Author: admin

ಬಂಟ್ವಾಳ :  ಬೆಳಗ್ಗೆ 5 ಗಂಟೆಗೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕು ಕೇಂದ್ರ ಬಿ.ಸಿ. ರೋಡ್‌ಗೆ ಬಿಳಿ ಬಣ್ಣದ ಐಷಾರಾಮಿ ಫಾರ್ಚೂನರ್ ಕಾರೊಂದು ಬಂದು ನಿಲ್ಲುತ್ತದೆ. ಕಾರಿನಿಂದಿಳಿಯುವ ವ್ಯಕ್ತಿ ಹೆಮ್ಮೆಯಿಂದ ಪೊರಕೆ ಹಿಡಿದು ಇಡೀ ಬಿ.ಸಿ. ರೋಡ್ ಪೇಟೆಯ ಸ್ವಚ್ಛತಾ ಕಾರ್ಯದಲ್ಲಿ ನಿರತರಾಗುತ್ತಾರೆ. ಇವರೇ ಬಂಟ್ವಾಳ ಪುರಸಭೆಯ ಹಿರಿಯ ಪೌರಕಾರ್ಮಿಕ, ಕಾಯಕಯೋಗಿ ಸೇಸಪ್ಪ ನಾವೂರು (ಸೇಸಪ್ಪಣ್ಣ). ಕಲಿತದ್ದು 3ನೇ ತರಗತಿ, 1996ರಲ್ಲಿ ದಿನಕ್ಕೆ 50 ರೂಪಾಯಿ ದಿನಗೂಲಿಗೆ ಸೇರಿದ್ದ ಸೇಸಪ್ಪ ಅವರಿಗೆ ಕಾರುಗಳೆಂದರೆ ಅಪಾರ ಪ್ರೀತಿ. ಹಿಂದೆ ಸೈಕಲ್‌ನಲ್ಲಿ ತಿರುಗಾಡುತ್ತಿದ್ದ ದಿನಗಳಲ್ಲೇ ಕಾರು ಕೊಳ್ಳುವ ಕನಸು ಕಂಡಿದ್ದ ಇವರು, ಸಣ್ಣ ಸಣ್ಣ ಉಳಿತಾಯ ಮಾಡಿ ಮೊದಲು ಮಾರುತಿ 800, ಬಳಿಕ ಓಮ್ನಿ, ರಿಟ್ಜ್, ಆಲ್ಟೊ ಹಾಗೂ ಸ್ಕಾರ್ಪಿಯೋ ಕಾರುಗಳನ್ನು ಖರೀದಿಸಿದ್ದರು. ಇತ್ತೀಚೆಗೆ ಆಲ್ಟೊ ಮತ್ತು ಸ್ಕಾರ್ಪಿಯೋ ಮಾರಿ, ಕೊಂಚ ಸಾಲ ಮಾಡಿ ತಮ್ಮ ಕನಸಿನ ಫಾರ್ಚೂನರ್ ಕಾರನ್ನು ಖರೀದಿಸಿ ಎಲ್ಲರ ಗಮನ ಸೆಳೆದಿದ್ದಾರೆ. ಕಳೆದ 30 ವರ್ಷಗಳಿಂದ ಪೌರಕಾರ್ಮಿಕರಾಗಿ ನಿಸ್ವಾರ್ಥ…

