Close Menu
    What's Hot

    ಮಂಗಳೂರು: ಎಂಆರ್‌ಪಿಎಲ್‌ನಲ್ಲಿ ಭಾರೀ ಸ್ಫೋಟ ;ಆಕಾಶದೆತ್ತರ ಕಾಣಿಸಿದ ಹೊಗೆ,ಅಗ್ನಿಶಾಮಕ ದಳದ ಕಾರ್ಯಾಚರಣೆ

    September 30, 2026

    ಕರಾವಳಿಯಲ್ಲಿ ಹೈಕೋರ್ಟ್ ಪೀಠ ಸ್ಥಾಪನೆ ಸಾಧ್ಯತೆ; ಮುಖ್ಯ ನ್ಯಾಯಮೂರ್ತಿಯಿಂದ ಸಮಿತಿ ರಚನೆ

    September 30, 2026

    25ಕ್ಕೂ ಹೆಚ್ಚು ದೂರುಗಳ ಬೆನ್ನಲ್ಲೇ ನಕಲಿ ಲೇಡಿ PSI ಅರೆಸ್ಟ್; ಚಿನ್ನ, ಕಾರು, ಹಣ ವಂಚನೆ ಆರೋಪ

    September 30, 2026
    Facebook X (Twitter) Instagram
    Facebook X (Twitter) Instagram
    Nirantara News | Kannada News | Karnataka Latest UpdatesNirantara News | Kannada News | Karnataka Latest Updates
    Subscribe
    • Homepage
    • ಕರಾವಳಿ ಸುದ್ದಿ
    • ಅಪರಾಧ
    • ಕರ್ನಾಟಕ
    • ರಾಷ್ಟ್ರೀಯ
    • ಅಂತರಾಷ್ಟ್ರೀಯ
    • ಸ್ಥಿರಾಸ್ತಿ ಮತ್ತು ಮೂಲಸೌಕರ್ಯ
    • ಆರೋಗ್ಯ


    Nirantara News | Kannada News | Karnataka Latest UpdatesNirantara News | Kannada News | Karnataka Latest Updates
    Home»ರಾಷ್ಟ್ರೀಯ»“ನಾಲಿಗೆ-ಹಲ್ಲಿನ ಸಂಬಂಧದಂತೆ…” ಯುವಕರಿಗೆ ಕ್ಷಮೆಯ ಪಾಠ ಹೇಳಿದ ಮೋದಿ
    ರಾಷ್ಟ್ರೀಯ

    “ನಾಲಿಗೆ-ಹಲ್ಲಿನ ಸಂಬಂಧದಂತೆ…” ಯುವಕರಿಗೆ ಕ್ಷಮೆಯ ಪಾಠ ಹೇಳಿದ ಮೋದಿ

    adminBy adminAugust 1, 2026No Comments2 Mins Read

    ನವದೆಹಲಿ : ದೆಹಲಿಯ ಜಂತರ್ ಮಂತರ್‌ನಲ್ಲಿ ಇತ್ತೀಚೆಗೆ ನಡೆದ ನೀಟ್ (NEET) ಪರೀಕ್ಷೆ ಅಕ್ರಮ ಖಂಡಿತ ಪ್ರತಿಭಟನೆಯ ವೇಳೆ ತಮ್ಮ ಹಾಗೂ ತಮ್ಮ ದಿವಂಗತ ತಾಯಿಯ ವಿರುದ್ಧ ಅಸಭ್ಯ ಮತ್ತು ನಿಂದನಾತ್ಮಕ ಪದ ಬಳಸಿದ್ದ ಯುವ ಪ್ರತಿಭಟನಾಕಾರರನ್ನು ಕರುಣೆಯಿಂದ ಕ್ಷಮಿಸುವುದಾಗಿ ಪ್ರಧಾನಿ ನರೇಂದ್ರ ಮೋದಿ ಅವರು ತಿಳಿಸಿದ್ದಾರೆ. ಶುಕ್ರವಾರ ರಾತ್ರಿ ಸೋಷಿಯಲ್ ಮೀಡಿಯಾದಲ್ಲಿ ವೈಯಕ್ತಿಕ ಭಾವನಾತ್ಮಕ ವೀಡಿಯೊ ಸಂದೇಶ ಹಂಚಿಕೊಂಡ ಪ್ರಧಾನಿ, “ನನ್ನ ವಿರುದ್ಧ ಮತ್ತು ನನ್ನ ತೀರಿಹೋದ ತಾಯಿಯ ವಿರುದ್ಧ ಅಸಭ್ಯ ಭಾಷೆ ಬಳಸಿದ್ದು ಸಾಂಸ್ಕೃತಿಕ ಆಘಾತ ತಂದಿದೆ. ಆದರೆ, ದಾರಿತಪ್ಪಿದ ಯುವಜನತೆಗೆ ಶಿಕ್ಷೆ ವಿಧಿಸುವುದು, ಕೋರ್ಟ್-ಕಚೇರಿ ಅಲೆದಾಡಿಸುವುದು ಪರಿಹಾರವಲ್ಲ.

