Close Menu
    What's Hot

    ಕೊಳತ್ತಮಜಲು ಅಬ್ದುಲ್ ರಹಿಮಾನ್ ಕೊಲೆ ಪ್ರಕರಣ: 6 ಆರೋಪಿಗಳ ವಿರುದ್ಧ ಗೂಂಡಾ ಕಾಯ್ದೆ

    September 19, 2026

    LIC ಹಣ ದುರುಪಯೋಗ ಆರೋಪ; ಅನಿಲ್ ಅಂಬಾನಿ ಸೇರಿ ಹಲವರ ವಿರುದ್ಧ ಸಿಬಿಐ ಎಫ್‌ಐಆರ್

    September 19, 2026

    ಗಣೇಶೋತ್ಸವದಿಂದ ಹೊರಬರುವಾಗ ಅವಘಡ; ಅಭಿಮಾನಿಗೆ ಕಾರು ತಾಗಿದ ಬೆನ್ನಲ್ಲೇ ಚಾಲಕನ ವಿರುದ್ಧ  ಗರಂ ಆದ ಸಲ್ಮಾನ್ ಖಾನ್

    September 19, 2026
    Facebook X (Twitter) Instagram
    Facebook X (Twitter) Instagram
    Nirantara News | Kannada News | Karnataka Latest UpdatesNirantara News | Kannada News | Karnataka Latest Updates
    Subscribe
    • Homepage
    • ಕರಾವಳಿ ಸುದ್ದಿ
    • ಅಪರಾಧ
    • ಕರ್ನಾಟಕ
    • ರಾಷ್ಟ್ರೀಯ
    • ಅಂತರಾಷ್ಟ್ರೀಯ
    • ಸ್ಥಿರಾಸ್ತಿ ಮತ್ತು ಮೂಲಸೌಕರ್ಯ
    • ಆರೋಗ್ಯ


    Nirantara News | Kannada News | Karnataka Latest UpdatesNirantara News | Kannada News | Karnataka Latest Updates
    Home»ಅಪರಾಧ»LIC ಹಣ ದುರುಪಯೋಗ ಆರೋಪ; ಅನಿಲ್ ಅಂಬಾನಿ ಸೇರಿ ಹಲವರ ವಿರುದ್ಧ ಸಿಬಿಐ ಎಫ್‌ಐಆರ್
    ಅಪರಾಧ

    LIC ಹಣ ದುರುಪಯೋಗ ಆರೋಪ; ಅನಿಲ್ ಅಂಬಾನಿ ಸೇರಿ ಹಲವರ ವಿರುದ್ಧ ಸಿಬಿಐ ಎಫ್‌ಐಆರ್

    adminBy adminSeptember 19, 2026No Comments2 Mins Read

    ಮುಂಬೈ: ಭಾರತೀಯ ಜೀವ ವಿಮಾ ನಿಗಮಕ್ಕೆ  ಬರೋಬ್ಬರಿ ₹2,684.57 ಕೋಟಿ ರೂಪಾಯಿಗಳ ಬೃಹತ್ ಆರ್ಥಿಕ ನಷ್ಟ ಉಂಟುಮಾಡಿದ ಗಂಭೀರ ಆರೋಪದ ಮೇಲೆ ರಿಲಯನ್ಸ್ ಗ್ರೂಪ್ ಅಧ್ಯಕ್ಷ ಅನಿಲ್ ಅಂಬಾನಿ, ಅವರ ಒಡೆತನದ ರಿಲಯನ್ಸ್ ಕ್ಯಾಪಿಟಲ್ ಲಿಮಿಟೆಡ್ , ಮಾಜಿ ಗ್ರೂಪ್ ವ್ಯವಸ್ಥಾಪಕ ನಿರ್ದೇಶಕ ಸತೀಶ್ ಸೇಠ್ ಹಾಗೂ ಇತರ ಗುರುತಿಸದ ಸಾರ್ವಜನಿಕ ಸೇವಕರ ವಿರುದ್ಧ ಕೇಂದ್ರೀಯ ತನಿಖಾ ದಳ ಹೊಸ ಪ್ರಕರಣ ದಾಖಲಿದೆ.

