Close Menu
    What's Hot

    ಪೊಲೀಸರಿಂದ ತಪ್ಪಿಸಿಕೊಳ್ಳಲು ಕೆರೆಯಲ್ಲಿ ಅಡಗಿ ಕುಳಿತಿದ್ದ ರೌಡಿಶೀಟರ್‌: ನೀರಿಗೆ ಧುಮುಕಿ ಬಂಧಿಸಿದ ಪೊಲೀಸರು

    September 3, 2026

    ಮಂಗಳೂರಿನಲ್ಲಿ ಅನಧಿಕೃತ ಬೀದಿಬದಿ ವ್ಯಾಪಾರಕ್ಕೆ ಬ್ರೇಕ್: ತೆರವುಗೊಳಿಸಲು ಮನಪಾ ಆಯುಕ್ತರ ಸೂಚನೆ

    September 3, 2026

    ಮೈಸೂರಿನಲ್ಲಿ ಮತ್ತೊಂದು ಗೋಲ್ಡ್ ಸ್ಕ್ಯಾಮ್: 80ಕ್ಕೂ ಹೆಚ್ಚು ಜನರಿಗೆ ಮೋಸ, ಜ್ಯುವೆಲರಿ ಮಾಲೀಕ ಪೊಲೀಸ್ ವಶಕ್ಕೆ

    September 3, 2026
    Facebook X (Twitter) Instagram
    Facebook X (Twitter) Instagram
    Nirantara News | Kannada News | Karnataka Latest UpdatesNirantara News | Kannada News | Karnataka Latest Updates
    Subscribe
    • Homepage
    • ಕರಾವಳಿ ಸುದ್ದಿ
    • ಅಪರಾಧ
    • ಕರ್ನಾಟಕ
    • ರಾಷ್ಟ್ರೀಯ
    • ಅಂತರಾಷ್ಟ್ರೀಯ
    • ಸ್ಥಿರಾಸ್ತಿ ಮತ್ತು ಮೂಲಸೌಕರ್ಯ
    • ಆರೋಗ್ಯ


    Nirantara News | Kannada News | Karnataka Latest UpdatesNirantara News | Kannada News | Karnataka Latest Updates
    Home»ಕರ್ನಾಟಕ»ದಸರಾ ಗಜಪಡೆಗೆ ಸಾಂಪ್ರದಾಯಿಕ ಸ್ವಾಗತ; ಅರಮನೆ ಪ್ರವೇಶದ ವೇಳೆ ಬೆಚ್ಚಿಬಿದ್ದ ಶ್ರೀರಾಮ ಆನೆ
    ಕರ್ನಾಟಕ

    ದಸರಾ ಗಜಪಡೆಗೆ ಸಾಂಪ್ರದಾಯಿಕ ಸ್ವಾಗತ; ಅರಮನೆ ಪ್ರವೇಶದ ವೇಳೆ ಬೆಚ್ಚಿಬಿದ್ದ ಶ್ರೀರಾಮ ಆನೆ

    adminBy adminAugust 28, 2026No Comments1 Min Read

    ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಹಿನ್ನೆಲೆಯಲ್ಲಿ ದಸರಾ ಗಜಪಡೆಗಳ ಅರಮನೆ ಪ್ರವೇಶಕ್ಕೆ ಇಂದು ಸಾಂಪ್ರದಾಯಿಕ ಚಾಲನೆ ದೊರೆಯಿತು. ಅರಣ್ಯ ಭವನದಲ್ಲಿ ಬೆಳಗ್ಗೆ 9 ಆನೆಗಳಿಗೆ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಗಜಪಡೆಗಳು ಮೈಸೂರು ಅರಮನೆಯತ್ತ ಪ್ರಯಾಣ ಬೆಳೆಸಿದವು.

