Author: admin

ಬೆಂಗಳೂರು: ಸಾಕ್ಷಿಯೊಬ್ಬರನ್ನು ಕಾನೂನುಬಾಹಿರವಾಗಿ ಬಂಧಿಸಿದ್ದಕ್ಕೆ ಬೆಂಗಳೂರಿನ ವೈಟ್ ಫಿಲ್ಟ್ ಪೊಲೀಸರನ್ನು ಕರ್ನಾಟಕ ಹೈಕೋರ್ಟ್ ತರಾಟೆಗೆ ತೆಗೆದುಕೊಂಡಿದೆ. ಆಸ್ತಿ ಉಯಿಲಿನ ಸಾಕ್ಷಿಯಾಗಿದ್ದ ಕೆ.ಎನ್.ಮೋಹನ್ ರೆಡ್ಡಿ ಎನ್ನುವರಿಗೆ ಆಗಸ್ಟ್ 27ಕ್ಕೆ ಹಾಜರಾಗಲು ನೋಟಿಸ್ ಕೊಟ್ಟು ಆಗಸ್ಟ್ 25ಕ್ಕೆ ಬಂಧನ ಮಾಡಲಾಗಿತ್ತು. ಈ ಪ್ರಕರಣ ಸಂಬಂಧ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಹೈಕೋರ್ಟ್ ಪೀಠ, ಯಾವುದೇ ಕಾರಣಗಳಿಲ್ಲದಿದ್ದರೂ ಬಂಧಿಸುವ ಚಾಳಿ ಶುರುವಾಗಿದೆ. ಬಂಧಿಸುವುದು ಪೊಲೀಸರಿಗೆ ತಮಾಷೆಯಾಗಿದೆಯಾ? ದೂರುದಾರ ಪ್ರಭಾವಿಯಾಗಿದ್ದರೆ ಸಾಕು ಬಂಧಿಸುತ್ತೀರಾ ಎಂದು ವೈಟ್‌ಫೀಲ್ಡ್‌ ತನಿಖಾಧಿಕಾರಿ ಸುನೀಲ್ ಕುಮಾರ್, ACP, DCPಗೆ ಕ್ಲಾಸ್ ತೆಗೆದುಕೊಂಡಿದ್ದು, ಕೂಡಲೇ ಕಾನೂನುಬಾಹಿರ ಬಂಧನಗಳನ್ನು ನಿಲ್ಲಿಸಲು ಸೂಚನೆ ನೀಡಿದೆ. ಅಲ್ಲದೇ ಇದನ್ನು ಈ ಬಂಧನವನ್ನು ಕಾನೂನುಬಾಹಿರವೆಂದು ಘೋಷಿಸಿ ತನಿಖಾಧಿಕಾರಿ, ಉನ್ನತಾಧಿಕಾರಿಗಳ ಜೇಬಿನಿಂದ 3 ಲಕ್ಷ ರೂಪಾಯಿ ದಂಡ ಭರಿಸಲು ಆದೇಶ ಹೊರಡಿಸಿದೆ. ಯಾವುದೇ ಕಾರಣಗಳಿಲ್ಲದಿದ್ದರೂ ಬಂಧಿಸುವ ಚಾಳಿ ಶುರುವಾಗಿದೆ.ಬಂಧಿಸುವುದು ಪೊಲೀಸರಿಗೆ ತಮಾಷೆಯಾಗಿದೆಯಾ? ದೂರುದಾರ ಪ್ರಭಾವಿಯಾಗಿದ್ದರೆ ಸಾಕು ಬಂಧಿಸುತ್ತೀರಾ? ಕೊಲೆಯಂತಹ ಕೇಸ್ ತನಿಖೆ ಬಿಟ್ಟು ಸಿವಿಲ್ ವ್ಯಾಜ್ಯಗಳ ಹಿಂದೆ ಬಿದ್ದಿದ್ದೀರಾ?…

Read More

ಬೆಂಗಳೂರು: ಕಾನ್ಫಿಡೆಂಟ್ ಗ್ರೂಪ್ ಮಾಲೀಕ ಹಾಗೂ ರಿಯಲ್ ಎಸ್ಟೇಟ್ ಉದ್ಯಮಿ ಸಿಜೆ ರಾಯ್ ಆತ್ಮಹತ್ಯೆ ಪ್ರಕರಣದ ತನಿಖೆಯನ್ನು ಎಸ್‌ಐಟಿ ಪೂರ್ಣಗೊಳಿಸಿದ್ದು, ಶೀಘ್ರದಲ್ಲೇ ನ್ಯಾಯಾಲಯಕ್ಕೆ ಚಾರ್ಜ್‌ಶೀಟ್ ಸಲ್ಲಿಸಲು ಸಿದ್ಧತೆ ನಡೆಸಿದೆ. ಎಸ್‌ಐಟಿ ವರದಿಯಲ್ಲಿ ಮಾನಸಿಕ ಖಿನ್ನತೆ, ಆಪ್ತ ವ್ಯಕ್ತಿಯಿಂದ ಉಂಟಾದ ವಿಶ್ವಾಸದ್ರೋಹ ಹಾಗೂ ಆದಾಯ ತೆರಿಗೆ ಇಲಾಖೆ (ಐಟಿ) ದಾಳಿಯಿಂದ ಉಂಟಾದ ಮಾನಸಿಕ ಒತ್ತಡ ರಾಯ್ ಅವರ ಸಾವಿಗೆ ಪ್ರಮುಖ ಕಾರಣಗಳಾಗಿರಬಹುದು ಎಂದು ಉಲ್ಲೇಖಿಸಲಾಗಿದೆ. ಬನ್ನೇರುಘಟ್ಟ ರಸ್ತೆಯಲ್ಲಿದ್ದ ರಾಯ್ ಅವರ ರೆಸಾರ್ಟ್‌ನ ನಿರ್ವಹಣೆಯನ್ನು ನಂಬಿಕಸ್ಥ ವ್ಯಕ್ತಿಯೊಬ್ಬರಿಗೆ ವಹಿಸಲಾಗಿತ್ತು. ಆದರೆ, ಆತ ಕೋಟ್ಯಂತರ ರೂಪಾಯಿ ವಂಚಿಸಿದ್ದರಿಂದ ರಾಯ್ ಆತನನ್ನು ದೂರವಿಟ್ಟಿದ್ದರು. ಈ ಸಂಬಂಧ ಪ್ರಕರಣವೂ ದಾಖಲಾಗಿತ್ತು. ಮತ್ತೊಂದೆಡೆ, ಐಟಿ ದಾಳಿ ನಡೆದ ಸಂದರ್ಭದಲ್ಲಿ ಕಂಪನಿಯ ಲೆಕ್ಕಪತ್ರಗಳನ್ನು ನೋಡಿಕೊಳ್ಳುತ್ತಿದ್ದ ಸಿಬ್ಬಂದಿಯೊಬ್ಬರು ಕೆಲಸ ತೊರೆದಿದ್ದರಿಂದ ಅಗತ್ಯ ದಾಖಲೆಗಳನ್ನು ಸಲ್ಲಿಸುವಲ್ಲಿ ರಾಯ್ ಅವರಿಗೆ ತೊಂದರೆ ಎದುರಾಗಿತ್ತು ಎಂದು ಎಸ್‌ಐಟಿ ತನಿಖೆಯಲ್ಲಿ ತಿಳಿದುಬಂದಿದೆ. ವೈಯಕ್ತಿಕ ಜೀವನ, ಉದ್ಯಮ ಹಾಗೂ ಆರೋಗ್ಯ ಸೇರಿದಂತೆ ಹಲವು ಆಯಾಮಗಳಲ್ಲಿ ಎಸ್‌ಐಟಿ ತನಿಖೆ ನಡೆಸಿದೆ. ಕುಟುಂಬ…

