Close Menu
    What's Hot

    ಪುತ್ತೂರು:ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಸಮಿತಿ ವಿರುದ್ಧ ಗಂಭೀರ ಆರೋಪ: ಜಿಲ್ಲಾಧಿಕಾರಿ ನೇತೃತ್ವದಲ್ಲಿ ತನಿಖೆಗೆ ಒತ್ತಾಯ

    September 7, 2026

    ತಿರುಪತಿ ದರ್ಶನ ಮುಗಿಸಿ ವಾಪಸ್ ಬರುತ್ತಿದ್ದ ಕಾರು ಡಿವೈಡರ್‌ಗೆ ಡಿಕ್ಕಿ, ಕುಟುಂಬದ ನಾಲ್ವರು ಸಾವು

    September 7, 2026

    ಮದುವೆಯ ಭರವಸೆ ನೀಡಿ ದೈಹಿಕ ಸಂಪರ್ಕ ಆರೋಪ: ಮಹಿಳೆ ಮೇಲೆ ಹಲ್ಲೆ, ಬೆಳ್ತಂಗಡಿ ಮೂಲದ ಯುವ ವಕೀಲನ ವಿರುದ್ಧ ಪ್ರಕರಣ ದಾಖಲು

    September 7, 2026
    Facebook X (Twitter) Instagram
    Facebook X (Twitter) Instagram
    Nirantara News | Kannada News | Karnataka Latest UpdatesNirantara News | Kannada News | Karnataka Latest Updates
    Subscribe
    • Homepage
    • ಕರಾವಳಿ ಸುದ್ದಿ
    • ಅಪರಾಧ
    • ಕರ್ನಾಟಕ
    • ರಾಷ್ಟ್ರೀಯ
    • ಅಂತರಾಷ್ಟ್ರೀಯ
    • ಸ್ಥಿರಾಸ್ತಿ ಮತ್ತು ಮೂಲಸೌಕರ್ಯ
    • ಆರೋಗ್ಯ


    Nirantara News | Kannada News | Karnataka Latest UpdatesNirantara News | Kannada News | Karnataka Latest Updates
    Home»ಕರ್ನಾಟಕ»ಉಡುಪಿ: ಮಧ್ವ ಸರೋವರಕ್ಕೆ ಕೊಂಡೊಯ್ಯುವ ವೇಳೆ ಕೈಜಾರಿ ಬಿದ್ದ ಕೃಷ್ಣನ ಮಣ್ಣಿನ ಮೂರ್ತಿ
    ಕರ್ನಾಟಕ

    ಉಡುಪಿ: ಮಧ್ವ ಸರೋವರಕ್ಕೆ ಕೊಂಡೊಯ್ಯುವ ವೇಳೆ ಕೈಜಾರಿ ಬಿದ್ದ ಕೃಷ್ಣನ ಮಣ್ಣಿನ ಮೂರ್ತಿ

    adminBy adminSeptember 7, 2026No Comments2 Mins Read

    ಉಡುಪಿ: ವಿಟ್ಲಪಿಂಡಿ ಉತ್ಸವದ ವೇಳೆ ಅವಘಡವೊಂದು ನಡೆದಿದೆ. ಶ್ರೀಕೃಷ್ಣನ ಮಣ್ಣಿನ ಮೂರ್ತಿಯು ಕೆಳಗೆ ಬಿದ್ದಿದೆ. ರಥೋತ್ಸವ ಮುಗಿದ ಬಳಿಕ ಪರ್ಯಾಯ ಶ್ರೀಗಳಾದ ಶ್ರೀ ವೇದವರ್ಧನ ತೀರ್ಥ ಸ್ವಾಮೀಜಿ ಅವರು ಕೃಷ್ಣನ ಮಣ್ಣಿನ ಮೂರ್ತಿಯನ್ನ ಮಧ್ವ ಸರೋವರಕ್ಕೆ ಕೊಂಡೊಯ್ಯುತ್ತಿದ್ದರು.

    ಈ ವೇಳೆ ಹೀಗೊಂದು ಅವಘಡ ಆಗಿದೆ. ಅವರ ಕೈ ಜಾರಿ ಬಿದ್ದಿದ್ದು, ಅಪಚಾರ ಎಂಬಂತಾಗಿದೆ..

