Author: admin

ಬಂಟ್ವಾಳ: ಅನಾರೋಗ್ಯದಿಂದ ಬಳಲುತ್ತಿದ್ದ ಯುವಕ ಮೃತಪಟ್ಟಿದ್ದಾನೆಂದು ಅಂತ್ಯಕ್ರಿಯೆಗೆ ಸಿದ್ಧತೆ ನಡೆಸುತ್ತಿದ್ದ ವೇಳೆ ಆತ ಉಸಿರಾಡಿದ್ದು, ಮತ್ತೆ ಆಸ್ಪತ್ರೆಗೆ ದಾಖಲಿಸಲಾಗಿದೆ. ಯಕೃತ್ತು ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ ತಾಲೂಕಿನ ಬಿ.ಮೂಡ ಗ್ರಾಮದ ಅಜ್ಜಿಬೆಟ್ಟು ನಿವಾಸಿ ರಜತ್​(30) ತೀವ್ರ ಅಸೌಖ್ಯಗೊಂಡ ಹಿನ್ನೆಲೆಯಲ್ಲಿ ಸೋಮವಾರ ಮಂಗಳೂರಿನ ಜಿಲ್ಲಾಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಬಳಿಕ ಹೆಚ್ಚಿನ ಚಿಕಿತ್ಸೆಗೆ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ತೀವ್ರ ನಿಗಾ ಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಚಿಕಿತ್ಸೆಗೆ ಸ್ಪಂದಿಸದ ಕಾರಣ ಯುವಕನನ್ನು ಮನೆಗೆ ಕರೆದೊಯ್ಯುವಂತೆ ವೈದ್ಯರು ಬುಧವಾರ ತಿಳಿಸಿದ್ದರು. ವೆಂಟಿಲೇಟರ್​ ಸಹಾಯದಿಂದ ಉಸಿರಾಡುತ್ತಿದ್ದು, ತೆಗೆದರೆ ಉಸಿರು ನಿಂತು ಅಸುನೀಗುತ್ತಾರೆ ಎಂದು ತಿಳಿಸಿದ್ದರು. ಯುವಕನ ಸಹೋದರಿ ಅದೇ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದು, ಯುವಕನನ್ನು ವೆಂಟಿಲೇಟರ್​ ಸಹಿತ ಮನೆಗೆ ಕರೆತರಲಾಗಿತ್ತು. ವೆಂಟಿಲೇಟರ್​ ತೆರವುಗೊಳಿಸಿ ಆಸ್ಪತ್ರೆ ಸಿಬ್ಬಂದಿ ಮರಳಿದ್ದರು. ಆದರೆ ವೆಂಟಿಲೇಟರ್​ ತೆರವುಗೊಳಿಸಿದ ಎರಡು ತಾಸು ಬಳಿಕವೂ ಯುವಕ ಉಸಿರಾಡುತ್ತಿದ್ದರಿಂದ ಮನೆಯವರು ಸಂಜೆ ಜಿಲ್ಲಾಸ್ಪತ್ರೆಗೆ ಕರೆದೊಯ್ದಿದ್ದಾರೆ. ಈ ನಡುವೆ ಯುವಕ ಮೃತಪಟ್ಟಿರುವುದಾಗಿ ಸುದ್ದಿ ಹಬ್ಬಿ ಕುಟುಂಬಸ್ಥರು, ಬಂಧುಗಳು ಅಂತ್ಯಕ್ರಿಯೆಗೆ ಬೇಕಾದ ಸಾಮಗ್ರಿಗಳೊಂದಿಗೆ ಅಂತಿಮ…

