Author: admin

ಬೆಂಗಳೂರು : ಸಚಿವ ಸಂಪುಟ ವಿಸ್ತರಣೆಯಲ್ಲಿ ಅವಕಾಶ ಸಿಗದೆ ಅಸಮಾಧಾನಗೊಂಡಿರುವ ಪಕ್ಷದ ಶಾಸಕರು ತಾಳ್ಮೆಯಿಂದ ಇರಬೇಕು ಹಾಗೂ ಎಲ್ಲರಿಗಿಂತ ಪಕ್ಷದ ಹಿತವೇ ಮುಖ್ಯ ಎಂದು ಮುಖ್ಯಮಂತ್ರಿ ಅವರು ಮನವಿ ಮಾಡಿದ್ದಾರೆ. ಇದರೊಂದಿಗೆ, ಯಾರಾದರೂ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದರೆ ಅದನ್ನು ಕೆಲವೇ ನಿಮಿಷಗಳಲ್ಲಿ ಅಂಗೀಕರಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ. ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, “ನಾಳೆಯಿಂದ ಎಲ್ಲ ಸಚಿವರೂ ಕಡ್ಡಾಯವಾಗಿ ಜಿಲ್ಲಾ ಪ್ರವಾಸ ಕೈಗೊಳ್ಳಬೇಕು. ಜಿಲ್ಲೆಗಳಲ್ಲಿ ಸರ್ಕಾರಿ ಕಚೇರಿಗಳು ಹಾಗೂ ವಿವಿಧ ಅಭಿವೃದ್ಧಿ ಕಾಮಗಾರಿಗಳ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಬೇಕು. ಸಮಯ ವ್ಯರ್ಥ ಮಾಡದೆ ಪ್ರತಿಯೊಬ್ಬರೂ ಜನರ ಕೆಲಸ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಬೇಕು,” ಎಂದು ನೂತನ ಹಾಗೂ ಹಾಲಿ ಸಚಿವರಿಗೆ ಸ್ಪಷ್ಟ ನಿರ್ದೇಶನ ನೀಡಿದರು. ರಾಜೀನಾಮೆ ನೀಡುವ ಕುರಿತು ನಡೆಯುತ್ತಿರುವ ಚರ್ಚೆಗಳಿಗೆ ಪ್ರತಿಕ್ರಿಯಿಸಿದ ಸಿಎಂ, “ರಾಜೀನಾಮೆ ಕೊಡುವವರನ್ನು ತಡೆಯಲು ಸಾಧ್ಯವಿಲ್ಲ. ತಮ್ಮ ಹಾಗೂ ಪಕ್ಷದ ಭವಿಷ್ಯ ಬಯಸುವವರು ಸಮಾಧಾನದಿಂದ ಇರುತ್ತಾರೆ. ಹಿಂದೆ ಎನ್. ಧರಂ ಸಿಂಗ್ ಹಾಗೂ ಸಿದ್ದರಾಮಯ್ಯ ಅವರ ಸಚಿವ…

