Close Menu
    What's Hot

    ಫಾತಿಮಾ ನಿಶಾನ ಹತ್ಯೆ ಪ್ರಕರಣ: ಅತ್ತೆ–ನಾದಿನಿಗೆ ಕೋರ್ಟ್‌ನಿಂದ ಜಾಮೀನು

    September 3, 2026

    ರೇಣುಕಾಸ್ವಾಮಿ ಪ್ರಕರಣ: ದರ್ಶನ್‌ ಗ್ಯಾಂಗ್‌ನಿಂದ ದೂರವಾಗಲು A-6, A-7 ಆರೋಪಿಗಳ ಯತ್ನ

    September 3, 2026

    ಕದಂಬ ನೌಕಾನೆಲೆಯಿಂದ ನೌಕಾಪಡೆ ಸಿಬ್ಬಂದಿ ನಾಪತ್ತೆ; ಘಟನೆ ಸುತ್ತ ಅನುಮಾನ

    September 3, 2026
    Facebook X (Twitter) Instagram
    Facebook X (Twitter) Instagram
    Nirantara News | Kannada News | Karnataka Latest UpdatesNirantara News | Kannada News | Karnataka Latest Updates
    Subscribe
    • Homepage
    • ಕರಾವಳಿ ಸುದ್ದಿ
    • ಅಪರಾಧ
    • ಕರ್ನಾಟಕ
    • ರಾಷ್ಟ್ರೀಯ
    • ಅಂತರಾಷ್ಟ್ರೀಯ
    • ಸ್ಥಿರಾಸ್ತಿ ಮತ್ತು ಮೂಲಸೌಕರ್ಯ
    • ಆರೋಗ್ಯ


    Nirantara News | Kannada News | Karnataka Latest UpdatesNirantara News | Kannada News | Karnataka Latest Updates
    Home»ಕರ್ನಾಟಕ»ಅದ್ವೈತ್ ನಾಪತ್ತೆ ಪ್ರಕರಣಕ್ಕೆ ಟ್ವಿಸ್ಟ್: ಓಶೋ ವಿಚಾರ, ಡೇಟಿಂಗ್ ಆ್ಯಪ್ ಸಂಪರ್ಕದತ್ತ ಪೊಲೀಸರ ತನಿಖೆ
    ಕರ್ನಾಟಕ

    ಅದ್ವೈತ್ ನಾಪತ್ತೆ ಪ್ರಕರಣಕ್ಕೆ ಟ್ವಿಸ್ಟ್: ಓಶೋ ವಿಚಾರ, ಡೇಟಿಂಗ್ ಆ್ಯಪ್ ಸಂಪರ್ಕದತ್ತ ಪೊಲೀಸರ ತನಿಖೆ

    adminBy adminAugust 26, 2026No Comments2 Mins Read

    ಬೆಂಗಳೂರು: ಶಿವಗಂಗೆ ಬೆಟ್ಟದಲ್ಲಿ ನಾಪತ್ತೆಯಾಗಿರುವ ಟೆಕ್ಕಿ ಅದ್ವೈತ್ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರ ತನಿಖೆಯಲ್ಲಿ ಮಹತ್ವದ ತಿರುವು ಸಿಕ್ಕಿದೆ. ಎರಡು ವಾರ ಕಳೆದರೂ ಅದ್ವೈತ್ ಪತ್ತೆಯಾಗದ ಹಿನ್ನೆಲೆಯಲ್ಲಿ ಪೊಲೀಸರು ಇದೀಗ ಆತನ ದಿನಚರಿ, ಹವ್ಯಾಸ, ಸ್ನೇಹ-ಸಂಪರ್ಕ ಹಾಗೂ ಆಧ್ಯಾತ್ಮಿಕ ಆಸಕ್ತಿ ಸೇರಿದಂತೆ ಹಲವು ಆಯಾಮಗಳಲ್ಲಿ ತನಿಖೆ ನಡೆಸುತ್ತಿದ್ದಾರೆ.

