Close Menu
    What's Hot

    ರಾಜ್ಯ ಪೊಲೀಸ್ ಇಲಾಖೆಯಲ್ಲಿ 31 ಐಪಿಎಸ್ ಅಧಿಕಾರಿಗಳ ವರ್ಗಾವಣೆ; ಮಂಗಳೂರು ಪಶ್ಚಿಮ ವಲಯದ ಐಜಿಪಿಯಾಗಿ ಎನ್. ಶಶಿಕುಮಾರ್ ನೇಮಕ

    November 18, 2026

    ಬಾಡಿಗೆ ಮನೆ ಹುಡುಕುವ ಸೋಗಿನಲ್ಲಿ ಬೀಗ ಹಾಕಿದ ಮನೆಗಳೇ ಟಾರ್ಗೆಟ್; ಇಬ್ಬರು ಖತರ್ನಾಕ್ ಕಳ್ಳರು ಅಂದರ್

    November 18, 2026

    ಕಾರು–ಬೊಲೆರೊ ನಡುವೆ ಭೀಕರ ಡಿಕ್ಕಿ; ನಾಲ್ವರು ಯುವಕರು ಸ್ಥಳದಲ್ಲೇ ಸಾವು, ಮತ್ತೊಬ್ಬನ ಸ್ಥಿತಿ ಗಂಭೀರ

    November 18, 2026
    Facebook X (Twitter) Instagram
    Facebook X (Twitter) Instagram
    Nirantara News | Kannada News | Karnataka Latest UpdatesNirantara News | Kannada News | Karnataka Latest Updates
    Subscribe
    • Homepage
    • ಕರಾವಳಿ ಸುದ್ದಿ
    • ಅಪರಾಧ
    • ಕರ್ನಾಟಕ
    • ರಾಷ್ಟ್ರೀಯ
    • ಅಂತರಾಷ್ಟ್ರೀಯ
    • ಸ್ಥಿರಾಸ್ತಿ ಮತ್ತು ಮೂಲಸೌಕರ್ಯ
    • ಆರೋಗ್ಯ


    Nirantara News | Kannada News | Karnataka Latest UpdatesNirantara News | Kannada News | Karnataka Latest Updates
    Home»ಅಪರಾಧ»ಉಡುಪಿ: ಪೊಲೀಸ್, ಸಿಬಿಐ, ಆರ್‌ಬಿಐ ತನಿಖೆಯ ನಾಟಕ; ವ್ಯಕ್ತಿಯಿಂದ ₹15.98 ಲಕ್ಷ ಲಪಟಾಯಿಸಿದ ಸೈಬರ್ ವಂಚಕರು
    ಅಪರಾಧ

    ಉಡುಪಿ: ಪೊಲೀಸ್, ಸಿಬಿಐ, ಆರ್‌ಬಿಐ ತನಿಖೆಯ ನಾಟಕ; ವ್ಯಕ್ತಿಯಿಂದ ₹15.98 ಲಕ್ಷ ಲಪಟಾಯಿಸಿದ ಸೈಬರ್ ವಂಚಕರು

