Author: admin
ಮಂಗಳೂರು: ಬೆಳ್ತಂಗಡಿ ತಾಲೂಕಿನ ಕಲ್ಟಿಂಜ ಗ್ರಾಮದ ನಿಡಿಗಲ್ ಪ್ರದೇಶದಲ್ಲಿರುವ ಕೃಷಿಕ ಹಾಗೂ ಧರ್ಮಸ್ಥಳ ದೇವಸ್ಥಾನದ ರೆವೆನ್ಯೂ ವಿಭಾಗದ ವ್ಯವಸ್ಥಾಪಕರಾದ ಶುಭ ಚಂದ್ರರಾಜ್ ಅವರ ಮನೆಗೆ ದರೋಡೆ ಮಾಡಲು ಯತ್ನಿಸಿದ ಪ್ರಕರಣದಲ್ಲಿ ಆರೋಪಿಯಾಗಿದ್ದ ಏಳು ಮಂದಿಯನ್ನು ಮಂಗಳೂರು ನಗರದ 6ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಖುಲಾಸೆಗೊಳಿಸಿದೆ. ಆರೋಪಿಗಳ ವಿರುದ್ಧದ ಆರೋಪಗಳನ್ನು ಸಮರ್ಪಕವಾಗಿ ಸಾಬೀತುಪಡಿಸಲು ಪ್ರಾಸಿಕ್ಯೂಷನ್ ವಿಫಲವಾಗಿದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ. ಈ ಪ್ರಕರಣದಲ್ಲಿ ಪಿ. ಇರ್ಫಾನ್, ಚಿದಾನಂದ ಗೌಡ ಡಿ., ಮೊಹಮ್ಮದ್ ತೌಸೀಫ್, ಮೋಹನ, ನಿತಿನ್ ಕೋಟ್ಯಾನ್, ಮೊಹಮ್ಮದ್ ಆಶಿಕ್ ಹಾಗೂ ತೌಷಿರ್ @ ಪತ್ತೊಂಜಿ ತೌಷಿರ್ ಆರೋಪಿಗಳಾಗಿದ್ದರು. ನ್ಯಾಯಾಧೀಶರಾದ ರಾಜೇಶ್ ಮಾರುತಿ ಕಮಾಟೆ ಅವರಿದ್ದ ನ್ಯಾಯಪೀಠವು ಪ್ರಕರಣದ ವಿಚಾರಣೆ ನಡೆಸಿ ಅಂತಿಮ ತೀರ್ಪು ಪ್ರಕಟಿಸಿದೆ. ಪ್ರಕರಣದ ವಿವರದ ಪ್ರಕಾರ, ಆರೋಪಿಗಳು ತಲವಾರು, ಖಡ್ಗ ಹಾಗೂ ಚೂರಿಗಳಂತಹ ಮಾರಕಾಸ್ತ್ರಗಳನ್ನು ಹಿಡಿದು ಶುಭ ಚಂದ್ರರಾಜ್ ಅವರ ‘ಓಂಕಾರ ನಿಲಯ’ ಮನೆಗೆ ಅಕ್ರಮವಾಗಿ ನುಗ್ಗಲು ಯತ್ನಿಸಿದ್ದರು ಎನ್ನಲಾಗಿತ್ತು. ಈ ವೇಳೆ ಮನೆಯ ಸಾಕು…
ಬೆಳ್ತಂಗಡಿ: ಅಂಗನವಾಡಿ ಕೇಂದ್ರದ ಕೊಠಡಿಯೊಳಗೆ ಆಟಿಕೆಗಳ ಮಧ್ಯೆ ಅಡಗಿದ್ದ ವಿಷಕಾರಿ ಹಾವೊಂದು ಆಟವಾಡುತ್ತಿದ್ದ ನಾಲ್ಕು ವರ್ಷದ ಮಗುವಿಗೆ ಕಚ್ಚಿ ಗಂಭೀರವಾಗಿ ಅಸ್ವಸ್ಥಗೊಂಡಿರುವ ಘಟನೆ ಸೌತಡ್ಕ ಸಮೀಪದ ಮಲ್ಲಿಗೆಮಜಲು ಎಂಬಲ್ಲಿ ಮಂಗಳವಾರ ಸಂಜೆ ನಡೆದಿದೆ. ಮಲ್ಲಿಗೆಮಜಲು ಮಸೀದಿಯ ಅಧ್ಯಕ್ಷ ಸಿಯಾಬ್ ಅವರ ಪುತ್ರಿ ಫಾತಿಮತ್ ಸಹದಿಯಾ (4) ಹಾವು ಕಚ್ಚಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿರುವ ಬಾಲಕಿ. ಮಂಗಳವಾರ ಎಂದಿನಂತೆ ಬಾಲಕಿ ಫಾತಿಮತ್ ಸಹದಿಯಾ ಅಂಗನವಾಡಿ ಕೇಂದ್ರಕ್ಕೆ ಬಂದಿದ್ದಳು. ಕೊಠಡಿಯೊಳಗೆ ಮಕ್ಕಳು ಆಟವಾಡುವ ಪ್ಲಾಸ್ಟಿಕ್ ಆಟಿಕೆ ಸಾಮಗ್ರಿಗಳನ್ನಿಟ್ಟಿದ್ದ ಜಾಗದಲ್ಲಿ ಆಕೆ ಆಟವಾಡುತ್ತಿದ್ದಳು. ಈ ವೇಳೆ ಆಟಿಕೆಗಳ ನಡುವೆ ಅಡಗಿ ಕುಳಿತಿದ್ದ ಹಾವೊಂದು ಬಾಲಕಿಯ ಕೈಗೆ ಕಚ್ಚಿದೆ. ತಕ್ಷಣವೇ ಮಗು ಜೋರಾಗಿ ಅಳಲು ಆರಂಭಿಸಿದೆ. ಮಗುವಿನ ಚೀರಾಟ ಕೇಳಿ ಧಾವಿಸಿ ಬಂದ ಅಂಗನವಾಡಿ ಸಹಾಯಕಿ ಪರಿಶೀಲಿಸಿದಾಗ ಹಾವಿನ ಕಡಿತದ ಗುರುತು ಪತ್ತೆಯಾಗಿದೆ. ತಕ್ಷಣವೇ ಅವರು ಪೋಷಕರಿಗೆ ಮಾಹಿತಿ ನೀಡಿದ್ದಾರೆ. ಪೋಷಕರು ಹಾಗೂ ಸ್ಥಳೀಯರು ಸೇರಿ ತಕ್ಷಣವೇ ಮಗುವನ್ನು ಕೊಕ್ಕಡದ ಸಮುದಾಯ ಆರೋಗ್ಯ ಕೇಂದ್ರಕ್ಕೆ…
ಲಕ್ನೋ: ನೊಯ್ಡಾದ ಮಾಮುರಾ ಗ್ರಾಮದಲ್ಲಿರುವ ನಾಲ್ಕು ಮಹಡಿಗಳ ವಸತಿ ಕಟ್ಟಡದಲ್ಲಿ ಸಂಭವಿಸಿದ ಭೀಕರ ಅಗ್ನಿ ಅವಘಡದಲ್ಲಿ ದಟ್ಟ ಹೊಗೆಯಿಂದ ಉಸಿರುಗಟ್ಟಿ ಇಬ್ಬರು ಮೃತಪಟ್ಟಿದ್ದು, ಸುಮಾರು 50 ಕುಟುಂಬಗಳನ್ನು ಅಗ್ನಿಶಾಮಕ ಸಿಬ್ಬಂದಿ ಸುರಕ್ಷಿತವಾಗಿ ರಕ್ಷಿಸಿದ್ದಾರೆ. ಮಾಹಿತಿಯ ಪ್ರಕಾರ, ಕಟ್ಟಡದ ನೆಲಮಹಡಿಯ ಪಾರ್ಕಿಂಗ್ ಪ್ರದೇಶದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಕೆಲವೇ ಕ್ಷಣಗಳಲ್ಲಿ ಅದು ಸಂಪೂರ್ಣ ಪಾರ್ಕಿಂಗ್‌ಗೆ ವ್ಯಾಪಿಸಿದೆ. ಅಲ್ಲಿದ್ದ ವಾಹನಗಳಿಗೂ ಬೆಂಕಿ ತಗುಲಿದ್ದರಿಂದ ಪರಿಸ್ಥಿತಿ ಮತ್ತಷ್ಟು ಗಂಭೀರಗೊಂಡಿದೆ. ಪ್ರಾಥಮಿಕ ತನಿಖೆಯ ಪ್ರಕಾರ, ವಿದ್ಯುತ್ ಚಾಲಿತ ವಾಹನ (EV) ಚಾರ್ಜ್ ಮಾಡುತ್ತಿದ್ದ ವೇಳೆ ಉಂಟಾದ ಸ್ಪಾರ್ಕ್‌ನಿಂದ ಬೆಂಕಿ ಹೊತ್ತಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಬಳಿಕ ಬೆಂಕಿ ಸಮೀಪದಲ್ಲಿದ್ದ ಪೆಟ್ರೋಲ್ ವಾಹನಗಳಿಗೂ ವ್ಯಾಪಿಸಿ ಅಗ್ನಿ ಅನಾಹುತ ತೀವ್ರ ಸ್ವರೂಪ ಪಡೆದುಕೊಂಡಿದೆ. ಬೆಂಕಿಗಿಂತಲೂ ದಟ್ಟ ಹೊಗೆ ವೇಗವಾಗಿ ಮೇಲಿನ ಮಹಡಿಗಳಿಗೆ ಹರಡಿದ್ದರಿಂದ ಹಲವು ನಿವಾಸಿಗಳು ತಮ್ಮ ಮನೆಗಳಲ್ಲೇ ಸಿಲುಕಿಕೊಂಡಿದ್ದರು. ಮಾಹಿತಿ ಪಡೆದ ಅಗ್ನಿಶಾಮಕ ದಳ, ಪೊಲೀಸರು ಹಾಗೂ ತುರ್ತು ಸೇವಾ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆ ಆರಂಭಿಸಿದರು. ಏಳು ಅಗ್ನಿಶಾಮಕ…
ಕಲಬುರಗಿ: ಜಿಲ್ಲೆಯ ಕೇಂದ್ರ ಕಾರಾಗೃಹದ ಬ್ಯಾರಕ್ ಕಂಬಿಗಳನ್ನು ಕಟ್ ಮಾಡಿ, ಮೂವರು ಸಜಾ ಕೈದಿಗಳು ಮಂಗಳವಾರ (ಜು 14) ಮುಂಜಾನೆ ಸುಮಾರು 3 ಗಂಟೆಗೆ ಜೈಲಿನ ಕಾಂಪೌಂಡ್ ಗೋಡೆ ಹಾರಿ ಸಿನಿಮೀಯ ಶೈಲಿಯಲ್ಲಿ ಪರಾರಿಯಾಗಿದ್ದಾರೆ. ಮಸ್ತಾನ್, ಸಂತೋಷ್ ಹಾಗೂ ಸಾಗರ್ ಪರಾರಿಯಾದ ಖತರ್ನಾಕ್ ಕೈದಿಗಳಾಗಿದ್ದು, ಇವರು ಬೀದರ್ ಕೊಲೆ ಪ್ರಕರಣದಲ್ಲಿ ಶಿಕ್ಷೆಗೆ ಒಳಗಾಗಿದ್ದರು. ಕೈದಿಗಳು ಜೈಲಿನಿಂದ ಹೊರಬಂದು ಬಿಂದಾಸ್ ಆಗಿ ನಡೆದುಕೊಂಡು ಹೋಗಿ ಕಾರ್ ಹತ್ತಿ ಬೀದರ್ ಕಡೆಗೆ ಎಸ್ಕೇಪ್ ಆಗಿರುವ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದೆ. ತಪ್ಪಿಸಿಕೊಂಡ ಆರೋಪಿಗಳು ಬೀದರ್-ಶ್ರೀರಂಗಪಟ್ಟಣ ರಾಷ್ಟ್ರೀಯ ಹೆದ್ದಾರಿ ಮೂಲಕ ಪರಾರಿಯಾಗಿದ್ದರು. ಘಟನೆ ಬೆನ್ನಲ್ಲೇ ಅಲರ್ಟ್ ಆದ ಪೊಲೀಸರು ಕಾರ್ಯಾಚರಣೆ ನಡೆಸಿದ್ದು, ಕಲಬುರಗಿಯ ಕಪನೂರ ಕೈಗಾರಿಕಾ ಪ್ರದೇಶದಲ್ಲಿ ಒರ್ವ ಆರೋಪಿಯ ಕಾಲಿಗೆ ಗುಂಡು ಹೊಡೆದು ಖೆಡ್ಡಾಗೆ ಕೆಡವಿದ್ದಾರೆ. ಈ ಕುರಿತು ಫರಹತಾಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಂಗಳೂರು : ಖಾಸಗಿ ಮೆಡಿಕಲ್ ಕಾಲೇಜಿನಲ್ಲಿ ದ್ವಿತೀಯ ವರ್ಷದ ಎಂಬಿಬಿಎಸ್ ವ್ಯಾಸಾಂಗ ಮಾಡುತ್ತಿದ್ದ ವಿದ್ಯಾರ್ಥಿನಿಯೊಬ್ಬರು ತಾನು ವಾಸವಿದ್ದ ಅಪಾರ್ಟ್‌ಮೆಂಟ್‌ನ ಐದನೇ ಮಹಡಿಯಿಂದ ಕೆಳಗೆ ಜಿಗಿದು ಆತ್ಮಹತ್ಯೆಗೆ ಮಾಡಿಕೊಂಡ ಘಟನೆ ಮಂಗಳವಾರ ಸಂಜೆ ನಡೆದಿದೆ. ಹುಬ್ಬಳ್ಳಿ ಮೂಲದ ಮಹಾಲಕ್ಷ್ಮೀ (20) ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ. ಈಕೆ ತನ್ನ ಪೋಷಕರೊಂದಿಗೆ ಸುಭಾಷಿತ ನಗರದ ವಸತಿ ಸಮುಚ್ಚಯವೊಂದರ ಎರಡನೇ ಅಂತಸ್ತಿನಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ಪೊಲೀಸ್ ಮೂಲಗಳ ಪ್ರಕಾರ, ಮಹಾಲಕ್ಷ್ಮೀ ಅವರು ಇತ್ತೀಚೆಗೆ ಮಾನಸಿಕ ಖಿನ್ನತೆಗೆ ಒಳಗಾಗಿದ್ದರು ಎನ್ನಲಾಗಿದೆ. ಮಂಗಳವಾರ ತಂದೆ-ತಾಯಿಯ ಜೊತೆ ಸೇರಿ ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿ ಮನೆಗೆ ಮರಳಿದ್ದರು. ದೇವಸ್ಥಾನದಿಂದ ವಾಪಸ್ ಬಂದ ಕೆಲವೇ ಸಮಯದ ಬಳಿಕ, ಪೋಷಕರು ಮನೆಯಲ್ಲಿದ್ದಾಗಲೇ ಮಹಾಲಕ್ಷ್ಮೀ ಏಕಾಏಕಿ ಅಪಾರ್ಟ್‌ಮೆಂಟ್‌ನ 5ನೇ ಮಹಡಿಗೆ ಹೋಗಿ ಅಲ್ಲಿಂದ ಕೆಳಗೆ ಜಿಗಿದಿದ್ದಾರೆ. ತೀವ್ರವಾಗಿ ಗಾಯಗೊಂಡಿದ್ದ ಆಕೆಯನ್ನು ತಕ್ಷಣವೇ ಆಸ್ಪತ್ರೆಗೆ ಸಾಗಿಸಲು ಯತ್ನಿಸಲಾಯಿತಾದರೂ, ಅಷ್ಟರಲ್ಲೇ ಆಕೆ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಘಟನೆ ಸಂಭವಿಸಿದ ತಕ್ಷಣ ಸುರತ್ಕಲ್ ಠಾಣಾ…
