Author: admin
ಗಾಜಿಯಾಬಾದ್: ಸುಮಾರು ಒಂದೂವರೆ ವರ್ಷಗಳ ಹಿಂದೆ ವಿಚ್ಛೇದನ ಪಡೆದಾಗಿನಿಂದ ತೀವ್ರ ಖಿನ್ನತೆ ಹಾಗೂ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದ 40 ವರ್ಷದ ಮಹಿಳಾ ಮನೋವೈದ್ಯೆಯೊಬ್ಬರು ಅಪಾರ್ಟ್‌ಮೆಂಟ್‌ನ ಐದನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಭೀಕರ ಘಟನೆ ಉತ್ತರ ಪ್ರದೇಶದ ಗಾಜಿಯಾಬಾದ್‌ನಲ್ಲಿ ಭಾನುವಾರ ಸಂಭವಿಸಿದೆ. ಮೃತಪಟ್ಟ ವೈದ್ಯೆಯನ್ನು ಡಾ. ಹೆಮಿಕಾ ಅಗರ್ವಾಲ್ (40) ಎಂದು ಗುರುತಿಸಲಾಗಿದೆ. ಈಕೆಯ ತಂದೆ ಡಾ. ಆರ್. ಚಂದ್ರ ಅವರು ಗಾಜಿಯಾಬಾದ್‌ನ ಪ್ರಸಿದ್ಧ ಮನೋವೈದ್ಯರಾಗಿದ್ದಾರೆ. ಡಾ. ಹೆಮಿಕಾ ಅವರು ರಾಜ್ ನಗರ ವಿಸ್ತರಣಾ ಪ್ರದೇಶದ ‘ಆಫೀಸರ್ಸ್ ಸಿಟಿ -2’ ಸೊಸೈಟಿಯಲ್ಲಿರುವ ತಮ್ಮ ಐದನೇ ಮಹಡಿಯ ಫ್ಲಾಟ್‌ನಿಂದ ಕೆಳಗೆ ಹಾರಿದ್ದಾರೆ. ತೀವ್ರವಾಗಿ ಗಾಯಗೊಂಡಿದ್ದ ಅವರನ್ನು ತಕ್ಷಣವೇ ಸ್ಥಳೀಯ ನಿವಾಸಿಗಳು ಹತ್ತಿರದ ಆಸ್ಪತ್ರೆಗೆ ದಾಖಲಿಸಿದರಾದರೂ, ಅಷ್ಟರಲ್ಲಾಗಲೇ ಅವರು ಮೃತಪಟ್ಟಿರುವುದಾಗಿ ವೈದ್ಯರು ದೃಢಪಡಿಸಿದ್ದಾರೆ. ಘಟನೆ ಕುರಿತು ಪ್ರತಿಕ್ರಿಯಿಸಿರುವ ಮೃತರ ತಂದೆ ಡಾ. ಆರ್. ಚಂದ್ರ, ಸುಮಾರು 18 ತಿಂಗಳ ಹಿಂದೆ ಮಗಳ ವೈವಾಹಿಕ ಜೀವನ ಮುರಿದುಬಿದ್ದಿತ್ತು. ವಿಚ್ಛೇದನದ ನಂತರ ಆಕೆಯ ಮಾನಸಿಕ ಆರೋಗ್ಯದ ಮೇಲೆ…
ಬಂಟ್ವಾಳ : ರಾಯಿ ಗ್ರಾಮದ ಪಾಂಚಕೋಡಿ ಎಂಬಲ್ಲಿ ಶನಿವಾರ (ಆಗಸ್ಟ್ 1) ರಾತ್ರಿ ಕಾಲುಸಂಕ ದಾಟುತ್ತಿದ್ದ ವೇಳೆ ಕಾಲುಜಾರಿ ನೀರಿಗೆ ಬಿದ್ದು ನಾಪತ್ತೆಯಾಗಿದ್ದ ವ್ಯಕ್ತಿಯ ಮೃತದೇಹ ನಿರಂತರ ಶೋಧ ಕಾರ್ಯಾಚರಣೆಯ ಬಳಿಕ ಅರಳ ಗ್ರಾಮದ ಪಂಬದಗದ್ದೆ ಸಮೀಪ ಸೋಮವಾರ ಬೆಳಗ್ಗೆ ಪತ್ತೆಯಾಗಿದೆ. ಮೃತರನ್ನು