Read More

ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕಿನ ಮಡಸೂರು ಸಮೀಪ ಸಿಂಪೆಕೆರೆ ಬಳಿ ಮಂಗಳವಾರ ರಾತ್ರಿ ವ್ಯಕ್ತಿಯೊಬ್ಬರನ್ನು ಬರ್ಬರವಾಗಿ ಕೊಲೆ ಮಾಡಲಾಗಿದೆ. ಆನಂದ ಪೂಜಾರಿ(38) ಕೊಲೆಯಾದ ವ್ಯಕ್ತಿ. ಮೂಲತಃ ಹೆಗ್ಗೋಡು ಸಮೀಪದ ಮುಂಡಿಗೆಸರ ಗ್ರಾಮದವರಾದ ಆನಂದ ಪೂಜಾರಿ 15 ವರ್ಷಗಳ ಹಿಂದೆ ಮಡಸೂರು ಗ್ರಾಮದ ಯುವತಿಯನ್ನು ಪ್ರೀತಿಸಿ ಮದುವೆಯಾಗಿ ಅಲ್ಲೇ ನೆಲೆಸಿದ್ದರು. ಅಡಿಕೆ ಕೊನೆ ಕೊಯ್ಯುವುದು, ಔಷಧ ಸಿಂಪಡಣೆ ಸೇರಿ ಅಡಿಕೆ ತೋಟದ ಕೆಲಸಗಳನ್ನು ಮಾಡಿಕೊಂಡಿದ್ದರು. ಮಂಗಳಾರ ರಾತ್ರಿ 8 ಗಂಟೆ ಸುಮಾರಿಗೆ ಅವರಿಗೆ ಫೋನ್ ಕರೆ ಬಂದಿದ್ದು, ಹೊರಗೆ ಹೋಗಿ ಬರುವುದಾಗಿ ಬೈಕ್ ನಲ್ಲಿ ತೆರಳಿದ್ದಾರೆ. ಆದರೆ ತಡರಾತ್ರಿಯಾದರೂ ಮನೆಗೆ ವಾಪಸ್ ಆಗದ ಹಿನ್ನೆಲೆಯಲ್ಲಿ ಕುಟುಂಬದವರು ಅವರ ಮೊಬೈಲ್ ಗೆ ಕರೆ ಮಾಡಿದಾಗ ಸ್ವಿಚ್ ಆಫ್ ಆಗಿದೆ. ಅವರಿಗಾಗಿ ಹುಡುಕಾಟ ನಡೆಸಿದಾಗ ಕೆರೆ ಪಕ್ಕದಲ್ಲಿ ರಸ್ತೆ ಬದಿ ಬೈಕ್ ಪತ್ತೆಯಾಗಿದೆ. ಸುತ್ತಮುತ್ತ ಹುಡುಕಾಡಿದಾಗ ಕಲ್ಲುಗಳ ನಡುವೆ ಆನಂದ ಅವರ ಮೃತದೇಹ ಕಂಡು ಬಂದಿದೆ. ಅವರನ್ನು ಮಚ್ಚಿನಿಂದ ಹೊಡೆದು ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದ್ದು.…