    ಅದ್ವೈತ್ ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ ಇದುವರೆಗೆ ಯಾವುದೇ ಖಚಿತ ಕುರುಹು ಸಿಕ್ಕಿಲ್ಲ. ಅದೇ ರೀತಿ ಆತ ದೈಹಿಕವಾಗಿ ಬೆಟ್ಟದಿಂದ ಹೊರಹೋಗಿರುವ ಬಗ್ಗೆಯೂ ಸ್ಪಷ್ಟ ಮಾಹಿತಿ ಪೊಲೀಸರಿಗೆ ಲಭ್ಯವಾಗಿಲ್ಲ. ತನಿಖೆ ವೇಳೆ ಪೊಲೀಸರು ಅದ್ವೈತ್‌ನ ದಿನಚರಿ, ಹವ್ಯಾಸ ಮತ್ತು ವೈಯಕ್ತಿಕ ಆಸಕ್ತಿಗಳ ಕುರಿತು ಕೂಲಂಕುಷವಾಗಿ ಮಾಹಿತಿ ಸಂಗ್ರಹಿಸಿದ್ದಾರೆ. ಅವನ ದಿನನಿತ್ಯದ ಚಟುವಟಿಕೆಗಳು, ಯಾರೊಂದಿಗೆ ಸಂಪರ್ಕದಲ್ಲಿದ್ದ, ಯಾವ ಸ್ಥಳಗಳಿಗೆ ಭೇಟಿ ನೀಡುತ್ತಿದ್ದ ಮತ್ತು ಯಾವ ವಿಚಾರಗಳಲ್ಲಿ ಹೆಚ್ಚು ಆಸಕ್ತಿ ಹೊಂದಿದ್ದ ಎಂಬುದನ್ನು ಆಧರಿಸಿ ಪೊಲೀಸರು ತನಿಖೆಯ ದಿಕ್ಕನ್ನು ಬದಲಿಸಿದ್ದಾರೆ.

    ಅದ್ವೈತ್ ಆಗಾಗ ಕೆಲವು ಆಧ್ಯಾತ್ಮಿಕ ವಿಚಾರಗಳ ಬಗ್ಗೆ ಸಂಬಂಧಿತರೊಂದಿಗೆ ಚರ್ಚಿಸುತ್ತಿದ್ದ ಎನ್ನಲಾಗಿದೆ. ಅದರಲ್ಲೂ ಓಶೋ ವಿಚಾರಗಳಿಂದ ಮತ್ತು ಓಶೋ ಅವರ ತತ್ವಗಳಿಂದ ಆತ ಪ್ರಭಾವಿತನಾಗಿದ್ದ ಎನ್ನುವ ಮಾಹಿತಿ ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಓಶೋ ಹಾಗೂ ಅವರ ವಿಚಾರಧಾರೆಗೆ ಸಂಬಂಧಿಸಿದ ಕೆಲವು ಪುಸ್ತಕಗಳು ಅದ್ವೈತ್ ಬಳಿ ಇದ್ದವು ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಪೊಲೀಸರು ಶಿವಗಂಗೆ ಸುತ್ತಮುತ್ತಲಿನ ಆಶ್ರಮಗಳು ಹಾಗೂ ಆಧ್ಯಾತ್ಮಿಕ ಚಟುವಟಿಕೆಗಳಿಗೆ ಸಂಬಂಧಿಸಿದ ಸ್ಥಳಗಳ ಬಗ್ಗೆಯೂ ಪರಿಶೀಲನೆ ನಡೆಸುತ್ತಿದ್ದಾರೆ.

    ಕೆಲ ದಿನಗಳ ಕಾಲ ಯಾರಿಗೂ ತಿಳಿಯದಂತೆ ಉಳಿದುಕೊಳ್ಳಬಹುದಾದ ಸ್ಥಳಗಳು ಅಥವಾ ವ್ಯಕ್ತಿಗಳೊಂದಿಗೆ ಅದ್ವೈತ್ ಸಂಪರ್ಕ ಹೊಂದಿದ್ದನೇ ಎಂಬ ಬಗ್ಗೆಯೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಅದ್ವೈತ್‌ನ ಹಿಂದಿನ ಚಲನವಲನ, ಸಂಪರ್ಕಗಳು ಹಾಗೂ ಆತನಿಗೆ ಪರಿಚಯವಿದ್ದ ವ್ಯಕ್ತಿಗಳ ಕುರಿತು ಮಾಹಿತಿ ಸಂಗ್ರಹಿಸಲಾಗುತ್ತಿದೆ.