ಪಾಂಚಕೋಡಿ ನಿವಾಸಿ ಜೋಸೆಫ್ ಪಿಂಟೊ ಎಂಬವರ ಪುತ್ರ ಜೀವನ್ ಪಿಂಟೊ (48) ಎಂದು ಗುರುತಿಸಲಾಗಿದೆ. ಶನಿವಾರ ರಾತ್ರಿ ಸುಮಾರು 7:30ರ ವೇಳೆಗೆ ಜೀವನ್ ಪಿಂಟೊ ತಮ್ಮ ನಿವಾಸದಿಂದ ಸ್ವಲ್ಪವೇ ದೂರದಲ್ಲಿರುವ ಮಾವನ ಮನೆಗೆ ನಡೆದುಕೊಂಡು ಹೋಗುತ್ತಿದ್ದರು. ದಾರಿ ಮಧ್ಯೆ ತೋಡಿಗೆ ಅಳವಡಿಸಲಾಗಿದ್ದ ಕಾಲುಸಂಕದ ಮೇಲೆ ಸಾಗುವಾಗ ಆಕಸ್ಮಿಕವಾಗಿ ಜಾರಿ ಕಾಲುವೆ ನೀರಿಗೆ ಬಿದ್ದಿದ್ದಾರೆ ಎಂದು ಶಂಕಿಸಲಾಗಿದೆ. ಕಾಲುವೆಯಲ್ಲಿ ಚಪ್ಪಲಿ ಹಾಗೂ ಟಾರ್ಚ್ ಪತ್ತೆಯಾಗಿದ್ದು, ಅವರು ನೀರಿನಲ್ಲಿ ಕೊಚ್ಚಿ ಹೋಗಿರುವ ಸಾಧ್ಯತೆಯಿದೆ. ಘಟನೆ ನಡೆದ ಸಮಯದಲ್ಲಿ ಪ್ರದೇಶದಲ್ಲಿ ಭಾರಿ ಮಳೆ ಸುರಿಯುತ್ತಿದ್ದುದಲ್ಲದೆ, ಕತ್ತಲಾವರಿಸಿದ್ದರಿಂದ ತಕ್ಷಣಕ್ಕೆ ಪತ್ತೆ ಕಾರ್ಯ ನಡೆಸುವುದು ಕಷ್ಟಕರವಾಗಿತ್ತು. ಭಾರೀ ಮಳೆ ಹಾಗೂ ಹೊಳೆಯಲ್ಲಿ ನೀರಿನ ಹರಿವಿನ…
ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ಮಹತ್ವದ ಬೆಳವಣಿಗೆ ನಡೆದಿದ್ದು, ಡಿ.ಕೆ. ಶಿವಕುಮಾರ್ ನೇತೃತ್ವದ ಕರ್ನಾಟಕ ಸಚಿವ ಸಂಪುಟದಲ್ಲಿ ಹಲವು ಹಿರಿಯ ನಾಯಕರಿಗೆ ಈ ಬಾರಿ ಸಚಿವ ಸ್ಥಾನ ಲಭ್ಯವಾಗಿಲ್ಲ. ಸಂಪುಟ ರಚನೆ ವೇಳೆ ಹಲವು ಹಾಲಿ ಸಚಿವರು ಹಾಗೂ ಹಿರಿಯ ನಾಯಕರಿಗೆ ಸ್ಥಾನ ಕೈತಪ್ಪಿದೆ. ಎಚ್.ಸಿ. ಮಹದೇವಪ್ಪ, ಎಂ.ಸಿ. ಸುಧಾಕರ್, ದಿನೇಶ್ ಗುಂಡೂರಾವ್, ಎಚ್.ಕೆ. ಪಾಟೀಲ್, ಕೆ. ವೆಂಕಟೇಶ್, ಲಕ್ಷ್ಮೀ ಹೆಬ್ಬಾಳ್ಕರ್, ಶಿವಾನಂದ ಪಾಟೀಲ್ ಹಾಗೂ ಶರಣ ಬಸಪ್ಪ ದರ್ಶನಾಪುರ ಅವರಿಗೆ ಸಚಿವ ಸ್ಥಾನ ದೊರೆತಿಲ್ಲ.ಈ ಬೆಳವಣಿಗೆ ಕಾಂಗ್ರೆಸ್ ವಲಯದಲ್ಲಿ ಹೊಸ ರಾಜಕೀಯ ಲೆಕ್ಕಾಚಾರಗಳಿಗೆ ಕಾರಣವಾಗಿದೆ. ಹಿರಿಯ ನಾಯಕರನ್ನು ಕೈಬಿಟ್ಟು ಬದಲಾವಣೆ ತರಲಾಗಿದೆ.
