Close Menu
    What's Hot

    ಕಂಬಳ ಅಭಿವೃದ್ಧಿಗೆ ₹5 ಕೋಟಿ ವಿಶೇಷ ಅನುದಾನ: ಸಿಎಂ ಡಿ.ಕೆ. ಶಿವಕುಮಾರ್ ಭರವಸೆ

    September 5, 2026

    ಅಡುಗೆ ಮಾಡದೇ ಡ್ಯಾನ್ಸ್ ಕ್ಲಾಸ್‌ಗೆ ಹೋಗಲು ಮುಂದಾದ ಪತ್ನಿಯನ್ನ ಕೊಂದ ಪತಿ

    September 5, 2026

    ಅಷ್ಟಮಿ ಭಜನೆ ವೇಳೆ ದುರಂತ: ಭಜನೆ ಮಾಡುತ್ತಲೇ ಕುಸಿದು ಬಿದ್ದ ಯುವಕ, ಹೃದಯಾಘಾತದಿಂದ ಸಾವು

    September 5, 2026
    Facebook X (Twitter) Instagram
    Facebook X (Twitter) Instagram
    Nirantara News | Kannada News | Karnataka Latest UpdatesNirantara News | Kannada News | Karnataka Latest Updates
    Subscribe
    • Homepage
    • ಕರಾವಳಿ ಸುದ್ದಿ
    • ಅಪರಾಧ
    • ಕರ್ನಾಟಕ
    • ರಾಷ್ಟ್ರೀಯ
    • ಅಂತರಾಷ್ಟ್ರೀಯ
    • ಸ್ಥಿರಾಸ್ತಿ ಮತ್ತು ಮೂಲಸೌಕರ್ಯ
    • ಆರೋಗ್ಯ


    Nirantara News | Kannada News | Karnataka Latest UpdatesNirantara News | Kannada News | Karnataka Latest Updates
    Home»ಅಪರಾಧ»20 ವರ್ಷಗಳ ಹಿಂದಿನ ಪ್ರಕರಣದಲ್ಲಿ ಮಹತ್ವದ ತೀರ್ಪು: ಖುಲಾಸೆ ರದ್ದು, ಕೊಲೆ ಆರೋಪ ನಿಗದಿಪಡಿಸಿ ಮರು ವಿಚಾರಣೆ
    ಅಪರಾಧ

    20 ವರ್ಷಗಳ ಹಿಂದಿನ ಪ್ರಕರಣದಲ್ಲಿ ಮಹತ್ವದ ತೀರ್ಪು: ಖುಲಾಸೆ ರದ್ದು, ಕೊಲೆ ಆರೋಪ ನಿಗದಿಪಡಿಸಿ ಮರು ವಿಚಾರಣೆ

    adminBy adminSeptember 5, 2026No Comments2 Mins Read

    ಬೆಂಗಳೂರು: ಎರಡು ದಶಕಗಳ ಹಿಂದೆ ಬೆಂಗಳೂರು ದಕ್ಷಿಣ ಜಿಲ್ಲೆಯ ಚನ್ನಪಟ್ಟಣ ತಾಲೂಕಿನ ದೊಡ್ಡ ಮಳೂರು ಗ್ರಾಮದಲ್ಲಿ ಸಂಭವಿಸಿದ್ದ ತಾಯಿ ಮತ್ತು ನಾಲ್ಕೂವರೆ ವರ್ಷದ ಮಗುವಿನ ಸಾವಿನ ಪ್ರಕರಣದಲ್ಲಿ ಆರೋಪಿಗಳನ್ನು ಖುಲಾಸೆಗೊಳಿಸಿದ್ದ ವಿಚಾರಣಾ ನ್ಯಾಯಾಲಯದ ಆದೇಶವನ್ನು ಹೈಕೋರ್ಟ್​ ರದ್ದುಪಡಿಸಿದೆ.