Read More

ಕಠ್ಮಂಡು: ನೇಪಾಳದಲ್ಲಿ ಸಂಭವಿಸಿದ ಪ್ರಳಯಾಂತಕ ಹಠಾತ್ ಪ್ರವಾಹಕ್ಕೆ ಬಲಿಯಾದವರ ಸಂಖ್ಯೆ ಗುರುವಾರ 270ಕ್ಕೆ ಏರಿಕೆಯಾಗಿದೆ. ಇತ್ತೀಚಿನ ವರ್ಷಗಳಲ್ಲಿ ದೇಶ ಕಂಡ ಅತ್ಯಂತ ಭೀಕರ ನೈಸರ್ಗಿಕ ವಿಕೋಪಗಳಲ್ಲಿ ಒಂದಾಗಿರುವ ಈ ದುರಂತದಲ್ಲಿ 288 ಭಾರತೀಯ ಪ್ರವಾಸಿಗರು ಹಾಗೂ ಜಲವಿದ್ಯುತ್ ಯೋಜನೆ ನೌಕರರು ಸೇರಿ ಸಾವಿರಾರು ಮಂದಿ ನಾಪತ್ತೆಯಾಗಿದ್ದು, ಶೋಧ ಕಾರ್ಯ ತೀವ್ರಗೊಂಡಿದೆ. ಬುಧವಾರ ಭೋಟೆ ಕೋಶಿ ನದಿಯಲ್ಲಿ ಉಂಟಾದ ಹಠಾತ್ ಪ್ರವಾಹವು ಮೂರು ಜಿಲ್ಲೆಗಳಲ್ಲಿ ಅಪಾರ ಪ್ರಮಾಣದ ಹಾನಿ ಎಸಗಿದೆ. ನದಿಯಿಂದ ಹೆಚ್ಚುವರಿಯಾಗಿ 93 ಮೃತದೇಹಗಳನ್ನು ಹೊರತೆಗೆಯಲಾಗಿದ್ದು, ಸಾವಿನ ಸಂಖ್ಯೆ ಭಾರಿ ಪ್ರಮಾಣದಲ್ಲಿ ಏರಿಕೆಯಾಗಿದೆ ಎಂದು ನೇಪಾಳ ಪೊಲೀಸರು ಸ್ಪಷ್ಟಪಡಿಸಿದ್ದಾರೆ. ಪ್ರವಾಹ ಪೀಡಿತ ಪ್ರದೇಶಗಳಿಂದ 800ಕ್ಕೂ ಹೆಚ್ಚು ಜನರನ್ನು ರಕ್ಷಿಸಲಾಗಿದೆ ಎಂದು ನೇಪಾಳ ಪೊಲೀಸ್ ವಕ್ತಾರ ಅಭಿ ನಾರಾಯಣ್ ಕಫ್ಲೆ ತಿಳಿಸಿದ್ದಾರೆ. ತ್ರಿಶೂಲಿ ಒನ್ ವಿದ್ಯುತ್ ಯೋಜನೆಯಲ್ಲಿ ಕೆಲಸ ಮಾಡುತ್ತಿದ್ದ 73 ಭಾರತೀಯರು ಸೇರಿದಂತೆ ಒಟ್ಟು 288 ಭಾರತೀಯರ ಸುಳಿವು ಸಿಕ್ಕಿಲ್ಲ. ಈ ಕುರಿತು ಭಾರತೀಯ ರಾಯಭಾರ ಕಚೇರಿಯು ಸ್ಥಳೀಯ ಅಧಿಕಾರಿಗಳೊಂದಿಗೆ ಸತತ…

Read More

ರಾಜ್ಯಾದ್ಯಂತ ಹೋಟೆಲ್‌ಗಳಲ್ಲಿ ಬಳಸಲಾಗುವ ಅಡುಗೆ ಎಣ್ಣೆಯ ಕಲಬೆರಕೆಗೆ ಕಡಿವಾಣ ಹಾಕಲು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಭಾರಿ ಕಾರ್ಯಾಚರಣೆಗೆ ಮುಂದಾಗಿದೆ. ಸಾರ್ವಜನಿಕರ ಆರೋಗ್ಯದ ದೃಷ್ಟಿಯಿಂದ ಹೋಟೆಲ್ ಹಾಗೂ ಉಪಹಾರ ಗೃಹಗಳಲ್ಲಿ ಬಳಸುವ ಎಣ್ಣೆಯ ಗುಣಮಟ್ಟ ಮತ್ತು ಲೇಬಲಿಂಗ್ ಪ್ರಕ್ರಿಯೆಯ ಬಗ್ಗೆ ತೀವ್ರ ಪರಿಶೀಲನೆ ನಡೆಸಲಾಗುತ್ತಿದ್ದು, ಈ ಕುರಿತು ವಿಸ್ತೃತ ತನಿಖೆ ಹಾಗೂ ನಿಯಂತ್ರಣಕ್ಕಾಗಿ ಶೀಘ್ರವೇ ವಿಶೇಷ ಸಮಿತಿ ರಚಿಸುವಂತೆ ಸಚಿವ ಯು.ಟಿ. ಖಾದರ್ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಇತ್ತೀಚಿನ ದಿನಗಳಲ್ಲಿ ಹಲವು ಹೋಟೆಲ್‌ಗಳಲ್ಲಿ ನಿಯಮ ಬಾಹಿರವಾಗಿ ಕಳಪೆ ಹಾಗೂ ಮರುಬಳಕೆಯ ಎಣ್ಣೆಯನ್ನು ಉಪಯೋಗಿಸುತ್ತಿರುವ ದೂರುಗಳು ಕೇಳಿಬಂದಿದ್ದವು. ಈ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆಯು ರಾಜ್ಯಾದ್ಯಂತ ಆಹಾರ ಭದ್ರತೆ ಮತ್ತು ಗುಣಮಟ್ಟ ಕಾಯ್ದೆಯಡಿ ಆಹಾರ ಮಾದರಿಗಳ ತನಿಖೆಯನ್ನು ಚುರುಕುಗೊಳಿಸಿದೆ. ಪ್ರತಿಯೊಂದು ಹೋಟೆಲ್‌ಗೆ ಪೂರೈಕೆಯಾಗುವ ಅಡುಗೆ ಎಣ್ಣೆಯ ಪ್ರತಿಯೊಂದು ಕ್ಯಾನ್ ಅಥವಾ ಪ್ಯಾಕೆಟ್‌ ಮೇಲಿರುವ ಲೇಬಲಿಂಗ್, ತಯಾರಿಕಾ ದಿನಾಂಕ ಹಾಗೂ ಎಫ್‌ಎಸ್‌ಎಸ್‌ಎಐ (FSSAI) ಪ್ರಮಾಣೀಕರಣವನ್ನು ಕಡ್ಡಾಯವಾಗಿ ಪರಿಶೀಲಿಸಲು ಅಧಿಕಾರಿಗಳು ಸಜ್ಜಾಗಿದ್ದಾರೆ. ಸಮಿತಿಯು ರಾಜ್ಯದಾದ್ಯಂತ…

