Author: admin

ವಿಜಯಪುರ: ನಿವೃತ್ತ ಶಿಕ್ಷಕನೊಬ್ಬರ ಮೃತದೇಹ  ರಸ್ತೆ ಬದಿಯಲ್ಲಿ ಪತ್ತೆಯಾದ ಪ್ರಕರಣದ ತನಿಖೆ ನಡೆಸಿದ ಪೊಲೀಸರಿಗೆ ಆಘಾತಕಾರಿ ಮಾಹಿತಿ ಸಿಕ್ಕಿದೆ. ವಿಜಯಪುರದ  ಇಂಡಿ ತಾಲೂಕಿನ ಚೌಡಿಹಾಳ್ ರಸ್ತೆಯ ಪೂಜಾರಿ ವಸ್ತಿ ತೋಟದ ಬಳಿ ಮೃತಪಟ್ಟಿದ್ದ ಸಿದ್ದಪ್ಪ ಅಂಜುಟಗಿ ಅವರ ಹತ್ಯೆಯ ಹಿಂದೆ ಪುತ್ರಿಯೇ ಇದ್ದಾಳೆ ಎಂಬುದು ತನಿಖೆಯಿಂದ ಬೆಳಕಿಗೆ ಬಂದಿದೆ. ಆಸ್ತಿ ವಿಚಾರದ ಜಗಳದ ಜತೆಗೆ ಆಕೆಯ ಪ್ರೇಮ ಸಂಬಂಧಕ್ಕೆ ತಂದೆ ವಿರೋಧಿಸಿದ್ದರಿಂದ ಕೊಲೆ ನಡೆದಿರುವ ಶಂಕೆ ವ್ಯಕ್ತವಾಗಿದೆ. ಈ ಪ್ರಕರಣದಲ್ಲಿ ಸಿದ್ದಪ್ಪ ಅವರ ಪುತ್ರಿ ಪ್ರಿಯಾಂಕಾ ಹಾಗೂ ಆಕೆಯ ಪ್ರಿಯಕರ ಸಂತೋಷ್ ಸಿಂಧೆ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಸಂತೋಷ್‌ನ ಸ್ನೇಹಿತ ಗುರುರಾಜ ಬಿರಾದಾರ್ ಕೂಡ ಕೃತ್ಯದಲ್ಲಿ ಭಾಗಿಯಾಗಿದ್ದಾನೆ ಎಂದು ಪೊಲೀಸರು ಶಂಕಿಸಿದ್ದು, ಆತ ತಲೆಮರೆಸಿಕೊಂಡಿರುವುದರಿಂದ ಆತನಿಗಾಗಿ ಶೋಧ ನಡೆಸಲಾಗುತ್ತಿದೆ. ಎರಡು ವರ್ಷಗಳ ಹಿಂದೆ ಶಿಕ್ಷಕ ವೃತ್ತಿಯಿಂದ ನಿವೃತ್ತರಾಗಿದ್ದ ಸಿದ್ದಪ್ಪ ಅವರಿಗೆ ನಿವೃತ್ತಿ ಹಣ ದೊರೆತಿತ್ತು. ಇದರ ಜತೆಗೆ ಸ್ವಗ್ರಾಮದಲ್ಲಿ ಆಸ್ತಿಯೂ ಇತ್ತು. ಇದೇ ಆಸ್ತಿ ವಿಚಾರದಲ್ಲಿ ತಂದೆ ಮತ್ತು ಪುತ್ರಿಯ ನಡುವೆ…

