ಮಂಗಳೂರು: ವಾಮಂಜೂರು ಶ್ರೀರಾಮನಗರ ಶ್ರೀರಕ್ತೇಶ್ವರಿ ಹಾಗೂ ಪಂಚದೇವತಾ ಸಾನಿಧ್ಯದ ಆಶ್ರಯದಲ್ಲಿ ನಡೆಯುವ 5 ನೇ ವರ್ಷದ ಸಾರ್ವಜನಿಕ ವಾಮಂಜೂರು ಶಾರದಾ ಮಹೋತ್ಸವದ ಆಮಂತ್ರಣ ಪತ್ರಿಕೆ ವಾಮಂಜೂರು ತೆಕ್ಕಿಬೆಟ್ಟು ಶ್ರೀವಿಷ್ಣುಮೂರ್ತಿ ದೇವಸ್ಥಾನದಲ್ಲಿ ಬಿಡುಗಡೆಗೊಂಡಿತು.ವಾಮಂಜೂರು ಅಮೃತೇಶ್ವರ ದೇವಸ್ಥಾನದ ಅರ್ಚಕರಾದ ಸತ್ಯನಾರಾಯಣ ಹೊಳ್ಳ,ಉದ್ಯಮಿ ತಿರುವೈಲುಗುತ್ತು ನವೀನ್ ಚಂದ್ರ ಆಳ್ವ,ಪಬ್ಲಿಕ್ ಟಿವಿಯ ಬ್ಯೂರೋಚೀಫ್ ಸುಖ್ ಪಾಲ್ ಪೊಳಲಿ,ವಿಶ್ವಹಿಂದೂ ಪರಿಷತ್ ನ ಮುಖಂಡ ವಸಂತ್ ಸುವರ್ಣ ಗುರುಪುರ,ಉದ್ಯಮಿ ರವಿ,ಜಾರಪ್ಪ ಪೂಜಾರಿ ಸೇರಿದಂತೆ ಗಣ್ಯರ ಸಮ್ಮುಖದಲ್ಲಿ ಆಮಂತ್ರಣ ಪತ್ರಿಕೆ ಬಿಡುಗಡೆಗೊಂಡಿತು. ಅಕ್ಟೋಬರ್ 16 ರಿಂದ 22 ರವರೆಗೆ ನಡೆಯಲಿರುವ ಶಾರದಾ ಮಹೋತ್ಸವದಲ್ಲಿ ವಿವಿಧ ಧಾರ್ಮಿಕ ಸಾಂಸ್ಕೃತಿಕ ಕಾರ್ಯಕ್ರಮಗಳು,ಅನ್ನಸಂತರ್ಪಣೆ ನಡೆಯಲಿದೆ.ಅ.22 ರಂದು ಬೃಹತ್ ಶೋಭಾಯಾತ್ರೆಯೊಂದಿಗೆ ಶಾರದಾ ಮಾತೆಯ ವಿಸರ್ಜನಾ ಮೆರವಣಿಗೆ ನಡೆಯಲಿದೆ.








