ಉಚ್ಚಿಲ: ಶ್ರೀ ಮಹಾಲಕ್ಷ್ಮೀ ದೇವಸ್ಥಾನ, ಶ್ರೀ ಕ್ಷೇತ್ರ ಉಚ್ಚಿಲ ಹಾಗೂ ಉಡುಪಿ ಉಚ್ಚಿಲ ದಸರಾ ಸಮಿತಿಯ ವತಿಯಿಂದ ಉಡುಪಿ ಉಚ್ಚಿಲ ದಸರಾ ಉತ್ಸವದ ಪ್ರಯುಕ್ತ ಅಕ್ಟೋಬರ್ 18ರಂದು ಪ್ರಪ್ರಥಮ ಬಾರಿಗೆ ಆಹ್ವಾನಿತ ತಂಡಗಳ ಪುರುಷರ ಹುಲಿ ಕುಣಿತ ಸ್ಪರ್ಧೆ ಆಯೋಜಿಸಲಾಗಿದೆ.
ಶ್ರೀ ಮಹಾಲಕ್ಷ್ಮೀ ಸೇವಾ ಪ್ರತಿಷ್ಠಾನದ ವತಿಯಿಂದ ‘ಅಬ್ಬರದ ಪಿಲಿ ಪಂಥ 2026 – Season 1’ ಹೆಸರಿನಲ್ಲಿ ನಡೆಯಲಿರುವ ಈ ಸ್ಪರ್ಧೆಯು ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಸ್ಥಾನದ ದಸರಾ ಉತ್ಸವದ ಮುಖ್ಯ ವೇದಿಕೆಯಲ್ಲಿ ಬೆಳಿಗ್ಗೆ 10.30ರಿಂದ ಜರುಗಲಿದೆ.
ಈ ಸ್ಪರ್ಧೆಯಲ್ಲಿ ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳ ಪ್ರತಿಷ್ಠಿತ 10 ಆಹ್ವಾನಿತ ತಂಡಗಳು ಭಾಗವಹಿಸಲಿವೆ.

ಬಹುಮಾನ ವಿವರ
ಪ್ರಥಮ ಬಹುಮಾನ:
₹3,00,000 ನಗದು + ಆಕರ್ಷಕ ಟ್ರೋಫಿ
ದ್ವಿತೀಯ ಬಹುಮಾನ:
₹2,00,000 ನಗದು + ಆಕರ್ಷಕ ಟ್ರೋಫಿ
ತೃತೀಯ ಬಹುಮಾನ:
₹1,00,000 ನಗದು + ಆಕರ್ಷಕ ಟ್ರೋಫಿ
ಇದಲ್ಲದೆ, 3 ವೈಯಕ್ತಿಕ ವಿಭಾಗಗಳಲ್ಲಿ ತಲಾ ₹10,000 ನಗದು ಬಹುಮಾನ ನೀಡಲಾಗುವುದು.
ಸ್ಪರ್ಧೆಯಲ್ಲಿ ಭಾಗವಹಿಸುವ ಪ್ರತಿ ತಂಡಕ್ಕೂ ₹25,000 ಪ್ರೋತ್ಸಾಹಧನ ನೀಡಲಾಗುವುದು.