Read More

ಬೆಂಗಳೂರು: ರಾಜಧಾನಿಯ ಸಮೀಪದ ಚಿಕ್ಕಬಾಣಾವರದಲ್ಲಿ ನಡೆದ ಜೋಡಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ತನಿಖೆ ತೀವ್ರಗೊಳಿಸಿದ್ದು, ಮೃತ ಅಭಿನಂದನ್ ಅವರ ಪತ್ನಿ ಹರಿಣಿ ತಾನೇ ಪ್ರಿಯಕರನ ಜೊತೆ ಸೇರಿ ಕೊಲೆ ಮಾಡಿದ್ದಾಗಿ ಪೊಲೀಸರ ಮುಂದೆ ಸತ್ಯ ಬಾಯ್ಬಿಟ್ಟಿದ್ದಾಳೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯ ಆರೋಪಿ ಹರಿಣಿಯನ್ನು ವಶಕ್ಕೆ ಪಡೆದಿರುವ ಚಿಕ್ಕಬಾಣಾವರ ಪೊಲೀಸರು, ತಲೆಮರೆಸಿಕೊಂಡಿರುವ ಆಕೆಯ ಪ್ರಿಯಕರ ವಿನಯ್‌ಗಾಗಿ ಬಲೆ ಬೀಸಿದ್ದಾರೆ. ಪೋಲಿಸ್ ವಿಚಾರಣೆ ವೇಳೆ ಆತಂಕಕಾರಿ ವಿಷಯಗಳನ್ನು ತೆರೆದಿಟ್ಟಿರುವ ಹರಿಣಿ, ಘಟನೆ ನಡೆದ ರಾತ್ರಿ ಸುಮಾರು 11 ಗಂಟೆಯ ವೇಳೆಗೆ ಮನೆಯಲ್ಲಿದ್ದ ಸಿಸಿಟಿವಿ ಕ್ಯಾಮೆರಾಗಳನ್ನು ಆಫ್ ಮಾಡಿದ್ದಳು. ಬಳಿಕ ಪ್ರಿಯಕರ ವಿನಯ್‌ನನ್ನು ಮನೆಗೆ ಕರೆಸಿಕೊಂಡಿದ್ದಾಳೆ. ಇಬ್ಬರೂ ಸೇರಿ ನಿದ್ರೆಯಲ್ಲಿದ್ದ ಅಭಿನಂದನ್ ತಲೆಗೆ ಮನೆಯಲ್ಲಿದ್ದ ಸೌಟ್‌ನಿಂದ ಹಲ್ಲೆ ನಡೆಸಿ ಹತ್ಯೆ ಮಾಡಿದ್ದಾರೆ. ತಂದೆಯ ಮೇಲಿನ ಹಲ್ಲೆಯನ್ನು ಕಂಡು ಮಗ ಯದುವೀರ್ ಎಚ್ಚರಗೊಂಡಿದ್ದ. ಈ ಕೃತ್ಯದ ಬಗ್ಗೆ ಮಗು ಮುಂದೆ ಎಲ್ಲಿಯಾದರೂ ಹೇಳಬಹುದು ಅಥವಾ ತಮಗೆ ತೊಂದರೆಯಾಗಬಹುದು ಎಂಬ ಭಯದಿಂದ, ಹರಿಣಿ ಹಾಗೂ ಆಕೆಯ ಪ್ರಿಯಕರ ವಿನಯ್…