    ತನಿಖೆಯಲ್ಲಿ ಮತ್ತೊಂದು ಮಹತ್ವದ ಅಂಶವೂ ಹೊರಬಿದ್ದಿದೆ. ಅದ್ವೈತ್ ನಿರಂತರವಾಗಿ ಹಲವು ಡೇಟಿಂಗ್ ಆ್ಯಪ್ ಬಳಸುತ್ತಿದ್ದ ಎನ್ನಲಾಗಿದೆ. ಈ ಪೈಕಿ ಡೇಟಿಂಗ್ ಆ್ಯಪ್ ಮೂಲಕ ಪರಿಚಯವಾಗಿದ್ದ ಯುವತಿಯೊಬ್ಬರೊಂದಿಗೆ ಆತ ನಿರಂತರ ಸಂಪರ್ಕದಲ್ಲಿದ್ದ ಎನ್ನಲಾಗಿದೆ. ಕಳೆದ ಮೂರು ತಿಂಗಳಿನಿಂದ ಆ ಯುವತಿಯೊಂದಿಗೆ ಅದ್ವೈತ್ ಬೆಟ್ಟ ಸೇರಿದಂತೆ ಹಲವು ಕಡೆ ಓಡಾಡಿದ್ದ ಎನ್ನಲಾಗಿದ್ದು, ಇದೀಗ ಪೊಲೀಸರು ಆಕೆಯಿಂದ ಆತನ ಇತ್ತೀಚಿನ ಚಲನವಲನಗಳ ಬಗ್ಗೆ ಮಾಹಿತಿ ಪಡೆಯುತ್ತಿದ್ದಾರೆ.

    ತನಿಖಾ ಮೂಲಗಳ ಪ್ರಕಾರ, ಅದ್ವೈತ್ ಹಾಗೂ ಆ ಯುವತಿಯ ನಡುವೆ Osho Thoughts ಮಾತ್ರವಲ್ಲದೆ ಆತ್ಮಹತ್ಯೆಯಂತಹ ಸೂಕ್ಷ್ಮ ವಿಚಾರಗಳ ಬಗ್ಗೆಯೂ ಚರ್ಚೆ ನಡೆದಿತ್ತೆಂಬ ಮಾಹಿತಿ ಪೊಲೀಸರಿಗೆ ಸಿಕ್ಕಿದೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಪೊಲೀಸರು ಆತನ ಮಾನಸಿಕ ಸ್ಥಿತಿ, ಇತ್ತೀಚಿನ ಮಾತುಕತೆಗಳು ಹಾಗೂ ವೈಯಕ್ತಿಕ ಜೀವನದ ಹಲವು ಆಯಾಮಗಳನ್ನು ಪರಿಶೀಲಿಸುತ್ತಿದ್ದಾರೆ. ಡೇಟಿಂಗ್ ಆ್ಯಪ್ ಮೂಲಕ ಸಂಪರ್ಕದಲ್ಲಿದ್ದ ಇತರ ಯುವತಿಯರನ್ನೂ ಪೊಲೀಸರು ಸಂಪರ್ಕಿಸಿ ಮಾಹಿತಿ ಸಂಗ್ರಹಿಸಲು ಮುಂದಾಗಿದ್ದಾರೆ.

     




    #karnataka
    Previous Articleಮೈಸೂರು ದಸರಾ 2026: ಗಜಪಯಣಕ್ಕೆ ಕ್ಷಣಗಣನೆ; ಮೊದಲ ಹಂತದಲ್ಲಿ ಆಗಮಿಸಲಿರುವ 9 ಆನೆಗಳು
    Next Article ವಿಜಯಪುರದಲ್ಲಿ ಭೀಕರ ದುರಂತ: ಇಬ್ಬರು ಮಕ್ಕಳು ಸೇರಿ ಒಂದೇ ಕುಟುಂಬದ 6 ಮಂದಿ ಶವವಾಗಿ ಪತ್ತೆ