    ಪ್ರಕರಣವನ್ನು ನಾಲ್ಕು ತಿಂಗಳೊಳಗೆ ಹೊಸದಾಗಿ ವಿಚಾರಣೆ ನಡೆಸುವಂತೆ ವಿಚಾರಣಾ ನ್ಯಾಯಾಲಯಕ್ಕೆ ವಾಪಸ್​ ಕಳಿಸಿದೆ.
    ಖುಲಾಸೆ ತೀರ್ಪು ಪ್ರಶ್ನಿಸಿ ಮೃತ ಮಹಿಳೆಯ ತಂದೆ ಮತ್ತು ರಾಜ್ಯ ಸರ್ಕಾರ ಸಲ್ಲಿಸಿದ್ದ ಮೇಲ್ಮನವಿಗಳನ್ನು ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಎಚ್​.ಪಿ. ಸಂದೇಶ್​ ಮತ್ತು ಬಿ. ಪ್ರಮೋದ್​ ಅವರಿದ್ದ ವಿಭಾಗೀಯ ನ್ಯಾಯಪೀಠ ಈ ತೀರ್ಪು ನೀಡಿದೆ. ಕೊಲೆ ಆರೋಪವನ್ನು ನಿಗದಿಪಡಿಸಿ, ಹೊಸದಾಗಿ ವಿಚಾರಣೆ ನಡೆಬೇಕು ಎಂದು ವಿಚಾರಣಾ ನ್ಯಾಯಾಲಯಕ್ಕೆ ನಿರ್ದೇಶನ ನೀಡಲಾಗಿದೆ.ಮೃತಪಟ್ಟ ತಾಯಿ ಮತ್ತು ಮಗುವಿನ ದೇಹದ ಮೇಲೆ ಗಾಯದ ಗುರುತುಗಳಿದ್ದರೂ ತನಿಖಾಧಿಕಾರಿಗಳು ಮತ್ತು ಮರಣೋತ್ತರ ಪರೀಕ್ಷೆ ನಡೆಸಿದ ವೈದ್ಯರು ಸರಿಯಾಗಿ ಗುರುತಿಸಿ ನ್ಯಾಯಾಲಯಕ್ಕೆ ತಿಳಿಸಿಲ್ಲ. ವಿಚಾರಣಾ ನ್ಯಾಯಾಲಯವೂ ಸಾಕ್ಷಿಗಳ ಬಗ್ಗೆ ಪ್ರಶ್ನಿಸದೇ ಮೂಕಪ್ರೇಕ್ಷಕನಂತೆ ವರ್ತಿಸಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದೆ.

    ಪ್ರಕರಣದ ಹಿನ್ನೆಲೆ:

    ಮಧು ಅವರ ವಿವಾಹವು 1998ರಲ್ಲಿ ಕೆ. ನಾಗರಾಜ ಎಂಬುವವರೊಂದಿಗೆ ನಡೆದಿತ್ತು. ಮದುವೆ ಬಳಿಕ ಪತಿ ನಾಗರಾಜ, ಅತ್ತೆ ಪುಟ್ಟಮ್ಮ ಮತ್ತು ಮೈದುನ ಶ್ರೀಮಾನ್​ ಹೆಚ್ಚಿನ ವರದಕ್ಷಿಣೆಗಾಗಿ ನಿರಂತರ ಮಾನಸಿಕ ಮತ್ತು ದೈಹಿಕ ಕಿರುಕುಳ ನೀಡುತ್ತಿದ್ದರು ಎಂದು ಆರೋಪಿಸಲಾಗಿದೆ. 2004ರ ಅ.6ರಂದು ಮಧು ಮತ್ತು ಅವರ ನಾಲ್ಕೂವರೆ ವರ್ಷದ ಮಗನ ಶವಗಳು ಮನೆಯಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದವು.
    ತನಿಖೆ ನಡೆಸಿದ ವರದಕ್ಷಿಣೆ ನಿಗ್ರಹ ದಳವು ಕೇವಲ ವರದಕ್ಷಿಣೆ ಸಾವು ಮತ್ತು ಆತ್ಮಹತ್ಯೆಗೆ ಪ್ರಚೋದನೆ ಸೆಕ್ಷನ್​ಗಳ ಅಡಿಯಲ್ಲಿ ಮಾತ್ರ ಪತಿ, ಮೈದುನ ಮತ್ತು ಅತ್ತೆ ವಿರುದ್ಧ ಆರೋಪಪಟ್ಟಿ ಸಲ್ಲಿಸಿತ್ತು. ಇದನ್ನು ವಿರೋಧಿಸಿದ ಮೃತ ಮಹಿಳೆಯ ತಂದೆ ಶಿವಣ್ಣ ನ್ಯಾಯಾಲಯದಲ್ಲಿ ಖಾಸಗಿ ದೂರು ದಾಖಲಿಸಿದ್ದರು. ಆ ದೂರು ಆಧರಿಸಿದ ಪ್ರಕರಣ ಮತ್ತು ಪೊಲೀಸರು ದಾಖಲಿಸಿಕೊಂಡಿದ್ದ ಪ್ರತ್ಯೇಕ ಪ್ರಕರಣಗಳಲ್ಲೂ ಆರೋಪಿಗಳನ್ನು ಖುಲಾಸೆಗೊಳಿಸಿತ್ತು. ಈ ಆದೇಶಗಳನ್ನು ಪ್ರಶ್ನಿಸಿ ರಾಜ್ಯಸರ್ಕಾರ ಮತ್ತು ದೂರುದಾರರು ಹೈಕೋರ್ಟ್​ಗೆ ಮೆಲ್ಮನವಿ ಸಲ್ಲಿಸಿದ್ದರು.

    ತನಿಖಾಧಿಕಾರಿಗಳಿಗೆ ತರಬೇತಿ

    ಭವಿಷ್ಯದಲ್ಲಿ ತನಿಖಾ ಮತ್ತು ವಿಚಾರಣ ಹಂತದಲ್ಲಿ ಲೋಪ ಉಂಟಾಗದಿರಲು ತನಿಖಾಧಿಕಾರಿಗಳು ಮತ್ತು ವೈದ್ಯರಿಗೆ ಸೂಕ್ತ ತರಬೇತಿ ನೀಡಬೇಕು ಎಂದು ಪೊಲೀಸ್​ ಮಹಾ ನಿರ್ದೇಶಕರು ಮತ್ತು ಆರೋಗ್ಯ ಇಲಾಖೆ ಕಾರ್ಯದರ್ಶಿಗೆ ನಿರ್ದೇಶನ ನೀಡಲಾಗಿದೆ. ಅಲ್ಲದೆ, ಈ ಪ್ರಕರಣದ ತನಿಖಾಧಿಕಾರಿ ಮತ್ತು ವೈದ್ಯರ ವಿರುದ್ಧ ಶಿಸ್ತುಕ್ರಮಕ್ಕೆ ಸೂಚಿಸಲಾಗಿದೆ.




    #crime #karnataka
    Previous Articleಪಟಾಕಿ ಸಂಗ್ರಹಿಸಿದ್ದ ಸೇನಾ ನೆಲೆಯಲ್ಲಿ ಸ್ಫೋಟ: ಸಾವಿನ ಸಂಖ್ಯೆ 15ಕ್ಕೆ ಏರಿಕೆ
    Next Article ಅಷ್ಟಮಿ ಭಜನೆ ವೇಳೆ ದುರಂತ: ಭಜನೆ ಮಾಡುತ್ತಲೇ ಕುಸಿದು ಬಿದ್ದ ಯುವಕ, ಹೃದಯಾಘಾತದಿಂದ ಸಾವು

