Author: admin

ಮೂಡಬಿದ್ರೆ – ಮಂಗಳೂರು ರಾಷ್ಟ್ರೀಯ ಹೆದ್ದಾರಿ ಸಮೀಪದ ಗುರುಪುರ- ಕೈಕಂಬ ಪೊಳಲಿ ದ್ವಾರದ ರಸ್ತೆಯ ಬಳಿ ದಿನಾಂಕ: 15-08-2026 ರಂದು 1.214 ಗ್ರಾಂ ತೂಕದ ಮಾದಕವಸ್ತು ಗಾಂಜಾವನ್ನು ಅಕ್ರಮವಾಗಿ ಮಾರಾಟ ಮಾಡಲೆತ್ನಿಸಿದ ಬೆಂಜನಪದವು, ಕಲ್ಲಿಗೆ ಎಂಬಲ್ಲಿಯ ನಿವಾಸಿಗಳಾದ ರಕ್ಷಿತ್ ಹಾಗೂ ಅಕ್ಷಯ್ ಬಿ. ಎಂಬವರನ್ನು ಬಜಪೆ ಪೊಲೀಸ್ ನಿರೀಕ್ಷಕರಾದ ಬಾಲಕೃಷ್ಣ ಎಚ್.ಎನ್ ನೇತ್ರತ್ವದ ಪೊಲೀಸರ ತಂಡ ದಾಳಿ ನಡೆಸಿ, ವಶಕ್ಕೆ ಪಡೆದು ಆರೋಪಿಗಳಿಂದ ಸುಮಾರು 65 ಸಾವಿರ ರೂಪಾಯಿ ಮೌಲ್ಯದ 1.214 ಕೆ.ಜಿ ತೂಕದ ಮಾದಕ ವಸ್ತು ಗಾಂಜಾ, ಗಾಂಜಾ ತುಂಬಿಸಿದ ಸಣ್ಣ ಜಿಪ್ ಲಾಕ್, ಪ್ಲಾಸ್ಟಿಕ್ ಕವರ್ ಗಳು, ತೂಕ ಮಾಡಲು ತಂದಿದ್ದ ಡಿಜಿಟಲ್ ತೂಕ ಮಾಪಕ, ಎರಡು ಮೊಬೈಲ್ ಪೋನ್ ಹಾಗೂ ಕೃತ್ಯಕ್ಕೆ ಬಳಸಿದ್ದ ಸ್ಕೂಟರ್ ವಾಹನ ಸಹಿತ ಒಟ್ಟು ಸುಮಾರು 1.65 ಲಕ್ಷ ರೂಪಾಯಿ ಮೌಲ್ಯದ ಸೊತ್ತುಗಳನ್ನು ಸ್ವಾಧೀನಪಡಿಸಿಕೊಂಡಿರುತ್ತಾರೆ. ಈ ಬಗ್ಗೆ ಬಜಪೆ ಬಜಪೆ ಪೊಲೀಸ್ ಠಾಣೆಯಲ್ಲಿ ಅ.ಕ್ರ.ಸಂ: 132/2026 ರಂತೆ ಪ್ರಕರಣ ದಾಖಲಿಸಿಕೊಂಡು ಆರೋಪಿಗಳನ್ನು ನ್ಯಾಯಾಲಯದ…

Read More

ಬೆಳ್ತಂಗಡಿ ತಾಲೂಕಿನ ಕುವೆಟ್ಟು ಗ್ರಾಮದ ಗುರುವಾಯನಕೆರೆ ಬಸ್ ನಿಲ್ದಾಣದ ಬಳಿಯ ಭೂಷಣ್ ಬಾರ್ ಎದುರುಗಡೆ ವೃದ್ಧರೊಬ್ಬರ ಮೃತದೇಹ ಆ.18 ರಂದು ಮಂಗಳವಾರ ಬೆಳಗ್ಗೆ ಪತ್ತೆಯಾಗಿದೆ.ಮೃತ ವ್ಯಕ್ತಿಯನ್ನು ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಕೆಂಚಾಳ ನಿವಾಸಿ ಮರಿಯಪ್ಪ (70ವ) ಎಂದು ಪೊಲೀಸ್ ತನಿಖೆಯಿಂದ ಗುರುತಿಸಲಾಗಿದೆ. ಈ ವ್ಯಕ್ತಿ ಅನಾರೋಗ್ಯದಿಂದ ಬಳಲುತ್ತಿದ್ದರು ಎನ್ನಲಾಗಿದ್ದು, ಕುಸಿದು ಬಿದ್ದು ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಬಸ್ ನಿಲ್ದಾಣದ ಸಮೀಪ ಶವ ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಜನರಲ್ಲಿ ಆತಂಕ ಮೂಡಿಸಿತ್ತು. ಘಟನಾ ಸ್ಥಳಕ್ಕೆ ಬೆಳ್ತಂಗಡಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.