Read More

ವಾಷಿಂಗ್ಟನ್: ಭಾರತದ ಚುನಾವಣಾ ಪಾರದರ್ಶಕತೆಯನ್ನು ಉದಾಹರಣೆಯಾಗಿ ಮುಂದಿಟ್ಟುಕೊಂಡಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಅಮೆರಿಕದಲ್ಲಿಯೂ ಮತದಾನಕ್ಕೆ ಕಟ್ಟುನಿಟ್ಟಿನ ನಿಯಮಗಳನ್ನು ಜಾರಿಗೆ ತರಬೇಕೆಂಬ ತಮ್ಮ ಬೇಡಿಕೆಯನ್ನು ಮತ್ತೊಮ್ಮೆ ಬಲವಾಗಿ ಪ್ರತಿಪಾದಿಸಿದ್ದಾರೆ. ಮತದಾರರ ನೋಂದಣಿಗೆ ಪೌರತ್ವದ ಪುರಾವೆ ಹಾಗೂ ಮತದಾನಕ್ಕೆ ರಾಷ್ಟ್ರವ್ಯಾಪಿ ಫೋಟೋ ಗುರುತಿನ ಚೀಟಿ (Voter ID) ಕಡ್ಡಾಯಗೊಳಿಸುವ ‘SAVE America Act’ (Safeguard American Voter Eligibility) ಮಸೂದೆಯನ್ನು ತಕ್ಷಣವೇ ಅಂಗೀಕರಿಸಬೇಕು ಎಂದು ಟ್ರಂಪ್ ಒತ್ತಾಯಿಸಿದ್ದಾರೆ. ತಮ್ಮ ‘ಟ್ರೂತ್ ಸೋಶಿಯಲ್’ ಖಾತೆಯಲ್ಲಿ ಪೋಸ್ಟ್ ಮಾಡಿರುವ ಟ್ರಂಪ್, ಭಾರತದ ಮುಖ್ಯ ಚುನಾವಣಾ ಆಯುಕ್ತ (CEC) ಜ್ಞಾನೇಶ್ ಕುಮಾರ್ ಅವರೊಂದಿಗೆ ನಡೆಸಿದ್ದ ಮಾತುಕತೆಯನ್ನು ಉಲ್ಲೇಖಿಸಿದ್ದಾರೆ. “ಅಮೆರಿಕದಲ್ಲಿ ಮಾನ್ಯ ಫೋಟೋ ಗುರುತಿನ ಚೀಟಿ ಇಲ್ಲದೆಯೇ ಚುನಾವಣೆಗಳನ್ನು ಏಕೆ ನಡೆಸಲಾಗುತ್ತದೆ?” ಎಂದು ಜ್ಞಾನೇಶ್ ಕುಮಾರ್ ಅವರು ತಮ್ಮನ್ನು ಪ್ರಶ್ನಿಸಿದ್ದಾಗಿ ಟ್ರಂಪ್ ತಿಳಿಸಿದ್ದಾರೆ. ಭಾರತದಲ್ಲಿ 646 ಮಿಲಿಯನ್ ಮತದಾರರಿದ್ದು, ಅವರಲ್ಲಿ ಶೇ 100 ರಷ್ಟು ಜನರು ಫೋಟೋ ಗುರುತಿನ ಚೀಟಿ ಬಳಸಿದ್ದಾರೆ. ಅಲ್ಲದೆ ಕೇವಲ ಶೇ 1 ಕ್ಕಿಂತ…

Read More

ಗಾಂಧೀನಗರ: ಪ್ರಧಾನಿ ನರೇಂದ್ರ ಮೋದಿ ಮೇಲಿನ ಅಭಿಮಾನ ಮತ್ತು ಅವರ ಸಿದ್ಧಾಂತಗಳನ್ನು ಬೆಂಬಲಿಸಲು, 2029ರ ಲೋಕಸಭಾ ಚುನಾವಣೆಯಲ್ಲಿ ಪ್ರಧಾನಿ ಮೋದಿ ನೇತೃತ್ವದ ಬಿಜೆಪಿ ಬೆಂಬಲ ನೀಡುವುದಕ್ಕಾಗಿ ವ್ಯಕ್ತಿಯೊಬ್ಬರು ತಾವು ಕಷ್ಟಪಟ್ಟು ಪಡೆದಿದ್ದ ಸರ್ಕಾರಿ ಕೆಲಸವನ್ನೇ ತ್ಯಾಗ ಮಾಡಿರುವ ಅಪರೂಪದ ಘಟನೆ ಗುಜರಾತ್‌ನಲ್ಲಿ ನಡೆದಿದೆ. ದೆಹಲಿಯ ಜಂತರ್ ಮಂತರ್‌ನಲ್ಲಿ ಇತ್ತೀಚೆಗೆ ಕಾಕ್ರೋಚ್ ಜನತಾ ಪಕ್ಷ (ಸಿಜೆಪಿ) ನೇತೃತ್ವದಲ್ಲಿ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ಸರ್ಕಾರಿ ವಿರೋಧಿ ನಿರೂಪಣೆಗಳು ಕಂಡುಬಂದವು. ಅದನ್ನು ಎದುರಿಸಲು ಬಿಜೆಪಿಗೆ ನೈತಿಕ ಬೆಂಬಲ ಘೋಷಿಸಿ ಗುಜರಾತ್ ಪೊಲೀಸ್ ಕಾನ್‌ಸ್ಟೆಬಲ್ ಒಬ್ಬರು ರಾಜೀನಾಮೆ ನೀಡಿದ್ದಾರೆ. ಗಾಂಧಿಧಾಮದ ಪೂರ್ವ ಕಚ್‌ನಲ್ಲಿರುವ ಅದೇಸರ್ ಪೊಲೀಸ್ ಠಾಣೆಯಲ್ಲಿ ಸೇವೆ ಸಲ್ಲಿಸುತ್ತಿರುವ ರಾಮಗಢ ಮೋಹನಗಢ ಗೋಸಾಯಿ, ಇತ್ತೀಚಿನ ರಾಜಕೀಯ ಬೆಳವಣಿಗೆಗಳು ತಮ್ಮನ್ನು ವೈಯಕ್ತಿಕ ತ್ಯಾಗ ಮಾಡಲು ಪ್ರೇರೇಪಿಸಿವೆ ಎಂದು ಹೇಳಿಕೊಂಡಿದ್ದಾರೆ. ಈ ಬಗ್ಗೆ ವೀಡಿಯೋ ಮಾಡಿ ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಬಹಳ ಕಠಿಣ ಪರಿಶ್ರಮ ಮತ್ತು ಸಮರ್ಪಣೆಯ ನಂತರ ನನಗೆ ಈ ಸರ್ಕಾರಿ ಕೆಲಸ ಸಿಕ್ಕಿತು. ಆದರೆ, ಈಗ…