    ₹3,900 ಕೋಟಿ ಹೂಡಿಕೆ ಹಾಗೂ ನಿಧಿ ದುರುಪಯೋಗ!

    ಸಿಬಿಐ ಸಲ್ಲಿಸಿರುವ ಎಫ್‌ಐಆರ್ ಪ್ರಕಾರ, 2012 ರ ಏಪ್ರಿಲ್ 12 ರಿಂದ 2018 ರ ಮಾರ್ಚ್ 9 ರ ನಡುವೆ ಎಲ್‌ಐಸಿಯು ರಿಲಯನ್ಸ್ ಕ್ಯಾಪಿಟಲ್ ಹೊರಡಿಸಿದ್ದ ಐದು ‘ಪರಿವರ್ತಿಸಲಾಗದ ಡಿಬೆಂಚರ್’ಗಳಿಗೆ  ಚಂದಾದಾರರಾಗುವ ಮೂಲಕ ಒಟ್ಟು ₹3,900 ಕೋಟಿ ರೂಪಾಯಿಗಳನ್ನು ಹೂಡಿಕೆ ಮಾಡಿತ್ತು. ಕಂಪನಿಯ ಸಾಮಾನ್ಯ ಕಾರ್ಪೊರೇಟ್ ಅಗತ್ಯಗಳು ಹಾಗೂ ಹಳೆಯ ಸಾಲಗಳ ಮರುಪಾವತಿಯ ನೆಪದಲ್ಲಿ ಈ ಹೂಡಿಕೆಯನ್ನು ಪಡೆಯಲಾಗಿತ್ತು.

    ತಪ್ಪು ಮಾಹಿತಿ ನೀಡಿ ಹಾಗೂ ಸುಳ್ಳು ದಾಖಲೆಗಳನ್ನು ಸೃಷ್ಟಿಸಿ ಎಲ್‌ಐಸಿಯಿಂದ ಹಣ ಹೂಡಿಕೆ ಮಾಡಿಸಿಕೊಂಡ ಆರೋಪಿಗಳು, ಬಳಿಕ ಆ ಹಣವನ್ನು ಮೋಸದಿಂದ ಬೇರೆಡೆಗೆ ಡೈವರ್ಷನ್ ಮಾಡಿದ್ದಾರೆ. ಇವರ ಖತರ್ನಾಕ್ ಪಿತೂರಿಯಿಂದಾಗಿ ಎಲ್‌ಐಸಿಗೆ ₹2,684.57 ಕೋಟಿ ರೂಪಾಯಿಗಳ ಭಾರಿ ಆರ್ಥಿಕ ನಷ್ಟ ಉಂಟಾಗಿದೆ ಎಂದು ಎಲ್‌ಐಸಿ ದೂರು ಸಲ್ಲಿಸಿ ಆರೋಪಿಸಿತ್ತು

    ಆರೋಪಗಳನ್ನು ನಿರಾಕರಿಸಿದ ಅನಿಲ್ ಅಂಬಾನಿ ವಕ್ತಾರರು:

    ಸಿಬಿಐ ಎಫ್‌ಐಆರ್ ಪ್ರಕಟವಾಗುತ್ತಿದ್ದಂತೆ ಪ್ರತಿಕ್ರಿಯಿಸಿರುವ ಅನಿಲ್ ಅಂಬಾನಿ ಅವರ ಅಧಿಕೃತ ವಕ್ತಾರರು, ತಮ್ಮ ಮೇಲಿನ ಎಲ್ಲಾ ಆರೋಪಗಳನ್ನು ಸುಳ್ಳು ಎಂದು ನಿರಾಕರಿಸಿದ್ದಾರೆ. “ಈ ಪ್ರಕರಣವು ರಿಲಯನ್ಸ್ ಕ್ಯಾಪಿಟಲ್ ಲಿಮಿಟೆಡ್‌ಗೆ ಸಂಬಂಧಿಸಿದ್ದಾಗಿದೆ. ಅನಿಲ್ ಅಂಬಾನಿ ಅವರು 2005 ರಿಂದ 2021 ರ ನವೆಂಬರ್‌ವರೆಗೆ ಕಂಪನಿಯ ಕಾರ್ಯನಿರ್ವಾಹಕೇತರ ನಿರ್ದೇಶಕರಾಗಿ ಹಾಗೂ ಅಧ್ಯಕ್ಷರಾಗಿ ಮಾತ್ರ ಸೇವೆ ಸಲ್ಲಿಸಿದ್ದರು. 2021 ರಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ ಕಂಪನಿಯ ಮಂಡಳಿಯನ್ನು ರದ್ದುಗೊಳಿಸಿ ಆಡಳಿತಾಧಿಕಾರಿಯನ್ನು ನೇಮಿಸಿತ್ತು. ಅಂಬಾನಿ ಅವರು ಯಾವುದೇ ರೀತಿಯ ಕಾನೂನುಬಾಹಿರ ಕೃತ್ಯ ಎಸಗಿಲ್ಲ. ಕಾನೂನಿನಲ್ಲಿ ಲಭ್ಯವಿರುವ ಎಲ್ಲಾ ಹಕ್ಕುಗಳನ್ನು ಬಳಸಿಕೊಂಡು ಹೋರಾಟ ನಡೆಸಲಿದ್ದಾರೆ” ಎಂದು ವಕ್ತಾರರು ಸಮರ್ಥಸಿಕೊಂಡಿದ್ದಾರೆ.