Read More

ನವದೆಹಲಿ: ಭಾರತದಲ್ಲಿ ಮರಣದಂಡನೆ ಶಿಕ್ಷೆಯನ್ನು ಜಾರಿಗೊಳಿಸಲು ಪ್ರಸ್ತುತ ಇರುವ ‘ಗಲ್ಲಿಗೇರಿಸುವ’ ಪದ್ಧತಿಯನ್ನೇ ಮುಂದುವರಿಸಲು ಸುಪ್ರೀಂ ಕೋರ್ಟ್ ನಿರ್ಧರಿಸಿದೆ. ಮರಣದಂಡನೆಯನ್ನು ಕಡಿಮೆ ನೋವಿನಿಂದ ಕೂಡಿದ ಇತರ ವಿಧಾನಗಳಾದ ಮಾರಣಾಂತಿಕ ಇಂಜೆಕ್ಷನ್ ಅಥವಾ ಗುಂಡಿಕ್ಕುವ ವಿಧಾನ ಮೂಲಕ ಜಾರಿಗೊಳಿಸುವಂತೆ ಕೋರಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ. ಮರಣದಂಡನೆಯನ್ನು ಗಲ್ಲಿಗೇರಿಸುವ ಬದಲಾಗಿ ಕಡಿಮೆ ನೋವಿನ ವಿಧಾನಗಳನ್ನು ಬಳಸಬೇಕು ಮತ್ತು ಇದು ಘನತೆಯಿಂದ ಕೂಡಿರಬೇಕು ಎಂದು ಕೋರಿ ವಕೀಲ ರಿಷಿ ಮಲ್ಹೋತ್ರಾ ಅವರು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. ಗಲ್ಲಿಗೇರಿಸುವಿಕೆಯು ಕ್ರೂರ ಮತ್ತು ನೋವಿನಿಂದ ಕೂಡಿರುತ್ತದೆ. ವ್ಯಕ್ತಿಯ ಘನತೆಗೆ ಕುಂದು ಬರುವಂತಿರುತ್ತದೆ ಎಂಬುದು ಅವರ ವಾದ. ಆದರೆ ನ್ಯಾಯಮೂರ್ತಿಗಳಾದ ವಿಕ್ರಮ್ ನಾಥ್ ಮತ್ತು ಸಂದೀಪ್ ಮೆಹ್ತಾ ಅವರಿದ್ದ ಪೀಠವು ಈ ಅರ್ಜಿಯನ್ನು ತಳ್ಳಿಹಾಕಿದೆ. ಅರ್ಜಿದಾರರ ವಾದದ ಪ್ರಕಾರ, ಗಲ್ಲಿಗೇರಿಸುವ ವ್ಯಕ್ತಿ ದೀರ್ಘಕಾಲ ಬಾಧೆ ಪಡಬೇಕಾಗುತ್ತದೆ. ಆತ ಸತ್ತಿದ್ದಾನೆಂದು ಖಚಿತಪಡಿಸಲು 40 ನಿಮಿಷ ಬೇಕಾಗುತ್ತದೆ. ಆದರೆ, ಗ್ಯಾಸ್ ಚೇಂಬರ್, ಲೆಥಲ್ ಇಂಜೆಕ್ಷನ್, ಶೂಟ್ ವಿಧಾನಗಳಲ್ಲಿ 5 ನಿಮಿಷದಲ್ಲಿ…