    adminBy adminNovember 18, 2026No Comments2 Mins Read

    ಉಡುಪಿ : ದೆಹಲಿ ಸಿಬಿಐ ಹಾಗೂ ಪೊಲೀಸ್ ಅಧಿಕಾರಿಗಳ ಸೋಗಿನಲ್ಲಿ ಕರೆ ಮಾಡಿ, ಮನಿ ಲಾಂಡರಿಂಗ್ ಮತ್ತು ಡ್ರಗ್ಸ್ ಪ್ರಕರಣದಲ್ಲಿ ಬಂಧಿಸುವುದಾಗಿ ಬೆದರಿಸಿ ಉಡುಪಿಯ ವ್ಯಕ್ತಿಯೊಬ್ಬರಿಂದ ಬರೋಬ್ಬರಿ ₹15,98,976 ಹಣವನ್ನು ಆನ್‌ಲೈನ್ ಮೂಲಕ ವರ್ಗಾಯಿಸಿಕೊಂಡು ವಂಚಿಸಿರುವ ಘಟನೆ ನಡೆದಿದೆ. ಈ ಕುರಿತು ಉಡುಪಿಯ ಶೇಷಾಚಲ (51) ಎಂಬುವವರು ನೀಡಿದ ದೂರಿನ ಮೇರೆಗೆ ಉಡುಪಿ ಸೆನ್ (CEN) ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಕಳೆದ ಅಕ್ಟೋಬರ್ 18ರಂದು ಬೆಳಿಗ್ಗೆ 11.25ರ ಸುಮಾರಿಗೆ ಶೇಷಾಚಲ ಅವರಿಗೆ ಅಪರಿಚಿತ ವ್ಯಕ್ತಿಯೊಬ್ಬ ಹಿಂದಿಯಲ್ಲಿ ಕರೆ ಮಾಡಿದ್ದಾನೆ. ‘‘ದೆಹಲಿಯಲ್ಲಿ ನಿಮ್ಮ ಹೆಸರಿನ ಐಸಿಐಸಿಐ (ICICI) ಬ್ಯಾಂಕ್ ಪಾಸ್‌ಬುಕ್ ಪತ್ತೆಯಾಗಿದ್ದು, ಅದು ಪಂಕಜ್ ಶರ್ಮಾ ಎಂಬಾತನ ಮನಿ ಲಾಂಡರಿಂಗ್, ಡ್ರಗ್ಸ್ ಹಾಗೂ ಮಕ್ಕಳ ಕಳ್ಳಸಾಗಣೆ ಪ್ರಕರಣದಲ್ಲಿ ಬಳಕೆಯಾಗಿದೆ. ನಾವು ದೆಹಲಿ ಸಿಬಿಐ ಪೊಲೀಸರಾಗಿದ್ದು, ನಿಮ್ಮನ್ನು ತಕ್ಷಣವೇ ಬಂಧಿಸಲು ನ್ಯಾಯಾಲಯದಿಂದ ಆದೇಶವಾಗಿದೆ. ಕೂಡಲೇ ದೆಹಲಿಗೆ ಬನ್ನಿ, ಇಲ್ಲದಿದ್ದರೆ ವಿಡಿಯೋ ಕಾಲ್ ಮೂಲಕ ತನಿಖೆಗೆ ಸಹಕರಿಸಿ’’ ಎಂದು ಬೆದರಿಸಿದ್ದಾನೆ.

    ಆರೋಪಿಗಳು ಹಿಂದಿಯಲ್ಲಿ ಮಾತನಾಡುತ್ತಿದ್ದ ಕಾರಣ ಶೇಷಾಚಲ ಅವರು ತಮ್ಮ ಪತ್ನಿಯ ಮೊಬೈಲ್ ಸಂಖ್ಯೆಯನ್ನು ನೀಡಿದ್ದಾರೆ. ತಕ್ಷಣವೇ ಪತ್ನಿಯ ಮೊಬೈಲ್‌ಗೆ ವಿಡಿಯೋ ಕರೆ ಮಾಡಿದ ವಂಚಕ, ಪೊಲೀಸ್ ಸಮವಸ್ತ್ರದಲ್ಲಿ ಕಾಣಿಸಿಕೊಂಡು ತಾನು ದೆಹಲಿ ಪೊಲೀಸ್ ತನಿಖಾಧಿಕಾರಿ ಎಂದು ಪರಿಚಯಿಸಿಕೊಂಡಿದ್ದಾನೆ. ಅಲ್ಲದೆ, ಮತ್ತೊಂದು ಮೊಬೈಲ್ ಪರದೆಯಲ್ಲಿ ಶೇಷಾಚಲ ಅವರ ಹೆಸರಿನಲ್ಲಿದ್ದ ನಕಲಿ ಕೇಸ್ ನಂಬರ್ ತೋರಿಸಿ ನಂಬಿಸಿದ್ದಾನೆ.