Read More

ಮಂಡ್ಯ : ಭಿಕ್ಷೆ ಬೇಡಿ ಜೀವನ ಸಾಗಿಸುತ್ತಿದ್ದ ವೃದ್ಧೆಯೊಬ್ಬರ ಮನೆಯಲ್ಲಿ ಮೂಟೆಗಟ್ಟಲೆ ಹಣ ಹಾಗೂ ಚಿಲ್ಲರೆ ಕಾಸು ಪತ್ತೆಯಾಗಿರುವ ಘಟನೆ ಶ್ರೀರಂಗಪಟ್ಟಣದಲ್ಲಿ ನಡೆದಿದೆ. ಶ್ರೀರಂಗಪಟ್ಟಣದ ಪೂರ್ಣಯ್ಯ ಬೀದಿಯ ಸಾವಿತ್ರಿ ಎಂಬ ವೃದ್ಧ ಭಿಕ್ಷುಕಿಯ ಮನೆಯಲ್ಲಿ ಹಣದ ರಾಶಿ ಪತ್ತೆಯಾಗಿದ್ದು, ಸ್ಥಳೀಯರಲ್ಲಿ ಅಚ್ಚರಿ ಮೂಡಿಸಿದೆ. ಸಾವಿತ್ರಿ ಹಲವು ವರ್ಷಗಳಿಂದ ಭಿಕ್ಷೆ ಬೇಡಿ ಬಂದ ಹಣವನ್ನು ಸಂಗ್ರಹಿಸಿಕೊಂಡು ಜೀವನ ನಡೆಸುತ್ತಿದ್ದರು ಎನ್ನಲಾಗಿದೆ. ಸುಮಾರು 10 ವರ್ಷಗಳಿಂದ ಭಿಕ್ಷೆ ಬೇಡಿ ಸಂಗ್ರಹಿಸಿದ ಹಣವನ್ನು ಚೀಲಗಳಲ್ಲಿ ತುಂಬಿ ಮನೆಯಲ್ಲಿ ಇಟ್ಟುಕೊಂಡಿದ್ದರು ಎಂದು ಸ್ಥಳೀಯರು ತಿಳಿಸಿದ್ದಾರೆ. ವೃದ್ಧೆ ಹಲವು ವರ್ಷಗಳಿಂದ ಒಂಟಿಯಾಗಿ ಮನೆಯೊಂದರಲ್ಲಿ ವಾಸವಾಗಿದ್ದರು. ಮನೆಯಲ್ಲೂ ಸರಿಯಾದ ಸ್ವಚ್ಛತೆ ಹಾಗೂ ಬೆಳಕಿನ ವ್ಯವಸ್ಥೆ ಇರಲಿಲ್ಲ ಎನ್ನಲಾಗಿದೆ. ಇಂದು ಗುರುವಾರ ಸಾವಿತ್ರಿ ಮನೆಯಿಂದ ಹೊರಗೆ ಬಾರದಿರುವುದನ್ನು ಗಮನಿಸಿದ ಸ್ಥಳೀಯರಿಗೆ ಅನುಮಾನ ಮೂಡಿದೆ. ಬಳಿಕ ಮನೆಗೆ ತೆರಳಿ ಪರಿಶೀಲಿಸಿದಾಗ, ವೃದ್ಧೆ ಅನಾರೋಗ್ಯದಿಂದ ಬಳಲುತ್ತಿರುವುದು ಕಂಡುಬಂದಿದೆ. ತಕ್ಷಣ ಸ್ಥಳೀಯರು ಆಕೆಗೆ ಉಪಚಾರ ನೀಡಿ ಊಟ-ತಿಂಡಿ ನೀಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ. ಬಳಿಕ ಮನೆಯ…

