Close Menu
    What's Hot

    ಟಾಟಾ ಕುಟುಂಬದಲ್ಲಿ ಆಸ್ತಿ ಮತ್ತು ಅಧಿಕಾರದ ಸಂಘರ್ಷ; ನೋಯೆಲ್ ಟಾಟಾ ವಿರುದ್ಧ ಜಿಮ್ಮಿ ಟಾಟಾ ಅಸಮಾಧಾನ

    November 17, 2026

    ಕೋಟದಲ್ಲಿ ಮತ್ತೆ ಭೀಕರ ಅಪಘಾತ; ಮೀನು ಸಾಗಾಟದ ವಾಹನಕ್ಕೆ ಸರಕು ತುಂಬಿದ ಲಾರಿ ಡಿಕ್ಕಿ,ಎರಡು ವಾಹನಗಳು ನಜ್ಜುಗುಜ್ಜು

    November 17, 2026

    ಟಿವಿಎಸ್ ಕುಟುಂಬದಲ್ಲಿ ಆಸ್ತಿ ಹಂಚಿಕೆ ಕಿತ್ತಾಟ; ಸಮಾನ ಪಾಲಿಗಾಗಿ ತಂದೆಗೆ ಕಾನೂನು ನೋಟಿಸ್ ನೀಡಿದ ಲಕ್ಷ್ಮಿ ವೇಣು

    November 17, 2026
    Facebook X (Twitter) Instagram
    Facebook X (Twitter) Instagram
    Nirantara News | Kannada News | Karnataka Latest UpdatesNirantara News | Kannada News | Karnataka Latest Updates
    Subscribe
    • Homepage
    • ಕರಾವಳಿ ಸುದ್ದಿ
    • ಅಪರಾಧ
    • ಕರ್ನಾಟಕ
    • ರಾಷ್ಟ್ರೀಯ
    • ಅಂತರಾಷ್ಟ್ರೀಯ
    • ಸ್ಥಿರಾಸ್ತಿ ಮತ್ತು ಮೂಲಸೌಕರ್ಯ
    • ಆರೋಗ್ಯ

    Nirantara News | Kannada News | Karnataka Latest UpdatesNirantara News | Kannada News | Karnataka Latest Updates
    Home»ರಾಷ್ಟ್ರೀಯ»₹35 ಸಾವಿರ ಮೌಲ್ಯದ ಮದ್ಯದ ಬಾಟಲಿ ಒಡೆದ ಪ್ರಕರಣ; ಇಂಡಿಗೋಗೆ ಗ್ರಾಹಕರ ಆಯೋಗದಿಂದ ದಂಡ
    ರಾಷ್ಟ್ರೀಯ

    ₹35 ಸಾವಿರ ಮೌಲ್ಯದ ಮದ್ಯದ ಬಾಟಲಿ ಒಡೆದ ಪ್ರಕರಣ; ಇಂಡಿಗೋಗೆ ಗ್ರಾಹಕರ ಆಯೋಗದಿಂದ ದಂಡ

    adminBy adminJuly 29, 2026No Comments2 Mins Read

    ಹೈದರಾಬಾದ್: ಪ್ರಯಾಣಿಕನ ದುಬಾರಿ ಮದ್ಯದ ಬಾಟಲಿ ಒಡೆದ ಪ್ರಕರಣದಲ್ಲಿ ಕೇವಲ 500 ಮೌಲ್ಯದ ವೋಚರ್​​ ನೀಡಲು ಮುಂದಾಗಿದ್ದ ಇಂಡಿಗೋ ಏರ್‌ಲೈನ್ಸ್‌ಗೆ ಹೈದರಾಬಾದ್ ಜಿಲ್ಲಾ ಗ್ರಾಹಕರ ವಿವಾದ ಪರಿಹಾರ ಆಯೋಗ-III ತೀವ್ರ ತರಾಟೆಗೆ ತೆಗೆದುಕೊಂಡಿದೆ. ಒಡೆದ ಬಾಟಲಿಯ ಸಂಪೂರ್ಣ ಮೌಲ್ಯ, ಮಾನಸಿಕ ವೇದನೆಗೆ ಪರಿಹಾರ ಹಾಗೂ ನ್ಯಾಯಾಂಗ ವೆಚ್ಚವನ್ನು ಪಾವತಿಸುವಂತೆ ಆಯೋಗ ಆದೇಶಿಸಿದೆ.