    ಬಳಿಕ ಮತ್ತೊಬ್ಬ ವ್ಯಕ್ತಿಗೆ ಫೋನ್ ಹಸ್ತಾಂತರಿಸಿದ್ದು, ‘‘ನೀವು ಏನೇ ಮಾಡುತ್ತಿದ್ದರೂ ಪ್ರತಿ ಗಂಟೆಗೊಮ್ಮೆ ನಮಗೆ ಮೆಸೇಜ್ ಕಳುಹಿಸಬೇಕು. ಈ ವಿಷಯವನ್ನು ಯಾರಿಗೂ ತಿಳಿಸಬಾರದು, ತಿಳಿಸಿದರೆ ನಿಮಗೆ ಅಪಾಯವಿದೆ’’ ಎಂದು ಎಚ್ಚರಿಸಿ ದಂಪತಿಯನ್ನು ಮಾನಸಿಕವಾಗಿ ‘ಡಿಜಿಟಲ್ ಅರೆಸ್ಟ್’ ರೀತಿಯಲ್ಲಿ ಗೃಹಬಂಧನದಲ್ಲಿಟ್ಟಿದ್ದರು. ಪ್ರತಿದಿನ ಪತ್ನಿಯ ನಂಬರ್‌ಗೆ ವಿಡಿಯೋ ಕರೆ ಮಾಡುತ್ತಿದ್ದ ನಕಲಿ ಪೊಲೀಸರು, ‘‘ನ್ಯಾಯಾಧೀಶರು, ಸಿಬಿಐ ಹಾಗೂ ಆರ್‌ಬಿಐ (RBI) ಅಧಿಕಾರಿಗಳು ಬಂದು ತನಿಖೆ ನಡೆಸಲಿದ್ದಾರೆ’’ ಎಂದು ಹೇಳಿ ದಂಪತಿಯ ಬಳಿಯಿದ್ದ ನಗದು, ಚಿನ್ನಾಭರಣ ಹಾಗೂ ಬ್ಯಾಂಕ್ ಖಾತೆಗಳ ಸಂಪೂರ್ಣ ವಿವರ ಪಡೆದುಕೊಂಡಿದ್ದಾರೆ. ಆರ್‌ಬಿಐ ತನಿಖೆಯ ನೆಪವೊಡ್ಡಿ, ‘‘ನಿಮ್ಮ ಖಾತೆಯಲ್ಲಿರುವ ಎಲ್ಲಾ ಹಣವನ್ನು ನಾವು ನೀಡುವ ಬ್ಯಾಂಕ್ ಖಾತೆಗೆ ಜಮಾ ಮಾಡಿ, ಪರಿಶೀಲನೆ ಬಳಿಕ ವಾಪಸ್ ನೀಡಲಾಗುವುದು’’ ಎಂದು ನಂಬಿಸಿದ್ದಾರೆ.

    ಇದನ್ನು ನಿಜವೆಂದು ನಂಬಿದ ಶೇಷಾಚಲ ಅವರು, ಅಕ್ಟೋಬರ್ 31ರಂದು ಆರ್‌ಟಿಜಿಎಸ್ (RTGS) ಮೂಲಕ ವಂಚಕರು ಸೂಚಿಸಿದ ಯೆಸ್ ಬ್ಯಾಂಕ್ ಖಾತೆಗೆ ₹11,00,000 ಹಾಗೂ ನವೆಂಬರ್ 5ರಂದು ಬ್ಯಾಂಕ್ ಆಫ್ ಇಂಡಿಯಾ ಖಾತೆಗೆ ₹4,98,976 ಸೇರಿ ಒಟ್ಟು ₹15,98,976.40 ಹಣವನ್ನು ವರ್ಗಾಯಿಸಿದ್ದಾರೆ. ಹಣ ವರ್ಗಾವಣೆಯಾದ ಬಳಿಕ ತಾವು ಸೈಬರ್ ವಂಚನೆಗೊಳಗಾಗಿರುವುದು ಅರಿವಿಗೆ ಬಂದಿದ್ದು, ಉಡುಪಿ ಸೆನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪೊಲೀಸರು ಐಟಿ ಕಾಯ್ದೆ ಕಲಂ 66(d) ಹಾಗೂ ಬಿಎನ್‌ಎಸ್ (BNS) ಕಲಂ 318(4), 319(2), 308(2) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.




    #crime #udupi
    Previous Articleಉಡುಪಿ: ವಿದ್ಯುತ್ ತಂತಿ ತಗುಲಿ ಒಣಹುಲ್ಲಿನ ಲಾರಿಗೆ ಬೆಂಕಿ; ಚಾಲಕನ ಸಮಯಪ್ರಜ್ಞೆಯಿಂದ ತಪ್ಪಿದ ಭಾರೀ ಅನಾಹುತ
    Next Article 7 ಜನರ ಹತ್ಯೆ ಪ್ರಕರಣ; ಕೊಲೆಯಿಂದ ಶವ ಸಾಗಾಟದವರೆಗೆ ಆರೋಪಿ ಇಂದುಶೇಖರ್‌ನಿಂದ ಕ್ರೈಂ ಸೀನ್ ರಿಕ್ರಿಯೇಟ್

    Related Posts

    ಬಾಡಿಗೆ ಮನೆ ಹುಡುಕುವ ಸೋಗಿನಲ್ಲಿ ಬೀಗ ಹಾಕಿದ ಮನೆಗಳೇ ಟಾರ್ಗೆಟ್; ಇಬ್ಬರು ಖತರ್ನಾಕ್ ಕಳ್ಳರು ಅಂದರ್

