Close Menu
    What's Hot

    ಹಳೆಯ ಫ್ರಿಜ್ ಸ್ಫೋಟ: ಮನೆಗೆ ಬೆಂಕಿ, ಒಂದೇ ಕುಟುಂಬದ ನಾಲ್ವರು ಸಜೀವ ದಹನ

    September 15, 2026

    ಮಂಗಳೂರು: ಅರವಿಂದ್ ಬೋಳಾರ್ ನ ವಿವಾದ್ಮತಕ ಹೇಳಿಕೆ; ಆಕ್ರೋಶಗೊಂಡ ವ್ಯಕ್ತಿಯೊಂದಿಗಿನ ಮಾತುಕತೆಯ ಆಡಿಯೋ ವೈರಲ್

    September 15, 2026

    ಟಿ. ನರಸೀಪುರ ಗಣೇಶೋತ್ಸವ ವಿವಾದ ತೀವ್ರ: ಇನ್‌ಸ್ಪೆಕ್ಟರ್‌ಗೆ ಸೆಡ್ಡು ಹೊಡೆದು ಠಾಣೆ ಬಳಿಯೇ ಗಣಪತಿ ಪ್ರತಿಷ್ಠಾಪನೆ; ಸೆ.18ಕ್ಕೆ ಬೃಹತ್ ಶೋಭಾಯಾತ್ರೆ

    September 15, 2026
    Facebook X (Twitter) Instagram
    Facebook X (Twitter) Instagram
    Nirantara News | Kannada News | Karnataka Latest UpdatesNirantara News | Kannada News | Karnataka Latest Updates
    Subscribe
    • Homepage
    • ಕರಾವಳಿ ಸುದ್ದಿ
    • ಅಪರಾಧ
    • ಕರ್ನಾಟಕ
    • ರಾಷ್ಟ್ರೀಯ
    • ಅಂತರಾಷ್ಟ್ರೀಯ
    • ಸ್ಥಿರಾಸ್ತಿ ಮತ್ತು ಮೂಲಸೌಕರ್ಯ
    • ಆರೋಗ್ಯ


    Nirantara News | Kannada News | Karnataka Latest UpdatesNirantara News | Kannada News | Karnataka Latest Updates
    Home»ಅಪರಾಧ»ಪ್ರೀತಿ ವಿವಾಹದ ಬೆನ್ನಲ್ಲೇ 3 ತಿಂಗಳ ಗರ್ಭಿಣಿಯ ಭೀಕರ ಕೊಲೆ: ಪತಿ ಸೇರಿ ನಾಲ್ವರು ಬಂಧನ
    ಅಪರಾಧ

    ಪ್ರೀತಿ ವಿವಾಹದ ಬೆನ್ನಲ್ಲೇ 3 ತಿಂಗಳ ಗರ್ಭಿಣಿಯ ಭೀಕರ ಕೊಲೆ: ಪತಿ ಸೇರಿ ನಾಲ್ವರು ಬಂಧನ

    adminBy adminSeptember 15, 2026No Comments2 Mins Read

    ರಾಂಚಿ: ಆಕೆ 3 ತಿಂಗಳ ಗರ್ಭಿಣಿ. 17 ವರ್ಷದ ಆಕೆ ಅದಾಗಲೇ ಮದುವೆಯಾಗಿ 3 ತಿಂಗಳ ಗರ್ಭಿಣಿಯೂ ಆಗಿದ್ದಳು. ಕಂಗಳಲ್ಲಿ ನೂರಾರು ಕನಸು ಕಂಡಿದ್ದ ಆಕೆ ಇತ್ತೀಚೆಗೆ ಶವವಾಗಿ ಪತ್ತೆಯಾಗಿದ್ದಾಳೆ . ಅದೂ ವೀಭತ್ಸ ರೀತಿಯಲ್ಲಿ ಕೊಲೆಯಾಗಿದ್ದಾಳೆ.

    ಆಕೆಯನ್ನು ಕೊಂದು, ತಲೆಯನ್ನು ಕಡಿದು ಪ್ಲಾಸ್ಟಿಕ್‌ ಕವರ್‌ನಲ್ಲಿ ಸುತ್ತಿ ದೇಹದಿಂದ 100 ಮೀಟರ್‌ ದೂರ ಎಸೆಯಲಾಗಿತ್ತು. ಜಾರ್ಖಂಡ್‌ನ ಧನ್‌ಬಾದ್ ಜಿಲ್ಲೆಯಲ್ಲಿ ನಡೆದ ಈ ಘಟನೆ ದೇಶವನ್ನೇ ಬೆಚ್ಚಿ ಬೀಳಿಸಿದ್ದು, ಈ ಸಂಬಂಧ ಇದೀಗ ಪೊಲೀಸರು ಆಕೆಯ ಪತಿ, ಮಾವ ಸೇರಿ ನಾಲ್ವರನ್ನು ಬಂಧಿಸಿದ್ದಾರೆ.

