Close Menu
    What's Hot

    ಸೈಬರ್​ ವಂಚಕರಿಂದ 139 ಕೋಟಿ ರೂ. ವಾಪಸ್ ಪಡೆದ ತೆಲಂಗಾಣ ಪೊಲೀಸರು

    September 15, 2026

    ಉಡುಪಿ: ದೇವಸ್ಥಾನದ ಹುಂಡಿ ಕಳವು ಪ್ರಕರಣ – ಇಬ್ಬರು ಆರೋಪಿಗಳ ಬಂಧನ

    September 15, 2026

    ಊಟ ಮಾಡುವಾಗ ಗಂಟಲಿನಲ್ಲಿ ಆಹಾರ ಸಿಲುಕಿ: 12 ವರ್ಷದ ಬಾಲಕನ ದಾರುಣ ಸಾವು

    September 15, 2026
    Facebook X (Twitter) Instagram
    Facebook X (Twitter) Instagram
    Nirantara News | Kannada News | Karnataka Latest UpdatesNirantara News | Kannada News | Karnataka Latest Updates
    Subscribe
    • Homepage
    • ಕರಾವಳಿ ಸುದ್ದಿ
    • ಅಪರಾಧ
    • ಕರ್ನಾಟಕ
    • ರಾಷ್ಟ್ರೀಯ
    • ಅಂತರಾಷ್ಟ್ರೀಯ
    • ಸ್ಥಿರಾಸ್ತಿ ಮತ್ತು ಮೂಲಸೌಕರ್ಯ
    • ಆರೋಗ್ಯ


    Nirantara News | Kannada News | Karnataka Latest UpdatesNirantara News | Kannada News | Karnataka Latest Updates
    Home»ಅಂತರಾಷ್ಟ್ರೀಯ»‘ಬ್ರಿಟನ್‌ನಿಂದ ಪಾರ್ಸೆಲ್ ಬಂದಿದೆ’ ಎಂದು ನಂಬಿಸಿ ವಂಚನೆ; ಮಂಗಳೂರಿನಲ್ಲಿ ಸೈಬರ್ ಮೋಸದ ಬಲೆ
    ಅಂತರಾಷ್ಟ್ರೀಯ

    ‘ಬ್ರಿಟನ್‌ನಿಂದ ಪಾರ್ಸೆಲ್ ಬಂದಿದೆ’ ಎಂದು ನಂಬಿಸಿ ವಂಚನೆ; ಮಂಗಳೂರಿನಲ್ಲಿ ಸೈಬರ್ ಮೋಸದ ಬಲೆ

    adminBy adminJuly 30, 2026No Comments1 Min Read

    ಮಂಗಳೂರು : ಫೇಸ್‌ಬುಕ್‌ನಲ್ಲಿ ಪರಿಚಯವಾದ ಅಪರಿಚಿತ ವ್ಯಕ್ತಿಯೊಬ್ಬ ಬ್ರಿಟನ್‌ನಿಂದ ಕಳುಹಿಸಿದ್ದಾನೆ ಎನ್ನಲಾದ ‘ಉಡುಗೊರೆ ಪಾರ್ಸೆಲ್’ ಬಿಡುಗಡೆಗೊಳಿಸುವ ನೆಪದಲ್ಲಿ, ಕಸ್ಟಮ್ಸ್ ಅಧಿಕಾರಿಯಂತೆ ನಟಿಸಿ ಗೃಹಣಿಯೊಬ್ಬರಿಂದ ಬರೋಬ್ಬರಿ ₹2,67,000 ಹಣ ಪಡೆದು ವಂಚಿಸಿರುವ ಘಟನೆ ನಡೆದಿದೆ.

    ಗೃಹಣಿ ಶ್ರೀಮತಿ (46) ಅವರಿಗೆ ಸುಮಾರು ಎರಡು ತಿಂಗಳ ಹಿಂದೆ ಫೇಸ್‌ಬುಕ್‌ನಲ್ಲಿ “ಡಾ. ವಿಲಿಯಮ್ಸ್ ಹೆರ್ಬರ್ಟ್” ಎಂಬ ಪ್ರೊಫೈಲ್‌ನಿಂದ ಪರಿಚಯವಾಗಿತ್ತು. ತಾನು ಯುನೈಟೆಡ್ ಕಿಂಗ್ಡಮ್ (UK) ಮೂಲದವನೆಂದು ಪರಿಚಯಿಸಿಕೊಂಡಿದ್ದ ಈತ, ವಾಟ್ಸಾಪ್ ಹಾಗೂ ಫೇಸ್‌ಬುಕ್ ಮೆಸೆಂಜರ್ ಮೂಲಕ ನಿರಂತರ ಸಂಪರ್ಕದಲ್ಲಿದ್ದು ದೂರುದಾರರ ವಿಶ್ವಾಸ ಗಳಿಸಿದ್ದ. ಜೂನ್ 28ರಂದು ವಾಟ್ಸಾಪ್ ಮೂಲಕ ಕರೆ ಮಾಡಿ, “ನಿಮಗಾಗಿ ಚಾಕೊಲೇಟ್, ಚಿನ್ನ, ಬ್ಯಾಗ್ ಹಾಗೂ ಅಪಾರ ಪ್ರಮಾಣದ ಹಣವಿರುವ ಪಾರ್ಸೆಲ್ ಕಳುಹಿಸಿದ್ದೇನೆ,” ಎಂದು ನಂಬಿಸಿದ್ದ.

