Close Menu
    What's Hot

    ಮೂಡುಬಿದಿರೆ: ವಿದ್ಯಾರ್ಥಿಗಳ ಮೇಲೆ ಅನೈತಿಕ ಪೊಲೀಸ್‌ಗಿರಿ ಆರೋಪ; ಕಾಂಗ್ರೆಸ್‌ ಮುಖಂಡ ಸೇರಿ ಮೂವರ ವಿರುದ್ಧ FIR

    September 3, 2026

    ಬಾಡಿಗೆ ಮನೆಯಲ್ಲೇ ಅಕ್ರಮ ಹುಕ್ಕಾ ಬಾರ್; ಖಾಸಗಿ ಕಂಪನಿ ಹಿರಿಯ ವಿಶ್ಲೇಷಕ ಸೇರಿ ಇಬ್ಬರು ಬಂಧನ

    September 3, 2026

    ಫಾತಿಮಾ ನಿಶಾನ ಹತ್ಯೆ ಪ್ರಕರಣ: ಅತ್ತೆ–ನಾದಿನಿಗೆ ಕೋರ್ಟ್‌ನಿಂದ ಜಾಮೀನು

    September 3, 2026
    Facebook X (Twitter) Instagram
    Facebook X (Twitter) Instagram
    Nirantara News | Kannada News | Karnataka Latest UpdatesNirantara News | Kannada News | Karnataka Latest Updates
    Subscribe
    • Homepage
    • ಕರಾವಳಿ ಸುದ್ದಿ
    • ಅಪರಾಧ
    • ಕರ್ನಾಟಕ
    • ರಾಷ್ಟ್ರೀಯ
    • ಅಂತರಾಷ್ಟ್ರೀಯ
    • ಸ್ಥಿರಾಸ್ತಿ ಮತ್ತು ಮೂಲಸೌಕರ್ಯ
    • ಆರೋಗ್ಯ

    Nirantara News | Kannada News | Karnataka Latest UpdatesNirantara News | Kannada News | Karnataka Latest Updates
    Home»ಅಪರಾಧ»13 ವರ್ಷಗಳ ಬಳಿಕ ಮತ್ತೆ ಸದ್ದು ಮಾಡಿದ ಹೇಮಂತ್ ಪೂಜಾರಿ ಹೆಸರು: ಡೇವಿಡ್ ಹತ್ಯೆ ಪ್ರಕರಣದಲ್ಲಿ ನಂಟು, ಬದುಕಿದ್ದಾನಾ ಭೂಗತ ಪಾತಕಿ?
    ಅಪರಾಧ

    13 ವರ್ಷಗಳ ಬಳಿಕ ಮತ್ತೆ ಸದ್ದು ಮಾಡಿದ ಹೇಮಂತ್ ಪೂಜಾರಿ ಹೆಸರು: ಡೇವಿಡ್ ಹತ್ಯೆ ಪ್ರಕರಣದಲ್ಲಿ ನಂಟು, ಬದುಕಿದ್ದಾನಾ ಭೂಗತ ಪಾತಕಿ?

    adminBy adminAugust 26, 2026No Comments1 Min Read

    ಉಡುಪಿ: 2013ರಲ್ಲಿ ನಿಗೂಢವಾಗಿ ಕಣ್ಮರೆಯಾಗಿದ್ದ ಭೂಗತ ಪಾತಕಿ ಹೇಮಂತ್ ಪೂಜಾರಿ ಸತ್ತಿದ್ದಾನೆ ಎಂದೇ ಎಲ್ಲರೂ ತಿಳಿದುಕೊಂಡಿದ್ದರು. ಆದರೀಗ ಆತನ ಹೆಸರು ಮತ್ತೆ ಸದ್ದು ಮಾಡಿದೆ. ಉಡುಪಿ ಜಿಲ್ಲೆಯ ಮುದರಂಗಡಿ ಉದ್ಯಮಿ ಡೇವಿಡ್ ಹತ್ಯೆ ಪ್ರಕರಣದ ಆರೋಪಿಗೆ ಮುಂಬೈ ಭೂಗತ ಜಗತ್ತಿಗಲ್ಲಿ ಸಂಚಲನ ಮೂಡಿಸಿ, ಸುದ್ದಿಯಾಗಿದ್ದ ಹೆಚ್​​ಪಿ ಅಲಿಯಾಸ್​​ ಹೇಮಂತ್ ಪೂಜಾರಿ ನಂಟಿರುವ ಶಂಕೆ ಪೊಲೀಸರ ತನಿಖೆ ವೇಳೆ ವ್ಯಕ್ತವಾಗಿದೆ.

