Close Menu
    What's Hot

    ವೆಲೆನ್ಸಿಯಾ ಚರ್ಚ್ ಪಾದ್ರಿಯ ವಿರುದ್ಧ ಪೋಕ್ಸೊ ಪ್ರಕರಣ : ತಲೆಮರೆಸಿಕೊಂಡಿದ್ದ ಆರೋಪಿಯ ಬಂಧನ

    October 18, 2026

    ಕೋಲ್ಕತ್ತಾ ದುರ್ಗಾ ಪೂಜಾ ಸಂಭ್ರಮದಲ್ಲಿ ಕಾಲ್ತುಳಿತ: 19 ಸಾವು, ಘಟನೆಗೆ ಉನ್ನತ ಮಟ್ಟದ ತನಿಖೆಗೆ ಸಿಎಂ ಆದೇಶ

    October 18, 2026

    ಕೊಳತ್ತಮಜಲು ರಹ್ಮಾನ್ ಕೊಲೆ ಪ್ರಕರಣ : ಜಾಮೀನು ಪ್ರಶ್ನಿಸಿ ಸರ್ಕಾರದ ಅರ್ಜಿ, ಹೈಕೋರ್ಟ್‌ನಿಂದ ತಡೆ

    October 18, 2026
    Facebook X (Twitter) Instagram
    Facebook X (Twitter) Instagram
    Nirantara News | Kannada News | Karnataka Latest UpdatesNirantara News | Kannada News | Karnataka Latest Updates
    Subscribe
    • Homepage
    • ಕರಾವಳಿ ಸುದ್ದಿ
    • ಅಪರಾಧ
    • ಕರ್ನಾಟಕ
    • ರಾಷ್ಟ್ರೀಯ
    • ಅಂತರಾಷ್ಟ್ರೀಯ
    • ಸ್ಥಿರಾಸ್ತಿ ಮತ್ತು ಮೂಲಸೌಕರ್ಯ
    • ಆರೋಗ್ಯ


    Nirantara News | Kannada News | Karnataka Latest UpdatesNirantara News | Kannada News | Karnataka Latest Updates
    Home»ಅಪರಾಧ»HDFC ಸೆಕ್ಯುರಿಟೀಸ್ ಹೆಸರಿನಲ್ಲಿ ಸೈಬರ್ ವಂಚನೆ; ಉಡುಪಿಯ 75 ವರ್ಷದ ವೃದ್ಧನಿಗೆ ₹14.35 ಪಂಗನಾಮ
    ಅಪರಾಧ

    HDFC ಸೆಕ್ಯುರಿಟೀಸ್ ಹೆಸರಿನಲ್ಲಿ ಸೈಬರ್ ವಂಚನೆ; ಉಡುಪಿಯ 75 ವರ್ಷದ ವೃದ್ಧನಿಗೆ ₹14.35 ಪಂಗನಾಮ

    adminBy adminOctober 10, 2026Updated:October 10, 2026No Comments2 Mins Read

    ಉಡುಪಿ : ಫೇಸ್‌ಬುಕ್‌ನಲ್ಲಿ ‘ಎಚ್‌ಡಿಎಫ್‌ಸಿ ಸೆಕ್ಯುರಿಟೀಸ್’  ಹೆಸರಿನ ನಕಲಿ ಲಿಂಕ್ ನೀಡಿ, ಶೇರು ಮಾರುಕಟ್ಟೆ ಟ್ರೇಡಿಂಗ್ ಹಾಗೂ ಐಪಿಒ  ಹಂಚಿಕೆ ಹೆಸರಿನಲ್ಲಿ 75 ವರ್ಷದ ವೃದ್ಧರೊಬ್ಬರಿಗೆ ಬರೋಬ್ಬರಿ ₹14,35,724 ಲಕ್ಷ ವಂಚಿಸಿರುವ ಭಾರಿ ಸೈಬರ್ ಅಪರಾಧ ಪ್ರಕರಣ ಉಡುಪಿಯಲ್ಲಿ ಬೆಳಕಿಗೆ ಬಂದಿದೆ. ಉಡುಪಿಯ ರಮೇಶ ಶೆಟ್ಟಿ (75) ಎಂಬವರೇ ಸೈಬರ್ ಶಾರ್ಕ್‌ಗಳ ಬಲೆಗೆ ಬಿದ್ದು ಲಕ್ಷಾಂತರ ರೂಪಾಯಿ ಹಣ ಕಳೆದುಕೊಂಡ ದುರ್ದೈವಿ

