Author: admin
ಉಡುಪಿಯ ನೇಜಾರಿನಲ್ಲಿ ನಡೆದಿದ್ದ ತಾಯಿ ಹಾಗೂ ಮೂವರು ಮಕ್ಕಳ ಭೀಕರ ಕೊಲೆ ಪ್ರಕರಣದ ಮುಖ್ಯ ಆರೋಪಿ ಪ್ರವೀಣ್ ಅರುಣ್ ಚೌಗುಲೆಗೆ ಕಾರಾಗೃಹದಲ್ಲಿ ಜೀವ ಬೆದರಿಕೆ ಇರುವ ಹಿನ್ನೆಲೆಯಲ್ಲಿ, ಆತನಿಗೆ ಸೂಕ್ತ ರಕ್ಷಣೆ ಮತ್ತು ಭದ್ರತೆ ಒದಗಿಸುವಂತೆ ಉಡುಪಿ ನ್ಯಾಯಾಲಯವು ಜೈಲು ಆಡಳಿತಕ್ಕೆ ನಿರ್ದೇಶನ ನೀಡಿದೆ. ಜೀವ ಬೆದರಿಕೆ ದೂರು: ಪ್ರಸ್ತುತ ಬೆಂಗಳೂರಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಬಂಧಿಯಾಗಿರುವ ಆರೋಪಿ ಪ್ರವೀಣ್ ಚೌಗುಲೆ, ತನಗೆ ಜೈಲಿನೊಳಗೆ ಸಹ-ಬಂಧಿಗಳಿಂದ ಜೀವ ಬೆದರಿಕೆ ಇದೆ ಎಂದು ನ್ಯಾಯಾಲಯಕ್ಕೆ ಮನವಿ ಸಲ್ಲಿಸಿದ್ದಾನೆ. ಕೋರ್ಟ್ ಸೂಚನೆ: ಈ ಅರ್ಜಿಯ ವಿಚಾರಣೆ ನಡೆಸಿದ ಉಡುಪಿಯ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು, ಆರೋಪಿಯ ಭದ್ರತೆಯಲ್ಲಿ ಯಾವುದೇ ಲೋಪವಾಗದಂತೆ ಎಚ್ಚರ ವಹಿಸಲು ಹಾಗೂ ಅಗತ್ಯ ರಕ್ಷಣೆ ನೀಡಲು ಕಾರಾಗೃಹ ಅಧಿಕಾರಿಗಳಿಗೆ ಸ್ಪಷ್ಟ ನಿರ್ದೇಶನ ನೀಡಿದೆ. ವಿಚಾರಣೆ ಹಂತ: ಈ ದಾರುಣ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಈಗಾಗಲೇ 2,202 ಪುಟಗಳ ಬೃಹತ್ ದೋಷಾರೋಪ ಪಟ್ಟಿ (ಚಾರ್ಜ್‌ಶೀಟ್) ಸಲ್ಲಿಸಿದ್ದು,…
ಕೇರಳ: ಸೋಷಿಯಲ್ ಮೀಡಿಯಾದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದ್ದ ಅಖಿಲ್ ಎನ್ಆರ್‌ಡಿ ಹಾಗೂ ಮೇಘಾ ನಾಯರ್ ಅವರ ಸಂಬಂಧ ಮುರಿದುಬಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ವತಃ ಮೇಘಾ ನಾಯರ್ ಅವರೇ ಮೌನ ಮುರಿದಿದ್ದಾರೆ. ತಾವು ಅಖಿಲ್ ಅವರ ಎನ್‌ಆರ್‌ಡಿ ನಿವಾಸದಿಂದ ಹೊರಟು ಬಂದಿರುವುದು ನಿಜ ಹಾಗೂ ಪ್ರಸ್ತುತ ಅನೂಪ್ ಜೊತೆ ಇರುವುದಾಗಿ ಸ್ಪಷ್ಟಪಡಿಸಿದ್ದಾರೆ. ಇತ್ತೀಚೆಗೆ ಮೇಘಾ ರಾತ್ರಿ ವೇಳೆ ನೈಟಿ ಧರಿಸಿ ಕೈಯಲ್ಲಿ ಬ್ಯಾಗ್ ಹಿಡಿದು ಮನೆಯಿಂದ ಹೊರಡುತ್ತಿರುವ ಸಿಸಿಟಿವಿ ದೃಶ್ಯಾವಳಿಗಳು ಜಾಲತಾಣಗಳಲ್ಲಿ ವೈರಲ್ ಆಗಿದ್ದವು. ಮೇಘಾ ಬಸ್ ಕಂಡಕ್ಟರ್ ಜೊತೆ ಓಡಿಹೋಗಿದ್ದಾರೆ ಎಂಬ ವದಂತಿಗಳೂ ಹರಡಿದ್ದವು. ಆದರೆ, ಈ ನಡುವೆ ತಾವು ತಂದೆಯ ಮನೆಯಲ್ಲಿದ್ದೇನೆ ಎಂಬಂತೆ ಫೋಟೋ ಪೋಸ್ಟ್ ಮಾಡಿದ್ದು ಪ್ರೇಕ್ಷಕರಲ್ಲಿ ಗೊಂದಲ ಮೂಡಿಸಿತ್ತು. ಈ ಕುರಿತು ಸ್ಪಷ್ಟನೆ ನೀಡಿರುವ ಮೇಘಾ, “ನಾನು ಎನ್‌ಆರ್‌ಡಿ ಮನೆಯಿಂದ ಹೊರಬಂದಿದ್ದು ನಿಜ. ನಾನು ಅನೂಪ್ ಜೊತೆ 10 ದಿನ ಇದ್ದೆ. ಆ ಮಧ್ಯೆ ತಂದೆಯನ್ನು ನೋಡಲು ಹೋದಾಗ ತೆಗೆದ ಫೋಟೋವನ್ನು ಪೋಸ್ಟ್ ಮಾಡಿದ್ದೆ. ನಂತರ ಮತ್ತೆ…
ಗದಗ: ಸರ್ಕಾರಿ ಶಾಲೆಯ ಬಿಸಿಊಟದಲ್ಲಿ ಹಲ್ಲಿ ಬಿದ್ದು, ಅದನ್ನು ಸೇವಿಸಿದ ನೂರಾರು ವಿದ್ಯಾರ್ಥಿಗಳು ತೀವ್ರ ಅಸ್ವಸ್ಥಗೊಂಡಿರುವ ಆಘಾತಕಾರಿ ಘಟನೆ ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಬೀಡನಹಳ್ಳಿ ಗ್ರಾಮದಲ್ಲಿ ಸಂಭವಿಸಿದೆ. ವಾಂತಿ, ಭೇದಿಯಿಂದ ಬಳಲಿದ ಮಕ್ಕಳು ಶಾಲೆಯಲ್ಲಿ ಮಧ್ಯಾಹ್ನದ ಬಿಸಿಊಟ ಸೇವಿಸಿದ ಕೆಲವೇ ಕ್ಷಣಗಳಲ್ಲಿ ಸಾಲು ಸಾಲು ವಿದ್ಯಾರ್ಥಿಗಳಲ್ಲಿ ತೀವ್ರ ಹೊಟ್ಟೆನೋವು, ವಾಂತಿ ಮತ್ತು ಭೇದಿ ಲಕ್ಷಣಗಳು ಕಾಣಿಸಿಕೊಂಡವು. ತಕ್ಷಣವೇ ಎಚ್ಚೆತ್ತ ಶಾಲಾ ಸಿಬ್ಬಂದಿ ಹಾಗೂ ಸ್ಥಳೀಯರು ಅಸ್ವಸ್ಥಗೊಂಡ ನೂರಕ್ಕೂ ಹೆಚ್ಚು