸಂಬಂಧಿಸಿದಂತೆ ಯಾವುದೇ ಪರವಾನಗಿ ಅಥವಾ ಪಶುವೈದ್ಯರ ದೃಢೀಕರಣ ಪತ್ರ ಚಾಲಕನ ಬಳಿ ಇರಲಿಲ್ಲ. ವಿಚಾರಣೆ ವೇಳೆ ಚಾಲಕ, ‘‘ಕಾಸರಗೋಡು ವಿಲೇಜ್ ಡೈರಿ ಫಾರ್ಮ್‌ನ ಅಹಮದ್ ಆಸಿದ್ ಎಂಬುವವರು ಚಿಂತಾಮಣಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯಿಂದ (APMC) ಈ ದನಗಳನ್ನು ಖರೀದಿಸಿ ನನ್ನ ವಾಹನದಲ್ಲಿ ಲೋಡ್ ಮಾಡಿಸಿದ್ದರು. ಕಾಸರಗೋಡಿನ ಡೈರಿ ಫಾರ್ಮ್‌ಗೆ ತಲುಪಿಸುವಂತೆ ಹೇಳಿ ಅವರು ಮುಂದೆ ತಮ್ಮ ವಾಹನದಲ್ಲಿ ತೆರಳಿದ್ದಾರೆ’’ ಎಂದು ತಿಳಿಸಿದ್ದಾನೆ.

    ಕಾರ್ಯಾಚರಣೆಯಲ್ಲಿ ₹4.50 ಲಕ್ಷ ಮೌಲ್ಯದ ಮೂರು ಜಾನುವಾರುಗಳು ಹಾಗೂ ₹5 ಲಕ್ಷ ಮೌಲ್ಯದ ಗೂಡ್ಸ್ ವಾಹನವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಈ ಕುರಿತು ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.




    #crime #dakshinakannada
    Previous Articleಸ್ಟಿಂಗ್ ಆಪರೇಷನ್ ಪ್ರಕರಣಕ್ಕೆ ಸಾಕ್ಷ್ಯ ಸಂಗ್ರಹವೇ ಸವಾಲು; ಮೊಬೈಲ್ ನೀಡದೆ ಕೃಪಾ ಆಳ್ವ ಕಾಲಹರಣ
    Next Article ದೆಹಲಿಯಲ್ಲಿ ಕಟ್ಟಡ ಕುಸಿತದ ದುರಂತ; ಮೂರು ವರ್ಷದ ಮಗು ಸೇರಿ ಇಬ್ಬರು ದುರ್ಮರಣ, ಆರು ಮಂದಿ ಅವಶೇಷಗಳಡಿ ಸಿಲುಕಿರುವ ಶಂಕೆ

    Related Posts

    ಕೋಟದಲ್ಲಿ ಮತ್ತೆ ಭೀಕರ ಅಪಘಾತ; ಮೀನು ಸಾಗಾಟದ ವಾಹನಕ್ಕೆ ಸರಕು ತುಂಬಿದ ಲಾರಿ ಡಿಕ್ಕಿ,ಎರಡು ವಾಹನಗಳು ನಜ್ಜುಗುಜ್ಜು

    November 17, 2026

    ಮೊಟ್ಟೆ ಸಾಗಾಟದ ವಾಹನದಲ್ಲಿ ದನಗಳ ಅಕ್ರಮ ಸಾಗಾಟ; ಮಂಗಳೂರಿನಲ್ಲಿ ಇಬ್ಬರು ಆರೋಪಿಗಳ ಬಂಧನ

    November 17, 2026

    ಸೌಜನ್ಯ ಕೊಲೆ ಪ್ರಕರಣಕ್ಕೆ ಮಹತ್ವದ ತಿರುವು; ಶವ ಪತ್ತೆಯಾದ ಸ್ಥಳ ಪರಿಶೀಲನೆಗೆ ಮೆಡಿಕಲ್ ಬೋರ್ಡ್ ಸಿದ್ಧತೆ

    November 17, 2026
    Add A Comment
    Leave A Reply Cancel Reply

    ಪ್ರಮುಖ ಸುದ್ದಿ

    ಟಾಟಾ ಕುಟುಂಬದಲ್ಲಿ ಆಸ್ತಿ ಮತ್ತು ಅಧಿಕಾರದ ಸಂಘರ್ಷ; ನೋಯೆಲ್ ಟಾಟಾ ವಿರುದ್ಧ ಜಿಮ್ಮಿ ಟಾಟಾ ಅಸಮಾಧಾನ

    November 17, 2026

    ಕೋಟದಲ್ಲಿ ಮತ್ತೆ ಭೀಕರ ಅಪಘಾತ; ಮೀನು ಸಾಗಾಟದ ವಾಹನಕ್ಕೆ ಸರಕು ತುಂಬಿದ ಲಾರಿ ಡಿಕ್ಕಿ,ಎರಡು ವಾಹನಗಳು ನಜ್ಜುಗುಜ್ಜು

    November 17, 2026

    ಟಿವಿಎಸ್ ಕುಟುಂಬದಲ್ಲಿ ಆಸ್ತಿ ಹಂಚಿಕೆ ಕಿತ್ತಾಟ; ಸಮಾನ ಪಾಲಿಗಾಗಿ ತಂದೆಗೆ ಕಾನೂನು ನೋಟಿಸ್ ನೀಡಿದ ಲಕ್ಷ್ಮಿ ವೇಣು

    November 17, 2026

    ಪ್ರಾಜೆಕ್ಟ್ ಕೆಲಸಕ್ಕೆ ತೆರಳುತ್ತಿದ್ದ ವಿದ್ಯಾರ್ಥಿಗಳ ಕಾರು ಮರಕ್ಕೆ ಡಿಕ್ಕಿ; ಇಬ್ಬರು ಕಾಲೇಜು ವಿದ್ಯಾರ್ಥಿನಿಯರ ದುರ್ಮರಣ, ನಾಲ್ವರಿಗೆ ಗಾಯ

    November 17, 2026
    Advertisement






    Nirantara News is powered by a team of experienced media professionals with decades of expertise in television journalism. Our mission is to be the voice of the people by delivering truthful, unbiased, and responsible news. We cover local, state, national, and international news, along with the latest updates on health, entertainment, real estate, business, technology, and more.

    Backed by experienced reporters and a strong legal team, we are committed to providing accurate news and honest reviews.

    Subscribe to Nirantara News and support trusted journalism.

    Top Insights

    ಪ್ರಾಜೆಕ್ಟ್ ಕೆಲಸಕ್ಕೆ ತೆರಳುತ್ತಿದ್ದ ವಿದ್ಯಾರ್ಥಿಗಳ ಕಾರು ಮರಕ್ಕೆ ಡಿಕ್ಕಿ; ಇಬ್ಬರು ಕಾಲೇಜು ವಿದ್ಯಾರ್ಥಿನಿಯರ ದುರ್ಮರಣ, ನಾಲ್ವರಿಗೆ ಗಾಯ

    November 17, 2026

    ಸ್ಟಿಂಗ್ ಆಪರೇಷನ್ ಪ್ರಕರಣಕ್ಕೆ ಸಾಕ್ಷ್ಯ ಸಂಗ್ರಹವೇ ಸವಾಲು; ಮೊಬೈಲ್ ನೀಡದೆ ಕೃಪಾ ಆಳ್ವ ಕಾಲಹರಣ

    November 17, 2026
    Social Follow
    • Facebook
    • Instagram
    © 2026 Nirantara News. Designed by Blueline Computers.
    • Home
    • ಕರಾವಳಿ ಸುದ್ದಿ
    • ಅಪರಾಧ
    • ಕರ್ನಾಟಕ
    • ರಾಷ್ಟ್ರೀಯ
    • ಅಂತರಾಷ್ಟ್ರೀಯ
    • ಸ್ಥಿರಾಸ್ತಿ ಮತ್ತು ಮೂಲಸೌಕರ್ಯ
    • ಆರೋಗ್ಯ

    Type above and press Enter to search. Press Esc to cancel.