Close Menu
    What's Hot

    ರಸ್ತೆ ಬದಿಯ ದನವನ್ನು ಬಲವಂತವಾಗಿ ಕಾರಿಗೆ ತುಂಬಿಸಿ ಪರಾರಿ; ಪ್ರಮುಖ ಆರೋಪಿಯ ಬಂಧನ

    October 2, 2026

    ಬಂದೂಕು ತಪಾಸಣೆ ವೇಳೆ ನಿಯಮ ಉಲ್ಲಂಘನೆ ಪತ್ತೆ; ಕೋಟದಲ್ಲಿ ಪರವಾನಿಗೆದಾರನ ವಿರುದ್ಧ ಕೇಸ್

    October 2, 2026

    “ಹನುಮಾನ್ ಚಾಲೀಸಾ ಪಠಿಸಿದೆ” — ಸಂಕಷ್ಟದ ಕ್ಷಣ ನೆನೆದ ಪೈಲಟ್; ಮೋದಿ ಜೊತೆ ಮಾತುಕತೆ

    October 2, 2026
    Facebook X (Twitter) Instagram
    Facebook X (Twitter) Instagram
    Nirantara News | Kannada News | Karnataka Latest UpdatesNirantara News | Kannada News | Karnataka Latest Updates
    Subscribe
    • Homepage
    • ಕರಾವಳಿ ಸುದ್ದಿ
    • ಅಪರಾಧ
    • ಕರ್ನಾಟಕ
    • ರಾಷ್ಟ್ರೀಯ
    • ಅಂತರಾಷ್ಟ್ರೀಯ
    • ಸ್ಥಿರಾಸ್ತಿ ಮತ್ತು ಮೂಲಸೌಕರ್ಯ
    • ಆರೋಗ್ಯ


    Nirantara News | Kannada News | Karnataka Latest UpdatesNirantara News | Kannada News | Karnataka Latest Updates
    Home»ರಾಷ್ಟ್ರೀಯ»“ಹನುಮಾನ್ ಚಾಲೀಸಾ ಪಠಿಸಿದೆ” — ಸಂಕಷ್ಟದ ಕ್ಷಣ ನೆನೆದ ಪೈಲಟ್; ಮೋದಿ ಜೊತೆ ಮಾತುಕತೆ
    ರಾಷ್ಟ್ರೀಯ

    “ಹನುಮಾನ್ ಚಾಲೀಸಾ ಪಠಿಸಿದೆ” — ಸಂಕಷ್ಟದ ಕ್ಷಣ ನೆನೆದ ಪೈಲಟ್; ಮೋದಿ ಜೊತೆ ಮಾತುಕತೆ

    adminBy adminOctober 2, 2026No Comments1 Min Read

    ನವದೆಹಲಿ: ದುಬೈನಿಂದ ಟೆಲ್ ಅವೀವ್‌ಗೆ ತೆರಳುತ್ತಿದ್ದ ಫ್ಲೈದುಬೈ ವಿಮಾನದಲ್ಲಿ ಸಹ-ಪೈಲಟ್ ನಡೆಸಿದ ದಾಳಿಯ ಪ್ರಯತ್ನವನ್ನು ವಿಫಲಗೊಳಿಸುವ ಮೂಲಕ 180 ಜನರ ಪ್ರಾಣ ಉಳಿಸಿದ ಭಾರತೀಯ ಪೈಲಟ್ ಕ್ಯಾಪ್ಟನ್ ಸ್ಮಿತ್ ಮಚ್ಚಾರ್ ಅವರೊಂದಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ ಮಾತುಕತೆ ನಡೆಸಿದ್ದಾರೆ.