ಮಕ್ಕಳನ್ನು ಮುಂಡರಗಿ ತಾಲೂಕು ಆಸ್ಪತ್ರೆಗೆ ತುರ್ತಾಗಿ ದಾಖಲಿಸಿ ಚಿಕಿತ್ಸೆ ಕೊಡಿಸುತ್ತಿದ್ದಾರೆ. ಪೋಷಕರ ಆಕ್ರೋಶ ಘಟನೆಯ ಸುದ್ದಿ ತಿಳಿಯುತ್ತಿದ್ದಂತೆ ಆತಂಕಗೊಂಡ ನೂರಾರು ಪೋಷಕರು ತಾಲೂಕು ಆಸ್ಪತ್ರೆಯತ್ತ ದೌಡಾಯಿಸಿ ಬಂದಿದ್ದು, ಮಕ್ಕಳ ಸ್ಥಿತಿ ಕಂಡು ಕಣ್ಣೀರಿಟ್ಟರು. ಅಡುಗೆ ತಯಾರಿಸುವಲ್ಲಿ ಮತ್ತು ಸರಬರಾಜು ಮಾಡುವಲ್ಲಿ ತೀವ್ರ ಅಜಾಗರೂಕತೆ ವಹಿಸಿದ ಶಾಲೆಯ ಶಿಕ್ಷಕರು ಹಾಗೂ ಬಿಸಿಊಟ ಸಿಬ್ಬಂದಿಯ ವಿರುದ್ಧ ಗ್ರಾಮಸ್ಥರು ಮತ್ತು ಪೋಷಕರು ಕಟು ಆಕ್ರೋಶ ಹೊರಹಾಕಿದ್ದು, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.…
ನವದೆಹಲಿ: ಆಸ್ತಿ ವಿವಾದದ ಹಿನ್ನೆಲೆಯಲ್ಲಿ ನಡೆದ 1988ರ ಕೊಲೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ 105 ವರ್ಷದ ರಸಿಕ್ ಚಂದ್ರ ಮಂಡಲ್ ಅವರಿಗೆ ಸುಪ್ರೀಂ ಕೋರ್ಟ್ ಜೀವಾವಧಿ ಶಿಕ್ಷೆಯಿಂದ ಮುಕ್ತಿ ನೀಡಿದೆ. ವೃದ್ಧಾಪ್ಯ ಹಾಗೂ ವಯೋಸಹಜ ಆರೋಗ್ಯ ಸಮಸ್ಯೆಗಳನ್ನು ಗಂಭೀರವಾಗಿ ಪರಿಗಣಿಸಿದ ನ್ಯಾಯಾಲಯ, ಅವರ ಉಳಿದ ಜೀವಾವಧಿ ಶಿಕ್ಷೆಯನ್ನು ಮನ್ನಾ ಮಾಡಿ, ಮತ್ತೆ ಜೈಲಿಗೆ ಕಳುಹಿಸದಂತೆ ಮಹತ್ವದ ತೀರ್ಪು ನೀಡಿದೆ. ಪಶ್ಚಿಮ ಬಂಗಾಳದ ಮಾಲ್ದಾ ಜಿಲ್ಲೆಯ ನಿವಾಸಿಯಾದ ರಸಿಕ್ ಚಂದ್ರ ಮಂಡಲ್ ಅವರು 1920ರಲ್ಲಿ ಜನಿಸಿದ್ದರು. 1988ರಲ್ಲಿ ಆಸ್ತಿ ಹಂಚಿಕೆಯ ವಿವಾದಕ್ಕೆ ಸಂಬಂಧಿಸಿದಂತೆ ಸ್ವಂತ ಸಹೋದರ ಸುರೇಶ್ ಮಂಡಲ್ ಅವರನ್ನೇ ಹತ್ಯೆ ಮಾಡಿದ ಆರೋಪ ರಸಿಕ್ ಅವರ ಮೇಲಿತ್ತು. ಈ ಪ್ರಕರಣದ ವಿಚಾರಣೆ ನಡೆಸಿದ್ದ ವಿಚಾರಣಾ ನ್ಯಾಯಾಲಯವು 1994ರಲ್ಲಿ ರಸಿಕ್ ಮಂಡಲ್ ಅವರನ್ನು ದೋಷಿ ಎಂದು ઠೇರ್ಪಡಿಸಿ ಜೀವಾವಧಿ ಶಿಕ್ಷೆ ವಿಧಿಸಿತ್ತು. ರಸಿಕ್ ಚಂದ್ರ ಮಂಡಲ್ ಅವರು ಈ ಪ್ರಕರಣದಲ್ಲಿ ಸುಮಾರು 32 ವರ್ಷಗಳ ಕಾಲ ಜೈಲು ಶಿಕ್ಷೆ ಅನುಭವಿಸಿದ್ದರು. 1994ರ…
ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ನಡೆದಿದ್ದ ಮಂಗಳಮುಖಿ ಕೊಲೆ ಕೇಸ್ ನ ತನಿಖೆ ಮುಂದುವರಿದಿದ್ದು, ಕೇವಲ 200 ರೂ ಗೆ ಹತ್ಯೆ ನಡೆದಿದೆ ಎಂಬ ಶಾಕಿಂಗ್ ಸತ್ಯ ಹೊರಬಿದ್ದಿದೆ. ಕೇವಲ ₹200 ಹಣಕ್ಕಾಗಿ ಮಂಗಳಮುಖಿಯೊಬ್ಬರನ್ನು ಚಾಕುವಿನಿಂದ ಇರಿದು ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಈ ಘಟನೆಯು ನಗರದ ಜನತೆಯಲ್ಲಿ ಭಾರೀ ಆತಂಕ ಮೂಡಿಸಿದೆ. ಮೃತ ಮಂಗಳಮುಖಿಯನ್ನು ದೇವಿ ಎಂದು ಗುರುತಿಸಲಾಗಿದೆ. ರಾಮಮೂರ್ತಿನಗರ ಮೂಲದ ಕುಖ್ಯಾತ ಸುಲಿಗೆಕೋರ ಗೌತಮ್ ಎಂಬಾತನೇ ಈ ಕೃತ್ಯ ಎಸಗಿದ ಆರೋಪಿಯಾಗಿದ್ದಾನೆ. ಶನಿವಾರ ಬೆಳಗಿನ ಜಾವ ಸುಮಾರು 3 ಗಂಟೆಯ ವೇಳೆಗೆ ದರೋಡೆ ನಡೆಸುವ ಉದ್ದೇಶದಿಂದ ಆರೋಪಿ ಬಂದಿದ್ದನು. ಈ ವೇಳೆ ಆರೋಪಿ ಗೌತಮ್, ದೇವಿ ಅವರ ಬಳಿ ಹಣ ನೀಡುವಂತೆ ಪೀಡಿಸಿದ್ದಾನೆ. ಆದರೆ ದೇವಿ ತಮ್ಮ ಬಳಿಯಿದ್ದ ಕೇವಲ ₹200 ಹಣವನ್ನು ನೀಡಲು ಸ್ಪಷ್ಟವಾಗಿ ನಿರಾಕರಿಸಿದ್ದಾರೆ. ಇದರಿಂದ ಆಕ್ರೋಶಗೊಂಡ ಆರೋಪಿ ಗೌತಮ್, ತನ್ನ ಬಳಿಯಿದ್ದ ಚಾಕುವಿನಿಂದ ದೇವಿ ಅವರ ಕುತ್ತಿಗೆಯ ಭಾಗಕ್ಕೆ ಆಳವಾಗಿ ಇರಿದು ಪರಾರಿಯಾಗಿದ್ದಾನೆ. ತೀವ್ರ ರಕ್ತಸ್ರಾವದಿಂದ ದೇವಿ…