    Related Posts

    ಕಂಬಳ ಅಭಿವೃದ್ಧಿಗೆ ₹5 ಕೋಟಿ ವಿಶೇಷ ಅನುದಾನ: ಸಿಎಂ ಡಿ.ಕೆ. ಶಿವಕುಮಾರ್ ಭರವಸೆ

    September 5, 2026

    ಅಡುಗೆ ಮಾಡದೇ ಡ್ಯಾನ್ಸ್ ಕ್ಲಾಸ್‌ಗೆ ಹೋಗಲು ಮುಂದಾದ ಪತ್ನಿಯನ್ನ ಕೊಂದ ಪತಿ

    September 5, 2026

    ನಗರಕ್ಕೆ ಗಡಿಪಾರು ಮಾಡಿದ್ದರೂ ವಾಪಸ್ ಎಂಟ್ರಿ: ಬೆದರಿಸಿ ಸುಲಿಗೆ ಮಾಡುತ್ತಿದ್ದ ರೌಡಿಶೀಟರ್ ಗ್ಯಾಂಗ್ ನ ಬಂಧನ

    September 5, 2026
    Add A Comment
    Leave A Reply Cancel Reply

    ಪ್ರಮುಖ ಸುದ್ದಿ

    ಕಂಬಳ ಅಭಿವೃದ್ಧಿಗೆ ₹5 ಕೋಟಿ ವಿಶೇಷ ಅನುದಾನ: ಸಿಎಂ ಡಿ.ಕೆ. ಶಿವಕುಮಾರ್ ಭರವಸೆ

    September 5, 2026

    ಅಡುಗೆ ಮಾಡದೇ ಡ್ಯಾನ್ಸ್ ಕ್ಲಾಸ್‌ಗೆ ಹೋಗಲು ಮುಂದಾದ ಪತ್ನಿಯನ್ನ ಕೊಂದ ಪತಿ

    September 5, 2026

    ಅಷ್ಟಮಿ ಭಜನೆ ವೇಳೆ ದುರಂತ: ಭಜನೆ ಮಾಡುತ್ತಲೇ ಕುಸಿದು ಬಿದ್ದ ಯುವಕ, ಹೃದಯಾಘಾತದಿಂದ ಸಾವು

    September 5, 2026

    20 ವರ್ಷಗಳ ಹಿಂದಿನ ಪ್ರಕರಣದಲ್ಲಿ ಮಹತ್ವದ ತೀರ್ಪು: ಖುಲಾಸೆ ರದ್ದು, ಕೊಲೆ ಆರೋಪ ನಿಗದಿಪಡಿಸಿ ಮರು ವಿಚಾರಣೆ

    September 5, 2026
    Advertisement






    Nirantara News is powered by a team of experienced media professionals with decades of expertise in television journalism. Our mission is to be the voice of the people by delivering truthful, unbiased, and responsible news. We cover local, state, national, and international news, along with the latest updates on health, entertainment, real estate, business, technology, and more.

    Backed by experienced reporters and a strong legal team, we are committed to providing accurate news and honest reviews.

    Subscribe to Nirantara News and support trusted journalism.

    Top Insights

    ಕಂಬಳ ಅಭಿವೃದ್ಧಿಗೆ ₹5 ಕೋಟಿ ವಿಶೇಷ ಅನುದಾನ: ಸಿಎಂ ಡಿ.ಕೆ. ಶಿವಕುಮಾರ್ ಭರವಸೆ

    September 5, 2026

    20 ವರ್ಷಗಳ ಹಿಂದಿನ ಪ್ರಕರಣದಲ್ಲಿ ಮಹತ್ವದ ತೀರ್ಪು: ಖುಲಾಸೆ ರದ್ದು, ಕೊಲೆ ಆರೋಪ ನಿಗದಿಪಡಿಸಿ ಮರು ವಿಚಾರಣೆ

    September 5, 2026
    Social Follow
    • Facebook
    • Instagram
    © 2026 Nirantara News. Designed by Blueline Computers.
    • Home
    • ಕರಾವಳಿ ಸುದ್ದಿ
    • ಅಪರಾಧ
    • ಕರ್ನಾಟಕ
    • ರಾಷ್ಟ್ರೀಯ
    • ಅಂತರಾಷ್ಟ್ರೀಯ
    • ಸ್ಥಿರಾಸ್ತಿ ಮತ್ತು ಮೂಲಸೌಕರ್ಯ
    • ಆರೋಗ್ಯ

    Type above and press Enter to search. Press Esc to cancel.