    ಯೂಸುಫ್‌ಗುಡ ನಿವಾಸಿ ವಿನೀತ್ ಅವರು 2025ರ ಸೆಪ್ಟೆಂಬರ್ 3ರಂದು ದೆಹಲಿಯಿಂದ ಚೆನ್ನೈಗೆ ಇಂಡಿಗೋ ವಿಮಾನದಲ್ಲಿ ಪ್ರಯಾಣಿಸಿದ್ದರು. ಚೆಕ್-ಇನ್ ವೇಳೆ ತಮ್ಮ ಸೂಟ್‌ಕೇಸ್‌ನಲ್ಲಿ 35,000 ಮೌಲ್ಯದ ಪ್ರೀಮಿಯಂ ವೈಟ್ ಅಂಡ್ ಬ್ಲೂ ಮದ್ಯದ ಬಾಟಲಿ ಇದೆ ಎಂದು ವಿಮಾನಯಾನ ಸಂಸ್ಥೆಯ ಸಿಬ್ಬಂದಿಗೆ ಮುಂಚಿತವಾಗಿಯೇ ತಿಳಿಸಿದ್ದರು. ಇದು ಅತ್ಯಂತ ಸೂಕ್ಷ್ಮ ವಸ್ತುವಾಗಿರುವುದನ್ನೂ ಅವರು ಹೇಳಿದ್ದರು. ಆದರೆ ಚೆನ್ನೈ ತಲುಪಿ ಲಗೇಜ್ ಪಡೆದು ಸೂಟ್‌ಕೇಸ್ ತೆರೆದಾಗ, ಮದ್ಯದ ಬಾಟಲಿ ಸಂಪೂರ್ಣ ಒಡೆದಿರುವುದು ಕಂಡುಬಂದಿತು. ಬಾಟಲಿಯಲ್ಲಿದ್ದ ಮದ್ಯ ಸೋರಿಕೆಯಾಗಿದ್ದು, ಸೂಟ್‌ಕೇಸ್‌ನಲ್ಲಿದ್ದ ಇತರೆ ವಸ್ತುಗಳಿಗೂ ಹಾನಿಯಾಗಿತ್ತು.

    ವಿಮಾನ ನಿಲ್ದಾಣದಲ್ಲೇ ದೂರು ನೀಡಿದ ಬಳಿಕವೂ ಯಾವುದೇ ಸಮರ್ಪಕ ಪ್ರತಿಕ್ರಿಯೆ ಸಿಗದ ಕಾರಣ ವಿನೀತ್ ಇ-ಮೇಲ್ ಮೂಲಕ ಇಂಡಿಗೋವನ್ನು ಸಂಪರ್ಕಿಸಿದರು. ಬಾಟಲಿಯನ್ನು ಸರಿಯಾಗಿ ಪ್ಯಾಕ್ ಮಾಡಲಾಗಿತ್ತು ಎಂಬುದನ್ನು ಇಂಡಿಗೋ ಒಪ್ಪಿಕೊಂಡರೂ, ತಮ್ಮ ಲಗೇಜ್ ನಿಯಮಗಳ ಪ್ರಕಾರ ಸೂಕ್ಷ್ಮ ವಸ್ತುಗಳನ್ನು ಪ್ರಯಾಣಿಕರು ತಮ್ಮದೇ ಜವಾಬ್ದಾರಿಯಲ್ಲಿ ಸಾಗಿಸಬೇಕು ಎಂದು ಹೇಳಿ ಕೇವಲ 500 ರೂ. ಮೌಲ್ಯದ ವೋಚರ್ ನೀಡಲು ಮುಂದಾಗಿತ್ತು. ಇದರಿಂದ ಅಸಮಾಧಾನಗೊಂಡ ವಿನೀತ್ ಮೊದಲು ಕಾನೂನು ನೋಟಿಸ್ ನೀಡಿ, ಬಳಿಕ ಗ್ರಾಹಕರ ಆಯೋಗದ ಮೊರೆ ಹೋಗಿದ್ದರು.