Read More

ಕಾಸರಗೋಡು : ಸ್ನ್ಯಾಪ್‌ಚಾಟ್  ಸಾಮಾಜಿಕ ಜಾಲತಾಣದ ಮೂಲಕ ಪರಿಚಯ ಮಾಡಿಕೊಂಡು, 14 ಹಾಗೂ 16 ವರ್ಷದ ಇಬ್ಬರು ಶಾಲಾ ಬಾಲಕಿಯರನ್ನು ಮಂಗಳೂರು ಸಮೀಪದ ಉಳ್ಳಾಲದ ಲಾಡ್ಜ್‌ಗೆ ಕರೆದೊಯ್ದು ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಯುವಕರನ್ನು ಹೊಸದುರ್ಗ ಪೊಲೀಸರು ಬಂಧಿಸಿದ್ದಾರೆ. ಮಂಜೇಶ್ವರ ಮೂಲದ ರಿಜ್ವಾನ್ (23) ಹಾಗೂ ಮುಹಮ್ಮದ್ ಸಾದ್ (19) ಬಂಧಿತ ಆರೋಪಿಗಳು. ಇವರ ವಿರುದ್ಧ ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೋ – POCSO) ಕಾಯ್ದೆಯ ಸೆಕ್ಷನ್ 3 ಮತ್ತು 4 ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಹೊಸದುರ್ಗ ಪೊಲೀಸ್ ಇನ್ಸ್‌ಪೆಕ್ಟರ್ ಮಾಹಿತಿಯಂತೆ, ಘಟನೆ ನಡೆಯುವ ಮೂರು ದಿನಗಳಷ್ಟೇ ಮುಂಚೆ ಬಾಲಕಿಯರಿಗೆ ಸ್ನ್ಯಾಪ್‌ಚಾಟ್‌ನಲ್ಲಿ ಆರೋಪಿಗಳ ಪರಿಚಯವಾಗಿತ್ತು. ಆಗಸ್ಟ್ 16 ರ ಭಾನುವಾರ ಇಬ್ಬರು ಆರೋಪಿಗಳು ಕಾರಿನಲ್ಲಿ ಕಾಂಞಂಗಾಡ್‌ಗೆ ಬಂದು, ಮನೆ ಸಮೀಪದಿಂದಲೇ ಬಾಲಕಿಯರನ್ನು ಕರೆದುಕೊಂಡು ಹೋಗಿದ್ದರು. ಬಾಲಕಿಯರು ತಮ್ಮ ಸ್ನೇಹಿತರನ್ನು ಭೇಟಿಯಾಗಲು ಹೋಗುವುದಾಗಿ ಮನೆಯಲ್ಲಿ ತಿಳಿಸಿದ್ದರು. ಸಂಜೆಯಾದರೂ ಬಾಲಕಿಯರು ಮನೆಗೆ ಹಿಂತಿರುಗದಿದ್ದಾಗ ಆತಂಕಗೊಂಡ ಪೋಷಕರು ತಕ್ಷಣ ಪೊಲೀಸರಿಗೆ ದೂರು ನೀಡಿದ್ದಾರೆ. ಪ್ರಕರಣ…

Read More

ದಕ್ಷಿಣ ಕನ್ನಡ: ಪರಶುರಾಮ ಸೃಷ್ಟಿಯ ತುಳುನಾಡಿನಲ್ಲಿ ನಾಗಾರಾಧನೆಗೆ ಶತಮಾನಗಳ ಇತಿಹಾಸವಿದ್ದು, ನಾಗರಪಂಚಮಿಯನ್ನು ಇಲ್ಲಿನ ಜನರು ಅತ್ಯಂತ ಶ್ರದ್ಧೆ ಮತ್ತು ಭಕ್ತಿಭಾವದಿಂದ ಆಚರಿಸುತ್ತಾರೆ. ಜಿಲ್ಲೆಯಾದ್ಯಂತ ಸೋಮವಾರ ನಾಗರಪಂಚಮಿ ಸಂಭ್ರಮ ಮನೆಮಾಡಿದ್ದು, ವಿವಿಧ ನಾಗಬನಗಳು ಹಾಗೂ ನಾಗನಕಟ್ಟೆಗಳಲ್ಲಿ ವಿಶೇಷ ಪೂಜೆ, ಧಾರ್ಮಿಕ ವಿಧಿವಿಧಾನಗಳು ನೆರವೇರಿದವು. ತುಳುವರ ನಂಬಿಕೆಯಂತೆ ನಾಗನನ್ನು ಕಣ್ಣಿಗೆ ಕಾಣುವ ದೇವರೆಂದು ಪೂಜಿಸಲಾಗುತ್ತದೆ. ಹೀಗಾಗಿ ನಾಗರಪಂಚಮಿಯಂದು ಕುಟುಂಬದ ನಾಗನಕಟ್ಟೆ ಹಾಗೂ ನಾಗಬನಗಳಿಗೆ ತೆರಳಿ ನಾಗದೇವರಿಗೆ ವಿಶೇಷ ಪೂಜೆ ಸಲ್ಲಿಸುವುದು ಇಲ್ಲಿನ ಪ್ರಮುಖ ಸಂಪ್ರದಾಯವಾಗಿದೆ. ಹಲವು ಕಡೆಗಳಲ್ಲಿ ನಾಗನ ವಿಗ್ರಹಕ್ಕೆ ಹಾಲು, ಸೀಯಾಳ ಸೇರಿದಂತೆ ವಿವಿಧ ದ್ರವ್ಯಗಳಿಂದ ಅಭಿಷೇಕ ನೆರವೇರಿಸಿ ಕುಟುಂಬದ ಸುಖ, ಶಾಂತಿ ಹಾಗೂ ಸಮೃದ್ಧಿಗಾಗಿ ಪ್ರಾರ್ಥಿಸಲಾಯಿತು. ಪ್ರಕೃತಿಯನ್ನೇ ದೈವಸ್ವರೂಪವಾಗಿ ಆರಾಧಿಸುವ ತುಳುವರು, ನಾಗಾರಾಧನೆಯ ಮೂಲಕ ಪ್ರಕೃತಿ ಮತ್ತು ಜೀವಜಾಲದೊಂದಿಗೆ ತಮ್ಮ ಅವಿನಾಭಾವ ಸಂಬಂಧವನ್ನು ಪ್ರತಿಬಿಂಬಿಸುತ್ತಾರೆ. ತಲೆತಲಾಂತರಗಳಿಂದ ನಡೆದುಕೊಂಡು ಬಂದಿರುವ ಈ ವಿಶಿಷ್ಟ ಆಚರಣೆಗಳು ಇಂದಿಗೂ ತುಳುನಾಡಿನ ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲಿ ಜೀವಂತವಾಗಿವೆ. ದಕ್ಷಿಣ ಕನ್ನಡ ಜಿಲ್ಲೆಯ ಹಲವು ಕುಟುಂಬಗಳ ನಾಗನಕಟ್ಟೆ…