    ನಾಲಿಗೆ ಹಲ್ಲಿಗೆ ಸಿಕ್ಕಿ ರಕ್ತ ಬಂದರೆ ನಾವು ಹಲ್ಲನ್ನು ಮುರಿಯುವುದಿಲ್ಲ; ಏಕೆಂದರೆ ನಾಲಿಗೆಯೂ ನಮ್ಮದೇ, ಹಲ್ಲೂ ನಮ್ಮದೇ. ಹಾಗೆಯೇ ಈ ಮಕ್ಕಳೂ ನಮ್ಮವರೇ. ಇವರನ್ನು ಆಲಂಗಿಸಿ ಸರಿದಾರಿಗೆ ತರುವುದು ನಮ್ಮ ಕರ್ತವ್ಯ,” ಎಂದಿದ್ದಾರೆ.

    ಯುವಜನರನ್ನು ದಾರಿತಪ್ಪುವುದರಿಂದ ದೂರವಿಟ್ಟು ರಾಷ್ಟ್ರ ನಿರ್ಮಾಣದತ್ತ ಕೊಂಡೊಯ್ಯುವ ಅಗತ್ಯವನ್ನು ಒತ್ತಿ ಹೇಳಿದ ಪ್ರಧಾನಿ, ಬಾಲ್ಯದಲ್ಲಿ ತಪ್ಪುಗಳು ಆಗುತ್ತವೆ. ಆದರೆ ಅದೇ ಸಮಯದಲ್ಲಿ ಆ ತಪ್ಪುಗಳಿಂದ ಕಲಿಯುವ ಅವಕಾಶವೂ ಇರುತ್ತದೆ. ಅದೇ ಬಾಲ್ಯದ ಸ್ವಭಾವ. ಸಮಾಜದಲ್ಲಿರುವ ಆಕ್ರೋಶವನ್ನು ನಾನು ಅರ್ಥಮಾಡಿಕೊಳ್ಳಬಲ್ಲೆ ಎಂದಿದ್ದಾರೆ. ಈ ಘಟನೆಯನ್ನು “ಸಾಂಸ್ಕೃತಿಕ ಆಘಾತ” ಎಂದು ಬಣ್ಣಿಸಿದ ಪ್ರಧಾನಿ, ಪ್ರತಿಭಟನಾಕಾರರನ್ನು ಕ್ಷಮಿಸಲು ಬಯಸುವುದಾಗಿ ವಿಡಿಯೊ ಸಂದೇಶದಲ್ಲಿ ಹೇಳಿದ್ದಾರೆ.

    ನಾನು ಅವರನ್ನು ಕ್ಷಮಿಸಲು ಬಯಸುತ್ತೇನೆ. ತಪ್ಪುಗಳು ಆಗುತ್ತವೆ. ಆದರೆ ನಮ್ಮ ಹೆಣ್ಣುಮಕ್ಕಳು ಇಂತಹ ನಿಂದನಾತ್ಮಕ ಭಾಷೆ ಬಳಸುತ್ತಿರುವುದು ಸಾಂಸ್ಕೃತಿಕ ಆಘಾತವಾಗಿದೆ ಎಂದು ಹೇಳಿದ್ದಾರೆ.
    ಪ್ರತೀಕಾರದ ಬದಲು ಕರುಣೆ ತೋರಿಸುವಂತೆ ಕರೆ ನೀಡಿದ ಅವರು, ಇದು ಈ ಮಕ್ಕಳನ್ನು ಅಪ್ಪಿಕೊಂಡು ಅವರಿಗೆ ಸರಿಯಾದ ದಾರಿ ತೋರಿಸುವ ಸಮಯ. ಅವರು ದಾರಿತಪ್ಪಿದ ಮಕ್ಕಳು. ಅವರಿಗೆ ಮಾರ್ಗದರ್ಶನ ನೀಡುವುದು ನಮ್ಮ ಕರ್ತವ್ಯ ಎಂದಿದ್ದಾರೆ.