    ಧನ್‌ಬಾದ್ ಜಿಲ್ಲೆಯ ಬಲಿಯಾಪುರದ ಖೇರ್‌ಬಾಡಿಯಾದಲ್ಲಿ ಈ ಘಟನೆ ಸಂಭವಿಸಿದೆ. ಕೆರೆಯ ದಡದಲ್ಲಿ ರಕ್ತ ಹರಿದಿರುವುದನ್ನು ಗಮನಿಸಿದ ಸ್ಥಳೀಯರು ಕೂಲೇ ಪೊಲೀಸರಿಗೆ ತಿಳಿದ್ದರು. ಪೊಲೀಸರು ಪರಿಶೀಲನೆ ನಡೆಸಿದಾಗ ಪ್ಲಾಸ್ಟಿಕ್‌ ಕವರ್‌ನಲ್ಲಿದ್ದ ತಲೆ ಮತ್ತು ಅಲ್ಲಿಂದ ಸುಮಾರು 100 ಮೀಟರ್‌ ದೂರದಲ್ಲಿ ಶರೀರ ಪತ್ತೆಯಾಗಿತ್ತು. ಮೃತಳನ್ನು 17 ವರ್ಷದ ಪೂನಂ ಕುಮಾರಿ ಎಂದು ಗುರುತಿಸಲಾಗಿದೆ.

    ವೈದ್ಯಕೀಯ ಪರಿಶೀಲನೆ ವೇಳೆ ಮೃತ ಪೂನಂ 3 ತಿಂಗಳ ಗರ್ಭಿಣಿಯಾಗಿದ್ದಳು ಎನ್ನುವ ವಿಚಾರವೂ ಬೆಳಕಿಗೆ ಬಂದಿದೆ. ಮೃತದೇಹ ಪತ್ತೆಯಾದ ಸ್ಥಳದಲ್ಲಿ ಅಗರಬತ್ತಿ ಸೇರಿ ತಾಂತ್ರಿಕ ವಿದ್ಯೆಗೆ ಸಂಬಂಧಿಸಿದ ವಸ್ತುಗಳು ಪತ್ತೆಯಾಗಿದ್ದರಿಂದ ಇದೊಂದು ನರ ಬಲಿಯಾಗಿದ್ದಿರಬಹುದು ಎನ್ನುವ ಶಂಕೆಯನ್ನೂ ಸ್ಥಳೀಯರು ವ್ಯಕ್ತಪಡಿಸಿದ್ದರು. ಅದಾಗ್ಯೂ ಪೊಲೀಸರು ಎಲ್ಲ ಕೋನಗಳಿಂದ ತನಿಖೆ ನಡೆಸಿದ್ದರು. ಈ ವೇಳೆ ಹಲವು ಬೆಚ್ಚಿ ಬೀಳಿಸುವ ಅಂಶಗಳು ಬೆಳಕಿಗೆ ಬಂದವು.

    ಮನೆಯವರ ವಿರೋಧದ ನಡುವೆಯೂ ಮದುವೆ

    ಪೂನಂ ಶಿಕ್ಷಣಕ್ಕಾಗಿ ಗಿರಿದ್ಹಿ ಜಿಲ್ಲೆಯಿಂದ ಧನ್‌ಬಾದ್‌ಗೆ ಆಗಮಿಸಿದ್ದಳು. ಈ ವೇಳೆ ಆಕೆಗೆ ಕ್ರಿಶ್‌ ರವಾನಿಯ ಪರಿಚಯವಾಯಿತು. ಬಳಿಕ ಇಬ್ಬರು ಪರಸ್ಪರ ಪ್ರೀತಿಸಿದ್ದು, ಪೂನಂ ತನ್ನ ಮನೆಯವರ ವಿರೋಧವನ್ನು ಲೆಕ್ಕಿಸದೆ ಮದುವೆಯಾಗಿದ್ಧಳು. ಬಳಿಕ ಕ್ರಿಶ್‌ ಮತ್ತು ಪೂನಂ ಬಲಿಯಾಪುರದಲ್ಲಿರುವ ಬಾಡಿಗೆ ಮನೆಗೆ ವಾಸ್ತವ್ಯ ಬದಲಾಯಿಸಿದ್ದರು ಎಂದು ಮೂಲಗಳು ತಿಳಿಸಿವೆ.