Read More

ಪತ್ನಿಯೊಬ್ಬರು ಮಸಾಲೆ ರುಬ್ಬುವ ಗ್ರೈಂಡರ್‌ನ ರಾಡ್‌ನಿಂದ ಪತಿಯನ್ನು ಹೊಡೆದು ಹತ್ಯೆ ಮಾಡಿದ್ದಾರೆ ಎನ್ನಲಾಗಿದೆ. ಪೊಲೀಸರ ಪ್ರಕಾರ, ತಂಗೇಡಿ ಉಮಾದೇವಿ ಎಂಬವರು ತಮ್ಮ ಪತಿ ತಂಗೇಡಿ ಎಲ್ಲಾರಾವ್ (46) ಅವರ ಮೇಲೆ ರಾಡ್‌ನಿಂದ ಹಲ್ಲೆ ನಡೆಸಿ ಕೊಲೆ ಮಾಡಿದ್ದಾರೆ. ದಂಪತಿ ನಡುವೆ ಕೆಲವು ಸಮಯದಿಂದ ವೈಮನಸ್ಸು ಹಾಗೂ ಜಗಳ ನಡೆಯುತ್ತಿದ್ದು, ಇದೇ ಕಾರಣಕ್ಕೆ ಹತ್ಯೆ ನಡೆದಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.ಆಂಧ್ರಪ್ರದೇಶದ ಅಂಬೇಡ್ಕರ್ ಕೋನಸೀಮಾ ಜಿಲ್ಲೆಯ ರಾಮಚಂದ್ರಪುರದಲ್ಲಿ ಭೀಕರ ಘಟನೆ ನಡೆದಿದೆ. ಘಟನೆ ಕುರಿತು ಪೊಲೀಸರು ತನಿಖೆ ಆರಂಭಿಸಿದ್ದು, ಹತ್ಯೆಗೆ ನಿಖರ ಕಾರಣ ಹಾಗೂ ಘಟನೆಯ ಸಂಪೂರ್ಣ ಹಿನ್ನೆಲೆಯನ್ನು ಪರಿಶೀಲಿಸುತ್ತಿದ್ದಾರೆ.