Read More

ಆಲಪ್ಪುಳ (ಕೇರಳ) : ಮೊಬೈಲ್ ಫೋನ್ ಅತಿಯಾಗಿ ಬಳಸಬೇಡ ಹಾಗೂ ತಡವಾಗಿ ಮನೆಗೆ ಬರಬೇಡ ಎಂದು ಗದರಿಸಿದ್ದಕ್ಕೆ ಅಜ್ಜನ ಮೇಲಿದ್ದ ದ್ವೇಷದಿಂದ, 13 ವರ್ಷದ ಬಾಲಕಿಯೊಬ್ಬಳು ತನ್ನ ಪ್ರಿಯಕರ ಹಾಗೂ ಇತರ ಹದಿಹರೆಯದ ಸ್ನೇಹಿತರ ಜೊತೆ ಸೇರಿ ಅಜ್ಜನನ್ನೇ ಭೀಕರವಾಗಿ ಹತ್ಯೆ ಮಾಡಿಸಿರುವ ಘಟನೆ ಕೇರಳದ ಆಲಪ್ಪುಳ ಜಿಲ್ಲೆಯ ಕರುವತ್ತದಲ್ಲಿ ನಡೆದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ 13 ವರ್ಷದ ಮೊಮ್ಮಗಳು ಸೇರಿದಂತೆ ನಾಲ್ವರು ಹದಿಹರೆಯದವರನ್ನು ಪೊಲೀಸರು ಬಂಧಿಸಿದ್ದಾರೆ. ಕರುವತ್ತದ ಬಾಡಿಗೆ ಮನೆಯಲ್ಲಿದ್ದ 65 ವರ್ಷದ ಶಿವನ್‌ಕುಟ್ಟಿ ಚೆಟ್ಟಿಯಾರ್ ಕೊಲೆಯಾದ ದುರ್ದೈವಿ. ಬಾಲಕಿಯ ತಾಯಿ ತನ್ನ ಎರಡನೇ ಮಗುವಿನ ಹೆರಿಗೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದಾಗ, ಅಜ್ಜ ಮನೆಯಲ್ಲಿ ಒಬ್ಬಂಟಿಯಾಗಿರುವುದನ್ನು ಗಮನಿಸಿದ ಬಾಲಕಿ ತನ್ನ ಪ್ರಿಯಕರನಿಗೆ ಕರೆ ಮಾಡಿ ಹತ್ಯೆಗೆ ಸಂಚು ರೂಪಿಸಿದ್ದಳು. ಮನೆಗೆ ಕಳ್ಳರು ನುಗ್ಗಿದ್ದಾರೆ ಎಂದು ಬಿಂಬಿಸಲು ವೀಡಿಯೊ ಕಾಲ್ ಮೂಲಕ ಪ್ರಿಯಕರ ಹಾಗೂ ಆತನ ಸ್ನೇಹಿತರಿಗೆ ಮನೆಯ ಪ್ರವೇಶದ್ವಾರ, ಬಾಗಿಲು ಹಾಗೂ ಅಜ್ಜನ ಚಲನವಲನದ ಮಾಹಿತಿ ನೀಡಿದ್ದಳು. ಭಾನುವಾರ ರಾತ್ರಿ ವೆಂಟಿಲೇಟರ್ ಮೂಲಕ…