    ಅವರಿಗೆ ಶಿಕ್ಷೆ ವಿಧಿಸುವುದು, ನ್ಯಾಯಾಲಯಗಳ ಸುತ್ತ ಅಲೆದಾಡುವಂತೆ ಮಾಡುವುದು, ಸಮಾಜದಲ್ಲಿ ಕಿರುಕುಳ ನೀಡುವುದು ಪರಿಸ್ಥಿತಿಯನ್ನು ಬದಲಾಯಿಸುವುದಿಲ್ಲ. ನಾನು ಅವರನ್ನು ಕ್ಷಮಿಸಲು ಬಯಸುತ್ತೇನೆ. ಸಮಾಜವೂ ನನ್ನ ಈ ನಿರ್ಧಾರವನ್ನು ಒಪ್ಪಿಕೊಳ್ಳಬೇಕೆಂದು ವಿನಂತಿಸುತ್ತೇನೆ ಎಂದು ಹೇಳಿದ್ದಾರೆ.

    ಮುಂದುವರಿದು ಮಾತನಾಡಿದ ಪ್ರಧಾನ ಮಂತ್ರಿಗಳು, ಕೆಲವೊಮ್ಮೆ ನಮ್ಮ ನಾಲಿಗೆಯೇ ಹಲ್ಲಿಗೆ ಸಿಕ್ಕಿ ಕಚ್ಚಿಕೊಂಡು ರಕ್ತ ಬರುತ್ತದೆ. ಆದರೆ ಅದಕ್ಕಾಗಿ ನಾವು ಹಲ್ಲುಗಳನ್ನು ಮುರಿಯುವುದಿಲ್ಲ. ಏಕೆಂದರೆ ಹಲ್ಲುಗಳೂ ನಮ್ಮವು, ನಾಲಿಗೆಯೂ ನಮ್ಮದೇ. ಈ ಮಕ್ಕಳೂ ನಮ್ಮವರೇ. ಅವರಿಗೆ ದಾರಿ ತೋರಿಸುವುದು ನಮ್ಮ ಕರ್ತವ್ಯ. ದಾರಿತಪ್ಪಿದವರನ್ನು ಸರಿದಾರಿಗೆ ತರುವುದು ಕಷ್ಟದ ಕೆಲಸ, ಆದರೆ ಅದನ್ನೇ ನಾವು ಮಾಡಬೇಕು ಎಂದಿದ್ದಾರೆ. ಯುವಜನತೆಗೆ ನೇರವಾಗಿ ಮನವಿ ಮಾಡಿದ ಪ್ರಧಾನಿ, ಮಕ್ಕಳೇ, ದೇಶಕ್ಕಾಗಿ ಒಟ್ಟಾಗಿ ಮುಂದೆ ಸಾಗೋಣ. ಹೊಸದನ್ನು ಕಲಿಯೋಣ. ನಮ್ಮ ತಪ್ಪುಗಳಿಂದಲೂ ಪಾಠ ಕಲಿತು ನಮ್ಮ ಕನಸುಗಳೊಂದಿಗೆ ಮುಂದೆ ಸಾಗೋಣ ಎಂದಿದ್ದಾರೆ.