Read More

ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ಮಹತ್ವದ ಬೆಳವಣಿಗೆಯೊಂದು ನಡೆದಿದ್ದು, ಸಚಿವ ಬಿ. ನಾಗೇಂದ್ರ ಅವರು ತಮ್ಮ ಸಚಿವ ಸ್ಥಾನಕ್ಕೆ ಅಧಿಕೃತವಾಗಿ ರಾಜೀನಾಮೆ ಸಲ್ಲಿಸಿದ್ದಾರೆ. ಗುರುವಾರವೇ ನಾಗೇಂದ್ರ ಅವರು ತಮ್ಮ ರಾಜೀನಾಮೆ ಪತ್ರವನ್ನು ಮುಖ್ಯಮಂತ್ರಿ ಡಿಕೆ ಶಿವಕುಮಾರ್‌ ತಲುಪಿಸಿದ್ದಾರೆ ಎಂದು ತಿಳಿದುಬಂದಿದೆ. ಆದರೆ ಈ ರಾಜೀನಾಮೆಯನ್ನು ಅಂಗೀಕರಿಸಬೇಕೇ ಅಥವಾ ತಿರಸ್ಕರಿಸಿ ಮುಂದುವರಿಯಬೇಕೇ ಎಂಬ ಗೊಂದಲದಲ್ಲಿ ಪಕ್ಷದ ವರಿಷ್ಠರು ಹಾಗೂ ನಾಯಕತ್ವವಿದ್ದು, ಈವರೆಗೆ ಯಾವುದೇ ಅಂತಿಮ ತೀರ್ಮಾನ ಕೈಗೊಂಡಿಲ್ಲ ಎಂದು ಮೂಲಗಳು ಸ್ಪಷ್ಟಪಡಿಸಿವೆ. ನಾಗೇಂದ್ರ ಅವರು ಈಗಾಗಲೇ ತಮ್ಮ ರಾಜೀನಾಮೆ ಪತ್ರವನ್ನು ನಾಯಕತ್ವದ ಮುಂದಿಟ್ಟಿದ್ದು, ಸರ್ಕಾರಕ್ಕೆ ಮುಜುಗರವಾಗದಂತೆ ಹೆಜ್ಜೆಯಿಡಲು ಮುಂದಾಗಿದ್ದಾರೆ. ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಬಹುಕೋಟಿ ಹಗರಣದಲ್ಲಿ ಭಾಗಿಯಾಗಿರುವ ಆರೋಪ ಹೊತ್ತಿರುವ ಸಚಿವ ಬಿ. ನಾಗೇಂದ್ರ ಅವರ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಸೆ.1 ರಿಂದ 10 ದಿನಗಳ ಕಾಲ ಬಳ್ಳಾರಿ ಚಲೋ ಪಾದಯಾತ್ರೆ  ಘೋಷಣೆ ಮಾಡಿದೆ. ಬಿಜೆಪಿ ಪಾದಯಾತ್ರೆಗೆ ಮುನ್ನವೇ ನಾಗೇಂದ್ರ ರಾಜೀನಾಮೆ ನೀಡಿರುವ ಹಿನ್ನೆಲೆಯಲ್ಲಿ ಸಿಎಂ ಮತ್ತು ಕಾಂಗ್ರೆಸ್‌ ಹೈಕಮಾಂಡ್‌…

Read More

ಬೆಳ್ತಂಗಡಿ: ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ಎಸಗಿ, ಬೆದರಿಕೆ ಹಾಕಿದ ಆರೋಪದಡಿ ಪೋಕ್ಸೋ ಪ್ರಕರಣ ದಾಖಲಿಸಿಕೊಂಡಿರುವ ಧರ್ಮಸ್ಥಳ ಪೊಲೀಸರು ಆರೋಪಿಯನ್ನು ಬೆಂಗಳೂರಿನ ದೊಡ್ಡಬಳ್ಳಾಪುರದಲ್ಲಿ ಬಂಧಿಸಿದ್ದಾರೆ. ಆಂಧ್ರಪ್ರದೇಶದ ಜಂಗಲ್ಪಲ್ಲಿ ನಿವಾಸಿ ಶ್ರೀಕಾಂತ್‌ (21) ಬಂಧಿತ ಆರೋಪಿ. 2025ರ ಸೆಪ್ಟೆಂಬರ್‌ನಿಂದ ನವೆಂಬರ್‌ ಅವಧಿಯಲ್ಲಿ ಧರ್ಮಸ್ಥಳ ಪೊಲೀಸ್ ಠಾಣಾ ವ್ಯಾಪ್ತಿಯ ಅಪ್ರಾಪ್ತ ಬಾಲಕಿಯ ಮೇಲೆ ಬಲವಂತವಾಗಿ ಅತ್ಯಾಚಾರ ಎಸಗಿ, ಈ ವಿಚಾರವನ್ನು ಯಾರಿಗೂ ತಿಳಿಸದಂತೆ ಬೆದರಿಕೆ ಹಾಕಿದ್ದಾನೆ ಎಂದು ಆರೋಪಿಸಲಾಗಿದೆ. ಬಳಿಕ ಬಾಲಕಿ ಗರ್ಭಿಣಿಯಾಗಿ ಮಗುವಿಗೆ ಜನ್ಮ ನೀಡಿದ್ದಾಳೆ ಎನ್ನಲಾಗಿದೆ. ಈ ಬಗ್ಗೆ ಆ.23ರಂದು ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಅ.ಕ್ರ. 60/2026ರಂತೆ ಬಿಎನ್‌ಎಸ್‌ ಕಲಂ 64(2)(m), 65(1), 351(2) ಹಾಗೂ ಪೋಕ್ಸೋ ಕಾಯ್ದೆಯ ಕಲಂ 4(2), 6ರಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ. ಪ್ರಕರಣ ದಾಖಲಾಗುತ್ತಿದ್ದಂತೆ ಆರೋಪಿ ಶ್ರೀಕಾಂತ್‌ ಪರಾರಿಯಾಗಲು ಯತ್ನಿಸಿದ್ದಾನೆ. ಈ ಹಿನ್ನೆಲೆಯಲ್ಲಿ ಧರ್ಮಸ್ಥಳ ಠಾಣೆಯ ಪಿಎಸ್‌ಐ ಸಮರ್ಥ್ ಆರ್. ಗಾಣಿಗೇರ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿ, ಆ.25ರಂದು ಬೆಂಗಳೂರಿನ ದೊಡ್ಡಬಳ್ಳಾಪುರದಲ್ಲಿ ಆರೋಪಿಯನ್ನು ಬಂಧಿಸಿದೆ.…