ಮೈಸೂರು/ಕೋಝಿಕೋಡ್ : ಹೆಂಡತಿಯೊಂದಿಗೆ ನಡೆದ ಕೌಟುಂಬಿಕ ಕಲಹವೊಂದು ತಲೆಮರೆಸಿಕೊಂಡಿದ್ದ ದರೋಡೆಕೋರನ 36 ವರ್ಷಗಳ ಕರಾಳ ರಹಸ್ಯವನ್ನು ಬಯಲು ಮಾಡಿದೆ! 1990 ರಲ್ಲಿ ಕೇರಳದಲ್ಲಿ ನಡೆದಿದ್ದ ಗನ್ ಪಾಯಿಂಟ್ ನಲ್ಲಿ ಕೇರಳ ಸಾರಿಗೆ ಬಸ್ ನ ಕಂಡಕ್ಟರ್ ನಿಂದ 200 ರೂಪಾಯಿ ದರೋಡೆ ಮಾಡಿದ ಪ್ರಕರಣದ ಪ್ರಮುಖ ಆರೋಪಿಯನ್ನು ಮೈಸೂರಿನ ನರಸಿಂಹರಾಜ ಪೊಲೀಸ್ ಠಾಣಾ ಸಿಬ್ಬಂದಿ ಯಶಸ್ವಿಯಾಗಿ ಬಂಧಿಸಿದ್ದಾರೆ. ಕೋಝಿಕೋಡ್ ಮೂಲದ ವಿ.ಕೆ. ಜೋಸ್ (71) ಬಂಧಿತ ವೃದ್ಧ ಆರೋಪಿ. ಕಳೆದ 36 ವರ್ಷಗಳಿಂದ ಈತ ಮೈಸೂರಿನಲ್ಲಿ ‘ಶಿವಕುಮಾರ್’ ಎಂಬ ನಕಲಿ ಹೆಸರಿನಲ್ಲಿ ವಾಸವಾಗಿದ್ದನು. ಮೈಸೂರಿನ ಜೋಸ್ ನಿವಾಸದಲ್ಲಿ ಪತಿ-ಪತ್ನಿ ನಡುವೆ ಸಣ್ಣ ವಿಷಯಕ್ಕೆ ಗಲಾಟೆ ಆರಂಭವಾಗಿತ್ತು. ಮಾತಿಗೆ ಮಾತು ಬೆಳೆದು ದೈಹಿಕ ಹಲ್ಲೆಗೆ ಕಾರಣವಾದಾಗ, ಪ್ರಾಣಭಯದಿಂದ ಜೋಸ್ ಪತ್ನಿ ತಕ್ಷಣವೇ ಪೊಲೀಸ್ ತುರ್ತು ಸಹಾಯವಾಣಿಗೆ ಕರೆ ಮಾಡಿ ನೆರವು ಕೋರಿದ್ದರು. ಸ್ಥಳಕ್ಕೆ ಧಾವಿಸಿದ ನರಸಿಂಹರಾಜ ಠಾಣೆಯ ಪೊಲೀಸರು ಮನೆಯನ್ನು ಕೂಲಂಕಷವಾಗಿ ತಪಾಸಣೆ ನಡೆಸಿದಾಗ ಇಡೀ ಪೊಲೀಸರೇ ಬೆಚ್ಚಿಬಿದ್ದಿದ್ದಾರೆ. ಪೊಲೀಸರು ಮನೆಯನ್ನು ಶೋಧಿಸುವಾಗ…
ಬಂಟ್ವಾಳ : ಜಾಗತಿಕ ಉದ್ವಿಗ್ನತೆಯ ಕೇಂದ್ರಬಿಂದುವಾಗಿರುವ ಹಾರ್ಮುಝ್ ಜಲಸಂಧಿಯ ಒಮನ್ ಕರಾವಳಿ ಸಮೀಪ ಸಂಚರಿಸುತ್ತಿದ್ದ ವಾಣಿಜ್ಯ ಹಡಗಿನ ಮೇಲೆ ಇರಾನ್ ನಡೆಸಿದ ಭೀಕರ ಕ್ಷಿಪಣಿ ದಾಳಿಯಿಂದ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಬಿಳಿಯೂರು ನಿವಾಸಿ ರಚನ್ ಆರ್.