Close Menu
    What's Hot

    ಅಂಗನವಾಡಿ ಮಕ್ಕಳ ಆಹಾರದ ಗುಣಮಟ್ಟಕ್ಕೆ ಖಾದರ್ ಕಟ್ಟುನಿಟ್ಟಿನ ಕ್ರಮ: ಆಹಾರ ಮಾದರಿ ಲ್ಯಾಬ್‌ಗೆ ರವಾನೆ

    September 16, 2026

    ಮದುವೆಯಾಗಿ ತಿಂಗಳಲ್ಲೇ ಅಂತ್ಯ: ಹಿಟ್ ಆ್ಯಂಡ್ ರನ್‌ಗೆ ದಂಪತಿ ಸಾವು

    September 16, 2026

    ಪತ್ನಿಯ ಪಾರ್ಥಿವ ಶರೀರದ ಪಕ್ಕದಲ್ಲಿ ಪ್ರಾರ್ಥಿಸುತ್ತಿದ್ದಾಗಲೇ ವೃದ್ಧ ಸಾವು: ಕೆಲವೇ ಗಂಟೆಗಳ ಅಂತರದ ಸಾವಲ್ಲೂ ಒಂದಾದ ಜೋಡಿ

    September 16, 2026
    Facebook X (Twitter) Instagram
    Facebook X (Twitter) Instagram
    Nirantara News | Kannada News | Karnataka Latest UpdatesNirantara News | Kannada News | Karnataka Latest Updates
    Subscribe
    • Homepage
    • ಕರಾವಳಿ ಸುದ್ದಿ
    • ಅಪರಾಧ
    • ಕರ್ನಾಟಕ
    • ರಾಷ್ಟ್ರೀಯ
    • ಅಂತರಾಷ್ಟ್ರೀಯ
    • ಸ್ಥಿರಾಸ್ತಿ ಮತ್ತು ಮೂಲಸೌಕರ್ಯ
    • ಆರೋಗ್ಯ


    Nirantara News | Kannada News | Karnataka Latest UpdatesNirantara News | Kannada News | Karnataka Latest Updates
    Home»ಅಪರಾಧ»ಚೆಕ್ ಬೌನ್ಸ್ ಪ್ರಕರಣದಲ್ಲಿ ರಾಜ್‌ಪಾಲ್ ಯಾದವ್‌ಗೆ ಸುಪ್ರೀಂ ಕೋರ್ಟ್‌ ಕ್ಲಾಸ್: ₹2 ಕೋಟಿ ಠೇವಣಿಗೆ ಆದೇಶ
    ಅಪರಾಧ

    ಚೆಕ್ ಬೌನ್ಸ್ ಪ್ರಕರಣದಲ್ಲಿ ರಾಜ್‌ಪಾಲ್ ಯಾದವ್‌ಗೆ ಸುಪ್ರೀಂ ಕೋರ್ಟ್‌ ಕ್ಲಾಸ್: ₹2 ಕೋಟಿ ಠೇವಣಿಗೆ ಆದೇಶ

    adminBy adminSeptember 16, 2026No Comments2 Mins Read

    ನವದೆಹಲಿ: ಭಾರಿ ಚರ್ಚೆಗೆ ಗ್ರಾಸವಾಗಿರುವ ₹5 ಕೋಟಿ ಚೆಕ್ ಬೌನ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಿವುಡ್ ನಟ ರಾಜ್‌ಪಾಲ್ ಯಾದವ್ಅವರನ್ನು ಸುಪ್ರೀಂ ಕೋರ್ಟ್ ಮಂಗಳವಾರ ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದೆ. “ನೀವು ಸಿನಿಮಾದಲ್ಲಿ ಮಾತ್ರವಲ್ಲ, ನ್ಯಾಯಾಲಯದಲ್ಲೂ ನಾಟಕ ಮಾಡುವುದರಲ್ಲಿ ಪರಿಪೂರ್ಣರು” ಎಂದು ಪೀಠವು ಖಾರವಾಗಿ ಟೀಕಿಸಿದೆ.

    ಮುರಳಿ ಪ್ರೊಡಕ್ಷನ್ಸ್ ಮಾಲೀಕರಿಂದ ಪಡೆದಿದ್ದ ಸಾಲದ ಬಾಕಿ ಮರುಪಾವತಿ ಮಾಡದ ಹಿನ್ನೆಲೆಯಲ್ಲಿ ನಟ ರಾಜ್‌ಪಾಲ್ ಯಾದವ್ ಪ್ರಸ್ತುತ ಕಾನೂನು ಸಂಕಷ್ಟ ಎದುರಿಸುತ್ತಿದ್ದು, ಜಾಮೀನಿನ ಮೇಲೆ ಹೊರಗಿದ್ದಾರೆ.
    ಸದರಿ ಪ್ರಕರಣದ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ನೇತೃತ್ವದ ಸುಪ್ರೀಂ ಕೋರ್ಟ್ ಪೀಠವು, ನಟ ರಾಜ್‌ಪಾಲ್ ಯಾದವ್ ಅವರಿಗೆ ಮುಂದಿನ ಎರಡು ವಾರಗಳ ಒಳಗಾಗಿ ಸುಪ್ರೀಂ ಕೋರ್ಟ್ ರಿಜಿಸ್ಟ್ರಿಯಲ್ಲಿ ಕನಿಷ್ಠ ₹2 ಕೋಟಿ ರೂಪಾಯಿ ಠೇವಣಿ ಇಡುವಂತೆ ಕಟ್ಟಪ್ಪಣೆ ಮಾಡಿದೆ.

