Close Menu
    What's Hot

    ಸೆ.18ರಂದು ಮಂಗಳೂರಿನಲ್ಲಿ ಸಚಿವ ಸಂಪುಟ ಸಭೆ: ಗಣ್ಯರ ಸಂಚಾರಕ್ಕೆ ಸಿದ್ಧತೆ, ಸಾರ್ವಜನಿಕರಿಗೆ ಪರ್ಯಾಯ ಮಾರ್ಗ ಸೂಚನೆ

    September 16, 2026

    ‘ಟಾಸ್’ನ ಮಾಸ್ ಎಂಟ್ರಿ, ಪ್ರೇಕ್ಷಕರಿಂದ ಭರ್ಜರಿ ರೆಸ್ಪಾನ್ಸ್: ಗೆಲುವಿನತ್ತ ಮೊದಲ ಹೆಜ್ಜೆ

    September 16, 2026

    ಆಸ್ತಿ ಪಾಲಿಗೆ ಅರ್ಜಿ ಸಲ್ಲಿಸಲು ಬಂದ ತಂದೆ-ಮಗಳು ಗ್ರಾಮ ಪಂಚಾಯಿತಿಯಲ್ಲೇ ಬರ್ಬರ ಹತ್ಯೆ

    September 16, 2026
    Facebook X (Twitter) Instagram
    Facebook X (Twitter) Instagram
    Nirantara News | Kannada News | Karnataka Latest UpdatesNirantara News | Kannada News | Karnataka Latest Updates
    Subscribe
    • Homepage
    • ಕರಾವಳಿ ಸುದ್ದಿ
    • ಅಪರಾಧ
    • ಕರ್ನಾಟಕ
    • ರಾಷ್ಟ್ರೀಯ
    • ಅಂತರಾಷ್ಟ್ರೀಯ
    • ಸ್ಥಿರಾಸ್ತಿ ಮತ್ತು ಮೂಲಸೌಕರ್ಯ
    • ಆರೋಗ್ಯ


    Nirantara News | Kannada News | Karnataka Latest UpdatesNirantara News | Kannada News | Karnataka Latest Updates
    Home»ಅಪರಾಧ»ಜೈಲಿನಲ್ಲಿ ಪ್ರದೋಷ್‌ನ ‘ಕಳ್ಳಾಟ’ ಬಯಲು: ರೇಣುಕಾಸ್ವಾಮಿ ಪ್ರಕರಣದ ಆರೋಪಿಗೆ ಮತ್ತೊಂದು ಸಂಕಷ್ಟ
    ಅಪರಾಧ

    ಜೈಲಿನಲ್ಲಿ ಪ್ರದೋಷ್‌ನ ‘ಕಳ್ಳಾಟ’ ಬಯಲು: ರೇಣುಕಾಸ್ವಾಮಿ ಪ್ರಕರಣದ ಆರೋಪಿಗೆ ಮತ್ತೊಂದು ಸಂಕಷ್ಟ

    adminBy adminSeptember 16, 2026Updated:September 16, 2026No Comments1 Min Read

    ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ 14ನೇ ಆರೋಪಿಯಾಗಿರುವ ಪ್ರದೋಷ್‌ ಇದೀಗ ಮತ್ತೊಂದು ಪ್ರಕರಣದಲ್ಲಿ ಸಿಲುಕಿದ್ದಾರೆ. ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿರುವ ಅವರು, ಜೈಲು ನಿಯಮಗಳನ್ನು ಮೀರಿ ಅನುಮತಿ ಇಲ್ಲದ ದೂರವಾಣಿ ಸಂಖ್ಯೆಯನ್ನು ಬಳಸಿಕೊಂಡು ಕರೆ ಮಾಡುತ್ತಿದ್ದ ಆರೋಪ ಕೇಳಿಬಂದಿದೆ.

    ಈ ಅಕ್ರಮಕ್ಕೆ ಜೈಲು ಸಿಬ್ಬಂದಿಯೊಬ್ಬರು ನೆರವು ನೀಡಿದ್ದಾರೆ ಎಂಬುದು ತನಿಖೆಯಿಂದ ಗೊತ್ತಾಗಿದೆ.

    ಜೈಲಿನಲ್ಲಿರುವ ವಿಚಾರಣಾಧೀನ ಕೈದಿಗಳಿಗೆ ವಕೀಲರು ಹಾಗೂ ಕುಟುಂಬದ ಸದಸ್ಯರೊಂದಿಗೆ ಮಾತನಾಡಲು ನಿಯಮಾನುಸಾರ ದೂರವಾಣಿ ಸೌಲಭ್ಯ ಕಲ್ಪಿಸಲಾಗುತ್ತದೆ. ಇದಕ್ಕಾಗಿ ಕೈದಿಗಳು ತಮ್ಮ ಬಳಕೆಯಲ್ಲಿರುವ ಗರಿಷ್ಠ ಮೂರು ಮೊಬೈಲ್‌ ಸಂಖ್ಯೆಗಳನ್ನು ಜೈಲು ಆಡಳಿತಕ್ಕೆ ನೋಂದಾಯಿಸಬೇಕು. ಪರಿಶೀಲನೆ ಬಳಿಕ ಅನುಮೋದನೆ ಪಡೆದ ಸಂಖ್ಯೆಗಳಿಗಷ್ಟೇ ಕರೆ ಮಾಡುವ ಅವಕಾಶವಿರುತ್ತದೆ.