    3 ತಿಂಗಳ ಗರ್ಣಿಣಿಯಾಗಿದ್ದ ಪೂನಂ ಸೆಪ್ಟೆಂಬರ್‌ 9ರಿಂದ ನಾಪತ್ತೆಯಾಗಿದ್ದಳು. ಸೆಪ್ಟೆಂಬರ್‌ 10ರಂದು ಆಕೆಯ ತಂದೆ ಬಲಿಯಾಪುರ ಪೊಲೀಸ್‌ ಠಾಣೆಯಲ್ಲಿ ನಾಪತ್ತೆ ದೂರು ದಾಖಲಿಸಿದ್ದರು. ಹುಡುಕಾಟದ ವೇಳೆ ಸೆಪ್ಟೆಂಬರ್‌ 11ರಂದು ಶಿರ ಕತ್ತರಿಸಿದ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿತ್ತು. ಸ್ಥಳಕ್ಕೆ ಧಾವಿಸಿದ ಶ್ವಾನ ಪತ್ತೆ ದಳಗಳು ಮೃತದೇಹ ಪತ್ತೆಯಾದ ಸ್ತಳದಿಂದ ಸುಮಾರು 4 ಕಿ.ಮೀ. ದೂರದಲ್ಲಿರುವ ಕ್ರಿಶ್‌ನ ಮನೆಗೆ ತೆರಳಿದಾಗ ಪೊಲೀಸರು ಮುಖ್ಯ ಸಾಕ್ಷ್ಯ ಲಭಿಸಿದಂತಾಗಿತ್ತು.

    ಜೈಲು ಪಾಲಾಗಿದ್ದ ಕ್ರಿಶ್‌

    ಇದೇ ವೇಳೆ ಪೋನಂ ಮನೆಯವರು ಬಹುಮುಖ್ಯ ವಿಚಾರವೊಂದನ್ನು ತೆರೆದಿಟ್ಟಿದ್ದರು. ಪೂನಂ ವಿಚಾರಕ್ಕಾಗಿ ಈ ಹಿಂದೆ ಕ್ರಿಶ್‌ ಜೈಲು ಪಾಲಾಗಿದ್ದ. ಹೊರ ಬಂದ ಬಳಿಕ ಪೂನಂ ಜತೆ ಕ್ರಿಶ್‌ ಪ್ರತ್ಯೇಕವಾಗಿ ವಾಸಿಸುತ್ತಿದ್ದ. ಇವರಿಬ್ಬರು ಜತೆಯಾಗಿ ವಾಸಿಸುತ್ತಿರುವುದು ಕ್ರಿಶ್‌ ತಂದೆಗೆ ಇಷ್ಟವಿರಲಿಲ್ಲ ಎಂದು ಪೂನಂ ಮನೆಯವರು ತಿಳಿಸಿದ್ದರು. ಪೂನಂ ಕಾರಣದಿಂದ ಕ್ರಿಶ್‌ ಜೈಲು ಸೇರಿದ್ದರಿಂದ ಅವಮಾನಿತರಾದ ಆತನ ಕುಟುಂಬಸ್ಥರು ಆಕೆಯನ್ನು ಕೊಲೆ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಸದ್ಯ ಪೊಲೀಸರು ಕ್ರಿಶ್‌, ಆತನ ತಂದೆ ಜಯರಾಮ್‌ ರವಾನಿ ಮತ್ತು ಅತ್ತೆ ಅಲೊಮಣಿ ದೇವಿಯನ್ನು ಬಂಧಿಸಿದ್ದಾರೆ. ಪ್ರಕರಣದ ವಿಚಾರಣೆ ಮುಂದುವರಿದಿದೆ.




    #crime #nation
    Previous Articleಬೆಳಗಿನ ಜಾವ ಸ್ಕೂಟರ್‌ಗೆ ಟ್ಯಾಂಕರ್ ಡಿಕ್ಕಿ: ಮೂವರ ಜೀವ ಕಸಿದ ಅಪಘಾತ
    Next Article ಗೋವಾ ವಿಧಾನಸಭಾ ಚುನಾವಣೆ: ಕಾಂಗ್ರೆಸ್‌ನಿಂದ ಮೃಣಾಲ್ ಹೆಬ್ಬಾಳ್ಕರ್‌ಗೆ ಮಹತ್ವದ ಜವಾಬ್ದಾರಿ