Read More

ಹರಿಯಾಣ : ಹರಿಯಾಣದ ಕುರುಕ್ಷೇತ್ರದಲ್ಲಿ ಬೆಚ್ಚಿಬೀಳಿಸುವಂತಹ ಕ್ರೂರ ಕೊಲೆ ಪ್ರಕರಣವೊಂದು ಬೆಳಕಿಗೆ ಬಂದಿದೆ. ಉತ್ತರ ಪ್ರದೇಶ ಮೂಲದ ರಾಜೇಶ್ (40) ಎಂಬವರನ್ನು ಆತನ ಪತ್ನಿ ವಿಮಲಾ ಎಂಬಾಕೆ ಅತ್ಯಂತ ಕ್ರೂರವಾಗಿ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾಳೆ. ಕುರುಕ್ಷೇತ್ರದಲ್ಲಿ ರಿಂಕು ಎಂಬುವವರ ಮನೆಯ ಮೇಲಿನ ಮಹಡಿಯಲ್ಲಿ ದಂಪತಿ ಬಾಡಿಗೆಗೆ ವಾಸಿಸುತ್ತಿದ್ದರು. ಶುಕ್ರವಾರ ಸಂಜೆ ಕೋಣೆಯಿಂದ ಜೋರಾಗಿ ಕಿರುಚಾಡುವ ಶಬ್ದ ಕೇಳಿ ಮನೆ ಮಾಲೀಕ ರಿಂಕು ಮೇಲಕ್ಕೆ ಹೋಗಿ ನೋಡಿದಾಗ ಭೀಕರ ದೃಶ್ಯ ಕಣ್ಣಿಗೆ ಬಿದ್ದಿದೆ. ರಾಜೇಶ್ ರಕ್ತದ ಮಡುವಿನಲ್ಲಿ ಬಿದ್ದಿದ್ದು, ಪತ್ನಿ ವಿಮಲಾ ಆತನ ಕರುಳನ್ನು ಹೊರತೆಗೆದು ಚೀಲವೊಂದಕ್ಕೆ ತುಂಬುತ್ತಿದ್ದಳು! ಮನೆ ಮಾಲೀಕನನ್ನು ಕಂಡ ತಕ್ಷಣ ಗಾಬರಿಗೊಂಡ ಆಕೆ ಕೋಣೆಯಿಂದ ಓಡಿ ಟೆರೇಸ್‌ನಿಂದ ಕೆಳಗೆ ಜಿಗಿದಿದ್ದಾಳೆ. ರಾಜೇಶ್ ದೇಹದ ಮರಣೋತ್ತರ ಪರೀಕ್ಷೆಯಲ್ಲಿ ಆತನ ಹೊಟ್ಟೆಯ ಭಾಗದಲ್ಲಿ ಬರೋಬ್ಬರಿ 35 ಸೆಂಟಿಮೀಟರ್‌ಗಳಷ್ಟು ಆಳವಾದ ಗಾಯಗಳಿರುವುದು ಪತ್ತೆಯಾಗಿದೆ. ಘಟನಾ ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಕೃತ್ಯಕ್ಕೆ ಬಳಸಿದ್ದ ಮೂರು ಚಾಕುಗಳನ್ನು ವಶಪಡಿಸಿಕೊಂಡಿದ್ದಾರೆ. ಟೆರೇಸ್‌ನಿಂದ ಜಿಗಿದು ಗಾಯಗೊಂಡಿರುವ ಆರೋಪಿ…