    ಪ್ರಕರಣದ ವಿಚಾರಣೆ ನಡೆಸಿದ ಹೈದರಾಬಾದ್ ಜಿಲ್ಲಾ ಗ್ರಾಹಕರ ವಿವಾದ ಪರಿಹಾರ ಆಯೋಗ-III, ಚೆಕ್-ಇನ್ ಲಗೇಜ್ ಅನ್ನು ನಿರ್ಲಕ್ಷ್ಯದಿಂದ ನಿರ್ವಹಿಸಿರುವುದರಿಂದ ಇಂಡಿಗೋ ಸೇವೆಯಲ್ಲಿ ಲೋಪವಾಗಿದೆ ಎಂದು ತೀರ್ಪು ನೀಡಿದೆ. ಒಡೆದ ಮದ್ಯದ ಬಾಟಲಿಗೆ 35,000 ಪರಿಹಾರವನ್ನು ವಾರ್ಷಿಕ 9% ಬಡ್ಡಿಯೊಂದಿಗೆ, ಮಾನಸಿಕ ವೇದನೆಗೆ 15,000, ಹಾಗೂ ನ್ಯಾಯಾಂಗ ವೆಚ್ಚಕ್ಕೆ 5,000 ಪಾವತಿಸುವಂತೆ ಆಯೋಗವು ಇಂಡಿಗೋಗೆ ಆದೇಶಿಸಿದೆ.

    #nation #national
    Previous Articleಡಿಸಿಸಿ ಬ್ಯಾಂಕ್‌ನಲ್ಲಿ ಮತ್ತೊಂದು ಕೋಟಿ ವಂಚನೆ; ಮ್ಯಾನೇಜರ್‌ಗಾಗಿ ಪೊಲೀಸರ ಬಲೆ
    Next Article ಭಾರತದ ಕ್ಷಿಪಣಿ ಸಾಮರ್ಥ್ಯಕ್ಕೆ ಹೊಸ ಅಧ್ಯಾಯ; ತಿರುವನಂತಪುರಂನಲ್ಲಿ ಬ್ರಹ್ಮೋಸ್-ಎನ್‌ಜಿ ಘಟಕ

    Related Posts

    ಟಾಟಾ ಕುಟುಂಬದಲ್ಲಿ ಆಸ್ತಿ ಮತ್ತು ಅಧಿಕಾರದ ಸಂಘರ್ಷ; ನೋಯೆಲ್ ಟಾಟಾ ವಿರುದ್ಧ ಜಿಮ್ಮಿ ಟಾಟಾ ಅಸಮಾಧಾನ

    November 17, 2026

    ಟಿವಿಎಸ್ ಕುಟುಂಬದಲ್ಲಿ ಆಸ್ತಿ ಹಂಚಿಕೆ ಕಿತ್ತಾಟ; ಸಮಾನ ಪಾಲಿಗಾಗಿ ತಂದೆಗೆ ಕಾನೂನು ನೋಟಿಸ್ ನೀಡಿದ ಲಕ್ಷ್ಮಿ ವೇಣು

    November 17, 2026

    ದೆಹಲಿಯಲ್ಲಿ ಕಟ್ಟಡ ಕುಸಿತದ ದುರಂತ; ಮೂರು ವರ್ಷದ ಮಗು ಸೇರಿ ಇಬ್ಬರು ದುರ್ಮರಣ, ಆರು ಮಂದಿ ಅವಶೇಷಗಳಡಿ ಸಿಲುಕಿರುವ ಶಂಕೆ

