Author: admin
ಬೆಂಗಳೂರು: ಹಲವು ಸುತ್ತಿನ ಸಭೆಗಳು ಹಾಗೂ ಹೈಕಮಾಂಡ್ ನಾಯಕರೊಂದಿಗೆ ಚರ್ಚೆ ನಡೆಸಿದ ಬಳಿಕ, ಡಿ.ಕೆ. ಶಿವಕುಮಾರ್ ಸಂಪುಟದಲ್ಲಿ ಇತ್ತೀಚೆಗೆ ಪ್ರಮಾಣವಚನ ಸ್ವೀಕರಿಸಿದ 13 ಸಚಿವರಿಗೆ ಖಾತೆಗಳನ್ನು ಹಂಚಿಕೆ ಮಾಡಲಾಗಿದೆ. ಖಾತೆಗಳ ಪಟ್ಟಿಯನ್ನು ಮುಖ್ಯಮಂತ್ರಿ ಅಧಿಕೃತ ಅನುಮೋದನೆಗಾಗಿ ರಾಜಭವನಕ್ಕೆ ಕಳುಹಿಸಿದ್ದಾರೆ. ಸಿದ್ದರಾಮಯ್ಯ ಸಂಪುಟದಲ್ಲಿ ಆಹಾರ ಖಾತೆ ನಿರ್ವಹಿಸುತ್ತಿದ್ದ ಕೆ.ಎಚ್. ಮುನಿಯಪ್ಪ ಅವರಿಗೆ ಅವರ ಒತ್ತಾಸೆಯಂತೆ ಸಮಾಜ ಕಲ್ಯಾಣ ಇಲಾಖೆನೀಡಲಾಗಿದೆ. ಕಳೆದ ಒಂದು ತಿಂಗಳಿನಿಂದ ಮುನಿಯಪ್ಪ ಅವರು ಇದೇ ಖಾತೆಗಾಗಿ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ. ರಾಜ್ಯಪಾಲರ ಅಧಿಕೃತ ಅನುಮೋದನೆಯ ಬಳಿಕ ಖಾತೆ ಹಂಚಿಕೆ ಅಂತಿಮವಾಗಿ ಘೋಷಣೆಯಾಗಲಿದೆ. ಎರಡನೇ ಬಾರಿಗೆ ಪ್ರಮಾಣವಚನ ಸ್ವೀಕರಿಸಿದ 19 ಸಚಿವರ ಪೈಕಿ ಸದ್ಯ 13 ಮಂದಿಗೆ ಮಾತ್ರ ಖಾತೆ ಹಂಚಿಕೆ ಮಾಡಲಾಗಿದೆ. ವಿಧಾನಸಭೆ ಅಧಿವೇಶನದ ಹಿನ್ನೆಲೆಯಲ್ಲಿ ಖಾತೆ ಹಂಚಿಕೆ ಅಗತ್ಯವಾಗಿದ್ದರೂ, ಅಬಕಾರಿ ಸೇರಿದಂತೆ ಕೆಲವು ಪ್ರಮುಖ ಖಾತೆಗಳು ಇನ್ನೂ ಹಂಚಿಕೆಯಾಗಿಲ್ಲ. ತೀವ್ರ ಆಕ್ಷೇಪಕ್ಕೆ ಗುರಿಯಾಗಿರುವ ನಾಗೇಂದ್ರ ಸೇರಿದಂತೆ ಆರು ಸಚಿವರಿಗೆ ಸದ್ಯ ಯಾವುದೇ ಖಾತೆ ನೀಡಲಾಗಿಲ್ಲ. ಖಾತೆ ಪಡೆದ ಸಚಿವರ…
ಕಾಸರಗೋಡು: ಸ್ನೇಹಿತರೊಂದಿಗೆ ಕೆರೆಗೆ ಸ್ನಾನಕ್ಕೆ ತೆರಳಿದ್ದ 8ನೇ ತರಗತಿ ವಿದ್ಯಾರ್ಥಿಯೋರ್ವ ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ದಾರುಣ ಘಟನೆ ಉಪ್ಪಳದಲ್ಲಿ ನಡೆದಿದೆ. ಉಪ್ಪಳದ ಪೆರಿಂಗಾಡಿಯ ಅಲಿ ಹಾಗೂ ಸುಲೈಖಾ ದಂಪತಿಯ ಪುತ್ರ ಅಬೂಬಕರ್ ಅಸನ್ (13) ಮೃತ ವಿದ್ಯಾರ್ಥಿ. ಅವರು