Read More

ಮುಂಬೈ : ಸರ್ಕಾರಿ ಮತ್ತು ಅರೆ ಸರ್ಕಾರಿ ಸಂಸ್ಥೆಗಳ ಕ್ಯಾಂಟೀನ್‌ಗಳಲ್ಲಿ ಆಹಾರ ನೈರ್ಮಲ್ಯ ತಪಾಸಣೆ ನಡೆಸಲಾಗುತ್ತಿದೆಯೇ ಎಂದು ಬಾಂಬೆ ಹೈಕೋರ್ಟ್ ಪ್ರಶ್ನಿಸಿದ ಮರುದಿನವೇ, ಮಹಾರಾಷ್ಟ್ರ ಆಹಾರ ಮತ್ತು ಔಷಧ ಆಡಳಿತ (ಎಫ್‌ಡಿಎ) ತಂಡವು ಹೈಕೋರ್ಟ್ ಆವರಣದಲ್ಲಿರುವ ಕ್ಯಾಂಟೀನ್‌ಗಳ ಮೇಲೆಯೇ ರೇಡ್ ನಡೆಸಿದೆ. ಎಫ್‌ಎಸ್‌ಎಸ್‌ಎಐ (FSSAI) ಪರವಾನಗಿ ಇಲ್ಲದೆ ಕಾರ್ಯನಿರ್ವಹಿಸುತ್ತಿದ್ದ ಒಂದು ಕ್ಯಾಂಟೀನ್‌ಗೆ ‘ಬಿಸಿನೆಸ್ ಕ್ಲೋಸ್’ ಆದೇಶ ನೀಡಲಾಗಿದ್ದರೆ, ಉಳಿದ ಎರಡಕ್ಕೆ ಸುಧಾರಣಾ ನೋಟಿಸ್ ಜಾರಿಗೊಳಿಸಲಾಗಿದೆ. ಹಂಗಾಮಿ ಮುಖ್ಯ ನ್ಯಾಯಮೂರ್ತಿ ರವೀಂದ್ರ ಘುಗೆ ಹಾಗೂ ನ್ಯಾಯಮೂರ್ತಿ ಗೌತಮ್ ಅಂಕಡ್ ಅವರಿದ್ದ ಪೀಠವು ಎಫ್‌ಡಿಎ ನಡೆಯುತ್ತಿರುವ ನೈರ್ಮಲ್ಯ ಅಭಿಯಾನದ ಕುರಿತು ವಿಚಾರಣೆ ನಡೆಸುವ ವೇಳೆ, “ಸರ್ಕಾರಿ ಇಲಾಖೆಗಳು ಹಾಗೂ ಶಾಸನಬದ್ಧ ಸಂಸ್ಥೆಗಳು ನಡೆಸುವ ಕ್ಯಾಂಟೀನ್‌ಗಳನ್ನು ಪರಿಶೀಲಿಸುತ್ತಿದ್ದೀರಾ?” ಎಂದು ಪ್ರಶ್ನಿಸಿತ್ತು. ಇದರ ಬೆನ್ನಲ್ಲೇ ಜಾಗೃತಗೊಂಡ ಎಫ್‌ಡಿಎ ತಂಡ, ಹೈಕೋರ್ಟ್‌ನ 3 ಕ್ಯಾಂಟೀನ್‌ಗಳಿಗೆ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದೆ. ತಪಾಸಣೆ ವೇಳೆ 3ನೇ ಮಹಡಿಯಲ್ಲಿರುವ ಬಾಂಬೆ ಬಾರ್ ಅಸೋಸಿಯೇಷನ್ ​​(BBA) ಕ್ಯಾಂಟೀನ್ ಕಡ್ಡಾಯ ಎಫ್‌ಎಸ್‌ಎಸ್‌ಎಐ ಪರವಾನಗಿ…

Read More

ಬೆಳ್ತಂಗಡಿ: ಸಾರ್ವಜನಿಕ ಸ್ಥಳದಲ್ಲಿ ನಿಷೇಧಿತ ಮಾದಕ ವಸ್ತುವಿನ ಅಮಲಿನಲ್ಲಿದ್ದ ಆರೋಪದ ಮೇರೆಗೆ ಓರ್ವನ ವಿರುದ್ಧ ಮಾದಕ ದ್ರವ್ಯ ಮತ್ತು ಮನೋವೈಜ್ಞಾನಿಕ ಪದಾರ್ಥಗಳ ನಿಯಂತ್ರಣ ಕಾಯ್ದೆ (NDPS Act) ಅಡಿಯಲ್ಲಿ ಬೆಳ್ತಂಗಡಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಆರೋಪಿಯನ್ನು ಬೆಳ್ತಂಗಡಿ ತಾಲೂಕಿನ ಕುವೆಟ್ಟು ಗ್ರಾಮದ ಶಕ್ತಿನಗರ ನಿವಾಸಿ ಶ್ರೀರಾಜ್ ಶೆಟ್ಟಿ (36) ಎಂದು ಗುರುತಿಸಲಾಗಿದೆ.ಪೊಲೀಸರ ಮಾಹಿತಿ ಪ್ರಕಾರ, ಆಗಸ್ಟ್ 2ರ ಸಂಜೆ ಬೆಳ್ತಂಗಡಿ ಪೊಲೀಸ್ ಉಪನಿರೀಕ್ಷಕ ಆನಂದ್ ಎಂ. ಅವರು ಸಿಬ್ಬಂದಿಯೊಂದಿಗೆ ಕುವೆಟ್ಟು ಗ್ರಾಮದ ಪೊಟ್ಟುಕೆರೆ ಪ್ರದೇಶದಲ್ಲಿ ನಿಯಮಿತ ಗಸ್ತು ನಡೆಸುತ್ತಿದ್ದರು. ಈ ವೇಳೆ ಸಾರ್ವಜನಿಕ ಸ್ಥಳದಲ್ಲಿ ಅನುಮಾನಾಸ್ಪದವಾಗಿ ವರ್ತಿಸುತ್ತಿದ್ದ ಹಾಗೂ ಮಾದಕ ವಸ್ತುವಿನ ಅಮಲಿನಲ್ಲಿರುವಂತೆ ಕಂಡುಬಂದ ವ್ಯಕ್ತಿಯನ್ನು ಪೊಲೀಸರು ತಡೆದು ವಿಚಾರಣೆ ನಡೆಸಿದರು.ವಿಚಾರಣೆ ವೇಳೆ ಆತ ಸಮರ್ಪಕ ಉತ್ತರ ನೀಡದೆ ಅಮಲಿನ ಸ್ಥಿತಿಯಲ್ಲೇ ಮಾತನಾಡುತ್ತಿದ್ದ ಎನ್ನಲಾಗಿದೆ. ಬಳಿಕ ಹೆಚ್ಚಿನ ವಿಚಾರಣೆ ನಡೆಸಿದಾಗ, ನಿಷೇಧಿತ ಮಾದಕ ವಸ್ತುವನ್ನು ಸೇವಿಸಿರುವುದಾಗಿ ಆತ ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.ನಂತರ ಆರೋಪಿಯನ್ನು ವೈದ್ಯಕೀಯ ಪರೀಕ್ಷೆಗಾಗಿ ಬೆಳ್ತಂಗಡಿ ತಾಲೂಕು ಸರ್ಕಾರಿ ಆಸ್ಪತ್ರೆಗೆ…