Read More

ಬೆಂಗಳೂರು: ಬೆಂಗಳೂರಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹ ಮತ್ತೊಮ್ಮೆ ಸುದ್ದಿಯಲ್ಲಿದೆ. ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಬಳಿ ಮೊಬೈಲ್ ಫೋನ್ ಪತ್ತೆಯಾದ ಬೆನ್ನಲ್ಲೇ ಇದೀಗ ಮತ್ತೊಂದು ಮೊಬೈಲ್ ಪತ್ತೆಯಾಗಿರುವುದು ಕಾರಾಗೃಹ ಇಲಾಖೆಯಲ್ಲಿ ಸಂಚಲನ ಮೂಡಿಸಿದೆ. ಇತ್ತೀಚೆಗೆ ಸಿಸಿಬಿ ಅಧಿಕಾರಿಗಳು ನಡೆಸಿದ ದಾಳಿ ವೇಳೆ ಪ್ರಜ್ವಲ್ ರೇವಣ್ಣ ಬಳಿ ಮೊಬೈಲ್ ಹಾಗೂ ಪೆನ್‌ಡ್ರೈವ್ ಪತ್ತೆಯಾಗಿತ್ತು. ಇದರ ಬೆನ್ನಲ್ಲೇ ಅದೇ ದಿನ ಜೈಲು ಅಧಿಕಾರಿಗಳು ನಡೆಸಿದ ತಪಾಸಣೆ ವೇಳೆ ಮತ್ತೊಂದು ಮೊಬೈಲ್ ಪತ್ತೆಯಾಗಿದೆ.ದೇವರ ಫೋಟೊದ ಹಿಂದೆ ಇರಿಸಲಾಗಿದ್ದ ವಿವೋ ಕಂಪನಿಯ ಮೊಬೈಲ್ ಅಧಿಕಾರಿಗಳ ಕೈಗೆ ಸಿಕ್ಕಿದೆ. ಸಿಮ್ ಕಾರ್ಡ್ ಇಲ್ಲದೆ, ಸ್ವಿಚ್‌ಆಫ್ ಸ್ಥಿತಿಯಲ್ಲಿದ್ದ ಮೊಬೈಲ್ ಅನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಘಟನೆ ಸಂಬಂಧ ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದ್ದು, ಮೊಬೈಲ್‌ನ್ನು ಯಾರು ಬಳಸುತ್ತಿದ್ದರು? ಜೈಲಿನೊಳಗೆ ಮೊಬೈಲ್ ಹೇಗೆ ಪ್ರವೇಶಿಸಿತು? ಎಂಬುದರ ಕುರಿತು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

Read More

ನವದೆಹಲಿ: ರಾಜ್ಯಾದ್ಯಂತ ಹೋಟೆಲ್‌ಗಳು, ರೆಸ್ಟೋರೆಂಟ್‌ಗಳು, ಮಾರುಕಟ್ಟೆಗಳ ಮೇಲೆ ಕರ್ನಾಟಕದ ಆರೋಗ್ಯ ಇಲಾಖೆ ಆಹಾರ ಸುರಕ್ಷತಾ ತಪಾಸಣೆ ನಡೆಸುತ್ತಿದೆ. ಈ ವೇಳೆ ಪ್ಯಾಕ್ ಮಾಡಲಾದ ಹಲವು ಮಸಾಲೆ ಪದಾರ್ಥಗಳಲ್ಲಿ ಇಟಿಒ ಪತ್ತೆಯಾಗಿದೆ. ಹೀಗಾಗಿ ದೇಶಿ ಮಾರುಕಟ್ಟೆಯಲ್ಲಿ ಇಟಿಒ ಬಳಕೆಗೆ ಸಂಪೂರ್ಣ ನಿಷೇಧ ಅಥವಾ ಕಠಿಣ ನಿಯಮಾವಳಿ ರೂಪಿಸುವಂತೆ ಕೇಂದ್ರಕ್ಕೆ ರಾಜ್ಯ ಸರ್ಕಾರ ಮನವಿ ಮಾಡಿತ್ತು. ಇದರ ಬೆನ್ನಲ್ಲೇ ಕೇಂದ್ರ ಸರ್ಕಾರ ಉನ್ನತ ಮಟ್ಟದ ತಜ್ಞರ ಸಮಿತಿಯನ್ನು ರಚಿಸಿದೆ. ರಾಜ್ಯಾದ್ಯಂತ ಹೋಟೆಲ್‌ಗಳು, ರೆಸ್ಟೋರೆಂಟ್‌ಗಳು ಹಾಗೂ ಮಾರುಕಟ್ಟೆಗಳಲ್ಲಿ ರಾಜ್ಯ ಆರೋಗ್ಯ ಇಲಾಖೆಯು ಆಹಾರ ಸುರಕ್ಷತಾ ತಪಾಸಣೆ ನಡೆಸುತ್ತಿವೆ. ಈ ವೇಳೆ ಭಾರಿ ಪ್ರಮಾಣದ ಕಳಪೆ ಮತ್ತು ಅವಧಿ ಮೀರಿದ ಆಹಾರ ಪದಾರ್ಥಗಳನ್ನು ವಶಕ್ಕೆ ಪಡೆಯಲಾಗಿದೆ. ಜೊತೆಗೆ ಈ ವೇಳೆ ಪ್ಯಾಕ್ ಮಾಡಲಾದ ಖಾರದ ಪುಡಿ, ಸಾಂಬಾರ್ ಪುಡಿ ಹಾಗೂ ಗರಂ ಮಸಾಲಾಗಳಲ್ಲಿ ನಿಗದಿತ ಪ್ರಮಾಣಕ್ಕಿಂತ ಹೆಚ್ಚಿನ ರಾಸಾಯನಿಕ ಮತ್ತು ಕೃತಕ ಬಣ್ಣ ಬಳಸಿರುವುದು ಪತ್ತೆಯಾಗಿತ್ತು. ಇದರ ಬೆನ್ನಲ್ಲೇ ರಾಷ್ಟ್ರಮಟ್ಟದಲ್ಲೂ ಜನರಿಗೆ ಉತ್ತಮ ಗುಣಮಟ್ಟದ ಆಹಾರ ಪದಾರ್ಥಗಳು…