Read More

ಹಿಸಾರ್: ಹರಿಯಾಣದ ಹಿಸಾರ್‌ನಲ್ಲಿ 14 ವರ್ಷದ ಬಾಲಕಿಯನ್ನು ಯುವಕನನ್ನು ಭೇಟಿಯಾಗಿದ್ದಾಳೆಂಬ ಅನುಮಾನದಿಂದ ಹತ್ಯೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಕಿಯ ತಂದೆ ವಿನೋದ್ ಹಾಗೂ ಅಜ್ಜ ಧರ್ಮಪಾಲ್ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಆಗಸ್ಟ್ 17ರಂದು ಇಬ್ಬರನ್ನೂ ಬಂಧಿಸಲಾಗಿದ್ದು, ಬಾಲಕಿಯನ್ನು ಹತ್ಯೆಗೈದು ಬಳಿಕ ಆಕೆಯ ಮೃತದೇಹವನ್ನು ಚೀಲದಲ್ಲಿ ತುಂಬಿ ಕಾಲುವೆಗೆ ಎಸೆದ ಆರೋಪ ಅವರ ಮೇಲಿದೆ. ಆದಂಪುರ ಠಾಣಾಧಿಕಾರಿ (SHO) ಹರೀಶ್ ಅವರು ಆಗಸ್ಟ್ 18ರಂದು ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ತಿಳಿಸಿದ್ದಾರೆ. ಪೊಲೀಸರ ಪ್ರಕಾರ, ಧರ್ಮಪಾಲ್ ಹಾಗೂ ವಿನೋದ್ ಬಾಲಕಿಯ ಮೃತದೇಹವನ್ನು ಚೀಲದಲ್ಲಿ ತುಂಬಿ ಧಾನಿ ಮೊಹಬ್ಬತ್‌ಪುರ ಸೇತುವೆ ಸಮೀಪದ ಕಿಶನ್‌ಗಢ್ ಕಾಲುವೆಗೆ ಎಸೆದಿದ್ದರು. ಈ ಕುರಿತು ಪೊಲೀಸರಿಗೆ ಮಾಹಿತಿ ದೊರೆತ ಬಳಿಕ ಕಾರ್ಯಾಚರಣೆ ನಡೆಸಿ ಕಾಲುವೆಯಿಂದ ಬಾಲಕಿಯ ಮೃತದೇಹವನ್ನು ಹೊರತೆಗೆಯಲಾಗಿದೆ. ಬಾಲಕಿಯ ತಂದೆಗೆ, ಆಕೆ ಆಗಸ್ಟ್ 9ರಂದು ಓರ್ವ ಯುವಕನನ್ನು ಭೇಟಿಯಾಗಿದ್ದಾಳೆ ಎಂಬ ಅನುಮಾನವಿತ್ತು ಎನ್ನಲಾಗಿದೆ. ಇದೇ ಅನುಮಾನದಿಂದ ವಿನೋದ್ ಹಾಗೂ ಧರ್ಮಪಾಲ್ ಆಗಸ್ಟ್ 11ರ ರಾತ್ರಿ…

Read More

ನವದೆಹಲಿ: ದೇಶದ 28 ರಾಜ್ಯಗಳಲ್ಲಿ 14 ರಾಜ್ಯಗಳ ಮುಖ್ಯಮಂತ್ರಿಗಳ ವಿರುದ್ಧ ಗಂಭೀರ ಕ್ರಿಮಿನಲ್ ಪ್ರಕರಣಗಳು ಬಾಕಿ ಇವೆ. ಈ ಪಟ್ಟಿಯಲ್ಲಿ ತೆಲಂಗಾಣ ಸಿಎಂ ಎ. ರೇವಂತ್ ರೆಡ್ಡಿ ವಿರುದ್ಧ 89 ಪ್ರಕರಣಗಳು ಬಾಕಿ ಇದ್ದು ಮೊದಲ ಸ್ಥಾನದಲ್ಲಿದ್ದಾರೆ ಎಂದು ವರದಿ ತಿಳಿಸಿದೆ. ತೆಲಂಗಾಣ ಸಿಎಂ ಎ. ರೇವಂತ್ ರೆಡ್ಡಿ ವಿರುದ್ಧ 89 ಪ್ರಕರಣಗಳು, ಪಶ್ಚಿಮ ಬಂಗಾಳ ಸಿಎಂ ಸುವೇಂದು ಅಧಿಕಾರಿ ವಿರುದ್ಧ 29 ಪ್ರಕರಣಗಳು, ಕರ್ನಾಟಕ ಸಿಎಂ ಡಿ.ಕೆ. ಶಿವಕುಮಾರ್ ಹಾಗೂ ಆಂಧ್ರಪ್ರದೇಶ ಸಿಎಂ ಎನ್. ಚಂದ್ರಬಾಬು ನಾಯ್ಡು ವಿರುದ್ಧ 19 ಪ್ರಕರಣಗಳು, ಕೇರಳ ಸಿಎಂ ವಿ.ಡಿ. ಸತೀಶನ್ 18 ಪ್ರಕರಣಗಳು, ಜಾರ್ಖಂಡ್ ಸಿಎಂ ಹೇಮಂತ್ ಸೊರೇನ್ ವಿರುದ್ಧ 5 ಪ್ರಕರಣಗಳು ಬಾಕಿ ಇವೆ ಎಂದು ಸುಪ್ರೀಂ ಕೋರ್ಟ್‌ಗೆ ಅಮಿಕಸ್ ಕ್ಯುರಿಯೆ ಹಾಗೂ ಹಿರಿಯ ವಕೀಲ ವಿಜಯ್ ಹನ್ಸಾರಿಯಾ ಮಹತ್ವದ ವರದಿ ಸಲ್ಲಿಸಿದ್ದಾರೆ. ಜೊತೆಗೆ ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವೀಸ್ ಹಾಗೂ ಹಿಮಾಚಲ ಪ್ರದೇಶ ಸಿಎಂ ಸುಖವಿಂದರ್ ಸಿಂಗ್ ವಿರುದ್ಧ ತಲಾ 4…