    ರಥೋತ್ಸವ ನಂತರ ಕೃಷ್ಣನ ಮೃಣ್ಮಯ ಮೂರ್ತಿಯನ್ನ ರಥದಿಂದ ಕೆಳಗೆ ಇಳಿಸಿ, ಮಧ್ವ ಸರೋವರಕ್ಕೆ ಕೊಂಡೊಯ್ಯಬೇಕಾಗಿತ್ತು. ಅದರೆ ರಥದಿಂದ ಇಳಿಸುವಾಗಲೇ ಕೈಜಾರಿ ಬಿದ್ದಿದೆ. ಉಡುಪಿಯಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಹಾಗೂ ವಿಟ್ಲಪಿಂಡಿ ಉತ್ಸವದ ಸಂದರ್ಭದಲ್ಲಿ ಕೃಷ್ಣನ ಮೃಣ್ಮಯ ಮೂರ್ತಿಯನ್ನ ಪೂಜಿಸಲಾಗುತ್ತದೆ. ಆದರೆ ಇಂದಿನ ಪೂಜೆ ಸಂದರ್ಭದಲ್ಲಿ ಅವಘಡ ಆಗಿದೆ.

    ಜಾರಿ ಬಿದ್ದ ಮಣ್ಣಿನ ಮೂರ್ತಿ

    ಉಡುಪಿ ಶ್ರೀಕೃಷ್ಣ ಜನ್ಮಾಷ್ಟಮಿ ನಿಮಿತ್ತ ವಿಟ್ಲಪಿಂಡಿಯಲ್ಲಿ ಉತ್ಸವ ಅದ್ಧೂರಿಯಾಗಿ ನಡೆಯಿತು. ರಥೋತ್ಸವವೂ ಸಂಭ್ರಮದಿಂದ ಜರುಗಿತು. ರಥೋತ್ಸವದ ಬಳಿಕ ಮಣ್ಣಿನ ಮೂರ್ತಿಯನ್ನ ಮಧ್ವ ಸರೋವರದಲ್ಲಿ ವಿಸರ್ಜಿಸಬೇಕಾಗಿತ್ತು. ಹೀಗೆ ವಿಸರ್ಜನೆಗೆ ಕೊಂಡೊಯ್ಯಬೇಕು ಎಂದು ಕೆಳಗೆ ಇಳಿಸುವಾಗ ಪರ್ಯಾಯ ಶೀರೂರು ಮಠದ ಶ್ರೀ ವೇದವರ್ಧನ ತೀರ್ಥ ಸ್ವಾಮೀಜಿ ಕೈಯಿಂದಲೇ ಜಾರಿ ಬಿದ್ದಿದೆ. ಇನ್ನೇನು ಕೆಲವೇ ಕ್ಷಣದಲ್ಲಿ ವಿಸರ್ಜನೆ ಆಗಬೇಕಿತ್ತು. ಅಷ್ಟರೊಳಗೆ ಅವಘಡ ಆಗಿದೆ..

    2 ದಿನಗಳ ಅದ್ಧೂರಿ ಕಾರ್ಯಕ್ರಮ

    ಶ್ರೀಕೃಷ್ಣ ಜನ್ಮಾಷ್ಟಮಿ ನಿಮಿತ್ತ ಶ್ರೀಕೃಷ್ಣ ಲೀಲೋತ್ಸವ ಅಥವಾ ವಿಟ್ಲಪಿಂಡಿ ಎರಡು ದಿನಗಳ ಕಾಲ ಅದ್ಧೂರಿಯಾಗಿ ನಡೆಯಿತು. ಶನಿವಾರ ಸಂಪನ್ನವಾಗಿದೆ. ಉಡುಪಿಯಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಅತ್ಯಂತ ಮುಖ್ಯ ಹಬ್ಬವಾಗಿದೆ. ಮಹಾವಿಷ್ಣು ಯೋಗ ನಿದ್ರೆಯಲ್ಲಿರುವ ಹಿನ್ನೆಲೆಯಲ್ಲಿ ಶ್ರೀಕೃಷ್ಣನ ಉತ್ಸವ ಮೂರ್ತಿಯನ್ನು ಭಾಗೀರಥಿ ಜಯಂತಿ ದಿನ ಒಳಗಿಟ್ಟು ಉತ್ಥಾನ ದ್ವಾದಶಿಗಷ್ಟೇ ಹೊರತೆಗೆಯಲಾಗುತ್ತಿದೆ. ಶ್ರೀಕೃಷ್ಣ ಜನ್ಮಾಷ್ಟಮಿ ಉತ್ಸವಕ್ಕೆ ಶ್ರೀಕೃಷ್ಣನ ಮೃಣ್ಮಯ ಮೂರ್ತಿ ಬಳಸಲಾಗುತ್ತಿದೆ. ಶ್ರೀಕೃಷ್ಣ ಮಠದಲ್ಲಿ ಪೂಜೆ ಬಳಿಕ ಮೃಣ್ಮಯ ಮೂರ್ತಿಯನ್ನು ತಂದು ಸ್ವರ್ಣ ರಥದಲ್ಲಿಟ್ಟು ಪೂಜೆ, ನೈವೇದ್ಯ ಬಳಿಕ ಶ್ರೀಕೃಷ್ಣ ಲೀಲೋತ್ಸವ ಆರಂಭಿಸಲಾಗಿತ್ತು. ರಥಬೀದಿಯ ತೆಂಕು ಭಾಗದ ವೇದಿಕೆಯಲ್ಲಿ ಪರ್ಯಾಯ ಶಿರೂರು ಶ್ರೀವೇದವರ್ಧನ ತೀರ್ಥ ಶ್ರೀಪಾದರು ಹಾಗೂ ಕೃಷ್ಣಾಪುರ ಮಠದ ಶ್ರೀವಿದ್ಯಾಸಾಗರತೀರ್ಥ ಶ್ರೀಪಾದರು ಭಕ್ತರಿಗೆ ಪ್ರಸಾದ ವಿತರಿಸಿದರು.