Read More

ಮಂಗಳೂರು: ಮಂಗಳೂರು ರೈಲ್ವೆ ಪ್ರದೇಶವನ್ನು ನೈಋತ್ಯ ರೈಲ್ವೆಯ  ಮೈಸೂರು ವಿಭಾಗಕ್ಕೆ ಪೂರ್ಣವಾಗಿ ವರ್ಗಾಯಿಸುವ ರೈಲ್ವೆ ಮಂಡಳಿಯ ನಿರ್ಧಾರದಿಂದಾಗಿ ಕೇರಳಕ್ಕೆ ಯಾವುದೇ ನಷ್ಟವಿಲ್ಲ ಮತ್ತು ಇದರಿಂದ ರೈಲು ಕಾರ್ಯಾಚರಣೆಯ ದಕ್ಷತೆ ಹೆಚ್ಚಲಿದೆ ಎಂದು ರೈಲ್ವೆ ಮಂಡಳಿ ಸ್ಪಷ್ಟಪಡಿಸಿದೆ. ಮಂಗಳೂರು ನಗರವು ಕರ್ನಾಟಕದ ವ್ಯಾಪ್ತಿಗೆ ಬರುವುದರಿಂದ, ಪಾಲಕ್ಕಾಡ್ ವಿಭಾಗವು ಕೇರಳದ ವ್ಯಾಪ್ತಿಯಲ್ಲಿರುವ ತನ್ನ ಎಲ್ಲಾ ನಿಲ್ದಾಣಗಳನ್ನು ಉಳಿಸಿಕೊಳ್ಳಲಿದೆ. ಇಲ್ಲಿಯವರೆಗೆ ಮಂಗಳೂರು ರೈಲ್ವೆ ಪ್ರದೇಶವು ಮೂರು ವಿಭಿನ್ನ ಆಡಳಿತ ವ್ಯಾಪ್ತಿಗೆ ಒಳಪಟ್ಟಿತ್ತು. ದಕ್ಷಿಣ ರೈಲ್ವೆ , ನೈಋತ್ಯ ರೈಲ್ವೆ  ಮತ್ತು ಕೊಂಕಣ ರೈಲ್ವೆ ನಿಗಮ  — ಈ ಮೂರು ಸಂಸ್ಥೆಗಳ ಗಡಿಗಳು ಮಂಗಳೂರಿನ ಪಡೀಲ್‌ನಲ್ಲಿ ಒಂದಾಗುತ್ತಿದ್ದವು. ಪರಿಣಾಮವಾಗಿ, ಗೋವಾ ಅಥವಾ ಹಾಸನ ಕಡೆಯಿಂದ ಮಂಗಳೂರಿಗೆ ಬರುವ ರೈಲುಗಳು ನಿಲ್ದಾಣ ತಲುಪುವಷ್ಟರಲ್ಲಿ ಮೂರು ಆಡಳಿತ ಗಡಿಗಳನ್ನು ದಾಟಬೇಕಾಗಿತ್ತು. ಇದು ಅನಗತ್ಯ ವಿಳಂಬ ಮತ್ತು ದಟ್ಟಣೆ ನಿರ್ವಹಣೆಯಲ್ಲಿ ತೊಡಕುಗಳನ್ನು ಉಂಟುಮಾಡುತ್ತಿತ್ತು. ಅಲ್ಲದೆ, ಮಂಗಳೂರು ಪಾಲಕ್ಕಾಡ್ ವಿಭಾಗದ ಕೊನೆಯ ಭಾಗದಲ್ಲಿದ್ದು, ಅದರ ಪ್ರಧಾನ ಕಚೇರಿಯಿಂದ ಸುಮಾರು 350 ಕಿ.ಮೀ. ದೂರದಲ್ಲಿದೆ.…