ಕೆ. ಸೇರಿದಂತೆ 10 ಮಂದಿ ಭಾರತೀಯ ನಾವಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ದಾಳಿಗೆ ತುತ್ತಾದ ಹಡಗಿನಲ್ಲಿದ್ದ ಭಾರತೀಯ ಸಿಬ್ಬಂದಿಯನ್ನು ಒಮನ್ ನೌಕಾಪಡೆ ಯಶಸ್ವಿಯಾಗಿ ರಕ್ಷಿಸಿದ್ದು, ಸದ್ಯ ರಚನ್ ಸುರಕ್ಷಿತವಾಗಿ ದುಬೈಗೆ ಪ್ರಯಾಣ ಬೆಳೆಸಿದ್ದಾರೆ. ಕಾರ್ಗೋ ಶಿಪ್ಪಿಂಗ್ ಕಂಪೆನಿಯಲ್ಲಿ ಕಳೆದ ಮೂರು ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ರಚನ್ ಆರ್.ಕೆ. ಅವರು ಶನಿವಾರ ಕರ್ತವ್ಯದಲ್ಲಿದ್ದ ಹಡಗಿನ ಮೇಲೆ ಇರಾನ್ ಪಡೆಗಳು ಕ್ಷಿಪಣಿ ದಾಳಿ ನಡೆಸಿದ್ದವು. ಈ ಬಗ್ಗೆ ರಚನ್ ತಂದೆ ರೋಹಿತಾಕ್ಷ ಬಾಣಬೆಟ್ಟು ಅವರಿಗೆ ಆಡಿಯೋ ಸಂದೇಶದ ಮೂಲಕ ಮಾಹಿತಿ ನೀಡಿದ್ದು, ಘಟನೆಯ ಭಯಾನಕತೆಯನ್ನು ಬಿಚ್ಚಿಟ್ಟಿದ್ದಾರೆ. “ಹಡಗಿನ ಮೇಲೆ ದಾಳಿ ನಡೆಯುವ ಬಗ್ಗೆ ನಮಗೆ ಮೊದಲೇ ಮುನ್ನೆಚ್ಚರಿಕೆ ಸಂದೇಶ ಲಭಿಸಿತ್ತು. ಆದರೂ ಒಮನ್ ತೀರದಲ್ಲಿ ಹಡಗು ಮುನ್ನಡೆಯುತ್ತಿದ್ದಾಗ…
ವಾಷಿಂಗ್ಟನ್ : ಹಾರ್ಮುಜ್ ಜಲಸಂಧಿಯಲ್ಲಿ ವಾಣಿಜ್ಯ ಹಡಗುಗಳ ಮೇಲಿನ ದಾಳಿ ಹಾಗೂ ನೌಕಾ ದಿಗ್ಬಂಧನದಿಂದಾಗಿ ಅಮೆರಿಕ ಮತ್ತು ಇರಾನ್ ನಡುವಿನ ಜಾಗತಿಕ ಉದ್ವಿಗ್ನತೆ ಅತ್ಯಂತ ತುತ್ತತುದಿಗೆ ತಲುಪಿದೆ. ಕಳೆದ ಜೂನ್ ತಿಂಗಳಷ್ಟೇ ಉಭಯ ದೇಶಗಳ ನಡುವೆ ಏರ್ಪಟ್ಟಿದ್ದ ‘ತಾತ್ಕಾಲಿಕ ತಿಳಿವಳಿಕೆ ಒಪ್ಪಂದ’ ದಿಂದ ಅಧಿಕೃತವಾಗಿ ಹಿಂದೆ ಸರಿಯುತ್ತಿರುವುದಾಗಿ ಇರಾನ್ ಘೋಷಿಸಿದೆ. ಅಮೆರಿಕ ತನ್ನ ಬಂದರುಗಳ ಮೇಲೆ ಮತ್ತೆ ಕಠಿಣ ನೌಕಾ ನಿರ್ಬಂಧ ಹೇರಿ ಒಪ್ಪಂದವನ್ನು