    ಸುಪ್ರೀಂ ಕೋರ್ಟ್ ಮೇಲ್ವಿಚಾರಣೆಯಲ್ಲಿ ತನಿಖೆ:

    ವಿವಿಧ ಸಾರ್ವಜನಿಕ ವಲಯದ ಬ್ಯಾಂಕುಗಳು, ನೌಕರರ ಭವಿಷ್ಯ ನಿಧಿ ಸಂಸ್ಥೆ  ಹಾಗೂ ಎಲ್‌ಐಸಿ ನೀಡಿದ ದೂರುಗಳ ಆಧಾರದ ಮೇಲೆ ರಿಲಯನ್ಸ್ ಗ್ರೂಪ್‌ನ ವಿವಿಧ ಸಂಸ್ಥೆಗಳ ವಿರುದ್ಧ ಸಿಬಿಐ ಈಗಾಗಲೇ ಒಟ್ಟು 8 ಎಫ್‌ಐಆರ್‌ಗಳನ್ನು ದಾಖಲಿಸಿದೆ. ಈ ಪೈಕಿ 6 ಪ್ರಕರಣಗಳಲ್ಲಿ ಆರೋಪಪಟ್ಟಿ ಸಲ್ಲಿಸಲಾಗಿದ್ದು, 7 ಜನರನ್ನು ಬಂಧಿಸಲಾಗಿದೆ. ಪ್ರಸ್ತುತ ಈ ಎಲ್ಲಾ ಪ್ರಕರಣಗಳ ತನಿಖೆಯು ದೇಶದ ಅತ್ಯುನ್ನತ ನ್ಯಾಯಾಲಯವಾದ ಸುಪ್ರೀಂ ಕೋರ್ಟ್‌ನ ನೇರ ಮೇಲ್ವಿಚಾರಣೆಯಲ್ಲಿ ನಡೆಯುತ್ತಿದೆ ಎಂದು ಸಿಬಿಐ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.




    #crime #national
    Previous Articleಗಣೇಶೋತ್ಸವದಿಂದ ಹೊರಬರುವಾಗ ಅವಘಡ; ಅಭಿಮಾನಿಗೆ ಕಾರು ತಾಗಿದ ಬೆನ್ನಲ್ಲೇ ಚಾಲಕನ ವಿರುದ್ಧ  ಗರಂ ಆದ ಸಲ್ಮಾನ್ ಖಾನ್
    Next Article ಕೊಳತ್ತಮಜಲು ಅಬ್ದುಲ್ ರಹಿಮಾನ್ ಕೊಲೆ ಪ್ರಕರಣ: 6 ಆರೋಪಿಗಳ ವಿರುದ್ಧ ಗೂಂಡಾ ಕಾಯ್ದೆ