Read More

ಬ್ರಹ್ಮಾವರ: ಕ್ಷುಲ್ಲಕ ವಿಚಾರಕ್ಕೆ ಸಂಬಂಧಿಸಿದಂತೆ ಮಗನೇ ತಂದೆ-ತಾಯಿಯನ್ನು ಸುತ್ತಿಗೆಯಿಂದ ಹೊಡೆದು ಹತ್ಯೆಗೈದಿರುವ ಆಘಾತಕಾರಿ ಘಟನೆ ಬ್ರಹ್ಮಾವರದ ಗಾಂಧಿನಗರದಲ್ಲಿ ರವಿವಾರ ರಾತ್ರಿ ನಡೆದಿದೆ. ಗಾಂಧಿನಗರ ನಿವಾಸಿಗಳಾದ ಮೆಹಬೂಬ್ ಅಲಿ ಮತ್ತು ಅವರ ಪತ್ನಿ ಶಂಶಾದ್ ಬೇಗಂ ಮೃತಪಟ್ಟ ದಂಪತಿ. ಅವರ ಪುತ್ರ ಶಾಹಿದ್ ಅಲಿ ಹತ್ಯೆ ಆರೋಪಿಯಾಗಿದ್ದು, ಬ್ರಹ್ಮಾವರ ಪೊಲೀಸರು ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಮೆಹಬೂಬ್ ಅಲಿ ಲಾರಿ ಚಾಲಕರಾಗಿ ಕೆಲಸ ಮಾಡುತ್ತಿದ್ದರು. ಶಾಹಿದ್ ಅಲಿ ಫುಡ್ ಡೆಲಿವರಿ ಕೆಲಸ ಮಾಡುತ್ತಿದ್ದ ಎನ್ನಲಾಗಿದೆ. ರವಿವಾರ ರಾತ್ರಿ ತಂದೆ-ತಾಯಿಯೊಂದಿಗೆ ಯಾವುದೋ ವಿಚಾರಕ್ಕೆ ಜಗಳವಾಗಿದ್ದು, ಈ ವೇಳೆ ಸಿಟ್ಟಿಗೆದ್ದ ಶಾಹಿದ್ ಅಲಿ ಸುತ್ತಿಗೆಯಿಂದ ಇಬ್ಬರ ಮೇಲೂ ಹಲ್ಲೆ ನಡೆಸಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಹಲ್ಲೆಯಿಂದ ಗಂಭೀರವಾಗಿ ಗಾಯಗೊಂಡ ದಂಪತಿ ಮೃತಪಟ್ಟಿದ್ದಾರೆ. ಘಟನೆ ಬಳಿಕ ಆರೋಪಿಯೇ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ ಎನ್ನಲಾಗಿದ್ದು, ಮಾಹಿತಿ ಆಧರಿಸಿ ಸ್ಥಳಕ್ಕೆ ಧಾವಿಸಿದ ಪೊಲೀಸರು ಶಾಹಿದ್ ಅಲಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಹತ್ಯೆಗೆ ನಿಖರ ಕಾರಣವೇನು ಎಂಬುದು ಇನ್ನೂ ತಿಳಿದುಬಂದಿಲ್ಲ.…

Read More

ಮಹಾರಾಷ್ಟ್ರ: ಮಹಾರಾಷ್ಟ್ರದ ಛತ್ರಪತಿ ಸಂಭಾಜಿನಗರದ ಖಾವ್ಡಾ ಬೆಟ್ಟದಲ್ಲಿ ಆತ್ಮಹತ್ಯೆಗೆ ಯತ್ನಿಸಿದ 19 ವರ್ಷದ ಮಗನನ್ನು ರಕ್ಷಿಸಲು ಹೋಗಿ ಹೆತ್ತ ಪೋಷಕರೂ ಪ್ರಾಣ ಕಳೆದುಕೊಂಡಿರುವ ಘಟನೆಗೆ ಟ್ವಿಸ್ಟ್‌ ಸಿಕ್ಕಿದೆ. ಈ ಘಟನೆ ಬರೀ ಐಫೋನ್ ಇಎಂಐಗೆ ಸಂಬಂಧ ನಡೆದಿಲ್ಲವೆಂದು ಮೃತರ ಸಂಬಂಧಿ ತಿಳಿಸಿದ್ದು, ಪ್ರಕರಣ ತಿರುವು ಪಡೆದುಕೊಂಡಿದೆ. ದುರಂತವು ಐಫೋನ್‌ ಇಎಂಐಗಾಗಿ ಆಗಿಲ್ಲ. ಆಗಾಗ್ಗೆ ಮನೆಯಲ್ಲಿ ಪೋಷಕರ ಮಧ್ಯೆ ನಡೆಯುತ್ತಿದ್ದ ಜಗಳದಿಂದ ಸಂಭವಿಸಿದೆ ಎಂದು ಮೃತರ ಸಂಬಂಧಿ ತಿಳಿಸಿದ್ದಾರೆ. ಮೃತನ ಅಣ್ಣನ ಸಾವಿನ ಬಳಿಕ ಕುಟುಂಬದಲ್ಲಿ ಆಗಾಗ ಜಗಳ ನಡೆಯುತ್ತಿತ್ತು. ಇದರಿಂದ ಮನೆಯಲ್ಲಿ ನೆಮ್ಮದಿ ಇರಲಿಲ್ಲ ಎಂದು ಮೂಲಗಳ ತಿಳಿಸಿರುವುದಾಗಿ ವರದಿಯಾಗಿದೆ. ಕಳೆದ ವರ್ಷವೂ ಆತ್ಮಹತ್ಯೆಗೆ ಯತ್ನಿಸಿದ್ದ.. ಕುನಾಲ್‌ ಕಳೆದ ವರ್ಷ ಇದೇ ಬೆಟ್ಟದಿಂದ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದ. ಆ ಸಮಯದಲ್ಲಿ ಆತನ ಮನವೊಲಿಸಿ ಆತ್ಮಹತ್ಯೆ ನಿರ್ಧಾರದಿಂದ ಹಿಂದೆ ಸರಿಯುವಂತೆ ಮಾಡುವಲ್ಲಿ ಪೊಲೀಸರು ಯಶಸ್ವಿಯಾಗಿದ್ದರು. ಆದರೆ, ಈ ಬಾರಿ ಅವರು ವಿಫಲರಾದರು. ತಂದೆ ಮುರಳೀಧರ್ 250 ಅಡಿ ಆಳದ ಕಮರಿಗೆ ಬಿದ್ದರು, ಮತ್ತು…

Read More

ಚಂಡೀಗಢ: ಟಿಫಿನ್ ಬಾಕ್ಸ್‌ನಲ್ಲಿ ಅಡಗಿಸಿಟ್ಟಿದ್ದ ಶಂಕಿತ ಐಇಡಿ ಮತ್ತು ಮಾರಕಾಸ್ತ್ರಗಳೊಂದಿಗೆ ಪಂಜಾಬ್ ಮೂಲದ ಮೂವರು ಶಂಕಿತ ಉಗ್ರರನ್ನು ಚಂಡೀಗಢ ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ಪಂಜಾಬ್‌ನ ಲವ್‌ಪ್ರೀತ್ ಸಿಂಗ್ (19), ಜಶನ್‌ಪ್ರೀತ್ ಸಿಂಗ್ (21) ಮತ್ತು ಪ್ರಭ್‌ಪ್ರೀತ್ ಸಿಂಗ್ (19) ಎಂದು ಗುರುತಿಸಲಾಗಿದೆ. ಸೆಕ್ಟರ್ 43 ರ ಅಂತಾರಾಜ್ಯ ಬಸ್ ಟರ್ಮಿನಲ್ ಹಿಂಭಾಗದಲ್ಲಿ ಕಾರ್ಯಾಚರಣೆ ನಡೆಸಿದ ಪೊಲೀಸರು, ಟಿಫಿನ್ ಬಾಕ್ಸ್‌ನಲ್ಲಿ ಅಡಗಿಸಿಟ್ಟಿದ್ದ ಶಂಕಿತ ಐಇಡಿ ಹಾಗೂ ಮಾರಕಾಸ್ತ್ರಗಳೊಂದಿಗೆ ಪಂಜಾಬ್ ಮೂಲದ ಮೂವರು ಶಂಕಿತ ಉಗ್ರರನ್ನು ವಶಕ್ಕೆ ಪಡೆದಿದ್ದಾರೆ. ಜೊತೆಗೆ ಸುಮಾರು 5 ಕೆಜಿ ಜೆಲಾಟಿನ್ ಕಡ್ಡಿಗಳು, ಡಿಟೋನೇಟರ್, ರಿಮೋಟ್ ಕಂಟ್ರೋಲ್ ಚಾಲಿತ ವ್ಯವಸ್ಥೆ, ಒಂದು ಪಿಸ್ತೂಲ್, ಮ್ಯಾಗಜೀನ್ ಹಾಗೂ 5 ಜೀವಂತ ಗುಂಡುಗಳನ್ನು ಪೊಲೀಸರು ಸ್ವಾಧೀನ ಪಡಿಸಿಕೊಂಡಿದ್ದಾರೆ. ಆರೋಪಿಗಳು ವಿದೇಶದಲ್ಲಿರುವ ಬಿಕೆಐ ಕಮಾಂಡರ್ ಸತ್ನಾಮ್ ಅಲಿಯಾಸ್ ಸತ್ತಾ ನೌಶೇರಾ ಸೂಚನೆಯಂತೆ ಚಂಡೀಗಢದ ಪ್ರಮುಖ ಸ್ಥಳಗಳಲ್ಲಿ ಸ್ಫೋಟ ನಡೆಸಲು ಸಂಚು ರೂಪಿಸಿದ್ದರು. ಇದೀಗ ಪೊಲೀಸರು ಈ ಬೃಹತ್ ಸಂಚನ್ನು ವಿಫಗೊಳಿಸಿದ್ದಾರೆ. ಘಟನೆಯ ಬೆನ್ನಲ್ಲೇ ಚಂಡೀಗಢ,…

