Close Menu
    What's Hot

    ಮಂಗಳೂರು: ಪಣಂಬೂರು ಬೀಚ್ ಸಮೀಪದ ರೆಸ್ಟೋರೆಂಟ್ ಮೇಲೆ ಪೊಲೀಸರ ದಾಳಿ; ಇಬ್ಬರು ಬಾಂಗ್ಲಾದೇಶ ಪ್ರಜೆಗಳು ವಶಕ್ಕೆ

    November 14, 2026

    ಉಡುಪಿ: ತಾಯಿಯ ಅಂತ್ಯಕ್ರಿಯೆಯಲ್ಲಿ ಭಾಗಿಯಾಗಲು ಅಂಡರ್‌ವರ್ಲ್ಡ್ ಡಾನ್ ರವಿ ಪೂಜಾರಿಗೆ ನ್ಯಾಯಾಲಯದ ಅನುಮತಿ; ಪೊಲೀಸ್ ಭದ್ರತೆಯಲ್ಲಿ ಉಡುಪಿಗೆ ಪ್ರಯಾಣ

    November 14, 2026

    ಮಂಗಳೂರು: ಕೋಟಿ ರೂಪಾಯಿ ದರೋಡೆ ಪ್ರಕರಣದಲ್ಲಿ ಖಾಕಿ ಕೈವಾಡ; ಕಾರವಾರ ಪೊಲೀಸ್ ಕಾನ್‌ಸ್ಟೇಬಲ್ ಉರ್ವ ಪೊಲೀಸರ ವಶಕ್ಕೆ

    November 14, 2026
    Facebook X (Twitter) Instagram
    Facebook X (Twitter) Instagram
    Nirantara News | Kannada News | Karnataka Latest UpdatesNirantara News | Kannada News | Karnataka Latest Updates
    Subscribe
    • Homepage
    • ಕರಾವಳಿ ಸುದ್ದಿ
    • ಅಪರಾಧ
    • ಕರ್ನಾಟಕ
    • ರಾಷ್ಟ್ರೀಯ
    • ಅಂತರಾಷ್ಟ್ರೀಯ
    • ಸ್ಥಿರಾಸ್ತಿ ಮತ್ತು ಮೂಲಸೌಕರ್ಯ
    • ಆರೋಗ್ಯ


    Nirantara News | Kannada News | Karnataka Latest UpdatesNirantara News | Kannada News | Karnataka Latest Updates
    Home»ಕರ್ನಾಟಕ»ಉತ್ತರಾಖಂಡದಲ್ಲಿ ಭೀಕರ ಹೆಲಿಕಾಪ್ಟರ್ ದುರಂತ; ಹೆಲಿಕಾಪ್ಟರ್ ಪತನದಿಂದ ಕರ್ನಾಟಕದ ಐವರು ದುರ್ಮರಣ
    ಕರ್ನಾಟಕ

    ಉತ್ತರಾಖಂಡದಲ್ಲಿ ಭೀಕರ ಹೆಲಿಕಾಪ್ಟರ್ ದುರಂತ; ಹೆಲಿಕಾಪ್ಟರ್ ಪತನದಿಂದ ಕರ್ನಾಟಕದ ಐವರು ದುರ್ಮರಣ

    adminBy adminOctober 31, 2026No Comments2 Mins Read

    ಡೆಹ್ರಾಡೂನ್/ಬೆಂಗಳೂರು: ಉತ್ತರಾಖಂಡ್‌ನ ಚಮೋಲಿ ಜಿಲ್ಲೆಯ ಜೋಶಿಮಠ ಸಮೀಪದ ಹಾಥಿ ಕಣಿವೆ ಪ್ರದೇಶದಲ್ಲಿ ಶುಕ್ರವಾರ ಮಧ್ಯಾಹ್ನ ಭೀಕರ ಹೆಲಿಕಾಪ್ಟರ್ ಅಪಘಾತ ಸಂಭವಿಸಿದ್ದು, ಚಾರ್ ಧಾಮ್ ಯಾತ್ರೆಗೆ ತೆರಳಿದ್ದ ಕರ್ನಾಟಕದ ಐವರು ಹಾಗೂ ದೆಹಲಿ ಮೂಲದ ಪೈಲಟ್ ಸೇರಿ ಬರೋಬ್ಬರಿ ಆರು ಜನರು ದುರ್ಮರಣ ಹೊಂದಿದ್ದಾರೆ. ಹಾಥಿ ಕಣಿವೆಯ ಚೈನ್  ಗ್ರಾಮದ ಬಳಿ ಪತನಗೊಂಡ ಹೆಲಿಕಾಪ್ಟರ್ ಸಂಪೂರ್ಣ ಸುಟ್ಟು ಭಸ್ಮವಾಗಿದ್ದು, ಮೃತದೇಹಗಳು ಸುಟ್ಟುಕರಕಲಾದ ಸ್ಥಿತಿಯಲ್ಲಿ ಪತ್ತೆಯಾಗಿವೆ ಎಂದು ರಕ್ಷಣಾ ಪಡೆಗಳು ಹಾಗೂ ಸ್ಥಳೀಯ ಅಧಿಕಾರಿಗಳು ದೃಢಪಡಿಸಿದ್ದಾರೆ.

    ಮೃತಪಟ್ಟವರನ್ನು ವಿಮಾನದ ಪೈಲಟ್ ಹಾಗೂ ಚಾರ್ ಧಾಮ್ ಪ್ರವಾಸದಲ್ಲಿದ್ದ ಕನ್ನಡಿಗ ಸ್ನೇಹಿತರ ತಂಡ ಎಂದು ಗುರುತಿಸಲಾಗಿದೆ:

    ಕ್ಯಾಪ್ಟನ್ ಹಿಮಾಂಶು ಸಬರ್ವಾಲ್ (48): ದೆಹಲಿ ಮೂಲದ ಹೆಲಿಕಾಪ್ಟರ್ ಪೈಲಟ್.
    ಅರುಣ್ ಸಾಲಂಕೆ (44): ಬೆಂಗಳೂರಿನ ಸಿಸಿಬಿ (CCB) ವಿಭಾಗದ ಪೊಲೀಸ್ ಇನ್ಸ್‌ಪೆಕ್ಟರ್.
    ವಿ.ಬಿ. ಶಂಕರ್‌ಗೌಡ (39): ತುಮಕೂರು ಮೂಲದ ಹೈಕೋರ್ಟ್ ಹಿರಿಯ ವಕೀಲ. (ಬೆಂಗಳೂರಿನ ಸಪ್ತಗಿರಿ ಬಡಾವಣೆ ನಿವಾಸಿ).
    ಬಾಚಿಹಳ್ಳಿ ಪ್ರತಾಪ್ ಗೌಡ (49): ಹಾಸನ ಜಿಲ್ಲೆಯ ಬಾಚಿಹಳ್ಳಿ ಮೂಲದ ಬೆಂಗಳೂರಿನ ಉದ್ಯಮಿ ಹಾಗೂ ಪ್ರಭಾವಿ ಸಮಾಜ ಸೇವಕ (ಯಸಳೂರು ಜೆಡಿಎಸ್ ಟಿಕೆಟ್ ಆಕಾಂಕ್ಷಿ).
    ಹೆಚ್.ಎನ್. ನಟರಾಜು (51): ತುಮಕೂರು ಜಿಲ್ಲೆ ಹುಲಿಯೂರುದುರ್ಗದ ವಿದ್ಯಾಭಾರತಿ ಶಿಕ್ಷಣ ಸಂಸ್ಥೆಯ ಮುಖ್ಯಸ್ಥ.
    ಸುಧೀರ್: ಬೆಂಗಳೂರಿನ ವಕೀಲ.

    ಇವರೆಲ್ಲರೂ ಒಟ್ಟಾಗಿ ನಾಲ್ಕು ದಿನಗಳ ಹಿಂದೆಯಷ್ಟೇ ದೇವಭೂಮಿ ಉತ್ತರಾಖಂಡಕ್ಕೆ ಸುದೀರ್ಘ ಧಾರ್ಮಿಕ ಪ್ರವಾಸ ಕೈಗೊಂಡಿದ್ದರು.

    ‘ಟ್ರಾನ್ಸ್ ಭಾರತ್ ಏವಿಯೇಷನ್ ಪ್ರೈವೇಟ್ ಲಿಮಿಟೆಡ್’ ಸಂಸ್ಥೆಗೆ ಸೇರಿದ VT-HCX ನೋಂದಣಿಯ ಹೆಲಿಕಾಪ್ಟರ್ ಶುಕ್ರವಾರ ಮಧ್ಯಾಹ್ನ 1:14 ರ ಸುಮಾರಿಗೆ ಟೇಕ್ ಆಫ್ ಆಗಿತ್ತು. ಜೋಶಿಮಠ ಕಣಿವೆಯ ಮೇಲ್ಭಾಗದಲ್ಲಿ ಹಾರಾಟ ನಡೆಸುತ್ತಿದ್ದಾಗ ಏಕಾಏಕಿ ನಿಯಂತ್ರಣ ಕೊಠಡಿಯೊಂದಿಗಿನ ಸಂಪರ್ಕ ಕಡಿತಗೊಂಡಿತ್ತು ಎಂದು ಉತ್ತರಾಖಂಡ ನಾಗರಿಕ ವಿಮಾನಯಾನ ಅಭಿವೃದ್ಧಿ ಪ್ರಾಧಿಕಾರ (UCADA) ತನ್ನ ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದೆ.
    ಅಪಘಾತ ಸಂಭವಿಸಿದ ಚೈನ್ ಗ್ರಾಮದ ಬಳಿ ದಟ್ಟ ಹೊಗೆ ಏಳುತ್ತಿರುವುದನ್ನು ಗಮನಿಸಿದ ಸ್ಥಳೀಯ ರಕ್ಷಣಾ ತಂಡಗಳು ತಕ್ಷಣವೇ ಸ್ಥಳಕ್ಕೆ ಧಾವಿಸಿದಾಗ, ಬಿದ್ದು ಭಸ್ಮವಾಗಿದ್ದ ಹೆಲಿಕಾಪ್ಟರ್ ಹಾಗೂ ಆರು ಸುಟ್ಟ ಮೃತದೇಹಗಳು ಪತ್ತೆಯಾಗಿವೆ. ಮೃತದೇಹಗಳನ್ನು ರಸ್ತೆ ಮಾರ್ಗದ ಮೂಲಕ ಜೋಶಿಮಠಕ್ಕೆ ರವಾನಿಸುವ ಕಾರ್ಯಾಚರಣೆ ನಡೆಯುತ್ತಿದೆ.




    #karnataka #nation
    Previous Articleಮೀನು ಸಂಗ್ರಹಣಾ ಘಟಕ ಸ್ವಚ್ಛಗೊಳಿಸುವಾಗ ವಿಷಾನಿಲ ಸೋರಿಕೆ; ಮತ್ತೆ ಇಬ್ಬರು ಮೀನುಗಾರರ ದುರ್ಮರಣ
    Next Article ಮಂಗಳೂರು–ಕಾರ್ಕಳ ಹೆದ್ದಾರಿ: ಬಸ್ ಡಿಕ್ಕಿಗೆ ಬೈಕ್ ಸವಾರ ಬಲಿ; 19 ವರ್ಷದ ಯುವಕ ಸಾವು

    Related Posts

    ಮಂಗಳೂರು: ಕೋಟಿ ರೂಪಾಯಿ ದರೋಡೆ ಪ್ರಕರಣದಲ್ಲಿ ಖಾಕಿ ಕೈವಾಡ; ಕಾರವಾರ ಪೊಲೀಸ್ ಕಾನ್‌ಸ್ಟೇಬಲ್ ಉರ್ವ ಪೊಲೀಸರ ವಶಕ್ಕೆ

    November 14, 2026

    ಮಡಿಕೇರಿ: ಹಾರಂಗಿ ಹಿನ್ನೀರಿನಲ್ಲಿ ಪ್ರವಾಸಿಗರ ಬೋಟ್ ಪಲ್ಟಿ; ಇಬ್ಬರು ಮಕ್ಕಳು ಪಾರು, ದಂಪತಿ ಸಾವು

    November 14, 2026

    ಮಗಳ ಮದುವೆ ಲಗ್ನಪತ್ರಿಕೆ ಹಂಚಲು ಹೋಗಿದ್ದ ದಂಪತಿಗೆ ಸಿಮೆಂಟ್ ಲಾರಿ ಡಿಕ್ಕಿ; ಪತ್ನಿ ಸಾವು, ಪತಿಯ ಕಾಲು ತುಂಡು

