Author: admin

ತ್ರಿಶೂರ್ : ತನ್ನ ಬಗ್ಗೆ ಕೆಟ್ಟದಾಗಿ ಮಾತನಾಡುತ್ತಿದ್ದಾರೆಂಬ ಅನುಮಾನದಿಂದ 46 ವರ್ಷದ ವ್ಯಕ್ತಿಯೊಬ್ಬ ತನ್ನ ಹೆತ್ತ ತಾಯಿಯನ್ನೇ ಚಾಕುವಿನಿಂದ ಇರಿದು ಭೀಕರವಾಗಿ ಕೊಲೆ ಮಾಡಿರುವ ಘಟನೆ ಕೇರಳದ ತ್ರಿಶೂರ್ ಜಿಲ್ಲೆಯ ಪವರಟ್ಟಿಯಲ್ಲಿ ಸೋಮವಾರ ನಡೆದಿದೆ. ಕೊಲೆಯಾದ ದುರ್ದೈವಿಯನ್ನು ಡಾಲಿ (69) ಎಂದು ಗುರುತಿಸಲಾಗಿದ್ದು, ಘಟನೆಗೆ ಸಂಬಂಧಿಸಿದಂತೆ ಆಕೆಯ ಮಗ ಬೆನ್ಹಾರ್ (46) ಎಂಬಾತನನ್ನು ಪವರಟ್ಟಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ಸೋಮವಾರ ಬೆಳಿಗ್ಗೆ 10.30 ರ ಸುಮಾರಿಗೆ ಡಾಲಿ ಅವರು ತಮ್ಮ ಮನೆಯ ವರಾಂಡಾದಲ್ಲಿ ಗುತ್ತಿಗೆ ಕೆಲಸಗಾರ ಡೇವಿಸ್ (57) ಅವರೊಂದಿಗೆ ಮನೆ ನವೀಕರಣದ ಬಗ್ಗೆ ಮಾತನಾಡುತ್ತಿದ್ದರು. ಈ ವೇಳೆ ಮನೆಯಿಂದ ಹೊರಬಂದ ಬೆನ್ಹಾರ್, ಇದ್ದಕ್ಕಿದ್ದಂತೆ ತಾಯಿಯ ಕುತ್ತಿಗೆ ಹಿಡಿದು ಚಾಕುವಿನಿಂದ ಇರಿದಿದ್ದಾನೆ. ಪ್ರಾಣಭಯದಿಂದ ಓಡಲು ಯತ್ನಿಸಿದ ಡಾಲಿ ನೆಲಕ್ಕೆ ಬಿದ್ದಾಗ, ಆರೋಪಿ ಮತ್ತೊಮ್ಮೆ ಇರಿದಿದ್ದಾನೆ. ಬಳಿಕ ಮನೆಯೊಳಗೆ ಹೋಗಿ ಮತ್ತೊಂದು ಆಯುಧವನ್ನು ತಂದು ಪದೇ ಪದೇ ತಾಯಿಗೆ ಇರಿದು ಗಾಯಗೊಳಿಸಿದ್ದಾನೆ. ತಡೆಯಲು ಬಂದ ಕೆಲಸಗಾರ ಡೇವಿಸ್ ಅವರ ಕೈಗೂ ಚಾಕು ಇರಿದು…