Read More

ಮಂಗಳೂರು: ಎಡಕುಮೇರಿ ಮತ್ತು ಸಿರಿಬಾಗಿಲು ನಡುವಿನ ಭೂಕುಸಿತದಿಂದ ಹಾನಿಗೊಳಗಾದ ರೈಲು ಮಾರ್ಗದಲ್ಲಿ ದುರಸ್ತಿ ಕಾಮಗಾರಿ ಪೂರ್ಣಗೊಂಡ ಹಿನ್ನೆಲೆಯಲ್ಲಿ, ಮಂಗಳೂರು-ಬೆಂಗಳೂರು ನಡುವಿನ ರೈಲು ಸಂಚಾರ ಸೋಮವಾರ ರಾತ್ರಿ ಪುನರಾರಂಭಗೊಂಡಿದೆ. ಭಾರೀ ಮಳೆಯಿಂದ ಸಂಭವಿಸಿದ್ದ ಭೂಕುಸಿತದ ಪರಿಣಾಮ ಮಣ್ಣು ರೈಲು ಹಳಿಗಳ ಮೇಲೆ ಕುಸಿದಿದ್ದರಿಂದ ಈ ಮಾರ್ಗದಲ್ಲಿ ರೈಲು ಸಂಚಾರವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿತ್ತು. ದುರಸ್ತಿ ಕಾಮಗಾರಿ ಪೂರ್ಣಗೊಂಡ ಬಳಿಕ, ರೈಲ್ವೆ ಇಲಾಖೆ ಹಳಿಯ ಸಮಗ್ರ ಸುರಕ್ಷತಾ ಪರಿಶೀಲನೆ ನಡೆಸಿತು. ಎಲ್ಲಾ ತಾಂತ್ರಿಕ ಪರೀಕ್ಷೆಗಳು ಪೂರ್ಣಗೊಂಡ ನಂತರ, ಸೋಮವಾರ ರಾತ್ರಿ ಈ ಮಾರ್ಗವನ್ನು ರೈಲು ಸಂಚಾರಕ್ಕೆ ಸುರಕ್ಷಿತ ಎಂದು ಪ್ರಮಾಣೀಕರಿಸಲಾಯಿತು. ಇದಾದ ಬಳಿಕ ಹಳಿಯ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಪ್ರಾಯೋಗಿಕ ಎಂಜಿನ್ ಸಂಚಾರ ನಡೆಸಲಾಯಿತು. ಪರೀಕ್ಷೆ ಯಶಸ್ವಿಯಾದ ನಂತರ ನಿಯಮಿತ ರೈಲು ಸಂಚಾರಕ್ಕೆ ಅನುಮತಿ ನೀಡಲಾಯಿತು. ಆದಾಗ್ಯೂ, ಮುನ್ನೆಚ್ಚರಿಕಾ ಕ್ರಮವಾಗಿ ದುರಸ್ತಿ ಮಾಡಲಾದ ಹಳಿ ವಿಭಾಗದಲ್ಲಿ ಗಂಟೆಗೆ 10 ಕಿ.ಮೀ. ವೇಗ ಮಿತಿ ವಿಧಿಸಲಾಗಿದೆ. ಇದರಿಂದ ಆರಂಭಿಕ ಹಂತದಲ್ಲಿ ಕೆಲವು ರೈಲುಗಳ ಸಂಚಾರದಲ್ಲಿ ವಿಳಂಬವಾಗುವ ಸಾಧ್ಯತೆ ಇದ್ದು,…

Read More

ಮೈಸೂರು: ಹುಣಸೂರು ಉಪ ವಿಭಾಗಾಧಿಕಾರಿ (ಎಸಿ) ಕಾವ್ಯಾರಾಣಿ ಅವರು 5.50 ಲಕ್ಷ ರೂಪಾಯಿ ಲಂಚ ಸ್ವೀಕರಿಸುತ್ತಿದ್ದಾಗ ಲೋಕಾಯುಕ್ತ ಅಧಿಕಾರಿಗಳು ರೆಡ್ ಹ್ಯಾಂಡ್ ಆಗಿ ಹಿಡಿದಿದ್ದಾರೆ. ಎಚ್.ಡಿ.ಕೋಟೆ ತಾಲ್ಲೂಕಿನ ಸ.ನಂ.17/26ರ 4 ಎಕರೆ 20 ಗುಂಟೆ ಭೂಮಿಗೆ ಸಂಬಂಧಿಸಿದ ಕಂದಾಯ ಮೇಲ್ಮನವಿ ಇತ್ಯರ್ಥಪಡಿಸಲು ನ್ಯಾಯಾಲಯದ ಆದೇಶವಿತ್ತು. ಈ ಕೆಲಸ ಮಾಡಿಕೊಡಲು ಕಾವ್ಯಾರಾಣಿ 10 ಲಕ್ಷ ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಅದರಂತೆ ಮೊದಲ ಕಂತಿನಲ್ಲಿ ಡಾ. ರೂಪಾ ಅವರಿಂದ 5 ಲಕ್ಷ ರೂಪಾಯಿ ಲಂಚ ಪಡೆದಿದ್ದರು. ನಂತರ ರೂಪಾ ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು. ಎರಡನೇ ಕಂತಿನಲ್ಲಿ 5.50 ಲಕ್ಷ ರೂಪಾಯಿ ಸ್ವೀಕರಿಸುತ್ತಿದ್ದಾಗ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದು ಕಾವ್ಯಾರಾಣಿ ಅವರನ್ನು ವಶಕ್ಕೆ ಪಡೆದಿದ್ದಾರೆ.