Read More

ಮಂಡ್ಯ: ಮಂಡ್ಯ ಜೈಲಿನಲ್ಲಿ ವಿಚಾರಣಾಧೀನ ಖೈದಿಗೆ ರಾಜಾತಿಥ್ಯ ಪ್ರಕರಣ ರಾಜ್ಯದಲ್ಲಿ ಭಾರಿ ಸದ್ದು ಮಾಡಿದ್ದ ನಡುವೆಯೇ ಜೈಲಧಿಕಾರಿಗಳ ವಿರುದ್ಧ ಮತ್ತೊಂದು ಗಂಭೀರ ಆರೋಪ ಕೇಳಿಬಂದಿದೆ. ಕೈದಿಗಳ ವಿಶೇಷ ಆತಿಥ್ಯಕ್ಕೆ ರೇಟ್ ಫಿಕ್ಸ್ ಮಾಡಿರುವ ಸಂಬಂಧ ಪತ್ರವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​​ ಆಗಿದೆ. ಮಂಡ್ಯ ಜಿಲ್ಲಾ ಕಾರಾಗೃಹದ ಕೈದಿಗಳಿಂದ ಜೈಲು ಅಧೀಕ್ಷಕಿ ಶಾಂತಮ್ಮ, ಸಿಬ್ಬಂದಿ ಹಣ ವಸೂಲಿ ಬಗ್ಗೆ ಆರೋಪಿಸಲಾಗಿದೆ. ಒಂದೊಂದು ಸೆಲ್​ಗೂ ಒಂದೊಂದು ರೇಟ್ ಸೆಲ್-1ರಿಂದ ಪ್ರತಿ ತಿಂಗಳು 10 ಸಾವಿರ ರೂಪಾಯಿ ವಸೂಲಿ ಸೆಲ್-3ರಿಂದ ಪ್ರತಿ ತಿಂಗಳು 15 ಸಾವಿರ ರೂಪಾಯಿ ವಸೂಲಿ ಸೆಲ್-4ರಿಂದ ಪ್ರತಿ ತಿಂಗಳು 15 ಸಾವಿರ ರೂಪಾಯಿ ವಸೂಲಿ ಸೆಲ್-5ರಿಂದ ಪ್ರತಿ ತಿಂಗಳು 5 ಸಾವಿರ ರೂಪಾಯಿ ವಸೂಲಿ ಸೆಲ್-6ರಿಂದ ಪ್ರತಿ ತಿಂಗಳು 8 ಸಾವಿರ ವಸೂಲಿ ಆರೋಪ ಜೈಲಿನ ಕೊಠಡಿ ಬದಲಿಸಲು 2 ಸಾವಿರ ರೂ. ವಸೂಲಿ ಆರೋಪ ಪನಿಷ್ಮೆಂಟ್ ಸೆಲ್​ನಿಂದ ಹೊರ ಬರಲು 10 ಸಾವಿರ ವಸೂಲಿ ಹಣ ನೀಡಿದ್ರೆ ಲಭ್ಯವಿದೆ ಕ್ಯಾಟರಿಂಗ್…