Read More

ಉಡುಪಿ : ಅಮೆಜಾನ್ ಕಂಪನಿಯ ಆನ್‌ಲೈನ್ ಡೆಲಿವರಿ ಹಬ್ ಫ್ರಾಂಚೈಸಿ ಕೊಡುಸುವುದಾಗಿ ನಂಬಿಸಿ ಉಡುಪಿ ತಾಲೂಕಿನ ನಾಲ್ಕೂರು ಗ್ರಾಮದ ವ್ಯಕ್ತಿಯೊಬ್ಬರಿಗೆ ₹4.20 ಲಕ್ಷ ಹಣ ಪಡೆದು ವಂಚಿಸಿರುವ ಘಟನೆ ಬೆಳಕಿಗೆ ಬಂದಿದ್ದು, ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನಾಲ್ಕೂರು ಗ್ರಾಮದ ರವಿಚಂದ್ರ (48) ವಂಚನೆಗೊಳಗಾದ ವ್ಯಕ್ತಿ. ಈ ಸಂಬಂಧ ಎಮ್. ಸಾಯಿಕೃಷ್ಣ, ಎಮ್. ಗುರುಸ್ವಾಮಿ, ಸುರೇಶ್ ಕುಮಾರ್, ರಾಜ್ ಕುಮಾರ್ ಹಾಗೂ ಮಹೇಶ್ ಎಂಬ ಐವರು ಆರೋಪಿಗಳ ವಿರುದ್ಧ ಮಣಿಪಾಲ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ದೂರುದಾರ ರವಿಚಂದ್ರ ಅವರಿಗೆ ಜೂನ್ 29, 2026 ರಂದು ಕರೆ ಮಾಡಿದ್ದ ಆರೋಪಿ ಎಮ್. ಸಾಯಿಕೃಷ್ಣ, ಉಡುಪಿ ಮಣಿಪಾಲದ ಅಲೆವೂರು ರಸ್ತೆಯಲ್ಲಿರುವ ಬಾಳಿಗಾ ಕಾಂಪ್ಲೆಕ್ಸ್‌ನಲ್ಲಿ ಅಮೆಜಾನ್ ಆನ್‌ಲೈನ್ ಹಬ್ ಫ್ರಾಂಚೈಸಿ ಕೊಡಿಸುವುದಾಗಿ ಹೇಳಿದ್ದ. ಆರಂಭದಲ್ಲಿ ರವಿಚಂದ್ರ ಅವರು ಫ್ರಾಂಚೈಸಿ ಬೇಡವೆಂದು ಕರೆ ಕಡಿತಗೊಳಿಸಿದ್ದರು. ಆದರೆ, ಬಿಡದ ಆರೋಪಿಗಳು ಪುನಃ ಕರೆ ಮಾಡಿ, “ಆರಂಭದಲ್ಲಿ ಆನ್‌ಲೈನ್‌ನಲ್ಲಿ ನೋಂದಣಿ (Registration) ಮಾಡಿಕೊಳ್ಳಬೇಕು. ನಂತರ ಕಂಪನಿಯ ಫೀಲ್ಡ್ ಆಫೀಸರ್‌ಗಳು…