Read More

ಮಂಗಳೂರು: ಸುಮಾರು 15 ವರ್ಷಗಳಿಂದ ನ್ಯಾಯಾಲಯದ ಎಲ್‌ಪಿಸಿ (LPC) ವಾರೆಂಟ್‌ಗೆ ತಲೆಮರೆಸಿಕೊಂಡಿದ್ದ ಆರೋಪಿತೆಯನ್ನು ಮಹಿಳಾ ಪೊಲೀಸ್ ಠಾಣೆಯ ಪೊಲೀಸರು ಪತ್ತೆಹಚ್ಚಿ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಮಂಗಳೂರು ನಗರ ಮಹಿಳಾ ಪೊಲೀಸ್ ಠಾಣೆಯಲ್ಲಿ 2011ರಲ್ಲಿ ಅನೈತಿಕ ಮಾನವ ಸಾಗಣೆ ತಡೆ ಕಾಯ್ದೆ ಯ ವಿವಿಧ ಸೆಕ್ಷನ್‌ಗಳಡಿ ಪ್ರಕರಣ ದಾಖಲಾಗಿತ್ತು. ಈ ಪ್ರಕರಣವು ಮಂಗಳೂರಿನ 3ನೇ ಜೆ.ಎಂ.ಎಫ್.ಸಿ. ನ್ಯಾಯಾಲಯದಲ್ಲಿ SPLIT CC ನಂ. 02/2014ರಂತೆ ವಿಚಾರಣೆಯಾಗಿ, LPC ನಂ. 10/2019ರಂತೆ ದೀರ್ಘಕಾಲದಿಂದ ಬಾಕಿ ಉಳಿದಿತ್ತು. ಪ್ರಕರಣದ ಎಲ್‌ಪಿಸಿ ವಾರೆಂಟ್ ಆರೋಪಿತೆಯಾಗಿದ್ದ ಆಯಿಷಾ (36), ಪತಿ ಹಸನಬ್ಬ, ಬಂಗ್ಲಗುಡ್ಡೆ ಮನೆ, ಗುರುಪುರ, ಮಂಗಳೂರು ಎಂಬ ವಿಳಾಸವನ್ನು ನೀಡಿದ್ದರು. ಪ್ರಕರಣ ದಾಖಲಾಗಿ ದಸ್ತಗಿರಿಯಾದ ಸಂದರ್ಭದಲ್ಲಿ ತಮ್ಮ ನಿಜವಾದ ಹೆಸರು, ಪತಿಯ ಹೆಸರು ಹಾಗೂ ವಿಳಾಸವನ್ನು ಮರೆಮಾಚಿ ಸುಳ್ಳು ಮಾಹಿತಿ ನೀಡಿದ್ದರೆಂದು ಪೊಲೀಸರು ತಿಳಿಸಿದ್ದಾರೆ. ನಂತರ ಆರೋಪಿತೆಯ ನಿಜವಾದ ಹೆಸರು ಸೆಫಿಯಾ (53), ಪತಿ ದಿವಂಗತ ಅಬೂಬುಕ್ಕರ್, ಹಂಡೇಲ ಮಸೀದಿ ಬಳಿ, ಪುತ್ತಿಗೆ ಗ್ರಾಮ, ಬಡಗಮಿಜಾರು, ಮಿಜಾರು, ಮೂಡಬಿದರೆ…

