Close Menu
    What's Hot

    ರಾಜಕೀಯ ಲಾಭಕ್ಕಾಗಿ ಸಿದ್ದರಾಮಯ್ಯ ವಿರುದ್ಧ ಬ್ಲ್ಯಾಕ್‌ಮೇಲ್ ಯತ್ನ ಆರೋಪ : ಯತೀಂದ್ರ ಸ್ಫೋಟಕ ಹೇಳಿಕೆ

    October 23, 2026

    ಬಿಲ್ ಬಾಕಿ ಇದೆ ಎಂದು ಮೃತದೇಹ ಹಸ್ತಾಂತರಕ್ಕೆ ತಡೆ ಬೇಡ ; ಖಾಸಗಿ ಆಸ್ಪತ್ರೆಗಳ ರೋಗಿಗಳ ಹಿತಕ್ಕೆ ಆರೋಗ್ಯ ಇಲಾಖೆಯ ಕ್ರಮ

    October 23, 2026

    ಉದ್ಯಮಿಗೆ ಕರೆ ಮಾಡಿ ಕೋಟ್ಯಂತರ ರೂ. ಬೇಡಿಕೆ, ಕೊಲೆ ಬೆದರಿಕೆ; ಸುಲಿಗೆ ಜಾಲದ ಮತ್ತೊಬ್ಬ ಆರೋಪಿಯ ಬಂಧನ

    October 23, 2026
    Facebook X (Twitter) Instagram
    Facebook X (Twitter) Instagram
    Nirantara News | Kannada News | Karnataka Latest UpdatesNirantara News | Kannada News | Karnataka Latest Updates
    Subscribe
    • Homepage
    • ಕರಾವಳಿ ಸುದ್ದಿ
    • ಅಪರಾಧ
    • ಕರ್ನಾಟಕ
    • ರಾಷ್ಟ್ರೀಯ
    • ಅಂತರಾಷ್ಟ್ರೀಯ
    • ಸ್ಥಿರಾಸ್ತಿ ಮತ್ತು ಮೂಲಸೌಕರ್ಯ
    • ಆರೋಗ್ಯ


    Nirantara News | Kannada News | Karnataka Latest UpdatesNirantara News | Kannada News | Karnataka Latest Updates
    Home»ಕರ್ನಾಟಕ»ವಿಜಯಪುರದಲ್ಲಿ ಭೀಕರ ದುರಂತ: ಇಬ್ಬರು ಮಕ್ಕಳು ಸೇರಿ ಒಂದೇ ಕುಟುಂಬದ 6 ಮಂದಿ ಶವವಾಗಿ ಪತ್ತೆ
    ಕರ್ನಾಟಕ

    ವಿಜಯಪುರದಲ್ಲಿ ಭೀಕರ ದುರಂತ: ಇಬ್ಬರು ಮಕ್ಕಳು ಸೇರಿ ಒಂದೇ ಕುಟುಂಬದ 6 ಮಂದಿ ಶವವಾಗಿ ಪತ್ತೆ

    adminBy adminAugust 26, 2026No Comments1 Min Read

    ವಿಜಯಪುರ : ನಗರದ ಹೊರವಲಯದಲ್ಲಿರುವ ಐತಿಹಾಸಿಕ ಭೂತನಾಳ ಕೆರೆಯಲ್ಲಿ ಇಬ್ಬರು ಮಕ್ಕಳು ಹಾಗೂ ನಾಲ್ವರು ಮಹಿಳೆಯರು ಸೇರಿ ಒಂದೇ ಕುಟುಂಬದ ಆರು ಜನರ ಮೃತದೇಹಗಳು ತೇಲುವ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಜಿಲ್ಲಾದ್ಯಂತ ತೀವ್ರ ಆಘಾತ ಮೂಡಿಸಿದೆ. ಕೆರೆಯ ಅಂಚಿನಲ್ಲಿ ಶವಗಳು ತೇಲುತ್ತಿರುವುದನ್ನು ಕಂಡ ಸ್ಥಳೀಯರು ನೀಡಿದ ಮಾಹಿತಿ ಆಧರಿಸಿ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ.