Read More

ಚಾಮರಾಜನಗರ: ಹನೂರು ತಾಲೂಕಿನಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ನಡೆಸಿದ ಗುಂಡೇಟಿಗೆ ಮೂವರು ಬಲಿಯಾದ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಕುಟುಂಬಸ್ಥರ ಪ್ರತಿಭಟನೆ ಬಳಿಕ ಇದೀಗ ಮೃತ ಪೀಟರ್, ಆಂಥೋನಿ ಹಾಗೂ ಕುಮಾರ್ ಅವರ ಅಂತ್ಯಕ್ರಿಯೆ ಕುಟುಂಬಸ್ಥರ ಕಣ್ಣೀರು ಮತ್ತು ಆಕ್ರಂದನದ ನಡುವೆ ನೆರವೇರಿದೆ. ಸರ್ಕಾರ ಮತ್ತು ಶಾಸಕರು ನೀಡಿದ ತಲಾ 15 ಲಕ್ಷ ರೂ. ಪರಿಹಾರದ ಭರವಸೆಯಿಂದಾಗಿ ಪ್ರತಿಭಟನೆ ಶಮನಗೊಂಡಿತ್ತಾದರೂ, ಈ ಎನ್‌ಕೌಂಟರ್ ಪ್ರಕರಣಕ್ಕೀಗ ಮತ್ತೊಂದು ಟ್ವಿಸ್ಟ್ ಸಿಕ್ಕಿದ್ದು, ಅರಣ್ಯ ಇಲಾಖೆ ಸಾಕ್ಷ್ಯಗಳ ಮೇಲೆ ಅನುಮಾನ ಹುಟ್ಟಿಸಿದೆ. ಸದನದಲ್ಲೂ ಗದ್ದಲಕ್ಕೆ ಕಾರಣವಾಗಿದ್ದ ಕೇಸ್ ಈ ಪ್ರಕರಣ ವಿಧಾನಸಭೆ ಹಾಗೂ ವಿಧಾನಪರಿಷತ್ ಎರಡರಲ್ಲೂ ತೀವ್ರ ಗದ್ದಲಕ್ಕೆ ಕಾರಣವಾಗಿತ್ತು. ವಿಪಕ್ಷ ನಾಯಕ ಆರ್. ಅಶೋಕ್ ಮತ್ತು ತಮಿಳುನಾಡು ಸಿಎಂ ವಿಜಯ್ ಇದು ನಕಲಿ ಎನ್‌ಕೌಂಟರ್ ಎಂದು ಆರೋಪಿಸಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ್ದ ಅರಣ್ಯ ಸಚಿವ ರಾಮಲಿಂಗಾರೆಡ್ಡಿ, ಸಿಬ್ಬಂದಿ ಆತ್ಮರಕ್ಷಣೆಗಾಗಿ ಗುಂಡು ಹಾರಿಸಿದ್ದಾರೆ ಎಂದು ಸಮರ್ಥಿಸಿಕೊಂಡು, ಘಟನಾ ಸ್ಥಳದಲ್ಲಿ ಸಿಕ್ಕಿದ್ದ 34 ಕೆ.ಜಿ ಜಿಂಕೆ ಮಾಂಸ ಹಾಗೂ…

Read More

ಬೆಂಗಳೂರು: ಮಾಜಿ ಪ್ರೇಯಸಿಯ ಮೇಲೆ ಅತ್ಯಾ*ಚಾರ ಮಾಡಿ, ಕೊಲೆ ಮಾಡುವ ಪ್ಲಾನ್ ಬಗ್ಗೆ ಚಾಟ್‌ಜಿಪಿಟಿ ಜೊತೆ ಐಡಿಯಾ ಕೇಳಿದ್ದ ಯುವಕನೊಬ್ಬ ಈಗ ಕಾನೂನಿನ ಸಂಕಷ್ಟಕ್ಕೆ ಸಿಲುಕಿದ್ದಾನೆ. ಈ ಚಾಟ್‌ಬಾಟ್ ಸಂಭಾಷಣೆಯಿಂದ ನಿಜವಾಗಿಯೂ ಅಪಾಯವಿದೆ ಎಂದು ಪತ್ತೆ ಹಚ್ಚಿದ OpenAI ಕಂಪನಿ, ತಕ್ಷಣ ಫೆಡರಲ್ ಅಧಿಕಾರಿಗಳಿಗೆ ಮಾಹಿತಿ ನೀಡಿದೆ ಎಂದು ಕೋರ್ಟ್ ದಾಖಲೆಗಳಿಂದ ಬಹಿರಂಗವಾಗಿದೆ. ಫ್ಲೋರಿಡಾದ 25 ವರ್ಷದ ಡ್ಯಾರನ್ ಶೌ ಎಂಬಾತನೇ ಈ ಪ್ರಕರಣದಲ್ಲಿ ಸಿಕ್ಕಿಬಿದ್ದ ಆರೋಪಿ. ಈತ ತನ್ನ ಮಾಜಿ ಪ್ರೇಯಸಿಯನ್ನು ಅ*ತ್ಯಾ*ಚಾ*ರ ಮಾಡಿ ಕೊಲ್ಲುವ ಪ್ಲಾನ್‌ಗಳ ಬಗ್ಗೆ ಚಾಟ್‌ಜಿಪಿಟಿಯಲ್ಲಿ ವಿವರವಾಗಿ ಚರ್ಚಿಸಿದ್ದ. ಈ ಸಂಭಾಷಣೆಗಳನ್ನು ಪತ್ತೆ ಹಚ್ಚಿದ OpenAI, ಕೂಡಲೇ ಎಫ್‌ಬಿಐಗೆ ಮಾಹಿತಿ ರವಾನಿಸಿತ್ತು. ಬ್ರೇಕಪ್ ಆದ್ಮೇಲೆ ಚಾಟ್‌ಜಿಪಿಟಿ ಮೊರೆ ಹೋದ ಆರು ತಿಂಗಳ ಪ್ರೀತಿಗೆ ಬ್ರೇಕ್ ಬಿದ್ದ ನಂತರ, ಮಾರ್ಚ್ ತಿಂಗಳಲ್ಲಿ ಶೌ ಚಾಟ್‌ಜಿಪಿಟಿ ಬಳಸಲು ಶುರುಮಾಡಿದ್ದ ಅಂತ ತನಿಖಾಧಿಕಾರಿಗಳು ಹೇಳಿದ್ದಾರೆ. ಮೊದಮೊದಲು ಬ್ರೇಕಪ್ ಬಗ್ಗೆ, ಮಾಜಿ ಪ್ರೇಯಸಿಯ ಇಷ್ಟಗಳು, ಅವಳು ಹೋಗುತ್ತಿದ್ದ ಜಾಗಗಳು, ತನ್ನ ಅಸೂಯೆ,…