ನವದೆಹಲಿ: ಮಗುವಿಗೆ ಮಾತ್ರೆ ನೀಡುವ ಕ್ಷುಲ್ಲಕ ವಿಚಾರ ದಂಪತಿ ನಡುವೆ ಕಲಹಕ್ಕೆ ಕಾರಣವಾಗಿ, ಅಂತಿಮವಾಗಿ ಪತ್ನಿ ಕಡೆಯವರ ಮಾರಣಾಂತಿಕ ಹಲ್ಲೆಗೆ ಸಾಫ್ಟ್‌ವೇರ್ ಎಂಜಿನಿಯರ್ ಒಬ್ಬರು ದಾರುಣವಾಗಿ ಪ್ರಾಣ ಕಳೆದುಕೊಂಡಿರುವ ಘಟನೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಡೆದಿದೆ. ನೋಯ್ಡಾದ ಪ್ರತಿಷ್ಠಿತ ‘ಅಡೋಬ್’ ಕಂಪನಿಯಲ್ಲಿ ವಾರ್ಷಿಕ ₹60 ಲಕ್ಷ ವೇತನದ ಉದ್ಯೋಗದಲ್ಲಿದ್ದ ವಿನಯ್ ಗುಪ್ತಾ (31) ಹತ್ಯೆಯಾದ ದುರ್ದೈವಿ. ಘಟನೆಯ ವಿವರ: ವಿನಯ್ ಗುಪ್ತಾ ಹಾಗೂ ರೇಖಾ ಅವರ ವಿವಾಹವಾಗಿ ಮೂರೂವರೆ ವರ್ಷಗಳಾಗಿದ್ದು, ದಂಪತಿಗೆ ಇಬ್ಬರು ಮಕ್ಕಳಿದ್ದಾರೆ (ಒಂದು ಗಂಡು, ಒಂದು ಹೆಣ್ಣು). ಇತ್ತೀಚೆಗೆ ಮಗುವಿಗೆ ಔಷಧ ನೀಡುವ ವಿಚಾರದಲ್ಲಿ ಇಬ್ಬರ ನಡುವೆ ತೀವ್ರ ಮಾತಿನ ಚಕಮಕಿ ನಡೆದಿದೆ. ಜಗಳ ವಿಕೋಪಕ್ಕೆ ಹೋದಾಗ ಕೋಪಗೊಂಡ ರೇಖಾ, ತವರು ಮನೆಗೆ ತೆರಳಿ ವಿಷಯ ಮುಟ್ಟಿಸಿದ್ದಾರೆ. ಸ್ವಲ್ಪ ಸಮಯದ ಬಳಿಕ ರೇಖಾ ತಮ್ಮ ತಂದೆ, ಇಬ್ಬರು ಸಹೋದರರು, ಅತ್ತಿಗೆ, ಚಿಕ್ಕಪ್ಪ ಸೇರಿದಂತೆ ಕುಟುಂಬದ ಇತರ ಸದಸ್ಯರನ್ನು ಕರೆದುಕೊಂಡು ಪತಿಯ ಮನೆಗೆ ಬಂದಿದ್ದಾರೆ. ಮನೆಗೆ ಬಂದ ಸಂಬಂಧಿಕರಿಗೆ ಕುಡಿಯಲು…
ಮಂಗಳೂರು: ಆಹಾರ ಸುರಕ್ಷತೆ ಮತ್ತು ನಕಲಿ ಔಷಧಿಗಳ ನಿರಂತರ ಮೇಲ್ವಿಚಾರಣೆಗಾಗಿ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದಲ್ಲಿ ಕಾವಲು ಪಡೆ ‘(ವಾಚ್ ಟೀಮ್’) ರಚಿಸುವ ಬಗ್ಗೆ ಸರ್ಕಾರ ಚಿಂತನೆ ನಡೆಸುತ್ತಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ. ಖಾದರ್ ಹೇಳಿದರು. ಶನಿವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅಸುರಕ್ಷಿತ ಆಹಾರ ಮತ್ತು ನಕಲಿ ಔಷಧಿಗಳ ಬಗ್ಗೆ ಸಾರ್ವಜನಿಕರು ದೂರುಗಳನ್ನು ಸಲ್ಲಿಸಲು ಸುಲಭವಾಗುವಂತೆ ಕ್ಯೂಆರ್ ಕೋಡ್ ರಚಿಸಲಾಗಿದೆ. ಪ್ರತಿ ಹೋಟೆಲ್ ಮತ್ತು ವೈದ್ಯಕೀಯ ಅಂಗಡಿಯ ಮುಂದೆ ಕ್ಯೂಆರ್ ಕೋಡ್ ಪ್ರದರ್ಶಿಸಲು ಸೂಚನೆಗಳನ್ನು ನೀಡಲಾಗುವುದು ಎಂದರು. ಕ್ಯೂಆರ್ ಕೋಡ್ ಪರಿಚಯಿಸಿದ ಎರಡು ದಿನಗಳಲ್ಲಿ 400 ಕ್ಕೂ ಹೆಚ್ಚು ದೂರುಗಳು ಬಂದಿವೆ. ಆಹಾರ ಸುರಕ್ಷತಾ ಅಧಿಕಾರಿಗಳು ದೂರುಗಳು ಬಂದ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ ಎಂದು ಅವರು ಹೇಳಿದರು. ಅಸ್ತಿತ್ವದಲ್ಲಿರುವ ಅಧಿಕಾರಿಗಳು ತಮ್ಮ ತಮ್ಮ ವ್ಯಾಪ್ತಿಯಲ್ಲಿ ಈ ಕೆಲಸವನ್ನು ನಿರ್ವಹಿಸಬಹುದು. ಆದರೆ , ಕ್ರಮವನ್ನು ವ್ಯಾಪಕ ಪ್ರಮಾಣದಲ್ಲಿ ಜಾರಿಗೆ ತರಬೇಕಾಗಿದೆ ಮತ್ತು ಸಾರ್ವಜನಿಕರಲ್ಲಿ…
ಹುಬ್ಬಳ್ಳಿ: ಖಾಕಿ ಎಂದರೆ ಕೇವಲ ಅಧಿಕಾರವಲ್ಲ, ಅದೊಂದು ಜವಾಬ್ದಾರಿ ಎಂಬುದನ್ನು ಹುಬ್ಬಳ್ಳಿ-ಧಾರವಾಡ ಪೊಲೀಸ್ ಕಮಿಷನರ್ ಎನ್. ಶಶಿಕುಮಾರ್ ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ. ಮನೆಯಲ್ಲಿ ಸಾವಿನ ಸೂತಕವಿದ್ದರೂ, ವೈಯಕ್ತಿಕ ದುಃಖವನ್ನು ಬದಿಗಿಟ್ಟು ಸಾರ್ವಜನಿಕ ಶಾಂತಿ ಕಾಪಾಡಲು ಅವರು ರಸ್ತೆಗೆ ಇಳಿದಿರುವ ಘಟನೆ ಈಗ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ನಡೆದದ್ದೇನು? ಹುಬ್ಬಳ್ಳಿ-ಧಾರವಾಡದ ಪೊಲೀಸ್ ಕಮಿಷನರ್ ಎನ್. ಶಶಿಕುಮಾರ್ ಅವರ ಮಾವ ವಿರನಾಗಪ್ಪ ಅವರು ಕಳೆದ ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ನಗರದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ ಅವರು ಇಂದು ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ. ಈ ಸುದ್ದಿ ತಿಳಿಯುತ್ತಿದ್ದಂತೆಯೇ ಯಾವುದೇ ವ್ಯಕ್ತಿಯಾದರೂ ಆಸ್ಪತ್ರೆಗೆ ಓಡುವುದು ಸಹಜ. ಆದರೆ ಶಶಿಕುಮಾರ್ ಅವರು ಮಾಡಿದ್ದೇ ಬೇರೆ. ಇಂದು ಹಳೆ ಹುಬ್ಬಳ್ಳಿಯ ಭವಾನಿ ಶಂಕರ ದೇವಸ್ಥಾನದ ವಿಚಾರವಾಗಿ ಹಿಂದೂಪರ ಸಂಘಟನೆಗಳು ಬೃಹತ್ ಪ್ರತಿಭಟನೆ ಹಮ್ಮಿಕೊಂಡಿದ್ದವು. ನಗರದ ಕಾನೂನು ಸುವ್ಯವಸ್ಥೆ ಹದಗೆಡಬಾರದು ಎಂಬ ಕಾರಣಕ್ಕೆ ಕಮಿಷನರ್ ಶಶಿಕುಮಾರ್ ಅವರು ಸ್ವತಃ ಸ್ಥಳದಲ್ಲಿ ಹಾಜರಿದ್ದು ಬಂದೋಬಸ್ತ್ ಉಸ್ತುವಾರಿ ವಹಿಸಿದ್ದರು. ಮಾವನ ಸಾವಿನ ಸುದ್ದಿ ಕಿವಿಗೆ…
ಬೆಂಗಳೂರು: ಪಾಕಿಸ್ತಾನದವರೊಂದಿಗೆ ಸಂಪರ್ಕ ಹೊಂದಿದ್ದ ವ್ಯಕ್ತಿಯೋರ್ವನನ್ನು ದೊಡ್ಡಬಳ್ಳಾಪುರ ನಗರ ಪೊಲೀಸರು ಬಂಧಿಸಿದ್ದಾರೆ. ಇಸ್ಲಾಂಪುರ ನಿವಾಸಿ ಸೈಯದ್ ಅಬೂಬಕರ್ ( 28 ) ಬಂಧಿತ ಆರೋಪಿ. ಆರೋಪಿಯನ್ನು ಕೌಂಟರ್ ಇಂಟಲಿಜೆನ್ಸ್ ಸೆಲ್ ಮತ್ತು ಸೆಂಟ್ರಲ್ ಐಬಿ ಅಧಿಕಾರಿಗಳ ಮಾಹಿತಿ ಮೇರೆಗೆ ಬಂಧಿಸಲಾಗಿದೆ. ಆರೋಪಿಯು ಪಾಕಿಸ್ತಾನದ ಶಾಜದ್ ಬುಟ್ಟಿ ನೆಟವರ್ಕ್ ಗ್ಯಾಂಗ್‌ನ ಇನ್ಸ್ಟಾಗ್ರಾಂ ಅಕೌಂಟ್ ಮೂಲಕ ಪಾಕಿಸ್ತಾನಿ ಗ್ಯಾಂಗ್‌ಸ್ಟರ್‌ಗಳ ಜೊತೆ ಸಂರ್ಪಕದಲ್ಲಿದ್ದ. ಈ ಪಾಕಿಸ್ತಾನಿ ಗ್ಯಾಂಗ್ ಗಣ್ಯ ವ್ಯಕ್ತಿಗಳು ದೊಡ್ಡ ದೊಡ್ಡ ಉದ್ಯಮಿಗಳಿಗೆ ಬೆದರಿಕೆ ಹಾಕಿ ಹಣ ವಸೂಲಿ ಮಾಡುತ್ತದೆ. ತನ್ನ ಆಧಾರ್ ಕಾರ್ಡ್ ಎಲ್ಲ ಕೊಟ್ಟು ಅಕೌಂಟ್‌ಗೆ ಲಾಗಿನ್ ಆಗಿದ್ದ. ಕಳೆದ 2 ವರ್ಷಗಳಿಂದ ಪಾಕಿಸ್ತಾನಿ ಗ್ಯಾಂಗ್‌ನ ಜೊತೆ ಇನ್ಸ್ಟಾಗ್ರಾಂ ಮೂಲಕ ಸಂಪರ್ಕದಲ್ಲಿದ್ದ. ಆರೋಪಿಯು ಎಸಿ ರಿಪೇರಿ ಕೆಲಸ ಮಾಡುತ್ತಾ ಬೆಂಗಳೂರಿನ ಮಸೀದಿಯಲ್ಲಿ ಪಾಠ ಮಾಡುತ್ತಿದ್ದ. ಆರೋಪಿಯು ಗ್ಯಾಂಗ್ ಹೇಳಿದಂತೆ ಕೇರಳ ಮತ್ತು ದೆಹಲಿಗೆ ಹೋಗಿ ಟ್ರೈನಿಂಗ್ ಸಹ ಪಡೆದುಕೊಂಡು ಬಂದಿದ್ದ. ಆರೋಪಿಯ ವಿರುದ್ಧ ಬಿಎನ್‌ಎಸ್ 113 (3) ( 197( 2…
ಕನ್ನಡ ಚಿತ್ರರಂಗದ ಖ್ಯಾತ ನಿರ್ದೇಶಕ ಹಾಗೂ ನಟ ಓಂ ಪ್ರಕಾಶ್ ರಾವ್ ಅವರು ಇದೀಗ ಹೊಸ ವಿವಾದವೊಂದಕ್ಕೆ ಸಿಲುಕಿದ್ದಾರೆ. ಸಿನಿಮಾ ನಿರ್ಮಾಣದ ಹೆಸರಿನಲ್ಲಿ ಕೋಟ್ಯಂತರ ರೂಪಾಯಿ ಹಣ ಪಡೆದು ವಂಚಿಸಿದ್ದಾರೆ ಎಂದು ಆರೋಪಿಸಿ ಭಾಸ್ಕರ್ ಶೆಟ್ಟಿ ಎಂಬುವವರು ಬೆಂಗಳೂರು ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದಾರೆ. ವಂಚನೆಯ ಆರೋಪದ ಹಿನ್ನೆಲೆ ‘ಫಿನಿಕ್ಸ್’ ಎಂಬ ಸಿನಿಮಾ ನಿರ್ಮಾಣ ಮಾಡುವುದಾಗಿ ಹೇಳಿ ಓಂ ಪ್ರಕಾಶ್ ರಾವ್ ಅವರು ಭಾಸ್ಕರ್ ಶೆಟ್ಟಿ ಅವರಿಂದ ಒಟ್ಟು 3 ಕೋಟಿ 85 ಲಕ್ಷ ರೂಪಾಯಿಗಳನ್ನು ಪಡೆದುಕೊಂಡಿದ್ದರು ಎನ್ನಲಾಗಿದೆ. ಸೆಪ್ಟೆಂಬರ್ 23ರಂದು ಈ ಹಣಕಾಸಿನ ವ್ಯವಹಾರ ನಡೆದಿದ್ದು, ಕೇವಲ ಆರು ತಿಂಗಳೊಳಗೆ ಸಂಪೂರ್ಣ ಹಣವನ್ನು ಹಿಂದಿರುಗಿಸುವುದಾಗಿ ಓಂ ಪ್ರಕಾಶ್ ಭರವಸೆ ನೀಡಿದ್ದರು. ಆದರೆ, ವ್ಯವಹಾರ ನಡೆದು ಮೂರು ವರ್ಷ ಕಳೆದರೂ ಹಣ ವಾಪಸ್ ನೀಡಿಲ್ಲ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಬೆದರಿಕೆ ಮತ್ತು ಕಾಲಹರಣ ‘ಹಣ ವಾಪಸ್ ಕೇಳಿದಾಗಲೆಲ್ಲಾ ನಿರ್ದೇಶಕರು ವಿವಿಧ ಕಾರಣಗಳನ್ನು ನೀಡಿ ಕಾಲಹರಣ ಮಾಡುತ್ತಿದ್ದಾರೆ. ಅಲ್ಲದೆ, ಇತ್ತೀಚೆಗೆ ಅವರು…