Read More

ಚೆನ್ನೈ, : ಚೆನ್ನೈನಿಂದ ನವದೆಹಲಿಗೆ ಹೊರಟಿದ್ದ ಎಕ್ಸ್‌ಪ್ರೆಸ್ ರೈಲಿನಲ್ಲಿ ಸೂಟ್‌ಕೇಸ್‌ನಲ್ಲಿ ಕೊಳೆತ ಸ್ಥಿತಿಯಲ್ಲಿ ಮಾನವ ದೇಹದ ಭಾಗಗಳು ಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ತಮಿಳುನಾಡಿನ ಚೆನ್ನೈನಲ್ಲಿ ಮತ್ತಷ್ಟು ಭಯಾನಕ ಹಾಗೂ ಆಘಾತಕಾರಿ ಸತ್ಯಗಳು ಹೊರಬಿದ್ದಿವೆ. ತನಿಖೆ ನಡೆಸಿದ ಪೊಲೀಸರು, ಕೊಲೆಯಾದ ದೇಹದ ಭಾಗಗಳು ಒಡಿಶಾ ಮೂಲದ 28 ವರ್ಷದ ಹಯುಥನ್ ನಿಶಾ ಎಂಬ ಮಹಿಳೆಗೆ ಸೇರಿದ್ದು ಎಂದು ಗುರುತಿಸಿದ್ದಾರೆ. ರೈಲಿನಲ್ಲಿ ದುರ್ವಾಸನೆ: ಆಗಸ್ಟ್ 5 ರಂದು ಚೆನ್ನೈ ಸೆಂಟ್ರಲ್‌ನಿಂದ ದೆಹಲಿಗೆ ತೆರಳುತ್ತಿದ್ದ ರೈಲು ಆಗ್ರಾ ನಿಲ್ದಾಣ ತಲುಪಿದಾಗ ಬೋಗಿಯಲ್ಲಿದ್ದ ಸೂಟ್‌ಕೇಸ್‌ನಿಂದ ತೀವ್ರ ದುರ್ವಾಸನೆ ಬಂದಿದೆ. ರೈಲ್ವೆ ಪೊಲೀಸರು ಪರಿಶೀಲಿಸಿದಾಗ ಕತ್ತರಿಸಿದ ಮಾನವ ದೇಹದ ಭಾಗಗಳು ಪತ್ತೆಯಾಗಿದ್ದವು. ಆಗ್ರಾ ಪೊಲೀಸರ ಮಾಹಿತಿಯಂತೆ ಚೆನ್ನೈ ಸೆಂಟ್ರಲ್ ನಿಲ್ದಾಣದ ಸಿಸಿಟಿವಿ ಪರಿಶೀಲಿಸಿದಾಗ, ಇಬ್ಬರು ವ್ಯಕ್ತಿಗಳು ಅದೇ ಮಾದರಿಯ ಟ್ರಾಲಿ ಸೂಟ್‌ಕೇಸ್‌ನೊಂದಿಗೆ ರೈಲು ಹತ್ತಿರುವುದು ಸ್ಪಷ್ಟವಾಗಿ ದಾಖಲಾಗಿತ್ತು. ಶಂಕಿತರನ್ನು ಮಾಣಿಕ್ ಉದ್ದೀನ್ ಲಸ್ಕರ್ ಮತ್ತು ಭಾಗಬತಿ ಮಾಝಿ ಎಂದು ಗುರುತಿಸಿದ ಚೆನ್ನೈ ಪೊಲೀಸರು, ಉಪನಗರವಾದ ಗೂಡುವಾಂಚೇರಿಯಲ್ಲಿರುವ ಅವರ ಬಾಡಿಗೆ…