ಗಾಳಿಗೆ ತೂರಿರುವುದೇ ಇದಕ್ಕೆ ಕಾರಣ ಎಂದು ಇರಾನ್ ವಿದೇಶಾಂಗ ಸಚಿವಾಲಯ ಗಂಭೀರ ಆರೋಪ ಮಾಡಿದೆ. ವಿಶ್ವದ ಒಟ್ಟು ತೈಲ ಮತ್ತು ನೈಸರ್ಗಿಕ ಅನಿಲ ಸಾಗಣೆಯ ಸುಮಾರು ಶೇಕಡಾ 20 ರಷ್ಟು ಭಾಗ ಹಾರ್ಮುಜ್ ಜಲಸಂಧಿಯ ಮೂಲಕವೇ ಸಾಗುವುದರಿಂದ, ಈ ಪ್ರಾಂತ್ಯದಲ್ಲಿ ಇರಾನ್ ನಡೆಸುತ್ತಿರುವ ಕ್ಷಿಪಣಿ ಅಬ್ಬರ ಇಡೀ ಜಗತ್ತನ್ನೇ ಆತಂಕಕ್ಕೆ ತಳ್ಳಿದೆ. ಇರಾನ್‌ನ ಉದ್ಧಟತನಕ್ಕೆ ತೀವ್ರ ಆಕ್ರೋಶ ಹೊರಹಾಕಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಇರಾನ್‌ಗೆ ಹಿಂದೆಂದೂ ಕಾಣದ ಕಠಿಣ ಮುನ್ನೆಚ್ಚರಿಕೆ ನೀಡಿದ್ದಾರೆ. “ಇರಾನ್ ತನ್ನ…
ಕೋಟ : ರಾಷ್ಟ್ರೀಯ ಹೆದ್ದಾರಿಯ ಬದಿಯಲ್ಲಿ ಧ್ವನಿವರ್ಧಕಗಳನ್ನು ಅಳವಡಿಸಿ ಸಾರ್ವಜನಿಕ ಶಾಂತಿಗೆ ಧಕ್ಕೆ ತರುತ್ತಿದ್ದ ಯುವಕನ ಕೃತ್ಯವನ್ನು ವಿಚಾರಿಸಲು ಹೋದ ಪೊಲೀಸ್ ಅಧಿಕಾರಿಯ ಮೇಲೆಯೇ ಮಾರಕಾಸ್ತ್ರಗಳಿಂದ ಭೀಕರವಾಗಿ ಹಲ್ಲೆ ನಡೆಸಿದ ಘಟನೆ ಮಂಗಳವಾರ ಬೆಳಿಗ್ಗೆ ಕೋಟತಟ್ಟು ಗ್ರಾಮದ ಬೆಲ್ಲದ ಗಣಪತಿ ದೇವಸ್ಥಾನದ ಎದುರು ನಡೆದಿದೆ. ಈ ವೇಳೆ ಕರ್ತವ್ಯ ನಿರತ ಕೋಟ ಠಾಣಾ ಪೊಲೀಸ್ ಅಧಿಕಾರಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಕೋಟ ಠಾಣೆಯ ಪ್ರಭಾರ ಹೊತ್ತಿದ್ದ ರಾಘವೇಂದ್ರ ಬಿ.ಎನ್. ಹಲ್ಲೆಗೊಳಗಾದ ಪೊಲೀಸ್ ಅಧಿಕಾರಿಯಾಗಿದ್ದಾರೆ. ಕೋಟತಟ್ಟುವಿನ ಸಾರ್ವಜನಿಕ ರಸ್ತೆಯಲ್ಲಿ ದಾಂಧಲೆ ನಡೆಸಿ, ಪೋಲೀಸರ ತಲೆ ತೆಗೆಯುವುದಾಗಿ ಅಬ್ಬರಿಸಿದ ಆರೋಪಿಯ ವಿರುದ್ಧ ಪ್ರಕರಣ ದಾಖಲಾಗಿದೆ. ಜುಲೈ 14 ರಂದು ಬೆಳಿಗ್ಗೆ ಸುಮಾರು 9 ಗಂಟೆಗೆ ಕೋಟ ಠಾಣೆಗೆ ಸಾರ್ವಜನಿಕರೊಬ್ಬರು