Read More

ಬೆಂಗಳೂರು; ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ ‘ಟಾಕ್ಸಿಕ್: ಎ ಫೇರಿ ಟೇಲ್ ಫಾರ್ ಗ್ರೋನ್-ಅಪ್ಸ್’ ಚಿತ್ರದ ಕುರಿತು ವಿಮರ್ಶೆ (Review) ಪ್ರಕಟಿಸಿದ್ದ ಯೂಟ್ಯೂಬರ್ ಸೂರಜ್ ಕುಮಾರ್ ಅವರಿಗೆ ಚಿತ್ರತಂಡದಿಂದ ಲೀಗಲ್ ನೋಟಿಸ್ ನೀಡಿದೆ. ಈ ಕುರಿತು ಸೂರಜ್ ಅವರು ಎಕ್ಸ್ (X) ಸಾಮಾಜಿಕ ಜಾಲತಾಣದಲ್ಲಿ ನೋಟಿಸ್‌ನ ಸ್ಕ್ರೀನ್‌ಶಾಟ್ ಹಂಚಿಕೊಂಡಿದ್ದು, ಸದ್ಯ ಇದು ತೀವ್ರ ಚರ್ಚೆಗೆ ಗ್ರಾಸವಾಗಿದೆ.ಬೆಂಗಳೂರು ಮೂಲದ ಐಪ್ಲೆಕ್ಸ್ ಸಾಫ್ಟ್‌ವೇರ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯು, ‘ಟಾಕ್ಸಿಕ್’ ಚಿತ್ರದ ನಿರ್ಮಾಪಕರಾದ ಕೆವಿಎನ್ ಪ್ರೊಡಕ್ಷನ್ಸ್ ಮತ್ತು ಮಾನ್‌ಸ್ಟರ್ ಮೈಂಡ್ ಕ್ರಿಯೇಷನ್ಸ್ ಎಲ್‌ಎಲ್‌ಪಿ ಪರವಾಗಿ ಈ ನೋಟಿಸ್ ನೀಡಿದೆ. ‘ಟಾಕ್ಸಿಕ್’ ಚಿತ್ರಕ್ಕೆ ಸಂಬಂಧಿಸಿದ ವಿಷಯವನ್ನು ಡಿಜಿಟಲ್ ಹಾಗೂ ಆನ್‌ಲೈನ್ ವೇದಿಕೆಗಳಲ್ಲಿ ಹಂಚಿಕೊಂಡಿರುವುದು ಗಮನಕ್ಕೆ ಬಂದಿದೆ. ನಿರ್ಮಾಪಕರ ಪರವಾಗಿ ಕಾಪಿರೈಟ್ ಉಲ್ಲಂಘನೆ, ಸುಳ್ಳು ಅಥವಾ ನಿಂದನಾತ್ಮಕ ವಿಷಯಗಳ ವಿರುದ್ಧ ಕ್ರಮ ಕೈಗೊಳ್ಳಲು ಐಪ್ಲೆಕ್ಸ್‌ ಸಂಸ್ಥೆಗೆ ಅಧಿಕಾರ ನೀಡಲಾಗಿದೆ. ಅಗತ್ಯವಿದ್ದಲ್ಲಿ ವಿಡಿಯೊವನ್ನು ಆನ್‌ಲೈನ್‌ನಿಂದ ತೆಗೆದುಹಾಕಲು, ನಿರ್ಬಂಧಿಸಲು ಅಥವಾ ಡಿ-ಇಂಡೆಕ್ಸಿಂಗ್ ಮಾಡಲು ನೋಟಿಸ್‌ನಲ್ಲಿ ಸೂಚಿಸಲಾಗಿದೆ. ಲೀಗಲ್ ನೋಟಿಸ್ ಸ್ಕ್ರೀನ್‌ಶಾಟ್…