Read More

ಹಾಸನ: ಬೇಲೂರಿನ ದೋಲನಮನೆ ಗ್ರಾಮದಲ್ಲಿ ಕಾಡಾನೆಯೊಂದು ಕಾರಿನ ಮೇಲೆ ದಾಳಿ ಮಾಡಿದ್ದು, ಚಾಲಕನ ಸಮಯಪ್ರಜ್ಞೆಯಿಂದ ಕಾರಿನಲ್ಲಿದ್ದ ಪ್ರಯಾಣಿಕರು ಪಾರಾಗಿದ್ದಾರೆ. ಮಹಮ್ಮದ್ ಜಾಹಿದ್ ಎಂಬವರು ಬೆಂಗಳೂರಿನಲ್ಲಿ ಕಾರ್ಯಕ್ರಮ ಮುಗಿಸಿಕೊಂಡು ಕುಟುಂಬದೊಂದಿಗೆ ಸೋಮವಾರ ಮಧ್ಯರಾತ್ರಿ ವೇಳೆ ಕಾರಿನಲ್ಲಿ ಬರುತ್ತಿದ್ದರು. ಈ ವೇಳೆ ಕಾಡಾನೆ ದಾಳಿ ನಡೆಸಿದೆ. ಕಾರಿನ ಹಿಂಭಾಗ ಕಾಡಾನೆ ದಾಳಿಯಿಂದ ಜಖಂ ಆಗಿದೆ. ಈ ವೇಳೆ ಕಾರಿನಲ್ಲಿದ್ದ ಮಹಮ್ಮದ್ ಜಾಹಿದ್ ತಾಯಿ, ಅಕ್ಕ ಅವರ ಮಕ್ಕಳು ಕಿರುಚಾಡಿದ್ದಾರೆ. ಆದರೂ ಸ್ಥಳದಿಂದ ಕದಲದ ಕಾಡಾನೆ, ಕಾರಿನ ಬಳಿಯೇ ಕೆಲಕಾಲ ನಿಂತಿದೆ. ಜಾಹಿದ್ ಕೂಡಲೇ ಪಾರ್ಕಿಂಗ್ ಲೈಟ್ ಆನ್‌ ಮಾಡಿದ್ದಾರೆ. ಬೆಳಕನ್ನು ಕಂಡು ಕಾಡಾನೆ ಕಾರಿನಿಂದ ಸ್ವಲ್ಪ ದೂರ ಹೋಗಿ ನಿಂತಿದೆ. ನಂತರ ಆನೆ ಕಾರ್ಯಪಡೆಗೆ (ಇಟಿಎಫ್) ಮಾಹಿತಿ ನೀಡಿದ್ದರು. ಕೆಲವೇ ನಿಮಿಷಗಳಲ್ಲಿ ಸ್ಥಳಕ್ಕಾಗಮಿಸಿದ ಇಟಿಎಫ್ ಸಿಬ್ಬಂದಿ, ಪಟಾಕಿ ಸಿಡಿಸಿ ಕಾಡಾನೆಯನ್ನು ಅರಣ್ಯಕ್ಕೆ ಕಳಿಸಿದ್ದಾರೆ.