ಬೆಂಗಳೂರು: ಬಹು ನಿರೀಕ್ಷಿತ ರಾಜ್ಯ ಸಂಪುಟ ವಿಸ್ತರಣೆಗೆ ಕಾಲಕೂಡಿಬಂದಿದೆ. ಸೋಮವಾರ (ಆ.03) ಸಂಜೆ ಡಿಕೆ ಶಿವಕುಮಾರ್ ಅವರ ಸಂಪುಟ ವಿಸ್ತರಣೆ ಆಗಲಿದೆ. 20 ಮಂದಿ ಶಾಸಕರಿಗೆ ಸಚಿವ ಸ್ಥಾನ ಒಲಿದಿದ್ದು, ಬಹುತೇಕ ಹೊಸಮುಖಗಳು ಪಟ್ಟಿಯಲ್ಲಿದೆ. ಇತ್ತೀಚೆಗೆ ಹೈಕೋರ್ಟ್ ತೀರ್ಪಿನಿಂದಾಗಿ ಕೆಲವೇ ದಿನಗಳ ಹಿಂದೆ ಎಂಎಲ್‌ಸಿ ಸ್ಥಾನ ಪಡೆದಿದ್ದ ಗಾಯತ್ರಿ ಶಾಂತೇಗೌಡ ಅವರಿಗೆ ಇದೀಗ ಸಚಿವ ಸ್ಥಾನ ಒಲಿದು ಬಂದಿದೆ. ಈ ಪಟ್ಟಿಯಲ್ಲಿರುವ ಏಕೈಕ ಪರಿಷತ್ ಸದಸ್ಯೆ ಗಾಯತ್ರಿ. ರೋಣ ಶಾಸಕ ಜಿ.ಎಸ್.ಪಾಟೀಲ್ ಅವರಿಗೆ ಸ್ಪೀಕರ್ ಸ್ಥಾನ ನೀಡಲಾಗಿದೆ. ವಿರಾಜಪೇಟೆ ಶಾಸಕ ಎ.ಎಸ್.ಪೊನ್ನಣ್ಣ ಅವರಿಗೆ ಉಪ ಸ್ಪೀಕರ್ ಸ್ಥಾನ ನೀಡಲಾಗಿದೆ. ದಾವಣಗೆರೆಯ ಮಾಯಕೊಂಡ ಶಾಸಕ ಕೆ.ಎಸ್. ಬಸವಂತಪ್ಪ ಅವರು ಅಚ್ಚರಿಯ ರೀತಿಯಲ್ಲಿ ನೂತನ ಸಚಿವರ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ಮಾಜಿ ಮುಖ್ಯಮಂತ್ರಿ ಧರಂ ಸಿಂಗ್ ಪುತ್ರ ಅಜಯ್ ಸಿಂಗ್ ಈ ಬಾರಿ ಸಚಿವರ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ಸಿದ್ದರಾಮಯ್ಯ ಕ್ಯಾಬಿನೆಟ್ ನಲ್ಲಿದ್ದ ಹಲವರು ಈ ಬಾರಿ ಸಚಿವ ಸ್ಥಾನ ತಪ್ಪಿಸಿಕೊಂಡಿದಾರೆ. ಎಚ್ ಸಿ…
ಬೆಂಗಳೂರು: ಕರ್ನಾಟಕ ರಾಜ್ಯ ವಿಧಾನಸಭೆ ಹಾಗೂ ವಿಧಾನ ಪರಿಷತ್‌ಗೆ ನೂತನ ಸ್ಪೀಕರ್ ಮತ್ತು ಉಪ ಸ್ಪೀಕರ್‌ಗಳ ಆಯ್ಕೆ ಪ್ರಕ್ರಿಯೆ ಪೂರ್ಣಗೊಂಡಿದೆ. ಕರ್ನಾಟಕ ವಿಧಾನಸಭೆಯ ನೂತನ ಸ್ಪೀಕರ್ ಆಗಿ ಗದಗ ಜಿಲ್ಲೆಯ ರೋಣ ಕ್ಷೇತ್ರದ ಶಾಸಕ ಜಿ.