Read More

ಬೆಂಗಳೂರು: ತೆಲುಗು ಚಿತ್ರರಂಗದಲ್ಲಿ ಸದ್ಯ ‘ಇರುಮುಡಿ’ ಸಿನಿಮಾದದ್ದೇ ಸದ್ದು. ಮಾಸ್ ಹೀರೋ ರವಿತೇಜಾ ಅವರನ್ನು ಇದುವರೆಗೆ ನೋಡಿದ ರೀತಿಗಿಂತ ವಿಭಿನ್ನವಾಗಿ ತೆರೆ ಮೇಲೆ ಕಾಣಿಸಿಕೊಂಡಿರುವ ಈ ಸಿನಿಮಾ, ಆ್ಯಕ್ಷನ್‌ಗಿಂತ ತಂದೆ–ಮಗಳ ಬಾಂಧವ್ಯ, ಭಾವನೆ, ನಂಬಿಕೆ ಹಾಗೂ ಸಮಾಜದ ಸೂಕ್ಷ್ಮ ಸಮಸ್ಯೆಯೊಂದನ್ನು ಕೇಂದ್ರವಾಗಿಸಿಕೊಂಡಿದೆ. ಆಗಸ್ಟ್ 21ರಂದು ಬಿಡುಗಡೆಯಾದ ಚಿತ್ರಕ್ಕೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು, ಇದೀಗ ಟಾಲಿವುಡ್‌ನ ಹಲವು ಸ್ಟಾರ್‌ಗಳು ಸಿನಿಮಾವನ್ನು ಹಾಡಿ ಹೊಗಳುತ್ತಿದ್ದಾರೆ. ತಂದೆ–ಮಗಳ ಕಥೆಯೇ ಚಿತ್ರದ ಪ್ರಮುಖ ಆಕರ್ಷಣೆ ಶಿವ ನಿರ್ವಾಣ ನಿರ್ದೇಶನದ ‘ಇರುಮುಡಿ’ಯಲ್ಲಿ ರವಿತೇಜಾ ತಂದೆಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ತಮ್ಮ ಮಗಳೊಂದಿಗೆ ಹೊಂದಿರುವ ಭಾವನಾತ್ಮಕ ಬಾಂಧವ್ಯವೇ ಕಥೆಯ ಪ್ರಮುಖ ಅಂಶ. ಮಗಳ ಬದುಕು, ಆಕೆಯ ಭವಿಷ್ಯ ಹಾಗೂ ಶಾಲಾ ಬಾಲಕಿಯರ ಸುತ್ತ ನಡೆಯುವ ಗಂಭೀರ ವಿಚಾರವೊಂದು ಕಥೆಗೆ ಮತ್ತಷ್ಟು ತೂಕ ನೀಡುತ್ತದೆ. ಚಿತ್ರದಲ್ಲಿ ಭಕ್ತಿ, ಕುಟುಂಬದ ಭಾವನೆ, ಆ್ಯಕ್ಷನ್ ಮತ್ತು ಸಾಮಾಜಿಕ ಸಂದೇಶವನ್ನು ಒಂದೇ ಕಥಾಹಂದರದಲ್ಲಿ ಜೋಡಿಸಲಾಗಿದೆ. ವಿಮರ್ಶಕರ ಪ್ರಕಾರ, ಸಿನಿಮಾ ಆರಂಭದಲ್ಲಿ ನಿಧಾನವಾಗಿ ಸಾಗಿದರೂ ನಂತರದ ಭಾಗದಲ್ಲಿ…