    ಭರವಸೆಯ ಸಂದೇಶದೊಂದಿಗೆ ಭಾಷಣ ಮಾತುಗಳನ್ನು ಮುಗಿಸಿದ ಪ್ರಧಾನ ಮಂತ್ರಿ, ದೇಶ ಮುಂದೆ ಸಾಗುತ್ತಿದೆ, ಮುಂದೆಯೂ ಸಾಗುತ್ತದೆ. ನಿಮ್ಮ ಪ್ರಗತಿಯೂ ಖಚಿತ. ಅದೇ ನನ್ನ ಕನಸು. ನಾನು ನಿಮಗಾಗಿ ಬದುಕುತ್ತೇನೆ. ನಿಮ್ಮ ಉಜ್ವಲ ಭವಿಷ್ಯಕ್ಕಾಗಿ ಶ್ರಮಿಸುತ್ತೇನೆ. ಬನ್ನಿ, ಒಟ್ಟಾಗಿ ದೇಶವನ್ನು ಮುನ್ನಡೆಸೋಣ. ತುಂಬಾ ಧನ್ಯವಾದಗಳು ಸ್ನೇಹಿತರೇ. ತಪ್ಪುಗಳಿಂದ ಪಾಠ ಕಲಿತು ಮುಂದೆ ಸಾಗಿರಿ ಎಂದು ಹೇಳಿದ್ದಾರೆ.

    ಜುಲೈ 23ರ ಪ್ರತಿಭಟನೆಯಲ್ಲಿ ಪ್ರಧಾನಿ ವಿರುದ್ಧ ದ್ವೇಷಪೂರಿತ ಭಾಷೆ ಬಳಸಿದ್ದ ಆರೋಪದ ಮೇಲೆ ಮಹಿಳೆಯೊಬ್ಬರ ವಿರುದ್ಧ ನೋಯ್ಡಾದ ಎಕ್ಸ್‌ಪ್ರೆಸ್‌ವೇ ಪೊಲೀಸ್ ಠಾಣೆಯಲ್ಲಿ ಜೀರೋ ಎಫ್‌ಐಆರ್ ದಾಖಲಾಗಿತ್ತು. ಈ ಘಟನೆಯ ಬೆನ್ನಲ್ಲೇ ಪ್ರಧಾನಿ ಈ ಸ್ಪಷ್ಟನೆ ನೀಡಿದ್ದಾರೆ. ಕಾಕ್ರೋಚ್ ಜನತಾ ಪಾರ್ಟಿ (CJP) ಹಾಗೂ ಹೋರಾಟಗಾರ ಸೋನಂ ವಾಂಗ್ಚುಕ್ ನೇತೃತ್ವದಲ್ಲಿ ನಡೆದ 26 ದಿನಗಳ ಸತ್ಯಾಗ್ರಹ ಮತ್ತು ತೀವ್ರ ಪ್ರತಿಭಟನೆಗಳ ಬಳಿಕ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಿದ್ದು, ಬೇಡಿಕೆ ಈಡೇರಿದ ಹಿನ್ನೆಲೆಯಲ್ಲಿ ಜುಲೈ 25ರಂದು ಪ್ರತಿಭಟನೆ ಅಂತ್ಯಗೊಂಡಿತ್ತು




    #national
    Previous Articleತೋಟ ಬೆಂಗ್ರೆ ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ತೀರ್ಪು; ನಾಲ್ವರು ಆರೋಪಿಗಳಿಗೆ 20 ವರ್ಷ ಜೈಲು
    Next Article ಕುಕ್ಕೆ ಸುಬ್ರಹ್ಮಣ್ಯದಲ್ಲಿ ಜಲಮಟ್ಟ ಏರಿಕೆ; ನದಿಗೆ ಇಳಿಯದಂತೆ ಭಕ್ತರಿಗೆ ಸೂಚನೆ

    Related Posts

    ‘ಏಕಪಕ್ಷೀಯ ನಿರ್ಧಾರ’ ಆರೋಪ; ಸಿಇಸಿ ಜ್ಞಾನೇಶ್ ಕುಮಾರ್ ವಿರುದ್ಧ ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆಗೆ ಸಮ್ಮತಿ

    September 29, 2026

    ಸಿನಿಮಾ ಯೋಜನೆಗಳ ಹೆಸರಿನಲ್ಲಿ ಹಣ ವರ್ಗಾವಣೆ ಆರೋಪ; ರಕುಲ್ ಪ್ರೀತ್ ಸಿಂಗ್‌ಗೆ ಸೇರಿದ ಸ್ಥಳಗಳಲ್ಲಿ ಐಟಿ ಪರಿಶೋಧನೆ