    Related Posts

    ರೇಣುಕಾಸ್ವಾಮಿ ಪ್ರಕರಣ: ದರ್ಶನ್‌ ಗ್ಯಾಂಗ್‌ನಿಂದ ದೂರವಾಗಲು A-6, A-7 ಆರೋಪಿಗಳ ಯತ್ನ

    September 3, 2026

    ಕದಂಬ ನೌಕಾನೆಲೆಯಿಂದ ನೌಕಾಪಡೆ ಸಿಬ್ಬಂದಿ ನಾಪತ್ತೆ; ಘಟನೆ ಸುತ್ತ ಅನುಮಾನ

    September 3, 2026

    ದುನಿಯಾ ವಿಜಯ್–ನಾಗರತ್ನ ಪ್ರಕರಣಕ್ಕೆ ಅಂತ್ಯ; ಹೈಕೋರ್ಟ್‌ನಿಂದ ಮಹತ್ವದ ತೀರ್ಪು

    September 3, 2026
    Add A Comment
    Leave A Reply Cancel Reply

    ಪ್ರಮುಖ ಸುದ್ದಿ

    ಫಾತಿಮಾ ನಿಶಾನ ಹತ್ಯೆ ಪ್ರಕರಣ: ಅತ್ತೆ–ನಾದಿನಿಗೆ ಕೋರ್ಟ್‌ನಿಂದ ಜಾಮೀನು

    September 3, 2026

    ರೇಣುಕಾಸ್ವಾಮಿ ಪ್ರಕರಣ: ದರ್ಶನ್‌ ಗ್ಯಾಂಗ್‌ನಿಂದ ದೂರವಾಗಲು A-6, A-7 ಆರೋಪಿಗಳ ಯತ್ನ

    September 3, 2026

    ಕದಂಬ ನೌಕಾನೆಲೆಯಿಂದ ನೌಕಾಪಡೆ ಸಿಬ್ಬಂದಿ ನಾಪತ್ತೆ; ಘಟನೆ ಸುತ್ತ ಅನುಮಾನ

    September 3, 2026

    ದುನಿಯಾ ವಿಜಯ್–ನಾಗರತ್ನ ಪ್ರಕರಣಕ್ಕೆ ಅಂತ್ಯ; ಹೈಕೋರ್ಟ್‌ನಿಂದ ಮಹತ್ವದ ತೀರ್ಪು

    September 3, 2026
    Advertisement






    Nirantara News is powered by a team of experienced media professionals with decades of expertise in television journalism. Our mission is to be the voice of the people by delivering truthful, unbiased, and responsible news. We cover local, state, national, and international news, along with the latest updates on health, entertainment, real estate, business, technology, and more.

    Backed by experienced reporters and a strong legal team, we are committed to providing accurate news and honest reviews.

    Subscribe to Nirantara News and support trusted journalism.

    Top Insights

    ರೇಣುಕಾಸ್ವಾಮಿ ಪ್ರಕರಣ: ದರ್ಶನ್‌ ಗ್ಯಾಂಗ್‌ನಿಂದ ದೂರವಾಗಲು A-6, A-7 ಆರೋಪಿಗಳ ಯತ್ನ

    September 3, 2026

    ದುನಿಯಾ ವಿಜಯ್–ನಾಗರತ್ನ ಪ್ರಕರಣಕ್ಕೆ ಅಂತ್ಯ; ಹೈಕೋರ್ಟ್‌ನಿಂದ ಮಹತ್ವದ ತೀರ್ಪು

    September 3, 2026
    Social Follow
    • Facebook
    • Instagram
    © 2026 Nirantara News. Designed by Blueline Computers.
    • Home
    • ಕರಾವಳಿ ಸುದ್ದಿ
    • ಅಪರಾಧ
    • ಕರ್ನಾಟಕ
    • ರಾಷ್ಟ್ರೀಯ
    • ಅಂತರಾಷ್ಟ್ರೀಯ
    • ಸ್ಥಿರಾಸ್ತಿ ಮತ್ತು ಮೂಲಸೌಕರ್ಯ
    • ಆರೋಗ್ಯ

    Type above and press Enter to search. Press Esc to cancel.