ಮಂಗಲ್ಪಾಡಿ ಸರ್ಕಾರಿ ಪ್ರೌಢಶಾಲೆಯಲ್ಲಿ 8ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದರು. ಆಗಸ್ಟ್ 11ರ ಮಂಗಳವಾರ ಸಂಜೆ ಈ ಘಟನೆ ನಡೆದಿದ್ದು, ಅಬೂಬಕರ್ ತಮ್ಮ ಮನೆಯ ಸಮೀಪದಲ್ಲಿರುವ ಕೆರೆಗೆ ಸ್ನೇಹಿತರೊಂದಿಗೆ ಸ್ನಾನಕ್ಕೆ ತೆರಳಿದ್ದರು. ಸ್ನಾನ ಮುಗಿಸಿದ ಬಳಿಕ ಸ್ನೇಹಿತರೆಲ್ಲರೂ ಮನೆಗೆ ಮರಳಿದ್ದರು. ಆದರೆ ಅಬೂಬಕರ್ ಮಾತ್ರ ಮನೆಗೆ ಬಾರದ ಕಾರಣ ಆತಂಕಗೊಂಡ ಕುಟುಂಬಸ್ಥರು ಹಾಗೂ ಸ್ಥಳೀಯರು ಸುತ್ತಮುತ್ತ ಹುಡುಕಾಟ ನಡೆಸಿದರು. ಆದರೂ ಅವರ ಯಾವುದೇ ಸುಳಿವು ಪತ್ತೆಯಾಗಿರಲಿಲ್ಲ. ನಂತರ ಸಮೀಪದ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ ಅಬೂಬಕರ್ ಕೆರೆಯಲ್ಲಿ ಮುಳುಗಿರುವುದು ಪತ್ತೆಯಾಗಿದೆ. ಈ ಹಿನ್ನೆಲೆಯಲ್ಲಿ ಸ್ಥಳೀಯರು ಹಾಗೂ ಉಪ್ಪಳದಿಂದ ಆಗಮಿಸಿದ ಅಗ್ನಿಶಾಮಕ ಮತ್ತು ರಕ್ಷಣಾ ಸಿಬ್ಬಂದಿ ಕೆರೆಯಲ್ಲಿ ಶೋಧ ಕಾರ್ಯ ನಡೆಸಿದರು. ತಡರಾತ್ರಿ ಅಬೂಬಕರ್ ಅವರ ಮೃತದೇಹವನ್ನು…
ಬೆಳಗಾವಿ: ಶಿವಂ ಅಸೋಸಿಯೇಟ್ಸ್ ವಿರುದ್ಧದ ವಂಚನೆ ಪ್ರಕರಣಕ್ಕೆ ಇದೀಗ ಜಾರಿ ನಿರ್ದೇಶನಾಲಯ ಎಂಟ್ರಿಯಾಗಿದೆ. ದಾಳಿ ಬಳಿಕ ಇಡಿ ಬಿಡುಗಡೆ ಮಾಡಿರುವ ಪ್ರಕಟಣೆಯಲ್ಲಿ ಕಂಪನಿ ಮೂಲಕ ನಡೆದಿದೆ ಎನ್ನಲಾದ ಹಣಕಾಸು ವಂಚನೆಯ ಹಲವು ವಿವರಗಳು ಬಹಿರಂಗವಾಗಿವೆ. ಮಂಗಳೂರು ವಲಯ ಇಡಿ ಅಧಿಕಾರಿಗಳು ಬೆಳಗಾವಿ, ಚಿಕ್ಕೋಡಿ ಮತ್ತು ನಿಪ್ಪಾಣಿ ಸೇರಿದಂತೆ ವಿವಿಧ ಸ್ಥಳಗಳಲ್ಲಿ ದಾಳಿ ನಡೆಸಿ ಪರಿಶೀಲನೆ ನಡೆಸಿದೆ. ಈ ವೇಳೆ ಶಿವಾನಂದ ಸಿದ್ಧಪ್ಪ ನೀಲಣ್ಣವರ ಹಾಗೂ ಅವರ ಸಹಚರರು ಸಾರ್ವಜನಿಕರಿಗೆ ತಿಂಗಳಿಗೆ ಶೇಕಡಾ 3ರಷ್ಟು ಬಡ್ಡಿ ನೀಡುವುದಾಗಿ ನಂಬಿಸಿ ಠೇವಣಿ ಸಂಗ್ರಹಿಸಿದ್ದರು ಎಂಬುದು ಇಡಿ ತನಿಖೆಯಿಂದ ಬೆಳಕಿಗೆ ಬಂದಿದೆ. ಅಲ್ಲದೇ ಹೂಡಿಕೆದಾರರಿಗೆ ಬರೋಬ್ಬರಿಗೆ 2,110 ಕೋಟಿ ರೂ. ವಂಚನೆ ಮಾಡಿರುವುದು ತನಿಖೆಯಲ್ಲಿ ಬಹಿರಂಗವಾಗಿದೆ. ಬೆಳಗಾವಿ ಜಿಲ್ಲೆಯ ಮಾಳಮಾರುತಿ ಠಾಣೆಯಲ್ಲಿ ದಾಖಲಾಗಿದ್ದ ಎಫ್‌ಐಆರ್ ಆಧಾರದ ಮೇಲೆ ಇಡಿ ಅಧಿಕಾರಿಗಳು, ಶಿವಾನಂದ ಸಿದ್ದಪ್ಪ ನೀಲನ್ನವರ್ ಗೆ ಸೇರಿದ ಹಾಗೂ ಇತರ ಸಂಬಂಧಿತ ವ್ಯಕ್ತಿಗಳು, ಸಂಸ್ಥೆಗಳ ಮೇಲೆ ದಾಳಿ ಮಾಡಿ ತನಿಖೆ ಮಾಡಿದ್ದು, ಆರೋಪಿಗಳು ಹೆಚ್ಚಿನ ಸಂಖ್ಯೆಯ…
ಮಂಗಳೂರು: ಸಾರ್ವಜನಿಕರಿಂದ ಲಂಚ ಪಡೆದು ಕೆಲಸ ಮಾಡುತ್ತಿರುವ ಆರೋಪದ ಹಿನ್ನೆಲೆಯಲ್ಲಿ ಲೋಕಾಯುಕ್ತ ಅಧಿಕಾರಿಗಳು ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ತಾಲೂಕು ಕಚೇರಿಗಳ ಮೇಲೆ ಏಕಕಾಲದಲ್ಲಿ ದಾಳಿ ನಡೆಸಿದ್ದಾರೆ. ಮಂಗಳೂರು, ಬೆಳ್ತಂಗಡಿ, ಬಂಟ್ವಾಳ, ಪುತ್ತೂರು ಹಾಗೂ ಮೂಡುಬಿದಿರೆ ತಾಲೂಕು ಕಚೇರಿಗಳಲ್ಲಿ ಪರಿಶೀಲನೆ ನಡೆಸಲಾಗಿದೆ. ಮಂಗಳೂರು, ಉಡುಪಿ ಹಾಗೂ ಕಾರವಾರ ಲೋಕಾಯುಕ್ತ ಅಧಿಕಾರಿಗಳು ಜಂಟಿಯಾಗಿ ಕಾರ್ಯಾಚರಣೆ ನಡೆಸಿದ್ದಾರೆ. ಬೆಳ್ತಂಗಡಿ ತಾಲೂಕು ಕಚೇರಿಯ ಕಂದಾಯ ವಿಭಾಗದಲ್ಲೂ ಲೋಕಾಯುಕ್ತ ಅಧಿಕಾರಿಗಳು ಪರಿಶೀಲನೆ ನಡೆಸಿದ್ದು, ಸಾರ್ವಜನಿಕರಿಂದ ಲಂಚ ಸ್ವೀಕರಿಸಿ ಕೆಲಸ ಮಾಡಲಾಗುತ್ತಿದೆ ಎಂಬ ದೂರಿನ ಹಿನ್ನೆಲೆಯಲ್ಲಿ ಬುಧವಾರ ಬೆಳಗ್ಗೆಯಿಂದಲೇ ಕಾರ್ಯಾಚರಣೆ ಆರಂಭಿಸಲಾಗಿದೆ. ಮಂಗಳೂರು ಲೋಕಾಯುಕ್ತ ಡಿವೈಎಸ್‌ಪಿ ಸುರೇಶ್ ಅವರ ಮಾರ್ಗದರ್ಶನದಲ್ಲಿ, ಇನ್ಸ್‌ಪೆಕ್ಟರ್ ವಿನಾಯಕ ಬಿಲ್ಲವ ನೇತೃತ್ವದ ಏಳು ಅಧಿಕಾರಿಗಳ ತಂಡ ಬೆಳ್ತಂಗಡಿ ತಾಲೂಕು ಕಚೇರಿಗೆ ಭೇಟಿ ನೀಡಿ ದಾಖಲೆಗಳನ್ನು ಪರಿಶೀಲಿಸಿದೆ. ಲಂಚದ ಆರೋಪಕ್ಕೆ ಸಂಬಂಧಿಸಿದ ಮಾಹಿತಿಯನ್ನೂ ಅಧಿಕಾರಿಗಳು ಸಂಗ್ರಹಿಸಿದ್ದಾರೆ.