    ಹೌದು, ಡೇವಿಡ್ ಹತ್ಯೆಯ ಬಳಿಕ ಶೂಟರ್ ರಾಜು ನೇರವಾಗಿ ವ್ಯಕ್ತಿಯೋರ್ವನಿಗೆ ಕರೆ ಮಾಡಿದ್ದು, ನಿನಗೆ ಸಲ್ಲಬೇಕಾದ ಹಣ ಸಲ್ಲುತ್ತದೆ ನೀನು ಸುರಕ್ಷಿತ ಜಾಗ ನೋಡಿ ಅಡಗಿಕೋ ಎಂದು ಆ ಕಡೆಯಿಂದ ಮಾತನಾಡಿರೋದು ಗೊತ್ತಾಗಿದೆ. ಶೂಟರ್ ಸಂಭಾಷಣೆ ನಡೆಸಿರೋದು ಹೇಮಂತ್ ಪೂಜಾರಿ ಬಳಿಯೇ ಎನ್ನಲಾಗಿದೆ. ಇದಕ್ಕೆ ಪೂರಕವೆಂಬಂತೆ ಡೇವಿಡ್ ಹತ್ಯೆಯ ಬಳಿಕ ಹೋಟೇಲ್ ಉದ್ಯಮಿಯ ಜೊತೆಗೂ ಹೆಚ್​​ಪಿಯೇ ಮಾತನಾಡಿದ್ದಾನೆ ಎಂದು ಹೇಳಲಾಗಿರುವ ಆಡಿಯೋ ಸಿಕ್ಕಿದ್ದು, ಅದರಲ್ಲಿ ಮೇ ಹೆಚ್​​ಪಿ ಬೋಲ್ ರಹಾ ಹೂಂ ಎಂದು ಮಾತನಾಡಿರೋದು ಗೊತ್ತಾಗಿದೆಯಂತೆ.

    ಯೂರು ಈ ಹೇಮಂತ್ ಪೂಜಾರಿ?

    ಬಾಂಬೆಯ ಘಾಟ್‌ಗೋಪರ್‌ನಲ್ಲಿ ಹೋಟೆಲ್​​ನಲ್ಲಿ ಸಪ್ಲೈಯರ್​ ಕೆಲಸ ಮಾಡುತ್ತಿದ್ದ ಹೇಮಂತ್​​ ಪೂಜಾರಿ 1999ರಿಂದ ಭೂಗತ ಲೋಕಕ್ಕೆ ಕಾಲಿಟ್ಟಿದ್ದ. ಛೋಟಾ ರಾಜನ್ ಗ್ಯಾಂಗಿನ ಪ್ರಮುಖ ಶೂಟರ್ ಆಗಿದ್ದ ಈತ, ಮುಂಬೈನ ಗೋರೆಗಾಂವ್‌ನಲ್ಲಿ ಮಾರ್ಚ್ 2011ರಲ್ಲಿ 75 ವರ್ಷದ ಕೇಕ್ ಅಂಗಡಿ ಮಾಲೀಕ ಅಂಗಾರ ಪೂಜಾರಿ ಎಂಬವರನ್ನು ಶೂಟ್ ಮಾಡಿ ಕೊಂದಿದ್ದ. ನಂತರ ಯಾವುದೇ ಅಪರಾಧದಲ್ಲಿ ಭಾಗಿಯಾಗದೆ ಸೈಲೆಂಟ್ ಆಗಿದ್ದ ಹೆಚ್​​ಪಿ ಸತ್ತಿದ್ದಾನೆ ಎಂಬ ಬಗ್ಗೆ 2013ರಲ್ಲಿ ಸುದ್ದಿಯಾಗಿತ್ತು. ಆದರೆ ಆತನ ಹೆಸರೀಗ ಆಗಸ್ಟ್ 7ರಂದು ಮುದರಂಗಡಿಯಲ್ಲಿ ನಡೆದ ಡೇವಿಡ್ ಶೂಟೌಟ್ ಪ್ರಕರಣದಲ್ಲಿ ಮತ್ತೆ ಮುನ್ನಲೆಗೆ ಬಂದಿದೆ. ಹೀಗಾಗಿ ಆತ ಬದುಕಿರುವ ಬಗ್ಗೆ ಅನುಮಾನಗಳು ವ್ಯಕ್ತವಾಗಿದೆಯಾದರೂ, ಆಡಿಯೋದಲ್ಲಿರೋದು ನಿಜಕ್ಕೂ ಆತನ ಧ್ವನಿಯಾ ಎಂಬುದು ಇನ್ನಷ್ಟೇ ದೃಢಪಡಬೇಕಿದೆ.