ಎಸ್. ಪಾಟೀಲ್ ಅವರು ಆಯ್ಕೆಯಾಗಿದ್ದಾರೆ. ಇದೇ ವೇಳೆ ವಿಧಾನಸಭೆಯ ಉಪ ಸ್ಪೀಕರ್ ಸ್ಥಾನಕ್ಕೆ ಅನ್ನಪೂರ್ಣ ತುಕಾರಾಂ ಅವರನ್ನು ಆಯ್ಕೆ ಮಾಡಲಾಗಿದೆ. ಇನ್ನು ಕರ್ನಾಟಕ ವಿಧಾನ ಪರಿಷತ್‌ನ ಸಭಾಪತಿಯಾಗಿ ಸಲೀಂ ಅಹ್ಮದ್ ಅವರು ಆಯ್ಕೆಯಾಗಿದ್ದು, ಉಪ ಸಭಾಪತಿ ಸ್ಥಾನಕ್ಕೆ ವಿಧಾನ ಪರಿಷತ್ ಸದಸ್ಯೆ ಉಮಾಶ್ರೀ ಅವರನ್ನು ಆಯ್ಕೆ ಮಾಡಲಾಗಿದೆ. ವಿಧಾನಮಂಡಲದ ಪ್ರಮುಖ ಸ್ಥಾನಗಳಿಗೆ ನಡೆದ ಈ ಆಯ್ಕೆಯೊಂದಿಗೆ ರಾಜ್ಯದ ಆಡಳಿತಾತ್ಮಕ ಹಾಗೂ ಶಾಸನಾತ್ಮಕ ಕಾರ್ಯಚಟುವಟಿಕೆಗಳಿಗೆ ಹೊಸ ತಂಡ ಜವಾಬ್ದಾರಿ ವಹಿಸಿಕೊಂಡಿದೆ.
ಮಂಗಳೂರು: 7 ವರ್ಷಗಳಿಂದ ನ್ಯಾಯಾಲಯದ ವಿಚಾರಣೆಗೆ ಹಾಜರಾಗದೆ ತಲೆಮರೆಸಿಕೊಂಡಿದ್ದ 13ಕ್ಕಿಂತ ಹೆಚ್ಚಿನ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಆರೋಪಿಯನ್ನು ಪೊಲೀಸರು ಆ.2ರಂದು ಪತ್ತೆ ಮಾಡಿ ವಶಕ್ಕೆ ಪಡೆದುಕೊಂಡಿದ್ದಾರೆ. ಉಳ್ಳಾಲ ತಾಲೂಕು ಮಾರ್ಗತಲೆಯ ಪ್ರಸ್ತುತ ಕಾಸರಗೋಡು, ಪಾವೂರು ಪೋಸ್ಟ್ ವ್ಯಾಪ್ತಿಯ ಮಂಜೇಶ್ವರದ ಕುಂಡಪ್ಪು, ಗೇರುಕಟ್ಟೆ ನಿವಾಸಿ ಉಮ್ಮರ್ ನವಾಫ್(33) ಬಂಧಿತ ಆರೋಪಿ. ಆರೋಪಿಯ ವಿರುದ್ಧ ಸುಮಾರು 13ಕ್ಕಿಂತ ಹೆಚ್ಚು ಪ್ರಕರಣಗಳು ದಾಖಲಾಗಿದ್ದು, ಈತನು ನ್ಯಾಯಾಲಯದ ವಿಚಾರಣೆಗೆ ಹಾಜರಾಗದೇ ಸುಮಾರು 7 ವರ್ಷದಿಂದ ತಲೆಮರೆಸಿಕೊಂಡಿದ್ದ. ನ್ಯಾಯಾಲಯವು ಈತನ ಮೇಲೆ 30ಕ್ಕಿಂತ ಹೆಚ್ಚು ವಾರಂಟ್ ಗಳನ್ನು ಹೊರಡಿಸಲಾಗಿರುತ್ತದೆ. ಆರೋಪಿ ಮೇಲಿನ ಪ್ರಕರಣಗಳಲ್ಲಿ ಉಳ್ಳಾಲ ಪೊಲೀಸ್ ಠಾಣಾ ಮೊ.ನಂ 206/2012, U/s 143, 14, 148, 323, 427, 504, 506, 149 ಐಪಿಸಿ, ಉಳ್ಳಾಲ ಪೊಲೀಸ್ ಠಾಣಾ ಮೊ.ನಂ 27/2017, U/s 387 ಐಪಿಸಿ, ಉಳ್ಳಾಲ ಪೊಲೀಸ್ ಠಾಣಾ ಮೊ.ನಂ 183/17 U/s 143, 147, 148, 448, 504, 324, 323, 506, 427R/w 149 ಐಪಿಸಿ ಪ್ರಕರಣಗಳಲ್ಲಿ…