Read More

ಬೆಳ್ತಂಗಡಿ : ಧರ್ಮಸ್ಥಳ-ಚಿಕ್ಕಮಗಳೂರು ಸಂಪರ್ಕಿಸುವ ಚಾರ್ಮಾಡಿ ಘಾಟಿ ರಸ್ತೆಯ 9ನೇ ತಿರುವಿನ ಬಳಿ ಭಾನುವಾರ ರಾತ್ರಿ ಹಾಗೂ ಸೋಮವಾರ ಬೆಳಿಗ್ಗೆ ಬೃಹತ್ ಒಂಟಿ ಸಲಗವೊಂದು ರಸ್ತೆ ಮಧ್ಯೆ ಪ್ರತ್ಯಕ್ಷಗೊಂಡು ಕೆಲಕಾಲ ವಾಹನ ಸಂಚಾರಕ್ಕೆ ಅಡ್ಡಿಪಡಿಸಿದ ಘಟನೆ ಸಂಭವಿಸಿದೆ. ಆಹಾರ ಹಾಗೂ ನೀರು ಅರಸಿ ಕಾಡಿನಿಂದ ರಸ್ತೆಗೆ ಬಂದ ಒಂಟಿ ಸಲಗವು ನಿಧಾನವಾಗಿ ರಸ್ತೆ ದಾಟಿದೆ. ಈ ವೇಳೆ ಘಾಟಿಯಲ್ಲಿ ಸಂಚರಿಸುತ್ತಿದ್ದ ವಾಹನ ಸವಾರರು ಸುರಕ್ಷತೆಯ ದೃಷ್ಟಿಯಿಂದ ದೂರದಲ್ಲೇ ವಾಹನಗಳನ್ನು ನಿಲ್ಲಿಸಿ ಆನೆ ಕಾಡಿಗೆ ತೆರಳುವವರೆಗೆ ಕಾಯಬೇಕಾಯಿತು. ಪ್ರಯಾಣಿಕರೊಬ್ಬರು ತಮ್ಮ ಮೊಬೈಲ್ ಕ್ಯಾಮೆರಾದಲ್ಲಿ ಸೆರೆಹಿಡಿದ ಆನೆಯ ದೃಶ್ಯಗಳು ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಅದೃಷ್ಟವಶಾತ್ ಯಾವುದೇ ಅಹಿತಕರ ಘಟನೆ ಸಂಭವಿಸಿಲ್ಲ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ಅರಣ್ಯ ಇಲಾಖೆ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಆನೆಯನ್ನು ಸುರಕ್ಷಿತವಾಗಿ ದಟ್ಟ ಅರಣ್ಯದೊಳಗೆ ಅಟ್ಟಿದ್ದಾರೆ. ಚಾರ್ಮಾಡಿ ಘಾಟಿ ಪ್ರದೇಶದಲ್ಲಿ ಕಾಡುಪ್ರಾಣಿಗಳ ಸಂಚಾರ ಹೆಚ್ಚಾಗಿರುವುದರಿಂದ, ವಿಶೇಷವಾಗಿ ರಾತ್ರಿ ಹಾಗೂ ಮುಂಜಾನೆ ವೇಳೆಯಲ್ಲಿ ವಾಹನ ಸವಾರರು ಅತಿವೇಗದ ಚಾಲನೆ…

Read More

ಮಧುರೈ : ತಮಿಳುನಾಡಿನ ಮಧುರೈ ಜಿಲ್ಲೆಯ ಮೇಲೂರು ಸಮೀಪದ ತುಂಬೈಪಟ್ಟಿ ಚತುಷ್ಪಥ ರಸ್ತೆ ಮೇಲ್ಸೇತುವೆ ಮೇಲೆ ಸೋಮವಾರ (ಆಗಸ್ಟ್ 3) ಕಾರು ನಿಯಂತ್ರಣ ತಪ್ಪಿ ಮೀಡಿಯನ್ ದಾಟಿ ಎದುರಿನಿಂದ ಬರುತ್ತಿದ್ದ ಮತ್ತೊಂದು ಕಾರಿಗೆ ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ 3 ವರ್ಷದ ಬಾಲಕಿ ಸೇರಿದಂತೆ ಚೆನ್ನೈನ ಒಂದೇ ಕುಟುಂಬದ ಐವರು ಸ್ಥಳದಲ್ಲೇ ದಾರುಣವಾಗಿ ಮೃತಪಟ್ಟಿದ್ದಾರೆ. ಚೆನ್ನೈನಿಂದ ತಿರುನೆಲ್ವೇಲಿಗೆ ರಾಷ್ಟ್ರೀಯ ಹೆದ್ದಾರಿಯಲ್ಲಿ ತೆರಳುತ್ತಿದ್ದ ಕಾರು ತುಂಬೈಪಟ್ಟಿ ಫ್ಲೈಓವರ್ ಮೇಲೆ ಚಲಿಸುತ್ತಿದ್ದಾಗ, ಚಾಲಕನ ನಿಯಂತ್ರಣ ತಪ್ಪಿ ಮುಂದೆ ಸಾಗುತ್ತಿದ್ದ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದು, ತಕ್ಷಣವೇ ರಸ್ತೆ ವಿಭಾಜಕ (ಮೀಡಿಯನ್) ದಾಟಿ ಎದುರಿನಿಂದ ಬರುತ್ತಿದ್ದ ಕಾರಿಗೆ ರಭಸವಾಗಿ ಡಿಕ್ಕಿ ಹೊಡೆದಿದೆ. ಅಪಘಾತದ ಭೀಕರತೆಗೆ ಕಾರಿನಲ್ಲಿದ್ದ ಐವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮೃತರನ್ನು ಚೆನ್ನೈನ ಮಡಿಪಕ್ಕಂ ನಿವಾಸಿಗಳಾದ ಶ್ರೀಮನ್, ರಾಜಕುಮಾರಿ, ರಂಜಾ ಹಾಗೂ ಮೂರು ವರ್ಷದ ಬಾಲಕಿ ಪ್ರಾಣಿಕಾ ಎಂದು ಗುರುತಿಸಲಾಗಿದೆ. ಮೃತಪಟ್ಟ ಮತ್ತೊಬ್ಬ ವ್ಯಕ್ತಿಯ ಗುರುತು ಇನ್ನಷ್ಟೇ ಪತ್ತೆಯಾಗಬೇಕಿದೆ. ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡ ಇಬ್ಬರನ್ನು ಅಗ್ನಿಶಾಮಕ…

Read More

ಸುಳ್ಯ: ಓಡಬಾಯಿಯಲ್ಲಿ ಜು. 31 ರಂದು ರಾತ್ರಿ ಸಂಭವಿಸಿದ ಕಾರು ಮತ್ತು ಬೈಕ್ ನಡುವಿನ ಭೀಕರ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಬೈಕ್ ಸವಾರ, ಚಿಕಿತ್ಸೆ ಫಲಕಾರಿಯಾಗದೆ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಬಾರೆತ್ತಡ್ಕ ನಿವಾಸಿ ಲವಕುಮಾರ್ (28) ಮೃತಪಟ್ಟ ಯುವಕ. ಅಪಘಾತ ಸಂಭವಿಸಿದ ತಕ್ಷಣ ಗಂಭೀರ ಸ್ಥಿತಿಯಲ್ಲಿದ್ದ ಲವಕುಮಾರ್ ಅವರನ್ನು ಸುಳ್ಯ ಪೊಲೀಸ್ ಠಾಣೆಯ ಸಿಬ್ಬಂದಿ ಪ್ರಕಾಶ್ ಅವರು ಸುಳ್ಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದರು. ಪ್ರಥಮ ಚಿಕಿತ್ಸೆಯ ಬಳಿಕ ‘ಲೈಫ್ ಕೇರ್’ ಆಂಬುಲೆನ್ಸ್ ಮೂಲಕ ಸುಳ್ಯದ ಖಾಸಗಿ ಆಸ್ಪತ್ರೆಗೆ ಹಾಗೂ ಹೆಚ್ಚಿನ ಚಿಕಿತ್ಸೆಯ ಅಗತ್ಯವಿದ್ದ ಹಿನ್ನೆಲೆಯಲ್ಲಿ ತಕ್ಷಣ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಿಸದೆ ಅವರು ಕೊನೆಯುಸಿರೆಳೆದಿದ್ದಾರೆ.