    ಭಾರತೀಯ ಪೈಲಟ್ ಕ್ಯಾಪ್ಟನ್ ಮಚ್ಚಾರ್ ಅವರೊಂದಿಗೆ ಪ್ರಧಾನಿ ಮೋದಿ ಅವರು ವಿಡಿಯೋ ಕರೆ ಮಾಡಿ ಮಾತನಾಡಿಸಿದರು. ಈ ಸಂದರ್ಭ ಘಟನೆ ವೇಳೆಯ ತಮ್ಮ ಅನುಭವವನ್ನು ಹಂಚಿಕೊಂಡ ಕ್ಯಾಪ್ಟನ್ ಮಚ್ಚಾರ್ ಅವರು, “ನಿಮ್ಮ ಜೊತೆ ಮಾತನಾಡಲು ಅವಕಾಶ ಸಿಗುತ್ತದೆ ಅಂದ್ಕೊಂಡಿರಲಿಲ್ಲ. ನನಗೆ ಅತ್ಯುತ್ತಮ ಚಿಕಿತ್ಸೆ ಲಭಿಸಿದೆ. ಸಂಕಷ್ಟದ ಕಾಲದಲ್ಲಿ ನಾನು ಹನುಮಾನ್ ಚಾಲೀಸಾ ಪಠಿಸಿದೆ. ಭಗವಾನ್ ಹನುಮಂತ ನನಗೆ ಧೈರ್ಯ ನೀಡಿದನು. ಇಂಥ ಕಠಿಣ ಪರಿಸ್ಥಿತಿಯಲ್ಲಿ ನಾನು ಧೈರ್ಯ ಪ್ರದರ್ಶಿಸದಿದ್ದರೆ 180 ಪ್ರಯಾಣಿಕರು ಪ್ರಾಣ ಕಳೆದುಕೊಳ್ಳುತ್ತಿದ್ದರು. ಹೀಗಾಗಿ, ನಾನು ಗಂಭೀರವಾಗಿ ಗಾಯಗೊಂಡರೂ, ಪ್ರಯಾಣಿಕರ ಜೀವಕ್ಕೆ ಆಪತ್ತು ಎದುರಾಗಬಾರದು ಅಂತ ಧೈರ್ಯದಿಂದ ಹೋರಾಡಿದೆ” ಎಂದು ತಿಳಿಸಿದರು.

    ಪ್ರಧಾನಿ ಪೈಲಟ್ ತೋರಿದ ಧೈರ್ಯವನ್ನು ಶ್ಲಾಘಿಸಿದರು. “ನಿಮ್ಮ ದೇಹದಲ್ಲಿ ಗಂಭೀರ ಗಾಯವಾಗಿತ್ತು. ನೀವು ಸ್ವತಃ ಜೀವನ್ಮರಣದ ಹೋರಾಟದಲ್ಲಿದ್ದಿರಿ. ಆ ಸಮಯದಲ್ಲಿ ನೀವು ನಿಮ್ಮ ಪ್ರಾಣದ ಬಗ್ಗೆ ಚಿಂತಿಸದೆ, ಎಲ್ಲಾ ಪ್ರಯಾಣಿಕರ ಜೀವಗಳ ಬಗ್ಗೆ ಕಾಳಜಿ ವಹಿಸಿದಿರಿ. ಶೀಘ್ರವೇ ಗುಣಮುಖರಾಗಿರಿ” ಎಂದು ಹಾರೈಸಿದರು.

    “ಕ್ಯಾಪ್ಟನ್ ಸ್ಮಿತ್ ಮಚ್ಚರ್ ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ. ಅವರು ಯುಎಇಯ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಚೇತರಿಸಿಕೊಳ್ಳುತ್ತಿದ್ದಾರೆ. ಸ್ಮಿತ್ ಮಚ್ಚಾರ್ ಅವರ ಮನೋಬಲವು ಉತ್ತಮವಾಗಿದೆ. ಅವರು ಹರ್ಷಚಿತ್ತದಿಂದ ಇದ್ದಾರೆ. ಭಾರತೀಯ ರಾಯಭಾರ ಕಚೇರಿಯು ಅಧಿಕಾರಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದೆ” ಎಂದು ಯುಎಇಯಲ್ಲಿರುವ ಭಾರತದ ರಾಯಭಾರಿ ದೀಪಕ್ ಮಿತ್ತಲ್ ಮಾಹಿತಿ ನೀಡಿದ್ದಾರೆ.




    #national
    Previous Articleಮತ್ತೆ ಸುದ್ದಿಯಾದ ಲಂಚುಲಾಲ್; ಲಾಸ್ಟ್ ಡ್ರಾಗೆ 85,000 ಮಂದಿ ಎದ್ದೇಳುವ ಭಯವೇ? ಡಿಸೆಂಬರ್‌ವರೆಗೆ ಕಾಯೋ ಆಟವೇ?
    Next Article ಬಂದೂಕು ತಪಾಸಣೆ ವೇಳೆ ನಿಯಮ ಉಲ್ಲಂಘನೆ ಪತ್ತೆ; ಕೋಟದಲ್ಲಿ ಪರವಾನಿಗೆದಾರನ ವಿರುದ್ಧ ಕೇಸ್

    Related Posts

    ಪ್ರತಿ ಶನಿವಾರ ಬ್ಯಾಂಕ್‌ ರಜೆ ಎಂಬ ಸುದ್ದಿ ಸುಳ್ಳು; ನಕಲಿ ಗೆಜೆಟ್‌ ಕುರಿತು PIB ಫ್ಯಾಕ್ಟ್‌ಚೆಕ್ ಎಚ್ಚರಿಕೆ