    ಶುಭ ಲಗ್ನದಲ್ಲಿ ಗಜಪಡೆಗಳನ್ನು ಅಂಬಾವಿಲಾಸ ಅರಮನೆಗೆ ಬರಮಾಡಿಕೊಳ್ಳುವ ಹಿನ್ನೆಲೆಯಲ್ಲಿ ಮೈಸೂರು ಜಿಲ್ಲಾಡಳಿತ ವತಿಯಿಂದ ಸಾಂಪ್ರದಾಯಿಕ ಸ್ವಾಗತ ಕಾರ್ಯಕ್ರಮ ಆಯೋಜಿಸಲಾಗಿತ್ತು. ಅರಮನೆ ದ್ವಾರದ ಬಳಿ ಆನೆಗಳಿಗೆ ಸಂಪ್ರದಾಯಬದ್ಧವಾಗಿ ಸ್ವಾಗತ ಕೋರಲಾಯಿತು.

    ಕಾರ್ಯಕ್ರಮದಲ್ಲಿ ಅರಣ್ಯ ಸಚಿವ ರಾಮಲಿಂಗಾರೆಡ್ಡಿ, ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಡಾ. ಯತೀಂದ್ರ ಸಿದ್ದರಾಮಯ್ಯ ಸೇರಿದಂತೆ ಹಲವು ಗಣ್ಯರು ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು. ದಸರಾ ಜಂಬೂಸವಾರಿಗೆ ಸಜ್ಜಾಗುತ್ತಿರುವ ಗಜಪಡೆಯ ಆಗಮನದ ಹಿನ್ನೆಲೆಯಲ್ಲಿ ಅರಮನೆ ಆವರಣದಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿತ್ತು.

    ಅರಮನೆ ಪ್ರವೇಶದ ವೇಳೆ ಗಾಬರಿಗೊಂಡ ಶ್ರೀರಾಮ

    ಇದೇ ವೇಳೆ ಗಜಪಡೆಯಲ್ಲಿದ್ದ ಶ್ರೀರಾಮ ಆನೆ ಅರಮನೆ ಪ್ರವೇಶಿಸುವ ಸಂದರ್ಭದಲ್ಲಿ ಏಕಾಏಕಿ ಗಾಬರಿಗೊಂಡ ಘಟನೆ ನಡೆದಿದೆ. ಅರಮನೆ ಮುಂಭಾಗದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಸೇರಿದ್ದರಿಂದ ಶ್ರೀರಾಮ ಆನೆ ಕೆಲಕಾಲ ಆತಂಕಗೊಂಡು ಹಿಂದಕ್ಕೆ ಸರಿಯಲು ಪ್ರಯತ್ನಿಸಿತು.

    ಅರಮನೆ ದ್ವಾರದ ಬಳಿ ಅಳವಡಿಸಲಾಗಿದ್ದ ಬ್ಯಾರಿಕೇಡ್‌ಗಳು, ಜನರ ಓಡಾಟ ಹಾಗೂ ಸುತ್ತಮುತ್ತಲಿನ ಚಟುವಟಿಕೆಗಳಿಂದ ಆನೆ ಮತ್ತಷ್ಟು ಗಾಬರಿಗೊಂಡಿತು. ಇದೇ ವೇಳೆ ಕೇಳಿಬಂದ ನಾದಸ್ವರದ ಶಬ್ದವೂ ಆನೆಯ ಆತಂಕಕ್ಕೆ ಕಾರಣವಾಗಿದ್ದು, ಅರಮನೆ ಆವರಣ ಪ್ರವೇಶಿಸಲು ಕೆಲಕಾಲ ಹಿಂದೇಟು ಹಾಕಿತು.