    ಲೀಲೋತ್ಸವ ನಿಮಿತ್ತ 13 ಗುರ್ಜಿ, 2 ಮಂಟಪ ಗುರ್ಜಿಗಳಲ್ಲಿ ಮೊಸರು, ಅರಳು ಬಣ್ಣದ ನೀರ ಕುಡಿಕೆಯನ್ನ ಒಡೆಯಲಾಯಿತು. ಅನೇಕರು ಗೊಲ್ಲವೇಷಧಾರಿಗಳಾಗಿದ್ದರು. ರಥದ ಬೀದಿಯಲ್ಲಿ ಹುಲಿ ವೇಷಧಾರಿಗಳ ಅಬ್ಬರ, ಮಹಿಷ ಸಹಿತ ಹಲವು ಅಸುರ ವೇಷಧಾರಿಗಳು ಇದ್ದರು. ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಭಕ್ತರಿಗೆ 1.50 ಲಕ್ಷ ಚಕ್ಕುಲಿ ಹಾಗೂ 1.50 ಲಕ್ಷ(ಐದು ಬಗೆ) ಉಂಡೆ ಪ್ಯಾಕೆಟ್‌ಗಳನ್ನು ಶ್ರೀಕೃಷ್ಣನ ಪ್ರಸಾದ ರೂಪದಲ್ಲಿ ವಿತರಿಸಲಾಯಿತು. ಒಟ್ಟಾರೆ ಸಂಭ್ರಮ, ಸಡಗರದಿಂದ ನಡೆದಿತ್ತು. ಆದರೆ ಕೊನೇದಾಗಿ ಇದೊಂದು ಅವಘಡ ಆಗಿದೆ.

    ಪ್ರತಿವರ್ಷವೂ ಈ ವಿಟ್ಲಪಿಂಡಿ ಉತ್ಸವವನ್ನ ಅದ್ಧೂರಿಯಾಗಿ ಆಚರಿಸಲಾಗುತ್ತದೆ. ಅಂದು ಶ್ರೀಕೃಷ್ಣನ ಮೃಣ್ಮಯ ಮೂರ್ತಿಯನ್ನ ರಥೋತ್ಸವದ ಬಳಿಕ ಜಾಗರೂಕತೆಯಿಂದಲೇ ವಿಸರ್ಜನೆ ಮಾಡಲಾಗುತ್ತದೆ. ಆದರೆ ಈ ಸಲ ಅವಘಡ ಅಗಿದೆ. ಶ್ರೀಕೃಷ್ಣನ ಮೂರ್ತಿ ಭಗ್ನಗೊಂಡಿದೆ. ಇದರಿಂದಾಗಿ ಅಲ್ಲಿ ನೆರೆದಿದ್ದ ಸಾವಿರಾರು ಭಕ್ತರಲ್ಲಿ ಆತಂಕ, ಗಾಬರಿಯ ವಾತಾವರಣ ನಿರ್ಮಾಣವಾಗಿತ್ತು.




    #karnataka
    Previous Articleಮಂತ್ರಾಲಯ ಮಠದ ಹೆಸರಿನಲ್ಲಿ ಆನ್‌ಲೈನ್ ವಂಚನೆ ಆರೋಪ: ಭಕ್ತರಿಗೆ ಶ್ರೀ ಸುಬುಧೇಂದ್ರ ತೀರ್ಥರ ಎಚ್ಚರಿಕೆ
    Next Article ಸ್ನೇಹಿತನಿಗೆ ಚೂರಿಯಿಂದ ಇರಿದು ಕೊಲೆ: ಮಂಗಳೂರಿನಿಂದ ಪರಾರಿಯಾಗುತ್ತಿದ್ದ ಆರೋಪಿಯ ಸೆರೆ