Read More

42 ವರ್ಷದ ಬೂಟಿಕ್ ಮಾಲಕಿ ರಾಜಿಂದರ್ ಕೌರ್ ಕತ್ತು ಸೀಳಿದ ಸ್ಥಿತಿಯಲ್ಲಿ ಪತ್ತೆಯಾಗಿ, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿರುವ ಘಟನೆ ನಡೆದಿದೆ. ಬುಧವಾರ ಮಧ್ಯಾಹ್ನ ಈ ಘಟನೆ ನಡೆದಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಆಕೆಯ ಪತಿ ಶ್ಯಾಮ್ ಅಲಿಯಾಸ್ ಶಮ್ಮಿಯನ್ನು ಪೊಲೀಸರು ಬಂಧಿಸಿದ್ದಾರೆ. ರಾಜಿಂದರ್ ಕೌರ್ ಅವರು ತಮ್ಮದೇ **‘ರೀತು ಬೂಟಿಕ್’**ನಲ್ಲಿ ಟೈಲರಿಂಗ್ ತರಗತಿಗಳನ್ನೂ ನಡೆಸುತ್ತಿದ್ದರು. ಬುಧವಾರ ಬೆಳಗ್ಗೆ ಸುಮಾರು 11.54ರ ವೇಳೆಗೆ ಓರ್ವ ವ್ಯಕ್ತಿ ಬೂಟಿಕ್‌ಗೆ ಪ್ರವೇಶಿಸಿದ್ದು, ಎರಡು ನಿಮಿಷಕ್ಕೂ ಹೆಚ್ಚು ಸಮಯದ ಬಳಿಕ ಹೊರಬಂದು ಶಟರ್ ಎಳೆದಿರುವುದು ಸಿಸಿಟಿವಿ ದೃಶ್ಯಗಳಲ್ಲಿ ದಾಖಲಾಗಿದೆ. ಕೆಲವೇ ಕ್ಷಣಗಳ ಬಳಿಕ ರಾಜಿಂದರ್ ಕೌರ್ ಅವರೇ ಶಟರ್ ಎತ್ತಿಕೊಂಡು ಹೊರಗೆ ಬಂದಿದ್ದು, ಕುತ್ತಿಗೆಯಿಂದ ರಕ್ತಸ್ರಾವವಾಗುತ್ತಿದ್ದ ಕಾರಣ ತೀವ್ರವಾಗಿ ಅಸ್ವಸ್ಥರಾಗಿದ್ದರು. ಬಳಿಕ ಮತ್ತೆ ಬೂಟಿಕ್ ಒಳಗೆ ತೆರಳಿದ್ದರು. ಪೊಲೀಸರ ಪ್ರಕಾರ, ಗಾಯಗೊಂಡಿದ್ದ ಕೌರ್ ಅವರು ಬೂಟಿಕ್‌ನಲ್ಲಿದ್ದ ಡೈರಿಯಲ್ಲಿ ಏನೋ ಬರೆದಿದ್ದರು. ಸ್ಥಳೀಯರು ಹಾಗೂ ದಾರಿಹೋಕರು ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದು, ಗಂಭೀರ ಸ್ಥಿತಿಯಲ್ಲಿದ್ದ ಅವರು ಚಿಕಿತ್ಸೆ ವೇಳೆ ಮೃತಪಟ್ಟಿದ್ದಾರೆ. ಬೂಟಿಕ್‌ನಲ್ಲಿ…

Read More

ಬೆಂಗಳೂರು:​ ಮೆಜೆಸ್ಟಿಕ್ ರೈಲ್ವೆ ಪೊಲೀಸ್ ಠಾಣೆಯಲ್ಲಿ ಕರ್ತವ್ಯದಲ್ಲಿದ್ದ ಗರ್ಭಿಣಿ ಮಹಿಳಾ ಕಾನ್ಸ್ಟೇಬಲ್ ಮೇಲೆ ರಾಡ್​​ನಿಂದ ಮಾರಣಾಂತಿಕ ಹಲ್ಲೆ ನಡೆಸಿದ ಘಟನೆ ನಡೆದಿದೆ. ನಿನ್ನೆ ಬೆಳಗ್ಗೆ ನಡೆದ ಈ ಘಟನೆಯಲ್ಲಿ ಶಿಲ್ಪಾ ಎಂಬವರು ಗಂಭೀರ ಗಾಯಗೊಂಡಿದ್ದು, ಚೆನ್ನೈ ಮೂಲದ ಆರೋಪಿ ಗಜೇಂದ್ರನನ್ನು ಬಂಧಿಸಲಾಗಿದೆ. ಮೊಬೈಲ್ ಕಳೆದುಹೋಗಿದೆ ಎಂದು ದೂರು ನೀಡಲು ಮೆಜೆಸ್ಟಿಕ್ ರೈಲ್ವೆ ಪೊಲೀಸ್ ಠಾಣೆಗೆ ಬಂದಿದ್ದ ಗಜೇಂದ್ರನಿಗೆ, ಆ ಸಮಯದಲ್ಲಿ ಠಾಣೆಯಲ್ಲಿ ತಾವು ಒಬ್ಬರೇ ಇದ್ದುದರಿಂದ ಬೆಳಿಗ್ಗೆ ಬಂದು ದೂರು ನೀಡುವಂತೆ ಶಿಲ್ಪಾ ತಿಳಿಸಿದ್ದರು. ಆದರೆ, ಇದನ್ನು ಕೇಳಿ ಸಿಟ್ಟಾಗಿ ಹೋಗಿದ್ದ ಆತ ರಾಡ್ ತೆಗೆದುಕೊಂಡು ಬಂದು ಠಾಣೆಯಲ್ಲಿ ಕುಳಿತಿದ್ದ ಗರ್ಭಿಣಿ ಶಿಲ್ಪಾ ಮೇಲೆ ಮನಸೋ ಇಚ್ಛೆ ಹಲ್ಲೆ ನಡೆಸಿದ್ದ ಎನ್ನಲಾಗಿದೆ.