    ಆದರೆ, ಪ್ರದೋಷ್‌ ವಿಚಾರದಲ್ಲಿ ಈ ವ್ಯವಸ್ಥೆಯನ್ನು ತಪ್ಪಾಗಿ ಬಳಸಿಕೊಂಡಿರುವ ಆರೋಪವಿದೆ. ಜೈಲು ಸಿಬ್ಬಂದಿ ಮೌನೇಶ್‌ ಹೆಚ್. ಕೋರಿ ಅವರ ಸಹಕಾರದಿಂದ ಮತ್ತೊಬ್ಬ ಕೈದಿಯ ಹೆಸರಿನಲ್ಲಿ ನೋಂದಾಯಿಸಿದ್ದ ಸಂಖ್ಯೆಯನ್ನು ಪ್ರದೋಷ್‌ ಬಳಸಿಕೊಂಡಿದ್ದಾರೆ ಎನ್ನಲಾಗಿದೆ. ಅಲ್ಲದೆ, ಆ ಸಂಖ್ಯೆಯನ್ನು ವಕೀಲರ ಸಂಪರ್ಕ ಸಂಖ್ಯೆ ಎಂದು ದಾಖಲಿಸಿ, ಅದೇ ಮೂಲಕ ಪತ್ನಿಯೊಂದಿಗೆ ಖಾಸಗಿ ಮಾತುಕತೆ ನಡೆಸುತ್ತಿದ್ದರು ಎಂಬ ಮಾಹಿತಿ ತನಿಖೆಯಲ್ಲಿ ಹೊರಬಂದಿದೆ.

    ಕೈದಿಗಳ ದೂರವಾಣಿ ಬಳಕೆಯ ಮೇಲ್ವಿಚಾರಣೆ ವೇಳೆ ಅನುಮಾನಾಸ್ಪದ ಸಂಪರ್ಕದ ಮಾಹಿತಿ ಅಧಿಕಾರಿಗಳ ಗಮನಕ್ಕೆ ಬಂದಿದೆ. ಬಳಿಕ ನಡೆಸಿದ ಆಂತರಿಕ ಪರಿಶೀಲನೆಯಲ್ಲಿ ನಿಯಮ ಉಲ್ಲಂಘನೆಯ ಮಾಹಿತಿ ಪತ್ತೆಯಾಗಿದೆ. ಇದರ ಬೆನ್ನಲ್ಲೇ ಜೈಲು ಸಿಬ್ಬಂದಿ ಮೌನೇಶ್‌ ಹೆಚ್. ಕೋರಿ ಮತ್ತು ಆರೋಪಿ ಪ್ರದೋಷ್‌ ವಿರುದ್ಧ ಪರಪ್ಪನ ಅಗ್ರಹಾರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

    ಪ್ರಕರಣದಲ್ಲಿ ಜೈಲು ಸಿಬ್ಬಂದಿಯ ಪಾತ್ರವೇನು, ಅನುಮತಿ ಇಲ್ಲದ ಸಂಖ್ಯೆಯಿಂದ ಎಷ್ಟು ಕರೆಗಳನ್ನು ಮಾಡಲಾಗಿದೆ ಮತ್ತು ಈ ಅಕ್ರಮದಲ್ಲಿ ಬೇರೆಯವರ ಪಾತ್ರವಿದೆಯೇ ಎಂಬುದರ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಕರೆಗಳ ವಿವರಗಳು ಹಾಗೂ ಸಂಬಂಧಿತ ದಾಖಲೆಗಳನ್ನು ಪರಿಶೀಲಿಸುವ ಕಾರ್ಯವೂ ಮುಂದುವರಿದಿದೆ.

     

     




    #crime #karnataka
    Previous Articleಅಂಗನವಾಡಿ ಮಕ್ಕಳ ಆಹಾರದ ಗುಣಮಟ್ಟಕ್ಕೆ ಖಾದರ್ ಕಟ್ಟುನಿಟ್ಟಿನ ಕ್ರಮ: ಆಹಾರ ಮಾದರಿ ಲ್ಯಾಬ್‌ಗೆ ರವಾನೆ
    Next Article ಜ್ಯೋತಿಷ್ಯ ಹೇಳಿ ವೃದ್ಧೆಯ ವಿಶ್ವಾಸ ಗಳಿಸಿದ ಖತರ್ನಾಕ್ ವಂಚಕ: 40 ಲಕ್ಷ ರೂ. ಚಿನ್ನದ ಬಳಿಕ ಎಐ ವೀಡಿಯೋ ಡ್ರಾಮಾ