    Related Posts

    ತಿರುಪತಿ ದರ್ಶನ ಮುಗಿಸಿ ವಾಪಸ್ ಬರುತ್ತಿದ್ದ ಕಾರು ಡಿವೈಡರ್‌ಗೆ ಡಿಕ್ಕಿ, ಕುಟುಂಬದ ನಾಲ್ವರು ಸಾವು

    September 7, 2026

    ಮದುವೆಯ ಭರವಸೆ ನೀಡಿ ದೈಹಿಕ ಸಂಪರ್ಕ ಆರೋಪ: ಮಹಿಳೆ ಮೇಲೆ ಹಲ್ಲೆ, ಬೆಳ್ತಂಗಡಿ ಮೂಲದ ಯುವ ವಕೀಲನ ವಿರುದ್ಧ ಪ್ರಕರಣ ದಾಖಲು

    September 7, 2026

    ನ್ಯಾಯಾಲಯಕ್ಕೆ ಹಾಜರಾಗದೆ 6 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿಯ ಬಂಧನ

    September 7, 2026
    Add A Comment
    Leave A Reply Cancel Reply

    ಪ್ರಮುಖ ಸುದ್ದಿ

    ಪುತ್ತೂರು:ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಸಮಿತಿ ವಿರುದ್ಧ ಗಂಭೀರ ಆರೋಪ: ಜಿಲ್ಲಾಧಿಕಾರಿ ನೇತೃತ್ವದಲ್ಲಿ ತನಿಖೆಗೆ ಒತ್ತಾಯ

    September 7, 2026

    ತಿರುಪತಿ ದರ್ಶನ ಮುಗಿಸಿ ವಾಪಸ್ ಬರುತ್ತಿದ್ದ ಕಾರು ಡಿವೈಡರ್‌ಗೆ ಡಿಕ್ಕಿ, ಕುಟುಂಬದ ನಾಲ್ವರು ಸಾವು

    September 7, 2026

    ಮದುವೆಯ ಭರವಸೆ ನೀಡಿ ದೈಹಿಕ ಸಂಪರ್ಕ ಆರೋಪ: ಮಹಿಳೆ ಮೇಲೆ ಹಲ್ಲೆ, ಬೆಳ್ತಂಗಡಿ ಮೂಲದ ಯುವ ವಕೀಲನ ವಿರುದ್ಧ ಪ್ರಕರಣ ದಾಖಲು

    September 7, 2026

    ‘ಬೈ ಬೈ ಪಪ್ಪಾ’ ಎಂದು ತಂದೆಗೆ ಹೇಳಿ ಚೆನಾಬ್ ನದಿಗೆ ಜಿಗಿದ ಯುವತಿ; ಶವಕ್ಕಾಗಿ ಶೋಧ

    September 7, 2026
    Advertisement






    Nirantara News is powered by a team of experienced media professionals with decades of expertise in television journalism. Our mission is to be the voice of the people by delivering truthful, unbiased, and responsible news. We cover local, state, national, and international news, along with the latest updates on health, entertainment, real estate, business, technology, and more.

    Backed by experienced reporters and a strong legal team, we are committed to providing accurate news and honest reviews.

    Subscribe to Nirantara News and support trusted journalism.

    Top Insights

    ತಿರುಪತಿ ದರ್ಶನ ಮುಗಿಸಿ ವಾಪಸ್ ಬರುತ್ತಿದ್ದ ಕಾರು ಡಿವೈಡರ್‌ಗೆ ಡಿಕ್ಕಿ, ಕುಟುಂಬದ ನಾಲ್ವರು ಸಾವು

    September 7, 2026

    ಮದುವೆಯ ಭರವಸೆ ನೀಡಿ ದೈಹಿಕ ಸಂಪರ್ಕ ಆರೋಪ: ಮಹಿಳೆ ಮೇಲೆ ಹಲ್ಲೆ, ಬೆಳ್ತಂಗಡಿ ಮೂಲದ ಯುವ ವಕೀಲನ ವಿರುದ್ಧ ಪ್ರಕರಣ ದಾಖಲು

    September 7, 2026
    Social Follow
    • Facebook
    • Instagram
    © 2026 Nirantara News. Designed by Blueline Computers.
    • Home
    • ಕರಾವಳಿ ಸುದ್ದಿ
    • ಅಪರಾಧ
    • ಕರ್ನಾಟಕ
    • ರಾಷ್ಟ್ರೀಯ
    • ಅಂತರಾಷ್ಟ್ರೀಯ
    • ಸ್ಥಿರಾಸ್ತಿ ಮತ್ತು ಮೂಲಸೌಕರ್ಯ
    • ಆರೋಗ್ಯ

    Type above and press Enter to search. Press Esc to cancel.