    Related Posts

    ಕೊಳತ್ತಮಜಲು ಅಬ್ದುಲ್ ರಹಿಮಾನ್ ಕೊಲೆ ಪ್ರಕರಣ: 6 ಆರೋಪಿಗಳ ವಿರುದ್ಧ ಗೂಂಡಾ ಕಾಯ್ದೆ

    September 19, 2026

    ಗಣೇಶೋತ್ಸವದಿಂದ ಹೊರಬರುವಾಗ ಅವಘಡ; ಅಭಿಮಾನಿಗೆ ಕಾರು ತಾಗಿದ ಬೆನ್ನಲ್ಲೇ ಚಾಲಕನ ವಿರುದ್ಧ  ಗರಂ ಆದ ಸಲ್ಮಾನ್ ಖಾನ್

    September 19, 2026

    ತಿರುಪತಿ ದೇವಸ್ಥಾನಕ್ಕೆ ಕಲಬೆರಕೆ ತುಪ್ಪ ಪೂರೈಕೆ ಆರೋಪ; ಕಂಪನಿ ಪ್ರಮೋಟರ್ ನ ಬಂಧನ

    September 19, 2026
    Add A Comment
    Leave A Reply Cancel Reply

    ಪ್ರಮುಖ ಸುದ್ದಿ

    ಕೊಳತ್ತಮಜಲು ಅಬ್ದುಲ್ ರಹಿಮಾನ್ ಕೊಲೆ ಪ್ರಕರಣ: 6 ಆರೋಪಿಗಳ ವಿರುದ್ಧ ಗೂಂಡಾ ಕಾಯ್ದೆ

    September 19, 2026

    LIC ಹಣ ದುರುಪಯೋಗ ಆರೋಪ; ಅನಿಲ್ ಅಂಬಾನಿ ಸೇರಿ ಹಲವರ ವಿರುದ್ಧ ಸಿಬಿಐ ಎಫ್‌ಐಆರ್

    September 19, 2026

    ಗಣೇಶೋತ್ಸವದಿಂದ ಹೊರಬರುವಾಗ ಅವಘಡ; ಅಭಿಮಾನಿಗೆ ಕಾರು ತಾಗಿದ ಬೆನ್ನಲ್ಲೇ ಚಾಲಕನ ವಿರುದ್ಧ  ಗರಂ ಆದ ಸಲ್ಮಾನ್ ಖಾನ್

    September 19, 2026

    ತಿರುಪತಿ ದೇವಸ್ಥಾನಕ್ಕೆ ಕಲಬೆರಕೆ ತುಪ್ಪ ಪೂರೈಕೆ ಆರೋಪ; ಕಂಪನಿ ಪ್ರಮೋಟರ್ ನ ಬಂಧನ

    September 19, 2026
    Advertisement






    Nirantara News is powered by a team of experienced media professionals with decades of expertise in television journalism. Our mission is to be the voice of the people by delivering truthful, unbiased, and responsible news. We cover local, state, national, and international news, along with the latest updates on health, entertainment, real estate, business, technology, and more.

    Backed by experienced reporters and a strong legal team, we are committed to providing accurate news and honest reviews.

    Subscribe to Nirantara News and support trusted journalism.

    Top Insights

    ಕಟಪಾಡಿ: ತೆಂಗಿನಕಾಯಿ ಸಂಸ್ಕರಣಾ ಘಟಕದಲ್ಲಿ ಅಗ್ನಿ ಅವಘಡ; ಲಕ್ಷಾಂತರ ರೂ. ನಷ್ಟ

    September 19, 2026

    ಇನ್ನು ಬಣ್ಣದ ಲೋಕಕ್ಕೆ ಮರಳಲ್ಲ ಎಂದ ಅನಂತ್ ನಾಗ್; ಕಾರಣವೇನು?

    September 18, 2026
    Social Follow
    • Facebook
    • Instagram
    © 2026 Nirantara News. Designed by Blueline Computers.
    • Home
    • ಕರಾವಳಿ ಸುದ್ದಿ
    • ಅಪರಾಧ
    • ಕರ್ನಾಟಕ
    • ರಾಷ್ಟ್ರೀಯ
    • ಅಂತರಾಷ್ಟ್ರೀಯ
    • ಸ್ಥಿರಾಸ್ತಿ ಮತ್ತು ಮೂಲಸೌಕರ್ಯ
    • ಆರೋಗ್ಯ

    Type above and press Enter to search. Press Esc to cancel.