ಹಾಸನ: ಬೆಂಗಳೂರಿನ ಪ್ರವಾಸಿಗರ ತಂಡದ ಮೇಲೆ ಅರಣ್ಯ ಇಲಾಖೆ ಅಧಿಕಾರಿಗಳು ಮಿಂಚಿನ ದಾಳಿ ನಡೆಸಿದ್ದು ಡೀಮ್ಡ್ ಫಾರೆಸ್ಟ್ (ಪರಿಭಾವಿತ ಅರಣ್ಯ) ಪ್ರದೇಶಕ್ಕೆ ಅಕ್ರಮವಾಗಿ ನುಗ್ಗಿ ಏಳು ಮಹೀಂದ್ರ ಥಾರ್ ಜೀಪ್‌ಗಳಲ್ಲಿ ಆಫ್ ರೋಡ್ ಸಾಹಸ ನಡೆಸುತ್ತಿದ್ದ ಜೀಪ್‌ಗಳನ್ನು ವಶಕ್ಕೆ ಪಡೆದಿದ್ದಾರೆ. ಬೆಂಗಳೂರಿನಿಂದ ಆಗಮಿಸಿದ್ದ ಪ್ರವಾಸಿಗರ ತಂಡವು ಹೊಡಚಳ್ಳಿ ಗ್ರಾಮದ ಸರ್ವೆ ಸಂಖ್ಯೆ 20, 21 ಹಾಗೂ 28ರ ವ್ಯಾಪ್ತಿಯಲ್ಲಿ ಬರುವ ಪರಿಭಾವಿತ ಅರಣ್ಯ ಪ್ರದೇಶಕ್ಕೆ ಅಕ್ರಮವಾಗಿ ಪ್ರವೇಶ ಪಡೆದಿತ್ತು. ಅಲ್ಲಿ ಜೀಪ್‌ಗಳನ್ನು ಓಡಿಸುವ ಮೂಲಕ ಅರಣ್ಯ, ಪರಿಸರ ಹಾಗೂ ವನ್ಯಜೀವಿಗಳಿಗೆ ತೀವ್ರ ಹಾನಿ ಉಂಟುಮಾಡುತ್ತಿದ್ದರು. ಈ ಕುರಿತು ಖಚಿತ ಮಾಹಿತಿ ಲಭಿಸುತ್ತಿದ್ದಂತೆ ಸಕಲೇಶಪುರ ವಲಯ ಅರಣ್ಯಾಧಿಕಾರಿ ನೇತೃತ್ವದ ಅಧಿಕಾರಿಗಳಾದ ಮಂಜುನಾಥ್, ಅರ್ಜುನ್ ಹಾಗೂ ಮಹದೇವಪ್ಪ ಅವರ ತಂಡ ದಾಳಿ ನಡೆಸಿದೆ.ಅಕ್ರಮವಾಗಿ ಆಫ್ ರೋಡ್ ನಡೆಸುತ್ತಿದ್ದ ಏಳೂ ಮಹೀಂದ್ರ ಥಾರ್ ಜೀಪ್‌ಗಳನ್ನು ಜಪ್ತಿ ಮಾಡಲಾಗಿದ್ದು, ಪ್ರವಾಸಿಗರ ವಿರುದ್ಧ ಅರಣ್ಯ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗಿದೆ. ಏನಿದು ಡೀಮ್ಡ್ ಫಾರೆಸ್ಟ್?…
ಲಿಮಾ: ಪೆರುವಿನ ನಾಜ್ಕಾ ನಗರದ ಹೊರ ವಲಯದಲ್ಲಿ ಪ್ರವಾಸಿಗರಿದ್ದ ವಿಮಾನ ಪತನಗೊಂಡ ಪರಿಣಾಮ 13 ಮಂದಿ ಮೃತಪಟ್ಟಿದ್ದಾರೆ. ರಾಜಧಾನಿ ಲಿಮಾದಿಂದ ದಕ್ಷಿಣಕ್ಕೆ ಸುಮಾರು 240 ಕಿಲೋಮೀಟರ್ ದೂರದಲ್ಲಿರುವ ಪಿಸ್ಕೋ ವಿಮಾನ ನಿಲ್ದಾಣದಿಂದ ವಿಮಾನವು ಟೇಕಾಫ್ ಆದ ಸ್ವಲ್ಪ ಸಮಯದ ನಂತರ ಈ ಅವಘಡ ಸಂಭವಿಸಿದೆ. ಈ ದುರಂತದಲ್ಲಿ 11 ಪ್ರಯಾಣಿಕರು ಮತ್ತು ಇಬ್ಬರು ಸಿಬ್ಬಂದಿ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ. ವಿಮಾನ ಅವಘಡಕ್ಕೆ ಕಾರಣವೇನೆಂದು ತಿಳಿದುಬಂದಿಲ್ಲ. ಪೆರುವಿನ ನಾಗರಿಕ ವಿಮಾನಯಾನ ಪ್ರಾಧಿಕಾರವು ತನಿಖೆ ನಡೆಸಲಿದ್ದು, ಅಧಿಕಾರಿಗಳು ಈಗಾಗಲೇ ಸಾಕ್ಷ್ಯಗಳನ್ನು ಸಂಗ್ರಹಿಸುತ್ತಿದ್ದಾರೆ. ಮೃತರ ಪೈಕಿ 11 ಪ್ರಯಾಣಿಕರು ವಿದೇಶಿಗರಾಗಿದ್ದಾರೆ. 