Read More

ಉಳ್ಳಾಲ: ಮೀನುಗಾರಿಕೆಗೆ ತೆರಳಿದ್ದ ವೇಳೆ ದೈತ್ಯ ಗಾತ್ರದ ಅಲೆಗೆ ಸಿಲುಕಿ ನಾಪತ್ತೆಯಾಗಿದ್ದ ಕುಂದಾಪುರ ಮೂಲದ ಮೀನುಗಾರರೊಬ್ಬರ ಮೃತದೇಹ ಕೊಳೆತ ಸ್ಥಿತಿಯಲ್ಲಿ ಸೋಮವಾರ ಕೋಟೆಪುರ ಅಲಿವೆಬಾಗಿಲು ಬಳಿ ಪತ್ತೆಯಾಗಿದೆ. ಮೃತರನ್ನು ನಾರಾಯಣ(31) ಎಂದು ಗುರುತಿಸಲಾಗಿದೆ. ಮಂಗಳೂರು ದಕ್ಕೆಯಿಂದ ‘ಓಷನ್ ಸ್ಟಾರ್’ ಹೆಸರಿನ ಬೋಟ್ ನಲ್ಲಿ ಆ. 9ರಂದು ಮೀನುಗಾರಿಕೆಗೆ ತೆರಳುವಾಗ ಭಾರಿ ಅಲೆ ಅಪ್ಪಳಿಸಿದ ಪರಿಣಾಮ ನಾರಾಯಣ ಅವರು ಸಮುದ್ರಕ್ಕೆ ಕೊಚ್ಚಿಹೋಗಿದ್ದರು. ಘಟನೆಯ ಬಳಿಕ ದೋಣಿ ಮಾಲೀಕರು ಹಾಗೂ ಕುಟುಂಬಸ್ಥರು ಕಳೆದ ಎಂಟು ದಿನಗಳಿಂದ ನಾರಾಯಣ ಅವರಿಗಾಗಿ ತೀವ್ರ ಶೋಧ ನಡೆಸುತ್ತಿದ್ದರು. ಈ ಸಂಬಂಧ ಪಾಂಡೇಶ್ವರ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣವೂ ದಾಖಲಾಗಿತ್ತು. ಮೃತದೇಹದ ಮಹಜರು ಸೇರಿದಂತೆ ಕಾನೂನು ಪ್ರಕ್ರಿಯೆಗಳನ್ನು ವೆನ್ಲಾಕ್ ಆಸ್ಪತ್ರೆಯಲ್ಲಿ ನಡೆಸಲಾಯಿತು. ಘಟನೆಗೆ ಸಂಬಂಧಿಸಿದಂತೆ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More