    November 17, 2026
    Add A Comment
    Leave A Reply Cancel Reply

    ಪ್ರಮುಖ ಸುದ್ದಿ

    ಟಾಟಾ ಕುಟುಂಬದಲ್ಲಿ ಆಸ್ತಿ ಮತ್ತು ಅಧಿಕಾರದ ಸಂಘರ್ಷ; ನೋಯೆಲ್ ಟಾಟಾ ವಿರುದ್ಧ ಜಿಮ್ಮಿ ಟಾಟಾ ಅಸಮಾಧಾನ

    November 17, 2026

    ಕೋಟದಲ್ಲಿ ಮತ್ತೆ ಭೀಕರ ಅಪಘಾತ; ಮೀನು ಸಾಗಾಟದ ವಾಹನಕ್ಕೆ ಸರಕು ತುಂಬಿದ ಲಾರಿ ಡಿಕ್ಕಿ,ಎರಡು ವಾಹನಗಳು ನಜ್ಜುಗುಜ್ಜು

    November 17, 2026

    ಟಿವಿಎಸ್ ಕುಟುಂಬದಲ್ಲಿ ಆಸ್ತಿ ಹಂಚಿಕೆ ಕಿತ್ತಾಟ; ಸಮಾನ ಪಾಲಿಗಾಗಿ ತಂದೆಗೆ ಕಾನೂನು ನೋಟಿಸ್ ನೀಡಿದ ಲಕ್ಷ್ಮಿ ವೇಣು

    November 17, 2026

    ಪ್ರಾಜೆಕ್ಟ್ ಕೆಲಸಕ್ಕೆ ತೆರಳುತ್ತಿದ್ದ ವಿದ್ಯಾರ್ಥಿಗಳ ಕಾರು ಮರಕ್ಕೆ ಡಿಕ್ಕಿ; ಇಬ್ಬರು ಕಾಲೇಜು ವಿದ್ಯಾರ್ಥಿನಿಯರ ದುರ್ಮರಣ, ನಾಲ್ವರಿಗೆ ಗಾಯ

    November 17, 2026
    Advertisement

    Nirantara News is powered by a team of experienced media professionals with decades of expertise in television journalism. Our mission is to be the voice of the people by delivering truthful, unbiased, and responsible news. We cover local, state, national, and international news, along with the latest updates on health, entertainment, real estate, business, technology, and more.

    Backed by experienced reporters and a strong legal team, we are committed to providing accurate news and honest reviews.

    Subscribe to Nirantara News and support trusted journalism.

    Top Insights

    ಪ್ರಾಜೆಕ್ಟ್ ಕೆಲಸಕ್ಕೆ ತೆರಳುತ್ತಿದ್ದ ವಿದ್ಯಾರ್ಥಿಗಳ ಕಾರು ಮರಕ್ಕೆ ಡಿಕ್ಕಿ; ಇಬ್ಬರು ಕಾಲೇಜು ವಿದ್ಯಾರ್ಥಿನಿಯರ ದುರ್ಮರಣ, ನಾಲ್ವರಿಗೆ ಗಾಯ

    November 17, 2026

    ಸ್ಟಿಂಗ್ ಆಪರೇಷನ್ ಪ್ರಕರಣಕ್ಕೆ ಸಾಕ್ಷ್ಯ ಸಂಗ್ರಹವೇ ಸವಾಲು; ಮೊಬೈಲ್ ನೀಡದೆ ಕೃಪಾ ಆಳ್ವ ಕಾಲಹರಣ

    November 17, 2026
    Social Follow
    • Facebook
    • Instagram
    © 2026 Nirantara News. Designed by Blueline Computers.
    • Home
    • ಕರಾವಳಿ ಸುದ್ದಿ
    • ಅಪರಾಧ
    • ಕರ್ನಾಟಕ
    • ರಾಷ್ಟ್ರೀಯ
    • ಅಂತರಾಷ್ಟ್ರೀಯ
    • ಸ್ಥಿರಾಸ್ತಿ ಮತ್ತು ಮೂಲಸೌಕರ್ಯ
    • ಆರೋಗ್ಯ

    Type above and press Enter to search. Press Esc to cancel.