    #crime #karnataka
    Previous Articleವಿಜಯಪುರದಲ್ಲಿ ಭೀಕರ ದುರಂತ: ಇಬ್ಬರು ಮಕ್ಕಳು ಸೇರಿ ಒಂದೇ ಕುಟುಂಬದ 6 ಮಂದಿ ಶವವಾಗಿ ಪತ್ತೆ
    Next Article ಬೆಳಗಾವಿಯಲ್ಲಿ ಬರ್ಬರ ಹತ್ಯೆ: ಸ್ಟೇಟಸ್ ವಿಚಾರಕ್ಕೆ ಅನೈತಿಕ ಸಂಬಂಧದ ಶಂಕೆ, ಕುಡುಗೋಲಿನಿಂದ ವ್ಯಕ್ತಿಯ ಕೊಲೆ

    Related Posts

    ಮೂಡುಬಿದಿರೆ: ವಿದ್ಯಾರ್ಥಿಗಳ ಮೇಲೆ ಅನೈತಿಕ ಪೊಲೀಸ್‌ಗಿರಿ ಆರೋಪ; ಕಾಂಗ್ರೆಸ್‌ ಮುಖಂಡ ಸೇರಿ ಮೂವರ ವಿರುದ್ಧ FIR

    September 3, 2026

    ಬಾಡಿಗೆ ಮನೆಯಲ್ಲೇ ಅಕ್ರಮ ಹುಕ್ಕಾ ಬಾರ್; ಖಾಸಗಿ ಕಂಪನಿ ಹಿರಿಯ ವಿಶ್ಲೇಷಕ ಸೇರಿ ಇಬ್ಬರು ಬಂಧನ

    September 3, 2026

    ಫಾತಿಮಾ ನಿಶಾನ ಹತ್ಯೆ ಪ್ರಕರಣ: ಅತ್ತೆ–ನಾದಿನಿಗೆ ಕೋರ್ಟ್‌ನಿಂದ ಜಾಮೀನು

    September 3, 2026
    Add A Comment
    Leave A Reply Cancel Reply

    ಪ್ರಮುಖ ಸುದ್ದಿ

    ಮೂಡುಬಿದಿರೆ: ವಿದ್ಯಾರ್ಥಿಗಳ ಮೇಲೆ ಅನೈತಿಕ ಪೊಲೀಸ್‌ಗಿರಿ ಆರೋಪ; ಕಾಂಗ್ರೆಸ್‌ ಮುಖಂಡ ಸೇರಿ ಮೂವರ ವಿರುದ್ಧ FIR

    September 3, 2026

    ಬಾಡಿಗೆ ಮನೆಯಲ್ಲೇ ಅಕ್ರಮ ಹುಕ್ಕಾ ಬಾರ್; ಖಾಸಗಿ ಕಂಪನಿ ಹಿರಿಯ ವಿಶ್ಲೇಷಕ ಸೇರಿ ಇಬ್ಬರು ಬಂಧನ

    September 3, 2026

    ಫಾತಿಮಾ ನಿಶಾನ ಹತ್ಯೆ ಪ್ರಕರಣ: ಅತ್ತೆ–ನಾದಿನಿಗೆ ಕೋರ್ಟ್‌ನಿಂದ ಜಾಮೀನು

    September 3, 2026

    ರೇಣುಕಾಸ್ವಾಮಿ ಪ್ರಕರಣ: ದರ್ಶನ್‌ ಗ್ಯಾಂಗ್‌ನಿಂದ ದೂರವಾಗಲು A-6, A-7 ಆರೋಪಿಗಳ ಯತ್ನ

    September 3, 2026
    Advertisement

    Nirantara News is powered by a team of experienced media professionals with decades of expertise in television journalism. Our mission is to be the voice of the people by delivering truthful, unbiased, and responsible news. We cover local, state, national, and international news, along with the latest updates on health, entertainment, real estate, business, technology, and more.

    Backed by experienced reporters and a strong legal team, we are committed to providing accurate news and honest reviews.

    Subscribe to Nirantara News and support trusted journalism.

    Top Insights

    ಬಾಡಿಗೆ ಮನೆಯಲ್ಲೇ ಅಕ್ರಮ ಹುಕ್ಕಾ ಬಾರ್; ಖಾಸಗಿ ಕಂಪನಿ ಹಿರಿಯ ವಿಶ್ಲೇಷಕ ಸೇರಿ ಇಬ್ಬರು ಬಂಧನ

    September 3, 2026

    ರೇಣುಕಾಸ್ವಾಮಿ ಪ್ರಕರಣ: ದರ್ಶನ್‌ ಗ್ಯಾಂಗ್‌ನಿಂದ ದೂರವಾಗಲು A-6, A-7 ಆರೋಪಿಗಳ ಯತ್ನ

    September 3, 2026
    Social Follow
    • Facebook
    • Instagram
    © 2026 Nirantara News. Designed by Blueline Computers.
    • Home
    • ಕರಾವಳಿ ಸುದ್ದಿ
    • ಅಪರಾಧ
    • ಕರ್ನಾಟಕ
    • ರಾಷ್ಟ್ರೀಯ
    • ಅಂತರಾಷ್ಟ್ರೀಯ
    • ಸ್ಥಿರಾಸ್ತಿ ಮತ್ತು ಮೂಲಸೌಕರ್ಯ
    • ಆರೋಗ್ಯ

    Type above and press Enter to search. Press Esc to cancel.