    September 29, 2026

    ಸ್ನೇಹಿತನ ಮಾತು ನಂಬಿ ಸೌದಿ ಅರೇಬಿಯಾದಲ್ಲಿ ‘ಡೆತ್ ಟ್ರ್ಯಾಪ್’ಗೆ ಸಿಲುಕಿದ ಕೇರಳ ಮೂಲದ ವ್ಯಕ್ತಿ

    September 29, 2026
    Add A Comment
    Leave A Reply Cancel Reply

    ಪ್ರಮುಖ ಸುದ್ದಿ

    ಮಂಗಳೂರು: ಎಂಆರ್‌ಪಿಎಲ್‌ನಲ್ಲಿ ಭಾರೀ ಸ್ಫೋಟ ;ಆಕಾಶದೆತ್ತರ ಕಾಣಿಸಿದ ಹೊಗೆ,ಅಗ್ನಿಶಾಮಕ ದಳದ ಕಾರ್ಯಾಚರಣೆ

    September 30, 2026

    ಕರಾವಳಿಯಲ್ಲಿ ಹೈಕೋರ್ಟ್ ಪೀಠ ಸ್ಥಾಪನೆ ಸಾಧ್ಯತೆ; ಮುಖ್ಯ ನ್ಯಾಯಮೂರ್ತಿಯಿಂದ ಸಮಿತಿ ರಚನೆ

    September 30, 2026

    25ಕ್ಕೂ ಹೆಚ್ಚು ದೂರುಗಳ ಬೆನ್ನಲ್ಲೇ ನಕಲಿ ಲೇಡಿ PSI ಅರೆಸ್ಟ್; ಚಿನ್ನ, ಕಾರು, ಹಣ ವಂಚನೆ ಆರೋಪ

    September 30, 2026

    ಕೊಲೆಯತ್ನ ಕೇಸ್‌ನಲ್ಲಿ A1, A2 ಆರೋಪಿಗಳಾಗಿದ್ದ ಪತಿ–ಮಹಿಳೆ ಇಬ್ಬರ ಮೃತದೇಹ ಸೌಪರ್ಣಿಕಾ ನದಿ ಬಳಿ ಪತ್ತೆ

    September 30, 2026
    Advertisement






    Nirantara News is powered by a team of experienced media professionals with decades of expertise in television journalism. Our mission is to be the voice of the people by delivering truthful, unbiased, and responsible news. We cover local, state, national, and international news, along with the latest updates on health, entertainment, real estate, business, technology, and more.

    Backed by experienced reporters and a strong legal team, we are committed to providing accurate news and honest reviews.

    Subscribe to Nirantara News and support trusted journalism.

    Top Insights

    25ಕ್ಕೂ ಹೆಚ್ಚು ದೂರುಗಳ ಬೆನ್ನಲ್ಲೇ ನಕಲಿ ಲೇಡಿ PSI ಅರೆಸ್ಟ್; ಚಿನ್ನ, ಕಾರು, ಹಣ ವಂಚನೆ ಆರೋಪ

    September 30, 2026

    ಕೊಲೆಯತ್ನ ಕೇಸ್‌ನಲ್ಲಿ A1, A2 ಆರೋಪಿಗಳಾಗಿದ್ದ ಪತಿ–ಮಹಿಳೆ ಇಬ್ಬರ ಮೃತದೇಹ ಸೌಪರ್ಣಿಕಾ ನದಿ ಬಳಿ ಪತ್ತೆ

    September 30, 2026
    Social Follow
    • Facebook
    • Instagram
    © 2026 Nirantara News. Designed by Blueline Computers.
    • Home
    • ಕರಾವಳಿ ಸುದ್ದಿ
    • ಅಪರಾಧ
    • ಕರ್ನಾಟಕ
    • ರಾಷ್ಟ್ರೀಯ
    • ಅಂತರಾಷ್ಟ್ರೀಯ
    • ಸ್ಥಿರಾಸ್ತಿ ಮತ್ತು ಮೂಲಸೌಕರ್ಯ
    • ಆರೋಗ್ಯ

    Type above and press Enter to search. Press Esc to cancel.