Read More

ಜಮಖಂಡಿ:ಜೇಬಿನಲ್ಲಿದ್ದ ಪವರ್ ಬ್ಯಾಂಕ್ ದಿಢೀರನೆ ಸ್ಫೋಟಗೊಂಡ ಪರಿಣಾಮ ಯುವಕನೊಬ್ಬ ಗಂಭೀರವಾಗಿ ಗಾಯಗೊಂಡಿರುವ ಆಘಾತಕಾರಿ ಘಟನೆ ಬಾಗಲಕೋಟೆ ಜಿಲ್ಲೆಯ ಜಮಖಂಡಿಯಲ್ಲಿ ನಡೆದಿದೆ. ಜಮಖಂಡಿ ನಗರದ ಬಸ್ ನಿಲ್ದಾಣದ ಬಳಿಯಿರುವ ಎಟಿಎಂ ಸಮೀಪ ಈ ದುರ್ಘಟನೆ ಸಂಭವಿಸಿದೆ. ಗಾಯಗೊಂಡ ಯುವಕನನ್ನು ಸಿದ್ದು ಸಾಳಂಕಿ ಎಂದು ಗುರುತಿಸಲಾಗಿದೆ. ಸಿದ್ದು ತಮ್ಮ ಪ್ಯಾಂಟ್ ಜೇಬಿನಲ್ಲಿ ಪವರ್ ಬ್ಯಾಂಕ್ ಇಟ್ಟುಕೊಂಡು ತೆರಳುತ್ತಿದ್ದ ವೇಳೆ ಏಕಾಏಕಿ ಸ್ಫೋಟ ಸಂಭವಿಸಿದೆ. ಘಟನೆಯಲ್ಲಿ ಸಿದ್ದು ಅವರ ಕಾಲಿನ ಭಾಗಕ್ಕೆ ಗಂಭೀರ ಗಾಯಗಳಾಗಿದ್ದು, ತಕ್ಷಣವೇ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಜಮಖಂಡಿ ನಗರ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

Read More

ಉಡುಪಿ: ಉದ್ಯಮಿ ಡೇವಿಡ್ ಹತ್ಯೆ ಪ್ರಕರಣದ ತನಿಖೆ ವೇಳೆ ತಲೆಮರೆಸಿಕೊಂಡಿದ್ದ ಮತ್ತೊಬ್ಬ ಆರೋಪಿಯನ್ನು ಬಂಧಿಸುವ ಸಂದರ್ಭದಲ್ಲಿ ಪೊಲೀಸರು ಗುಂಡು ಹಾರಿಸಿದ್ದಾರೆ. ಗುಂಡು ತಗುಲಿ ಆರೋಪಿ ಗಾಯಗೊಂಡಿದ್ದಾನೆ.ಬಂಧಿತ ಆರೋಪಿ ಅನೂಜ್ ಎಂದು ಗುರುತಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಹಿಂದೆ ಹಲವು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದರು. ತನಿಖೆ ಮುಂದುವರೆದಂತೆ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಪತ್ತೆ ಮಾಡಿ ಬಂಧಿಸಲು ಹೋದಾಗ ಈ ಘಟನೆ ನಡೆದಿದೆ. ಗಾಯಗೊಂಡ ಆರೋಪಿಯನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಆರೋಪಿಯನ್ನು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