Read More

ಕಾಸರಗೋಡು : ಪರೀಕ್ಷೆಗೆ ತೆರಳುವ ಮುನ್ನ ಮನೆಯ ಬಳಿಯ ಕೊಳದಲ್ಲಿ ಸ್ನಾನ ಮಾಡಲು ತೆರಳಿದ್ದ ಪ್ಲಸ್ ಒನ್ ವಿದ್ಯಾರ್ಥಿಯೊಬ್ಬ ನೀರಿನಲ್ಲಿ ಮುಳುಗಿ ದಾರುಣವಾಗಿ ಸಾವನ್ನಪ್ಪಿದ ಘಟನೆ ಕಾಸರಗೋಡಿನ ವಿದ್ಯಾ ನಗರ ಸಮೀಪದ ಉದಯಗಿರಿಯಲ್ಲಿ ಸೋಮವಾರ ಸಂಭವಿಸಿದೆ. ವಿದ್ಯಾನಗರ ಚಾಲಾ ಮೂಲದ, ಪ್ರಸ್ತುತ ಉದಯಗಿರಿ ನಿವಾಸಿ ಅಬೂಬಕರ್ ಅವರ ಪುತ್ರ ಮುಹಮ್ಮದ್ ಶಾಹಿಲ್ (15) ಮೃತಪಟ್ಟ ದುರದೃಷ್ಟಕರ ವಿದ್ಯಾರ್ಥಿ. ಶಾಹಿಲ್ ನಾಯನ್ಮಾರ್ಮೂಲದ ತನ್ಬಿಹುಲ್ ಹೈಯರ್ ಸೆಕೆಂಡರಿ ಶಾಲೆಯ ಪ್ಲಸ್ ಒನ್ ವಿದ್ಯಾರ್ಥಿಯಾಗಿದ್ದ. ಸೋಮವಾರ (ಆಗಸ್ಟ್ 17) ಬೆಳಿಗ್ಗೆ ಶಾಲೆಗೆ ತೆರಳಿ ಪರೀಕ್ಷೆ ಬರೆಯಲು ಸಿದ್ಧತೆ ನಡೆಸುತ್ತಿದ್ದ ಶಾಹಿಲ್, ಮನೆಯ ಸಮೀಪವಿರುವ ನೆಲಕ್ಕಲ್ ಮಹಿಳಾ ಹಾಸ್ಟೆಲ್ ಬಳಿಯ ಕೊಳಕ್ಕೆ ಸ್ನಾನ ಮಾಡಲು ತೆರಳಿದ್ದ. ಈ ವೇಳೆ ಸ್ನಾನ ಮಾಡುತ್ತಿದ್ದಾಗ ಇದ್ದಕ್ಕಿದ್ದಂತೆ ಆಕಸ್ಮಿಕವಾಗಿ ಕೊಳದ ಆಳದ ನೀರಿಗೆ ಬಿದ್ದು ಮುಳುಗಿದ್ದಾನೆ. ಇದನ್ನು ಕಂಡ ಆತನ ಜೊತೆಯಲ್ಲಿದ್ದ ಇಬ್ಬರು ಒಡಹುಟ್ಟಿದವರು ತಕ್ಷಣವೇ ಕೂಗಾಡಿದ್ದಾರೆ. ಒಡಹುಟ್ಟಿದವರ ಕಿರುಚಾಟ ಕೇಳಿ ಸ್ಥಳಕ್ಕೆ ಓಡಿಬಂದ ನೆರೆಹೊರೆಯವರು ರಕ್ಷಣೆಗೆ ಯತ್ನಿಸಿದರೂ, ಕೊಳದಲ್ಲಿ ನೀರು…