Read More

ಮಂಗಳೂರು: ನಗರದ ಕೋಡಿಕ್ಕಲ್‌ನಲ್ಲಿ ಮನೆಯ ಎದುರು ನಿಲ್ಲಿಸಿದ್ದ ಹೊಂಡಾ ಡಿಯೋ ಸ್ಕೂಟರ್ ಕಳವು ಮಾಡಿದ್ದ ಆರೋಪಿಯನ್ನು ಉರ್ವಾ ಪೊಲೀಸರು ಬಂಧಿಸಿ, ಕಳವಾಗಿದ್ದ ದ್ವಿಚಕ್ರ ವಾಹನವನ್ನು ವಶಕ್ಕೆ ಪಡೆದಿದ್ದಾರೆ. ಬಂಧಿತ ಆರೋಪಿಯನ್ನು ಉಳ್ಳಾಲದ ಕೋಡಿ ನಿವಾಸಿ ಮಹಮ್ಮದ್ ಫೈಜಲ್ ಅಲಿಯಾಸ್ ತೋಟ ಫೈಜಲ್ (40) ಎಂದು ಗುರುತಿಸಲಾಗಿದೆ. ಕೋಡಿಕ್ಕಲ್‌ನಲ್ಲಿ ಮನೆಯೊಂದರ ಎದುರು ಪಾರ್ಕ್ ಮಾಡಲಾಗಿದ್ದ KA-19-EB-2226 ನೋಂದಣಿ ಸಂಖ್ಯೆಯ ಹೊಂಡಾ ಡಿಯೋ ಸ್ಕೂಟರ್ ಕಳವಾಗಿರುವ ಬಗ್ಗೆ ಜುಲೈ 24ರಂದು ಉರ್ವಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಭಾರತೀಯ ನ್ಯಾಯ ಸಂಹಿತೆ-2023ರ ಕಲಂ 303(2)ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ಕೈಗೊಂಡಿದ್ದರು. ತನಿಖೆಯ ವೇಳೆ ಪೊಲೀಸರು ಸುತ್ತಮುತ್ತಲಿನ ಸಿಸಿಟಿವಿ ಕ್ಯಾಮೆರಾಗಳ ದೃಶ್ಯಗಳನ್ನು ಪರಿಶೀಲಿಸಿ, ಆರೋಪಿಯ ಚಹರೆಯನ್ನು ಗುರುತಿಸಿದ್ದರು. ಬಳಿಕ ಬಾತ್ಮೀದಾರರಿಂದ ಮಾಹಿತಿ ಸಂಗ್ರಹಿಸಿ ಆರೋಪಿಯ ಜಾಡು ಪತ್ತೆಹಚ್ಚಿದ ಪೊಲೀಸರು, ಆಗಸ್ಟ್ 18ರಂದು ಆರೋಪಿಯನ್ನು ಬಂಧಿಸಿ ಕಳವಾಗಿದ್ದ ಸ್ಕೂಟರ್‌ನ್ನೂ ಪತ್ತೆಹಚ್ಚಿದ್ದಾರೆ. ಪೊಲೀಸ್ ಮಾಹಿತಿಯ ಪ್ರಕಾರ, ಬಂಧಿತ ಆರೋಪಿಯ ವಿರುದ್ಧ ಕರ್ನಾಟಕ ಹಾಗೂ ಕೇರಳದ ವಿವಿಧ…

Read More

ವಿಟ್ಲ : ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಅಪ್ರಾಪ್ತ ಬಾಲಕನಿಗೆ ಅನುಚಿತವಾಗಿ ವರ್ತಿಸಿ, ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ವಿಟ್ಲ ಠಾಣೆ ಪೊಲೀಸರು ಕೊಂಡಗಾಯಿ ನಿವಾಸಿ ಉಮೇಶ್ (53) ಎಂಬಾತನನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೊಳಪಡಿಸಿದ್ದಾರೆ. ಆಗಸ್ಟ್ 15 ರಂದು ಸಂತ್ರಸ್ತ ಅಪ್ರಾಪ್ತ ಬಾಲಕನು ವಿಟ್ಲ ಠಾಣಾ ವ್ಯಾಪ್ತಿಯ ಅಳಿಕೆಯಿಂದ ಪುತ್ತೂರು ಕಡೆಗೆ ಬಸ್ಸಿನಲ್ಲಿ ಬರುತ್ತಿದ್ದಾಗ, ವಿಟ್ಲ ಖಾಸಗಿ ಬಸ್ ನಿಲ್ದಾಣದಲ್ಲಿ ಬಸ್ಸನ್ನೇರಿದ ಅಪರಿಚಿತ ವ್ಯಕ್ತಿ (ಉಮೇಶ್) ಬಾಲಕನ ಪಕ್ಕದಲ್ಲಿ ಕುಳಿತು ಅನುಚಿತವಾಗಿ ವರ್ತಿಸಿದ್ದ. ಬಳಿಕ ಬಾಲಕ ತನ್ನ ಮನೆಗೆ ತೆರಳಿದಾಗ, ಆತನನ್ನು ಬೆನ್ನಟ್ಟಿಕೊಂಡು ಮನೆಗೆ ಬಂದ ಆರೋಪಿಯು ಬಾಲಕನಿಗೆ ಲೈಂಗಿಕ ಕಿರುಕುಳ ನೀಡಿ, ಯಾರಿಗಾದರೂ ವಿಷಯ ತಿಳಿಸಿದರೆ ತೊಂದರೆ ಕೊಡುವುದಾಗಿ ಬೆದರಿಕೆಯೊಡ್ಡಿದ್ದ. ಈ ಸಂಬಂಧ ಬಾಲಕ ಹಾಗೂ ಆತನ ಕುಟುಂಬಸ್ಥರು ನೀಡಿದ ದೂರಿನಂತೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 179/2026 ರಲ್ಲಿ ಪೋಕ್ಸೋ ಕಾಯ್ದೆ 2012 ರ ಕಲಂ 4(2) ಹಾಗೂ ಬಿಎನ್‌ಎಸ್ (BNS) 2023 ರ ಕಲಂ 351(2) ರಡಿಯಲ್ಲಿ…