ಬೆಳಗಾವಿ : ಗೋಕಾಕ್ ತಾಲೂಕು ಸರ್ಕಾರಿ ಆಸ್ಪತ್ರೆಯಲ್ಲಿ ಮಹಿಳೆಯೊಬ್ಬರು ಮೂವರು ಮಕ್ಕಳಿಗೆ (ತ್ರಿವಳಿ) ಜನ್ಮ ನೀಡಿರುವ ಅಪರೂಪದ ಘಟನೆ ನಡೆದಿದೆ. ವೈದ್ಯರ ಸಮಯೋಚಿತ ಹಾಗೂ ಯಶಸ್ವಿ ಶಸ್ತ್ರಚಿಕಿತ್ಸೆಯಿಂದಾಗಿ ತಾಯಿ ಮತ್ತು ಮೂವರು ನವಜಾತ ಶಿಶುಗಳು ಸುರಕ್ಷಿತವಾಗಿದ್ದಾರೆ. ಮೂಡಲಗಿ ತಾಲೂಕಿನ ಸಂಗನಕೇರಿ ಗ್ರಾಮದ 20 ವರ್ಷದ ರೇಣುಕಾ ರವಿ ಗಣಾಚಾರಿ ಎಂಬವರೇ ತ್ರಿವಳಿ ಮಕ್ಕಳಿಗೆ ಜನ್ಮ ನೀಡಿದ ತಾಯಿ. ಇವರಿಗೆ ಎರಡು ಗಂಡು ಹಾಗೂ ಒಂದು ಹೆಣ್ಣು ಮಗು ಜನಿಸಿದೆ. ಸೋಮವಾರ ಬೆಳಿಗ್ಗೆ ಹೆರಿಗೆ ನೋವು ಕಾಣಿಸಿಕೊಂಡಿದ್ದರಿಂದ ರೇಣುಕಾ ಅವರನ್ನು ಗೋಕಾಕ್ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಪ್ರಸೂತಿ ಮತ್ತು ಸ್ತ್ರೀ ರೋಗ ತಜ್ಞೆ ಡಾ. ಶ್ವೇತಾ ನಾಯಿಕ ಅವರ ನೇತೃತ್ವದಲ್ಲಿ ವೈದ್ಯರಾದ ಡಾ. ಪವಿತ್ರಾ ದಂಡಿನ, ಡಾ. ಪ್ರಿಯಾ ಪೂಜಾರಿ ಹಾಗೂ ಅರವಳಿಕೆ ತಜ್ಞ ಡಾ. ಅಮಿತ್ ಸಾಥ್ ಅವರಿದ್ದ ತಂಡ ಸಿಜೇರಿಯನ್ ಶಸ್ತ್ರಚಿಕಿತ್ಸೆಯ ಮೂಲಕ ಯಶಸ್ವಿಯಾಗಿ ಹೆರಿಗೆ ಮಾಡಿಸಿದೆ. “ಗರ್ಭಿಣಿಯಾದ ಒಂದೂವರೆ ತಿಂಗಳಿನಲ್ಲೇ ಗರ್ಭದಲ್ಲಿ ಮೂವರು ಶಿಶುಗಳಿರುವುದು ತಿಳಿದುಬಂದಿತ್ತು. ಆರಂಭದಲ್ಲಿ ತಾಯಿ…
ಕೊಲಂಬಿಯಾ: ದಕ್ಷಿಣ ಅಮೆರಿಕಾದ ಕೊಲಂಬಿಯಾದಲ್ಲಿ ಸಂಭವಿಸಿದ ಭೀಕರ ಭೂಕಂಪಕ್ಕೆ ಬಲಿಯಾದವರ ಸಂಖ್ಯೆ 224ಕ್ಕೆ ಏರಿಕೆಯಾಗಿದ್ದು, 900ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಈ ಭೂಕಂಪವು ದೇಶಾದ್ಯಂತ ಅಪಾರ ಪ್ರಮಾಣದ ನಾಶನಷ್ಟವನ್ನುಂಟುಮಾಡಿದ್ದು, 3,000ಕ್ಕೂ ಹೆಚ್ಚು ಜನರು ಇನ್ನೂ ಪತ್ತೆಯಾಗಿಲ್ಲ. ಸೋಮವಾರ ಸಂಭವಿಸಿದ 7.4 ರೇಕ್ಟರ್ ಪ್ರಮಾಣದ ಈ ಭೂಕಂಪದಿಂದಾಗಿ 1,500ಕ್ಕೂ ಹೆಚ್ಚು ಮನೆಗಳು ಹಾನಿಗೊಳಗಾಗಿವೆ ಅಥವಾ ನೆಲಸಮವಾಗಿವೆ. ದಶಕಗಳಲ್ಲೇ ಅತ್ಯಂತ ಭೀಕರ ಭೂಕಂಪಕ್ಕೆ ತತ್ತರಿಸಿರುವ ಪಶ್ಚಿಮ ಕೊಲಂಬಿಯಾದಲ್ಲಿ ತುರ್ತು ರಕ್ಷಣಾ ತಂಡಗಳು ಕುಸಿದುಬಿದ್ದ ಕಟ್ಟಡಗಳ ಅಡಿಯಿಂದ ಬದುಕುಳಿದವರನ್ನು ಹುಡುಕುವ ಕಾರ್ಯಾಚರಣೆಯನ್ನು ಇಂದು ಕೂಡ ಮುಂದುವರಿಸಿವೆ. ಭೂಮಿಯ ಆಳದಲ್ಲಿ ಸುಮಾರು 96 ಕಿ.ಮೀ (60 ಮೈಲಿ) ಆಳದಲ್ಲಿ ಸಂಭವಿಸಿದ ಈ ಭೂಕಂಪವು ಪ್ರಮುಖ ಪ್ರದೇಶಗಳಲ್ಲಿ ಅಪಾರ ವಿನಾಶವನ್ನು ಉಂಟುಮಾಡಿದೆ.
ಕೋಲಾರ: ಜಿಲ್ಲೆಯ ಚೆನ್ನಸಂದ್ರ ಗ್ರಾಮದಲ್ಲಿ ಭೀಮನ ಅಮವಾಸ್ಯೆ ದಿನ ಗಂಡನ ಪೂಜೆ ಮಾಡುವ ಬದಲು ಆತನನ್ನೇ ಪತ್ನಿ ಇಹಲೋಕಕ್ಕೆ ಕಳಿಸಿದ ಘಟನೆ ನಡೆದಿದೆ. ಮೃತ ಪತಿ ನಾರಾಯಣಸ್ವಾಮಿ (68) ಹಾಗೂ ಹಂತಕಿ ಪತ್ನಿ ಜಗದಾಂಭ (58) ಎನ್ನಲಾಗಿದೆ. ಇಬ್ಬರ ಮಧ್ಯೆ ಅಸಮಾಧಾನ ಊಂಟಾಗಿ ಇಬ್ಬರು ಪ್ರತ್ಯೇಕವಾಗಿಯೇ ವಾಸಿಸುತ್ತಿದ್ದರು. ಆದರೆ ಕಳೆದ ಎರಡು ಮೂರು ದಿನದಿಂದ ಹಣಕ್ಕಾಗಿ ಪುಸಲಾಯಿಸಿ ಪತ್ನಿ ಪತಿಯನ್ನು ತೋಟದ ಮನೆಗೆ ಕರೆತಂದಿದ್ದಳು. ಭೀಮನ ಅಮವಾಸ್ಯೆಯ ರಾತ್ರಿ ಪತಿಗೆ ಊಟದಲ್ಲಿ 10 ನಿದ್ರೆ ಮಾತ್ರೆ ಹಾಕಿ ಕೊಟ್ಟಿದ್ದು, ಆತ ಮಲಗಿದ ನಂತರ ಹಗ್ಗದಿಂದ ಕುತ್ತಿಗೆ ಬಿಗಿದು ಕೊಲೆ ಮಾಡಿದ್ದಾಳೆ. ಬಳಿಕ ತಾನೇ ಪೊಲೀಸ್ ಠಾಣೆಗೆ ಹೋಗಿ ಶರಣಾಗಿದ್ದಾಳೆ. ಪೊಲೀಸರು ವಿಚಾರಣೆ ನಡೆಸಿದಾಗ, ಜಮೀನು ಮಾರಾಟ ಮಾಡಿದ ಹಣವನ್ನು ತನ್ನ ಕೈಗೆ ಕೊಟ್ಟಿಲ್ಲ. ಅಲ್ಲದೇ ಇನ್ನುಳಿದ ಜಮೀನನ್ನು ಮಾರಾಟ ಮಾಡಿ ಬಿಡುತ್ತಾನೆಂದು ಕೊಲೆ ಮಾಡಿದ್ದೇನೆ ಎಂದು ಒಪ್ಪಿಕೊಂಡಿದ್ದಾಳೆ. ಈ ಸಂಬಂಧ ವೇಮಗಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಮಂಗಳೂರು: ನೈರುತ್ಯ ರೈಲ್ವೆಯ ಮೈಸೂರು ವಿಭಾಗಕ್ಕೆ ಒಳಪಡುವ ಪಶ್ಚಿಮ ಘಟ್ಟದ ಸಿರಿಬಾಗಿಲು ಮತ್ತು ಯಡಕುಮರಿ ರೈಲು ನಿಲ್ದಾಣಗಳ ನಡುವೆ ಎಂಜಿನಿಯರಿಂಗ್ ಕಾಮಗಾರಿ ಹಾಗೂ ಹಳಿ ನಿರ್ವಹಣೆ ಹಮ್ಮಿಕೊಳ್ಳಲಾಗಿದೆ. ಈ ಹಿನ್ನೆಲೆಯಲ್ಲಿ ಅಕ್ಟೋಬರ್ 4 ರಿಂದ ನವೆಂಬರ್ 4 ರವರೆಗೆ ಹಲವು ಪ್ರಮುಖ ರೈಲುಗಳ ಸಂಚಾರವನ್ನು ತಾತ್ಕಾಲಿಕವಾಗಿ ರದ್ದುಗೊಳಿಸಲಾಗಿದೆ ಎಂದು ನೈರುತ್ಯ ರೈಲ್ವೆಯ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಮಂಜುನಾಥ ಕನಮಡಿ ತಿಳಿಸಿದ್ದಾರೆ. ವಾರದಲ್ಲಿ ಮೂರು ದಿನ ಸಂಚರಿಸುವ ಯಶವಂತಪುರ – ಮಂಗಳೂರು ಜಂಕ್ಷನ್ ಎಕ್ಸ್‌ಪ್ರೆಸ್ (ಸಂಖ್ಯೆ 16575) ರೈಲು ಅ.04, 06, 08, 11, 13, 15, 22, 25, 27, 29, ನ.01, ಮತ್ತು ನ. 03 ರಂದು ಸಂಚರಿಸುವುದಿಲ್ಲ. ಮಂಗಳೂರು ಜಂಕ್ಷನ್ – ಯಶವಂತಪುರ ಎಕ್ಸ್‌ಪ್ರೆಸ್ (ಸಂಖ್ಯೆ 16576 ) ರೈಲು ಅ.05, 07, 09, 12, 14, 16, 23, 26, 28, 30, ನ.02, ಮತ್ತು ನ.04 ರಂದು ಸಂಚರಿಸುವುದಿಲ್ಲ. ವಾರದಲ್ಲಿ ಮೂರು ದಿನ ಸಂಚರಿಸುವ ಯಶವಂತಪುರ…
ಮಂಗಳೂರು: ಸುರತ್ಕಲ್‌ನ ಗುಡ್ಡೆಕೊಪ್ಲದಲ್ಲಿರುವ ಆವಿಷ್ಕಾರ್ ಗ್ರಾಫಿಕ್ಸ್ ಸೆಂಟರ್‌ನಲ್ಲಿ ಆಗಸ್ಟ್ 10ರಂದು ಸಂಭವಿಸಿದ ಭೀಕರ ಅಗ್ನಿ ಅವಘಡದಲ್ಲಿ ಸುಮಾರು ರೂ.1.60 ಕೋಟಿ ನಷ್ಟ ಸಂಭವಿಸಿದೆ ಎಂದು ವರದಿಯಾಗಿದೆ. ಅಗ್ನಿ ಅವಘಡದಲ್ಲಿ ಮುದ್ರಣ ಕೇಂದ್ರದಲ್ಲಿದ್ದ ಹಲವು ಮುದ್ರಣ ಯಂತ್ರಗಳು