    October 2, 2026

    ಕಾಕ್‌ಪಿಟ್‌ನಲ್ಲಿ ಪೈಲಟ್‌ಗೆ ಇರಿತ; ದುಬೈ–ಇಸ್ರೇಲ್ ವಿಮಾನ ದುರಂತ ತಪ್ಪಿಸಿ 180 ಜನರ ಜೀವ ಉಳಿಸಿದ ‘ಹೀರೋ’ ಕ್ಯಾಪ್ಟನ್ ಸ್ಮಿತ್ ಮಚ್ಚಾರ್‌ಗೆ ಪ್ರಯಾಣಿಕರಲ್ಲಿದ್ದ ದಂತವೈದ್ಯನಿಂದ ತಕ್ಷಣದ ಚಿಕಿತ್ಸೆ

    October 1, 2026

    ‘ಏಕಪಕ್ಷೀಯ ನಿರ್ಧಾರ’ ಆರೋಪ; ಸಿಇಸಿ ಜ್ಞಾನೇಶ್ ಕುಮಾರ್ ವಿರುದ್ಧ ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆಗೆ ಸಮ್ಮತಿ

    September 29, 2026
    Add A Comment
    Leave A Reply Cancel Reply

    ಪ್ರಮುಖ ಸುದ್ದಿ

    ರಸ್ತೆ ಬದಿಯ ದನವನ್ನು ಬಲವಂತವಾಗಿ ಕಾರಿಗೆ ತುಂಬಿಸಿ ಪರಾರಿ; ಪ್ರಮುಖ ಆರೋಪಿಯ ಬಂಧನ

    October 2, 2026

    ಬಂದೂಕು ತಪಾಸಣೆ ವೇಳೆ ನಿಯಮ ಉಲ್ಲಂಘನೆ ಪತ್ತೆ; ಕೋಟದಲ್ಲಿ ಪರವಾನಿಗೆದಾರನ ವಿರುದ್ಧ ಕೇಸ್

    October 2, 2026

    “ಹನುಮಾನ್ ಚಾಲೀಸಾ ಪಠಿಸಿದೆ” — ಸಂಕಷ್ಟದ ಕ್ಷಣ ನೆನೆದ ಪೈಲಟ್; ಮೋದಿ ಜೊತೆ ಮಾತುಕತೆ

    October 2, 2026

    ಮತ್ತೆ ಸುದ್ದಿಯಾದ ಲಂಚುಲಾಲ್; ಲಾಸ್ಟ್ ಡ್ರಾಗೆ 85,000 ಮಂದಿ ಎದ್ದೇಳುವ ಭಯವೇ? ಡಿಸೆಂಬರ್‌ವರೆಗೆ ಕಾಯೋ ಆಟವೇ?

    October 2, 2026
    Advertisement






    Nirantara News is powered by a team of experienced media professionals with decades of expertise in television journalism. Our mission is to be the voice of the people by delivering truthful, unbiased, and responsible news. We cover local, state, national, and international news, along with the latest updates on health, entertainment, real estate, business, technology, and more.

    Backed by experienced reporters and a strong legal team, we are committed to providing accurate news and honest reviews.

    Subscribe to Nirantara News and support trusted journalism.

    Top Insights

    ರಸ್ತೆ ಬದಿಯ ದನವನ್ನು ಬಲವಂತವಾಗಿ ಕಾರಿಗೆ ತುಂಬಿಸಿ ಪರಾರಿ; ಪ್ರಮುಖ ಆರೋಪಿಯ ಬಂಧನ

    October 2, 2026

    ಚಾಲಕನ ನಿಯಂತ್ರಣ ತಪ್ಪಿ ಕಂದಕಕ್ಕೆ ಉರುಳಿದ KSRTC ಬಸ್; ಮಹಿಳೆ ಸಾವು

    October 2, 2026
    Social Follow
    • Facebook
    • Instagram
    © 2026 Nirantara News. Designed by Blueline Computers.
    • Home
    • ಕರಾವಳಿ ಸುದ್ದಿ
    • ಅಪರಾಧ
    • ಕರ್ನಾಟಕ
    • ರಾಷ್ಟ್ರೀಯ
    • ಅಂತರಾಷ್ಟ್ರೀಯ
    • ಸ್ಥಿರಾಸ್ತಿ ಮತ್ತು ಮೂಲಸೌಕರ್ಯ
    • ಆರೋಗ್ಯ

    Type above and press Enter to search. Press Esc to cancel.