    ಇದರ ಬೆನ್ನಲ್ಲೇ ಜೂನ್ 29ರಂದು ‘ಕಸ್ಟಮ್ಸ್ ಆಫೀಸರ್’ ಎಂದು ಪರಿಚಯಿಸಿಕೊಂಡ ಅಪರಿಚಿತ ವ್ಯಕ್ತಿಯೊಬ್ಬ ಕರೆ ಮಾಡಿ, “ನಿಮ್ಮ ಹೆಸರಿನಲ್ಲಿದ್ದ ಪಾರ್ಸೆಲ್ ಏರ್‌ಪೋರ್ಟ್ ಕಸ್ಟಮ್ಸ್‌ನಲ್ಲಿದೆ. ಲಗೇಜ್ ಚಾರ್ಜ್ ಪಾವತಿಸಿದರೆ ಬಿಡುಗಡೆ ಮಾಡುತ್ತೇವೆ,” ಎಂದಿದ್ದ. ಇದನ್ನು ನಂಬಿದ ಮಹಿಳೆ ತಮ್ಮ ಫೋನ್ ಪೇ ಮೂಲಕ ಆರಂಭದಲ್ಲಿ ₹28,000 ವರ್ಗಾಯಿಸಿದ್ದರು. ಜೂನ್ 30ರಂದು “ಪಾರ್ಸೆಲ್‌ನಲ್ಲಿದ್ದ ಚಿನ್ನ ಹಾಗೂ ಹಣವನ್ನು ವಶಪಡಿಸಿಕೊಳ್ಳಲಾಗಿದೆ (Seized)” ಎಂದು ಹೆದರಿಸಿ, ಹಂತ ಹಂತವಾಗಿ ₹50,000, ₹26,000, ₹20,000 ಹಾಗೂ ಅಣ್ಣನ ಮಗನ ಫೋನ್ ಪೇ ಖಾತೆಯಿಂದ ₹26,000 ಮತ್ತು ₹30,000 ಸೇರಿ ಒಟ್ಟು ₹1,52,000 ಹಣ ಪಡೆದುಕೊಂಡಿದ್ದಾರೆ.

    ಬಳಿಕ ಜುಲೈ 8ರಂದು ಮತ್ತೊಂದು ನಂಬರ್‌ನಿಂದ ಕರೆ ಮಾಡಿ “ಸಮಯಕ್ಕೆ ಪಾರ್ಸೆಲ್ ಪಡೆಯದ ಕಾರಣ ಪೆನಾಲ್ಟಿ ಚಾರ್ಜ್ ಕಟ್ಟಬೇಕು” ಎಂದು ತಿಳಿಸಲಾಗಿತ್ತು. ಅದರಂತೆ ಜುಲೈ 9ರಂದು ಮಹಿಳೆ ಬ್ಯಾಂಕ್ ಆಫ್ ಇಂಡಿಯಾ ಖಾತೆಗೆ ಚೆಕ್ ಮೂಲಕ ₹87,000 ವರ್ಗಾಯಿಸಿದ್ದರು. ಒಟ್ಟಾರೆಯಾಗಿ ₹2,67,000 ಪಾವತಿಸಿದರೂ ಆರೋಪಿಗಳು ಮತ್ತೆ ಮತ್ತೆ ಹಣಕ್ಕೆ ಒತ್ತಾಯಿಸಿದಾಗ ತಾನು ಸೈಬರ್ ವಂಚನೆಗೆ ಒಳಗಾಗಿರುವುದು ಗೊತ್ತಾಗಿದೆ. ಈ ಸಂಬಂಧ ಸಂತ್ರಸ್ತೆ ಸೈಬರ್ ಕ್ರೈಂ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.