    ವಿಚಾರಣೆ ವೇಳೆ ನಟನ ನಡವಳಿಕೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಪೀಠ, “ಅವರ ಹಿಂದಿನ ನಡವಳಿಕೆಯನ್ನು ನೋಡಿದರೆ ಯಾರಾದರೂ ಅವರನ್ನು ಹೇಗೆ ನಂಬಲು ಸಾಧ್ಯ? ಅವರು ಬಾಲಿವುಡ್‌ನಲ್ಲಿ ನಾಟಕ ಮತ್ತು ನಟನೆಯಲ್ಲಿ ಪರಿಪೂರ್ಣರು, ಇಲ್ಲಿ ನ್ಯಾಯಾಲಯದ ಮುಂಭಾಗದಲ್ಲೂ ಅದನ್ನೇ ಮಾಡುತ್ತಿದ್ದಾರೆ” ಎಂದು ಕಿಡಿಕಾರಿತು. ದೂರುದಾರರ ಪ್ರಕಾರ, ರಾಜ್‌ಪಾಲ್ ಯಾದವ್ ಅವರು 2010 ರಲ್ಲಿ ಸಿನಿಮಾವೊಂದರ ನಿರ್ಮಾಣಕ್ಕಾಗಿ ₹5 ಕೋಟಿ ಸಾಲ ಪಡೆದಿದ್ದರು. ಅದನ್ನು ಮರುಪಾವತಿಸಲು 2013 ರಲ್ಲಿ ತಲಾ ₹1.05 ಕೋಟಿ ಮೌಲ್ಯದ ಏಳು ಚೆಕ್‌ಗಳನ್ನು ನೀಡಿದ್ದು, ಅವೆಲ್ಲವೂ ಬೌನ್ಸ್ ಆಗಿದ್ದವು.

    ನಂತರ 2012 ರಲ್ಲಿ ನಡೆದ ಒಪ್ಪಂದದಂತೆ ಯಾದವ್, ಅವರ ಪತ್ನಿ ಹಾಗೂ ಅವರ ಕಂಪನಿಯು ಬಡ್ಡಿ ಸೇರಿ ಒಟ್ಟು ₹11 ಕೋಟಿ ಪಾವತಿಸಲು ಒಪ್ಪಿಕೊಂಡಿದ್ದರು. ಆದರೆ ಮಾತು ತಪ್ಪಿದ ಹಿನ್ನೆಲೆಯಲ್ಲಿ ಮುರಳಿ ಪ್ರೊಡಕ್ಷನ್ಸ್ ಮಾಲೀಕರು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು. ನ್ಯಾಯಾಲಯದಲ್ಲಿ ನಟನ ಪರ ವಕೀಲರು ಮಾತನಾಡಿ, ನಿಗದಿತ ಗಡುವಿನೊಳಗೆ ರಾಜ್‌ಪಾಲ್ ಯಾದವ್ ಅವರು ಕನಿಷ್ಠ ₹2 ಕೋಟಿ ಠೇವಣಿ ಇಡಲಿದ್ದಾರೆ ಹಾಗೂ ಬಾಕಿ ಮೊತ್ತಕ್ಕೆ ಶ್ಯೂರಿಟಿ ನೀಡಲಿದ್ದಾರೆ ಎಂದು ಪೀಠಕ್ಕೆ ಭರವಸೆ ನೀಡಿದರು. ವಕೀಲರ ಮನವಿಯನ್ನು ಪುರಸ್ಕರಿಸಿದ ನ್ಯಾಯಪೀಠವು ನಟನಿಗೆ 2 ವಾರಗಳ ಕಾಲಾವಕಾಶ ನೀಡಿ, ವಿಚಾರಣೆಯನ್ನು ಅಕ್ಟೋಬರ್ 5ಕ್ಕೆ ಮುಂದೂಡಿದೆ. ಜೊತೆಗೆ ಅಲ್ಲಿಯವರೆಗೆ ನಟನಿಗೆ ಬಂಧನದಿಂದ ಮಧ್ಯಂತರ ವಿನಾಯಿತಿ ನೀಡಿದೆ.