Read More

ಚೆನ್ನೈ: ಚಾಮರಾಜನಗರ ಕಾವೇರಿ ವನ್ಯಜೀವಿ ಧಾಮದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ನಡೆಸಿದ ಗುಂಡಿನ ಚಕಮಕಿಯಲ್ಲಿ ತಮಿಳು ಮೂಲದ ಮೂವರು ಮೃತಪಟ್ಟ ಘಟನೆಯನ್ನು ತಮಿಳುನಾಡು ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ತೀವ್ರವಾಗಿ ಖಂಡಿಸಿದ್ದಾರೆ. ಈ ಘಟನೆಯನ್ನು “ಹತ್ಯಾಕಾಂಡ” ಎಂದು ಕರೆದಿರುವ ಅವರು, ಪ್ರಕರಣದ ಕುರಿತು ಉನ್ನತ ಮಟ್ಟದ ನಿಷ್ಪಕ್ಷಪಾತ ತನಿಖೆಗೆ ಆಗ್ರಹಿಸಿದ್ದಾರೆ. “ಕರ್ನಾಟಕದ ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ನಿವಾಸಿಗಳಾದ ಆಂಥೋನಿ ಸಾಮಿ, ಜಾನ್ ರೋಸ್ ಪೀಟರ್ ಹಾಗೂ ಕುಮಾರ್ ಅವರನ್ನು ಆಗಸ್ಟ್ 15ರ ಮುಂಜಾನೆ ಕಾವೇರಿ ವನ್ಯಜೀವಿ ಧಾಮದಲ್ಲಿ ಅರಣ್ಯ ಸಿಬ್ಬಂದಿ ಗುಂಡಿಕ್ಕಿ ಕೊಂದು ಹಾಕಿರುವುದು ತೀವ್ರ ಹೃದಯವಿದ್ರಾವಕ. ಈ ದೌರ್ಜನ್ಯವನ್ನು ನಾನು ಬಲವಾಗಿ ಖಂಡಿಸುತ್ತೇನೆ” ಎಂದು ಹೇಳಿದ್ದಾರೆ. “ಕರ್ನಾಟಕ ಅರಣ್ಯ ಇಲಾಖೆ ನೀಡುತ್ತಿರುವ ವಿವರಣೆಗಳನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಘಟನೆಯ ನೈಜತೆ ಹೊರಬರಲು ಉನ್ನತ ಮಟ್ಟದ ತನಿಖಾ ಸಮಿತಿ ರಚಿಸಬೇಕು ಹಾಗೂ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಯಾಗಬೇಕು” ಎಂದು ಒತ್ತಾಯಿಸಿದ್ದಾರೆ. ಮೃತರ ಕುಟುಂಬಗಳಿಗೆ ಸೂಕ್ತ ಪರಿಹಾರ ಒದಗಿಸಬೇಕು ಮತ್ತು ಇಂತಹ ಘಟನೆಗಳು ಭವಿಷ್ಯದಲ್ಲಿ ಮರುಕಳಿಸದಂತೆ…

Read More