    ಕಳೆದ ಜುಲೈ 29, 2026 ರಂದು ರಮೇಶ ಶೆಟ್ಟಿ ಅವರ ಫೇಸ್‌ಬುಕ್‌ ಖಾತೆಗೆ HDFC Security ಹೆಸರಿನಲ್ಲಿ ಬಂದ ಲಿಂಕ್ ಮೂಲಕ ವಂಚಕರು ಸಂಪರ್ಕಿಸಿ ‘High Network Investor User ID’ ನೀಡಿದ್ದರು. ಇದನ್ನು ನಂಬಿ ಶೆಟ್ಟಿ ಅವರು ಆರಂಭದಲ್ಲಿ ₹40,000 ಹೂಡಿಕೆ ಮಾಡಿದ್ದರು. ವಂಚಕರು ಇದಕ್ಕೆ ಶೇ. 5 ರಷ್ಟು ಲಾಭಾಂಶ ತೋರಿಸಿ ಅವರ ನಂಬಿಕೆ ಗಿಟ್ಟಿಸಿಕೊಂಡಿದ್ದರು. ಬಳಿಕ ಆಗಸ್ಟ್ 18, 2026 ರಂದು ₹80,000, ₹50,000 ಹಾಗೂ ₹1,25,000 ಸೇರಿದಂತೆ ಹಂತ ಹಂತವಾಗಿ ವಿವಿಧ ಖಾತೆಗಳಿಗೆ ವಂಚಕರು ಸೂಚಿಸಿದಂತೆ ಭಾರಿ ಮೊತ್ತದ ಹಣವನ್ನು ವರ್ಗಾಯಿಸಿದ್ದರು.

    ಸೆಪ್ಟೆಂಬರ್ 1, 2026 ರಂದು ವಂಚಕರು ಸಂದೇಶ ಕಳುಹಿಸಿ, “ನಿಮಗೆ ESDS Software Solution Ltd IPO ನ 3,400 ಶೇರ್‌ಗಳು ಲಭಿಸಿದ್ದು, ಅದಕ್ಕಾಗಿ ₹9,24,800 ಪಾವತಿಸಬೇಕು” ಎಂದು ತಿಳಿಸಿದ್ದಾರೆ. ಈ ವೇಳೆ ರಮೇಶ ಶೆಟ್ಟಿ ಅವರು “ನಾನು ಯಾವುದೇ ಐಪಿಒಗೆ ಅರ್ಜಿ ಸಲ್ಲಿಸಿಲ್ಲ, ನನ್ನ ಬಳಿ ಅಷ್ಟೊಂದು ಹಣವಿಲ್ಲ, ಇದನ್ನು ಕ್ಯಾನ್ಸಲ್ ಮಾಡಿ” ಎಂದು ಕೇಳಿಕೊಂಡಿದ್ದಾರೆ. ಆದರೆ ವಂಚಕರು ಐಪಿಒ ರದ್ದು ಮಾಡಲು ಒಪ್ಪದೆ, ಬಲವಂತವಾಗಿ ಸಾಲ ಮಾಡಿಸಿ ₹9.24 ಲಕ್ಷ ಹಣ ಕಟ್ಟಿಸಿಕೊಂಡಿದ್ದಾರೆ.

    ಸಾಲ ಮಾಡಿ ಹಣ ಕಟ್ಟಿದ ಬಳಿಕ, ತಮ್ಮ ಖಾತೆಯಲ್ಲಿದ್ದ ಹಣವನ್ನು ಹಿಂಪಡೆಯಲು  ರಮೇಶ ಶೆಟ್ಟಿ ಯತ್ನಿಸಿದಾಗ ವಂಚಕರು ಅದಕ್ಕೆ ಅವಕಾಶ ನೀಡಲಿಲ್ಲ. “ಒಟ್ಟು ಲಾಭಾಂಶದ ಶೇ. 10 ಅಂದರೆ ₹5,10,724 ಕಮಿಷನ್ ಮೊತ್ತ ಪಾವತಿಸಿದರೆ ಮಾತ್ರ ಹಣ ಪಡೆಯಲು ಬಿಡುತ್ತೇವೆ” ಎಂದು ಹೆದರಿಸಿದ್ದಾರೆ. ಇದನ್ನು ನಂಬಿ ಅವರು ಮತ್ತೆ ₹5.10 ಲಕ್ಷ ಹಣವನ್ನು ವಂಚಕರ ಖಾತೆಗೆ ಜಮಾ ಮಾಡಿದ್ದಾರೆ.
    ಹಣ ಪಾವತಿಯಾಗುತ್ತಿದ್ದಂತೆ ಸೈಬರ್ ಖದೀಮರು ತಮ್ಮ ವಾಟ್ಸಾಪ್, ಕರೆ ಹಾಗೂ ಸಂದೇಶಗಳನ್ನು ಬಂದ್ ಮಾಡಿ ಸಂಪರ್ಕ ಕಡಿತಗೊಳಿಸಿದ್ದಾರೆ. ತಾವು ಪೂರ್ಣವಾಗಿ ವಂಚನೆಗೊಳಗಾಗಿರುವುದನ್ನು ಅರಿತ ರಮೇಶ ಶೆಟ್ಟಿ ಅವರು ಉಡುಪಿ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

    ದೂರಿನನ್ವಯ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 137/2026, ಐಟಿ ಕಾಯ್ದೆ ಕಲಂ 66 ಹಾಗೂ ಬಿಎನ್‌ಎಸ್ (BNS) ಕಲಂ 318(4) ರ ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಸೈಬರ್ ಸೆಲ್ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.

     




    #crime #dakshinakannada
    Previous Article“ನಾನಾ ಪಾಟೇಕರ್ ಸತ್ತ ಮಾತ್ರಕ್ಕೆ ತಪ್ಪುಗಳು ಅಳಿಸಿಹೋಗಲ್ಲ” ; ತನುಶ್ರೀ ದತ್ತಾ ಗಂಭೀರ ಆರೋಪ
    Next Article ದಶಕದ ಬಳಿಕ ಜಿ.ಪಂ.–ತಾ.ಪಂ. ಚುನಾವಣೆ ಸಿದ್ಧತೆ; ದಕ್ಷಿಣ ಕನ್ನಡ, ಉಡುಪಿ ಕ್ಷೇತ್ರಗಳ ಮೀಸಲಾತಿ ಪಟ್ಟಿ ಪ್ರಕಟ

    Related Posts

    ವೆಲೆನ್ಸಿಯಾ ಚರ್ಚ್ ಪಾದ್ರಿಯ ವಿರುದ್ಧ ಪೋಕ್ಸೊ ಪ್ರಕರಣ : ತಲೆಮರೆಸಿಕೊಂಡಿದ್ದ ಆರೋಪಿಯ ಬಂಧನ

    October 18, 2026

    ಕೊಳತ್ತಮಜಲು ರಹ್ಮಾನ್ ಕೊಲೆ ಪ್ರಕರಣ : ಜಾಮೀನು ಪ್ರಶ್ನಿಸಿ ಸರ್ಕಾರದ ಅರ್ಜಿ, ಹೈಕೋರ್ಟ್‌ನಿಂದ ತಡೆ

    October 18, 2026

    ಎಂಆರ್‌ಪಿಎಲ್‌ ಸ್ಫೋಟದಲ್ಲಿ ಗಾಯಗೊಂಡಿದ್ದ ಕಾರ್ಮಿಕ ಸಾವು : ₹1.2 ಕೋಟಿ ಪರಿಹಾರ ಘೋಷಣೆ

    October 17, 2026
    Add A Comment
    Leave A Reply Cancel Reply

    ಪ್ರಮುಖ ಸುದ್ದಿ

    ವೆಲೆನ್ಸಿಯಾ ಚರ್ಚ್ ಪಾದ್ರಿಯ ವಿರುದ್ಧ ಪೋಕ್ಸೊ ಪ್ರಕರಣ : ತಲೆಮರೆಸಿಕೊಂಡಿದ್ದ ಆರೋಪಿಯ ಬಂಧನ

    October 18, 2026

    ಕೋಲ್ಕತ್ತಾ ದುರ್ಗಾ ಪೂಜಾ ಸಂಭ್ರಮದಲ್ಲಿ ಕಾಲ್ತುಳಿತ: 19 ಸಾವು, ಘಟನೆಗೆ ಉನ್ನತ ಮಟ್ಟದ ತನಿಖೆಗೆ ಸಿಎಂ ಆದೇಶ

    October 18, 2026

    ಕೊಳತ್ತಮಜಲು ರಹ್ಮಾನ್ ಕೊಲೆ ಪ್ರಕರಣ : ಜಾಮೀನು ಪ್ರಶ್ನಿಸಿ ಸರ್ಕಾರದ ಅರ್ಜಿ, ಹೈಕೋರ್ಟ್‌ನಿಂದ ತಡೆ

    October 18, 2026

    ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷ ಸ್ಥಾನಕ್ಕೆ ಸೌಮ್ಯಾ ರೆಡ್ಡಿ ರಾಜೀನಾಮೆ

    October 17, 2026
    Advertisement






    Nirantara News is powered by a team of experienced media professionals with decades of expertise in television journalism. Our mission is to be the voice of the people by delivering truthful, unbiased, and responsible news. We cover local, state, national, and international news, along with the latest updates on health, entertainment, real estate, business, technology, and more.

    Backed by experienced reporters and a strong legal team, we are committed to providing accurate news and honest reviews.

    Subscribe to Nirantara News and support trusted journalism.

    Top Insights

    ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷ ಸ್ಥಾನಕ್ಕೆ ಸೌಮ್ಯಾ ರೆಡ್ಡಿ ರಾಜೀನಾಮೆ

    October 17, 2026

    ರಾಜ್ಯಾದ್ಯಂತ ಸ್ವೀಟ್ ಅಂಗಡಿಗಳ ತಪಾಸಣೆ ಚುರುಕು: 145 ಮಾದರಿ ಸಂಗ್ರಹ, 15 ಘಟಕಗಳಿಗೆ ನೋಟಿಸ್

    October 17, 2026
    Social Follow
    • Facebook
    • Instagram
    © 2026 Nirantara News. Designed by Blueline Computers.
    • Home
    • ಕರಾವಳಿ ಸುದ್ದಿ
    • ಅಪರಾಧ
    • ಕರ್ನಾಟಕ
    • ರಾಷ್ಟ್ರೀಯ
    • ಅಂತರಾಷ್ಟ್ರೀಯ
    • ಸ್ಥಿರಾಸ್ತಿ ಮತ್ತು ಮೂಲಸೌಕರ್ಯ
    • ಆರೋಗ್ಯ

    Type above and press Enter to search. Press Esc to cancel.