    ಘಟನಾ ಸ್ಥಳಕ್ಕೆ ನಗರ ಡಿವೈಎಸ್ಪಿ ನಾಗರಾಜ್, ಆದರ್ಶ ನಗರ ಪಿಎಸ್ಐ ಸೀತಾರಾಮ ಲಮಾಣಿ ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ದೌಡಾಯಿಸಿ ಮೃತದೇಹಗಳನ್ನು ಕೆರೆಯಿಂದ ಹೊರತೆಗೆದಿದ್ದಾರೆ.
    ಮೃತರನ್ನು ಶೋಭಾ ಜಾಲಗೇರಿ (45) ಹಾಗೂ ಆಕೆಯ ಮಕ್ಕಳಾದ ವಿದ್ಯಾ (16), ಸುವರ್ಣ (14), ಗೌಡೇಶ್ (ಮೂಗ-10), ಸಾನಿಕಾ (7) ಮತ್ತು ವಿಕಾಸ (5) ಎಂದು ಗುರುತಿಸಲಾಗಿದೆ. ಈ ಕುಟುಂಬವು ಆಗಸ್ಟ್ 24ರಿಂದ ಕಾಣೆಯಾಗಿತ್ತು ಎನ್ನಲಾಗಿದೆ.

    ಪ್ರಾಥಮಿಕ ತನಿಖೆಯ ಪ್ರಕಾರ, ಶೋಭಾ ಅವರಿಗೆ ಗಂಡ ಮಲಕಾರಿ ಭೀಮರಾಯ ಜಾಲಗೇರಿ ಜೊತೆಗೆ ತೀವ್ರ ಕೌಟುಂಬಿಕ ಜಗಳವಾಗಿತ್ತು. ಗಂಡನೊಂದಿಗೆ ಜಗಳವಾಡಿದ ನಂತರ, ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಹೇಳಿ ಶೋಭಾ ಮಕ್ಕಳೊಂದಿಗೆ ಹೊರಟು ಬಂದಿದ್ದರು ಎಂಬ ಮಾಹಿತಿ ಲಭ್ಯವಾಗಿದೆ. ಆದರೆ, ಈ ಸರಣಿ ಸಾವು ಆಕಸ್ಮಿಕವಾಗಿ ಕಾಲು ಜಾರಿ ಕೆರೆಗೆ ಬಿದ್ದು ಸಂಭವಿಸಿದೆಯೇ? ಅಥವಾ ಕೌಟುಂಬಿಕ ಜಗಳದಿಂದಾಗಿ ಮಕ್ಕಳಿಗೆ ನೀಡಿ ತಾವೂ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆಯೇ? ಇಲ್ಲವೇ ಯಾರಾದರೂ ಕೊಲೆ ಮಾಡಿ ಕೆರೆಯಲ್ಲಿ ಶವಗಳನ್ನು ಎಸೆದಿದ್ದಾರೆಯೇ ಎಂಬ ಸಾಲು ಸಾಲು ಸಂಶಯಗಳು ಸಾರ್ವಜನಿಕರಲ್ಲಿ ವ್ಯಕ್ತವಾಗಿವೆ.

    ಮರಣೋತ್ತರ ಪರೀಕ್ಷೆ ಹಾಗೂ ಪೊಲೀಸ್ ತನಿಖೆಯ ನಂತರವಷ್ಟೇ ನೈಜ ಸತ್ಯಾಂಶ ಹೊರಬರಬೇಕಿದೆ. ಈ ಕುರಿತು ಆದರ್ಶ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.




    #karnataka
    Previous Articleಅದ್ವೈತ್ ನಾಪತ್ತೆ ಪ್ರಕರಣಕ್ಕೆ ಟ್ವಿಸ್ಟ್: ಓಶೋ ವಿಚಾರ, ಡೇಟಿಂಗ್ ಆ್ಯಪ್ ಸಂಪರ್ಕದತ್ತ ಪೊಲೀಸರ ತನಿಖೆ
    Next Article 13 ವರ್ಷಗಳ ಬಳಿಕ ಮತ್ತೆ ಸದ್ದು ಮಾಡಿದ ಹೇಮಂತ್ ಪೂಜಾರಿ ಹೆಸರು: ಡೇವಿಡ್ ಹತ್ಯೆ ಪ್ರಕರಣದಲ್ಲಿ ನಂಟು, ಬದುಕಿದ್ದಾನಾ ಭೂಗತ ಪಾತಕಿ?

    Related Posts

    ರಾಜಕೀಯ ಲಾಭಕ್ಕಾಗಿ ಸಿದ್ದರಾಮಯ್ಯ ವಿರುದ್ಧ ಬ್ಲ್ಯಾಕ್‌ಮೇಲ್ ಯತ್ನ ಆರೋಪ : ಯತೀಂದ್ರ ಸ್ಫೋಟಕ ಹೇಳಿಕೆ

    October 23, 2026

    ಬಿಲ್ ಬಾಕಿ ಇದೆ ಎಂದು ಮೃತದೇಹ ಹಸ್ತಾಂತರಕ್ಕೆ ತಡೆ ಬೇಡ ; ಖಾಸಗಿ ಆಸ್ಪತ್ರೆಗಳ ರೋಗಿಗಳ ಹಿತಕ್ಕೆ ಆರೋಗ್ಯ ಇಲಾಖೆಯ ಕ್ರಮ