Read More

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಮಾಫಿ ಸಾಕ್ಷಿಯಾಗಲು ಪ್ರದೋಷ್ ಸಲ್ಲಿಸಿರುವ ಅರ್ಜಿಯ ವಿಚಾರಣೆ ನಡೆದಿದೆ. 59ನೇ ಸಿಸಿಹೆಚ್ ನ್ಯಾಯಾಲಯದಲ್ಲಿ ವಿಚಾರಣೆ ನಡೆದಿದ್ದು, ಜಡ್ಜ್ ಸುಜಾತಾ ಮಡಿವಾಳಪ್ಪ ಸಾಂಬ್ರಾಣಿ ಅವರು 14ನೇ ಆರೋಪಿ ಪ್ರದೋಷ್​ಗೆ ಹಲವು ಪ್ರಶ್ನೆಗಳನ್ನು ಕೇಳಿದ್ದಾರೆ. ಮಾಫಿ ಸಾಕ್ಷಿಯ ಅರ್ಜಿಯನ್ನು ಓದಿ ಪ್ರದೋಷ್  ಪ್ರತಿಕ್ರಿಯಿಸಿದ್ದಾನೆ. ನೀವು ಸ್ವಯಂಪ್ರೇರಿತವಾಗಿ ಈ ಅರ್ಜಿ ಸಲ್ಲಿಸಿದ್ದೀರಾ ಎಂದು ಕೇಳಿದ್ದಕ್ಕೆ ಹೌದು ಎಂದು ಪ್ರದೋಷ್ ಉತ್ತರಿಸಿದ್ದಾನೆ. ಒಂದು ವೇಳೆ ಪ್ರದೋಷ್ ಮಾಫಿಸಾಕ್ಷಿಯಾಗಲು ಕೋರ್ಟ್ ಅವಕಾಶ ನೀಡಿದರೆ ದರ್ಶನ್  ಅವರಿಗೆ ಸಂಕಷ್ಟ ಹೆಚ್ಚಲಿದೆ. ‘ಈ ಅರ್ಜಿಯನ್ನು ಓದಿದ ಬಳಿಕ ಸಹಿ ಮಾಡಿದ್ದೀರಾ? ಅರ್ಜಿಯ ಪರಿಣಾಮದ ಬಗ್ಗೆ ವಕೀಲರು ಮಾಹಿತಿ ನೀಡಿದ್ದಾರಾ?’ ಎಂದು ಜಡ್ಜ್ ಸುಜಾತಾ ಮಡಿವಾಳಪ್ಪ ಸಾಂಬ್ರಾಣಿ ಅವರು ಪ್ರಶ್ನಿಸಿದರು. ‘ಸ್ವಯಂಪ್ರೇರಿತವಾಗಿ ಅರ್ಜಿ ಸಲ್ಲಿಸಿದ್ದೇನೆ, ಸಹಿ ಮಾಡಿದ್ದೇನೆ. ಅರ್ಜಿಯ ಪರಿಣಾಮದ ಬಗ್ಗೆ ವಕೀಲರು ಮಾಹಿತಿ ನೀಡಿದ್ದಾರೆ’ ಎಂದು ಪ್ರದೋಷ್ ಉತ್ತರ ನೀಡಿದ್ದಾನೆ. ‘ನಿಮ್ಮ ಮಾಫಿ ಸಾಕ್ಷಿ ಒಪ್ಪದಿದ್ದರೆ ನೀವು ಜೈಲಿನಲ್ಲೇ ಇರಬೇಕಾಗಲಿದೆ. ಈ ಬಗ್ಗೆ ನಿಮಗೆ ಮಾಹಿತಿ ಇದೆಯಾ?’…