Read More

ಕಾನ್ಪುರ : ಉತ್ತರ ಪ್ರದೇಶದ ಕಾನ್ಪುರದ ಗಂಗಾ ನದಿಯ ದಡದ ಬಳಿಯ ಹೊಲದಲ್ಲಿ ಗುರುವಾರ ತರಬೇತಿ ವಿಮಾನವೊಂದು ಪತನಗೊಂಡು ಕರ್ನಾಟಕ ಮೂಲದ ಪೈಲಟ್ ಸೇರಿದಂತೆ ಇಬ್ಬರು ದಾರುಣವಾಗಿ ಮೃತಪಟ್ಟಿದ್ದಾರೆ. ಗಾರ್ಗ್ ಏವಿಯೇಷನ್ ತರಬೇತಿ ಸಂಸ್ಥೆಗೆ ಸೇರಿದ ಟ್ವಿನ್-ಎಂಜಿನ್‌ನ 4 ಆಸನಗಳ ತರಬೇತಿ ವಿಮಾನವು ಬೆಳಿಗ್ಗೆ 11:30 ಕ್ಕೆ ಉಡಾವಣೆಗೊಂಡಿತ್ತು. ತರಬೇತಿ ಮುಗಿಸಿ ಬೆಳಿಗ್ಗೆ 11:50 ರ ಸುಮಾರಿಗೆ ಸಂಸ್ಥೆಗೆ ಹಿಂತಿರುಗುತ್ತಿದ್ದಾಗ ವಿಮಾನ ನಿಯಂತ್ರಣ ಕಳೆದುಕೊಂಡು ದಿಢೀರ್ ಪತನಗೊಂಡಿದೆ. ಅಪಘಾತದಲ್ಲಿ ಕರ್ನಾಟಕ ಮೂಲದ ಅಭಿಷೇಕ್ ಪೂಜಾರಿ ಹಾಗೂ ಗುಜರಾತ್ ಮೂಲದ ಸಚಿನ್ ಭಾಟಿಯಾ ಮೃತಪಟ್ಟಿದ್ದಾರೆ. ಇವರಲ್ಲಿ ಒಬ್ಬರು ತರಬೇತುದಾರರಾಗಿದ್ದು, ಮತ್ತೊಬ್ಬರು ಬೋಧಕರಾಗಿದ್ದರು. ಬೋಧಕರಿಗೆ ಸುಮಾರು 3,000 ಗಂಟೆಗಳ ಕಾಲ ವಿಮಾನ ಹಾರಾಟ ನಡೆಸಿದ ಅನುಭವವಿತ್ತು ಎಂದು ಕಾನ್ಪುರ ನಗರ ಪೊಲೀಸ್ ಆಯುಕ್ತ ರಘುಬೀರ್ ಲಾಲ್ ತಿಳಿಸಿದ್ದಾರೆ. ಘಟನಾ ಸ್ಥಳದಲ್ಲಿ ವಿಮಾನವು ಸಂಪೂರ್ಣವಾಗಿ ನಜ್ಜುಗುಜ್ಜಾಗಿದ್ದು, ರೆಕ್ಕೆಗಳು ಹಾಗೂ ಲೋಹದ ಭಾಗಗಳು ಮುರಿದುಬಿದ್ದಿವೆ. ಅಪಘಾತಕ್ಕೆ ನಿಖರ ಕಾರಣ ತಿಳಿದುಬಂದಿಲ್ಲ. ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ (DGCA) ತಂಡವು…

Read More