ಫೋನ್ ಕರೆ ಮಾಡಿ, “ಕೋಟತಟ್ಟು ಗ್ರಾಮದ ಬೆಲ್ಲದ ಗಣಪತಿ ದೇವಸ್ಥಾನದ ಮುಂಭಾಗದ ರಾಷ್ಟ್ರೀಯ ಹೆದ್ದಾರಿಯ ಬದಿಯಲ್ಲಿ ವ್ಯಕ್ತಿಯೊಬ್ಬ ದೊಡ್ಡ ಟಿವಿ, ಸೌಂಡ್ ಬಾಕ್ಸ್ ಹಾಗೂ ಲ್ಯಾಪ್‌ಟಾಪ್ ಇಟ್ಟುಕೊಂಡು ವಿಪರೀತ ಶಬ್ದದಲ್ಲಿ ಮ್ಯೂಸಿಕ್ ಹಾಕಿ ಸಾರ್ವಜನಿಕರಿಗೆ…
ಮಂಗಳೂರು: ಮಳೆಗಾಲದ ಅಲೆಗಳ ನಡುವೆ ಸಸಿಹಿತ್ಲು ಕಡಲತೀರದಲ್ಲಿ ನಿಗೂಢವಾಗಿ ಬಿಳಿ ನೊರೆ ಕಾಣಿಸಿಕೊಂಡಿದ್ದು, ಸ್ಥಳೀಯರಲ್ಲಿ ಕುತೂಹಲದ ಜೊತೆಗೆ ಅದರ ಮೂಲದ ಬಗ್ಗೆ ಆತಂಕ ಎದುರಾಗಿದೆ. ಕೆಲವು ದಿನಗಳ ಹಿಂದೆ ಕುಂದಾಪುರ ಭಾಗದಲ್ಲಿ ಮೊದಲ ಬಾರಿಗೆ ಕಂಡುಬಂದಿದ್ದ ಈ ಬಿಳಿ ನೊರೆ ಇದೀಗ ಸಸಿಹಿತ್ಲು ಕರಾವಳಿಯಲ್ಲಿಯೂ ಕಂಡುಬಂದಿದೆ. ಸಮುದ್ರದ ಅಲೆಗಳೊಂದಿಗೆ ತೀರಕ್ಕೆ ತಲುಪುತ್ತಿರುವ ಈ ನೊರೆಯನ್ನು ಬಲವಾದ ಗಾಳಿ ಎಲ್ಲೆಡೆ ಚದುರಿಸುತ್ತಿದೆ. ಈ ನೊರೆಯು ಬಲೂನ್‌ಗಳಂತೆ ಗಾಳಿಯಲ್ಲಿ ತೇಲುತ್ತಿವೆ. ಕೆಲ ಸ್ಥಳೀಯರು ಹಾಗೂ ಮಕ್ಕಳು ಅದನ್ನು ಹಿಡಿದು ಆಟವಾಡುತ್ತಿರುವ ದೃಶ್ಯಗಳೂ ಕಂಡುಬಂದಿವೆ. ಈ ವಿದ್ಯಮಾನವು ಸಮುದ್ರದಲ್ಲಿ ನಡೆಯುವ ನೈಸರ್ಗಿಕ ಪ್ರಕ್ರಿಯೆಗಳ ಪರಿಣಾಮವಾಗಿರಬಹುದು. ಸಮುದ್ರದ ನೀರಿನಲ್ಲಿರುವ ಸಾವಯವ ಪದಾರ್ಥಗಳು, ಪಾಚಿ, ಸಸ್ಯಗಳ ಅವಶೇಷಗಳು ಹಾಗೂ ಅಲೆಗಳ ತೀವ್ರ ಚಲನೆಯಿಂದ ಇಂತಹ ನೊರೆ ಉಂಟಾಗುವ ಸಾಧ್ಯತೆ ಇದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಮಳೆಗಾಲದಲ್ಲಿ ನದಿಗಳ ಮೂಲಕ ಹೆಚ್ಚಿನ ಪ್ರಮಾಣದ ಮಣ್ಣು, ಸಾವಯವ ತ್ಯಾಜ್ಯ ಹಾಗೂ ಖನಿಜಗಳು ಸಮುದ್ರ ಸೇರುತ್ತವೆ. ಇವು ಸಮುದ್ರದ ನೀರಿನೊಂದಿಗೆ ಬೆರೆತು ಪ್ರಬಲ…