    #crime #national
    Previous Articleಆನೆಗುಡ್ಡೆ ದೇವಸ್ಥಾನದಲ್ಲಿ ಕಳ್ಳಿಯರ ಕೈಚಳಕ: 75ರ ವೃದ್ಧೆಯ 2.5 ಲಕ್ಷ ರೂ. ಚಿನ್ನದ ಸರ ಕಳವು
    Next Article 14 ದಿನಗಳಲ್ಲಿ 8 ಅಪ್ರಾಪ್ತ ಮಕ್ಕಳ ರಕ್ಷಣೆ: ರೈಲು ನಿಲ್ದಾಣಗಳಲ್ಲಿ ಆರ್‌ಪಿಎಫ್ ವಿಶೇಷ ಕಾರ್ಯಾಚರಣೆ

    Related Posts

    ಮದುವೆಯಾಗಿ ತಿಂಗಳಲ್ಲೇ ಅಂತ್ಯ: ಹಿಟ್ ಆ್ಯಂಡ್ ರನ್‌ಗೆ ದಂಪತಿ ಸಾವು

    September 16, 2026

    ಪತ್ನಿಯ ಪಾರ್ಥಿವ ಶರೀರದ ಪಕ್ಕದಲ್ಲಿ ಪ್ರಾರ್ಥಿಸುತ್ತಿದ್ದಾಗಲೇ ವೃದ್ಧ ಸಾವು: ಕೆಲವೇ ಗಂಟೆಗಳ ಅಂತರದ ಸಾವಲ್ಲೂ ಒಂದಾದ ಜೋಡಿ

    September 16, 2026

    14 ದಿನಗಳಲ್ಲಿ 8 ಅಪ್ರಾಪ್ತ ಮಕ್ಕಳ ರಕ್ಷಣೆ: ರೈಲು ನಿಲ್ದಾಣಗಳಲ್ಲಿ ಆರ್‌ಪಿಎಫ್ ವಿಶೇಷ ಕಾರ್ಯಾಚರಣೆ

    September 16, 2026
    Add A Comment
    Leave A Reply Cancel Reply

    ಪ್ರಮುಖ ಸುದ್ದಿ

    ಅಂಗನವಾಡಿ ಮಕ್ಕಳ ಆಹಾರದ ಗುಣಮಟ್ಟಕ್ಕೆ ಖಾದರ್ ಕಟ್ಟುನಿಟ್ಟಿನ ಕ್ರಮ: ಆಹಾರ ಮಾದರಿ ಲ್ಯಾಬ್‌ಗೆ ರವಾನೆ

    September 16, 2026

    ಮದುವೆಯಾಗಿ ತಿಂಗಳಲ್ಲೇ ಅಂತ್ಯ: ಹಿಟ್ ಆ್ಯಂಡ್ ರನ್‌ಗೆ ದಂಪತಿ ಸಾವು

    September 16, 2026

    ಪತ್ನಿಯ ಪಾರ್ಥಿವ ಶರೀರದ ಪಕ್ಕದಲ್ಲಿ ಪ್ರಾರ್ಥಿಸುತ್ತಿದ್ದಾಗಲೇ ವೃದ್ಧ ಸಾವು: ಕೆಲವೇ ಗಂಟೆಗಳ ಅಂತರದ ಸಾವಲ್ಲೂ ಒಂದಾದ ಜೋಡಿ

    September 16, 2026

    ಮಕ್ಕಾದಲ್ಲಿ ಮೊದಲ ಬಾರಿಗೆ ವಾಯುದಾಳಿ ಎಚ್ಚರಿಕೆ: ಹೌತಿ ಕ್ಷಿಪಣಿ, ಡ್ರೋನ್ ದಾಳಿ ಬೆನ್ನಲ್ಲೇ ಸೈರನ್

    September 16, 2026
    Advertisement






    Nirantara News is powered by a team of experienced media professionals with decades of expertise in television journalism. Our mission is to be the voice of the people by delivering truthful, unbiased, and responsible news. We cover local, state, national, and international news, along with the latest updates on health, entertainment, real estate, business, technology, and more.

    Backed by experienced reporters and a strong legal team, we are committed to providing accurate news and honest reviews.

    Subscribe to Nirantara News and support trusted journalism.

    Top Insights

    ಮದುವೆಯಾಗಿ ತಿಂಗಳಲ್ಲೇ ಅಂತ್ಯ: ಹಿಟ್ ಆ್ಯಂಡ್ ರನ್‌ಗೆ ದಂಪತಿ ಸಾವು

    September 16, 2026

    14 ದಿನಗಳಲ್ಲಿ 8 ಅಪ್ರಾಪ್ತ ಮಕ್ಕಳ ರಕ್ಷಣೆ: ರೈಲು ನಿಲ್ದಾಣಗಳಲ್ಲಿ ಆರ್‌ಪಿಎಫ್ ವಿಶೇಷ ಕಾರ್ಯಾಚರಣೆ

    September 16, 2026
    Social Follow
    • Facebook
    • Instagram
    © 2026 Nirantara News. Designed by Blueline Computers.
    • Home
    • ಕರಾವಳಿ ಸುದ್ದಿ
    • ಅಪರಾಧ
    • ಕರ್ನಾಟಕ
    • ರಾಷ್ಟ್ರೀಯ
    • ಅಂತರಾಷ್ಟ್ರೀಯ
    • ಸ್ಥಿರಾಸ್ತಿ ಮತ್ತು ಮೂಲಸೌಕರ್ಯ
    • ಆರೋಗ್ಯ

    Type above and press Enter to search. Press Esc to cancel.