    November 18, 2026

    ಕಾರು–ಬೊಲೆರೊ ನಡುವೆ ಭೀಕರ ಡಿಕ್ಕಿ; ನಾಲ್ವರು ಯುವಕರು ಸ್ಥಳದಲ್ಲೇ ಸಾವು, ಮತ್ತೊಬ್ಬನ ಸ್ಥಿತಿ ಗಂಭೀರ

    November 18, 2026

    7 ಜನರ ಹತ್ಯೆ ಪ್ರಕರಣ; ಕೊಲೆಯಿಂದ ಶವ ಸಾಗಾಟದವರೆಗೆ ಆರೋಪಿ ಇಂದುಶೇಖರ್‌ನಿಂದ ಕ್ರೈಂ ಸೀನ್ ರಿಕ್ರಿಯೇಟ್

    November 18, 2026
    Add A Comment
    Leave A Reply Cancel Reply

    ಪ್ರಮುಖ ಸುದ್ದಿ

    ರಾಜ್ಯ ಪೊಲೀಸ್ ಇಲಾಖೆಯಲ್ಲಿ 31 ಐಪಿಎಸ್ ಅಧಿಕಾರಿಗಳ ವರ್ಗಾವಣೆ; ಮಂಗಳೂರು ಪಶ್ಚಿಮ ವಲಯದ ಐಜಿಪಿಯಾಗಿ ಎನ್. ಶಶಿಕುಮಾರ್ ನೇಮಕ

    November 18, 2026

    ಬಾಡಿಗೆ ಮನೆ ಹುಡುಕುವ ಸೋಗಿನಲ್ಲಿ ಬೀಗ ಹಾಕಿದ ಮನೆಗಳೇ ಟಾರ್ಗೆಟ್; ಇಬ್ಬರು ಖತರ್ನಾಕ್ ಕಳ್ಳರು ಅಂದರ್

    November 18, 2026

    ಕಾರು–ಬೊಲೆರೊ ನಡುವೆ ಭೀಕರ ಡಿಕ್ಕಿ; ನಾಲ್ವರು ಯುವಕರು ಸ್ಥಳದಲ್ಲೇ ಸಾವು, ಮತ್ತೊಬ್ಬನ ಸ್ಥಿತಿ ಗಂಭೀರ

    November 18, 2026

    7 ಜನರ ಹತ್ಯೆ ಪ್ರಕರಣ; ಕೊಲೆಯಿಂದ ಶವ ಸಾಗಾಟದವರೆಗೆ ಆರೋಪಿ ಇಂದುಶೇಖರ್‌ನಿಂದ ಕ್ರೈಂ ಸೀನ್ ರಿಕ್ರಿಯೇಟ್

    November 18, 2026
    Advertisement






    Nirantara News is powered by a team of experienced media professionals with decades of expertise in television journalism. Our mission is to be the voice of the people by delivering truthful, unbiased, and responsible news. We cover local, state, national, and international news, along with the latest updates on health, entertainment, real estate, business, technology, and more.

    Backed by experienced reporters and a strong legal team, we are committed to providing accurate news and honest reviews.

    Subscribe to Nirantara News and support trusted journalism.

    Top Insights

    ಬಾಡಿಗೆ ಮನೆ ಹುಡುಕುವ ಸೋಗಿನಲ್ಲಿ ಬೀಗ ಹಾಕಿದ ಮನೆಗಳೇ ಟಾರ್ಗೆಟ್; ಇಬ್ಬರು ಖತರ್ನಾಕ್ ಕಳ್ಳರು ಅಂದರ್

    November 18, 2026

    ಕಾರು–ಬೊಲೆರೊ ನಡುವೆ ಭೀಕರ ಡಿಕ್ಕಿ; ನಾಲ್ವರು ಯುವಕರು ಸ್ಥಳದಲ್ಲೇ ಸಾವು, ಮತ್ತೊಬ್ಬನ ಸ್ಥಿತಿ ಗಂಭೀರ

    November 18, 2026
    Social Follow
    • Facebook
    • Instagram
    © 2026 Nirantara News. Designed by Blueline Computers.
    • Home
    • ಕರಾವಳಿ ಸುದ್ದಿ
    • ಅಪರಾಧ
    • ಕರ್ನಾಟಕ
    • ರಾಷ್ಟ್ರೀಯ
    • ಅಂತರಾಷ್ಟ್ರೀಯ
    • ಸ್ಥಿರಾಸ್ತಿ ಮತ್ತು ಮೂಲಸೌಕರ್ಯ
    • ಆರೋಗ್ಯ

    Type above and press Enter to search. Press Esc to cancel.