    November 13, 2026
    Add A Comment
    Leave A Reply Cancel Reply

    ಪ್ರಮುಖ ಸುದ್ದಿ

    ಮಂಗಳೂರು: ಪಣಂಬೂರು ಬೀಚ್ ಸಮೀಪದ ರೆಸ್ಟೋರೆಂಟ್ ಮೇಲೆ ಪೊಲೀಸರ ದಾಳಿ; ಇಬ್ಬರು ಬಾಂಗ್ಲಾದೇಶ ಪ್ರಜೆಗಳು ವಶಕ್ಕೆ

    November 14, 2026

    ಉಡುಪಿ: ತಾಯಿಯ ಅಂತ್ಯಕ್ರಿಯೆಯಲ್ಲಿ ಭಾಗಿಯಾಗಲು ಅಂಡರ್‌ವರ್ಲ್ಡ್ ಡಾನ್ ರವಿ ಪೂಜಾರಿಗೆ ನ್ಯಾಯಾಲಯದ ಅನುಮತಿ; ಪೊಲೀಸ್ ಭದ್ರತೆಯಲ್ಲಿ ಉಡುಪಿಗೆ ಪ್ರಯಾಣ

    November 14, 2026

    ಮಂಗಳೂರು: ಕೋಟಿ ರೂಪಾಯಿ ದರೋಡೆ ಪ್ರಕರಣದಲ್ಲಿ ಖಾಕಿ ಕೈವಾಡ; ಕಾರವಾರ ಪೊಲೀಸ್ ಕಾನ್‌ಸ್ಟೇಬಲ್ ಉರ್ವ ಪೊಲೀಸರ ವಶಕ್ಕೆ

    November 14, 2026

    ಮಡಿಕೇರಿ: ಹಾರಂಗಿ ಹಿನ್ನೀರಿನಲ್ಲಿ ಪ್ರವಾಸಿಗರ ಬೋಟ್ ಪಲ್ಟಿ; ಇಬ್ಬರು ಮಕ್ಕಳು ಪಾರು, ದಂಪತಿ ಸಾವು

    November 14, 2026
    Advertisement






    Nirantara News is powered by a team of experienced media professionals with decades of expertise in television journalism. Our mission is to be the voice of the people by delivering truthful, unbiased, and responsible news. We cover local, state, national, and international news, along with the latest updates on health, entertainment, real estate, business, technology, and more.

    Backed by experienced reporters and a strong legal team, we are committed to providing accurate news and honest reviews.

    Subscribe to Nirantara News and support trusted journalism.

    Top Insights

    ಮಂಗಳೂರು: ಕೋಟಿ ರೂಪಾಯಿ ದರೋಡೆ ಪ್ರಕರಣದಲ್ಲಿ ಖಾಕಿ ಕೈವಾಡ; ಕಾರವಾರ ಪೊಲೀಸ್ ಕಾನ್‌ಸ್ಟೇಬಲ್ ಉರ್ವ ಪೊಲೀಸರ ವಶಕ್ಕೆ

    November 14, 2026

    ಮಡಿಕೇರಿ: ಹಾರಂಗಿ ಹಿನ್ನೀರಿನಲ್ಲಿ ಪ್ರವಾಸಿಗರ ಬೋಟ್ ಪಲ್ಟಿ; ಇಬ್ಬರು ಮಕ್ಕಳು ಪಾರು, ದಂಪತಿ ಸಾವು

    November 14, 2026
    Social Follow
    • Facebook
    • Instagram
    © 2026 Nirantara News. Designed by Blueline Computers.
    • Home
    • ಕರಾವಳಿ ಸುದ್ದಿ
    • ಅಪರಾಧ
    • ಕರ್ನಾಟಕ
    • ರಾಷ್ಟ್ರೀಯ
    • ಅಂತರಾಷ್ಟ್ರೀಯ
    • ಸ್ಥಿರಾಸ್ತಿ ಮತ್ತು ಮೂಲಸೌಕರ್ಯ
    • ಆರೋಗ್ಯ

    Type above and press Enter to search. Press Esc to cancel.