Read More

ಪಾಟ್ನಾ: ನೀಟ್ ಪರೀಕ್ಷಾ ಅಕ್ರಮಗಳ ವಿರುದ್ಧ ಬಿಹಾರದ ಸಿವಾನ್ ಜಿಲ್ಲೆಯಲ್ಲಿ (Siwan, Bihar) ಜುಲೈ ತಿಂಗಳಲ್ಲಿ ನಡೆದ ವಿದ್ಯಾರ್ಥಿಗಳ ಪ್ರತಿಭಟನೆಯ (Students Protest on NEET) ವೇಳೆ ಪೊಲೀಸರು ಎಕೆ-47 ರೈಫಲ್ ಬಳಸಿದ ವಿವಾದದ ಹಿನ್ನೆಲೆಯಲ್ಲಿ, ಸಿವಾನ್ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿ (SP) ಪುರನ್ ಕುಮಾರ್ ಝಾ ಅವರನ್ನು ಹುದ್ದೆಯಿಂದ ತೆಗೆದುಹಾಕಲಾಗಿದೆ. ಅವರನ್ನು ವರ್ಗಾವಣೆ ಮಾಡಲಾಗಿದೆ. ಸದ್ಯಕ್ಕೆ ಅವರಿಗೆ ಯಾವುದೇ ಹೊಸ ಹುದ್ದೆಯನ್ನು ನೀಡಿಲ್ಲ. ಎಕೆ-47 ರೈಫಲ್ ಬಳಸಿದ್ದ ಕಾನ್ಸ್​ಟೆಬಲ್ ಅಭಿಷೇಕ್ ಕುಮಾರ್ ಅವರನ್ನು ಈ ಹಿಂದೆಯೇ ಅಮಾನತುಗೊಳಿಸಲಾಗಿದೆ. ಈಗ ಉನ್ನತಾಧಿಕಾರಿಯ ಸರದಿಯಾಗಿದೆ. ಜುಲೈ 25 ರಂದು ಸಿವಾನ್‌ನ ಜೆಪಿ ಚೌಕ್ ಬಳಿ ನಡೆದ ವಿದ್ಯಾರ್ಥಿ ಪ್ರತಿಭಟನೆಯ ಸಂದರ್ಭದಲ್ಲಿ ಈ ಘಟನೆ ನಡೆದಿತ್ತು. ಪ್ರತಿಭಟನಾಕಾರರ ಗುಂಪಿನ ನಡುವೆ ಸಿಲುಕಿದ್ದ ಕಾನ್‌ಸ್ಟೆಬಲ್ ಅಭಿಷೇಕ್ ಕುಮಾರ್, ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಎಕೆ-47 ನಿಂದ ಗಾಳಿಯಲ್ಲಿ ನಾಲ್ಕು ಸುತ್ತು ಗುಂಡು ಹಾರಿಸಿದ್ದರು ಎನ್ನಲಾಗಿದೆ. ಈ ಘಟನೆಯು ಭಾರೀ ವಿವಾದಕ್ಕೆ ಕಾರಣವಾಗಿತ್ತು. ಸರ್ಕಾರದ ಸ್ಪಷ್ಟನೆ: ಈ ಘಟನೆಯಲ್ಲಿ…