Read More

ಉಳ್ಳಾಲ: ಜಿಒಎಸ್ ಆಫ್ ( ಗ್ರೂಪ್ ಆಪರೇಟೆಡ್ ಸ್ವಿಚ್‌) ಮಾಡದೆ ವಿದ್ಯುತ್ ಟ್ರಾನ್ಸ್ ಫಾರ್ಮರ್ (ಟಿಸಿ) ಏರಿದ ಮೆಸ್ಕಾಂ ಲೈನ್ ಮೆನ್ ಓರ್ವ ವಿದ್ಯುತ್ ಆಘಾತಕ್ಕೊಳಗಾಗಿ ಸಾವನ್ನಪ್ಪಿರುವ ಘಟನೆ ಉಳ್ಳಾಲ ತಾಲೂಕಿನ ಉಚ್ಚಿಲ ನಯಾಪಟ್ಟಣ ಎಂಬಲ್ಲಿ ಇಂದು ಬೆಳಗ್ಗೆ ನಡೆದಿದೆ. ಅಂಬಿಕಾರೋಡ್ ಪಿಲಾರು ನಿವಾಸಿ ಶೇಖ್ ಝಮೀರ್(49) ಮೃತಪಟ್ಟ ವ್ಯಕ್ತಿ. ಉಚ್ಚಿಲ ನಯಾಪಟ್ಟದ ಟ್ರಾನ್ಸ್‌ ಫಾರ್ಮರ್ ನಲ್ಲಿ ದೋಷದ ಬಗ್ಗೆ ಮೆಸ್ಕಾಂಗೆ ದೂರು ಬಂದ ಹಿನ್ನೆಲೆಯಲ್ಲಿ ಶೇಖ್ ಝಮೀರ್ ಹಾಗೂ ಸಹೋದ್ಯೋಗಿ ಸಂಗಪ್ಪ ಎಂಬವರು ಇಂದು ಬೆಳಗ್ಗೆ ಸ್ಥಳಕ್ಕೆ ದುರಸ್ತಿಗೆ ಹೋಗಿದ್ದ ವೇಳೆ ಘಟನೆ ಸಂಭವಿಸಿದೆ. ಜಿಒಎಸ್ ಆಫ್ ಆಗಿದೆಯೆಂದು ಗ್ರಹಿಸಿ ಟ್ರಾನ್ಸ್ ಫಾರ್ಮ‌ರ್ ಏರಿದ ಝಮೀರ್ ವಿದ್ಯುತ್‌ ಆಘಾತಕ್ಕೊಳಗಾಗಿ ಕೆಳಗೆಸೆಯಲ್ಪಟ್ಟಿದ್ದಾರೆ. ಗಂಭೀರ ಸ್ಥಿತಿಯಲ್ಲಿದ್ದ ಝಮೀರನ್ನ ದೇರಳಕಟ್ಟೆಯ ಖಾಸಗಿ ಆಸ್ಪತ್ರೆಗೆ ದಾರಿ ಮಧ್ಯದಲ್ಲೇ ಅವರು ಸಾಗಿಸುವ ಕೊನೆಯುಸಿರೆಳೆದಿದ್ದಾರೆ. ಮೃತ ಝಮೀರ್ ಪತ್ನಿ ಮತ್ತು ಓರ್ವ ಹೆಣ್ಣು ಮಗಳನ್ನ ಅಗಲಿದ್ದಾರೆ.

Read More