Read More

ಮಂಡ್ಯ : ಮಂಡ್ಯ ನಗರದ ಗುತ್ತಲು ಬಡಾವಣೆಯಲ್ಲಿ ಭಿಕ್ಷಾಟನೆ ಮಾಡಿ ಜೀವನ ಸಾಗಿಸುತ್ತಿದ್ದ ವೃದ್ಧೆಯೊಬ್ಬರು ವಯೋಸಹಜ ಕಾಯಿಲೆಯಿಂದ ಮೃತಪಟ್ಟಿದ್ದು, ಅವರ ಮನೆಯಲ್ಲಿ ಮೂಟೆಗಟ್ಟಲೆ ನಗದು ಹಣ ಪತ್ತೆಯಾಗಿರುವ ವಿಸ್ಮಯಕಾರಿ ಘಟನೆ ನಡೆದಿದೆ. ಮೃತ ವೃದ್ಧೆಯನ್ನು ನೂರ್ (70) ಎಂದು ಗುರುತಿಸಲಾಗಿದೆ. ಕುಟುಂಬಸ್ಥರ ಆಸರೆ ಇಲ್ಲದೆ ಕಳೆದ ಹಲವು ವರ್ಷಗಳಿಂದ ಮಂಡ್ಯ ನಗರದ ವಿವಿಧೆಡೆ ಭಿಕ್ಷಾಟನೆ ಮಾಡಿಕೊಂಡು ಗುತ್ತಲು ಬಡಾವಣೆಯ ಬಾಡಿಗೆ ಮನೆಯಲ್ಲಿ ಒಂಟಿಯಾಗಿ ವಾಸಿಸುತ್ತಿದ್ದರು. ಶನಿವಾರ ವಯೋಸಹಜ ಕಾಯಿಲೆಯಿಂದ ಅವರು ಮೃತಪಟ್ಟಿದ್ದು, ಸ್ಥಳೀಯರು ಹಾಗೂ ಸಂಬಂಧಿಕರು ಸೇರಿ ಅಂತ್ಯಕ್ರಿಯೆ ನೆರವೇರಿಸಿದ್ದಾರೆ. ಅಂತ್ಯಸಂಸ್ಕಾರದ ಬಳಿಕ ಸ್ಥಳೀಯರು ಮತ್ತು ಸಂಬಂಧಿಕರು ನೂರ್ ಅವರ ಮನೆಗೆ ತೆರಳಿ ಪರಿಶೀಲಿಸಿದಾಗ ಅಚ್ಚರಿ ಕಾದಿತ್ತು! ಮನೆಯ ಮೂಲೆ ಮೂಲೆಯಲ್ಲಿ ಪ್ಲಾಸ್ಟಿಕ್ ಕವರ್‌ಗಳಲ್ಲಿ ಸುತ್ತಿಟ್ಟಿದ್ದ ಕರೆನ್ಸಿ ನೋಟುಗಳ ಕಂತೆಗಳು ಹಾಗೂ ಚೀಲಗಳಲ್ಲಿ ತುಂಬಿಟ್ಟಿದ್ದ ನಾಣ್ಯಗಳ ರಾಶಿ ಪತ್ತೆಯಾಗಿದೆ. ಬೆಳಗ್ಗೆಯಿಂದ ಸಂಜೆಯವರೆಗೆ ಸತತವಾಗಿ ಎಣಿಕೆ ನಡೆಸಿದಾಗ ಒಟ್ಟು ಮೊತ್ತ ಬರೋಬ್ಬರಿ 8 ಲಕ್ಷ ರೂಪಾಯಿಗೂ ಅಧಿಕವಾಗಿರುವುದು ತಿಳಿದುಬಂದಿದೆ. ಮಂಡ್ಯ ಪೂರ್ವ ಪೊಲೀಸ್…