Read More

ಚಾಮರಾಜನಗರ: ಅರಣ್ಯ ಇಲಾಖೆ ಸಿಬ್ಬಂದಿ ಗುಂಡೇಟಿಗೆ ಹನೂರಿನಲ್ಲಿ ಮೂವರು ಬಲಿ ವೇಳೆ ಸ್ಥಳದಲ್ಲಿದ್ದರೂ ಬಚಾವಾಗಿದ್ದ ಮಹಿಮದಾಸ್ ಅಜ್ಞಾತ ಸ್ಥಳದಿಂದ ವಿಡಿಯೋ ಬಿಡುಗಡೆ ಮಾಡಿದ್ದಾರೆ. ಅರಣ್ಯ ಸಿಬ್ಬಂದಿ ಶೂಟೌಟ್ ಮಾಡುವೆ ವೇಳೆ ಪರಾರಿಯಾಗಿ ಆಸ್ಪತ್ರೆ ಸೇರಿದ್ದೆ, ಈಗ ಹೊರ ಬರಲು ಭಯ ಆಗ್ತಿದೆ. ಕೇಸ್​ ಬಗ್ಗೆ ಪೊಲೀಸರು, ಅರಣ್ಯ ಇಲಾಖೆ ತನಿಖೆ ಮಾಡ್ತಿದ್ದಾರೆ. ವಿಚಾರಣೆಗೆ ಬರುವಂತೆ ಹೇಳ್ತಿದ್ದಾರೆ. ಆದ್ರೆ ನನಗೆ ಪೊಲೀಸ್ ಅಂದ್ರೆ ಭಯ. ಆ ಕಾರಣದಿಂದ ಆಚೆ ಬರಲು ಹಿಂದೇಟು ಹಾಕುತ್ತಿರುವೆ ಎಂದವರು ತಿಳಿಸಿದ್ದಾರೆ.

Read More

ಕೇರಳ : ಪತಿಯ ಅಗಲಿಕೆಯ ದುಃಖ ತಾಳಲಾರದೆ, ಅವರ ಅಂತ್ಯಕ್ರಿಯೆಯ ವೇಳೆ ಭಾವುಕರಾಗಿ ಕೊನೆಯ ಮುತ್ತು ನೀಡಿದ ಪತ್ನಿ ಸ್ಥಳದಲ್ಲೇ ಕುಸಿದು ಬಿದ್ದು ಸಾವನ್ನಪ್ಪಿರುವ ಅತ್ಯಂತ ಕರುಣಾ ಜನಕ ಘಟನೆ ಕೇರಳದ ಪಾಲಾದಲ್ಲಿ ನಡೆದಿದೆ. ಪಾಲಾದ ಪುಥೆನ್‌ಪಲ್ಲಿಕುನ್ನು ವಝಾಯಿಲ್ ನಿವಾಸಿ ಕುರಿಯನ್ ಜೋಸೆಫ್ (ಕುರ್ಯಾಚನ್ – 73) ಅವರ ಪತ್ನಿ ಶಿರ್ಲಿ ಕುರಿಯನ್ (71) ನಿಧನರಾದ ದುರ್ದೈವಿ. ಕೇರಳ ಕಾಂಗ್ರೆಸ್ ಸ್ಟೀರಿಂಗ್ ಸಮಿತಿ ಸದಸ್ಯರೂ ಹಾಗೂ ಪಾಲಾದ ಹಿರಿಯ ಉದ್ಯಮಿಯೂ ಆಗಿದ್ದ ಕುರಿಯನ್ ಜೋಸೆಫ್ ಅವರು ಆಗಸ್ಟ್ 15 ರಂದು ಮಧ್ಯಾಹ್ನ ನಿಧನರಾಗಿದ್ದರು. ಅವರ ಅಂತ್ಯಕ್ರಿಯೆಯ ಮೊದಲ ಭಾಗದ ಧಾರ್ಮಿಕ ವಿಧಿವಿಧಾನಗಳು ನಿನ್ನೆ ಬೆಳಿಗ್ಗೆ 11 ಗಂಟೆಗೆ ಅವರ ನಿವಾಸದಲ್ಲಿ ಪೂರ್ಣಗೊಂಡಿದ್ದವು. ಪತಿಯ ಭೌತಿಕ ಶರೀರವನ್ನು ಚರ್ಚ್‌ಗೆ ಕೊಂಡೊಯ್ಯಲು ಸಿದ್ಧತೆ ನಡೆಸುತ್ತಿದ್ದಾಗ, ಪತಿಗೆ ಕೊನೆಯ ಮುತ್ತು ನೀಡಿದ ಶಿರ್ಲಿ ಅವರು ತೀವ್ರ ಆಘಾತದಿಂದ ಸ್ಥಳದಲ್ಲೇ ಕುಸಿದು ಬಿದ್ದರು. ತಕ್ಷಣವೇ ಅವರನ್ನು ಪಾಲಾದ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ.…