    ಪರಿಸ್ಥಿತಿ ಗಮನಿಸಿದ ಮಾವುತರು ಹಾಗೂ ಕಾವಾಡಿಗರು ತಕ್ಷಣವೇ ಶ್ರೀರಾಮ ಆನೆಯನ್ನು ನಿಯಂತ್ರಣಕ್ಕೆ ತೆಗೆದುಕೊಂಡರು. ಅಗತ್ಯ ಮುನ್ನೆಚ್ಚರಿಕೆ ವಹಿಸಿ ಆನೆಯನ್ನು ಸಮಾಧಾನಪಡಿಸಿದ ಬಳಿಕ ಸುರಕ್ಷಿತವಾಗಿ ಅರಮನೆ ಆವರಣದೊಳಗೆ ಕರೆತರಲಾಯಿತು.

    ಘಟನೆಯಿಂದ ಕೆಲಕಾಲ ಅರಮನೆ ಮುಂಭಾಗದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದ್ದರೂ, ಯಾವುದೇ ಅನಾಹುತ ಸಂಭವಿಸಿಲ್ಲ. ಬಳಿಕ ಗಜಪಡೆಯ ಉಳಿದ ಆನೆಗಳೊಂದಿಗೆ ಶ್ರೀರಾಮ ಆನೆಯೂ ಅರಮನೆ ಆವರಣದಲ್ಲಿ ನೆಲೆಗೊಂಡಿತು.

    ಮೈಸೂರು ದಸರಾ ಜಂಬೂಸವಾರಿಯ ಪ್ರಮುಖ ಆಕರ್ಷಣೆಯಾಗಿರುವ ಗಜಪಡೆಯ ತರಬೇತಿ ಹಾಗೂ ಸಿದ್ಧತೆಗಳು ಮುಂದುವರಿಯಲಿದ್ದು, ದಸರಾ ಉತ್ಸವದ ಪ್ರಮುಖ ದಿನಗಳಿಗೆ ಆನೆಗಳನ್ನು ಸಜ್ಜುಗೊಳಿಸಲಾಗುತ್ತಿದೆ.




    #karnataka
    Previous Articleಬಂಟ್ವಾಳ: ‘ಮೃತ’ನೆಂದು ಭಾವಿಸಿ ಅಂತ್ಯಕ್ರಿಯೆಗೆ ಸಿದ್ಧತೆ, ರುದ್ರಭೂಮಿಯಲ್ಲೂ ವ್ಯವಸ್ಥೆ; ಬಳಿಕ ಏಕಾಏಕಿ ಉಸಿರಾಡಿದ ಯುವಕ, ಕುಟುಂಬಸ್ಥರಿಗೆ ಶಾಕ್
    Next Article ನಕಲಿ ಔಷಧಿ ಜಾಲದ ಕಿಂಗ್‌ಪಿನ್ ಪ್ರಶಾಂತ್ ಅಜರ್ ಬೈಜಾನ್‌ನಲ್ಲಿ ವಶಕ್ಕೆ; ಭಾರತಕ್ಕೆ ಹಸ್ತಾಂತರಕ್ಕೆ ಸಿದ್ಧತೆ

    Related Posts

    ಪೊಲೀಸರಿಂದ ತಪ್ಪಿಸಿಕೊಳ್ಳಲು ಕೆರೆಯಲ್ಲಿ ಅಡಗಿ ಕುಳಿತಿದ್ದ ರೌಡಿಶೀಟರ್‌: ನೀರಿಗೆ ಧುಮುಕಿ ಬಂಧಿಸಿದ ಪೊಲೀಸರು

    September 3, 2026

    ಮೈಸೂರಿನಲ್ಲಿ ಮತ್ತೊಂದು ಗೋಲ್ಡ್ ಸ್ಕ್ಯಾಮ್: 80ಕ್ಕೂ ಹೆಚ್ಚು ಜನರಿಗೆ ಮೋಸ, ಜ್ಯುವೆಲರಿ ಮಾಲೀಕ ಪೊಲೀಸ್ ವಶಕ್ಕೆ