    #crime #dakshinakannada International
    Previous Articleಬೆಳ್ತಂಗಡಿಯಲ್ಲಿ ಶೌರ್ಯ ಮೆರೆದ ವಿಪತ್ತು ನಿರ್ವಹಣಾ ತಂಡ; ನದಿಯಲ್ಲಿ ಸಿಲುಕಿದ್ದ ವೃದ್ಧ ಸುರಕ್ಷಿತ
    Next Article ಊಟ ತಡವಾಯಿತೆಂದು ಅತ್ತಿಗೆಯ ಬರ್ಬರ ಹತ್ಯೆ; ಕಡಿದ ತಲೆಯನ್ನು ಮರಕ್ಕೆ ನೇತುಹಾಕಿದ ಅಳಿಯ

    Related Posts

    ಉಡುಪಿ: ದೇವಸ್ಥಾನದ ಹುಂಡಿ ಕಳವು ಪ್ರಕರಣ – ಇಬ್ಬರು ಆರೋಪಿಗಳ ಬಂಧನ

    September 15, 2026

    ಮಹಿಳಾ ಬೈಕ್ ಸವಾರೆಗೆ ಡಿಕ್ಕಿ ಹೊಡೆದು ಪರಾರಿ ಪ್ರಕರಣ: ‘ಕೊಲೆ ಯತ್ನ’ ಕೇಸ್, ಆರೋಪಿಯ ಬಂಧನ

    September 15, 2026

    ಮಂಗಳೂರು ವಿಮಾನ ನಿಲ್ದಾಣಕ್ಕೆ ‘ಕೋಟಿ-ಚೆನ್ನಯ’ ಹೆಸರು: ಸಚಿವ ಸಂಪುಟದಲ್ಲಿ ನಿರ್ಣಯಕ್ಕೆ ಮಿಥುನ್ ರೈ ಒತ್ತಾಯ

    September 15, 2026
    Add A Comment
    Leave A Reply Cancel Reply

    ಪ್ರಮುಖ ಸುದ್ದಿ

    ಸೈಬರ್​ ವಂಚಕರಿಂದ 139 ಕೋಟಿ ರೂ. ವಾಪಸ್ ಪಡೆದ ತೆಲಂಗಾಣ ಪೊಲೀಸರು

    September 15, 2026

    ಉಡುಪಿ: ದೇವಸ್ಥಾನದ ಹುಂಡಿ ಕಳವು ಪ್ರಕರಣ – ಇಬ್ಬರು ಆರೋಪಿಗಳ ಬಂಧನ

    September 15, 2026

    ಊಟ ಮಾಡುವಾಗ ಗಂಟಲಿನಲ್ಲಿ ಆಹಾರ ಸಿಲುಕಿ: 12 ವರ್ಷದ ಬಾಲಕನ ದಾರುಣ ಸಾವು

    September 15, 2026

    ‘ಮಾತೆರೆಗ್‌ಲ ಸೊಲ್ಮೆಲು’ ಎಂದ ಡಿಕೆಶಿ: ಸೆ.18ಕ್ಕೆ ಮಂಗಳೂರಿನಲ್ಲಿ ವಿಶೇಷ ಸಚಿವ ಸಂಪುಟ ಸಭೆ

    September 15, 2026
    Advertisement






    Nirantara News is powered by a team of experienced media professionals with decades of expertise in television journalism. Our mission is to be the voice of the people by delivering truthful, unbiased, and responsible news. We cover local, state, national, and international news, along with the latest updates on health, entertainment, real estate, business, technology, and more.

    Backed by experienced reporters and a strong legal team, we are committed to providing accurate news and honest reviews.

    Subscribe to Nirantara News and support trusted journalism.

    Top Insights

    ‘ಮಾತೆರೆಗ್‌ಲ ಸೊಲ್ಮೆಲು’ ಎಂದ ಡಿಕೆಶಿ: ಸೆ.18ಕ್ಕೆ ಮಂಗಳೂರಿನಲ್ಲಿ ವಿಶೇಷ ಸಚಿವ ಸಂಪುಟ ಸಭೆ

    September 15, 2026

    ಮನೆಯಲ್ಲೇ ರಕ್ತಸಿಕ್ತ ಸ್ಥಿತಿಯಲ್ಲಿ ವೃದ್ಧ ದಂಪತಿ ಪತ್ತೆ: ಪತಿ-ಪತ್ನಿ ಇಬ್ಬರೂ ಗುಂಡೇಟಿಗೆ ಬಲಿ

    September 15, 2026
    Social Follow
    • Facebook
    • Instagram
    © 2026 Nirantara News. Designed by Blueline Computers.
    • Home
    • ಕರಾವಳಿ ಸುದ್ದಿ
    • ಅಪರಾಧ
    • ಕರ್ನಾಟಕ
    • ರಾಷ್ಟ್ರೀಯ
    • ಅಂತರಾಷ್ಟ್ರೀಯ
    • ಸ್ಥಿರಾಸ್ತಿ ಮತ್ತು ಮೂಲಸೌಕರ್ಯ
    • ಆರೋಗ್ಯ

    Type above and press Enter to search. Press Esc to cancel.