    Related Posts

    ಗೋವಾ ವಿಧಾನಸಭಾ ಚುನಾವಣೆ: ಕಾಂಗ್ರೆಸ್‌ನಿಂದ ಮೃಣಾಲ್ ಹೆಬ್ಬಾಳ್ಕರ್‌ಗೆ ಮಹತ್ವದ ಜವಾಬ್ದಾರಿ

    September 15, 2026

    ರಾಜಸ್ಥಾನ ಚುನಾವಣೆ: ಬಿಜೆಪಿ ಅಭ್ಯರ್ಥಿಗೆ ಕೇವಲ 1 ಮತ, ‘ಒಂಟಿ ಮತ’ದ ಹಿಂದಿನ ರಹಸ್ಯ ಬಯಲು

    September 15, 2026

    ಕುದುರೆಮುಖ ರಾಷ್ಟ್ರೀಯ ಉದ್ಯಾನವನದಲ್ಲಿ ಅಕ್ರಮ ಮರ ಕಡಿದು ಸಾಗಿಸಲು ಯತ್ನ: ₹10 ಲಕ್ಷಕ್ಕೂ ಅಧಿಕ ಮೌಲ್ಯದ ಮರಗಳ ಸಾಗಾಟ ವಿಫಲ

    September 15, 2026
    Add A Comment
    Leave A Reply Cancel Reply

    ಪ್ರಮುಖ ಸುದ್ದಿ

    ಹಳೆಯ ಫ್ರಿಜ್ ಸ್ಫೋಟ: ಮನೆಗೆ ಬೆಂಕಿ, ಒಂದೇ ಕುಟುಂಬದ ನಾಲ್ವರು ಸಜೀವ ದಹನ

    September 15, 2026

    ಮಂಗಳೂರು: ಅರವಿಂದ್ ಬೋಳಾರ್ ನ ವಿವಾದ್ಮತಕ ಹೇಳಿಕೆ; ಆಕ್ರೋಶಗೊಂಡ ವ್ಯಕ್ತಿಯೊಂದಿಗಿನ ಮಾತುಕತೆಯ ಆಡಿಯೋ ವೈರಲ್

    September 15, 2026

    ಟಿ. ನರಸೀಪುರ ಗಣೇಶೋತ್ಸವ ವಿವಾದ ತೀವ್ರ: ಇನ್‌ಸ್ಪೆಕ್ಟರ್‌ಗೆ ಸೆಡ್ಡು ಹೊಡೆದು ಠಾಣೆ ಬಳಿಯೇ ಗಣಪತಿ ಪ್ರತಿಷ್ಠಾಪನೆ; ಸೆ.18ಕ್ಕೆ ಬೃಹತ್ ಶೋಭಾಯಾತ್ರೆ

    September 15, 2026

    ಗೋವಾ ವಿಧಾನಸಭಾ ಚುನಾವಣೆ: ಕಾಂಗ್ರೆಸ್‌ನಿಂದ ಮೃಣಾಲ್ ಹೆಬ್ಬಾಳ್ಕರ್‌ಗೆ ಮಹತ್ವದ ಜವಾಬ್ದಾರಿ

    September 15, 2026
    Advertisement






    Nirantara News is powered by a team of experienced media professionals with decades of expertise in television journalism. Our mission is to be the voice of the people by delivering truthful, unbiased, and responsible news. We cover local, state, national, and international news, along with the latest updates on health, entertainment, real estate, business, technology, and more.

    Backed by experienced reporters and a strong legal team, we are committed to providing accurate news and honest reviews.

    Subscribe to Nirantara News and support trusted journalism.

    Top Insights

    ಹಳೆಯ ಫ್ರಿಜ್ ಸ್ಫೋಟ: ಮನೆಗೆ ಬೆಂಕಿ, ಒಂದೇ ಕುಟುಂಬದ ನಾಲ್ವರು ಸಜೀವ ದಹನ

    September 15, 2026

    ಟಿ. ನರಸೀಪುರ ಗಣೇಶೋತ್ಸವ ವಿವಾದ ತೀವ್ರ: ಇನ್‌ಸ್ಪೆಕ್ಟರ್‌ಗೆ ಸೆಡ್ಡು ಹೊಡೆದು ಠಾಣೆ ಬಳಿಯೇ ಗಣಪತಿ ಪ್ರತಿಷ್ಠಾಪನೆ; ಸೆ.18ಕ್ಕೆ ಬೃಹತ್ ಶೋಭಾಯಾತ್ರೆ

    September 15, 2026
    Social Follow
    • Facebook
    • Instagram
    © 2026 Nirantara News. Designed by Blueline Computers.
    • Home
    • ಕರಾವಳಿ ಸುದ್ದಿ
    • ಅಪರಾಧ
    • ಕರ್ನಾಟಕ
    • ರಾಷ್ಟ್ರೀಯ
    • ಅಂತರಾಷ್ಟ್ರೀಯ
    • ಸ್ಥಿರಾಸ್ತಿ ಮತ್ತು ಮೂಲಸೌಕರ್ಯ
    • ಆರೋಗ್ಯ

    Type above and press Enter to search. Press Esc to cancel.