Read More

ನವದೆಹಲಿ:  ಜೆಡಿಎಸ್ ವಿಧಾನಪರಿಷತ್ ಸದಸ್ಯ ಸೂರಜ್ ರೇವಣ್ಣ ವಿರುದ್ಧದ ಅಸಹಜ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಪ್ರಮುಖ ತಿರುವು ಸಿಕ್ಕಿದ್ದು, ಪ್ರಕರಣದ ಎರಡನೇ ಆರೋಪಿ (A2) ಶಿವಕುಮಾರ್ ಸಲ್ಲಿಸಿದ್ದ ‘ಮಾಫಿ ಸಾಕ್ಷಿ’ ಅರ್ಜಿಯನ್ನು ಬೆಂಗಳೂರಿನ 42ನೇ ಎಸಿಜೆಎಂ ಕೋರ್ಟ್ ವಜಾಗೊಳಿಸಿದೆ. ಮಾಫಿ ಸಾಕ್ಷಿಯಾಗಲು ಅನುಮತಿ ಕೋರಿ ಎ2 ಶಿವಕುಮಾರ್ ಸಲ್ಲಿಸಿದ್ದ ಮನವಿಯನ್ನು ತೀವ್ರವಾಗಿ ವಿರೋಧಿಸಿದ್ದ ಸೂರಜ್ ರೇವಣ್ಣ ಪರ ವಕೀಲ ಗಂಗಾಧರ ಶೆಟ್ಟಿ ಅವರ ವಾದವನ್ನು ಪುರಸ್ಕರಿಸಿದ ನ್ಯಾಯಾಲಯವು ಈ ಮಹತ್ವದ ಆದೇಶ ನೀಡಿದೆ. ಎ2 ಶಿವಕುಮಾರ್ ಕೇವಲ ಸಂತ್ರಸ್ತನಿಗೆ ಬೆದರಿಕೆ ಹಾಕಿದ ಆರೋಪದ ಅಡಿಯಲ್ಲಷ್ಟೇ ಭಾಗಿಯಾಗಿದ್ದಾನೆ. ಐಪಿಸಿ ಸೆಕ್ಷನ್ 377 ರ ಅಡಿಯ ಅಸಹಜ ಲೈಂಗಿಕ ದೌರ್ಜನ್ಯ ನಡೆದಿದೆ ಎನ್ನಲಾದ ಘಟನೆಯ ಸಾಕ್ಷಿ ಈತನಲ್ಲ. ಆದ್ದರಿಂದ ಈತ ಪ್ರಕರಣದ ಕುರಿತು ಪ್ರತ್ಯಕ್ಷ ಅಥವಾ ಮಾಫಿ ಸಾಕ್ಷ್ಯ ನೀಡಲು ಸಾಧ್ಯವಿಲ್ಲ ಎಂದು ಸೂರಜ್ ರೇವಣ್ಣ ಪರ ವಕೀಲ ಗಂಗಾಧರ ಶೆಟ್ಟಿ ಸುದೀರ್ಘ ವಾದ ಮಂಡಿಸಿದರು. ಪ್ರಕರಣದ ಸ್ವಭಾವ ಹಾಗೂ ಲೈಂಗಿಕ ದೌರ್ಜನ್ಯದ ಆರೋಪದಲ್ಲಿ…