Read More

ಉಡುಪಿ: ಬೀಗ ಹಾಕಿದ ಮನೆಗಳನ್ನೇ ಗುರಿಯಾಗಿಸಿಕೊಂಡು ಸರಣಿ ಕಳ್ಳತನ ನಡೆಸುತ್ತಿದ್ದ ಇಬ್ಬರು ಆರೋಪಿಗಳನ್ನು ಉಡುಪಿ ನಗರ ಠಾಣೆಯ ಪೊಲೀಸರು ಬಂಧಿಸಿದ್ದಾರೆ. ಕಾರ್ಯಾಚರಣೆಯಲ್ಲಿ ಬಂಧಿತರಿಂದ ಸುಮಾರು 23,56,230 ರೂಪಾಯಿ ಮೌಲ್ಯದ ಚಿನ್ನಾಭರಣ, ಬೆಳ್ಳಿ ಹಾಗೂ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ. ಪೆರಂಪಳ್ಳಿ ಕುಂಜಿಬೆಟ್ಟುವಿನ ಅರುಣ್ ಎಸ್.ವಿ. ಅಲಿಯಾಸ್ ಅರುಣ್ ಆಚಾರಿ (43) ಹಾಗೂ ತೆಂಕನಿಡಿಯೂರಿನ ಕೌಶೀಕ್ (19) ಬಂಧಿತ ಆರೋಪಿಗಳು. ಪುತ್ತೂರು ಗ್ರಾಮದ ಭಗವತಿ ಲೇಔಟ್ ನಿವಾಸಿ ಸನಂ ಎಂಬುವರು ವಿದೇಶದಲ್ಲಿದ್ದ ಗಂಡನ ಮನೆಗೆ ಬಂದಿದ್ದು, ಆಗಸ್ಟ್ 8ರಂದು ಸಂಬಂಧಿಕರ ಮನೆಗೆ ತೆರಳಿದ್ದರು. ಆಗಸ್ಟ್ 11ರಂದು ವಾಪಸ್ ಬಂದು ನೋಡಿದಾಗ ಮನೆಯ ಟೆರೇಸ್ ಬಾಗಿಲು ಮುರಿದು ಕಪಾಟಿನಲ್ಲಿದ್ದ ವಿದೇಶಿ ಕರೆನ್ಸಿ ಸೇರಿದಂತೆ 2.14 ಲಕ್ಷ ರೂ. ಕಳುವಾಗಿತ್ತು. ಈ ಕುರಿತು ಉಡುಪಿ ನಗರ ಠಾಣೆಯಲ್ಲಿ (ಅಕ್ರ 108/2026) ಪ್ರಕರಣ ದಾಖಲಾಗಿತ್ತು. ಉಡುಪಿ ನಗರ ಠಾಣಾ ಪೊಲೀಸ್ ನಿರೀಕ್ಷಕ ಮಹೇಶ ಪ್ರಸಾದ್ ಮಾರ್ಗದರ್ಶನದಲ್ಲಿ, ಉಪನಿರೀಕ್ಷಕ ಪ್ರಕಾಶ್ ನೇತೃತ್ವದ ವಿಶೇಷ ಪಡೆ ಆಗಸ್ಟ್ 23ರಂದು ಪೆರಂಪಳ್ಳಿಯ ಸಂತೋಷ ನಗರದಲ್ಲಿ…

Read More

ಮಂಗಳೂರು: ದಕ್ಷಿಣ ಕನ್ನಡದ ಬಂಟ್ವಾಳದ ಬಸ್ ನಿಲ್ದಾಣವೊಂದರಲ್ಲಿ ಪಾಗಲ್ ಪ್ರೇಮಿಯೊಬ್ಬ ಯುವತಿಯನ್ನು ಕೊಚ್ಚಿ ಕೊಲೆ ಮಾಡಿದ್ದ ಪ್ರಕರಣ ಮಾಸುವ ಮುನ್ನವೇ ಮಂಗಳೂರಿನಲ್ಲಿ ಮತ್ತೊಂದು ಕೊಲೆ ಬೆದರಿಕೆ ಪ್ರಕರಣ ಕೇಳಿಬಂದಿದೆ. ತನ್ನ ಮೇಲೆ ದೌರ್ಜನ್ಯವೆಸಗಿದವನ ವಿರುದ್ಧ ಯುವತಿಯೊಬ್ಬಳು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾಳೆ. ಇದೇ ಕಾರಣಕ್ಕೆ ಆರೋಪಿ ಆಕೆಗೆ ಕೊಲೆ ಬೆದರಿಕೆ ಹಾಕಿದ್ದಾನೆ. ಅಷ್ಟೇ ಅಲ್ಲದೆ ಯುವತಿಯ ಸ್ನೇಹಿತೆಯರ ಮೇಲೂ ಹಲ್ಲೆ ನಡೆಸಿದ್ದಾನೆ. ಇದೆಲ್ಲದರ ಬಳಿಕವೂ ಪೊಲೀಸರು ಯಾವುದೇ ಕ್ರಮ ಕೈಗೊಂಡಿಲ್ಲ ಎಂಬ ಆರೋಪಗಳು ಕೇಳಿಬಂದಿವೆ. ಘಟನೆಯ ಹಿನ್ನೆಲೆ ಏನು? ಪುತ್ತೂರು ಮೂಲದ ನರ್ಸ್ ನಂದಿನಿ ಎಂಬುವವರು ಮಂಗಳೂರಿನ ನೀರುಮಾರ್ಗದಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದರು. ಕಳೆದ ಆಗಸ್ಟ್ 16ರಂದು ನಂದಿನಿ ಮೈಸೂರಿಗೆ ತೆರಳುವಾಗ, ತಮ್ಮ ಮನೆಯಲ್ಲಿದ್ದ ನಾಯಿಗೆ ಊಟ ಹಾಕಲು ಕೀಯನ್ನು ಸ್ನೇಹಿತೆ ಚಂದನಾಗೆ ನೀಡಿದ್ದರು. ಆಗಸ್ಟ್ 17ರಂದು ಚಂದನಾ ತನ್ನ ಮತ್ತೊಬ್ಬ ಸ್ನೇಹಿತೆ, ಕೇರಳ ಮೂಲದ ನರ್ಸ್ ಆದಿತ್ಯಾ ಜೊತೆ ನಂದಿನಿ ಮನೆಗೆ ತೆರಳಿದ್ದರು. ಈ ವೇಳೆ, ಆದಿತ್ಯಾ ನೀಡಿದ ಮಾಹಿತಿ…