ಸಂಪೂರ್ಣವಾಗಿ ಸುಟ್ಟು ಕರಕಲಾಗಿವೆ. ಘಟನೆಯಿಂದ ಮುದ್ರಣ ಕೇಂದ್ರಕ್ಕೆ ಭಾರೀ ಪ್ರಮಾಣದ ಹಾನಿಯಾಗಿದೆ. ರಾತ್ರಿ ವೇಳೆ ಸ್ಥಳೀಯ ನಿವಾಸಿಗಳು ಅಂಗಡಿಯಲ್ಲಿ ಬೆಂಕಿ ಕಾಣಿಸಿಕೊಂಡಿರುವುದನ್ನು ಗಮನಿಸಿ ತಕ್ಷಣ ಮಾಲೀಕರಿಗೆ ಮಾಹಿತಿ ನೀಡಿದ್ದಾರೆ. ಬಳಿಕ ಅಗ್ನಿಶಾಮಕ ಮತ್ತು ತುರ್ತು ಸೇವೆಗಳಿಗೆ ಮಾಹಿತಿ ನೀಡಲಾಗಿದ್ದು, ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಬೆಂಕಿಯನ್ನು ನಿಯಂತ್ರಣಕ್ಕೆ ತಂದಿದ್ದಾರೆ. ಘಟನೆಯ ಕುರಿತು ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಬೆಂಕಿ ಅವಘಡಕ್ಕೆ ನಿಖರ ಕಾರಣವೇನು ಎಂಬುದರ ಕುರಿತು ಪರಿಶೀಲನೆ ನಡೆಯುತ್ತಿದೆ.
ಕಡಬ: ಜಲಪಾತಕ್ಕೆ ತೆರಳಿದ್ದ ಅಪ್ರಾಪ್ತ ವಿದ್ಯಾರ್ಥಿಗಳ ಮೇಲೆ ಅವಾಚ್ಯ ಶಬ್ದಗಳಿಂದ ಬೈದು, ಹಲ್ಲೆ ನಡೆಸಿ ಜೀವ ಬೆದರಿಕೆಯೊಡ್ಡಿದ ಘಟನೆ ಕುಂಡಡ್ಕ ಫಾಲ್ಸ್ ಬಳಿ ನಡೆದಿದ್ದು, ಈ ಸಂಬಂಧ ಕಡಬ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಅಪ್ರಾಪ್ತ ವಯಸ್ಸಿನ ಬಾಲಕ ಹಾಗೂ ಆತನ ನಾಲ್ವರು ಸಹಪಾಠಿಗಳು ಬೆಳಿಗ್ಗೆ ಕಡಬದ ಕುಂಡಡ್ಕ ಫಾಲ್ಸ್‌ಗೆ ಆಟವಾಡಲು ತೆರಳಿದ್ದರು. ಈ ವೇಳೆ ಸ್ಥಳಕ್ಕೆ ಬಂದ ರೋಹಿತ್, ದೇವಿಪ್ರಸಾದ್, ಚಂದನ್, ಉಮೇಶ್ ಹಾಗೂ ವಿದ್ಯಾರ್ಥಿನಿಯೊಬ್ಬಳ ತಂದೆ ಜೊತೆಗೂಡಿ ದೂರುದಾರ ಬಾಲಕನಿಗೆ ಜಾತಿ ನಿಂದನೆ ಮಾಡಿ ಅವಾಚ್ಯ ಶಬ್ದಗಳಿಂದ ಬೈದಿದ್ದಾರೆ. ಅಲ್ಲದೆ ದೂರುದಾರ ಬಾಲಕ ಹಾಗೂ ಜೊತೆಯಲ್ಲಿದ್ದ ಇಬ್ಬರು ಸಹಪಾಠಿಗಳ ಮೇಲೆ ಹಲ್ಲೆ ನಡೆಸಿ, ಕೊಲೆ ಬೆದರಿಕೆ ಒಡ್ಡಿದ್ದಾರೆ ಎಂದು ಆರೋಪಿಸಲಾಗಿದೆ.