Read More

ಭೋಪಾಲ್: ಮಾನವ ಜನನಾಂಗಕ್ಕೆ ವಿದೇಶಗಳಲ್ಲಿ ₹1.20 ಕೋಟಿ ಬೆಲೆಯಿದೆ ಎಂಬ ಸಾಮಾಜಿಕ ಮಾಧ್ಯಮದ ನಕಲಿ ರೀಲ್ ನಂಬಿದ ಐವರ ಗ್ಯಾಂಗ್, 17 ವರ್ಷದ ಬಾಲಕನೊಬ್ಬನನ್ನು ಭೀಕರವಾಗಿ ಹತ್ಯೆ ಮಾಡಿ ಆತನ ಜನನಾಂಗಗಳನ್ನು ತೆಗೆದು ಎಸೆದಿರುವ ಆಘಾತಕಾರಿ ಘಟನೆ ಮಧ್ಯಪ್ರದೇಶದ ಭೋಪಾಲ್‌ನಲ್ಲಿ ನಡೆದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯ ಸೂತ್ರಧಾರಿ, ಬಿಬಿಎ ದ್ವಿತೀಯ ವರ್ಷದ ವಿದ್ಯಾರ್ಥಿ ಸೋಹಾಬ್ ಖಾನ್ (20), ಆಮಿರ್ ಖುರೇಷಿ (18) ಹಾಗೂ ಮೂವರು ಅಪ್ರಾಪ್ತ ವಯಸ್ಕರು ಸೇರಿದಂತೆ ಐವರನ್ನು ಪೊಲೀಸರು ಬಂಧಿಸಿದ್ದಾರೆ. ಬೀದಿಗಳಲ್ಲಿ ಪೆನ್ನು ಹಾಗೂ ಕೀಚೈನ್‌ಗಳನ್ನು ಮಾರಾಟ ಮಾಡುತ್ತಿದ್ದ 17 ವರ್ಷದ ಯುವಕ ಕೊಲೆಯಾದ ದುರ್ದೈವಿ. ಆರೋಪಿ ಸೋಹಾಬ್ ಖಾನ್ ತಾನು ನಕಲಿ ವೈದ್ಯನಂತೆ ನಟಿಸಿ ಈ ಕೊಲೆಗೆ ಸಂಚು ರೂಪಿಸಿದ್ದ. 15 ವರ್ಷ ಮೇಲ್ಪಟ್ಟ ಬಾಲಕನನ್ನು ಆಯ್ಕೆ ಮಾಡುವಂತೆ ತನ್ನ ಸಹಚರರಿಗೆ ಸೂಚಿಸಿದ್ದ. ಆಗಸ್ಟ್ 6 ರಂದು ಬಾಲಕನಿಗೆ ₹100 ನೀಡುವುದಾಗಿ ನಂಬಿಸಿ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಚಾಕುವಿನಿಂದ ಇರಿದು ಕೊಲೆ ಮಾಡಲಾಗಿತ್ತು. ಬಳಿಕ ಸೋಹಾಬ್ ವೀಡಿಯೊ…

Read More