7 ಮಂದಿ ಇಟಾಲಿಯನ್ನರು, ಇಬ್ಬರು ಜರ್ಮನ್ನರು ಮತ್ತು ಇಬ್ಬರು ಸ್ಪೇನ್ ದೇಶದವರು ಸಾವನ್ನಪ್ಪಿದ್ದಾರೆ ಎಂದು ವಿದೇಶಿ ವ್ಯವಹಾರ ಸಚಿವಾಲಯ ತಿಳಿಸಿದೆ.
ನವದೆಹಲಿ: ಡಬಲ್-ಎಂಟ್ರಿ ವೀಸಾದ ಷರತ್ತುಗಳನ್ನು ಉಲ್ಲಂಘಿಸಿ ಅನುಮತಿ ಪಡೆದ ಅವಧಿಯನ್ನು ಮೀರಿ ಉಳಿದುಕೊಂಡಿದ್ದಕ್ಕಾಗಿ ದೆಹಲಿ ಪೊಲೀಸರು 6 ಬಾಂಗ್ಲಾದೇಶಿ ಪ್ರಜೆಗಳನ್ನು ಬಂಧಿಸಿದ್ದಾರೆ. ಕೇಂದ್ರ ದೆಹಲಿಯಲ್ಲಿ ಪರಿಶೀಲನೆಯ ಭಾಗವಾಗಿ ಹೋಟೆಲ್‌ಗಳು ಮತ್ತು ಅತಿಥಿ ಗೃಹಗಳ ತಪಾಸಣೆಯ ಸಮಯದಲ್ಲಿ 6 ಜನರನ್ನು ಬಂಧಿಸಲಾಯಿತು. ನಂತರ ಅವರನ್ನು ಬಂಧನ ಕೇಂದ್ರಕ್ಕೆ ಸ್ಥಳಾಂತರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅವರ ವೀಸಾಗಳು ಮತ್ತು ವಲಸೆ ದಾಖಲೆಗಳ ಪರಿಶೀಲನೆಯು ಅವರ ವೀಸಾಗಳು ಮಾನ್ಯವಾಗಿದ್ದರೂ, ಪ್ರತಿ ಭೇಟಿಯು ಗರಿಷ್ಠ 15 ದಿನಗಳ ವಾಸ್ತವ್ಯವನ್ನು ಅನುಮತಿಸುತ್ತದೆ. ಆದರೆ ಅನುಮತಿಯನ್ನು ಮೀರಿ ಅವರು ಇಲ್ಲೇ ಉಳಿದಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. 6 ಜನರನ್ನು ವಿದೇಶಿಯರ ಪ್ರಾದೇಶಿಕ ನೋಂದಣಿ ಕಚೇರಿ ಮುಂದೆ ಹಾಜರುಪಡಿಸಲಾಯಿತು, ಅದು ನಿರ್ಬಂಧ ಆದೇಶಗಳನ್ನು ನೀಡಿತು ಮತ್ತು ಅವರನ್ನು ಗಡೀಪಾರು ಪ್ರಕ್ರಿಯೆಗಳಿಗಾಗಿ ಬಂಧನ ಕೇಂದ್ರಕ್ಕೆ ಸ್ಥಳಾಂತರಿಸಿತು. 6 ಜನರ ಹಿಂದಿನ ಯಾವುದೇ ಕ್ರಿಮಿನಲ್ ಚಟುವಟಿಕೆಗಳಲ್ಲಿ ಭಾಗಿಯಾಗಿರುವುದು ಬೆಳಕಿಗೆ ಬಂದಿಲ್ಲ ಎಂದು ಪೊಲೀಸರು ಹೇಳಿದ್ದಾರೆ.