Read More

ಉಡುಪಿ : 8 ವರ್ಷಗಳ ಹಿಂದೆ ತೀರಿಹೋದ ವ್ಯಕ್ತಿಯೊಬ್ಬರು ವಜ್ರದ ವ್ಯಾಪಾರದಲ್ಲಿ 5 ಲಕ್ಷ ರೂಪಾಯಿ ಬಾಕಿ ಇರಿಸಿದ್ದಾರೆ ಎಂದು ಸುಳ್ಳು ಹೇಳಿ, ಅವರ ಕುಟುಂಬಕ್ಕೆ ಜೀವ ಬೆದರಿಕೆಯೊಡ್ಡುತ್ತಿದ್ದ ಇಬ್ಬರು ಖತರ್ನಾಕ್ ಆರೋಪಿಗಳನ್ನು ಉಡುಪಿ ನಗರ ಠಾಣೆಯ ಪೊಲೀಸರು ಬಂಧಿಸಿದ್ದಾರೆ. ಶಿವಳ್ಳಿ ಗ್ರಾಮದ ಕುಕ್ಕುಂಜೆ ನಿವಾಸಿ ಸಾಜೀದ್ ಹಾಗೂ ತುಮಕೂರು ಜಿಲ್ಲೆ ಕುಣಿಗಲ್ ತಾಲೂಕಿನ ಸೈಯದ್ ಸೈಫ್ ಅಹಮ್ಮದ್ (40) ಬಂಧಿತ ಆರೋಪಿಗಳು. ದೂರುದಾರರಿಗೆ ಜುಲೈ 2, 2026ರಂದು ವಾಟ್ಸಾಪ್ ಕರೆಯೊಂದು ಬಂದಿದ್ದು, ಹಿಂದಿಯಲ್ಲಿ ಮಾತನಾಡಿದ ವ್ಯಕ್ತಿ, “ನಿಮ್ಮ ಮಗ ಅಜಿತ್ ಪಾಡಿಯಾರ್ ನಮ್ಮ ಬಳಿ ವಜ್ರದ ವ್ಯವಹಾರ ನಡೆಸಿ 5 ಲಕ್ಷ ರೂಪಾಯಿ ಬಾಕಿ ಇಟ್ಟಿದ್ದಾನೆ, ಆ ಹಣವನ್ನು ನೀವು ನೀಡಬೇಕು” ಎಂದು ಒತ್ತಾಯಿಸಿದ್ದ. ಮಗ ಅಜಿತ್ 8 ವರ್ಷಗಳ ಹಿಂದೆಯೇ ತೀರಿಹೋಗಿದ್ದು, ಈ ಬಗ್ಗೆ ನಮಗೆ ಯಾವುದೇ ಮಾಹಿತಿ ಇಲ್ಲ ಎಂದು ತಂದೆ ಹಣ ನೀಡಲು ನಿರಾಕರಿಸಿದ್ದರು. ಆದಾಗ್ಯೂ, ಅದೇ ದಿನ ದುಬಾಯಿಯಲ್ಲಿದ್ದ ದೂರುದಾರರ ಮತ್ತೊಬ್ಬ ಮಗ ಅಮೀತ್…

Read More