    October 23, 2026

    ಹಣ ಕೊಟ್ಟರೆ ಪರೀಕ್ಷೆಯಲ್ಲಿ ಫುಲ್ ಫ್ರೀಡಂ : ಕರ್ನಾಟಕ ಮುಕ್ತ ವಿಶ್ವವಿದ್ಯಾಲಯದ ಪ್ರಾದೇಶಿಕ ಕಚೇರಿಯಲ್ಲಿ ಅಕ್ರಮದ ಆರೋಪ

    October 23, 2026
    Add A Comment
    Leave A Reply Cancel Reply

    ಪ್ರಮುಖ ಸುದ್ದಿ

    ರಾಜಕೀಯ ಲಾಭಕ್ಕಾಗಿ ಸಿದ್ದರಾಮಯ್ಯ ವಿರುದ್ಧ ಬ್ಲ್ಯಾಕ್‌ಮೇಲ್ ಯತ್ನ ಆರೋಪ : ಯತೀಂದ್ರ ಸ್ಫೋಟಕ ಹೇಳಿಕೆ

    October 23, 2026

    ಬಿಲ್ ಬಾಕಿ ಇದೆ ಎಂದು ಮೃತದೇಹ ಹಸ್ತಾಂತರಕ್ಕೆ ತಡೆ ಬೇಡ ; ಖಾಸಗಿ ಆಸ್ಪತ್ರೆಗಳ ರೋಗಿಗಳ ಹಿತಕ್ಕೆ ಆರೋಗ್ಯ ಇಲಾಖೆಯ ಕ್ರಮ

    October 23, 2026

    ಉದ್ಯಮಿಗೆ ಕರೆ ಮಾಡಿ ಕೋಟ್ಯಂತರ ರೂ. ಬೇಡಿಕೆ, ಕೊಲೆ ಬೆದರಿಕೆ; ಸುಲಿಗೆ ಜಾಲದ ಮತ್ತೊಬ್ಬ ಆರೋಪಿಯ ಬಂಧನ

    October 23, 2026

    ಹೋಟೆಲ್ ಕೊಠಡಿಯಲ್ಲಿ ಸಿಎಂ ವಿಜಿಲೆನ್ಸ್‌ ಸೆಲ್‌ನ ಡಿವೈಎಸ್ಪಿ ಶವ ಪತ್ತೆ : ಭಾಗಶಃ ಕೊಳೆತ ಸ್ಥಿತಿಯಲ್ಲಿದ್ದ ಮೃತದೇಹ

    October 23, 2026
    Advertisement






    Nirantara News is powered by a team of experienced media professionals with decades of expertise in television journalism. Our mission is to be the voice of the people by delivering truthful, unbiased, and responsible news. We cover local, state, national, and international news, along with the latest updates on health, entertainment, real estate, business, technology, and more.

    Backed by experienced reporters and a strong legal team, we are committed to providing accurate news and honest reviews.

    Subscribe to Nirantara News and support trusted journalism.

    Top Insights

    ರಾಜಕೀಯ ಲಾಭಕ್ಕಾಗಿ ಸಿದ್ದರಾಮಯ್ಯ ವಿರುದ್ಧ ಬ್ಲ್ಯಾಕ್‌ಮೇಲ್ ಯತ್ನ ಆರೋಪ : ಯತೀಂದ್ರ ಸ್ಫೋಟಕ ಹೇಳಿಕೆ

    October 23, 2026

    ಬಿಲ್ ಬಾಕಿ ಇದೆ ಎಂದು ಮೃತದೇಹ ಹಸ್ತಾಂತರಕ್ಕೆ ತಡೆ ಬೇಡ ; ಖಾಸಗಿ ಆಸ್ಪತ್ರೆಗಳ ರೋಗಿಗಳ ಹಿತಕ್ಕೆ ಆರೋಗ್ಯ ಇಲಾಖೆಯ ಕ್ರಮ

    October 23, 2026
    Social Follow
    • Facebook
    • Instagram
    © 2026 Nirantara News. Designed by Blueline Computers.
    • Home
    • ಕರಾವಳಿ ಸುದ್ದಿ
    • ಅಪರಾಧ
    • ಕರ್ನಾಟಕ
    • ರಾಷ್ಟ್ರೀಯ
    • ಅಂತರಾಷ್ಟ್ರೀಯ
    • ಸ್ಥಿರಾಸ್ತಿ ಮತ್ತು ಮೂಲಸೌಕರ್ಯ
    • ಆರೋಗ್ಯ

    Type above and press Enter to search. Press Esc to cancel.