Read More

ಬೆಳ್ತಂಗಡಿ: ವ್ಯಕ್ತಿಯೋರ್ವರನ್ನು ಕೊಲ್ಲುವ ಉದ್ದೇಶದಿಂದ ಅವರ ದ್ವಿಚಕ್ರ ವಾಹನಕ್ಕೆ ತನ್ನ ಟಾಟಾ ಸುಮೊ ವಾಹನವನ್ನು ಢಿಕ್ಕಿಪಡಿಸಿದ ಆರೋಪದ ಮೇರೆಗೆ ಆರೋಪಿಯೋರ್ವನನ್ನು ಪೊಲೀಸರು ಆ.22 ರಂದು ಬಂಧಿಸಿದ್ದಾರೆ. ಧರ್ಮಸ್ಥಳ ನಿವಾಸಿ ಶರತ್ (33) ಬಂಧಿತ ಆರೋಪಿ. ಆರೋಪಿಯ ವಿರುದ್ಧ ಬೆಳ್ತಂಗಡಿ ಕಲ್ಮಂಜ ನಿವಾಸಿ ಬಾಲಕೃಷ್ಣ (43) ಎಂಬುವವರು ದೂರು ನೀಡಿರುತ್ತಾರೆ. ದೂರುದಾರರಾದ ಬಾಲಕೃಷ್ಣ ಅವರಿಗೆ ಆರೋಪಿ ಶರತ್ ಆತನ ಟಾಟಾ ಸುಮೊ ವಾಹನವನ್ನು ಢಿಕ್ಕಿಪಡಿಸಿ ಕೊಲ್ಲುವುದಾಗಿ ಕೆಲವು ತಿಂಗಳುಗಳ ಹಿಂದೆ ಬೆದರಿಸಿರುತ್ತಾನೆ. ಜು.30 ರ ಸಂಜೆ ಬಾಲಕೃಷ್ಣ ಅವರು ಕೆಲಸ ಮುಗಿಸಿಕೊಂಡು ತನ್ನ ದ್ವಿಚಕ್ರ ವಾಹನದಲ್ಲಿ ಮನೆಗೆ ಹೋಗುತ್ತಿದ್ದರು. ಈ ವೇಳೆ ಆರೋಪಿಯು ಕೊಲ್ಲುವ ಉದ್ದೇಶದಿಂದ ತನ್ನ ಟಾಟಾ ಸುಮೊ ವಾಹನದಲ್ಲಿ ಹಿಂಬಾಲಿಸಿಕೊಂಡು ಬಂದು ಧರ್ಮಸ್ಥಳ ಗ್ರಾಮ ಕುರುಮಾನಿ ಕ್ರಾಸ್ ಬಳಿ ಬಾಲಕೃಷ್ಣ ಅವರ ದ್ವಿಚಕ್ರ ವಾಹನಕ್ಕೆ ಢಿಕ್ಕಿಪಡಿಸಿರುತ್ತಾನೆ. ಅಪಘಾತದ ಪರಿಣಾಮ ಬಾಲಕೃಷ್ಣ ಅವರಿಗೆ ಗಾಯಗಳಾಗಿ‌ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ಚಿಕಿತ್ಸೆ ಪಡೆದಿರುತ್ತಾರೆ ಎಂಬುದಾಗಿ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಬಾಲಕೃಷ್ಣ…

Read More