    September 3, 2026

    ಸಾಲ ತೀರಿಸಲು ಹಣ ನೀಡಲಿಲ್ಲವೆಂದು ತಂದೆಯನ್ನೇ ರಾಡ್‌ನಿಂದ ಹೊಡೆದು ಕೊಂದ ಮಗ

    September 2, 2026
    Add A Comment
    Leave A Reply Cancel Reply

    ಪ್ರಮುಖ ಸುದ್ದಿ

    ಪೊಲೀಸರಿಂದ ತಪ್ಪಿಸಿಕೊಳ್ಳಲು ಕೆರೆಯಲ್ಲಿ ಅಡಗಿ ಕುಳಿತಿದ್ದ ರೌಡಿಶೀಟರ್‌: ನೀರಿಗೆ ಧುಮುಕಿ ಬಂಧಿಸಿದ ಪೊಲೀಸರು

    September 3, 2026

    ಮಂಗಳೂರಿನಲ್ಲಿ ಅನಧಿಕೃತ ಬೀದಿಬದಿ ವ್ಯಾಪಾರಕ್ಕೆ ಬ್ರೇಕ್: ತೆರವುಗೊಳಿಸಲು ಮನಪಾ ಆಯುಕ್ತರ ಸೂಚನೆ

    September 3, 2026

    ಮೈಸೂರಿನಲ್ಲಿ ಮತ್ತೊಂದು ಗೋಲ್ಡ್ ಸ್ಕ್ಯಾಮ್: 80ಕ್ಕೂ ಹೆಚ್ಚು ಜನರಿಗೆ ಮೋಸ, ಜ್ಯುವೆಲರಿ ಮಾಲೀಕ ಪೊಲೀಸ್ ವಶಕ್ಕೆ

    September 3, 2026

    ದಿಶಾ ಸಾಲಿಯಾನ್‌ ಸಾವು ಪ್ರಕರಣಕ್ಕೆ ಟ್ವಿಸ್ಟ್: ಸಿಬಿಐ ತನಿಖೆಗೆ ಹೈಕೋರ್ಟ್‌ ಆದೇಶ

    September 2, 2026
    Advertisement






    Nirantara News is powered by a team of experienced media professionals with decades of expertise in television journalism. Our mission is to be the voice of the people by delivering truthful, unbiased, and responsible news. We cover local, state, national, and international news, along with the latest updates on health, entertainment, real estate, business, technology, and more.

    Backed by experienced reporters and a strong legal team, we are committed to providing accurate news and honest reviews.

    Subscribe to Nirantara News and support trusted journalism.

    Top Insights

    ಪೊಲೀಸರಿಂದ ತಪ್ಪಿಸಿಕೊಳ್ಳಲು ಕೆರೆಯಲ್ಲಿ ಅಡಗಿ ಕುಳಿತಿದ್ದ ರೌಡಿಶೀಟರ್‌: ನೀರಿಗೆ ಧುಮುಕಿ ಬಂಧಿಸಿದ ಪೊಲೀಸರು

    September 3, 2026

    ಮೈಸೂರಿನಲ್ಲಿ ಮತ್ತೊಂದು ಗೋಲ್ಡ್ ಸ್ಕ್ಯಾಮ್: 80ಕ್ಕೂ ಹೆಚ್ಚು ಜನರಿಗೆ ಮೋಸ, ಜ್ಯುವೆಲರಿ ಮಾಲೀಕ ಪೊಲೀಸ್ ವಶಕ್ಕೆ

    September 3, 2026
    Social Follow
    • Facebook
    • Instagram
    © 2026 Nirantara News. Designed by Blueline Computers.
    • Home
    • ಕರಾವಳಿ ಸುದ್ದಿ
    • ಅಪರಾಧ
    • ಕರ್ನಾಟಕ
    • ರಾಷ್ಟ್ರೀಯ
    • ಅಂತರಾಷ್ಟ್ರೀಯ
    • ಸ್ಥಿರಾಸ್ತಿ ಮತ್ತು ಮೂಲಸೌಕರ್ಯ
    • ಆರೋಗ್ಯ

    Type above and press Enter to search. Press Esc to cancel.