ಉತ್ತರ ಪ್ರದೇಶ: ಅಯೋಧ್ಯೆಯ ರಾಜರ್ಷಿ ದಶರಥ ಸ್ವಾಯತ್ತ ರಾಜ್ಯ ವೈದ್ಯಕೀಯ ಕಾಲೇಜಿನಲ್ಲಿ ಬಾಂಬ್ ತಯಾರಿಸುವ ವಿಧಾನವನ್ನು ವಿವರಿಸುವ ಆತಂಕಕಾರಿ ಕೈಬರಹದ ಚೀಟಿಯೊಂದು ಪತ್ತೆಯಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಥಮ ವರ್ಷದ ವೈದ್ಯಕೀಯ ವಿದ್ಯಾರ್ಥಿಯೊಬ್ಬನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬಂಧಿತ ವಿದ್ಯಾರ್ಥಿಯನ್ನು ಬಲರಾಮ್‌ಪುರ ಮೂಲದ ಸರ್ಫರಾಜ್ ಖಾನ್ ಎಂದು ಗುರುತಿಸಲಾಗಿದೆ. ಈತ ಕಾಲೇಜಿನಲ್ಲಿ 2025ರ ಬ್ಯಾಚ್‌ನ ಎಕ್ಸ್-ರೇ ಟೆಕ್ನಿಷಿಯನ್ ಕೋರ್ಸ್ ವ್ಯಾಸಂಗ ಮಾಡುತ್ತಿದ್ದ ಎಂದು ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ. ಎಕ್ಸ್-ರೇ ಕೊಠಡಿಯಲ್ಲಿ ಪತ್ತೆಯಾಯ್ತು ರಹಸ್ಯ ಚೀಟಿ ಶನಿವಾರ ಬೆಳಿಗ್ಗೆ ಕಾಲೇಜಿನ ಎಕ್ಸ್-ರೇ ಕೊಠಡಿಗೆ ಕರ್ತವ್ಯಕ್ಕಾಗಿ ಆಗಮಿಸಿದ ಕೆಲವು ವಿದ್ಯಾರ್ಥಿಗಳಿಗೆ ಈ ಅನುಮಾನಾಸ್ಪದ ಚೀಟಿ ಸಿಕ್ಕಿದೆ. ಆ ಚೀಟಿಯಲ್ಲಿ ಬಾಂಬ್ ತಯಾರಿಸಲು ಬೇಕಾಗುವ ವಸ್ತುಗಳಾದ ಅಮೋನಿಯಂ ಕಾರ್ಬೋನೇಟ್, ಗೇಜ್ ವೈರ್, ರೆಡ್ ಸಲ್ಫೈಡ್ ಮುಂತಾದ ರಾಸಾಯನಿಕ ಹಾಗೂ ಸಾಧನಗಳ ಕುರಿತು ವಿವರವಾದ ಮಾಹಿತಿಯನ್ನು ಬರೆಯಲಾಗಿತ್ತು. ವಿದ್ಯಾರ್ಥಿಗಳು ಕೂಡಲೇ ಈ ವಿಷಯವನ್ನು ತಮ್ಮ ಮೇಲ್ವಿಚಾರಕರಿಗೆ ತಿಳಿಸಿದ್ದು, ಬಳಿಕ ಕಾಲೇಜು ಆಡಳಿತ ಮಂಡಳಿಯು ಪೊಲೀಸರಿಗೆ ಮಾಹಿತಿ ನೀಡಿದೆ. ಘಟನೆ…