    Related Posts

    ‘ಟಾಸ್’ನ ಮಾಸ್ ಎಂಟ್ರಿ, ಪ್ರೇಕ್ಷಕರಿಂದ ಭರ್ಜರಿ ರೆಸ್ಪಾನ್ಸ್: ಗೆಲುವಿನತ್ತ ಮೊದಲ ಹೆಜ್ಜೆ

    September 16, 2026

    ಆಸ್ತಿ ಪಾಲಿಗೆ ಅರ್ಜಿ ಸಲ್ಲಿಸಲು ಬಂದ ತಂದೆ-ಮಗಳು ಗ್ರಾಮ ಪಂಚಾಯಿತಿಯಲ್ಲೇ ಬರ್ಬರ ಹತ್ಯೆ

    September 16, 2026

    ಸಾರ್ವಜನಿಕವಾಗಿ ಯುವತಿಗೆ ಕಿರುಕುಳ ನೀಡುತ್ತಿದ್ದ ಯುವಕನ ಬಂಧನ: ಅಕ್ಕ ಪಡೆಯ ಕಾರ್ಯಾಚರಣೆ

    September 16, 2026
    Add A Comment
    Leave A Reply Cancel Reply

    ಪ್ರಮುಖ ಸುದ್ದಿ

    ಸೆ.18ರಂದು ಮಂಗಳೂರಿನಲ್ಲಿ ಸಚಿವ ಸಂಪುಟ ಸಭೆ: ಗಣ್ಯರ ಸಂಚಾರಕ್ಕೆ ಸಿದ್ಧತೆ, ಸಾರ್ವಜನಿಕರಿಗೆ ಪರ್ಯಾಯ ಮಾರ್ಗ ಸೂಚನೆ

    September 16, 2026

    ‘ಟಾಸ್’ನ ಮಾಸ್ ಎಂಟ್ರಿ, ಪ್ರೇಕ್ಷಕರಿಂದ ಭರ್ಜರಿ ರೆಸ್ಪಾನ್ಸ್: ಗೆಲುವಿನತ್ತ ಮೊದಲ ಹೆಜ್ಜೆ

    September 16, 2026

    ಆಸ್ತಿ ಪಾಲಿಗೆ ಅರ್ಜಿ ಸಲ್ಲಿಸಲು ಬಂದ ತಂದೆ-ಮಗಳು ಗ್ರಾಮ ಪಂಚಾಯಿತಿಯಲ್ಲೇ ಬರ್ಬರ ಹತ್ಯೆ

    September 16, 2026

    ಸಾರ್ವಜನಿಕವಾಗಿ ಯುವತಿಗೆ ಕಿರುಕುಳ ನೀಡುತ್ತಿದ್ದ ಯುವಕನ ಬಂಧನ: ಅಕ್ಕ ಪಡೆಯ ಕಾರ್ಯಾಚರಣೆ

    September 16, 2026
    Advertisement






    Nirantara News is powered by a team of experienced media professionals with decades of expertise in television journalism. Our mission is to be the voice of the people by delivering truthful, unbiased, and responsible news. We cover local, state, national, and international news, along with the latest updates on health, entertainment, real estate, business, technology, and more.

    Backed by experienced reporters and a strong legal team, we are committed to providing accurate news and honest reviews.

    Subscribe to Nirantara News and support trusted journalism.

    Top Insights

    ‘ಟಾಸ್’ನ ಮಾಸ್ ಎಂಟ್ರಿ, ಪ್ರೇಕ್ಷಕರಿಂದ ಭರ್ಜರಿ ರೆಸ್ಪಾನ್ಸ್: ಗೆಲುವಿನತ್ತ ಮೊದಲ ಹೆಜ್ಜೆ

    September 16, 2026

    ಆಸ್ತಿ ಪಾಲಿಗೆ ಅರ್ಜಿ ಸಲ್ಲಿಸಲು ಬಂದ ತಂದೆ-ಮಗಳು ಗ್ರಾಮ ಪಂಚಾಯಿತಿಯಲ್ಲೇ ಬರ್ಬರ ಹತ್ಯೆ

    September 16, 2026
    Social Follow
    • Facebook
    • Instagram
    © 2026 Nirantara News. Designed by Blueline Computers.
    • Home
    • ಕರಾವಳಿ ಸುದ್ದಿ
    • ಅಪರಾಧ
    • ಕರ್ನಾಟಕ
    • ರಾಷ್ಟ್ರೀಯ
    • ಅಂತರಾಷ್ಟ್ರೀಯ
    • ಸ್ಥಿರಾಸ್ತಿ ಮತ್ತು ಮೂಲಸೌಕರ್ಯ
    • ಆರೋಗ್ಯ

    Type above and press Enter to search. Press Esc to cancel.